ಅನುದಿನದ ಮನ್ನಾ
ಐಕ್ಯತೆ ಮತ್ತು ವಿಧೇಯತೆಯ ಒಂದು ದರ್ಶನ
Tuesday, 16th of July 2024
1
0
226
Categories :
ಬದ್ಧತೆ (commitment)
ವಿಧೇಯತೆ (Obedience)
ಕಳೆದ 14 /7/2024 ರ ಭಾನುವಾರದಂದು ನಾವು ಕರುಣಾ ಸದನ್ನಲ್ಲಿ ನಮ್ಮ ಇತರ ಸಭೆಯ ಶಾಖೆಗಳವರೊಂದಿಗೆ ಸೇರಿ "ಸಹೋದರ ಅನ್ಯೋನ್ಯತೆಯ ಭಾನುವಾರವನ್ನು" ಆಚರಿಸಿದವು. ಈ ದಿನವು ಐಕ್ಯತೆ, ಆರಾಧನೆ ಮತ್ತು ನಮ್ಮ ಸಮುದಾಯದ ಬಾಂಧವ್ಯವನ್ನು ಬಲಗೊಳಿಸುವಂತಹ ಒಂದು ವೇದಿಕೆಗೆ ಸಾಕ್ಷಿಯಾಯಿತು. ನಿಮ್ಮಲ್ಲಿ ಅನೇಕರು ಈ ಒಂದು ದರ್ಶನದಲ್ಲಿ ಹೃತ್ಪೂರ್ವಕವಾಗಿ ದೇವರ ವಾಕ್ಯಕ್ಕೆ ವಿಧೇಯರಾಗಿ ಭಾಗವಹಿಸಿದಿರಿ ಮತ್ತು ಇದಕ್ಕಾಗಿ ನಾನು ಹೃತ್ಪೂರ್ವಕವಾಗಿ ನಿಮಗೆ ಆಭಾರಿಯಾಗಿದ್ದೇನೆ ಮತ್ತು ದೇವರು ಇದಕ್ಕಾಗಿ ಖಂಡಿತವಾಗಿಯೂ ನಿಮ್ಮನ್ನೂ ಸನ್ಮಾನಿಸುವನು.
ವಿಧೇಯತೆಯ ಮೂಲಕ ಮನವರಿಕೆಯಾಗುವ ಒಂದು ದರ್ಶನ
ನಿಮ್ಮ ಪಾಲ್ಗೊಳ್ಳುವಿಕೆಯು ದೇವರು ನಿಮ್ಮ ಮುಂದೆ ಇಟ್ಟಿರುವ ದರ್ಶನದ ಕುರಿತು ನಿಮಗಿರುವ ಬದ್ಧತೆಯನ್ನು ಪ್ರಕಟಿಸುತ್ತದೆ. ಎಫಸ್ಸೆ 4:16ನಮಗೆ ಹೇಳುವುದೇನೆಂದರೆ "ಆತನೇ ಶಿರಸ್ಸು; ದೇಹವೆಲ್ಲಾ ಆತನ ದೊರೆತನದಲ್ಲಿದ್ದು ತನ್ನಲ್ಲಿರುವ ಎಲ್ಲಾ ನರಗಳಿಂದ ಬಿಗಿಯಾಗಿ ಜೋಡಿಸಲ್ಪಟ್ಟು ಪ್ರತಿ ಅಂಗದಿಂದ ಅದರದರ ಶಕ್ತಿಯ ಪ್ರಕಾರ ಸಹಾಯ ಹೊಂದಿ ಪ್ರೀತಿಯಿಂದ ಐಕ್ಯವಾಗಿದ್ದು ಕ್ಷೇಮಾಭಿವೃದ್ಧಿಯನ್ನು ಹೊಂದುತ್ತದೆ." ಎಂದು ಈ ಒಂದು ವಾಕ್ಯವೇ ನೆನ್ನೆಯ ದಿನದ ಸಾಕ್ಷಿಯನ್ನು ಬಹಳ ಸುಂದರವಾಗಿ ಕೋಶೀಕರಿಸಿದೆ. ಈ ಒಂದು ದರ್ಶನವನ್ನು ಯಶಸ್ವಿಗೊಳಿಸುವಲ್ಲಿ ಹಾಗೂ ನಮ್ಮ ಆತ್ಮೀಕ ಕುಟುಂಬವನ್ನು ಬಲಗೊಳಿಸುವ ನಿಟ್ಟಿನಲ್ಲಿ ನಿಮ್ಮಲ್ಲಿ ಪ್ರತಿಯೊಬ್ಬರೂ ಸಹ ಪ್ರಮುಖ ಪಾತ್ರ ವಹಿಸಿದ್ದೀರಿ.
