ಅನುದಿನದ ಮನ್ನಾ
ಕೆಟ್ಟ ಆಲೋಚನೆಗಳ ಹೋರಾಟವನ್ನು ಗೆಲ್ಲುವುದು
Tuesday, 30th of July 2024
1
1
247
Categories :
ಬಿಡುಗಡೆ (Deliverance)
"ಅವರ ಆಲೋಚನೆಗಳ ಫಲ "(ಯೆರೆಮಿಯಾ 6:19). ದೇವರು ನಮ್ಮ ಆಲೋಚನೆಗಳನ್ನು ಕುರಿತು ಬಹಳ ಕಾಳಜಿ ವಹಿಸುವವನಾಗಿದ್ದಾನೆ. ಇದರ ಹಿಂದಿರುವ ಮುಖ್ಯ ಕಾರಣವೇನೆಂದರೆ ನಾವು ಏನನ್ನು ಆಲೋಚಿಸುತ್ತೇವೆಯೋ ಅದನ್ನೇ ಮಾಡುವವರಾಗಿರುತ್ತೇವೆ - ಅದು ಒಳ್ಳೆಯದಾಗಿರಲಿ ಅಥವಾ ಕೆಟ್ಟದಾಗಿರಲಿ.
#1.ಆಲೋಚನೆಗಳು ನಮ್ಮ ಜೀವಿತವನ್ನು ನಿಯಂತ್ರಿಸುತ್ತವೆ.
"ನೀವು ಹೇಗೆ ಆಲೋಚಿಸುತ್ತೀರೋ ಅದರ ಕುರಿತು ಜಾಗರೂಕರಾಗಿರ್ರಿ.. ನಿಮ್ಮ ಜೀವಿತವು ನಿಮ್ಮ ಆಲೋಚನೆಗಳಿಂದಲೇ ರೂಪಿಸಲ್ಪಡುತ್ತದೆ"(ಜ್ಞಾನೋಕ್ತಿ 4:23 GNT)
ನೀವು ಚಿಕ್ಕವರಿದ್ದಾಗ ಅಥವಾ ವಯಸ್ಕರಾದಾಗ ಯಾರಾದರೂ ಪದೇ ಪದೇ ನಿಮ್ಮನ್ನು ಸೋತವರೆಂದು, ಯಾವುದೇ ಕೆಲಸಕ್ಕೆ ಬಾರದವರೆಂದು ಎನ್ನುತ್ತಿದ್ದರೆ, ನೀವು ಆ ಆಲೋಚನೆಗಳು ತಪ್ಪಾಗಿದ್ದರೂ ಅದನ್ನೇ ಒಪ್ಪಿಕೊಂಡು ಬಿಟ್ಟಿದ್ದರೆ, ಆ ಆಲೋಚನೆಯೇ ನಿಮ್ಮ ಮುಂದಿನ ಜೀವಿತವನ್ನು ರೂಪಿಸಿರುತ್ತದೆ.
#2. ನಮ್ಮ ಮನಸ್ಸೇ ನಿಜವಾದ ಯುದ್ಧಭೂಮಿ
"ಕ್ರಿಸ್ತೀಯ ಜೀವನವೆಂದರೆ ಅದು ಆಟದ ಮೈದಾನವಲ್ಲ, ಅದೊಂದು ಯುದ್ಧ ಭೂಮಿಯಾಗಿದೆ" ಎಂದು ಒಬ್ಬರು ಸರಿಯಾಗಿಯೇ ಹೇಳಿದ್ದಾರೆ. ಈ ಯುದ್ಧಭೂಮಿಯು ಯಾವುದೋ ಒಂದು ದೇಶದಲ್ಲಿರದೇ ನಮ್ಮ ಮನಸ್ಸಿನೊಳಗೇ ಇರುತ್ತದೆ.
