ಅನುದಿನದ ಮನ್ನಾ
ನೀವು ಎಷ್ಟು ವಿಶ್ವಾಸಾರ್ಹರು?
Tuesday, 5th of November 2024
1
0
111
Categories :
ಗುಣ(character)
ನಿಷ್ಠೆ (Faithfulness)
ಒಂದು ದಿನ, ಕರ್ತನಾದ ಯೇಸು ತನ್ನ ಶಿಷ್ಯರಿಗೆ ತನ್ನನ್ನು ಶಿಲುಬೆಗೇರಿಸುವ ಸಮಯ ಬಂದಿದ್ದು ಆತನ ಎಲ್ಲಾ ಶಿಷ್ಯರು ಆತನನ್ನು ಬಿಟ್ಟು ಚದುರಿಹೋಗುತ್ತಾರೆ ಎಂದು ಹೇಳಿದನು .
"ಆಗ ಪೇತ್ರನು ಯೇಸುವಿಗೆ, “ಎಲ್ಲರೂ ನಿಮ್ಮನ್ನು ಬಿಟ್ಟು ಹೋದರೂ ನಾನು ನಿಮ್ಮನ್ನು ಬಿಟ್ಟು ಹೋಗುವುದಿಲ್ಲ,” ಎಂದನು. (ಮತ್ತಾಯ 26:33)
ಆದರೆ ಕೆಲವೇ ದಿನಗಳಲ್ಲಿಯೇ , ಪೇತ್ರನು ಹೇಳಿದಂತೆ ತನ್ನ ಮಾತನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ ಮತ್ತು ಅವನು ಕರ್ತನನ್ನು ಅರಿಯೆನು ಎಂದು ಹೇಳಿ ನಿರಾಕರಿಸಿದನು. ಪೇತ್ರನಂತೆ, ನಮ್ಮಲ್ಲಿ ಅನೇಕರು ಕರ್ತನಿಗೆ ಪ್ರಮಾಣ ಪೂರ್ವಕವಾದ ಪ್ರತಿಜ್ಞೆ ಮಾಡಿದ್ದೇವೆ. ಆದರೆ ನಿಜವಾಗಿಯೂ ನಾವು ನಮ್ಮ ಮಾತನ್ನು ಉಳಿಸಿಕೊಂಡಿಲ್ಲ. ನಮ್ಮಲ್ಲಿ ಹೆಚ್ಚಿನವರು ಈ ಒಂದು ಕ್ಷೇತ್ರದಲ್ಲಿ ಹೋರಾಡುತ್ತಿದ್ದಾರೆ.
"ಸರಿ, ನಾನು ನಿಮಗಾಗಿ ಪ್ರಾರ್ಥಿಸುತ್ತೇನೆ" ಎಂದು ನೀವು ಉತ್ತರಿಸಿದಾಗ, - ನೀವು ಅದನ್ನು ನಿಜವಾಗಿಯೂ ಮಾಡುತ್ತೀರಾ?
ಇಂತಹ ದಿನ ಮತ್ತು ಇಂತಹ ಸಮಯದಲ್ಲಿ ನೀವು ಇರುತ್ತೀರಿ ಎಂದು ನೀವು ಹೇಳಿದಾಗ - ನೀವು ಆ ಸಮಯಕ್ಕೆ ಸರಿಯಾಗಿ ಹೋಗಿದ್ದೀರಾ?
ನಿರ್ದಿಷ್ಟ ದಿನಾಂಕದಂದು ಯಾರಿಗಾದರೂ ಮರುಪಾವತಿ ಮಾಡುವುದಾಗಿ ನೀವು ಭರವಸೆ ನೀಡಿದಾಗ - ನೀವು ಮಾಡುತ್ತೀರಾ?
ನಾನು ಹೇಳುತ್ತಿರುವ ಸಂಗತಿಯನ್ನು ಗ್ರಹಿಸಿಕೊಳ್ಳಿರಿ!
ಆತನು ಸುಳ್ಳಾಡದ ದೇವರಾಗಿದ್ದಾನೆ (ತೀತ 1:2), ಮತ್ತು ಆತನ ಮಕ್ಕಳಾದ ನಾವು ಸಹ ಆತನಂತೆ ಇರಬೇಕು (ಎಫೆಸ 5:1). ದೇವರು ವಿಶ್ವಾಸಾರ್ಹನಾಗಿದ್ದಾನೆ ಮತ್ತು ಆತನ ಜನರಾದ ನಾವೂ ಸಹ ವಿಶ್ವಾಸಾರ್ಹರಾಗಿರಬೇಕು. ಆದ್ದರಿಂದ, ಕ್ರೈಸ್ತರನ್ನು ಜನರು ಪ್ರಾಮಾಣಿಕರು ಎಂದು ಕರೆಯಬೇಕು.
