ಅನುದಿನದ ಮನ್ನಾ
ಪ್ರಬುದ್ಧತೆಯು ಜವಾಬ್ದಾರಿಯಿಂದ ಆರಂಭವಾಗುತ್ತದೆ.
Saturday, 3rd of August 2024
3
1
201
Categories :
ಜವಾಬ್ದಾರಿ (Responsibility)
ಪ್ರಬುದ್ಧತೆ (Maturity)
"ಶ್ರೇಷ್ಠ ಹೋರಾಟವನ್ನು ಮಾಡಿದ್ದೇನೆ, ನನ್ನ ಓಟವನ್ನು ಕಡೆಗಾಣಿಸಿದ್ದೇನೆ, ಕ್ರಿಸ್ತನಂಬಿಕೆಯನ್ನು ಕಾಪಾಡಿಕೊಂಡಿದ್ದೇನೆ;"(2 ತಿಮೊಥೆಯನಿಗೆ 4:7)
ನೀವಿಂದು ಪ್ರಸ್ತುತ ನಿಮ್ಮ ಮನೆಯಲ್ಲಿ, ಕೆಲಸದ ಸ್ಥಳದಲ್ಲಿ, ಸಭೆಯಲ್ಲಿ ಮಾಡುತ್ತಿರುವ ಕೆಲಸಗಳು ನಿತ್ಯಕರ್ಮದಂತೆಯೂ ನೀರಸವಾಗಿಯೂ ಆದರೆ ಬೇರೆಯವರು ಮಾಡುತ್ತಿರುವಂತಹ ಕೆಲಸಗಳು ರೋಮಾಂಚನಕಾರಿಯಾಗಿ ಕಾಣುತ್ತಿರಬಹುದು.ಆದರೂ ಸತ್ಯವೇದ ಹೇಳುವುದೇನೆಂದರೆ "ನಿನ್ನ ಕೈಗೆ ಸಿಕ್ಕಿದ ಕೆಲಸವನ್ನೆಲ್ಲಾ ನಿನ್ನ ಪೂರ್ಣ ಶಕ್ತಿಯಿಂದ ಮಾಡು; ನೀನು ಸೇರಬೇಕಾದ ಪಾತಾಳದಲ್ಲಿ ಯಾವ ಕೆಲಸವೂ ಯುಕ್ತಿಯೂ ತಿಳುವಳಿಕೆಯೂ ಜ್ಞಾನವೂ ಇರುವದಿಲ್ಲ."ಎಂದು (ಪ್ರಸಂಗಿ 9:10)
ನೀವು ಯಾವುದಾದರೂ ಸೇವೆ ಮಾಡಲು ನಿಮಗೆ ಒಂದು ಪದವಿಯನ್ನು ಹೆಸರನ್ನು ಎದುರು ನೋಡಬೇಡಿರಿ. ಅವುಗಳು ಯಾವುದೇ ಇಲ್ಲದೆ ಹೋದರೂ ಸೇವೆಯನ್ನು ಮಾಡುತ್ತಿರಬೇಕು- ಅದುವೇ ಜವಾಬ್ದಾರಿ.
ಅರಸನ ರಾಜ್ಯದ ಸೈನ್ಯಕ್ಕಾಗಿ ಹೋರಾಡುತ್ತಿದ್ದ ತನ್ನ ಸಹೋದರರ ಕಾರ್ಯದಷ್ಟು, ತನಗೆ ತನ್ನ ತಂದೆಯು ವಹಿಸಿದ್ದ ಕುರಿಗಳನ್ನು ಕಾಯುವ ಕೆಲಸವು ಅಷ್ಟೇನೂ ರೋಮಾಂಚನಕಾರಿಯಾಗಿರದಿದ್ದರೂ ದಾವೀದನು ತನ್ನ ಕುರಿಕಾಯುವ ಕೆಲಸದಲ್ಲಿ ಮಹತ್ತರವಾದ ಜವಾಬ್ದಾರಿಯನ್ನು ತೋರಿಸಿದನು. ಆ ಒಂದು ಕುಟುಂಬದಲ್ಲಿ ಎಂಟು ಜನ ಗಂಡು ಮಕ್ಕಳು ಇದ್ದರೂ ಅದರಲ್ಲಿ ಅತ್ಯಂತ ಕಿರಿಯವನೊಬ್ಬನು ಬಹಳ ಆಸಕ್ತಿಯಿಂದ ತನ್ನ ಕುಟುಂಬದ ಜವಾಬ್ದಾರಿಯನ್ನು ತೆಗೆದುಕೊಂಡಿದ್ದು ನನಗೆ ನಿಜಕ್ಕೂ ಆಶ್ಚರ್ಯ ಸಂಗತಿ ಎನಿಸುತ್ತದೆ.