ಅನೇಕರು ತಾವು ಹೋರಾಡುತ್ತಿರುವ ಈ ಮಾನಸಿಕ ಹೋರಾಟದ ದೆಸೆಯಿಂದ ಮಾನಸಿಕವಾಗಿ ಬಳಲಿ ಹೋಗಿ ಹತಾಶರಾಗಿ ತಮ್ಮ ಜೀವಿತವನ್ನೇ ಕೈ ಚೆಲ್ಲುವ ಆಲೋಚನೆಯಲ್ಲಿ ಇರುತ್ತಾರೆ. ನಿಮ್ಮ ಮನಸ್ಸೇ ನಿಮ್ಮ ಬಹುದೊಡ್ಡ ಆಸ್ತಿಯಾಗಿದೆ. ಸೈತಾನನು ಯಾವಾಗಲೂ ನಿಮ್ಮ ಈ ಬಹುದೊಡ್ಡ ಆಸ್ತಿಯನ್ನೇ ಬಯಸುವವನಾಗಿದ್ದಾನೆ!
ಗಮನಿಸಿ: ಕರ್ತನಾದ ಯೇಸು ಕ್ರಿಸ್ತನು ಮನುಷ್ಯನನ್ನು ಕೆಡಿಸಲು ಮನುಷ್ಯನ ಹೃದಯದೊಳಗಿಂದ ಹೊರಡುವ ಮೊದಲ ಸಂಗತಿ ಎಂದರೆ ಕೆಟ್ಟ ಆಲೋಚನೆಗಳೆಂದು ಪಟ್ಟಿಕರಿಸುತ್ತಾನೆ.
"ಒಳಗಿನಿಂದ ಅಂದರೆ ಮನುಷ್ಯರ ಮನಸ್ಸಿನೊಳಗಿಂದ [22] ಸೂಳೆಗಾರಿಕೆ ಕಳ್ಳತನ ಕೊಲೆ ಹಾದರ ದ್ರವ್ಯಾಶೆ ಕೆಡುಕುತನ ಮೋಸ ಬಂಡತನ ಹೊಟ್ಟೇಕಿಚ್ಚು ಬೈಗಳು ಸೊಕ್ಕು ಬುದ್ಧಿಗೇಡಿತನ ಇವೇ ಮೊದಲಾದವುಗಳ ಕೆಟ್ಟ ಆಲೋಚನೆಗಳು ಹೊರಡುತ್ತವೆ. [23] ಈ ಕೆಟ್ಟ ವಿಷಯಗಳೆಲ್ಲಾ ಒಳಗಿನಿಂದ ಹೊರಟು ಮನುಷ್ಯನನ್ನು ಹೊಲೆಮಾಡುತ್ತವೆ ಅಂದನು."(ಮಾರ್ಕ 7:21-23)
#3. ನಿಮ್ಮ ಮನಸ್ಸೇ ಸಮಾಧಾನಕ್ಕೆ ಇರುವ ಕೀಲಿಕೈಯಾಗಿದೆ
"ಸ್ಥಿರಚಿತ್ತನನ್ನು ಶಾಂತಿಯಲ್ಲಿ ನೆಲೆಗೊಳಿಸಿ ಕಾಯುವಿ; ಅವನಿಗೆ ನಿನ್ನಲ್ಲಿ ಭರವಸವಿದೆ. "(ಯೆಶಾಯ 26:3)
ನಮ್ಮ ಆಲೋಚನೆಗಳನ್ನು ನಮ್ಮ ಪರಿಸ್ಥಿತಿಗಳ ಮೇಲೆ ಇಡುವ ಬದಲು ಕರ್ತನ ಮೇಲೆ ಇರಿಸುವುದಾದರೆ, ಪರಿಪೂರ್ಣವಾದಂತಹ ಶಾಂತಿಯು ನೈಜವಾಗಿ ನಮಗೆ ದೊರಕುವಂತದ್ದಾಗಿದೆ ಎಂಬುದನ್ನು ಗಮನಿಸಿ.
