"ನೀವು ಕೃಪೆಯಲ್ಲಿಯೂ ನಮ್ಮ ಕರ್ತನೂ ರಕ್ಷಕನೂ ಆಗಿರುವ ಯೇಸು ಕ್ರಿಸ್ತನ ವಿಷಯವಾದ ಜ್ಞಾನದಲ್ಲಿಯೂ ಅಭಿವೃದ್ಧಿಯನ್ನು ಹೊಂದುತ್ತಾ ಇರ್ರಿ. ಆತನಿಗೆ ಈಗಲೂ ಸದಾಕಾಲವೂ ಸ್ತೋತ್ರ. ಆಮೆನ್. "(2 ಪೇತ್ರನು 3:18)
ಇಂದು ಕೃಪೆಯ ಕುರಿತು ತಪ್ಪಾದ ತಿಳುವಳಿಕೆಗಳಿವೆ. ಕೆಲವರು ಕೃಪೆ ಎಂದರೆ ತಾವು ಮಾಡುತ್ತಿರುವ ಪಾಪಗಳಿಗೆ ಕ್ಷಮೆ ಎಂಬ ಸೌಲಭ್ಯವೇ ಕೃಪೆ ಎಂದು ಭಾವಿಸಿ ತಮಗೆ ಕೃಪೆ ದೊರಿತಿದೆ ಎಂದು ಇನ್ನೂ ಆ ಅಜಾಗರೂಕ ಜೀವನ ಶೈಲಿಯನ್ನೇ ಮುಂದುವರಿಸುತ್ತಿರುತ್ತಾರೆ.ಕೃಪೆಯು ಪಾಪಗಳನ್ನು ಸಮರ್ಥಿಸಿಕೊಳ್ಳಲಿರುವ ಪಾಪಮನ್ನ ಸೌಲಭ್ಯ ವಲ್ಲಾ. ರೋಮ 6:1ರಲ್ಲಿ ಸತ್ಯವೇದ ಹೇಳುತ್ತದೆ .... "ಹಾಗಾದರೆ ಏನು ಹೇಳೋಣ? ದೇವರ ಕೃಪೆಯು ಹೆಚ್ಚಲಿ ಎಂದು ನಾವು ಪಾಪದಲ್ಲಿ ಇನ್ನೂ ಇರಬೇಕೋ?... " ಎಂದು
ಪ್ರತಿಯೊಬ್ಬ ಮನುಷ್ಯನು ರಕ್ಷಣೆಗೆ ಬಂದು ನೀತಿಯ ಜೀವಿತ ಜೀವಿಸಲಿ ಎಂಬುದು ದೇವರು ಕೃಪೆ ಎಂಬ ಸೌಲಭ್ಯವನ್ನು ಇಟ್ಟಿರುವ ಉದ್ದೇಶವಾಗಿದೆ. ಪಾಪದಲ್ಲಿ ಮುಂದುವರೆಯುವ ಮೂಲಕ ಮತ್ತು ಪರಿಶುದ್ಧರಾಗಿ ಜೀವಿಸುವುದಕ್ಕಾಗಿ ಆತನು ಕೊಟ್ಟಿರುವ ಕರೆಯನ್ನು ನಿರ್ಲಕ್ಷಿಸುವ ಮೂಲಕ ನಾವು ಆತನ ಕೃಪೆಯನ್ನು ವಿಫಲಗೊಳಿಸುವುದನ್ನು ಆತನು ಎಷ್ಟು ಮಾತ್ರಕ್ಕೂ ಅನುಮತಿಸುವುದಿಲ್ಲ. ಪ್ರಿಯರಾದವರೇ, ಆತನ ಕೃಪೆಯ ಮೂಲಕ ನಂಬಿಕೆಯ ಕುಟುಂಬದೊಳಗೆ ನೀವು ಕರೆಯಲ್ಪಟ್ಟಿದ್ದೀರಿ ಮತ್ತು ನೀವು ಅದರಲ್ಲಿ ಬೆಳೆಯುವಿರಿ ಎಂಬ ನಿರೀಕ್ಷೆ ಕೂಡ ಇದೆ. ದೇವರಿಂದ ಬರುವ ಪ್ರತಿಯೊಂದು ಪ್ರಕಟಣೆಯನ್ನು ತಪ್ಪಾಗಿ ಅರ್ಥೈಸಿಕೊಳ್ಳುವಂತೆಯೇ ದೇವರ ಅದ್ಭುತ ಕೃಪೆಯನ್ನು ತಪ್ಪಾಗಿ ಅರ್ಥೈಸಿಕೊಳ್ಳುವ ಹಾಗೂ ಅದನ್ನು ದುರುಪಯೋಗಪಡಿಸಿಕೊಳ್ಳುವಂತಹ ಅಲ್ಪ ಜನರು ಯಾವಾಗಲೂ ಇರುತ್ತಾರೆ.