ಇಬ್ರಿಯ10: 24 -25ರಲ್ಲಿ "ನಾವು ಪರಸ್ಪರ ಹಿತಚಿಂತಕರಾಗಿದ್ದು ಪ್ರೀತಿಸುತ್ತಿರಬೇಕೆಂತಲೂ ಸತ್ಕಾರ್ಯಮಾಡಬೇಕೆಂತಲೂ ಒಬ್ಬರನ್ನೊಬ್ಬರು ಪ್ರೇರೇಪಿಸೋಣ. ಸಭೆಯಾಗಿ ಕೂಡಿಕೊಳ್ಳುವದನ್ನು ಕೆಲವರು ರೂಢಿಯಾಗಿ ಬಿಟ್ಟಿರುವ ಪ್ರಕಾರ ನಾವು ಬಿಟ್ಟುಬಿಡದೆ ಒಬ್ಬರನ್ನೊಬ್ಬರು ಎಚ್ಚರಿಸೋಣ. ಕರ್ತನ ಪ್ರತ್ಯಕ್ಷತೆಯ ದಿನವು ಸಮೀಪಿಸುತ್ತಾ ಬರುತ್ತದೆ ಎಂದು ನೀವು ನೋಡುವದರಿಂದ ಇದನ್ನು ಮತ್ತಷ್ಟು ಮಾಡಿರಿ. " ಎಂದು ಪ್ರೇರಿಪಿಸಲ್ಪಡುತ್ತೇವೆ. ಸಭೆಯಾಗಿ ಒಂದಾಗಿ ಕೂಡಿ ಬರುವ ನಿಮ್ಮ ಸಮರ್ಪಣಾ ಭಾವ, ಒಬ್ಬರನ್ನೊಬ್ಬರು ಉತ್ತೇಜಿಸುವಪರಿ, ಪ್ರೀತಿಯಲ್ಲಿಯೂ- ಸತ್ಕಾರ್ಯ ಮಾಡುವುದರಲ್ಲಿಯೂ ಮತ್ತೊಬ್ಬರನ್ನು ಉತ್ತೇಜಿಸುವ ನಿಮ್ಮ ಈ ನಡೆಯು ನಿಮ್ಮ ನಂಬಿಗಸ್ತಿಕೆಗೇ ಸಾಕ್ಷಿಯಾಗಿದೆ.
ಯೋಗ್ಯವಾದ ಕಾರಣಗಳ ಅರ್ಥೈಸಿಕೊಳ್ಳುವಿಕೆ.
ನಿಮ್ಮಲ್ಲಿ ಕೆಲವರು ಯೋಗ್ಯವಾದ ಕಾರಣಗಳಿಂದಾಗಿ ಈ ಒಂದು ಆಚರಣೆಯಲ್ಲಿ ಪಾಲ್ಗೊಳ್ಳಲಾಗಲಿಲ್ಲ ಎಂಬುದನ್ನು ಸಂಪೂರ್ಣವಾಗಿ ನಾನು ಅರ್ಥ ಮಾಡಿಕೊಳ್ಳುತ್ತೇನೆ. ಹಾಗೆಯೇ ನಿಮ್ಮನ್ನು ಸಂಪೂರ್ಣವಾಗಿ ಬೆಂಬಲಿಸುತ್ತೇನೆ. ಆಗಾಗ್ಗೆ ನಮ್ಮ ಜೀವನವೂ ಸಹ ಸವಾಲುಗಳನ್ನು ಜವಾಬ್ದಾರಿಗಳನ್ನು ತಂದೊಡ್ಡಿ ಎಲ್ಲಾ ಕಾರ್ಯಕ್ರಮಗಳಲ್ಲೂ ನಾವು ಪಾಲ್ಗೊಳ್ಳಲಾಗದಂತೆ ಮಾಡುತ್ತದೆ. ನಾವು ಕುಟುಂಬವಾಗಿ ಒಬ್ಬರನ್ನೊಬ್ಬರು ಬೆಂಬಲಿಸಬೇಕು ಹಾಗಾಗಿ ಈ ಪರಿಸ್ಥಿತಿಗಳನ್ನು ನಾನು ಗೌರವಿಸಿ- ಒಪ್ಪಿಕೊಳ್ಳುತ್ತೇನೆ.
