ಅನುದಿನದ ಮನ್ನಾ
ಚಿಂತೆಯಿಂದ ಹೊರಬರಲು ಈ ಸಂಗತಿಗಳ ಕುರಿತು ಯೋಚಿಸಿ
Saturday, 27th of July 2024
3
2
215
Categories :
ಸಮಾಧಾನ(Peace)
ನಿಮ್ಮ ಮನಸ್ಸಿಗೆ ನೀವು ಏನನ್ನು ಉಣಬಡಿಸುತ್ತೀರೋ ಅದುವೇ ದೊಡ್ಡ ವಿಷಯವಾಗಿದೆ. ಮನುಷ್ಯನ ಮನಸ್ಸನ್ನು ಅಯಸ್ಕಾಂತೀಯ ಶಕ್ತಿಗೆ ಹೋಲಿಸಬಹುದು. ಏಕೆಂದರೆ ಅದು ಸಂಗತಿಗಳನ್ನು ಆಕರ್ಷಿಸಿ -ಕ್ರೋಢಿಕರಿಸುತ್ತಿರುತ್ತದೆ. ನೀವು ನಿಮ್ಮ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದುಕೊಳ್ಳುವಂತಹ ಪುಸ್ತಕಗಳನ್ನು ಓದಿದ್ದೀರಾ? ಇಲ್ಲವೇ ನಿಮ್ಮ ಮನಸ್ಸಿನಲ್ಲಿಯೇ ಉಳಿದುಬಿಡುವಂತಹ ಚಲನಚಿತ್ರಗಳನ್ನು ನೋಡಿದ್ದೀರಾ? ನಿಮ್ಮ ಮನಸ್ಸು ತನ್ನೊಳಗೆ ಬರುವಂತಹ ಮಾಹಿತಿಗಳನ್ನು ಉಳಿಸಿಕೊಳ್ಳಬಲ್ಲಷ್ಟು ಶಕ್ತಿಯುತವಾಗಿದೆ.
ಕ್ರೈಸ್ತರಾಗಿ ನಿಮ್ಮ ಮನಸ್ಸಿಗೆ ನೀವು ಉಣಿಸುವ ಆಲೋಚನೆಗಳು ವಿಶ್ವಾಸಿಯಾಗಿ ನೀವು ನಡೆಯಲು ಬೇಕಾದ ಬಹಳ ನಿರ್ಣಾಯಕವಾದ ಅಂಶವಾಗಿದೆ.
ಲೋಕವು ತನ್ನದೇ ಆದ ಆಲೋಚನೆಗಳ ಮಾದರಿಯನ್ನು ನಿಮ್ಮ ಮುಂದೆ ಇಡುತ್ತದೆ. ಆದರೆ ನೀವು ಅದನ್ನು ತಿರಸ್ಕರಿಸಬೇಕು. ಮಾಧ್ಯಮವು ತನ್ನದೇ ಆದ ರೀತಿಯಲ್ಲಿ ಜನರ ಮನಸ್ಸಿನಲ್ಲಿ ವಿನಾಶದ ಹಾವಳಿಯನ್ನು ತರುತ್ತದೆ.
ನೀವು ಪ್ರತಿದಿನವೂ ನೋಡುವಂತಹ ಕೇಳುವಂತ ವಿಷಯಗಳು ಅನಾರೋಗ್ಯಕರವಾಗಿರಬಹುದು. ಆದಾಗಿಯೂ ನೀವು ನಿಮ್ಮ ಆಲೋಚನೆಗಳನ್ನು ನಿರ್ವಹಿಸುವಲ್ಲಿ ಆಳ್ವಿಕೆ ನಡೆಸುವಲ್ಲಿ ನಿಮ್ಮದೇ ಆದ ವಿಚಾರಗಳ ಲೆಕ್ಕಚಾರವನ್ನು ಬಿಡಬಾರದು.
ಒಬ್ಬ ವ್ಯಕ್ತಿಯು ಉದ್ದೇಶಪೂರ್ವಕವಾಗಿ ಇನ್ನೊಬ್ಬರನ್ನು ನೋಯಿಸುವ ಕಾರ್ಯವನ್ನು ಆಯ್ಕೆ ಮಾಡುವ ಮೊದಲು ಆ ಆಯ್ಕೆಯು ಅವನಲ್ಲಿ ಹಾದುಹೋಗುವ ರೀತಿಯ ಆಲೋಚನೆಯಲ್ಲಿ ಎಂದಿಗೂ ಪ್ರೀತಿಯಿಂದ ಹುಟ್ಟಿ ಬಂದಿರುವುದಿಲ್ಲ. ಹಾಗೆಯೇ ನಿಮ್ಮ ಆಲೋಚನೆಗಳು ನಿಮ್ಮ ಕಾರ್ಯಗಳನ್ನು ನಿಯಂತ್ರಿಸುತ್ತವೆ. ಆದ್ದರಿಂದ ನೀವು ನಿಮ್ಮ ಆಲೋಚನೆಗಳನ್ನು ಯಾವುದರ ಮೇಲೆ ಕೇಂದ್ರೀಕರಿಸಬೇಕೆಂಬುದರ ಕುರಿತು ಅಪೋಸ್ತಲನಾದ ಪೌಲನು ನಮಗೆ ಹೀಗೆ ಸಲಹೆ ನೀಡುತ್ತಾನೆ.
