ಅನುದಿನದ ಮನ್ನಾ
ಇನ್ನೂ ಯಾವುದಕ್ಕಾಗಿ ಕಾಯುತ್ತಿದ್ದೀರಿ?
Monday, 29th of July 2024
2
1
188
Categories :
ನಿರೀಕ್ಷಣೆ (Waiting)
"ಗುಂಪಿನಲ್ಲಿ ಹಿಂದಿನಿಂದ ಬಂದು ಆತನ ಉಡುಪನ್ನು ಮುಟ್ಟಿದಳು. ಮುಟ್ಟಿದ ಕೂಡಲೆ ಆಕೆಗೆ ರಕ್ತಹರಿಯುವದು ನಿಂತುಹೋದದರಿಂದ ಆಕೆಯು - ನನ್ನನ್ನು ಕಾಡಿದ ರೋಗವು ಹೋಗಿ ನನಗೆ ಗುಣವಾಯಿತು ಎಂದು ತನ್ನೊಳಗೆ ತಿಳುಕೊಂಡಳು." " ಆತನು ಆಕೆಗೆ - ಮಗಳೇ, ನಿನ್ನ ನಂಬಿಕೆಯೇ ನಿನ್ನನ್ನು ಸ್ವಸ್ಥಮಾಡಿತು; ಸಮಾಧಾನದಿಂದ ಹೋಗು; ನಿನ್ನನ್ನು ಕಾಡಿದ ರೋಗವು ಹೋಗಿ ನಿನಗೆ ಗುಣವಾಗಲಿ ಎಂದು ಹೇಳಿದನು."(ಮಾರ್ಕ 5:29, 34)
ನೀವು ಸುವಾರ್ತೆಗಳಲ್ಲಿ ಖಂಡಿತವಾಗಿಯೂ ರಕ್ತ ಕುಸುಮ ರೋಗದ ಸ್ತ್ರೀಯ ಕುರಿತು ಓದೆ ಓದಿರುತ್ತೀರಿ. ಆಕೆಯು 12 ವರ್ಷಗಳಿಂದ ರಕ್ತಸ್ರಾವದ ಬಾದೆಯನ್ನು ಅನುಭವಿಸುತ್ತಿದ್ದಳು. ಅಷ್ಟೇ ಅಲ್ಲದೆ ಗುಣ ಹೊಂದಲು 12 ವರ್ಷಗಳಿಂದಲೂ ಕಾಯುತ್ತಿದ್ದಳು. ಕಾಯುವಿಕೆ ಎಂಬುದು ಯಾರೂ ಸಹ ನುಂಗಲು ಬಯಸದ ಗುಳಿಗೆಯಾಗಿದೆ.
ಆಕೆಯು ತನ್ನಲ್ಲಿದ್ದ ಎಲ್ಲವನ್ನು ಕಳೆದುಕೊಂಡಿದ್ದಳು ಎನ್ನುವಂತದು ಆಕೆ ಮೊದಲು ಐಶ್ವರ್ಯವಂತವಳಾಗಿದ್ದಳು ಎಂಬುದನ್ನು ಸೂಚಿಸುತ್ತದೆ. ಆದರೂ ಆಕೆ ಗುಣ ಹೊಂದಿರಲಿಲ್ಲ. ಆಕೆಯು ತನ್ನ ಸಮಸ್ಯೆಯನ್ನು ಬಗೆಹರಿಸಿಕೊಳ್ಳಲು ಅತ್ಯುತ್ತಮ ತಜ್ಞ ವೈದ್ಯರನ್ನು ಭೇಟಿಯಾಗಿರಬಹುದು. ಆದರೆ ಗುಣವಾಗಿರಲಿಲ್ಲ. ಈ ಒಂದು ಸ್ಥಿತಿಯಲ್ಲಿ ಆಕೆಯ ಸ್ನೇಹಿತರು ಮತ್ತು ಕುಟುಂಬದವರೆಲ್ಲರಿಗೂ ಆಕೆಯ ಕೊನೆಯಿಲ್ಲದ ಈ ದುಃಸ್ಥಿತಿಯ ಕಾರಣದಿಂದ ನಿರೀಕ್ಷೆಯೆಲ್ಲ ಬರಡಾಗಿ ಹೋಗಿರಬಹುದು.. ಪ್ರಾಯಶಃ ಆಕೆ ಪ್ರತಿದಿನ ಬೆಳಗ್ಗೆ ಎದ್ದ ಕೂಡಲೇ ಆಕೆಯ ತುಟಿಗಳಿಂದ ಹೊರಡುತ್ತಿದ್ದ ಮಾತುಗಳು "ಆದರೆ ಯಾವಾಗ?" "ಯಾವಾಗ ಇದು ನಿಲ್ಲುತ್ತದೆ" ಎಂಬುವುಗಳಾಗಿರಬಹುದು.