ಒಬ್ಬ ಮಹಾನ್ ವ್ಯಕ್ತಿ ಒಮ್ಮೆ ಹೀಗೆ ಹೇಳಿದರು, "ನನಗೆ ವಯಸ್ಸಾದಂತೆ, ಮನುಷ್ಯರು ಏನು ಹೇಳುತ್ತಾರೆ ಎನ್ನುವ ಕಡೆಗೆ ನಾನು ಕಡಿಮೆ ಗಮನ ಹರಿಸುತ್ತೇನೆ; ಅವರು ಏನು ಮಾಡುತ್ತಾರೆ ಎಂಬುದನ್ನು ನಾನು ನೋಡುತ್ತೇನೆ"; ಅದು ನಿಜಕ್ಕೂ ಒಂದು ಅಗಾಧವಾದ ಹೇಳಿಕೆ.
ಕರ್ತನೊಂದಿಗೆ ಅನ್ಯೋನ್ಯತೆಯನ್ನು ಬೆಳೆಸಲು ಬಯಸುವವರ ಪ್ರಮುಖ ಗುಣಲಕ್ಷಣಗಳಲ್ಲಿ ಒಂದನ್ನು ಕೀರ್ತನೆ 15: 4 ರಲ್ಲಿ ಉಲ್ಲೇಖಿಸಲಾಗಿದೆ, " ನಷ್ಟವಾದರೂ ಮಾತು ತಪ್ಪದವರು.. ". (ಕೀರ್ತನೆ 15:4).
ತಾವು ಪ್ರಖ್ಯಾತರಾಗಬೇಕೆಂದು ಜನರು ಭಾವಿಸುತ್ತಾರೆ,ಆದರೆ ನೀವು ಸದ್ಗುಣಗಳಿಂದ ಕೂಡಿರಬೇಕೇಂದು ದೇವರು ಹೇಳುತ್ತಾನೆ. ನಿಮ್ಮ ಮಾತನ್ನು ಉಳಿಸಿಕೊಳ್ಳುವುದು ಆಂತರಿಕ ಸ್ವಭಾವವನ್ನು ಅಭಿವೃದ್ಧಿಪಡಿಸುತ್ತದೆ. ನೀವು ಮಾತು ತಪ್ಪದ ಪುರುಷ ಅಥವಾ ಸ್ತ್ರೀ ಎಂದು ಜನರು ನೋಡಿದಾಗ ಮತ್ತು ತಿಳಿದಾಗ, ನೀವು ಘನವಾದ ವಿಶ್ವಾಸಾರ್ಹತೆಯನ್ನು ಬೆಳೆಸಿಕೊಳ್ಳುತ್ತೀರಿ. ಮತ್ತು ನಂಬಲಾಗದಂತ ಮಹಿಮೆಯನ್ನು ಪಡೆಯುತ್ತೀರಿ.
ನಾವು ಮಾಡುವುದಾಗಿ ಹೇಳಿದ್ದನ್ನು ಮಾಡಲು ವಿಫಲವಾದಾಗ, ಅದು ನಮ್ಮ ಸುತ್ತಲಿನ ಜನರಿಗೆ ಒತ್ತಡ ಮತ್ತು ಉಲ್ಬಣವನ್ನು ಉಂಟುಮಾಡಬಹುದು. ಜನರು ನಾವು ಭರವಸೆ ಕೊಡುವ ನಮ್ಮ ಹೇಳಿಕೆಗಳ ನಿಖರತೆಯ ಆಧಾರದ ಮೇಲೆಯೇ ಯೋಜನೆಗಳನ್ನು ಮತ್ತು ಭರವಸೆಗಳನ್ನು ಇತರರಿಗೂ ಮಾಡಿರುತ್ತಾರೆ. ನಾವು ಅವರನ್ನು ನಿರಾಸೆಗೊಳಿಸಿದರೆ, ಅವರು ಇತರರನ್ನು ನಿರಾಸೆಗೊಳಿಸಬೇಕಾಗುತ್ತದೆ. ನಿಮ್ಮನ್ನು ನೀವು ಒತ್ತಡದ ನಿರ್ಮಿಸುವವರಾಗದೆ ಒತ್ತಡವನ್ನು ನಿವಾರಿಸುವವರಾಗಿ ಇರುವವರಾಗಬೇಕೆಂದು ನಿಮ್ಮನ್ನು ನೀವು ನೋಡಲು ಪ್ರಾರಂಭಿಸಿ.