"ಕಡೇ ಮಾತೇನಂದರೆ, ಸಹೋದರರೇ, ಯಾವಾವದು ಸತ್ಯವೂ ಮಾನ್ಯವೂ ನ್ಯಾಯವೂ ಶುದ್ಧವೂ ಪ್ರೀತಿಕರವೂ ಮನೋಹರವೂ ಆಗಿದೆಯೋ, ಯಾವದು ಸದ್ಗುಣವಾಗಿದೆಯೋ, ಯಾವದು ಕೀರ್ತಿಗೆ ಯೋಗ್ಯವೋ, ಅವೆಲ್ಲವುಗಳನ್ನೂ ಲಕ್ಷ್ಯಕ್ಕೆ ತಂದುಕೊಳ್ಳಿರಿ. "(ಫಿಲಿಪ್ಪಿಯವರಿಗೆ 4:8)
ಫಿಲಿಪ್ಪಿ 4:8ರಲ್ಲಿ ಏನೆಲ್ಲಾ ಪಟ್ಟಿಕರಿಸಲಾಗಿದೆಯೋ ಅದರಲ್ಲಿ ಯಾವುದೂ ಸಹ ನಕರಾತ್ಮಕತೆಯನ್ನು ಬಿಂಬಿಸುವುದಿಲ್ಲ. ನೀವು ಮತ್ತು ನಾನು ಈ ಮುಂದಿನ ವಿಚಾರಗಳನ್ನು ಕುರಿತು ಧ್ಯಾನಿಸಬೇಕೆಂದು ಸಲಹೆ ನೀಡುತ್ತವೆ: ಅವು ಸತ್ಯವು, ಮಾನ್ಯವೂ,ನ್ಯಾಯವೂ, ಶುದ್ಧವೂ, ಪ್ರೀತಿಕರವೂ ಕೀರ್ತಿಗೆ ಯೋಗ್ಯವೂ ಆಗಿರುವವುಗಳಾಗಿರುತ್ತವೆ. ಎಲ್ಲಾ ಆಲೋಚನೆಗಳು ಶುದ್ಧವಲ್ಲ ಕೆಲವು ಅಶುದ್ಧವಾಗಿದ್ದು ವೈವಿಧ್ಯಮಯವಾದ ರೂಪದಲ್ಲಿ ಬರುತ್ತವೆ.
ನೀವು ಬಯಸಿದ್ದನ್ನೆಲ್ಲಾ ನೋಡಬೇಕಿಲ್ಲ. ನಿಮಗೆ ಅನಿಸಿದ್ದನ್ನೆಲ್ಲ ವೀಕ್ಷಿಸಬೇಕಿಲ್ಲ. ಏನೇನನ್ನೋ ನೀವು ಕೇಳಿಸುಹಾಗಿಲ್ಲ. ಸಿಕ್ಕಿದನ್ನೆಲ್ಲಾ ನೀವು ಕೇಳಿಸಿಕೊಳ್ಳುವಂತಿಲ್ಲ. ಮಾಧ್ಯಮಗಳನ್ನು ವೀಕ್ಷಿಸುತ್ತಾ ದಿನವೆಲ್ಲಾ ಕಳೆಯುವಂತಿಲ್ಲ. ನಿಮ್ಮ ಮನಸ್ಸನ್ನು ಜಾಗರೂಕತೆಯಿಂದ ಕಾಪಾಡಿಕೊಳ್ಳಿ.ಕೆಟ್ಟ ಸುದ್ದಿಗಳನ್ನು ತುಂಬಿಸಿಕೊಂಡಂತ ವಿಚಾರಗಳನ್ನು ನೋಡುತ್ತಾ, ಕೇಳುತ್ತಾ,ಓದುತ್ತಾ ದಿನ ಆರಂಭಿಸುವುದು ಒಳ್ಳೆಯದಲ್ಲ. ಬದಲಾಗಿ ದೇವರ ವಾಕ್ಯವನ್ನು ಲಕ್ಷಿಸಿರಿ ಅದನ್ನೇ ಧ್ಯಾನಿಸಿರಿ ಅಗತ್ಯವಿದ್ದರೆ ದೇವ ಜನರಾದ ಸಹೋದರರೊಡನೆ ಫೋನ್ ಕರೆ ಮೂಲಕ ಮಾತನಾಡಿ.
ನಿಮ್ಮ ಮನಸ್ಸು ಒಂದು ದೊಡ್ಡ ಆಸ್ತಿ ಮತ್ತು ದೊಡ್ಡ ಯುದ್ಧ ರಂಗವೂ ಆಗಿದೆ. ಭಕ್ತಿ ಪೂರ್ವಕ ಗುಣಗಳನ್ನು ಬೆಳೆಸಿಕೊಳ್ಳುವಲ್ಲಿ ನಿಮ್ಮ ಮನಸ್ಸನ್ನು ದೇವರ ವಾಕ್ಯದ ಮೂಲಕ ನಿರಂತರವಾಗಿ ನೂತನಗೊಳಿಸಿಕೊಳ್ಳುತ್ತಿರಬೇಕು.