ದಾವಿದನು ಅವನಿಗೆ ಅರಸನ ಸೈನ್ಯದ ಬಳಿ ಹೋಗುವ ಕೆಲಸ ದೊರೆತಾಗಲು ತನ್ನ ಕುರಿಗಳನ್ನು ಹಾಗೆ ಬಿಟ್ಟುಬಿಡದೆ, ಅದರ ಜವಾಬ್ದಾರಿಕೆಯನ್ನು ತನ್ನ ಸಹೋದರರಿಗೆ ಒಪ್ಪಿಸದೆ ಬದಲಾಗಿ ತನ್ನ ಕುರಿಗಳಿಗೆ ಒಬ್ಬ ಕುರುಬನನ್ನು ಏರ್ಪಡಿಸಿದನು.
"ದಾವೀದನು ಮರುದಿನ ಬೆಳಿಗ್ಗೆ ಎದ್ದು ಕಾಯುವವನಿಗೆ ಕುರಿಗಳನ್ನು ಒಪ್ಪಿಸಿ ತನ್ನ ತಂದೆಯಾದ ಇಷಯನು ಹೇಳಿದವುಗಳನ್ನು ತೆಗೆದುಕೊಂಡು ಸೈನ್ಯವು ಹೊರಟು ಯುದ್ಧಕ್ಕಾಗಿ ಆರ್ಭಟಿಸುವ ಹೊತ್ತಿನಲ್ಲಿ ಪಾಳೆಯದ ಬಂಡಿಗಳು ನಿಂತಿದ್ದ ಸ್ಥಳಕ್ಕೆ ಬಂದನು." ಎಂದು 1 ಸಮುವೇಲನು 17:20 ಹೇಳುತ್ತದೆ.
ನೀವು ನಿಮಗೆ ನೀರಸ ಎನಿಸುವಂತಹ ನಿಮ್ಮ ನಿತ್ಯ ಕೆಲಸಗಳನ್ನು ಪ್ರಾಮಾಣಿಕತೆಯಿಂದಲೂ, ಶ್ರದ್ಧೆಯಿಂದಲೂ ಮಾಡುತ್ತಿದ್ದರೆ ಅದೇ ನಿಮ್ಮಲ್ಲಿ "ಜವಾಬ್ದಾರಿ" ಎನ್ನುವ ಸ್ವಭಾವವನ್ನು ಹುಟ್ಟಿಸುತ್ತದೆ.ಮತ್ತು ಅದು ನಿಮ್ಮಲ್ಲಿ ರಕ್ತಗತವಾಗಿಬಿಡುತ್ತದೆ.
ದೇವರ ವಾಕ್ಯ ಸ್ಪಷ್ಟವಾಗಿ ಹೇಳುವುದೇನೆಂದರೆ
"ಸ್ವಲ್ಪವಾದದ್ದರಲ್ಲಿ ನಂಬಿಗಸ್ತನಾದವನು ಬಹಳವಾದದ್ದರಲ್ಲಿಯೂ ನಂಬಿಗಸ್ತನಾಗುವನು; ಸ್ವಲ್ಪವಾದದ್ದರಲ್ಲಿ ಅನ್ಯಾಯಗಾರನಾದವನು ಬಹಳವಾದದ್ದರಲ್ಲಿಯೂ ಅನ್ಯಾಯಗಾರನಾಗುವನು."ಎಂದು (ಲೂಕ 16:10)
ಎರಡನೆಯದಾಗಿ ನಿಮಗೆ ಸೇವೆ ಮಾಡುವ ಅವಕಾಶ ಸಿಕ್ಕಾಗಲೆಲ್ಲಾ ನೀವು ಅನ್ಯರ ಮೆಲೇ ಅವಲಂಬಿತಾರಾಗದೇ ಅನ್ಯರು ನಿಮ್ಮ ಮೇಲೆ ಅವಲಂಬಿತರಾಗುವಂತೆ ನಿಮ್ಮ ಕೈಲಾದಷ್ಟು ಅತ್ಯುತ್ತಮವಾಗಿ ಆ ಕೆಲಸವನ್ನು ಮಾಡಿ ಮುಗಿಸಿ. ಎಂದಿಗೂ ಸಹ ಕೆಲಸವನ್ನು ಆರಂಭಿಸುವ ಆದರೆ ಅದನ್ನು ಪೂರೈಸದೇ ಹೋಗುವಂತಹ ವ್ಯಕ್ತಿಯಾಗಬೇಡಿರಿ. ಅದರ ಬದಲು ಕೈ ಹಾಕಿದ ಕೆಲಸವನ್ನು ಅತ್ಯುತ್ತಮವಾಗಿ ಮುಗಿಸುವ ವ್ಯಕ್ತಿಯಾಗಿರಿ.
