ಅನುದಿನದ ಮನ್ನಾ
ಉತ್ತಮವು ಅತ್ಯುತ್ತಮವಾದದಕ್ಕೆ ಶತೃ
Wednesday, 1st of May 2024
3
2
293
Categories :
ಕರೆಯುತ್ತಿದೆ ( Calling)
"ಆ ದಿವಸಗಳಲ್ಲಿ ಶಿಷ್ಯರು ಹೆಚ್ಚುತ್ತಾ ಬರಲಾಗಿ ಅವರೊಳಗೆ ಗ್ರೀಕ್‍ಭಾಷೆಯವರು ಇಬ್ರಿಯ ಭಾಷೆಯವರ ಮೇಲೆ - ದಿನದಿನದ ಉಪಚಾರದಲ್ಲಿ ನಮ್ಮ ವಿಧವೆಯರನ್ನು ಸರಿಯಾಗಿ ಪರಾಂಬರಿಸುವದಿಲ್ಲವೆಂದು ಗುಣುಗುಟ್ಟಿದರು.2 ಆಗ ಹನ್ನೆರಡು ಮಂದಿ ಅಪೊಸ್ತಲರು ಶಿಷ್ಯಮಂಡಲಿಯನ್ನು ಕೂಡಿಸಿ - ನಾವು ದೇವರ ವಾಕ್ಯೋಪದೇಶವನ್ನು ಬಿಟ್ಟು ಉಪಚಾರಮಾಡುತ್ತಿರುವದು ತಕ್ಕದ್ದಲ್ಲವಲ್ಲಾ;3 ಆದದರಿಂದ ಸಹೋದರರೇ, ಸಂಭಾವಿತರೂ ಪವಿತ್ರಾತ್ಮಭರಿತರೂ ಜ್ಞಾನಸಂಪನ್ನರೂ ಆಗಿರುವ ಏಳುಮಂದಿಯನ್ನು ನಿಮ್ಮೊಳಗಿಂದ ನೋಡಿ ಆರಿಸಿಕೊಳ್ಳಿರಿ; ಅವರನ್ನು ಈ ಕೆಲಸದ ಮೇಲೆ ನೇವಿುಸುವೆವು.4ನಾವಾದರೋ ಪ್ರಾರ್ಥನೆಯನ್ನೂ ವಾಕ್ಯೋಪದೇಶವನ್ನೂ ಮಾಡುವದರಲ್ಲಿ ನಿರತರಾಗಿರುವೆವು ಎಂದು ಹೇಳಿದರು."(ಅಪೊಸ್ತಲರ ಕೃತ್ಯಗಳು 6:1-4)
ಆಗ ಆದಿಸಭೆಯು ಅತೀ ವೇಗವಾಗಿ ಬೆಳೆಯುತ್ತಾ ಬರುತ್ತಿತ್ತು. ಹಾಗೆಯೇ ಯಾವುದೇ ಸಂಸ್ಥೆಯು ಬೆಳೆಯುವಾಗ ಅದರ ಆಡಳಿತ ವಿಚಾರಗಳು ಆಗಾಗಲೇ ಸರಿಪಡಿಸಿಕೊಳ್ಳಬೇಕಾದ ಅಗತ್ಯವಿದೆ. ಈ ಒಂದು ಪ್ರಕರಣದಲ್ಲಿ ವಿಧವೆಯರು ಕಡೆಗಣಿಸಲ್ಪಟ್ಟಿದ್ದರು. ಈಗ ವಿಧವೆಯರಿಗೆ ಆಹಾರವನ್ನು ಒದಗಿಸುವಂಥದ್ದು ಉತ್ತಮವಾದ ಕಾರ್ಯವೇ. ಹಾಗಾದರೆ ಅಪೋಸ್ತಲರು ಇದೇ ಕಾರ್ಯಮಾಡಿಕೊಂಡು ಕೂತಿರಬೇಕೇ? ಇಲ್ಲ! ಅವರು ಯಾವುದಕ್ಕಾಗಿ ಕರೆಯಲ್ಪಟ್ಟಿದ್ದಾರೋ ಅದನ್ನು ಅವರು ಸ್ಪಷ್ಟವಾಗಿ ಅವರು ಅರಿತುಕೊಂಡಿದ್ದರು. ಅವರು ತಮ್ಮ ಸಮಯವನ್ನು ದೇವರ ವಾಕ್ಯ ಮತ್ತು ಪ್ರಾರ್ಥನೆ ಎಂಬ ಅತ್ಯುತ್ತಮವಾದದ್ದಕ್ಕಾಗಿ ನೀಡಿ, ಬೇರೆ ಯಾರು ಬೇಕಾದರೂ ಮಾಡಬಹುದಾದ ಕಾರ್ಯಗಳಿಗಾಗಿ ಜನರನ್ನು ನಿಯೋಜಿಸಿ ತಮ್ಮ ಜವಾಬ್ದಾರಿಗಳನ್ನು ನಿಭಾಯಿಸಿದರು.