ನೀವು ಹೃದಯದಲ್ಲಿ ಈ ಒಂದು ಕಾರ್ಯಕ್ರಮವನ್ನು ಭಾಗವಹಿಸಬೇಕೆಂದು ಆಸೆ ಪಟ್ಟಿದ್ದರೂ ನೀವು ಶಾರೀರಿಕವಾಗಿ ಉಪಸ್ಥಿತಿ ಇಲ್ಲದ್ದರಿಂದ ನಿಮ್ಮ ಬಯಕೆಗಳು ಗುರುತಿಸಲ್ಪಟ್ಟು -ಬೆಲೆಯುಳ್ಳವಗಳೆಂದು ಎಣಿಸಲ್ಪಟ್ಟಿವೆ.
ಬದ್ಧತೆಗಾಗಿ ಕರೆ
ಆದಾಗಿಯೂ ತಮ್ಮ ಅನುಕೂಲತೆಗೋಸ್ಕರ ಈ ಒಂದು ದರ್ಶನವನ್ನು ತಪ್ಪಿಸಿಕೊಂಡವರಿಗೆ ನಾನು ಹೇಳುವುದೇನೆಂದರೆ, ನಾನು ಪಾಸ್ಟರ್ ಆಗಿ ಮಾತ್ರವಲ್ಲದೆ ನಮ್ಮ ಸಾಮೂಹಿಕ ಆತ್ಮಿಕ ಬೆಳವಣಿಗೆಗಾಗಿ ಜೊತೆ ಗೂಡಿಸಲ್ಪಟ್ಟ ಒಬ್ಬ ಸಹ ವಿಶ್ವಾಸಿಯಾಗಿ ಬಹಳ ಕಾಳಜಿಯಿಂದ ನಿಮಗೆ ಹೇಳುತ್ತೇನೆ. ಇಂತಹ ಒಂದು ಬಹು ಮುಖ್ಯವಾದ ಸಭೆಯಾಗಿ ಜೊತೆಗೂಡುವ ಕಾರ್ಯಕ್ರಮಗಳನ್ನು ಯಾವುದೇ ಯೋಗ್ಯ ಕಾರಣವಿಲ್ಲದೆ ತಪ್ಪಿಸಿಕೊಳ್ಳುವಂತದ್ದು ಸಭೆ ಎಂಬ ಉದ್ದೇಶವನ್ನು ಮತ್ತು ಐಕ್ಯತೆಯನ್ನು ಅಲ್ಲಗಳೆದಂತೆಯೇ.
ಕರ್ತನಾದ ಯೇಸು ಸ್ವಾಮಿಯ ಸ್ವತಃ ತಾನೇ ಸಭೆಯಾಗಿ ಕೂಡಿಕೊಳ್ಳುವ ಮಹತ್ವಕ್ಕೆ ಒತ್ತು ಕೊಟ್ಟಿರುವುದನ್ನು ನಾವು ನೋಡಬಹುದು."ಯಾಕಂದರೆ ಇಬ್ಬರು ಮೂವರು ನನ್ನ ಹೆಸರಿನಲ್ಲಿ ಎಲ್ಲಿ ಕೂಡಿ ಬಂದಿರುತ್ತಾರೋ ಅಲ್ಲಿ ಅವರ ನಡುವೆ ನಾನು ಇದ್ದೇನೆ" ಎಂದು ಮತ್ತಾಯ 18: 20ರಲ್ಲಿ ಆತನು ಹೇಳಿದ್ದಾನೆ. ನಾವು ಈ ರೀತಿ ಸಭೆಯಾಗಿ ಕೂಡುವುದನ್ನು ಆಲಕ್ಷಿಸುವಾಗ ನಾವು ಕ್ರಿಸ್ತನು ನಮ್ಮ ಮಧ್ಯದಲ್ಲಿರುವ ವಿಭಿನ್ನವಾದ ಪ್ರಸನ್ನತೆಯನ್ನೂ ಮತ್ತು ಆಶೀರ್ವಾದವನ್ನು ಕಳೆದುಕೊಳ್ಳುವವರಾಗುತ್ತೇವೆ.
