"ಧರ್ಮಶಾಸ್ತ್ರವು ಮೋಶೆಯ ಮುಖಾಂತರ ಕೊಡಲ್ಪಟ್ಟಿತು; ಕೃಪೆಯೂ ಸತ್ಯವೂ ಯೇಸು ಕ್ರಿಸ್ತನ ಮುಖಾಂತರ ಬಂದವು.16ನಾವೆಲ್ಲರು ಆತನ ಪರಿಪೂರ್ಣತೆಯೊಳಗಿಂದ ಕೃಪೆಯ ಮೇಲೆ ಕೃಪೆಯನ್ನು ಹೊಂದಿದೆವು.18ದೇವರನ್ನು ಯಾರೂ ಎಂದೂ ಕಂಡಿಲ್ಲ; ಯಾವನು ಏಕಪುತ್ರನೂ ಸ್ವತಃ ದೇವರೂ ಆಗಿದ್ದು ತಂದೆಯ ಎದೆಯಲ್ಲಿದ್ದಾನೋ ಆತನೇ ತಿಳಿಯಪಡಿಸಿದನು."(ಯೋಹಾನ 1:16-18)
ಕ್ರಿಸ್ಟಿ ಯು ತನ್ನ ವಿದ್ಯಾಭ್ಯಾಸಕ್ಕಾಗಿ ಭಾರತವನ್ನು ಬಿಟ್ಟು ಅಮೆರಿಕಾದ ಕಾಲೇಜಿಗೆ ಸೇರಲು ಹೋದಾಗ ತನ್ನ ಕ್ರಿಸ್ತೀಯ ಜೀವಿತದ ಪಾಲನೆಯ ಬಂಧನದಿಂದ ಲೋಕವು ಹೇಳುವಂಥ ಮೌಲ್ಯಗಳ ಸ್ವಾತಂತ್ರ್ಯಕ್ಕೆ ಹಾರಿ ಹೋದರು.
ಅವರು ಗೋವಾದಲ್ಲಿರುವ ಒಂದು ಸಣ್ಣ ಪಟ್ಟಣದೊಳಗೆ ಬೆಳೆಯುವಾಗ ತನ್ನ ತಂದೆ-ತಾಯಿಗಳೊಂದಿಗೆ ಸಭೆಗೆ ತಪ್ಪದೇ ಹೋಗುತ್ತಿದ್ದರು. ಮತ್ತು ಅಲ್ಲಿ ಆರಾಧನೆ ವೃಂದದಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಸಭೆಯ ಆರಾಧನೆಯನ್ನು ಮುನ್ನಡೆಸುತ್ತಿದ್ದರು. ಆದರೆ ಈಗ ಅಮೆರಿಕಾದ ಫ್ಲೋರಿಡಾದಲ್ಲಿ ಕಾಲೇಜಿಗೆ ಹಾಜರಾಗಲು ಎಲ್ಲವನ್ನು ಬಿಟ್ಟು ಬಿಟ್ಟರು. ದೇವರಿಗೆ ಸಂಬಂಧಿಸಿದಂತ ಪ್ರತಿಯೊಂದು ಬಯಕೆಯೂ ಅವರಿಂದ ದೂರ ಉಳಿಯಿತು.
ಅವರು ತಮ್ಮ ಸಾಕ್ಷಿಯನ್ನು ಹೇಳುವಾಗ "ನನ್ನ ಹೃದಯದಲ್ಲಿ ಯಾವಾಗಲೂ ಕರ್ತನ ಬಳಿಗೆ ಹಿಂದಿರುಗು, ಸಭೆಗೆ ಹೋಗು ಮತ್ತೆ ಮೊದಲು ಮಾಡುತ್ತಿದ್ದ ಕಾರ್ಯಗಳನ್ನು ಆರಂಭಿಸು. ಎನ್ನುವ ಒಂದು ರೀತಿಯ ನೂಕುವಿಕೆಯನ್ನು ನಾನು ಯಾವಾಗಲೂ ಅನುಭವಿಸುತ್ತಿದ್ದೆ ಆ ಒಂದು ಪಿಸುಮಾತನ್ನು ಕೇಳುತ್ತಿದ್ದೆ" ಎಂದು ಹೇಳಿದರು. ಅದು ಏನಾಗಿರಬಹುದು? ಅದುವೇ ಕ್ರಿಸ್ಟಿಯ ಕಡೆಗೆ ದೇವರು ಚಾಚಿದ ತನ್ನ ಕೃಪೆಯ ಹಸ್ತವಾಗಿತ್ತು!