ಕೃಪೆಯಲ್ಲಿ ಬೆಳೆಯುವುದೆಂದರೆ ನೀವು ಆತ್ಮಿಕವಾಗಿ ಬೆಳೆಯುವ ಎಲ್ಲಾ ಜವಾಬ್ದಾರಿಗಳನ್ನು ದೇವರಿಗೆ ಬಿಟ್ಟುಬಿಡುವುದಲ್ಲ. ಇಂದು ಅನೇಕರು ಕೃಪೆಯು ಮನುಷ್ಯನನ್ನು ಸೋಮಾರಿಯಾಗುವಂತೆ ಮಾಡುತ್ತದೆ ಎಂದು ಭಾವಿಸಬಹುದು. ಖಂಡಿತವಾಗಿಯೂ ಇಲ್ಲ! ಕೃಪೆಯಲ್ಲಿ ಬೆಳೆಯುವುದು ಎಂದರೆ ದೇವರ ಜ್ಞಾನದಲ್ಲಿಯೂ ಆತನ ವಾಕ್ಯದಲ್ಲಿಯೂ ಬೆಳೆಯುವುದು ಎಂದರ್ಥ. ಕೃಪೆಯಲ್ಲಿ ಬೆಳೆಯುವುದೆಂದರೆ ಆತನ ನೀತಿಯಲ್ಲಿಯೂ ಪರಿಶುದ್ಧತೆಯಲ್ಲಿಯೂ, ಶುದ್ಧತೆಯಲ್ಲಿಯೂ ಬೆಳೆಯುವುದು ಎಂದರ್ಥ. ಪ್ರತಿಯೊಬ್ಬ ಮನುಷ್ಯನು ಕೃಪೆಯಲ್ಲಿ ಬೆಳೆದು ಆತನಂತೆ ಪರಿಶುದ್ಧನಾಗಬೇಕೆಂದು ಹಾಗೆಯೇ ಪ್ರಬುದ್ಧ ಕ್ರೈಸ್ತರಾಗಿ ಪವಿತ್ರೀಕರಿಸಲ್ಪಟ್ಟು ಪ್ರೀತಿಯಲ್ಲಿಯೂ ಸತ್ಯದಲ್ಲಿಯೂ ಆತನಿಗಾಗಿ ಪ್ರತ್ಯೇಕಿಸಲ್ಪಟ್ಟು ಜೀವಿಸಬೇಕೆಂದೂ, ಪ್ರಾರ್ಥನೆ ಹಾಗೂ ಆತನ ವಾಕ್ಯಗಳ ಸೇವೆಯನ್ನು ಮಾಡಬೇಕೆಂದೂ ದೇವರು ಬಯಸುತ್ತಾನೆ. (ಅ. ಕೃ.6:4)
ಕೃಪೆಯಲ್ಲಿ ಬೆಳೆಯುವುದೆಂದರೆ ದೇವರು ಕೊಡುವ ಕೃಪೆಯನ್ನು ಇನ್ನಷ್ಟು ಹೆಚ್ಚಿಸಿಕೊಳ್ಳುವುದಲ್ಲ. ಬದಲಾಗಿ ಕ್ರಿಸ್ತನು ನಮಗಾಗಿ ಮಾಡಿದ ಕಾರ್ಯದ ಆಳತ್ವವನ್ನು ಅರಿತುಕೊಂಡು ದೇವರ ವಾಕ್ಯವನ್ನು ಅರಿತುಕೊಂಡು ಅದನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡು ಆ ಸತ್ಯದಲ್ಲಿ ಜೀವಿಸುವಂತದ್ದಾಗಿದೆ. ದೇವರ ಮಗುವಾಗಿ ನೀವು ಸ್ವೀಕರಿಸಿದ ಈ ಕೃಪೆಯನ್ನು ನೀವು ಅರ್ಥ ಮಾಡಿಕೊಳ್ಳಬೇಕೆಂದು ದೇವರು ನಿರೀಕ್ಷಿಸುತ್ತಾನೆ. ಕೃಪೆ ಎಂಬುದು ದೇವರ ಸರ್ವ ಸಂಪೂರ್ಣತೆಯನ್ನು ಪ್ರವೇಶಿಸುವ ಹಾಗೂ ವಿಶ್ವಾಸಿಯಾಗಿ ಬದುಕಲು ಇರುವ ಒಂದು ಗಂಭೀರವಾದ ವರವಾಗಿದೆ. ಕೃಪೆಯು ಒಬ್ಬ ಕ್ರೈಸ್ತನನ್ನು ಸ್ವಂತ ಪ್ರಯತ್ನವಿಲ್ಲದೆ ಬೆಳೆಯಲು ಸಶಕ್ತಗೊಳಿಸುತ್ತದೆ.
