ಅನುದಿನದ ಮನ್ನಾ
ಕ್ರಿಸ್ತನೊಂದಿಗೆ ಸಿಂಹಾಸನದಲ್ಲಿ ಕೂತುಕೊಳ್ಳುವುದು
Wednesday, 15th of May 2024
4
2
186
Categories :
ಆತ್ಮಿಕ ಯುದ್ಧ (Spiritual warfare)
"ನಾನು ಜಯಹೊಂದಿ ನನ್ನ ತಂದೆಯೊಡನೆ ಸಿಂಹಾಸನದಲ್ಲಿ ಕೂತುಕೊಂಡೆನು; ಹಾಗೆಯೇ ಜಯಹೊಂದುವವನನ್ನು ನನ್ನೊಡನೆ ಸಿಂಹಾಸನದಲ್ಲಿ ಕೂತುಕೊಳ್ಳುವಂತೆ ಮಾಡುವೆನು."(ಪ್ರಕಟನೆ 3:21)
ಪ್ರಕಟಣೆ 3: 21ರಲ್ಲಿ "ಜಯಹೊಂದುವವನನ್ನು ನನ್ನೊಡನೆ ಸಿಂಹಾಸನದಲ್ಲಿ ಕೂತುಕೊಳ್ಳುವಂತೆ ಮಾಡುವೆನು" ಎಂದು ಕರ್ತನಾದ ಯೇಸುವು ಜಯಶಾಲಿಗಳಾದವರಿಗೆ ಒಂದು ದಿಗ್ಬ್ರಮೆಗೊಳಿಸುವಂತ ವಾಗ್ದಾನವನ್ನು ಮಾಡುತ್ತಾನೆ. ಈ ಒಂದು ವಾಗ್ದಾನವು ಕ್ರಿಸ್ತನ ಮೂಲಕ ಜಯ ಹೊಂದಿದ ವಿಶ್ವಾಸಿಗಳಿಗೆ ಕೊಡಲಿರುವ ಅತಿಶಯವಾದ ಸೌಭಾಗ್ಯವನ್ನು ಹಾಗೂ ಅಧಿಕಾರವನ್ನು ಕುರಿತು ಹೇಳುತ್ತದೆ. ಕ್ರಿಸ್ತನೊಂದಿಗೆ ಸಿಂಹಾಸನದಲ್ಲಿ ಕೂತುಕೊಳ್ಳುವುದರ ಕುರಿತ ವಿಚಾರವನ್ನು ನಾವಿಂದು ವಿವರವಾಗಿ ನೋಡೋಣ.
ಕ್ರಿಸ್ತನೊಂದಿಗೆ ಸಿಂಹಾಸನದಲ್ಲಿ ಕೂತುಕೊಂಡಿರುವಂತಹ ಅತಿಶಯವಾದ ಪರಿಕಲ್ಪನೆ ಆತನಲ್ಲಿರುವ ಶಕ್ತಿಯುತವಾದ ನಮ್ಮ ಸ್ಥಾನಮಾನದ ಚಿತ್ರಣವಾಗಿದೆ. "ಬದುಕಿಸಿದ್ದಲ್ಲದೆ ತಾನು ಕ್ರಿಸ್ತ ಯೇಸುವಿನಲ್ಲಿ ನಮಗೆ ಮಾಡುವ ಉಪಕಾರದ ಮೂಲಕ ತನ್ನ ಅಪಾರವಾದ ಕೃಪಾತಿಶಯವನ್ನು [7] ಮುಂದಣ ಯುಗಗಳಲ್ಲಿ ತೋರಿಸಬೇಕೆಂದು ಕ್ರಿಸ್ತ ಯೇಸುವಿನಲ್ಲಿರುವ ನಮ್ಮನ್ನು ಆತನೊಂದಿಗೆ ಎಬ್ಬಿಸಿ ಪರಲೋಕದಲ್ಲಿ ಆತನೊಂದಿಗೆ ಕೂಡ್ರಿಸಿದ್ದಾನೆ."ಎಂದು ಅಪೋಸ್ತಲನಾದ ಪೌಲನು ಬರೆಯುತ್ತಾನೆ(ಎಫೆಸದವರಿಗೆ 2:6-7). ಈ ವಾಕ್ಯವು ಕ್ರಿಸ್ತನೊಂದಿಗೆ ಸಿಂಹಾಸನದಲ್ಲಿ ಆಸೀನರಾಗುವಂತದ್ದು ಕೇವಲ ಭವಿಷ್ಯದ ನಿರೀಕ್ಷೆಯಷ್ಟೇ ಆಗಿರದೆ ವರ್ತಮಾನ ಕಾಲದಲ್ಲೂ ವಾಸ್ತವವಾದ ವಿಚಾರವಾಗಿದೆ ಎಂಬುದನ್ನು ಎತ್ತಿ ತೋರಿಸುತ್ತದೆ.
