ಅನುದಿನದ ಮನ್ನಾ
ದರ್ಶನ ಹಾಗೂ ಸಾಕಾರದ ನಡುವೆ...
Sunday, 14th of April 2024
1
1
321
Categories :
ದೈವೀಕ ದರ್ಶನ (Divine Visitation)
"ಯೆಹೋವನು ತಾನು ದರ್ಶನ ಕೊಟ್ಟು ಹೇಳಿದ್ದಂತೆಯೇ ಸಾರಳ ಮೇಲೆ ದಯವಿಟ್ಟು ಆಕೆಗೆ ಕೊಟ್ಟ ಮಾತನ್ನು ನೆರವೇರಿಸಿದನು." (ಆದಿಕಾಂಡ 21:1)
ನೀವು ಈ ವಾಕ್ಯವನ್ನು ಗಮನವಿಟ್ಟು ನೋಡಬೇಕೆಂದು ನಾನು ಬಯಸುತ್ತೇನೆ "ಆತನು (ಕರ್ತನು) ಹೇಳಿದಂತೆಯೇ, "ಆತನು (ಕರ್ತನು )ಮಾತು ಕೊಟ್ಟಂತೆಯೇ ".
ದೇವರ ವಾಕ್ಯವು ದೇವರ ಮಾತುಗಳ ಸ್ವಭಾವವನ್ನು ಇಲ್ಲಿ ತಿಳಿಯಪಡಿಸುತ್ತದೆ."ದೇವರು ಮನುಷ್ಯನಂತೆ ಎರಡು ಮಾತಿನವನಲ್ಲ; ಮಾನವನಂತೆ ಮನಸ್ಸನ್ನು ಬೇರೆ ಮಾಡಿಕೊಳ್ಳುವವನಲ್ಲ. ತಾನು ಹೇಳಿದ ಮೇರೆಗೆ ನಡೆಯುವದಿಲ್ಲವೋ; ಮಾತು ಕೊಟ್ಟನಂತರ ನೆರವೇರಿಸುವದಿಲ್ಲವೋ."(ಅರಣ್ಯಕಾಂಡ 23:19).
ದೇವರು ಯಾವುದಾದರೂ ಕಾರ್ಯವನ್ನು ಮಾಡುತ್ತೇನೆ ಎಂದು ಮಾತು ಕೊಟ್ಟರೆ ಆತನು ಅದನ್ನು ಮಾಡಿಯೇ ತೀರುತ್ತಾನೆ ಎಂದು ನೀವು ನಿಶ್ಚಯವಾಗಿ ಭರವಸೆ ಇಡಬಹುದು.
ಆದಾಗಿಯೂ ಒಂದು ವಿಷಯವನ್ನು ನೀವು ತಿಳಿದಿರಲೇಬೇಕು ಎಂದು ನಾನು ಬಯಸುತ್ತೇನೆ. ಇದು ನಿಮ್ಮ ಮನಸ್ಸಿನಲ್ಲಿ ಅಚ್ಚಳಿಯದಂತೆ ಉಳಿಯಬೇಕೆಂದು ಬಯಸುತ್ತೇನೆ. ದರ್ಶನಕ್ಕೂ- ದರ್ಶನದ ಸಾಕಾರಕ್ಕೂ ಯಾವಾಗಲೂ ಒಂದು ಕಾಲಾವಕಾಶವಿರುತ್ತದೆ. ಕೆಲವು ಸಂಗತಿಗಳಿಗೆ ಇದು ಕಡಿಮೆಯಾಗಬಹುದು ಮತ್ತು ಕೆಲವು ಸಂಗತಿಗಳಿಗೆ ಕಾಲಾವಕಾಶದ ಅವಧಿ ದೀರ್ಘವಾಗಿರಬಹುದು. ಇದನ್ನು ವಿವರಿಸಲು ನನಗೆ ಅನುಮತಿಸಿ.