ಅವರ ಈ ನಿರ್ಧಾರದ ಫಲಿತಾಂಶವೇನು?
"ದೇವರ ವಾಕ್ಯವು ಪ್ರಬಲವಾಯಿತು. ಶಿಷ್ಯರ ಸಂಖ್ಯೆಯು ಯೆರೂಸಲೇವಿುನಲ್ಲಿ ಬಹಳವಾಗಿ ಹೆಚ್ಚುತ್ತಾ ಬಂತು. ಯಾಜಕರಲ್ಲಿಯೂ ಬಹುಜನರು ಕ್ರಿಸ್ತನಂಬಿಕೆಗೆ ಒಳಗಾಗುತ್ತಾ ಇದ್ದರು."(ಅಪೊಸ್ತಲರ ಕೃತ್ಯಗಳು 6:7).ನಿಮಗೆ ಉತ್ತಮ ಎನಿಸುವ ಕಾರ್ಯಗಳು ನಿಮ್ಮ ಅತ್ಯುತ್ತಮವಾದ ಕರೆಗೆ ಅಡ್ಡಿಯಾಗುತ್ತಿದೆಯೇ? ನೆನಪಿಡಿ : ಉತ್ತಮವು ಅತ್ಯುತ್ತಮವಾದದ್ದಕ್ಕೆ ಶತೃವಾಗಿದೆ.
ಒಂದು ಸಾರಿ ಒಬ್ಬ ದೀಪಸ್ತಂಭದ ಮೇಲಿನ ದೀಪವನ್ನು ಉರಿಸುವ ಉಸ್ತುವಾರಿ ವಹಿಸಿದ್ದ ಕೆಲಸಗಾರನು ಪ್ರತಿ ತಿಂಗಳಿಗೂ ಆ ದೀಪವನ್ನು ಉರಿಸಲು ಹೊಸದಾಗಿ ಎಣ್ಣೆಯನ್ನು ಪಡೆದುಕೊಳ್ಳುತ್ತಿದ್ದನು. ಒಂದು ಸಾರಿ ಒಬ್ಬ ಬಡ ಹೆಂಗಸು ಸ್ವಲ್ಪ ಎಣ್ಣೆಯನ್ನು ಕೇಳಿದಳು. ಸಹಾಯ ಮಾಡುವುದು ಉತ್ತಮವಾದದಲ್ಲವೇ ಎಂದು ಆಕೆಗೆ ಕೊಟ್ಟನು ಹೀಗೆ ಒಬ್ಬರಾದ ಮೇಲೆ ಒಬ್ಬರು ಆಗಾಗ್ಗೆ ಬಂದು ಎಣ್ಣೆಗಾಗಿ ಬೇಡುತ್ತಿದ್ದರು. ಆ ಬೇಡಿಕೆಗಳು ಉತ್ತಮವಾಗಿಯೂ- ನ್ಯಾಯ ಸಮ್ಮತವಾಗಿಯೂ ಇರುವುದರಿಂದ ಯಾರಿಗೂ ಇಲ್ಲ ಎಂದು ಹೇಳದೆ ಎಲ್ಲರಿಗೂ ಎಣ್ಣೆಯನ್ನು ಕೇಳಿದಷ್ಟು ಕೊಟ್ಟುಬಿಟ್ಟನು.