ಈ ನೂಕುವಿಕೆಯ ಪಿಸುಮಾತಿಗೆ ವಿದೇಯರಾದಂತಹ ಅವರು ತನ್ನ ಅರ್ಧವಾರ್ಷಿಕ ರಜೆ ಮುಗಿದ ತಕ್ಷಣವೇ ಮೊದಲು ಹೋಗಿ ಒಂದು ಸಭೆಯನ್ನು ಹುಡುಕಬೇಕೆಂದು ತನ್ನ ಮನಸ್ಸಿನಲ್ಲಿ ನಿರ್ಧರಿಸಿಕೊಂಡರು. "ನಾನು ನನ್ನ ಸಹ ಪದವಿ ವಿದ್ಯಾರ್ಥಿಗಳೊಂದಿಗೆ ತಿರುಗಾಡಲು ಹೋದಾಗ ನಾವು ಸಂಭಾಷಿಸುವಾಗ ದೇವರನ್ನು ನಂಬುವುದನ್ನು ಕುರಿತು ದೂಷಣೆ ಮಾಡುವ ಮಾತುಗಳಾಗಿ ಆ ಸಂಭಾಷಣೆಗಳು ಮಾರ್ಪಡುತ್ತಿದ್ದವು. ಇದನ್ನು ನೋಡಿ ನನ್ನ ಹೃದಯವು ಚಿದ್ರ ಚಿದ್ರವಾಗುತ್ತಿತ್ತು ಎಂಬುದನ್ನು ನಾನು ನೆನಪಿಸಿಕೊಳ್ಳುತ್ತೇನೆ" ಎಂದು ಅವರು ಹೇಳಿದರು. ಲೋಕವು ನಾನು ಒಂದು ವಿಶ್ವಾಸಿಯಾಗಿರಬಹುದು ಇಲ್ಲವೇ ವಿಜ್ಞಾನದ ಕ್ಷೇತ್ರದಲ್ಲಿ ಪದವೀಧರನಾಗಬಹುದು. ಈ ಎರಡೂ ಏಕಕಾಲದಲ್ಲಿ ಆಗಲು ಸಾಧ್ಯವಿಲ್ಲ ಎಂದು ನನಗೆ ಮನಗಾಣಿಸಲು ಯತ್ನಿಸುತ್ತಿತ್ತು.
ಆದರೆ, ಆಗ ಕ್ರಿಸ್ಟ್ರಿಯೋ ತನ್ನ ಆಂತರ್ಯದ ಈ ಹೋರಾಟವನ್ನು ಪರಿಹರಿಸಿಕೊಳ್ಳಲು ಈ ವಿಷಯವನ್ನು ನಂಬಿಕೆಯ ಪ್ರೀತಿಯುಳ್ಳ ಕರಗಳಿಗೆ ಒಪ್ಪಿಸಿ ಕೊಡಬೇಕೆಂದು ಅಂದುಕೊಂಡರು. ಇಂದು ಕ್ರಿಷ್ಟಿಯು ಬಾಹ್ಯಾಕಾಶ ಸಂಶೋಧನೆಯ ಒಂದು ಹೆಸರಾಂತ ಏಜೆನ್ಸಿಯಲ್ಲಿ ಕಿರಿಯ ವಿಜ್ಞಾನಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಹಾಗೆಯೇ ಸ್ಥಳೀಯ ಸಭೆಗಳು ಅಭಿವೃದ್ಧಿಪಡಿಸಿದ ವಸ್ತುಗಳನ್ನು ಉಪಯೋಗಿಸಿಕೊಂಡು ಯೌವನಸ್ತರಿಗೂ ಪ್ರೌಢಶಾಲೆಯ ವಿದ್ಯಾರ್ಥಿಗಳಿಗೂ ಸತ್ಯವೇದ ಅಧ್ಯಯನದ ಕಾರ್ಯಾಗಾರ ನಡೆಸುತ್ತಿದ್ದಾರೆ ಮತ್ತು ಯೌವ್ವನಸ್ಥರಿಗೆ ಮಾರ್ಗದರ್ಶನ ನೀಡುವ ಸಂಸ್ಥೆಗೆ ಸ್ವಯಂಸೇವಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಕ್ರಿಸ್ಪಿ ಅವರ ಜೀವಿತವು ನಾವು ದೇವರ ಕೃಪೆಯ ಮೇಲೆ ಆಧಾರಗೊಳ್ಳುವಾಗ ದೇವರು ಯಾವಾಗಲೂ ಕಾರ್ಯ ಮಾಡುವವನಾಗಿದ್ದಾನೆ ಎಂಬುದನ್ನು ಸಾಕ್ಷಿಕರಿಸುತ್ತದೆ. ನಾವು ನಮ್ಮ ಜೀವಿತದ ಕೆಲವು ಸಮಯದಲ್ಲಿ ತಪ್ಪಾದ ತಿರುವುಗಳನ್ನು ತೆಗೆದುಕೊಂಡಿದ್ದರೂ ಆತನು ಕೃಪೆಯ ಮೇಲೆ ಕೃಪೆಯನ್ನು ಅನುಗ್ರಹಿಸಿ ಆತನ ಪ್ರೀತಿಯ ಸತ್ಯತೆಗೆ ನಾವು ತಿರುಗಿಕೊಳ್ಳುವಂತೆ ಮಾಡುತ್ತಾನೆ.