ಕರ್ತನಾದ ಯೇಸು ತನ್ನ ಪುನರುತ್ತಾನದ ಮೂಲಕ ಪಾಪವನ್ನೂ ಮರಣವನ್ನೂ ಜಯಿಸಿದಷ್ಟೇ ಅಲ್ಲದೇ ನಮ್ಮ ವಿಜಯವನ್ನೂ ಸಾಧಿಸಿದನು. ನಾವೀಗ ಕ್ರಿಸ್ತನೊಂದಿಗೆ ಬಾದ್ಯಸ್ಥರು ಆತನ ಜಯೋತ್ಸವದ ಪಾಲುದಾರರು (ರೋಮ 8:17). ಕ್ರಿಸ್ತನೊಂದಿಗೆ ಸಿಂಹಾಸನದಲ್ಲಿ ಕೂತುಕೊಳ್ಳುವಂತದ್ದು ಆತ್ಮಿಕ ಆಯಾಮದಲ್ಲಿ ನಮ್ಮ ಅಧಿಕಾರವನ್ನು ಆಳ್ವಿಕೆಯನ್ನು ಸೂಚಿಸುತ್ತದೆ. ಅದರ ಅರ್ಥ ನಾವು ಶೋಧನೆಗಳನ್ನು ಜಯಸಲು, ಶತ್ರುವಿನ ಯೋಜನೆಗಳನ್ನು ಪ್ರತಿರೋಧಿಸಲು ಹಾಗೂ ಕ್ರಿಸ್ತನು ನಮಗಾಗಿ ಈಗಾಗಲೇ ಜಯಿಸಿದ ವಿಜಯದಲ್ಲಿ ಜೀವಿಸಲು ಶಕ್ತರಾಗಿದ್ದೇವೆ ಎಂಬುದಾಗಿದೆ.
ಆದಾಗಿಯೂ ಹೀಗೆ ಕ್ರಿಸ್ತನೊಂದಿಗೆ ಸಿಂಹಾಸನದಲ್ಲಿ ಕೂತುಕೊಳ್ಳುವಂತಹ ಸ್ಥಾನಮಾನಗಳು ನಾವು ನಮ್ಮ ಸ್ವಂತ ಬಲದಲ್ಲಿ ಸಂಪಾದಿಸಿದ್ದಲ್ಲ. ಅದು ಕ್ರಿಸ್ತನಲ್ಲಿಟ್ಟಿರುವ ನಂಬಿಕೆಯ ಮೂಲಕ ಕೃಪೆಯಿಂದ ದೊರೆತ ಉಚಿತಾರ್ಥ ವರವಾಗಿದೆ. ನಾವು ಆತನ ಸಿಂಹಾಸನದಲ್ಲಿ ಆಸೀನರಾಗಿರುವಂತೆ ಮಾಡಿದ್ದು ಆತನು ಶಿಲುಬೆಯ ಮೇಲೆ ಮಾಡಿ ಮುಗಿಸಿದ ಕಾರ್ಯದಿಂದಲೇ ಹೊರತು ನಮ್ಮ ಸ್ವನೀತಿಯಿಂದಲ್ಲ. ನಾವು ಕ್ರಿಸ್ತನಲ್ಲಿ ನೆಲೆಗೊಂಡು ಆತನ ಜೀವವು ನಮ್ಮಲ್ಲಿ ಪ್ರವರ್ತಿಸಲು ಅನುಮತಿಸುವುದಾದರೆ ಆತನೊಂದಿಗೆ ಆಳ್ವಿಕೆ ನಡೆಸುವಂತಹ ವಾಸ್ತವತೆಯನ್ನು ನಾವು ಅನುಭವಿಸಬಹುದು.