ಒಂದು ರಾತ್ರಿ ಅವನಲ್ಲಿ ಸ್ವಲ್ಪವೇ ಸ್ವಲ್ಪ ಎಣ್ಣೆ ಉಳಿದಿತ್ತು. ಆ ರಾತ್ರಿಯಲ್ಲಿಯೇ ಆ ಎಣ್ಣೆಯು ಖಾಲಿಯಾಗಿ ದೀಪವು ಆರಿ ಹೋಗಿತ್ತು. ಆ ರಾತ್ರಿ ಅನೇಕ ಹಡಗುಗಳು ಬಡಿಯಲ್ಪಟ್ಟವು. ಮತ್ತು ಕೆಲವು ದಾರಿ ತಪ್ಪಿದವು. ಅಧಿಕಾರಿಗಳು ಈ ಪ್ರಕರಣವನ್ನು ತನಿಖೆಗೆ ಒಳಪಡಿಸಿದಾಗ ದೀಪಸ್ತಂಭದ ಉಸ್ತುವಾರಿ ವಹಿಸಿಕೊಂಡಂತಹ ಆ ಮನುಷ್ಯನನ್ನು ತಪ್ಪಿತಸ್ಥನೆಂದು ವಿಚಾರಣೆಗೊಳಪಡಿಸಿದರು. ಆಗ ಆ ಮನುಷ್ಯನು "ನನ್ನನ್ನು ಕ್ಷಮಿಸಿ, ಆದರೆ ನಾನು ಉತ್ತಮ ಕಾರ್ಯಗಳಿಗಾಗಿಯೇ ಆ ಎಣ್ಣೆಯನ್ನು ಬಳಸಿದೆ"ಎಂದು ಹೇಳಲಾರಂಬಿಸಿದನು. ಆದರೆ ಮುಖ್ಯ ನ್ಯಾಯಾಧೀಶನು ಏನೆಂದು ಪ್ರತಿಕ್ರಿಯಿಸಿದನೆಂದು ನಿಮಗೆ ಗೊತ್ತೇ? "ನಿನಗೆ ಆ ಎಣ್ಣೆಯನ್ನು ಕೊಟ್ಟದ್ದು ಒಂದೇ ಒಂದು ಉದ್ದೇಶಕ್ಕಾಗಿ. ಅದು ಆ ದೀಪಸ್ತಂಭಗಳಲ್ಲಿನ ದೀಪವನ್ನು ಉರಿಸಲು. ಆದರೆ ನೀನು ಈ ಕಾರ್ಯದಲ್ಲಿ ವಿಫಲನಾದೆ" ಎಂದು
ನಿಮ್ಮ ಕರೆ ಏನು? ನೀವು ನಿಮ್ಮ ಕರೆಯನ್ನು ಪೂರೈಸುತ್ತಿದ್ದಿರಾ? ಅಥವಾ ಏನೋ ಮಾಡಬೇಕೆಂದು ನೀವದನ್ನು ಮಾಡುತ್ತಿದ್ದೀರಾ? ನಿಮ್ಮ ಜೀವನದ ಉದ್ದೇಶವೇನು? ಬರಿ ಬದುಕುವುದಾ? ನಾಯಿ- ಬೆಕ್ಕುಗಳು ಸಹ ಇಂದು ಸುಮ್ಮನೆ ಬದುಕುತ್ತಿವೆ. ನಿಜವಾಗಿಯೂ ನಿಮಗಾಗಿ ಒಂದು ಮಹಾನುದ್ದೇಶವು ಇದ್ದೇ ಇರುತ್ತದೆ.
ಯೇಸುಸ್ವಾಮಿಯು ಮಾರ್ಥಳಿಗೆ "ಕೆಲವು ಮಾತ್ರ ಬೇಕಾದದ್ದು, ಅಥವಾ ಒಂದೇ, ಮರಿಯಳು ಆ ಉತ್ತಮ ಭಾಗವನ್ನು ಆರಿಸಿಕೊಂಡಿದ್ದಾಳೆ; ಅದು ಆಕೆಯಿಂದ ತೆಗೆಯಲ್ಪಡುವದಿಲ್ಲ ಎಂದು ಉತ್ತರಕೊಟ್ಟನು."(ಲೂಕ 10:42 )
ಪ್ರಾರ್ಥನೆಗಳು
"ನನ್ನ ಜೀವಮಾನದಲ್ಲೆಲ್ಲ ಯೆಹೋವನ ಮನೆಯಲ್ಲಿ ವಾಸ ಮಾಡುತ್ತಾ ಆತನ ಪ್ರಸನ್ನತೆಯನ್ನು ನೋಡುವುದಕ್ಕೂ ಆತನ ಮಂದಿರದಲ್ಲಿ ಧ್ಯಾನ ಮಾಡುವುದಕ್ಕೂ ನನಗೆ ಅಪ್ಪಣೆಯಾಗಬೇಕೆಂಬ ಒಂದೇ ವರವನ್ನು ಯೇಸು ನಾಮದಲ್ಲಿ ಕೇಳಿಕೊಂಡು ಅದನ್ನೇ ಎದುರು ನೋಡುತ್ತಿರುವೆನು. ಆಮೆನ್.
Join our WhatsApp Channel
Most Read
● ಕರ್ತನಾದ ಯೇಸುವಿನ ಮುಖಾಂತರ ಕೃಪೆ● ಪರಿಸ್ಥಿತಿಯ ದಯೆಯಲ್ಲಿ ಇರಬೇಡಿರಿ
● ಹಣಕಾಸಿನ ಅದ್ಭುತ ಬಿಡುಗಡೆ.
● ಈ ದಿನಮಾನಗಳಲ್ಲಿ ಕಾಣುವ ಅಪರೂಪದ ಸಂಗತಿ
● ಎಲ್ಲಾಮನುಷ್ಯರಿಗಾಗಿ ಇರುವ ಕೃಪೆ
● ಯೇಸು ನಿಜವಾಗಿ ಖಡ್ಗ ಹಾಕಲೆಂದು ಬಂದನೇ?
● ಇನ್ನೂ ಯಾವುದಕ್ಕಾಗಿ ಕಾಯುತ್ತಿದ್ದೀರಿ?
ಅನಿಸಿಕೆಗಳು