ನೀವು ಏನನ್ನು ಮಾಡಿದ್ದರೂ ಅಥವಾ ಯಾವ ಪರಿಸ್ಥಿತಿಯನ್ನು ಹಾದು ಹೋಗುತ್ತಿದ್ದರೂ ಪರವಾಗಿಲ್ಲ. ದೇವರು ತನ್ನ ಕೃಪೆಯನ್ನು ಹರಿಸುವುದನ್ನು ಮಾತ್ರ ನಿಲ್ಲಿಸುವುದಿಲ್ಲ. ಆತನು ರಕ್ಷಣೆಗಾಗಿ, ಬಿಡುಗಡೆಗಾಗಿ ಅದ್ಭುತಕ್ಕಾಗಿ ಮತ್ತು ಆತ್ಮಿಕ ಆಶೀರ್ವಾದಗಳಿಗಾಗಿ ಕೃಪೆಯನ್ನು ಅನುಗ್ರಹಿಸುತ್ತಲೇ ಇರುತ್ತಾನೆ.ಆದರೆ ಒಂದು ಷರತ್ತು ಎಂದರೆ ನೀವು ಆತನ ಕೃಪೆಯನ್ನು ಹೊಂದಿದ್ದೀರಾ?
ನೀವು ಜೀವನದ ಕಠಿಣ ಪರಿಸ್ಥಿತಿಯಲ್ಲಿ ಹೋರಾಡುತ್ತಿರುವಾಗ ದೇವರು ಸುಮ್ಮನೆ ಪಕ್ಕದಲ್ಲಿ ನಿಂತು ನೋಡುತ್ತಿರುವುದಿಲ್ಲ ಎಂಬುದನ್ನು ತಿಳಿದುಕೊಂಡಿರ್ರಿ. ಅದಕ್ಕೆ ಬದಲಾಗಿ ಆತ ನೂತನ ಕೃಪೆಯನ್ನು ನಿಮಗೆ ಪ್ರಕಟಿಸಿ ನೀವು ಆ ಪರಿಸ್ಥಿತಿಗಳ ಮೇಲೆ ಜಯ ಸಾಧಿಸಲು ಸಹಾಯ ಮಾಡಲು ಇಚ್ಛಿಸುತ್ತಾನೆ ಮತ್ತು ನೀವು ಆ ಅದ್ಭುತವಾದ ನಿಲ್ದಾಣವನ್ನು ತಲುಪುವಂತೆ ಮಾಡುತ್ತಾನೆ. ನೀವು ಇಂದು ಹೊರಗೆ ಹೆಜ್ಜೆ ಇಡುವಾಗ ದೇವರ ಕೃಪೆಯನ್ನು ಮನಪೂರ್ವಕವಾಗಿ ಹುಡುಕಿರಿ. ಎಲ್ಲಾ ಪರಿಸ್ಥಿತಿಗಳಲ್ಲೂ ಎಲ್ಲಾ ಸಮಯಗಳಲ್ಲೂ ಆತನ ಕೃಪೆಯೇ ಬೇಕಾದದ್ದು ಎಂಬುದನ್ನು ತಿಳಿದುಕೊಳ್ಳಿರಿ. ನೀವು ಆತ ಇಚ್ಛಿಸಿದ ಜೀವಿತವನ್ನು ಜೀವಿಸಬೇಕೆಂದು ಯೋಚಿಸುತ್ತಿದ್ದರೆ ನಿಮಗೆ ಆತನ ಕೃಪೆಯ ಮೇಲೆ ಕೃಪೆ ಬೇಕು!
ಪ್ರಾರ್ಥನೆಗಳು
ಕರ್ತನೇ, ನಾನು ಸಂಪೂರ್ಣವಾಗಿ ನಿನ್ನ ಕೃಪೆಯ ಮೇಲೆ ಆಧಾರಗೊಳ್ಳಲು ಸಹಾಯ ಮಾಡು. ಓ ಕರ್ತನೆ ನಿನ್ನ ಕೃಪೆಯೇ ನನ್ನ ಜೀವಿತಕ್ಕೆ ಸಾಕಾದದ್ದು ಎಂದು ಯೇಸು ನಾಮದಲ್ಲಿ ಪ್ರಾರ್ಥಿಸುತ್ತೇನೆ ತಂದೆಯೇ, ಆಮೆನ್.
Join our WhatsApp Channel
Most Read
● ನಿಮ್ಮ ಆತ್ಮಿಕ ಶಕ್ತಿಯನ್ನು ನವೀಕರಿಸಿಕೊಳ್ಳುವುದು ಹೇಗೆ -3● ಕೃತಜ್ಞತೆಯ ಪಾಠ
● ಅಪನಂಬಿಕೆ
● ಸಭೆಯಲ್ಲಿ ಐಕ್ಯತೆಯನ್ನು ಕಾಪಾಡಿಕೊಳ್ಳುವುದು
● ಬೀಜದಲ್ಲಿರುವ ಶಕ್ತಿ -2
● ಹೆಚ್ಚು ಹೆಚ್ಚಾಗಿ ಬೆಳೆಯುವ ನಂಬಿಕೆ
● ಮೊಗ್ಗು ಬಿಟ್ಟಂತಹ ಕೋಲು
ಅನಿಸಿಕೆಗಳು