ಅಲಕ್ಷ್ಯ ಮಾಡುವುದರಿಂದ ಒದಗುವ ಸತ್ಯವೇದ ಆಧಾರಿತ ಅಪಾಯಗಳು.
ಸಹೋದರ ಅನ್ಯೋನ್ಯತೆಯನ್ನು ಕಡೆಗಣಿಸುವುದರಿಂದ ಆಗುವ ಅಪಾಯಗಳ ಕುರಿತು ಸತ್ಯವೇದವು ನಮ್ಮನ್ನು ಎಚ್ಚರಿಸುತ್ತದೆ. "ಜನರಲ್ಲಿ ಸೇರದವನು ಸ್ವೇಚ್ಫಾನುಸಾರ ನಡೆಯುತ್ತಾ ಸಮಸ್ತ ಸುಜ್ಞಾನಕ್ಕೂ ರೇಗುವನು." ಎಂದು ಜ್ಞಾನೋಕ್ತಿ 18:1ಹೇಳುತ್ತದೆ. ತನ್ನನ್ನು ಪ್ರತ್ಯೇಕ ಪಡಿಸಿಕೊಳ್ಳುವ ಸ್ವಭಾವವು ಒಬ್ಬರನ್ನು ಸ್ವಾರ್ಥ ಚಿಂತನೆಗೆ ತಳ್ಳಿ ದೈವಿಕ ಜ್ಞಾನದಿಂದ ದೂರಮಾಡುತ್ತದೆ.
ಶತ್ರುವು (ಸೈತಾನನು) ಯಾವಾಗಲೂ ಈ ರೀತಿ ಪ್ರತ್ಯೇಕಗೊಂಡ ವಿಶ್ವಾಸಿಗಳ ಮೇಲೆಯೇ ತನ್ನ ಗುರಿಯಿಟ್ಟು ಆತ್ಮಿಕ ದಾಳಿಗಳಿಗೆ ತುತ್ತಾಗುವಂತೆ ಮಾಡುತ್ತಾನೆ.ಈ ಒಂದು ಕಾರಣದಿಂದಾಗಿಯೇ ಅನೇಕರು ಸಂಪೂರ್ಣವಾದ ಬಿಡುಗಡೆಯನ್ನು ಇಂದು ಹೊಂದಿಕೊಳ್ಳಲಾಗುತ್ತಿಲ್ಲ.
"ನಿಮ್ಮಲ್ಲಿ ಒಬ್ಬರಾದರೂ ಪಾಪದಿಂದ ಮೋಸಹೋಗಿ ಕಠಿನರಾಗದಂತೆ ಈಹೊತ್ತು ಎಂಬ ಕಾಲವು ಇರುವ ತನಕ ಪ್ರತಿನಿತ್ಯವೂ ಒಬ್ಬರನ್ನೊಬ್ಬರು ಎಚ್ಚರಿಸಿರಿ." ಎಂದು ಇಬ್ರಿಯರಿಗೆ 3:13 ನಮಗೆ ನೆನಪಿಸುತ್ತದೆ.ನಿಯಮಿತವಾಗಿ ಸಭೆಯಾಗಿ ಕೂಡಿಬರುವ ಕ್ರಿಯೆಯು ನಮ್ಮನ್ನು ಮೋಸಗೊಳಿಸುವ ಪಾಪಗಳಿಂದ ಕಾಯುತ್ತದೆ. ನಮ್ಮನ್ನು ನಾವೇ ಪ್ರತ್ಯೇಕಿಸಿಕೊಳ್ಳುವಂತದ್ದು ನಮ್ಮ ಹೃದಯವನ್ನು ದೇವರ ಸತ್ಯಗಳಿಗೆ ದೂರಾಗುವಂತೆ ಮಾಡಿ ನಮ್ಮ ಹೃದಯವನ್ನು ಕಠಿಣ ಮಾಡಿಕೊಳ್ಳುವಂತ ಅಪಾಯಕ್ಕೆ ದೂಡುತ್ತದೆ.