ಹಾಗೆಯೇ ಮಾನಸಿಕ ಹೋರಾಟವನ್ನು ಗೆಲ್ಲಲು ದೇವರನ್ನು ಮೆಚ್ಚಿಸುವ ಸಂಗತಿಗಳಿಂದ ನಮ್ಮ ಮನಸ್ಸನ್ನು ತುಂಬಿಸಬೇಕು. ಇದಕ್ಕಾಗಿಯೇ ದೇವರ ವಾಕ್ಯವನ್ನು ಓದುವುದು ಧ್ಯಾನಿಸುವುದು ಬಹಳ ಮುಖ್ಯವಾಗಿದೆ. ಒಬ್ಬರು ನನ್ನನ್ನು "ನಾನು ದಿನಕ್ಕೆ ಎಷ್ಟು ಅಧ್ಯಾಯಗಳನ್ನು ಓದಬೇಕು?" ಎಂದು ಕೇಳಿದರು. ನಮ್ಮ ಕಣ್ಣ ಮುಂದೆ ಬಗೆ ಬಗೆಯ ರುಚಿಯಾದ ಆಹಾರವಿದ್ದರೆ ನಮ್ಮಲ್ಲಿ ಬಹುತೇಕರು ತೃಪ್ತಿಯಾಗುವಷ್ಟು ತಿನ್ನುತ್ತೇವೆ ಅಲ್ಲವೇ? ಅದೇ ರೀತಿ ದೇವರ ವಾಕ್ಯದ ವಿಚಾರದಲ್ಲೂ ಸಹ ಇರಬೇಕು. ನಿಮ್ಮ ಆತ್ಮದಲ್ಲಿ ಸಂತೃಪ್ತಿ ಅನುಭವಿಸುವವರೆಗೂ ನೀವು ಓದುತ್ತಿರಬೇಕು.
ಇಂದಿನಿಂದಲೇ ನಿಮ್ಮ ಮನಸ್ಸನ್ನೂ ಒಳಗೊಂಡು ನಿಮ್ಮ ಸಂಪೂರ್ಣ ಜೀವಿತವನ್ನು ಯೇಸುಕ್ರಿಸ್ತನಿಗೆ ಒಪ್ಪಿಸಿಕೊಡಿ. ಆಗ ನೀವು ಜಯದಲ್ಲೇ ನಡೆಯುವರಾಗುವಿರಿ.
ಅರಿಕೆಗಳು
ನನ್ನೆಲ್ಲಾ ಆಲೋಚನೆಗಳನ್ನು ಯೇಸುವಿನ ರಕ್ತದಲ್ಲಿ ಮರೆಮಾಚುತ್ತೇನೆ. ನನ್ನೊಳಗೆ ದುಷ್ಟ ಆಲೋಚನೆಗಳನ್ನು ಬಿತ್ತಲು ಯತ್ತಿಸುವ ಎಲ್ಲಾ ಬಲಗಳನ್ನು ಯೇಸು ನಾಮದಲ್ಲಿ ಬಂಧಿಸುತ್ತೇನೆ. ಯಾವುದೇ ಬಲವು ನನ್ನನ್ನು ಹಾಳು ಮಾಡಲು ಯತ್ನಿಸುತ್ತಿದ್ದರೆ ಅವೆಲ್ಲವೂ ಯೇಸುನಾಮದಲ್ಲಿ ಸುಟ್ಟು ಬೂದಿಯಾಗಲಿ. ನಾನು ದೇವರ ವಾಕ್ಯವನ್ನು ಪ್ರತಿದಿನವೂ ಧ್ಯಾನಿಸುತ್ತೇನೆ. ದೇವರ ವಾಕ್ಯಗಳು ನನ್ನಲ್ಲಿ ಕಾರ್ಯ ಮಾಡುವಂತೆ ಯೇಸು ನಾಮದಲ್ಲಿ ನಾನು ಅನುಮತಿಸುತ್ತೇನೆ. ಆಮೆನ್.
Join our WhatsApp Channel
Most Read
● ಅದ್ಭುತಗಳಲ್ಲಿ ಕಾರ್ಯ ಮಾಡುವುದು - ಕೀಲಿಕೈ #2● ಆತನ ಬಲದ ಉದ್ದೇಶ.
● ಕೆಂಪು ದೀಪದ ಎಚ್ಚರಿಕೆ ಗಂಟೆ
● ದಿನ 17:40 ದಿನಗಳ ಉಪವಾಸ ಪ್ರಾರ್ಥನೆ.
● ಎರಡು ಸಾರಿ ಸಾಯಬೇಡಿರಿ
● ಸರ್ವಬೀಗದ ಕೈ
● ದಿನ 01:40 ದಿನಗಳ ಉಪವಾಸ ಹಾಗೂ ಪ್ರಾರ್ಥನೆ
ಅನಿಸಿಕೆಗಳು