ನಾವು ದೇವರೊಂದಿಗಿನ ನಮ್ಮ ನಡೆಯಲ್ಲಿ ಮೈಲಿಗಲ್ಲುಗಳನ್ನು ನಾವು ಗುರುತಿಸಿಕೊಳ್ಳುವಾಗ ಮತ್ತು ಪವಿತ್ರಾತ್ಮನೊಂದಿಗೆ ಹೆಚ್ಚು ಹೆಚ್ಚಾಗಿ ಅನ್ಯೋನ್ಯತೆಯಲ್ಲಿ ನಡೆಯುವಾಗ ನಾವು ಹೆಚ್ಚು ಹೆಚ್ಚಾಗಿ ಯೇಸುವಿನಂತಾಗಲೂ, ಆತನ ಸಾರೂಪ್ಯಾಕ್ಕೆ ರೂಪಾಂತರವಾಗಲೂ, ನಮ್ಮ ಶಾರೀರಿಕ ಸ್ವಭಾವ ನಾಶವಾಗಲು ನಾವು ಕೃಪೆಯಲ್ಲಿ ಬೆಳೆಯುತ್ತಾ ಹೋಗುತ್ತೇವೆ.
ಈ ಕೃಪೆಗೆ ವಿಧೇಯರಾಗಲು ಹೆಣಕಾಡುತ್ತಿದ್ದೀರಿ ಎಂದು ಭಾವಿಸುತಿದ್ದೀರಾ? ನಿಮ್ಮಲ್ಲಿರುವ ರಹಸ್ಯ ಪಾಪಗಳೊಂದಿಗೆ ಹೋರಾಡುತ್ತಿದ್ದೀರಾ? ದೇವರ ಪ್ರಾರ್ಥನೆಗಾಗಿಯೂ ವಾಕ್ಯ ಧ್ಯಾನಕ್ಕಾಗಿಯೂ ಹಸಿವು ಮತ್ತು ಬಯಕೆಯ ಕೊರತೆಯು ನಿಮ್ಮನ್ನು ಕಾಡುತ್ತಿದ್ದೀಯಾ?
ನಿಮಗಾಗಿ ದೇವರ ಕೃಪೆಯ ಸೌಲಭ್ಯ ಎಂಬುದಿದೆ ಎಂಬುದನ್ನು ನೀವು ಒಪ್ಪಿಕೊಳ್ಳಬೇಕಾಗಿದೆ ಅಷ್ಟೇ. ಸತ್ಯವೇನೆಂದರೆ ನೀವು ಕೃಪೆಯನ್ನು ಹೆಚ್ಚಿಸಿಕೊಳ್ಳದೆ ರಕ್ಷಣೆಯ ಜೀವಿತದಲ್ಲಿ ನಡೆಯಲಾರಿರೀ. ಒಂದು ಶುಭ ಸುದ್ದಿ! ಏನೆಂದರೆ ದೇವರು ತನ್ನ ಅಪ್ರಮೇಯವಾದ ಜ್ಞಾನದಲ್ಲಿ ತನ್ನ ಕೃಪೆಯಲ್ಲಿ ಪಾಲುಹೊಂದಬೇಕು ಎನ್ನುವ ಎಲ್ಲ ಮನುಷ್ಯರಿಗಾಗಿಯೂ ಕೃಪೆಯನ್ನು ದೊರಕುವಂತೆ ಇಟ್ಟಿದ್ದಾನೆ. ನಮ್ಮ ನೀತಿವಂತಿಕೆಯ ನಡೆಯು ನಮ್ಮ ಬಲದಲ್ಲಿ ನಡೆಯದೆ ಆತನ ಕೃಪೆಯಲ್ಲಿ ನಡೆಯುವಂತದ್ದಾಗಿದೆ.ನೀವು ಇದನ್ನು ಅರ್ಥ ಮಾಡಿಕೊಳ್ಳುವುದರಿಂದ ನೀವು ನಿಮ್ಮ ಅಗತ್ಯತೆಗಳಿಗಾಗಿ ಬೆಳವಣಿಗೆಗಾಗಿ ಆತನ ಮೇಲೆ ಆಧಾರ ಕೊಳ್ಳುವಂತೆ ಕೃಪೆಯು ಮಾಡುತ್ತದೆ.