ಇವುಗಳೇ ನಿಮ್ಮನ್ನು ಗಣ್ಯ ವ್ಯಕ್ತಿಗಳ ಮುಂದಕ್ಕೆ ತರುವ ಮತ್ತು ನಿಮಗೆ ಶಾಶ್ವತವಾದ ಯಶಸ್ಸನ್ನು ನೀಡುವ ಗುಣಲಕ್ಷಣಗಳಾಗಿವೆ. ಇದು ನೀವು ಎಲ್ಲಿಗೆ ಹೋದರೂ ನಿಮಗೆ ಯಶಸ್ಸನ್ನು ನೀಡುವುದು ಮಾತ್ರವಲ್ಲದೆ ನೀವು ಹೇಳುವುದನ್ನು ನೀವು ಮಾಡುವುದನ್ನು ಜನರು ನೋಡಿ ನಿಮ್ಮನ್ನು ನಂಬಲು ಆರಂಭಿಸುವಂತೆ ಮಾಡುತ್ತದೆ. ಇದು ನಮ್ಮ ಕರ್ತನಾದ ಯೇಸು ಕ್ರಿಸ್ತನ ಸುವಾರ್ತೆಯನ್ನು ಇನ್ನು ಹೆಚ್ಚು ಪರಿಣಾಮಕಾರಿಯಾಗಿಯೂ ಪ್ರಭಾವದಿಂದಲೂ ಸಾರಲು ನಿಮಗೆ ಸಹಾಯ ಮಾಡುತ್ತದೆ.
ಆದುದರಿಂದ ನಿಮ್ಮ ಜೀವನದ ಹಾದಿಯಲ್ಲಿ ಸಿಗುವ ಯಾವುದೇ ಜವಾಬ್ದಾರಿಗಳನ್ನು ಅವು ಲೋಕದ ದೃಷ್ಟಿಯಲ್ಲಿ ಎಷ್ಟು ಕೀಳಾಗಿದ್ದರೂ ಎಷ್ಟು ನೀರಸವಾಗಿದ್ದರೂ ಸರಿಯೇ ಅವುಗಳನ್ನು ತಿರಸ್ಕರಿಸಬೇಡಿರಿ. ಅವುಗಳ ಮೂಲಕ ನಿಮ್ಮ ಉಜ್ವಲವಾದ ಭವಿಷ್ಯಕ್ಕಾಗಿ ದೇವರು ನಿಮ್ಮನ್ನು ತರಬೇತುಗೊಳಿಸುತ್ತಿದ್ದಾನೆ ಎಂಬುದನ್ನು ಎಂದಿಗೂ ಮರೆಯಬೇಡಿರಿ.
