ಅನುದಿನದ ಮನ್ನಾ
ದೇವರು ನನಗಿಂದು ಒದಗಿಸುತ್ತಾನೋ?
Saturday, 15th of June 2024
2
2
229
Categories :
ನಿಬಂಧನೆ (Provision)
ಇಸ್ರಾಯೇಲ್ ಜನರು ವ್ಯಂಗ್ಯವಾಗಿ "ದೇವರು ಈ ಅರಣ್ಯದಲ್ಲಿ ನಮಗೆ ಊಟ ಬಡಿಸಬಲ್ಲನೋ?" ಎಂದು ಸಂಶಯಾತ್ಮಕವಾಗಿ ದೇವರನ್ನು ಪ್ರಶ್ನಿಸಿದರು. ಈ ಪ್ರಶ್ನೆಗೆ ಕರಾರುವಕ್ಕಾದ ಉತ್ತರವೇನೆಂದರೆ "ಹೌದು". ಸತ್ಯವೇನೆಂದರೆ ಅವರ ಗುಡಾರಗಳ ಬಳಿಯಲ್ಲಿಯೇ ಪ್ರತಿದಿನ ಬೆಳಗ್ಗೆ ವಾರದಲ್ಲಿ 6 ದಿನಗಳೂ ಆಕಾಶದಿಂದ ಮನ್ನಾ ಸುರಿಯುತ್ತಿತ್ತು .
"ಇಸ್ರಾಯೇಲ್ಯರು ಆ ಆಹಾರಕ್ಕೆ ಮನ್ನ ಎಂದು ಹೆಸರಿಟ್ಟರು. ಅದು ಬಿಳೀ ಕೊತ್ತುಂಬರಿ ಕಾಳಿನಂತಿದ್ದು ರುಚಿಯಲ್ಲಿ ಜೇನುತುಪ್ಪ ಕಲಸಿದ ದೋಸೆಗಳ ಹಾಗಿತ್ತು."(ವಿಮೋಚನಕಾಂಡ 16:31)
ಮತ್ತೊಮ್ಮೆ, ಇಸ್ರಾಯೇಲ್ ಜನರು ಮನ್ನಕ್ಕೆ ಬದಲು ಮಾಂಸವನ್ನು ತಿನ್ನಬೇಕೆಂದು ಬಯಸಿದರು. ಆಗ "ಯೆಹೋವನು ಅವನಿಗೆ - ಯೆಹೋವನ ಕೈ ಮೋಟುಗೈಯೋ; ನನ್ನ ಮಾತು ನೆರವೇರುತ್ತದೋ ಇಲ್ಲವೋ ಈಗ ನೀನು ನೋಡುವಿ ಎಂದು ಹೇಳಿದನು."(ಅರಣ್ಯಕಾಂಡ 11:23)
"ಆಗ ಯೆಹೋವನ ಬಳಿಯಿಂದ ಗಾಳಿಹೊರಟು ಸಮುದ್ರದಿಂದ ಲಾವಕ್ಕಿಗಳನ್ನು ಹೊಡೆದುಕೊಂಡು ಪಾಳೆಯದ ಸುತ್ತಲೂ ಒಂದು ದಿನದ ಪ್ರಯಾಣದಷ್ಟು ದೂರದವರೆಗೆ ಭೂವಿುಗಿಂತ ಎರಡು ಮೊಳ ಎತ್ತರದಲ್ಲಿ ಹಾರುತ್ತಾ ಬರುವಂತೆ ಮಾಡಿತು. [32] ಇಸ್ರಾಯೇಲ್ಯರು ಎದ್ದು ಆ ದಿನ ಹಗಲಿರುಳೂ ಮರುದಿನ ಹಗಲೂ ಆ ಲಾವಕ್ಕಿಗಳನ್ನು ಕೂಡಿಸಿಕೊಳ್ಳುತ್ತಿದ್ದರು; ಸ್ವಲ್ಪವಾಗಿ ಕೂಡಿಸಿಕೊಂಡವರು ಹದಿನೆಂಟು ಖಂಡುಗ ಕೂಡಿಸಿದರು. ಅವುಗಳನ್ನು ಪಾಳೆಯದ ಸುತ್ತಲೂ ಹರವಿ ಒಣಗಿಸಿಕೊಂಡರು." (ಅರಣ್ಯಕಾಂಡ 11:31-32)
ಆ ಜನರ ಮಧ್ಯೆ ಆದ ಅದ್ಭುತಗಳು ಅಷ್ಟಕ್ಕೆ ಮುಗಿದಿರಲಿಲ್ಲ. ಇಸ್ರಾಯೇಲ್ ಜನರು ಧರಿಸಿದ್ದ ಬಟ್ಟೆಗಳು ಮತ್ತು ಕೆರಗಳು 40 ವರ್ಷಗಳಾದರೂ ಸವೆದು ಹೋಗಿರಲಿಲ್ಲ. ಅವರ ಕಾಲುಗಳು ಬಾತುಕೊಳ್ಳಲಿಲ್ಲ (ನೆಹಮಿಯ 9:21). ಈ ಎಲ್ಲಾ ಕಾರ್ಯಗಳು ದೇವರು ಅಲೌಖಿಕವಾಗಿ ಅಗತ್ಯವನ್ನು ಪೂರೈಸಿದ ಕಾರ್ಯಗಳಾಗಿವೆ.