ನೀವು ಎಂದಾದರೂ ತುಂಬಾ ಆಸೆಯಿಂದ ಯಾವುದಕ್ಕಾದರೂ ಕಾದಿದ್ದೀರಾ? ಪ್ರಾಯಶಃ ಅದು ಒಂದು ಸ್ವಸ್ಥತೆ, ಒಂದು ಸಂಬಂಧಗಳಲ್ಲಿ ಮರುಸ್ಥಾಪನೆ ಅಥವಾ ಒಂದು ಭಾವನಾತ್ಮಕ ಬಿಡುಗಡೆಯಾಗಿರಬಹುದು. ಖಂಡಿತವಾಗಿಯೂ ಈ ಕಾಯುವಿಕೆಯು ತರುವಂತಹ ಅಸಹಾಯಕತೆ ಬಲ ಹೀನತೆಯನ್ನು ನೀವು ಅರ್ಥ ಮಾಡಿಕೊಂಡಿರುತ್ತೀರಿ. ಆ ರಕ್ತ ಕುಸುಮ ರೋಗಿಯಾಗಿದ್ದ ಸ್ತ್ರೀಯು ಇವೆಲ್ಲವನ್ನೂ ಅನುಭವಿಸಿದ್ದಳು. ಆಕೆ ತನ್ನ ಸ್ವಸ್ಥತೆಯನ್ನು ದಶಕಗಳಿಂದಲೂ ನಿರೀಕ್ಷಿಸಿರಬಹುದು.ಆಕೆಯು ಕೇವಲ ದೈಹಿಕವಾದ ನೋವನ್ನು ಅನುಭವಿಸಿದ್ದಷ್ಟೇ ಅಲ್ಲದೆ ಭಾವನಾತ್ಮಕ ನೋವುಗಳನ್ನು ಸಹ ತನ್ನ ರಕ್ತಸ್ರಾವದ ದೆಸೆಯಿಂದ ಧರ್ಮಶಾಸ್ತ್ರದ ಪ್ರಕಾರ ಅಶುದ್ಧತೆಯ ದೆಸೆಯಿಂದಲೂ ನೋವನ್ನು ಅನುಭವಿಸಿದ್ದಳು. ಕಾಯುವಿಕೆ ಎಂಬುದು ಆಕೆಗೆ ಎರಡನೇ ಸ್ವಭಾವವಾಗಿಬಿಟ್ಟು ದಿನಗಳು ಕಳೆದಂತೆ ಆಕೆಗೆ ಪರಿಹಾರವು ದೂರಕ್ಕೆ ಹೋಗುತ್ತಿತ್ತು.
ಆದರೆ ಈ ದಶಕದ ಕಾಯುವಿಕೆಯಲ್ಲಿಯೇ ರಕ್ತಕುಸಮರೋಗದ ಸ್ತ್ರೀಯ ಆತ್ಮದಲ್ಲಿ ಇನ್ನೂ ಸಹ ಭರವಸೆ ಹೊಳೆಯುತಿತ್ತು ಎಂದು ಕಾಣುತ್ತದೆ. ಏಕೆಂದರೆ ಯೇಸು ಬಂದಾಗ ಆಕೆ ಮತ್ತೆ ತಾನು ಗುಣ ಹೊಂದುವೆನು ಎನ್ನುವಂತ ನಿರೀಕ್ಷೆ ಮತ್ತು ಭರವಸೆಯಿಂದ ಧೈರ್ಯವಾಗಿ ನಂಬಿಕೆಯಿಂದ ಆತನನ್ನು ಸಮೀಪಿಸಿದಳು. ಆಕೆಯು ಆ ದಿನದ ಬೆಳಗೆ ಎದ್ದು ಸ್ವತಹ ತನ್ನಲ್ಲೇ ತಾನು "ನಾನು ಇನ್ನೊಂದು ಸಾರಿ ಪ್ರಯತ್ನಿಸುವೆನು" ಎಂದು ಹೇಳಿಕೊಂಡಿರಬಹುದು.