ಸಾರಾಳು ಗರ್ಭಧರಿಸಿದಾಗ, ಆ ಸಮಯದಲ್ಲಿ ಅವಳ ಪ್ರಸವಕಾಲದವರೆಗೂ ಅವಳಲ್ಲಿ ಅನೇಕ ಆಲೋಚನೆಗಳು ಬಂದು ಅವಳ ಮನಸ್ಸನ್ನು ಮುಸುಕಿರಬಹುದಲ್ಲವೇ. "ನಾನು ಇಷ್ಟು ವಯಸ್ಸಾದ ಮೇಲೆ ಗರ್ಭಧರಿಸಿದ್ದೇನೆ.ನಾನು ಆ ಮಗುವನ್ನು ಕಳಕೊಂಡರೆ ಏನು ಗತಿ"ಎಂದೆಲ್ಲಾ ಆಲೋಚನೆಗಳು ಅವಳಿಗೆ ಬಂದಿರಬಹುದು. ಅವಳಿಗಾಗ ಬೇಕಿದ್ದ ಅದ್ಭುತವು ಇನ್ನೂ ಸಾಕಾರಗೊಂಡಿರಲಿಲ್ಲ. ಅದಿನ್ನೂ ಪ್ರಕ್ರಿಯೆಯಲ್ಲಿತ್ತು.ಇದುವೇ ನಿರೀಕ್ಷಣಾ ಸಮಯ ಎಂದು ಕರೆಯಲ್ಪಡುತ್ತದೆ. ಆದರೆ ಕಾಯುವಂತದು ಯಾರಿಗೂ ಸಹ ಇಷ್ಟವಿಲ್ಲದ ಕಾರ್ಯವಾಗಿದೆ.
ನಾವು ಈ ನಿರೀಕ್ಷಣಾ ಸಮಯದಲ್ಲಿ ಮಾಡಬೇಕಾದ ಕಾರ್ಯವೇನು?
"ಯೆಹೋವನನ್ನು ನಿರೀಕ್ಷಿಸಿಕೊಂಡಿರು; ದೃಢವಾಗಿರು; ನಿನ್ನ ಹೃದಯವು ಧೈರ್ಯದಿಂದಿರಲಿ; ಯೆಹೋವನನ್ನು ನಿರೀಕ್ಷಿಸಿಕೊಂಡೇ ಇರು. "(ಕೀರ್ತನೆಗಳು 27:14 ) ಸಾರಳು ಇದನ್ನೇ ಮಾಡಿದಳು ಎಂದು ನಾನು ನಂಬುತ್ತೇನೆ ಮತ್ತು ನಾವೂ ಸಹ ಇದನ್ನೇ ಮಾಡಬೇಕು.
ನಾವೆಲ್ಲರೂ ಈ ನಿರೀಕ್ಷಣೆಯ ಕಾಲವನ್ನು ದಾಟಿ ಹೋಗಲೇಬೇಕು. ಈ ಕಾಲದಲ್ಲಿ ನಮಗೆ ಆಯ್ಕೆ ಇದೆ. ಒಂದು ನಾವು ಅದಕ್ಕಾಗಿ ನಮಗೆ ನಾವೇ ವಿಷದ ವ್ಯಕ್ತಪಡಿಸಿ ಭಯಕ್ಕೂ -ಆತಂಕಕ್ಕೂ ನಮ್ಮನ್ನು ನಿಯಂತ್ರಿಸಲು ಅನುವು ಮಾಡಿಕೊಡಬಹುದು. ಇಲ್ಲವೇ ದೇವರ ಮೇಲೆ ಭರವಸೆ ಇಟ್ಟು ನಮ್ಮ ಜೀವಿತದಲ್ಲಿ ಆತನು ಏನು ಮಾಡಲಿದ್ದಾನೆ ಎಂಬುದನ್ನು ಕಾದು ನೋಡಬಹುದು.