ಆತ್ಮಿಕವಾಗಿ ಹೇಳುವುದಾದರೆ, ನಮ್ಮ ಮಾತನ್ನು ಉಳಿಸಿಕೊಳ್ಳಬೇಕಾದ ಇನ್ನೂ ಎರಡು ಪ್ರಮುಖ ಕಾರಣಗಳಿವೆ.
#1 ಅದರಂತೆಯೇ ನಮ್ಮ ನಂಬಿಕೆಯು ಕಾರ್ಯ ಮಾಡುತ್ತದೆ.
"ಏಕೆಂದರೆ ನಾನು ನಿಮಗೆ ಸತ್ಯವಾಗಿ ಹೇಳುತ್ತೇನೆ. ಯಾರಾದರೂ ಈ ಬೆಟ್ಟಕ್ಕೆ, ‘ನೀನು ಕಿತ್ತುಕೊಂಡು ಹೋಗಿ ಸಮುದ್ರದಲ್ಲಿ ಬೀಳು,’ ಎಂದು ಹೇಳಿ ತಮ್ಮ ಹೃದಯದಲ್ಲಿ ಸಂಶಯಪಡದೆ ತಾವು ಹೇಳಿದಂತೆಯೇ ಆಗುವುದೆಂದು ನಂಬಿದರೆ ಅವರು ಹೇಳಿದಂತೆಯೇ ಅವರಿಗೆ ಆಗುವುದು."
(ಮಾರ್ಕ್ 11:23)
ನಂಬಿಕೆಯು ಪರಿಣಾಮಕಾರಿಯಾಗಿ ಕಾರ್ಯ ಮಾಡಲು, ನಾವು ಹೇಳುವ ವಿಷಯಗಳನ್ನು ನಾವು ನಂಬಬೇಕು ಮತ್ತು ನಾವು ನಂಬುವ ವಿಷಯಗಳನ್ನು ಮಾತ್ರ ಹೇಳಬೇಕು. ನಾವು ಕೊಟ್ಟ ಮಾತನ್ನು ಉಳಿಸಿಕೊಳ್ಳದಿದ್ದರೆ ಅದು ನಮ್ಮ ನಂಬಿಕೆಯ ಮೇಲೆ ಪರಿಣಾಮ ಬೀರುತ್ತದೆ. ನಾವು ನಂಬಿಕೆಯಲ್ಲಿ ನಡೆಯಲು ಮತ್ತು ಹೀಗೆ ದೇವರು ನಮಗೆ ಒದಗಿಸಿರುವ ಎಲ್ಲಾ ಆಶೀರ್ವಾದಗಳನ್ನು ಆನಂದಿಸಲು ಬಯಸಿದರೆ, ನಾವು ಹೇಳುವುದನ್ನು ನಂಬಬೇಕು ಮತ್ತು ನಾವು ನಂಬುವದನ್ನು ಮಾತ್ರ ಹೇಳಬೇಕು.
#2. ನೀವು (ಮಾತನಾಡುವ ಅಥವಾ ಬರೆಯುವ ಮೂಲಕ) ಸಂವಹನ ಮಾಡುವ ಪ್ರತಿಯೊಂದು ಮಾತೂ ಸಹ ದೇವರಿಗೆ ಮುಖ್ಯವಾಗಿದೆ.
ಮಾತುಗಳ ಮೂಲಕ ಬ್ರಹ್ಮಾಂಡವನ್ನು ಸೃಷ್ಟಿಸಿದ ದೇವರು ನಿಮ್ಮ ಮಾತುಗಳನ್ನು ನೀವು ಹೇಗೆ ಬಳಸುತ್ತೀರಿ ಎಂಬುದನ್ನು ಸೂಕ್ಷ್ಮವಾಗಿ ಗಮನಿಸುತ್ತಿರುತ್ತಾನೆ.