ಪರಿಶೋಧಿಸಿಕೊಂಡು ಪುನಃ ಬದ್ಧರಾಗಲು ಉತ್ತೇಜನ
ಯಾರೆಲ್ಲಾ ಈ ರೀತಿ ಸಭೆಗಳಿಗೆ ತಪ್ಪಿಸಿಕೊಳ್ಳುತ್ತೀರೋ ನಿಮ್ಮ ಪ್ರಾಶಸ್ತ್ಯಗಳನ್ನು ಪುನಃ ಪರಿಶೋಧಿಸಿ ನೋಡಬೇಕೆಂದು ನಿಮ್ಮನ್ನು ಉತ್ತೇಜಿಸುತ್ತೇನೆ. ದೇವರು ನಮ್ಮನ್ನು ಒಂದು ಸಮುದಾಯವಾಗುವಂತೆಯೂ ಒಬ್ಬರನ್ನೊಬ್ಬರು ಕಟ್ಟುತ್ತಾ ಬೆಂಬಲಿಸುತ್ತಾ ಇರಬೇಕೆಂದು ಕರೆದಿದ್ದಾನೇ. ಸಹೋದರ ಅನ್ಯೋನ್ಯತೆಗೆ ಸಂಬಂಧಿಸಿದ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಲು ಮತ್ತೊಮ್ಮೆ ನಿಮ್ಮನ್ನು ನೀವು ಬದ್ಧಗೊಳಿಸಿ.
ನಿಮ್ಮ ಉಪಸ್ಥಿತಿಯು ಮತ್ತೊಬ್ಬರಿಗೆ ಆಶೀರ್ವಾದಕರ ಎನ್ನುವುದಷ್ಟೇ ಅಲ್ಲದೆ ಅದು ಮೊದಲು ನಿಮ್ಮ ಆತ್ಮೀಕ ಬೆಳವಣಿಗೆಗೆ ನಿರ್ಣಾಯಕವಾದಂತ ಅಂಶವಾಗಿದೆ.
"ಆದದರಿಂದ ಜೋಲುಬಿದ್ದ ಕೈಗಳನ್ನೂ ನಡುಗುವ ಮೊಣಕಾಲುಗಳನ್ನೂ ಸುಧಾರಿಸಿಕೊಳ್ಳಿರಿ; ನಿಮ್ಮ ಕಾಲುಗಳಿಂದ ನೆಟ್ಟಗೆ ಮುಂದೆ ನಡೆಯಿರಿ. ಹೀಗೆ ಮಾಡಿದರೆ ಕುಂಟಕಾಲು ಉಳುಕಿಹೋಗದೆ ವಾಸಿಯಾಗುವದು. ಎಲ್ಲರ ಸಂಗಡ ಸಮಾಧಾನದಿಂದಿರುವದಕ್ಕೂ ಪರಿಶುದ್ಧತೆಯನ್ನು ಹೊಂದುವದಕ್ಕೂ ಪ್ರಯತ್ನಮಾಡಿರಿ; "ಇಬ್ರಿಯರಿಗೆ 12:12-14 ರ ಈ ವಾಕ್ಯಗಳನ್ನು ನೆನಪಿಡಿರಿ.ನಾವೆಲ್ಲರೂ ಕ್ರಿಸ್ತನ ದೇಹದ ಭಾಗಗಳಾಗಿರುವುದರಿಂದ ಒಂದು ಅಂಗವು ಎಲ್ಲವಾದರೆ ಇಡೀ ದೇಹ ನರಳುತ್ತದೆ.