ನೀವೂ ಸಹ ಇದೇ ಪ್ರಾರ್ಥನೆಯನ್ನು ಮಾಡುತ್ತಿದ್ದರೆ, ಬಹಳ ಕಾಲದಿಂದ ದೇವರಿಂದ ಆಗುವ ಸ್ವಸ್ತತೆಯನ್ನು ಎದುರು ನೋಡುತ್ತಿದ್ದರೆ, ನಿರೀಕ್ಷೆಯಿಂದಿರಿ ನಿಮ್ಮ ಪ್ರಯತ್ನವನ್ನು ಬಿಟ್ಟುಬಿಡಬೇಡಿರಿ. ಲೂಕ 18 ರಲ್ಲಿರುವ ಸ್ತ್ರೀಯಂತೆ ಇರಿ. ಆಕೆಯು ನ್ಯಾಯಕ್ಕೋಸ್ಕರ ಅನೇಕ ಬಾರಿ ಪ್ರಯತ್ನಿಸಿದಳು. ಆದರೂ ಅದು ಸಿಕ್ಕಿರಲಿಲ್ಲ. ಆದರೆ ಆಕೆಯು ನ್ಯಾಯ ಸಿಗುವ ವರೆಗೂ ಅಚಲವಾಗಿ ಪ್ರಯತ್ನಿಸುತ್ತಲೇ ಇದ್ದಳು. ಹಾಗಾಗಿ ಸ್ನೇಹಿತರೆ, ದೇವರನ್ನು ಸಮೀಪಿಸುವ ನಿಮ್ಮ ಪ್ರಯತ್ನವನ್ನು ಬಿಟ್ಟುಬಿಡಬೇಡಿರಿ.
ನಿಮಗಿಂದು ಯಾವುದೇ ಬದಲಾವಣೆ ಕಾಣದೇ ಇದ್ದರೂ ಸಹ ರಕ್ತ ಕುಸುಮ ರೋಗಿಯಾಗಿದ್ದ ಸ್ತ್ರೀಯು ಆತನಲ್ಲಿಟ್ಟಿದ್ದ ಅಚಲವಾದ ಭರವಸೆ ಹೊಂದಿದ್ದಂತೆ, ನೀವು ಸಹ ಭರವಸೆಯಿಂದ ಸಮೀಪಿಸಿರಿ. ಈ ರೀತಿಯ ನಂಬಿಕೆಯಲ್ಲಿರುವಂತೆ ಸಹಾಯ ಮಾಡಲು ಕರ್ತನನ್ನು ಬೇಡಿಕೊಳ್ಳಿರಿ. ಕರ್ತನು ನಮ್ಮ ಪರವಾಗಿ ಹೇಗೆ ಅಥವಾ ಯಾವಾಗ ಕಾರ್ಯ ಮಾಡುತ್ತಾನೆ ಎಂದು ನಮಗೆ ತಿಳಿಯದಿದ್ದರೂ ನಮ್ಮ ಬಯಕೆಗಳನ್ನೆಲ್ಲ ಆತ ಪೂರೈಸಬಲ್ಲ, ಸ್ವಸ್ಥಪಡಿಸಬಲ್ಲ, ಪುನಃ ಸ್ಥಾಪಿಸಬಲ್ಲಂತಹ ಆತನಲ್ಲಿರುವ ಶಕ್ತಿಯನ್ನು ನಂಬುತ್ತ ಆತನ ಹಸ್ತವು ನಮ್ಮ ಕಡೆಗೆ ಚಾಚುವುದನ್ನು ನಿರೀಕ್ಷಿಸೋಣ.