ಸಾರಾಳ ಹಾಗೆ ನಾವು ಸಹ ಈ ನಿರೀಕ್ಷಣೆಯ ಕಾಲದಲ್ಲಿ ದೇವರ ವಾಕ್ಯದ ಮೇಲೆ ಆಧಾರಗೊಳ್ಳಬೇಕು ಇಬ್ರಿಯ 11:1 ಹೇಳುತ್ತದೆ....."ನಂಬಿಕೆಯೋ ನಾವು ನಿರೀಕ್ಷಿಸುವವುಗಳ ವಿಷಯವಾಗಿ ಭರವಸದಿಂದಿರುವದೂ ಕಣ್ಣಿಗೆ ಕಾಣದವುಗಳನ್ನು ನಿಜವೆಂದು ತಿಳುಕೊಳ್ಳುವದೂ ಆಗಿದೆ" ಎಂದು.
ದೇವರ ವಾಕ್ಯವು ನಂಬಿಕೆ ವಿಚಾರದಲ್ಲಿ ಮಾತನಾಡುವಾಗಲೆಲ್ಲಾ ದೇವರ ವಾಕ್ಯದೊಂದಿಗೆ ಸಂಬಂಧ ಜೋಡಿಸಿಯೇ ಹೇಳುತ್ತದೆ.ಸಾರಾಳು ಕರ್ತನು ಕೊಟ್ಟ ಮಾತಿನ ಮೇಲೆ ಆಧಾರ ಗೊಂಡಳು. ಪ್ರಾಯಶಃ ಅವಳು ಕರ್ತನು ತನಗೆ ಕೊಟ್ಟ ಮಾತುಗಳನ್ನು ಮತ್ತೆ ಮತ್ತೆ ನೆನಪಿಗೆ ತಂದುಕೊಂಡು ತನ್ನನ್ನು ಧೈರ್ಯಪಡಿಸಿಕೊಳ್ಳುತ್ತಿದ್ದಳು ಎನಿಸುತ್ತದೆ. ನಾವೂ ಸಹಾಯ ಇದನ್ನೇ ಮಾಡಬೇಕು.
ಪ್ರಾರ್ಥನೆಗಳು
ತಂದೆಯೇ, ನೀನು ನಂಬಿಗಸ್ತನು.ನಾನು ಕೊರತೆಗಳನ್ನು ಸಂಧಿಸುವಾಗ ನಿನ್ನ ಸೃಜನಶೀಲತೆಯನ್ನೂ -ನಿನ್ನ ಅಪರಿಮಿತ ಸಂಪತ್ತನ್ನು ಎಂದಿಗೂ ಅನುಮಾನಿಸದಂತೆ ಕೃಪೆಯನ್ನು ಯೇಸು ನಾಮದಲ್ಲಿ ನನಗೆ ಅನುಗ್ರಹಿಸು. ಆಮೇನ್.
Join our WhatsApp Channel
Most Read
● ಮೊಗ್ಗು ಬಿಟ್ಟಂತಹ ಕೋಲು● ಕೃತಜ್ಞತೆಯ ಯಜ್ಞ
● ಯುದ್ಧಕ್ಕಾಗಿ ತರಬೇತಿ.
● ದಿನ 07:40 ದಿನಗಳು ಉಪವಾಸ ಹಾಗೂ ಪ್ರಾರ್ಥನೆ.
● ಅಭಿಷೇಕಕ್ಕಿರುವ ಪ್ರಪ್ರಥಮ ಶತೃ
● ದಿನ 04:40 ದಿನಗಳ ಉಪವಾಸ ಮತ್ತು ಪ್ರಾರ್ಥನೆ
● ಇಸ್ಕಾರಿಯೋತ ಯೂದನ ಜೀವನದಿಂದ ಕಲಿಯಬೇಕಾದ ಪಾಠಗಳು -2
ಅನಿಸಿಕೆಗಳು