ಈ ಮೇಲಿನ ವಾಕ್ಯಗಳನ್ನೆಲ್ಲವನ್ನೂ ಓದಿದ ನಂತರ ಕೆಲವು ಕ್ರೈಸ್ತರು ಅಂದುಕೊಳ್ಳುವುದೇನೆಂದರೆ "ಒಹ್ ನಿಜವಾಗಿಯೂ ನಾನಿದನ್ನು ನಂಬುತ್ತೇನೆ. ಹಿಂದೆ ಹಾಗೆ ನಡೆಯುತ್ತಿತ್ತು" ಎಂದು. ನೀವು ಅಂಥವರೊಳಗೆ ಒಬ್ಬರಾಗಿರಬೇಡಿರಿ. ನೀವು ನಿಮ್ಮ ಆಶೀರ್ವಾದದ ಅದ್ಭುತಗಳನ್ನು ಹೊಂದಿಕೊಳ್ಳುವ ಸಮಯದಲ್ಲಿ ನಿಮ್ಮ ಈ ಅಪನಂಬಿಕೆ ನಿಮ್ಮ ನಂಬಿಕೆಯನ್ನು ಅಲುಗಾಡಿಸಲು ಅನುಮತಿಸಬೇಡಿರಿ. ನಾನು ನಿಮಗೆ ಈಗ ಹೇಳುವ ವಿಷಯಕ್ಕೆ ದಯವಿಟ್ಟು ಸ್ವಲ್ಪ ಗಮನ ಕೊಡಿ " ನಿಮ್ಮ ಅಗತ್ಯಗಳನ್ನು ಅದ್ಭುತವಾಗಿ ಪೂರೈಸುವ ದೇವರ ಸಾಮರ್ಥ್ಯವು ನಿಮ್ಮೊಳಗೆ ಒಂದು ಪ್ರಕಟಣೆ ಮೂಲಕ ಹುಟ್ಟಬೇಕು. ಇದು ಪವಿತ್ರಾತ್ಮನ ಅಭಿಷೇಕದ ಮೂಲಕ ಬರಬೇಕು"
ನೀವೀಗ ಏನು ಮಾಡಬೇಕೆಂದು ನಾನು ಬಯಸುತ್ತೇನೆ ಎಂಬುದು ಇಲ್ಲಿದೆ. ಮುಂದಿನ ಏಳು ದಿನಗಳವರೆಗೂ ನೀವು ಅದ್ಭುತವಾಗಿ ಅಗತ್ಯಗಳು ಒದಗಿ ಬಂದಂತಹ ದೇವರ ವಾಕ್ಯಗಳನ್ನು ಓದಿರಿ. ಆ ವಾಕ್ಯಗಳನ್ನು ಓದಿದ ನಂತರ ಕರ್ತನನ್ನು ನಿಮಗೂ ಹಾಗೆ ಅದ್ಭುತವಾಗಿ ಒದಗಿಸುವಂತೆ ಬೇಡಿಕೊಳ್ಳಿರಿ. ನಾನು ಹೇಳುವ ಈ ಮಾತನ್ನು ಬರೆದಿಟ್ಟುಕೊಳ್ಳಿ! ಖಂಡಿತವಾಗಿಯೂ ಅದೇ ರೀತಿ ಸಂಗತಿಗಳು ನಿಮ್ಮ ಜೀವಿತದಲ್ಲಿ ಜರುಗಲಾರಂಬಿಸುತ್ತವೆ. ಇದು ನಿಮ್ಮ ಜೀವಿತದಲ್ಲಿ ಕಾರ್ಯ ಮಾಡುವಾಗ ಜೀವನದುದ್ದಕ್ಕೂ ನೀವು ಇದನ್ನು ಅಭ್ಯಾಸ ಮಾಡಿರಿ ಮತ್ತು ಹಾಗೆಯೇ ಮಾಡಲು ಇತರರಿಗೂ ಹೇಳಿಕೊಡಿ.
