ಅನುದಿನದ ಮನ್ನಾ
ದ್ವಾರ ಪಾಲಕರು / ಕೋವರ ಕಾಯುವವರು
Monday, 1st of July 2024
2
1
267
Categories :
ದ್ವಾರಪಾಲಕ (Gatekeepers)
ದ್ವಾರಗಳ ಕುರಿತು ಸತ್ಯವೇದವು ಬಹಳವಾಗಿ ಹೇಳಿದೆ. ಈ ಪ್ರಾಕೃತ ಲೋಕದಲ್ಲಿಯೂ ದ್ವಾರಪಾಲಕರು ಇರುವ ಹಾಗೆಯೇ ಆತ್ಮಿಕ ಆಯಾಮದಲ್ಲಿ ನಮ್ಮನ್ನು ದ್ವಾರಪಾಲಕರು ಅಥವಾ ಕೋವರ ಕಾಯುವವರು ಎಂದು ದೇವರು ಕರೆದಿದ್ದಾನೆ.
ಲೋಕದಲ್ಲಿನ ದ್ವಾರಪಾಲಕರ ಕುರಿತು ನಿಮಗೆ ಒಂದು ಉದಾಹರಣೆಯನ್ನು ಕೊಡಲು ನನಗೆ ಅನುಮತಿಸಿ. ನೀವು ವಿಮಾನದಲ್ಲಿ ಪ್ರಯಾಣ ಮಾಡಬೇಕೆಂದಿದ್ದರೆ ನೀವು ಸುಮ್ಮನೇ ಹೋಗಿ ವಿಮಾನದಲ್ಲಿ ಕೂರಲು ಆಗುವುದಿಲ್ಲ. ಅಲ್ಲಿ ಅನೇಕ ದ್ವಾರಗಳು ಇರುತ್ತವೆ. ಆ ವಿವಿಧ ದ್ವಾರಗಳಲ್ಲಿಯೂ ನಿಮ್ಮ ದಾಖಲೆಗಳನ್ನು ಪರಿಶೀಲನೆಗೆ ಒಳಪಡಿಸಲಾಗುತ್ತದೆ. ಆಗ ಮಾತ್ರವೇ ನೀವು ವಿಮಾನ ಪ್ರವೇಶಿಸಲು ಸಾಧ್ಯ.
ದ್ವಾರಪಾಲಕರು ಪ್ರತಿಯೊಂದು ಹಂತದಲ್ಲಿಯೂ ಬರುವ ಜನರನ್ನು ಶೋಧಿಸುತ್ತಾರೆ. ಆಗ ಜನರು ಸುರಕ್ಷಿತವಾಗಿ ವಿಮಾನದಲ್ಲಿ ಹಾರಾಡಬಹುದು. ಈ ದ್ವಾರಪಾಲಕರು ರಕ್ಷಣೆಯ ಗೋಡೆಗಳಾಗಿ ಕಾರ್ಯ ನಿರ್ವಹಿಸುವವರಾಗಿದ್ದಾರೆ.
"ದ್ವಾರಪಾಲಕರಲ್ಲಿ ಶಲ್ಲೂಮ್, ಅಕ್ಕೂಬ್, ಟಲ್ಮೋನ್, ಅಹೀಮಾನ್ ಇವರೂ ಇವರ ಸಹೋದರರೂ. ಇವರಲ್ಲಿ ಶಲ್ಲೂಮನು ಪ್ರಮುಖನಾಗಿದ್ದನು."(1 ಪೂರ್ವಕಾಲವೃತ್ತಾಂತ 9:17)
ನೋಡಿರಿ ಸತ್ಯವೇದವು ದ್ವಾರಪಾಲಕರ ಅಸ್ತಿತ್ವವು ಎಷ್ಟು ಮುಖ್ಯವಾದದ್ದು ಒಪ್ಪಿಕೊಂಡು ಅವರ ಒಬ್ಬೊಬ್ಬರ ಹೆಸರುಗಳನ್ನು ಒಂದೊಂದಾಗಿ ನಮೂದಿಸಿದೆ. ಇದರಿಂದ ದ್ವಾರಗಳನ್ನು ಅಥವಾ ಕೋವರಗಳನ್ನು ಕಾಯುವಂತದ್ದು ಎಷ್ಟು ಮಹತ್ವವಾದ ಕಾರ್ಯ ಎಂಬುದನ್ನು ಕರ್ತನು ಪರಿಗಣಿಸಿದ್ದಾನೆ ಎಂಬುದನ್ನು ನೀವು ಅರಿತುಕೊಳ್ಳಬೇಕು.