ಯಾಕೋಬ 1: 22ರಲ್ಲಿ ಹೇಳಿರುವ "ವಾಕ್ಯವನ್ನು ಕೇಳಿದರೂ ಅದರಂತೆ ನಡೆಯದೆ ತಮ್ಮನ್ನೇ ತಾವು ಮೋಸಗೊಳಿಸಿಕೊಳ್ಳುವಂಥವರಂತೆ ನಾವು ಆಗದಿರೋಣ. ಅದಕ್ಕೆ ಬದಲಾಗಿ ದೇವರ ವಾಕ್ಯವನ್ನು ಕೈಗೊಂಡು ನಡೆಯುವರಾಗಿ ನಮ್ಮ ಮುಂದೆ ಇಟ್ಟಿರುವ ದರ್ಶನದಲ್ಲಿ ಭಾಗಿಯಾಗೋಣ ಅಪೋಸ್ತಲ ಕೃತ್ಯ 2:42 ರಲ್ಲಿ ಆದಿಸಬೆಯ ಕ್ರೈಸ್ತರು ಅಪೋಸ್ತಲರಿಗೆ ತಮ್ಮನ್ನು ತಾವು ಸಮರ್ಪಣೆ ಮಾಡಿಕೊಂಡು ಅಪೋಸ್ತಲರ ಬೋಧನೆಯನ್ನು ಕೇಳುವುದರಲ್ಲಿಯೂ, ಸಹೋದರ ಅನ್ಯೋನ್ಯತೆಯಲ್ಲಿಯೂ ಪ್ರಾರ್ಥನೆಯಲ್ಲಿಯೂ ಹಾಗೂ ರೊಟ್ಟಿ ಮುರಿಯುವುದರಲ್ಲಿಯೂ ಐಕ್ಯರಾಗಿದ್ದರು. ಈ ಒಂದು ಭಕ್ತಿಯ ಸಂಚಲನವು ಒಂದು ದೊಡ್ಡ ಆತ್ಮಿಕ ಉಜ್ಜೀವನಕ್ಕೆ ನಾಂದಿ ಹಾಡಿತು ಮತ್ತು ನಾವಿಂದು ಅದೇ ಭಕ್ತಿಯನ್ನು ಆಚರಿಸಲು ಕರೆಯಲ್ಪಟ್ಟವರಾಗಿದ್ದೇವೆ.
ಪ್ರಾರ್ಥನೆಗಳು
ತಂದೆಯೇ, ನಿನ್ನ ದರ್ಶನಕ್ಕಾಗಿ ಬದ್ಧವಾಗಿರುವಂತೆ ನನ್ನನ್ನು ಬಲಪಡಿಸು, ನಾವು ನಂಬಿಕೆಯಲ್ಲಿಯೂ ವಿದೇಯತೆಯಲ್ಲಿಯೂ ಒಬ್ಬರನ್ನೊಬ್ಬರು ಬಲಪಡಿಸುವವರಾಗಿ ಒಬ್ಬರನ್ನೊಬ್ಬರು ಕಟ್ಟುವವರಾಗಿ ಬೆಳೆಯುವಂತೆ ಯೇಸು ನಾಮದಲ್ಲಿ ನಮಗೆ ಸಹಾಯ ಮಾಡು. ಆಮೇನ್.
Join our WhatsApp Channel
Most Read
● ಕೊಡುವ ಕೃಪೆ -2● ಯಹೂದವು ಮುಂದಾಗಿ ಹೊರಡಲಿ
● ನೀವೊಂದು ಉದ್ದೇಶಕ್ಕಾಗಿ ಹುಟ್ಟಿದ್ದೀರಿ.
● ಶಾಂತಿಯು ನಮ್ಮ ಬಾಧ್ಯತೆಯಾಗಿದೆ.
● ದೇವರಿಗೆ ಮೊದಲಸ್ಥಾನ ನೀಡುವುದು #3
● ಪುರುಷರು ಯಾಕೆ ಪತನಗೊಳ್ಳುವರು -2
● ಅದ್ಭುತಗಳಲ್ಲಿ ಕಾರ್ಯ ಮಾಡುವುದು - ಕೀಲಿಕೈ #1
ಅನಿಸಿಕೆಗಳು