ಅನುದಿನದ ಮನ್ನಾ
ಮತ್ತೊಬ್ಬ ಯೇಸು, ಬೇರೊಂದು ಆತ್ಮ, ಮತ್ತು ಬೇರೊಂದು ಸುವಾರ್ತೆ-II
Tuesday, 23rd of April 2024
3
2
293
Categories :
ವಂಚನೆ (Deception)
ಸಿದ್ಧಾಂತ (Doctrine)
ಅಪೋಸ್ತಲನಾದ ಪೌಲನು ಸಭೆಯ ಹಿರಿಯರನ್ನೆಲ್ಲಾ ಎಫೆಸಕ್ಕೆ ಕರೆದು ತನ್ನ ಕಡೆಯ ಮಾತುಗಳನ್ನು ತನ್ನ ಪ್ರೀತಿಯ ಸಂತರಿಗೆ ಹೀಗೆ ಹೇಳಿದನು
"ನಾನು ಹೋದ ಮೇಲೆ ಕ್ರೂರವಾದ ತೋಳಗಳು ನಿಮ್ಮೊಳಗೆ ಬರುವವೆಂದು ನಾನು ಬಲ್ಲೆನು; ಅವು ಹಿಂಡನ್ನು ಕನಿಕರಿಸುವದಿಲ್ಲ. 30 ಇದಲ್ಲದೆ ನಿಮ್ಮಲ್ಲಿಯೂ ಕೆಲವರು ಎದ್ದು ವ್ಯತ್ಯಾಸ ಬೋಧನೆಗಳನ್ನು ಮಾಡಿ ಯೇಸುವಿನ ಶಿಷ್ಯರನ್ನು ತಮ್ಮ ಹಿಂದೆ ಎಳಕೊಳ್ಳುವರು."ಎಂದು (ಅಪೊಸ್ತಲರ ಕೃತ್ಯಗಳು 20:29-30)
ಅಪೋಸ್ತಲನಾದ ಪೌಲನು ಗಲಾತ್ಯದ ಸಭೆಯಲ್ಲಿ ಕೆಲವರು ಅದೆಷ್ಟು ಸುಲಭವಾಗಿ ಯಾಮಾರಿ ಹೋದರು ಎಂದು ವಿಸ್ಮಯಗೊಂಡನು. "ಕ್ರಿಸ್ತನ ಕೃಪೆಯಿಂದ ನಿಮ್ಮನ್ನು ಕರೆದಾತನನ್ನು ನೀವು ಇಷ್ಟು ಬೇಗನೆ ಬಿಟ್ಟು ಬೇರೆ ಸುವಾರ್ತೆಯನ್ನು ಹಿಡಿದಿರುವದಕ್ಕೆ ಆಶ್ಚರ್ಯಪಡುತ್ತೇನೆ. 7ಅದು ಸುವಾರ್ತೆಯೇ ಅಲ್ಲ, ಆದರೆ ಕೆಲವರು ನಿಮ್ಮಲ್ಲಿ ಭೇದವನ್ನು ಹುಟ್ಟಿಸುತ್ತಾ ಕ್ರಿಸ್ತನ ಸುವಾರ್ತೆಯನ್ನು ಮಾರ್ಪಡಿಸುವದಕ್ಕೆ ಅಪೇಕ್ಷಿಸುತ್ತಾ ಇದ್ದಾರೆ.8 ಆದರೂ ನಾವು ನಿಮಗೆ ಸಾರಿದ ಸುವಾರ್ತೆಗೆ ವಿರುದ್ಧವಾದದ್ದನ್ನು ನಾವೇ ಆಗಲಿ ಪರಲೋಕದಿಂದ ಬಂದ ದೇವದೂತನೇ ಆಗಲಿ ನಿಮಗೆ ಸಾರಿದರೆ ಶಾಪಗ್ರಸ್ತನಾಗಲಿ."(ಗಲಾತ್ಯದವರಿಗೆ 1:6-8 )
ಹಾಗಾದರೆ ಸತ್ಯವಾದ ಸುವಾರ್ತೆ ಯಾವುದು, ಶಾಪಗ್ರಸ್ತ ವಾದದ್ದು ಯಾವುದು ಎಂಬುದನ್ನು ನಾವು ಅರಿತುಕೊಳ್ಳುವುದು ಹೇಗೆ?
1.ರಕ್ಷಣೆಗೆ ಇನ್ನೂ ವಿವಿಧ ಮಾರ್ಗಗಳಿವೆ ಎಂದು ಹೇಳುವ ಬೋಧನೆಗಳು.
