ಅನುದಿನದ ಮನ್ನಾ
ಸಿಟ್ಟಿನ ಬಲೆಯಿಂದ ದೂರ ಉಳಿಯುವುದು
Saturday, 10th of August 2024
3
1
281
Categories :
ಅಪರಾಧ (offence)
ಜನರು ಬಹುಬೇಗನೆ ಸಿಟ್ಟುಗೊಳ್ಳುವಂತ ಅತಿ ಸೂಕ್ಷ್ಮವಾದ ಲೋಕದಲ್ಲಿ ನಾವಿಂದು ವಾಸಿಸುತ್ತಿದ್ದೇವೆ. ಕ್ರೈಸ್ತರು ಸಹ ಈ ಒಂದು ಸಿಟ್ಟಿನ ಬಲೆಯಲ್ಲಿ ಸಿಲುಕಿಕೊಂಡು ಕ್ರಿಸ್ತನ ದೇಹದಲ್ಲಿ ಕಲಹಗಳನ್ನು -ವಿಭಜನೆಯನ್ನು ತರುತ್ತಿದ್ದಾರೆ.
ಕರ್ತನಾದ ಯೇಸು ಅಂತ್ಯಕಾಲದ ಸೂಚನೆಗಳನ್ನು ಹೇಳುತ್ತಾ ಒಂದು ವಿಚಾರವನ್ನು ಸ್ಪಷ್ಟವಾಗಿ ಹೇಳಿದ್ದೇನೆಂದರೆ..."ಆಗ ಅನೇಕರು ಹಿಂಜರಿದು ಒಬ್ಬರನ್ನೊಬ್ಬರು ಹಿಡುಕೊಡುವರು; ಒಬ್ಬರ ಮೇಲೊಬ್ಬರು ದ್ವೇಷ ಮಾಡುವರು."(ಮತ್ತಾಯ 24:10)ಎಂದು.
ಈ "ಸಿಟ್ಟು" (ಸ್ಕಾಂಡಾಲಿಜೋ) ಎನ್ನುವ ಗ್ರೀಕ್ ಪದದ ಅಕ್ಷರಶಃ ಅರ್ಥ ಎಂದರೆ "ಪಾಪ ಮಾಡಲು ಹೆಜ್ಜೆ ಇಡುವಂತದ್ದು" ಎಂದು.ಇದು "ಸ್ಕ್ಯಾಂಡಲ್" ಎಂಬ ಇಂಗ್ಲಿಷ್ ಪದದ ಮೂಲವೂ ಹೌದು.
"ಅದೇ ಪ್ರಕಾರ ಬೇರೆ ಕೆಲವರು ವಾಕ್ಯವನ್ನು ಕೇಳಿದ ಕೂಡಲೆ ಸಂತೋಷದಿಂದ ಅದನ್ನು ಸ್ವೀಕರಿಸುತ್ತಾರೆ; ತಮಗೆ ಬೇರಿಲ್ಲದ ಕಾರಣ ಇವರು ಸ್ವಲ್ಪ ಕಾಲ ಮಾತ್ರವೇ ಇದ್ದು ಬಳಿಕ ಆ ವಾಕ್ಯದ ನಿವಿುತ್ತವಾಗಿ ಸಂಕಟವಾಗಲಿ ಹಿಂಸೆಯಾಗಲಿ ಬಂದರೆ ಬೇಗ ಎಡವಿಬೀಳುತ್ತಾರೆ; ಇವರೇ ಬೀಜಬಿದ್ದ ಬಂಡೆಯ ನೆಲವಾಗಿರುವವರು."(ಮಾರ್ಕ 4:16-17)
ದೇವರ ವಾಕ್ಯವನ್ನು ಕೇಳಿ, ಅದನ್ನು ಸ್ವೀಕರಿಸಿ, ಒಪ್ಪಿಕೊಂಡು ಇನ್ನೂ ಹೆಚ್ಚಾಗಿ ಹೇಳುವುದಾದರೆ ಬಹಳ ಸಂತೋಷದಿಂದ ಸ್ವಾಗತಿಸುವಂತಹ ಜನರಿದ್ದಾರೆ. ಆ ರೀತಿಯಾಗಿ ಸ್ವೀಕರಿಸಿಕೊಂಡ ಹೃದಯದಾಳದಲ್ಲಿ ಬೇರೂರಿದ ವಾಕ್ಯವನ್ನು ತೆಗೆದು ಬಿಡುವುದಕ್ಕೆ ಸೈತಾನನಿಗೆ ಸಾಧ್ಯವೇ ಇಲ್ಲ.