ದೇವರ ಕೃಪೆಯಲ್ಲಿ ಬೆಳೆಯುವಂತದ್ದೇ ಆತನೊಂದಿಗೆ ದೃಢವಾದ ಸಂಬಂಧ ಹೊಂದಲಿರುವಂತ ಏಕೈಕ ಮಾರ್ಗವಾಗಿದೆ. ದೇವರ ವಾಕ್ಯ ಹಾಗೂ ಪ್ರಾರ್ಥನೆಯ ಪ್ರೇಮಿಗಳಾಗಲು ಪ್ರಜ್ಞಾಪೂರ್ವಕವಾದ ನಿರ್ಧಾರವನ್ನು ಮಾಡುವ ಮೂಲಕ ಇಂದೇ ಕೃಪೆಯಲ್ಲಿ ಬೆಳೆಯುವಂತದ್ದನ್ನು ಆಯ್ಕೆ ಮಾಡಿಕೊಳ್ಳಿ. ಆಗ ಇನ್ನು ಹೆಚ್ಚಾಗಿ ನಿಮ್ಮ ಕೈಗೆಟ್ಟುವಂತೆ ಕರ್ತನ ಕೃಪೆಯು ನಿಮಗೆ ದೊರಕುತ್ತದೆ. ಶಾಲೋಮ್!
ಪ್ರಾರ್ಥನೆಗಳು
ತಂದೆಯೇ, ನಿನ್ನ ಕೃಪೆಗಾಗಿ ಸ್ತೋತ್ರ. ಕೃಪೆಯನ್ನು ಹೊಂದುವ ವ್ಯಕ್ತಿಯನ್ನಾಗಿ ಮಾಡಿರುವುದಕ್ಕಾಗಿ ನಿನಗೆ ಕೃತಜ್ಞತೆ ಸಲ್ಲಿಸುತ್ತೇನೆ. ನನ್ನಲ್ಲಿ ಯಾವುದೇ ಬಲವಿಲ್ಲ ಎಂಬುದನ್ನು ನಾನು ಒಪ್ಪಿಕೊಳ್ಳುತ್ತೇನೆ. ಅದಕ್ಕಾಗಿ ನನಗಾಗಿ ಬರುವ ನಿನ್ನ ಕೃಪೆಯನ್ನು ಯೇಸು ನಾಮದಲ್ಲಿ ಬೇಡಿಕೊಳ್ಳುತ್ತೇನೆ ಕರ್ತನೇ. ಆಮೆನ್.
Join our WhatsApp Channel
Most Read
● ಆತ್ಮೀಕ ನಿಯಮ : ಸಹವಾಸ ನಿಯಮ● ಹಣಕಾಸಿನ ಅದ್ಭುತ ಬಿಡುಗಡೆ.
● ಅನ್ಯ ಭಾಷೆಯಲ್ಲಿ ಪ್ರಾರ್ಥಿಸುವಂಥದ್ದು ಆಂತರಿಕ ಸ್ವಸ್ಥತೆಯನ್ನು ತರುತ್ತದೆ.
● ದೇವರಿಗೆ ಮೊದಲಸ್ಥಾನ ನೀಡುವುದು #3
● ಅಶ್ಲೀಲತೆಯಿಂದ ಬಿಡುಗಡೆ ಕಡೆಗಿನ ಪಯಣ
● ಪರಿಸ್ಥಿತಿಯ ದಯೆಯಲ್ಲಿ ಇರಬೇಡಿರಿ
● ದಿನ 01:40 ದಿನಗಳ ಉಪವಾಸ ಹಾಗೂ ಪ್ರಾರ್ಥನೆ
ಅನಿಸಿಕೆಗಳು