ಹೇ! ಸೈತಾನನು ನಿಮ್ಮ ಮುಂದಿಡುವ ಎಲ್ಲಾ ಪರ್ಯಾಯವಾದ ಸಂಭವನೀಯ ತ್ವರಿತ ಪರಿಹಾರಗಳನ್ನು ಸುಟ್ಟು ಬೂದಿ ಮಾಡಬೇಕೆಂದು ನಾನು ಈ ಮುಂಜಾನೆಯಲ್ಲಿ ನಿಮಗೆ ಆಜ್ಞಾಪಿಸುತ್ತೇನೆ. ಈ ಎಲ್ಲಾ ಅಡ್ಡ ಆಕರ್ಷಣೆಗಳನ್ನು ಬಿಟ್ಟು ಬಿಟ್ಟು ದೇವರ ಮೇಲೆ ಮಾತ್ರವೇ ನಿಮ್ಮ ದೃಷ್ಟಿಯನ್ನು ಕೇಂದ್ರೀಕರಿಸಿ.
ನೀವು ಬಹಳ ಕಾಲದಿಂದಲೂ ಕಾಯುತ್ತಿದ್ದೀರಿ ಎಂಬುದು ನನಗೆ ತಿಳಿದಿದೆ. ಆದ್ದರಿಂದ ಇನ್ನೊಂದು ಹೆಜ್ಜೆಯನ್ನು ನೀವೇಕೆ ಇಡಬಾರದು? ಮತ್ತೊಮ್ಮೆ ಉಪವಾಸದಿಂದ ಪ್ರಾರ್ಥಿಸಿ, ಆರಾಧಿಸಿ ಮತ್ತೊಮ್ಮೆ ಆತನನ್ನು ಸಮೀಪಿಸಿ ಮತ್ತು ನೀವು ಕಾಲಕ್ರಮೇಣ ಮುಗುಳು ನಗೆ ಬೀರಲಾರಂಭಿಸುವಿರಿ ಎಂದು ನನಗೆ ಗೊತ್ತು.
ಪ್ರಾರ್ಥನೆಗಳು
ತಂದೆಯೇ, ಮತ್ತೊಮ್ಮೆ ಉಸ್ತುಕತೆಯಿಂದ ಮನಪೂರ್ವಕವಾಗಿ ನಿನ್ನನ್ನು ಸಮೀಪಿಸುವ ಕೃಪೆಯನ್ನು ಬೇಡುತ್ತಿದ್ದೇನೆ. ಎಲ್ಲಾ ಪರ್ಯಾಯ ಮಾರ್ಗಗಳನ್ನು ತೊರೆದು ನಿನ್ನನ್ನೇ ದೃಷ್ಟಿಸುವಂತೆ ಯೇಸು ನಾಮದಲ್ಲಿ ನನ್ನನ್ನು ಬಲಗೊಳಿಸು.ಆಮೇನ್.
Join our WhatsApp Channel
Most Read
● ಅಂತ್ಯಕಾಲದ 7 ಪ್ರಮುಖವಾದ ಪ್ರವಾದನಾ ಸೂಚನೆಗಳು : #1● ಪ್ರತಿಫಲಿಸಲು ಸಮಯ ತೆಗೆದುಕೊಳ್ಳುವುದು.
● ಈ ದಿನಗಳಲ್ಲಿ ಇದನ್ನು ಮಾಡಿರ
● ಆಟ ಬದಲಿಸುವವ
● ನಿಮ್ಮ ಆತ್ಮಿಕ ಶಕ್ತಿಯನ್ನು ನವೀಕರಿಸಿಕೊಳ್ಳುವುದು ಹೇಗೆ -3
● ಅಲೌಖಿಕತೆಯನ್ನು ಬೆಳೆಸಿಕೊಳ್ಳುವುದು
● ಅನುಕರಣೆ
ಅನಿಸಿಕೆಗಳು