ಅರಸನಾದ ದಾವೀದನು ದ್ವಾರವನ್ನು ಕಾಯುವ ಕಾರ್ಯದ ಮಹತ್ವವನ್ನು ಅರಿತುಕೊಂಡಿದ್ದನು. ಅದಕ್ಕಾಗಿಯೇ
"ನಿನ್ನ ಆಲಯದ ಅಂಗಳಗಳಲ್ಲಿ ಕಳೆದ ಒಂದು ದಿನವು ಬೇರೆ ಸಹಸ್ರದಿನಗಳಿಗಿಂತ ಉತ್ತಮವಾಗಿದೆ. ದುಷ್ಟರ ಗುಡಾರಗಳಲ್ಲಿ ವಾಸಿಸುವದಕ್ಕಿಂತ ನನ್ನ ದೇವರ ಆಲಯದ ಬಾಗಿಲನ್ನು ಕಾಯ್ದುಕೊಂಡಿರುವದೇ ಲೇಸು." ಎಂದು ಹೇಳಿದ್ದಾನೆ.(ಕೀರ್ತನೆಗಳು 84:10)
ನಮ್ಮ ಜೀವಿತದೊಳಗೆ ಪ್ರವೇಶವನ್ನು ಅನಮತಿಸುವಂತಹ ಮೂರು ಮುಖ್ಯ ದ್ವಾರಗಳು ನಮಗಿವೆ. ನಾವು ಕಣ್ಣುಗಳೆಂಬ ದ್ವಾರವನ್ನು, ಕಿವಿಗಳೆಂಬ ದ್ವಾರವನ್ನು ಮತ್ತು ಬಾಯಿ ಎಂಬ ದ್ವಾರವನ್ನು ಹೊಂದಿದ್ದೇವೆ.
ನಮ್ಮ ಜೀವಿತದೊಳಗೆ ಪ್ರವೇಶಿಸಲು ಇರುವ ಎರಡು ಮುಖ್ಯ ದುವಾರಗಳೆಂದರೆ ಕಣ್ಣು ಮತ್ತು ಕಿವಿಗಳೆಂಬ ದ್ವಾರಗಳು. ನಾವು ನಮ್ಮ ಕಣ್ಣಿನಿಂದ ಏನನ್ನು ನೋಡುತ್ತೇವೆಯೋ, ನಮ್ಮ ಕಿವಿಗಳಿಂದ ಏನನ್ನು ಕೇಳುತ್ತೇವೆಯೋ ಕಾಲಕ್ರಮೇಣ ಅವೇ ನಮ್ಮ ಬಾಯಿಂದ ಹೊರಬರುತ್ತದೆ.
ಆದ್ದರಿಂದಲೇ ಕರ್ತನು ನಮ್ಮ ಕಣ್ಣುಗಳು ಮತ್ತು ಕಿವಿಗಳೆಂಬ ದ್ವಾರಗಳನ್ನು ಕಾಪಾಡಿಕೊಳ್ಳಬೇಕೆಂದು, ತನ್ಮೂಲಕ ನಾವು ನಮ್ಮ ಹೃದಯವನ್ನು ಕಾಪಾಡಿಕೊಳ್ಳಲು ಸಾಧ್ಯವಾಗುತ್ತದೆ ಎಂದು ಹೇಳಿದ್ದಾನೆ. ಆಗ ಮಾತ್ರವೇ ನಾವು ನಮ್ಮ ಬಾಯಿ ಎಂಬ ದ್ವಾರವನ್ನು ಕಾಯಲು ಕೂಡ ಸಾಧ್ಯವಾಗುತ್ತದೆ.
ನೀವು ಹೀಗೆ ಮಾಡುವಾಗ ನಿಮ್ಮ ಲೋಕವು ನಿಮ್ಮ ಸುತ್ತಲಿನ ಲೋಕವೂ ಬದಲಾಗುವುದನ್ನು ನೀವು ಕಾಣುವಿರಿ.

ಪ್ರಾರ್ಥನೆಗಳು
ತಂದೆಯೇ, ಯೇಸುನಾಮದಲ್ಲಿ ನನ್ನ ಕಣ್ಣು- ಕಿವಿಗಳನ್ನು ನಿನ್ನ ನೀತಿಯ ಸದಸ್ಯರುಗಳಾಗುವಂತೆ ನಿನಗೇ ಸಮರ್ಪಿಸುತ್ತೇನೆ. ನೀನೇ ನನ್ನ ಬಾಯಿಗೆ ಕಾವಲಿರಿಸು, ಓ ಕರ್ತನೆ ನನ್ನ ತುಟಿಗಳೆಂಬ ಕದಗಳನ್ನು ಕಾಯಿ. ಆಮೆನ್.
Join our WhatsApp Channel
Most Read
● ಹೋಲಿಕೆಯ ಬಲೆ● ಸಾಲದಿಂದ ಹೊರಬನ್ನಿ : ಕೀಲಿಕೈ # 1
● ನೀವಿನ್ನೂ ತಡಮಾಡುತ್ತಿರುವುದೇಕೆ?
● ದಿನ 02:40 ದಿನಗಳ ಉಪವಾಸ ಪ್ರಾರ್ಥನೆ ದಿನಗಳು
● ಇತರರಿಗಾಗಿ ಪ್ರಾರ್ಥಿಸುವುದು
● ಎತ್ತಲ್ಪಡುವಿಕೆ ಮತ್ತು ರೋಶ್ ಹಸನ್ನ
● ಆತನಿಗೆ ಯಾವುದೇ ಮಿತಿಯಿಲ್ಲ.
ಅನಿಸಿಕೆಗಳು