ಆತನೊಂದಿಗೆ ಸಿಂಹಾಸನದಲ್ಲಿ ಆಸೀನರಾಗಿರುವಂತಹ ಅತಿಶಯವಾದ ಸತ್ಯವನ್ನು ಧ್ಯಾನಿಸಲು ಸ್ವಲ್ಪ ಸಮಯ ತೆಗೆದುಕೊಳ್ಳಿರಿ. ನೀವಿಂದು ಎದುರಿಸುತ್ತಿರುವ ಸವಾಲುಗಳನ್ನು ಈ ಸತ್ಯದ ಆಯಾಮದಲ್ಲಿ ನೋಡುವಾಗ ನಿಮ್ಮ ಸವಾಲುಗಳು ನಿಮಗೆ ಹೇಗೆ ಕಾಣುತ್ತದೆ?
ಎಂಥಹುದೇ ಅಡೆತಡೆಗಳನ್ನಾಗಲಿ ಜಯಿಸುವಂತಹ ಕ್ರಿಸ್ತನ ಬಲ -ಅಧಿಕಾರ ನಿಮಗಿದೆ ಎಂಬುದನ್ನು ನೆನಪಿಡಿ. ಪರಲೋಕದಲ್ಲಿ ಕ್ರಿಸ್ತನೊಂದಿಗೆ ನೀವು ಆಸೀನರಾಗಿದ್ದೀರಿ ಎಂದು ತಿಳಿದು ಜಯದ ಸ್ಥಾನದಲ್ಲಿ ಜೀವಿಸಿರಿ.ಈ ಒಂದು ಸತ್ಯವು ನಿಮ್ಮ ಜೀವಿತಕ್ಕೆ ಭರವಸೆಯನ್ನು ಸಮಾಧಾನವನ್ನು ಉದ್ದೇಶಗಳನ್ನು ತುಂಬಿಸಲು ಅನುಮತಿಸಿರಿ.
ಪ್ರಾರ್ಥನೆಗಳು
ಕರ್ತನಾದ ಯೇಸುವೇ, ನಿನ್ನೊಂದಿಗೆ ಸಿಂಹಾಸನದಲ್ಲಿ ಕೂತುಕೊಳ್ಳುವಂತಹ ಅತ್ಯದ್ಭುತವಾದ ಸೌಭಾಗ್ಯವನ್ನು ನೀನು ಅನುಗ್ರಹಿಸಿದ್ದಕ್ಕಾಗಿ ನಿನಗೆ ಸ್ತೋತ್ರ. ಈ ಒಂದು ಸತ್ಯದ ಬೆಳಕಿನಲ್ಲಿ ಜೀವಿಸುವಂತೆಯೂ ನೀನು ಕೊಟ್ಟ ಜಯ ಹಾಗೂ ಅಧಿಕಾರದಲ್ಲಿ ನಡೆಯುವಂತೆಯೂ ಸಹಾಯ ಮಾಡು. ನನ್ನ ಜೀವಿತದಲ್ಲಿ ನಿನ್ನ ಆಳ್ವಿಕೆ ಉಂಟಾಗಲಿ ಮತ್ತು ನಿನ್ನ ನಾಮಕ್ಕೆ ಮಹಿಮೆಯನ್ನು ತರಲಿ ಎಂದು ಯೇಸು ನಾಮದಲ್ಲಿ ಪ್ರಾರ್ಥಿಸುತ್ತೇನೆ ತಂದೆಯೇ ಆಮೆನ್
Join our WhatsApp Channel
Most Read
● ಲಂಬಕೋನ ಹಾಗೂ ಸಮತಲದ ಕ್ಷಮಾಪಣೆ.● ದೈವೀಕ ಶಿಸ್ತಿನ ಸ್ವರೂಪ-1
● ದೇವರ ಪರಿಪೂರ್ಣ ಚಿತ್ತಕ್ಕಾಗಿ ಪ್ರಾರ್ಥಿಸಿರಿ
● ನಿಮ್ಮ ಗತಿಯನ್ನು ಬದಲಾಯಿಸಿ
● ಚಿಂತೆಯಿಂದ ಹೊರಬರಲು ಈ ಸಂಗತಿಗಳ ಕುರಿತು ಯೋಚಿಸಿ
● ದ್ವಾರ ಪಾಲಕರು / ಕೋವರ ಕಾಯುವವರು
● ನಿಮ್ಮ ಗತಿಯನ್ನು ಹಾಳು ಮಾಡಿಕೊಳ್ಳಬೇಡಿರಿ!
ಅನಿಸಿಕೆಗಳು