ಸತ್ಯವೇದವು ಯೇಸುಕ್ರಿಸ್ತನೊಬ್ಬನೇ ಇಡೀ ಲೋಕಕ್ಕೆ ರಕ್ಷಕನು ಎಂದು ಬೋದಿಸುತ್ತದೆ. "ಯೇಸು ಅವನಿಗೆ -ನಾನೇ ಮಾರ್ಗವೂ ಸತ್ಯವೂ ಜೀವವೂ ಆಗಿದ್ದೇನೆ; ನನ್ನ ಮೂಲಕವಾಗಿ ಹೊರತು ಯಾರೂ ತಂದೆಯ ಬಳಿಗೆ ಬರುವದಿಲ್ಲ."(ಯೋಹಾನ 14:6 )
ಯೇಸು ಒಂದು ಮಾರ್ಗವಲ್ಲ- ಯೇಸುವೆ ಮಾರ್ಗ
ಯೇಸು ಒಂದು ಸತ್ಯವಲ್ಲ ಆದರೆ ಯೇಸುವೇ ಸತ್ಯ
ಯೇಸು ಕೇವಲ ಒಬ್ಬ ಒಳ್ಳೆ ಮನುಷ್ಯ ಅಥವಾ ಬೋಧಕ ಅಥವಾ ಒಬ್ಬ ಪ್ರವಾದಿ ಎನ್ನುವುದಕ್ಕಿಂತಲೂ ಹೆಚ್ಚಿನವನಾಗಿದ್ದಾನೆ. ಆತನು ಕನ್ನಿಕೆಯಲ್ಲಿ ಹುಟ್ಟಿದವನಾಗಿದ್ದಾನೆ. ದೇವರ ಏಕ ಮಾತ್ರ ಪುತ್ರನಾಗಿದ್ದಾನೆ!
ಯಾರಾದರೂ ರಕ್ಷಣೆಗೆ ಇನ್ನು ಅನೇಕ ವಿಧವಾದ ಮಾರ್ಗಗಳಿವೆ ಎಂದು ಬೋಧಿಸುತ್ತಿದ್ದರೆ ಅಪೋಸ್ತಲನಾದ ಪೌಲನು ಹೇಳುವ ಹಾಗೆ ಅದು ಇನ್ನೊಂದು ಸುವಾರ್ತೆ ಮತ್ತು ಮತ್ತೊಬ್ಬ ಯೇಸುವಿನ ಬೋಧನೆ ಆಗಿರುತ್ತದೆ.
2.ದೇವರ ಭಯವನ್ನು ಹಾಳು ಮಾಡುವಂತಹ ಯಾವುದೇ ಬೋಧನೆಗಳು.
ಕೇವಲ ಬಲವಾದ, ಯಥಾರ್ಥವಾದ ದೇವರ ಭಯವು ಆದಾಮ ಮತ್ತು ಹವ್ವರನ್ನು ಅವಿಧೇಯತೆಯ ಪಾಪದಿಂದ ರಕ್ಷಿಸಿ ಕಾಪಾಡುತ್ತಿತ್ತೇ ವಿನಃ ಅವರಿಗಿದ್ದ ದೇವರ ಮೇಲಿನ ಪ್ರೀತಿಯಾಗಲಿ ಅಥವಾ ಅವರ ದೈನಂದಿನ ಅನ್ಯೋನ್ಯತೆಯಾಗಲೀಯಲ್ಲ.
"ಇದಲ್ಲದೆ ಯೆಹೋವದೇವರು ಆ ಮನುಷ್ಯನಿಗೆ - ನೀನು ತೋಟದಲ್ಲಿರುವ ಎಲ್ಲಾ ಮರಗಳ ಹಣ್ಣುಗಳನ್ನು ಯಥೇಚ್ಫವಾಗಿ ತಿನ್ನಬಹುದು;17 ಒಳ್ಳೇದರ ಕೆಟ್ಟದ್ದರ ಅರುಹನ್ನು ಹುಟ್ಟಿಸುವ ಮರದ ಹಣ್ಣನ್ನು ಮಾತ್ರ ತಿನ್ನಬಾರದು; ತಿಂದ ದಿನ ಸತ್ತೇಹೋಗುವಿ ಎಂದು ವಿಧಿಸಿದನು."(ಆದಿಕಾಂಡ 2:16-17)
ಆದರೆ ಸೈತಾನನು ನಯವಾಗಿ ಮೃದುವಾಗಿ " ನೀವು ಹೇಗೂ ಸಾಯುವುದಿಲ್ಲ " ಎಂಬ ಸಂದೇಶದೊಡನೆ ಅಲ್ಲಿಗೆ ಬಂದನು.
ಇದಂತೂ ಸತ್ಯವನ್ನು ಸಂಪೂರ್ಣವಾಗಿ ವಿಕೃತಗೊಳಿಸುವ ಸಂದೇಶವಾಗಿತ್ತು- ಇದುವೇ ಇನ್ನೊಂದು ಸುವಾರ್ತೆ, ಆದರೂ ಹವ್ವಳಿಗೆ ಇದನ್ನು ಕೇಳಲು ಹಿತವೆನಿಸಿತು. ಇಲ್ಲಿ ನೋಡಿ ಅವಳ ಆಂತರ್ಯದೊಳಗಿದ್ದ ಏನೋ ಒಂದು ದೇವರ ಆಜ್ಞೆಯನ್ನು ಪ್ರತಿರೋಧಿಸುತ್ತಿತ್ತು. ಅದೇನೆಂದರೆ ಕರ್ತನ ನಿಬಂಧನೆಯು ಅವಳಿಗೆ ಹೊರಲಾರದ ನೊಗವಾಗಿ ಕಾಣಿಸುತ್ತಿತ್ತು.
