ಕರ್ತನಾದ ಯೇಸು ಸ್ವಾಮಿಯು ಭೂಮಿಯ ಮೇಲಿನ ತನ್ನ ಸೇವೆಯ ಅವಧಿಯಲ್ಲಿ ಬಹುತೇಕ ಕೆಲಸಗಳನ್ನು ಮಾಡುವುದರಲ್ಲಿಯೇ ಮಗ್ನನಾಗಿದ್ದನು. ಒಂದು ದಿನವಾದರೂ ಅದ್ಭುತ ಕಾರ್ಯ ಮಾಡದೆ ಆತನ ದಿನಗಳು ಮುಗಿಯುತ್ತಿರಲಿಲ್ಲ. ಆತನು ಅಸಂಖ್ಯಾತವಾದ ಸ್ವಸ್ತತೆಯ ಕಾರ್ಯಗಳನ್ನು, ಬಿಡುಗಡೆ ಅದ್ಭುತಗಳನ್ನು ಮಾಡುತ್ತಾ ಜನರ ಗುಂಪಿಗೆ ದೇವರ ವಾಕ್ಯವನ್ನು ಸಾರುತ್ತಿದ್ದನು.
ಆತನು ದೇವರ ವ್ಯಕ್ತಿತ್ವವನ್ನು ಪ್ರಕಟಿಸಲು ಕಾರ್ಯ ಮಾಡುತ್ತಿದ್ದನು. ಈ ಎಲ್ಲಾ ಕಾರ್ಯಗಳು ದೇವರ ವ್ಯಕ್ತಿತ್ವಕ್ಕೆ ಗೌರವವನ್ನು ತರುವಂತಹವುಗಳಾಗಿದ್ದು ಅದಕ್ಕಾಗಿಯೇ ಕಾರ್ಯವನ್ನು ಮಾಡುತ್ತಿದ್ದನು.
ಆತನು ಇದರ ಕುರಿತು ಏನನ್ನು ಹೇಳಿದನೋ ಅದನೊಮ್ಮೆ ನೋಡಿರಿ:
"ನಾನು ನನ್ನ ತಂದೆಯ ಕ್ರಿಯೆಗಳನ್ನು ಮಾಡದಿದ್ದರೆ ನನ್ನ ಮಾತನ್ನು ನಂಬಬೇಡಿರಿ; ಮಾಡಿದರೆ ನನ್ನ ಮಾತನ್ನು ನಂಬದೆ ಇದ್ದರೂ ಆ ಕ್ರಿಯೆಗಳ ಸಾಕ್ಷಿಯನ್ನಾದರೂ ನಂಬಿರಿ; ಆಗ ನನ್ನಲ್ಲಿ ತಂದೆಯು ಇದ್ದಾನೆಂತಲೂ ತಂದೆಯಲ್ಲಿ ನಾನು ಇದ್ದೇನೆಂತಲೂ ನೀವು ತಿಳುಕೊಂಡು ಮನನಮಾಡಿಕೊಳ್ಳುವಿರಿ ಅಂದನು."(ಯೋಹಾನ 10:37-38)
ದೇವರು ಆತನಿಗೆ ಒಪ್ಪಿಸಿಕೊಟ್ಟ ಕೆಲಸಗಳನ್ನು ಪೂರೈಸುವುದು ಆತನಿಗೆ ಅಗತ್ಯವಾಗಿದ್ದು( ಅದೇ ಅವನಿಗೆ ತೃಪ್ತಿ ನೀಡುವವುಗಳಾಗಿತ್ತು) ಅದನ್ನು ಸ್ವತಃ ಆತನೇ ದೃಢಪಡಿಸಿದ್ದಾನೆ. ಮತ್ತು ಈ ಕಾರ್ಯಗಳನ್ನೆಲ್ಲ ಮಾಡಲು ದೇವರ ಆತ್ಮವು ಅವನ ಮೇಲಿತ್ತು. (ಯೋಹಾನ 4:34, ಆಪೋಸ್ತಲಾರ ಕೃತ್ಯ 10:38 ನೋಡಿರಿ )
ಆದಾಗಿಯೂ ಯೋಹಾನ 14:12 ರಲ್ಲಿ ಒಂದು ಶ್ಲಾಘನೀಯವಾದ ಅಂಶವನ್ನು ಆತನು ದೃಢೀಕರಿಸಿದನು. ಅದೇನೆಂದರೆ ತನ್ನ ಶಿಷ್ಯರು ತಾನು ಮಾಡುವ ಕಾರ್ಯಗಳಿಗಿಂತಲೂ ಮಹತ್ತಾದ ಕಾರ್ಯಗಳನ್ನು ಮಾಡುವರು ಎಂಬುದೇ. ಯೇಸುವು ಮನುಷ್ಯಕುಮಾರನಾಗಿ ಮಾಡಿದ ಕಾರ್ಯಗಳನ್ನೆಲ್ಲ ಬರೆಯುವುದಾದರೆ ಆ ಪುಸ್ತಕಗಳನ್ನು ಹಿಡಿಸಲು ಲೋಕವೇ ಸಾಲದೇ ಹೋಗಬಹುದು ಎನ್ನುವಷ್ಟು ಕ್ರಿಯೆಗಳಿಗಿಂತ ಮಹತ್ತಾಧ ಕಾರ್ಯಗಳನ್ನು ಮಾಡಲು ಜನರಿಗೆ ಹೇಗೆ ತಾನೇ ಸಾಧ್ಯ?
