ಅನುದಿನದ ಮನ್ನಾ
ಪುರುಷರು ಯಾಕೆ ಪತನಗೊಳ್ಳುವರು -2
Thursday, 9th of May 2024
0
0
366
Categories :
ಜೀವನದ ಪಾಠಗಳು (Life Lessons)
ನಾವು ಮಹಾನ್ ಸ್ತ್ರೀ -ಪುರುಷರು ಏಕೆ ಪತನಗೊಂಡರು ಎಂಬ ಸರಣಿಯನ್ನು ಮುಂದುವರಿಸುತ್ತಾ ಅದರಲ್ಲಿ ದಾವೀದನ ಜೀವನವನ್ನು ನೋಡುತ್ತಾ ನಮ್ಮನ್ನು ನೋವಿ ನಿಂದಲೂ ಪತನದಿಂದಲೂ ತಪ್ಪಿಸುವ ಪ್ರಮುಖ ಪಾಠವನ್ನು ಸಂಗ್ರಹಿಸುತ್ತಾ ಇದ್ದೇವೆ.
"ಅವನು ಒಂದು ದಿವಸ ಸಂಜೇ ಹೊತ್ತಿನಲ್ಲಿ ಮಂಚದಿಂದೆದ್ದು ಅರಮನೆಯ ಮಾಳಿಗೆಯ ಮೇಲೆ ತಿರುಗಾಡುತ್ತಿರುವಾಗ ಅಲ್ಲಿಂದ ಬಹುಸುಂದರಿಯಾದ ಒಬ್ಬ ಸ್ತ್ರೀ ಸ್ನಾನಮಾಡುವದನ್ನು ಕಂಡನು."(2 ಸಮುವೇಲನು 11:2)
ದೇವರ ವಾಕ್ಯ ಹೇಳುತ್ತದೆ ದಾವೀದನು ಸಂಜೆಯಲ್ಲಿ ತನ್ನ ಹಾಸಿಗೆಯಿಂದ ಎದ್ದನು ಎಂದು. ಇದು ಅರಸನು ತುಂಬಾ ತಡವಾಗಿ ಮಲಗಿದ್ದನು ಎಂಬುದನ್ನು ಸೂಚಿಸುತ್ತದೆ.
ಇಸ್ರೇಯೇಲ್ ಪದ್ಧತಿಯ ಪ್ರಕಾರ ಅರಸನ ವಾಸ ಸ್ಥಳವು ಯೆರುಸಲೆಮ್ ಪಟ್ಟಣದ ಎತ್ತರದ ಸ್ಥಳದಲ್ಲಿ ಕಟ್ಟಲ್ಪಟ್ಟಿರುತ್ತದೆ. ಆ ಸಮಯದಲ್ಲಿ ಮನೆಗಳ ವಿನ್ಯಾಸ ರಚನೆಯು ಸಮತಟ್ಟಾದ ತಾರಸಿಗಳಿಂದ ಕೂಡಿರುತಿತ್ತು.
ಜನರು ನೀರನ್ನು ಆ ತಾರಸಿಯ ಮೇಲೆ ಶೇಖರಿಸಸಿಟ್ಟು ಅದು ಬೆಚ್ಚಗಾದ ಮೇಲೆ ಸಂಜೆಯಲ್ಲಿ ಸ್ನಾನ ಮಾಡುತ್ತಿದ್ದರು. ಇದು ದಾವಿದನಿಗೂ ಸಹ ತಿಳಿದಂತ ವಿಷಯವಾಗಿತ್ತು. ಆ ಸಂಗತಿಯೂ ಕಾಕತಾಳಿಯವೇನಲ್ಲ. ದಾವೀದನು ತಪ್ಪಾದ ಸಮಯದಲ್ಲಿ ತಪ್ಪಾದ ಸ್ಥಳದಲ್ಲಿದ್ದದ್ದು ದಾವಿದನ ಪತನದ ಉರಿಯುವ ಬೆಂಕಿಗೆ ಇನ್ನಷ್ಟು ತುಪ್ಪ ಸುರಿಯುವಂತಿತ್ತು.
ಪೇತ್ರನು ಕರ್ತನನ್ನು ಅಲ್ಲಗಳಿವಾಗ ಎಲ್ಲಿದ್ದನು?
ಅವನು ವಿಶ್ವಾಸಿಯಾದ ಶಿಷ್ಯರಿಂದ ಬೇರ್ಪಟ್ಟು ಮಹಾ ಯಾಜಕನ ಮನೆಯಂಗಳಕ್ಕೆ ಬಂದು ಬೆಂಕಿಯಲ್ಲಿ ಚಳಿ ಕಾಯಿಸಿಕೊಳ್ಳುತ್ತಿದ್ದನು. ಅವನು ಅವಿಶ್ವಾಸಿಗಳೊಂದಿಗೂ ದೇವದೂಷಷಕರೊಂದಿಗೂ ಜೊತೆಯಾಗಿದ್ದನು. ಪೇತ್ರನು ಆ ಉರಿಯುವ ಬೆಂಕಿಯ ಬೆಳಕಿನಲ್ಲಿ ಕರ್ತನನ್ನು ಅರಿಯೆನೆಂದು ಮೂರು ಸಾರಿ ಪ್ರಕಾಶವಾಗಿ ಪ್ರಕಟಪಡಿಸಿದನು. ಸ್ಪಷ್ಟವಾಗಿ ಹೇಳುವುದಾದರೆ ತಪ್ಪಾದ ಜನರೊಂದಿಗೆ ತಪ್ಪಾದ ಸಮಯದಲ್ಲಿ ತಪ್ಪಾದ ಸ್ಥಳದಲ್ಲಿ ಪೇತ್ರನು ಇದ್ದನು. ಇದುವೇ ಅವನು ಹಿಂಜಾರಲು ಕಾರಣ.