"ಜೀವ ಮತ್ತು ಮರಣಗಳು ನಾಲಿಗೆಯ ವಶ, ವಚನಪ್ರಿಯರು ಅದರ ಫಲವನ್ನು ಅನುಭವಿಸುವರು,"(ಜ್ಞಾನೋಕ್ತಿ 18:21)
"ಇದಲ್ಲದೆ ನಾನು ನಿಮಗೆ ಹೇಳುವುದೇನಂದರೆ, ಮನುಷ್ಯರು ವ್ಯರ್ಥವಾಗಿ ಆಡುವ ಪ್ರತಿಯೊಂದು ಮಾತಿನ ವಿಷಯವಾಗಿಯೂ ನ್ಯಾಯವಿಚಾರಣೆಯ ದಿನದಲ್ಲಿ ಲೆಕ್ಕ ಕೊಡಬೇಕು. ನಿನ್ನ ಮಾತುಗಳಿಂದಲೇ ನೀನು ನೀತಿವಂತನೆಂದು ತೀರ್ಪು ಹೊಂದುವಿ. ನಿನ್ನ ಮಾತುಗಳಿಂದಲೇ ನೀನು ಅಪರಾಧಿಯೆಂದು ತೀರ್ಪು ಹೊಂದುವಿ” ಅಂದನು.(ಮತ್ತಾ 12:36-37)
ಆದ್ದರಿಂದ ನೀವು ನಿಜವಾಗಿಯೂ ಪೊಳ್ಳು ಭರವಸೆಗಳನ್ನು ನೀಡುವಂತ ಮಾತುಗಳನ್ನಾಡಬೇಡಿ, ಅಂಥಹ ಬರವಣಿಗೆ , ಇಮೇಲ್ ಅಥವಾ ನಿಮ್ಮ ಮಾತುಗಳನ್ನೂ ಬಳಸಬೇಡಿ.
ಈಗ ಕೆಲವೊಮ್ಮೆ, ನಾವು ಮಾಡಿದ ಭರವಸೆಯನ್ನು ಉಳಿಸಿಕೊಳ್ಳಲು ಅಸಾಧ್ಯವೆಂದು ತೋರುವ ನಮ್ಮ ನಿಯಂತ್ರಣಕ್ಕೆ ಮೀರಿದ ಸಂದರ್ಭಗಳು ನಮಗುಂಟಾಗಬಹುದು. ಅಂತಹ ಸಂದರ್ಭಗಳಲ್ಲಿ, ನಾವು ಕ್ಷಮೆಯಾಚಿಸಬೇಕು ಮತ್ತು ಜೀವನದಲ್ಲಿ ಮುಂದೆ ಹೋಗಬೇಕು, ಮುಂದಿನ ಬಾರಿ ಉತ್ತಮವಾಗಿ ನೆರವೇರಿಸುವಂತೆ ಸಹಾಯ ಮಾಡಲು ದೇವರ ಕೃಪೆ ಮತ್ತು ಬಲವನ್ನು ಬೇಡಿಕೊಳ್ಳಬೇಕು.
ಪ್ರಾರ್ಥನೆಗಳು
ತಂದೆಯೇ, ಯಾವಾಗಲೂ ನಾನು ನನ್ನ ಮಾತನ್ನು ಉಳಿಸಿಕೊಳ್ಳಲು ನನಗೆ ಯೇಸುನಾಮದಲ್ಲಿ ಸಹಾಯ ಮಾಡಿ. ತಂದೆಯೇ, ಯೇಸುವಿನ ಹೆಸರಿನಲ್ಲಿ ನನ್ನ ತುಟಿಗಳೆಂಬ ಕದವನ್ನು ಅಭಿಷೇಕಿಸಿ ಆಗ ನಾನು ನಿಮ್ಮ ದೃಷ್ಟಿಗೆ ಸರಿತೋಚುವ ಮಾತುಗಳನ್ನು ಮಾತ್ರ ಮಾತನಾಡಲು ಸಾಧ್ಯವಾಗುತ್ತದೆ.
Join our WhatsApp Channel
Most Read
● ದಿನ 07 : 40 ದಿನಗಳ ಉಪವಾಸ ಮತ್ತು ಪ್ರಾರ್ಥನೆ● ಕೃಪೆಯ ಮೇಲೆ ಕೃಪೆ
● ದಿನ 07:40 ದಿನಗಳು ಉಪವಾಸ ಹಾಗೂ ಪ್ರಾರ್ಥನೆ.
● ಕರ್ತನೊಂದಿಗೆ ನಡೆಯುವುದು
● ನಿಮ್ಮ ರೂಪಾಂತರವನ್ನು ತಡೆಯುತ್ತಿರುವುದೇನು ಎಂಬುದನ್ನು ತಿಳಿದುಕೊಳ್ಳಿರಿ.
● ನೀವಿನ್ನೂ ತಡಮಾಡುತ್ತಿರುವುದೇಕೆ?
● ಆ ವಾಕ್ಯವನ್ನು ಹೊಂದಿಕೊಳ್ಳಿರಿ
ಅನಿಸಿಕೆಗಳು