"ನಿಮಗೆ ನಿಜನಿಜವಾಗಿ ಹೇಳುತ್ತೇನೆ, ನನ್ನನ್ನು ನಂಬುವವನು ನಾನು ನಡಿಸುವ ಕ್ರಿಯೆಗಳನ್ನು ತಾನೂ ನಡಿಸುವನು; ಮತ್ತು ಅವುಗಳಿಗಿಂತ ಮಹತ್ತಾದ ಕ್ರಿಯೆಗಳನ್ನು ನಡಿಸುವನು. ಯಾಕಂದರೆ ನಾನು ತಂದೆಯ ಬಳಿಗೆ ಹೋಗುತ್ತೇನೆ."(ಯೋಹಾನ 14:12)
ಯೇಸುವಿನ ಕಾರ್ಯಗಳಿಗೂ ಮತ್ತು ನಾವು ಮಾಡುತ್ತಿರುವ ಕಾರ್ಯಗಳಿಗೆ ನಡುವೆ ನಮ್ಮ ನಂಬಿಕೆಯು ಉಂಟು ಮಾಡುತ್ತಿರುವ ವ್ಯತ್ಯಾಸವಾದರೂ ಏನು? ಯೇಸು ಸ್ವಾಮಿಯು ಇಲ್ಲಿ ಉಲ್ಲೇಖಿಸಿರುವ ಮಹತ್ತಾದ ಕಾರ್ಯಗಳು ಎನ್ನುವುದು ನಾವು ಆತನನ್ನು ನಂಬುವ ಮೂಲಕ ನಾವು ಕಾರ್ಯಗಳನ್ನು ಮಾಡುತ್ತೇವೆ ಎಂದು ನಮ್ಮ ಮೇಲೆ ಆತನು ಎಷ್ಟರಮಟ್ಟಿಗೆ ನಂಬಿಕೆ ಇಟ್ಟಿದ್ದಾನೆ ಎಂಬುದನ್ನು ತೋರಿಸುತ್ತದೆ. ಕೇವಲ ವಿಶ್ವಾಸಿಗಳು ಮಾತ್ರವೇ ಈ ರೀತಿಯ ಮಹತ್ತಾದ ಕಾರ್ಯಗಳನ್ನು ಮಾಡಲು ಸಾಧ್ಯವಾಗಿದ್ದು, ಅದನ್ನು ಅವರು ಪವಿತ್ರಾತ್ಮನ ಬಲದಿಂದ ಮಾಡುವವರಾಗಿರುತ್ತಾರೆ. ಮೂಲಭೂತವಾಗಿ ನೋಡುವುದಾದರೆ ಕ್ರಿಸ್ತನು ಇನ್ನೂ ಸಹ ದೇವರ ಆತ್ಮನ ಮೂಲಕ ಆತನ ಸಂತೋಷಕ್ಕಾಗಿಯೇ ನಮ್ಮಲ್ಲಿ ಕಾರ್ಯ ಮಾಡುತ್ತಿದ್ದಾನೆ.
ದೇವರ ರಾಜ್ಯವನ್ನು ವಿಸ್ತರಿಸುವ ಮತ್ತು ಆತ್ಮಗಳನ್ನು ಉಜ್ಜಿವಿಸುವ, ಬೋಧಿಸುವ, ನವೀಕರಿಸುವ ಮತ್ತು ರಕ್ಷಿಸುವಂಥ ಸುವಾರ್ತೆಯನ್ನು ಸಾರುವುದೇ ಆ ಮಹತ್ತರವಾದ ಕಾರ್ಯವಾಗಿದೆ. ಈ ಸುವಾರ್ತೆಯನ್ನು ಲೋಕದ ಕಟ್ಟ ಕಡೆಯವರೆಗೂ ಕೊಂಡೊಯ್ಯಬೇಕಾದದ್ದೇ ಆ ಮಹತ್ತರವಾದ ಕಾರ್ಯವಾಗಿದೆ. ಯೇಸು ಸ್ವಾಮಿಯು ತನ್ನ ಭೌತಿಕ ಶರೀರದಿಂದ ಇದನ್ನು ಪೂರೈಸಲು ಎಂದಿಗೂ ಸಾಧ್ಯವಾಗುತ್ತಿರಲಿಲ್ಲ.