ನಾವೀಗ ಅಂತ್ಯಕಾಲದ ದಿನಮಾನಗಳಲ್ಲಿ ಜೀವಿಸುತ್ತಿದ್ದೇವೆ ಎಂದು ನಾನು ನಂಬುತ್ತೇನೆ. ಸಂಕಟಕಾಲದ ಮುಂಚಿನ "ಪ್ರಸವ ವೇದನೆ" ಎಂದು ಸತ್ಯವೇದ ಇದನ್ನು ಮುನ್ಸೂಚಿಸಿದೆ. (ಮತ್ತಾಯ 24:8) ಆದರೂ ಅದು ಒಳ್ಳೆಯ ಸಮಯವಾಗಲಿ, ಸಂಕಟದ ಸಮಯದಲ್ಲಾಗಲಿ ಅದ್ಬುತವಾಗಿ ನಿಮ್ಮ ಅಗತ್ಯಗಳನ್ನು ಒದಗಿಸಲು ಆತನು ಸಮರ್ಥನಾಗಿದ್ದಾನೆ ಎಂದು ದೇವರ ವಾಕ್ಯ ಮತ್ತು ಚರಿತ್ರೆ ಎರಡು ಕೂಡ ಪ್ರಕಟಿಸುತ್ತದೆ.
ಪ್ರಾರ್ಥನೆಗಳು
ತಂದೆಯೇ ಅದ್ಭುತವಾದ ಅಗತ್ಯಗಳ ಪೂರೈಕೆಯನ್ನು ನಿನ್ನ ವಾಕ್ಯದ ಮೇಲೆ ನಾನು ಹೊಂದುಕೊಳ್ಳುತ್ತೇನೆ. ನೀನೆಂದೂ ಬದಲಾಗದ ದೇವರಾಗಿದ್ದೀಯ. ನೀನು ನೆನ್ನೆ ಇದ್ದ ಹಾಗೆಯೇ ಇಂದು ಮತ್ತು ಎಂದೆಂದೂ ಇರುವಾತನಾಗಿದ್ದೀಯ. ನೀನೇ ನನಗೆ ಒದಗಿಸುವಾತನು. ಯೇಸು ನಾಮದಲ್ಲಿ ಪ್ರಾರ್ಥಿಸುತ್ತೇನೆ ತಂದೆಯೇ, ಆಮೆನ್.
Join our WhatsApp Channel
Most Read
● ಆತ್ಮೀಕ ನಿಯಮ : ಸಹವಾಸ ನಿಯಮ● ಯಹೂದವು ಮುಂದಾಗಿ ಹೊರಡಲಿ
● ಕ್ರಿಸ್ತನ ಮೂಲಕ ಜಯಶಾಲಿಗಳು
● ನಿರ್ಣಾಯಕ ಅಂಶವಾಗಿರುವ ವಾತಾವರಣದ ಒಳನೋಟಗಳು -4
● ಪ್ರೀತಿಯ ಭಾಷೆ
● ಹಣಕಾಸಿನ ಅವ್ಯವಸ್ಥೆಯಿಂದ ಪಾರಾಗುವುದು ಹೇಗೆ?
● ಇನ್ನು ಸಾವಕಾಶವಿಲ್ಲ.
ಅನಿಸಿಕೆಗಳು