ಸೈತಾನನಿಗೆ ಹವ್ವಳ ಈ ಸ್ಥಿತಿ ಗೊತ್ತಿತ್ತು. ಆದ್ದರಿಂದಲೇ ಅವನು ಮೊದಲು ಅವಳಿಗೆ ಇದ್ದ ದೇವರ ಭಯವನ್ನು ಅವಳಿಂದ ತೆಗೆಯಲು ಆರಂಭಿಸಿದನು. "ಇದನ್ನು ನಿಜವಾಗಿ ದೇವರೇ ಹೇಳಿದನಾ? ದೇವರು ಆತರದವನಲ್ಲ. ನೀವು ದೇವರ ಬಗ್ಗೆ ತಪ್ಪಾಗಿ ತಿಳಿದುಕೊಂಡಿದ್ದೀರಾ, ಏನು ನೀವು ಜ್ಞಾನ -ವಿವೇಕಗಳನ್ನು ಹೊಂದಿಕೊಳ್ಳುವುದನ್ನು ಆತನು ನಿರಾಕರಿಸುತ್ತಾನೆ ಎಂದು ತಿಳಿದುಕೊಂಡಿದ್ದಿರಾ?ನೀವು ದೇವರ ಬಗ್ಗೆ ಏನನ್ನು ತಿಳಿದುಕೊಂಡಿದ್ದೀರಾ? ನೀವು ನಿಜವಾಗಿ ಸಾಯುವುದಿಲ್ಲ ಎಂದೆಲ್ಲಾ ಹೇಳಿದನು.
"..ಯೆಹೋವನ ಭಯಭಕ್ತಿಯಿಂದ ಹಾನಿ ನಿವಾರಣೆ." ಎಂದು ದೇವರ ವಾಕ್ಯವು ಹೇಳುತ್ತದೆ (ಜ್ಞಾನೋಕ್ತಿಗಳು 16:6)
ಜ್ಞಾನೋಕ್ತಿ 14.12ರಲ್ಲಿ ನಾವು ಓದುವ ಹಾಗೆ "ಮನುಷ್ಯದೃಷ್ಟಿಗೆ ಸರಳವಾಗಿ ತೋರುವ ಒಂದು ದಾರಿಯುಂಟು. ಅದು ಕಟ್ಟಕಡೆಗೆ ಮರಣಮಾರ್ಗವೇ." ನೀವು ಇಂದು ಯಾವ ಮಾರ್ಗದಲ್ಲಿ ನಿಂತಿದ್ದೀರಿ?
ಪ್ರಾರ್ಥನೆಗಳು
ತಂದೆಯೇ, ನಮ್ಮ ಆತ್ಮೀಯ ಕಣ್ಣು- ಕಿವಿಗಳನ್ನು ನಿಮ್ಮ ವಾಕ್ಯದ ಕಡೆಗೆ ತಿರುಗಿಸಿ. ನನ್ನ ಹಾಗೂ ನನ್ನ ಕುಟುಂಬದವರ ಕುಟುಂಬದವರನ್ನು ಮೋಸದಿಂದ ತಪ್ಪಿಸಿ ಕಾಪಾಡಿ ಹಾಗೂ ಸರಿಯಾದ ವ್ಯಕ್ತಿಗಳೊಟ್ಟಿಗೆ ಸಂಪರ್ಕದಲ್ಲಿರುವಂತೆ ಸಹಾಯ ಮಾಡಿ ಎಂದು ಯೇಸು ನಾಮದಲ್ಲಿ ಪ್ರಾರ್ಥಿಸುತ್ತೇನೆ ತಂದೆಯೇ. ಆಮೆನ್.
Join our WhatsApp Channel
Most Read
● ಅಂತಿಮ ಸುತ್ತನ್ನೂ ಗೆಲ್ಲುವುದು● ಮೂರು ಆಯಾಮಗಳು
● ಒತ್ತಡವನ್ನು ಓಡಿಸಲು ಇರುವ ಮೂರು ಶಕ್ತಿಯುತ ಮಾರ್ಗಗಳು
● ಯಾಬೇಚನ ಪ್ರಾರ್ಥನೆ
● ಅಚ್ಚುಮೆಚ್ಚಲ್ಲ, ಆದರೆ ಆತ್ಮೀಯತೆ
● ಕ್ಷಮಿಸಲು ಇರುವ ಪ್ರಾಯೋಗಿಕ ಹಂತಗಳು.
● ಇಂತಹ ಪರಿಶೋಧನೆಗಳು ಏಕೆ?
ಅನಿಸಿಕೆಗಳು