ಕಡೆಯದಾಗಿ, ನೀವು ಈ ಜವಾಬ್ದಾರಿಗಳ ಭಾರದಡಿಯಲ್ಲಿ ಸಿಕ್ಕಿಕೊಳ್ಳಬೇಕಾದ ಅವಶ್ಯಕತೆ ಇಲ್ಲ. ಅದರ ಬದಲಾಗಿ ನೀವು ಅದನ್ನು ನಿಭಾಯಿಸಲು ದೇವರ ಮೇಲೆ ಆಧಾರಗೊಳ್ಳುವುದನ್ನು ಕಲಿಯಬೇಕು. ಹೊರಗಿನಿಂದ ಬರುವ ಎಲ್ಲಾ ಪ್ರಕ್ಷುಬ್ದತೆಗಳಿಗಿಂತಲೂ ನಿಮ್ಮೊಳಗೆ ದೇವರ ಶಾಂತಿಯು ಹೆಚ್ಚು ಬಲಗೊಳ್ಳುವವರೆಗೂ ಅನುದಿನವೂ ಪ್ರಾರ್ಥನೆ, ಆರಾಧನೆ ಮತ್ತು ದೇವರ ವಾಕ್ಯದಲ್ಲಿ ನಿಮ್ಮನ್ನು ತೊಡಗಿಸಿಕೊಳ್ಳುವ ಮೂಲಕ ನೀವು ಇದನ್ನು ಸಾಧಿಸಬಹುದು.
ಇದಕ್ಕಾಗಿಯೇ ಕರ್ತನಾದ ಯೇಸು ಹೀಗೆ ಹೇಳಿದ್ದಾನೆ "ಶಾಂತಿಯನ್ನು ನಿಮಗೆ ಬಿಟ್ಟುಹೋಗುತ್ತೇನೆ, ನನ್ನಲ್ಲಿರುವಂಥ ಶಾಂತಿಯನ್ನು ನಿಮಗೆ ಕೊಡುತ್ತೇನೆ; ಲೋಕವು ಕೊಡುವ ರೀತಿಯಿಂದ ನಾನು ನಿಮಗೆ ಕೊಡುವದಿಲ್ಲ. ನಿಮ್ಮ ಹೃದಯವು ಕಳವಳಗೊಳ್ಳದಿರಲಿ, ಹೆದರದಿರಲಿ."(ಯೋಹಾನ 14:27)
ಇನ್ನು ಹೆಚ್ಚಿನ ಅಧ್ಯಯನಕ್ಕಾಗಿ "ಬಿಬ್ಲಿಕಲ್ ರೆಸ್ಪಾನ್ಸಿಬಿಲಿಟಿ ಆಫ್ ಅ ಶೀಪ್" ಎನ್ನುವ ಮೈಕಲ್ ಫರ್ನಾಂಡಿಸ್ ರವರ ಯೂಟ್ಯೂಬ್ ವಿಡಿಯೋ ನೋಡಿರಿ.
ಪ್ರಾರ್ಥನೆಗಳು
ತಂದೆಯೇ, ನಾನು ನಿನ್ನ ದೃಷ್ಟಿಯಲ್ಲಿ ಅಮೂಲ್ಯವಾದ ಸೇವಕ/ಸೇವಕಿಯಾಗಿಯೂ ಇರುವುದಕ್ಕಾಗಿ ನಿನಗೆ ಸ್ತೋತ್ರ. ನೀನು ನನ್ನಲ್ಲಿ ಭರವಸೆ ಇಟ್ಟು ಅನಗ್ರಹಿಸಿರುವ ಎಲ್ಲಾ ಜವಾಬ್ದಾರಿಗಳನ್ನು ನಿನ್ನ ಮಹಿಮೆಗಾಗಿ ಕಾರ್ಯ ಮಾಡುವಂತೆ ಯೇಸು ನಾಮದಲ್ಲಿ ನನಗೆ ಕಲಿಸಿಕೊಡು. ಆಮೇನ್.
Join our WhatsApp Channel
Most Read
● ಕರ್ತನ ಆಲೋಚನೆಯನ್ನು ಕೇಳಬೇಕಾದ ಅಗತ್ಯತೆ● ಪರಿಶೋಧನೆಯ ಸಮಯದಲ್ಲಿ ನಂಬಿಕೆ
● ನೀವು ಪ್ರಾರ್ಥಿಸುವಿರಿ ಆತನು ನಿಮಗೆ ಕಿವಿಗೊಡುವನು
● ಅಭಿಷೇಕಕ್ಕಿರುವ ಪ್ರಪ್ರಥಮ ಶತೃ
● ಯುದ್ಧಕ್ಕಾಗಿ ತರಬೇತಿ.
● ದೇವರ ಆಲಯದಲ್ಲಿರುವ ಸ್ತಂಭಗಳು
● ಜನರು ನೆಪಗಳನ್ನು ಹೇಳಲು ಇರುವ ಕಾರಣಗಳು : ಭಾಗ 2
ಅನಿಸಿಕೆಗಳು