ಆದುದರಿಂದಲೇ, ಆತನ ಮರಣ ಹೂಣುವಿಕೆ, ಪುನರುತ್ಥಾನ ಮತ್ತು ತಂದೆಯೊಡನೆ ಯುಗಕ್ಕೂ ಜೀವಿಸಲು ಆತನು ಆರೋಹಣದಂತಹ ಸಾಕ್ಷಿಯನ್ನು ಸಾರುತ್ತಾ ದೇವರ ರಾಜ್ಯಕ್ಕಾಗಿ ಆತನನ್ನು ನಂಬುವ ಎಲ್ಲಾ ಆತ್ಮಗಳನ್ನು ಗೆಲ್ಲಲೆಂದೇ ಕ್ರಿಸ್ತನು ನಮ್ಮನ್ನು ನೇಮಿಸಿದನು. ಈ ಒಂದು ಕಾರ್ಯವನ್ನು ಮಾಡುವ ಮೂಲಕವೇ ಕ್ರಿಸ್ತನು ತನ್ನ ಸೇವಾ ಸಮಯದಲ್ಲಿ ಮಾಡಿದ್ದಕ್ಕಿಂತ ಮಹತ್ತಾದ ಕಾರ್ಯವನ್ನು ನಾವು ಮಾಡಲು ಸಾಧ್ಯವಾಗುತ್ತದೆ.
ಪ್ರೀತಿಯ ದೇವ ಮಗುವೇ, ಕ್ರಿಸ್ತನು ಆತನು ಮಾಡಿದ್ದಕ್ಕಿಂತಲೂ ಮಹತ್ತಾದ ಕಾರ್ಯಗಳನ್ನು ಮಾಡಲೆಂದೂ ಮತ್ತು ಅನೇಕ ಆತ್ಮಗಳನ್ನು ದೇವರ ರಾಜ್ಯಕ್ಕಾಗಿ ಕರೆತರಲೆಂದು ನಿನ್ನನ್ನು ನೇಮಿಸಿದ್ದಾನೆ.
ಪ್ರಾರ್ಥನೆಗಳು
ಪ್ರೀತಿಯ ಕರ್ತನಾದ ಯೇಸುವೆ, ಪವಿತ್ರಾತ್ಮನ ಬಲದಿಂದ ನೀನು ಮಾಡಿದ ಕಾರ್ಯಗಳು ನನ್ನಲ್ಲಿಯೂ ಕಾರ್ಯ ಮಾಡಲಿ. ನಿನ್ನ ರಾಜ್ಯಕ್ಕಾಗಿ ಆತ್ಮಗಳನ್ನು ಗೆಲ್ಲುವಂತಹ ಸರಿಯಾದ ಮಾತುಗಳನ್ನು ಮತ್ತು ಧೈರ್ಯವನ್ನು ನನಗೆ ಅನುಗ್ರಹಿಸು. ಆಮೆನ್.
Join our WhatsApp Channel
Most Read
● ಕ್ರಿಸ್ತನಲ್ಲಿ ಅರಸರೂ ಯಾಜಕರೂ..● ಆ ಸುಳ್ಳುಗಳನ್ನು ಬಯಲಿಗೆಳೆಯಿರಿ.
● ದುರಾತ್ಮಗಳ ಪ್ರವೇಶವನ್ನು ಮುಚ್ಚುವ ಅಂಶಗಳು- I
● ನಂಬಿಕೆಯ ಮೂಲಕ ಕೃಪೆಯನ್ನು ಪಡೆದುಕೊಳ್ಳುವುದು
● ಇಸ್ಕಾರಿಯೋತಾ ಯೂದನ ಜೀವನದಿಂದ ಕಲಿಯಬೇಕಾದ ಪಾಠಗಳು - 1
● ಕಳೆದು ಹೋದ ರಹಸ್ಯ
● ಹನ್ನಾಳ ಜೀವಿತದಿಂದ ಕಲಿಯಬೇಕಾದ ಪಾಠ
ಅನಿಸಿಕೆಗಳು