ನಿಮ್ಮ ಹೃದಯದಲ್ಲಿರುವ ವಾಕ್ಯವನ್ನು ಹೊರತೆಗೆಯಲು ನಿಮ್ಮ ಮನವೊಲಿಸುವಿಕೆಯಿಂದ ಮಾತ್ರವೇ ಸಾಧ್ಯ.! ಅದನ್ನು ಸೈತಾನನು ಹೇಗೆ ಮಾಡುತ್ತಾನೆ? ಯಾರಿಗಾದರೂ ಅಥವಾ ಯಾವುದಾದರೂ ರೀತಿಯಲ್ಲಿ ಮನ ನೋಯುವಂತೆ ಮಾಡಿ ಅದರ ಮೂಲಕ ನಿಮ್ಮ ಮನವೊಲಿಸುವ ಕಾರ್ಯ ಮಾಡಿ ಇದನ್ನು ತೆಗೆಯಲು ಪ್ರಯತ್ನಿಸುತ್ತಾನೆ. ಇದುವೇ ನಿಮ್ಮ ಹೃದಯದಲ್ಲಿ ಹುದುಗಿರುವ ದೇವರ ವಾಕ್ಯವನ್ನು ಅಗೆದು ತೆಗೆಯಲು ಸೈತಾನನು ಬಳಸುವ ಒಂದು ಪ್ರಮುಖ ತಂತ್ರವಾಗಿದೆ.
ನೋಡಿರಿ, ಸೈತಾನನು ನೀವು ಸಿಟ್ಟುಗಳುವಂತೆ ಪ್ರಚೋದಿಸಿದರೆ ನಿಮ್ಮ ಸ್ವಂತ ಬೆಳೆಯನ್ನು ನೀವೇ ನಿಮ್ಮ ಕೈಯಾರೆ ನಾಶಪಡಿಸುತ್ತೀರಿ. ನೀವು ಬೇಸರಗೊಳ್ಳುವುದನ್ನೇ ಆಯ್ಕೆ ಮಾಡಿಕೊಂಡಾಗ ಎಡವಿ ಬೀಳುವವರಾಗಿರುತ್ತೀರಿ. ತಪ್ಪು ಹೆಜ್ಜೆ ಇಟ್ಟು ತಪ್ಪಾದ ಕಾರ್ಯಗಳನ್ನು ಮಾಡುವವರಾಗುತ್ತೀರಿ. ಸಿಟ್ಟುಗೊಳ್ಳುವುದರ ಫಲಿತಾಂಶವೆಂದರೆ "ಮುಗ್ಗರಿಸಿ ಬೀಳುವುದು" ಎಂದು ಆಂಪ್ಲಿಫೈಡ್ ಸತ್ಯವೇದ ಹೇಳುತ್ತದೆ.
ಸಿಟ್ಟನ್ನು ಮನಸ್ಸಿನಲ್ಲಿಟ್ಟುಕೊಳ್ಳುವ ವ್ಯಕ್ತಿಯಲ್ಲಿ, ಅವರ ಆತ್ಮಿಕ ನಡೆಯು ಆಂತರಿಕವಾಗಿ ಒಣಗಲು ಆರಂಭವಾಗುತ್ತದೆ. ಅವನು ಅಥವಾ ಅವಳು ಹೊರಗೆ ಹಾಗೆ ಕಾಣದಿದ್ದರೂ ಆಂತರಿಕವಾಗಿ ಅವರ ಆತ್ಮಿಕ ಸತ್ವವು ಒಣಗುತ್ತಾ ಹೋಗುತ್ತಿರುತ್ತದೆ. ಸಿಟ್ಟನ್ನು ಹೊತ್ತುಕೊಂಡ ವ್ಯಕ್ತಿಗೆ ಮನ ಶಾಂತಿ ಇರುವುದಿಲ್ಲ. ಸಿಟ್ಟನ್ನು ಮನಸ್ಸಿನಲ್ಲಿಟ್ಟುಕೊಳ್ಳುವಂಥದ್ದು ಹೃದಯ ಕಾಠಿಣ್ಯತೆಗೆ ಕಾರಣವಾಗುತ್ತದೆ.
ಈ ಸಿಟ್ಟಿನ ಬಲೆಯಿಂದ ನಾವು ಹೇಗೆ ಮುಕ್ತರಾಗಬಹುದು? ಕೀರ್ತನೆಗಳು 119:165 ರಲ್ಲಿ ನಾವು ನೋಡುವಂತೆ..