"ಇಹಲೋಕದ ನಡವಳಿಕೆಯನ್ನು ಅನುಸರಿಸದೆ ನೂತನಮನಸ್ಸನ್ನು ಹೊಂದಿಕೊಂಡು ಪರಲೋಕಭಾವದವರಾಗಿರಿ. ಹೀಗಾದರೆ ದೇವರ ಚಿತ್ತಕ್ಕನುಸಾರವಾದದ್ದು ಅಂದರೆ ಉತ್ತಮವಾದದ್ದೂ ಮೆಚ್ಚಿಕೆಯಾದದ್ದೂ ದೋಷವಿಲ್ಲದ್ದೂ ಯಾವ ಯಾವದೆಂದು ವಿವೇಚಿಸಿ ತಿಳುಕೊಳ್ಳುವಿರಿ." ಎಂದು ರೋಮಾಪುರದವರಿಗೆ 12:2 ಹೇಳುತ್ತದೆ..
ನೀವು ಏನನ್ನು ಕುರಿತು ಸದಾ ಧ್ಯಾನಿಸುತ್ತಿರುತ್ತೀರೋ ಏನನ್ನು ನಿರಂತರವಾಗಿ ಯೋಚಿಸುತ್ತಿರುತ್ತೀರೋ ಅದನ್ನೇ ಮಾಡುವವರಾಗಿರುತ್ತೀರಿ. ಲೋಕದ ಜೊತೆ ಹೊಂದಿಕೊಂಡು ಹೋಗುವಂಥದ್ದು ನಿಮ್ಮಲ್ಲಿ ಯಾವುದೇ ರೂಪಾಂತರವನ್ನು ತರುವುದಿಲ್ಲ. ಏಕೆಂದರೆ ಈ ಲೋಕದ ದೇವರು ಸೈತಾನನಾಗಿದ್ದು ಎಲ್ಲವನ್ನು ಹಾಳುಗೆಡವಿದ್ದಾನೆ ಮತ್ತು ಹಾಳು ಮಾಡುತ್ತಿದ್ದಾನೆ. ಅದಕ್ಕೆ ಬದಲಾಗಿ ದೇವರ ವಾಕ್ಯವನ್ನು ಅನುಸರಿಸುವವರಾಗಿರ್ರಿ. ಏಕೆಂದರೆ ಯಾವ ಯಾವುದು ಸತ್ಯವೋ ಶುದ್ಧವೋ ಮಾನ್ಯವೋ ನ್ಯಾಯವೋ ಪ್ರೀತಿಕರವೋ ಕೀರ್ತಿಗೆ ಯೋಗ್ಯವಾಗಿದೆಯೋ ಅವುಗಳನ್ನು ದೇವರ ವಾಕ್ಯವು ವಿರೋಧಿಸುವುದಿಲ್ಲ.
ಪ್ರಾರ್ಥನೆಗಳು
ತಂದೆಯೇ ನನ್ನ ಆಲೋಚನೆಗಳೆಲ್ಲವೂ ಯಾವಾಗಲೂ ನಿನ್ನ ವಾಕ್ಯಕ್ಕೆ ಸರಿಹೊಂದುವಂತೆ ಇರುವ ಹಾಗೆ ಕೃಪೆಯನ್ನು ನನಗೆ ಅನುಗ್ರಹಿಸು. ನಾನು ಈಗ ನಿನ್ನ ಚಿತ್ತಕ್ಕೆ ನನ್ನನ್ನು ಒಪ್ಪಿಸಿಕೊಡುತ್ತೇನೆ ಯೇಸು ನಾಮದಲ್ಲಿ ನಿನಗೆ ವಂದಿಸುತ್ತೇನೆ.ಆಮೆನ್.
Join our WhatsApp Channel
Most Read
● ದಿನ 37 :40ದಿನಗಳ ಉಪವಾಸ ಮತ್ತು ಪ್ರಾರ್ಥನೆ.● ಅಧರ್ಮದ ಆಳ್ವಿಕೆಯ ಬಲವನ್ನು ಮುರಿಯುವುದು-II
● ನೀವು ಎಷ್ಟು ವಿಶ್ವಾಸಾರ್ಹರು?
● ಕರ್ತನಾದ ಯೇಸುವಿನ ಮುಖಾಂತರ ಕೃಪೆ
● ನೀವೊಂದು ಉದ್ದೇಶಕ್ಕಾಗಿ ಹುಟ್ಟಿದ್ದೀರಿ.
● ಕರ್ತನೇ, ನಾನು ಏನು ಮಾಡಬೇಕೆಂದು ನೀನು ಬಯಸುತ್ತೀ?
● ದೇವರವಾಕ್ಯವನ್ನು ನಿಮ್ಮ ಹೃದಯದಾಳದಲ್ಲಿ ಬಿತ್ತಿರಿ.
ಅನಿಸಿಕೆಗಳು