ಸತ್ಯವೇದದಲ್ಲಿ ಕೇವಲ ದಾವಿದ ಮತ್ತು ಪೇತ್ರ ಮಾತ್ರ ಅವರು ತಪ್ಪಾದ ಸ್ಥಳದಲ್ಲಿ ತಪ್ಪಾದ ಸಮಯದಲ್ಲಿ ಇದ್ದುದ್ದಕ್ಕೆ ಬಿದ್ದು ಹೋದರು ಎಂದು ಹೇಳತ್ತಿಲ್ಲ. ದಾವಿದನ ಹೆಂಡತಿಯಾದ ಮಿಕಾಲಳು ಸಹ ಇದೇ ನಿಯಮವನ್ನು ಮೀರಿ ತೊಂದರೆಗಳಿಗೆ ಗುರಿಯಾದಳು
"ದಾವೀದನು ನಾರಿನ ಏಫೋದನ್ನು ಧರಿಸಿಕೊಂಡವನಾಗಿ ಯೆಹೋವನ ಸನ್ನಿಧಿಯಲ್ಲಿ ಪೂರ್ಣಾಸಕ್ತಿಯಿಂದ ಕುಣಿದಾಡಿದನು. [15] ಹೀಗೆ ದಾವೀದನೂ ಎಲ್ಲಾ ಇಸ್ರಾಯೇಲ್ಯರೂ ಆರ್ಭಟಿಸುತ್ತಾ ತುತೂರಿ ಊದುತ್ತಾ ಯೆಹೋವನ ಮಂಜೂಷವನ್ನು ತಂದರು. [16] ಮಂಜೂಷವು ದಾವೀದನಗರದೊಳಗೆ ಬರುತ್ತಿರುವಾಗ ಸೌಲನ ಮಗಳಾದ ಮೀಕಲಳು ಕಿಟಕಿಯಿಂದ ಹಣಿಕಿ ನೋಡಿ ದಾವೀದನು ಯೆಹೋವನ ಮುಂದೆ ಜಿಗಿಯುತ್ತಾ ಕುಣಿಯುತ್ತಾ ಇರುವದನ್ನು ಕಂಡು ಮನಸ್ಸಿನಲ್ಲಿ ಅವನನ್ನು ತಿರಸ್ಕರಿಸಿದಳು."(2 ಸಮುವೇಲನು 6:14-16 )
"ಸೌಲನ ಮಗಳಾದ ಮೀಕಲಳಿಗೆ ಜೀವದಿಂದಿರುವವರೆಗೂ ಮಕ್ಕಳೇ ಆಗಲಿಲ್ಲ." ಎಂದು ಸತ್ಯವೇದ ಹೇಳುತ್ತದೆ. (2 ಸಮುವೇಲನು 6:23)
ಮೀಕಾಲಳು ಈ ಕಾರ್ಯ ಜರುಗುವಾಗ ಕಿಟಕಿಯ ಮೂಲಕ ಏಕೆ ನೋಡಬೇಕಿತ್ತು? ಈ ಒಂದು ಸಂಭ್ರಮದಲ್ಲಿ ಅವಳು ಏಕೆ ಭಾಗಿಯಾಗಿರಲಿಲ್ಲ?ಆಕೆ ಕೂಡ ಒಬ್ಬ ಇಸ್ರೇಯೇಲಳು. ಅಬ್ರಹಾಮನ ವಂಶಸ್ಥಳಾಗಿದ್ದಳು.ಆಕೆಯೂ ಸಹ ದಾವೀದನ ಹಾಗೆ ದೇವ ದರ್ಶನ ಗುಡಾರವು ಯೆರುಸಲೆಮಿಗೆ ಬಂದದ್ದಕ್ಕೆ ಹರ್ಷದಿಂದ ಇರಬೇಕಿತ್ತಲ್ಲವೇ. ಪ್ರಾಯಶಹ ಆಕೆ ದೈಹಿಕವಾಗಿ ಕೆಳಗೆ ಬರಲು ಯಾವುದೋ ಸಮಸ್ಯೆ ಇತ್ತೇನೋ ಎನ್ನಬಹುದು ? ಆದರೆ ಅವಳ ನಡತೆಯಿಂದಲೇ ಕೆಳಗಿಳಿದು ಬರದೇ ತನ್ನನ್ನು ತಗ್ಗಿಸಿಕೊಳ್ಳಲಿಲ್ಲವೆಂಬುದು ಪ್ರಕಟಗೊಂಡಿತು. ಹಾಗೆಯೇ ಆಕೆ ದೇವರ ಅಭಿಪ್ರಾಯಕ್ಕಿಂತ ಜನರು ಏನೆಂದು ಯೋಚಿಸುತ್ತಾರೋ ಎಂಬ ಅಭಿಪ್ರಾಯಕ್ಕೆ ಹೆಚ್ಚು ಕಾಳಜಿ ತೋರುವ ತನ್ನ ತಂದೆಯಾದ ಸೌಲನ ಹೆಜ್ಜೆಗಳನ್ನು ಹಿಂಬಾಲಿಸುವವಳಾಗಿದ್ದಳು.