" ನಿನ್ನ ಧರ್ಮಶಾಸ್ತ್ರವನ್ನು ಪ್ರೀತಿಸುವವರಿಗೆ ಸಂಪೂರ್ಣ ಸಮಾಧಾನವಿರುತ್ತದೆ; ಅಂಥವರಿಗೆ ವಿಘ್ನಕರವಾದದ್ದೇನೂ ಇರುವದಿಲ್ಲ."(ಕೀರ್ತನೆಗಳು 119:165)
ಇನ್ನೊಂದು ರೀತಿಯಲ್ಲಿ ಹೇಳುವುದಾದರೆ, ಪ್ರೀತಿಯಲ್ಲಿ ನಡೆಯುವವರನ್ನು ಸಿಟ್ಟು ಮುಗ್ಗರಿಸಿ ಬೀಳಿಸಲು ಸಾಧ್ಯವಿಲ್ಲ. ಯಾರು ದೇವರ ವಾಕ್ಯವನ್ನು ಪ್ರೀತಿಸುತ್ತಾರೋ ಅವರು ಅದನ್ನು ಕೈಗೊಂಡು ನಡೆಯುತ್ತಾರೆ. ಅವರು ದೇವರ ವಾಕ್ಯ ಏನನ್ನು ಹೇಳುತ್ತದೆಯೋ ಹಾಗೆ ಮಾಡುವವರಾಗಿರುತ್ತಾರೆ. ಹೀಗೆ ನಾವು ಸಿಟ್ಟಿನ ಬಲೆಗೆ ಬೀಳದಂತೆ ದೂರ ಉಳಿಯಬಹುದು.
ಪ್ರಾರ್ಥನೆಗಳು
ತಂದೆಯೇ, ಜೀವನದ ಸಮಸ್ಯೆಗಳಿಂದ ಮಾತನಾಡುವ ಪ್ರತಿಯೊಬ್ಬರ ಮಾತುಗಳಿಂದ ಉಂಟಾಗುವ ಬೇಸರಿಕೆ/ ಸಿಟ್ಟಿನಿಂದ ನನ್ನ ಹೃದಯವನ್ನು ಯೇಸು ನಾಮದಲ್ಲಿ ಕಾಯ್ದು ಕಾಪಾಡು. (ಮತ್ತಾಯ 18, ಜ್ಞಾನೋಕ್ತಿ 4:23)
ತಂದೆಯೇ ನನ್ನ ಹೃದಯದಲ್ಲಿರುವ ಎಲ್ಲಾ ರೀತಿಯ ಸಿಟ್ಟು ಬೇಸರಿಕೆಗಳನ್ನು ಯೇಸು ನಾಮದಲ್ಲಿ ನಿರ್ಮೂಲಗೊಳಿಸಿ ನಾಶ ಮಾಡು.
ತಂದೆಯೇ ನನ್ನ ಹೃದಯದಲ್ಲಿರುವ ಎಲ್ಲಾ ರೀತಿಯ ಸಿಟ್ಟು ಬೇಸರಿಕೆಗಳನ್ನು ಯೇಸು ನಾಮದಲ್ಲಿ ನಿರ್ಮೂಲಗೊಳಿಸಿ ನಾಶ ಮಾಡು.
Join our WhatsApp Channel
Most Read
● ಲಂಬಕೋನ ಹಾಗೂ ಸಮತಲದ ಕ್ಷಮಾಪಣೆ.● ಬದಲಾಗಲು ಇನ್ನೂ ತಡವಾಗಿಲ್ಲ
● ನಿಮ್ಮ ರೂಪಾಂತರವನ್ನು ತಡೆಯುತ್ತಿರುವುದೇನು ಎಂಬುದನ್ನು ತಿಳಿದುಕೊಳ್ಳಿರಿ.
● ಮಳೆಯಾಗುತ್ತಿದೆ
● ನಿರ್ಣಾಯಕ ಅಂಶವಾಗಿರುವ ವಾತಾವರಣದ ಒಳನೋಟ -3
● ದಿನ 36:40 ದಿನಗಳ ಉಪವಾಸ ಮತ್ತು ಪ್ರಾರ್ಥನೆ.
● ಇದರ ವ್ಯತ್ಯಾಸವು ಸ್ಪಷ್ಟವಾಗಿದೆ
ಅನಿಸಿಕೆಗಳು