ಒಬ್ಬ ವ್ಯಕ್ತಿಯು ತಪ್ಪಾದ ಸ್ಥಳಗಳಿಗೆ ಹೋಗುವುದರ ಮೂಲಕ ಮತ್ತು ತಪ್ಪಾದ ಜನರೊಂದಿಗೆ ಸುತ್ತಾಡುವ ಮೂಲಕ ಅನಗತ್ಯ ಶೋಧನೆಗೆ ಗುರಿಯಾಗಬಹುದು. ಆಗ ಅಂತ ವ್ಯಕ್ತಿ ತಪಾದ ಕಾರ್ಯ ಮಾಡಿದರೆ ನಾವು ಆಶ್ಚರ್ಯ ಪಡಬೇಕಾದ ಅವಶ್ಯಕತೆಯೇ ಇಲ್ಲ.
ನೀವು ಸರಿಯಾದ ಸಮಯದಲ್ಲಿ ಸರಿಯಾದ ಸ್ಥಳದಲ್ಲಿ ಇದ್ದರೆ ಎಲ್ಲಾ ಶೋಧನೆಗಳು ದೂರ ಓಡಿಹೋಗುತ್ತವೆ ಎಂಬುದಾಗಿ ನಾನು ಹೇಳುತ್ತಿಲ್ಲ. ಆದರೆ ಖಂಡಿತವಾಗಿಯೂ ನಿಮಗೆ ನೀವೇ ತಂದಿಟ್ಟುಕೊಳ್ಳಬಹುದಾದಂತಹ ಶೋಧನೆಯಿಂದ ಉಂಟಾಗುವ ಅನಗತ್ಯ ಒತ್ತಡಗಳಲ್ಲಿ ಬದುಕದೆ ದೇವರ ಚಿತ್ತದಂತೆ ಬದುಕುವ ಮೂಲಕ ನೀವು ಹೆಚ್ಚಾದ ದೈವಿಕ ಶಾಂತಿಯಲ್ಲಿ ನೆಲೆಸುವಿರಿ.
ಪ್ರಾರ್ಥನೆಗಳು
ತಂದೆಯೇ, ನೀವು ನಮ್ಮ ಆಯಸ್ಸಿನ ದಿನಗಳನ್ನು ಇಷ್ಟೆಂದು ನಿಗಧಿ ಮಾಡಿರುವುದಕ್ಕಾಗಿ ಸ್ತೋತ್ರ ಸಲ್ಲಿಸುತ್ತೇನೆ. ನೀವು ನನಗೆ ನೀಡಿರುವ ಸಮಯವನ್ನು ಜ್ಞಾನ ವಿವೇಕಗಳಿಂದ ಬಳಸಿಕೊಳ್ಳುವಂತೆ, ನನಗೆ ಸಹಾಯ ಮಾಡಿರಿ. ಸರಿಯಾದ ಸಮಯದಲ್ಲಿ ಸರಿಯಾದ ವ್ಯಕ್ತಿಗಳೊಂದಿಗೆ ಸರಿಯಾದ ಸ್ಥಳದಲ್ಲಿ ಇರುವಂತೆ ಯೇಸು ನಾಮದಲ್ಲಿ ನನಗೆ ಸಹಾಯ ಮಾಡಿ.ಆಮೆನ್
Join our WhatsApp Channel
Most Read
● ದೇವರ ಕನ್ನಡಿ● ನೀವು ದೇವರಿಂದ ನೇಮಿಸಲ್ಪಡುವ ಮುಂದಿನ ಬಿಡುಗಡೆ ನಾಯಕರು ನೀವಾಗಬಹುದು
● ದಿನ 02 : 40 ದಿನಗಳ ಉಪವಾಸ ಮತ್ತು ಪ್ರಾರ್ಥನೆ
● ಯೇಸುವನ್ನು ನೋಡುವ ಬಯಕೆ
● ನಿಮ್ಮ ಸಮಸ್ಯೆಗಳು ಮತ್ತು ನಿಮ್ಮ ನಡವಳಿಕೆಗಳು
● ದಿನ 32:40 ದಿನಗಳ ಉಪವಾಸ ಮತ್ತು ಪ್ರಾರ್ಥನೆ.
● ಅಂತ್ಯದಿನಗಳ ಕುರಿತು ಪ್ರವಾದನ ಯುಕ್ತ ಗೂಡಾರ್ಥ ವಿವರಣೆ
ಅನಿಸಿಕೆಗಳು