english हिंदी मराठी తెలుగు മലയാളം தமிழ் Contact us ನಮ್ಮನ್ನು ಸಂಪರ್ಕಿಸಿ ಸ್ಪೋರ್ಟಿಫೈ ನ್ನು ಆಲಿಸಿರಿ ಸ್ಪೋರ್ಟಿಫೈ ನ್ನು ಆಲಿಸಿರಿ Download on the App StoreiOS ನಲ್ಲಿ ಆಪ್ ನ್ನು ಡೌನ್ಲೋಡ್ ಮಾಡಿ Get it on Google Play ಆಂಡ್ರಾಯ್ಡ್ ನಲ್ಲಿ ಆಪ್ ನ್ನು ಡೌನ್ಲೋಡ್ ಮಾಡಿ
 
ಲಾಗಿನ್
ಆನ್ಲೈನ್ ಮೂಲಕ ಕಾಣಿಕೆ ನೀಡಲು
ಲಾಗಿನ್
  • ಮೂಲತಾಣ
  • ಕಾರ್ಯಕ್ರಮಗಳು
  • ನೇರಪ್ರಸಾರ
  • ದೂರದರ್ಶನ
  • ನೋಹಾಟ್ಯೂಬ್
  • ಸ್ತೋತ್ರಗಳು
  • ಸುದ್ದಿಗಳು
  • ಮನ್ನಾ
  • ಪ್ರಾರ್ಥನೆಗಳು
  • ಅರಿಕೆಗಳು
  • ಕನಸುಗಳು
  • ವಿದ್ಯುನ್ಮಾನ -ಪುಸ್ತಕಗಳು
  • ವ್ಯಾಖ್ಯಾನ
  • ಶ್ರದ್ದಾಂಜಲಿ
  • ಓಯಸಿಸ್
  1. ಮೂಲತಾಣ
  2. ಅನುದಿನದ ಮನ್ನಾ
  3. ಪ್ರಾರ್ಥನಾ ಹೀನತೆ ಎಂಬ ಪಾಪ
ಅನುದಿನದ ಮನ್ನಾ

ಪ್ರಾರ್ಥನಾ ಹೀನತೆ ಎಂಬ ಪಾಪ

Saturday, 17th of August 2024
1 0 578
Categories : ಪ್ರಾರ್ಥನೆ (prayer)
ಸ್ವಲ್ಪ ಕಲ್ಪಿಸಿ ನೋಡಿರಿ,  ಯಾರಾದರೂ ಒಬ್ಬರು ನಿಮ್ಮೊಂದಿಗೆ ಎಂದೂ ಮಾತನಾಡದೆ ಇದ್ದರೂ ನಿಮ್ಮನ್ನು ಬಹಳ ಆಪ್ತ ಸ್ನೇಹಿತರೆಂದು ಹೇಳಿಕೊಂಡರೆ ಹೇಗಿರುತ್ತದೆ? ಯಾವುದೇ ಅಸ್ತಿತ್ವದಲ್ಲಿರುವ ಸ್ನೇಹವಾಗಲಿ ಸಂವಹನ ಇಲ್ಲದೆ ಹೋದರೆ ಖಂಡಿತವಾಗಿಯೂ ಹದಗೆಡುತ್ತದೆ. ಹಾಗೆಯೇ, ದೇವರೊಂದಿಗಿನ ಸಂಬಂಧವು ಕೂಡ ಸಂವ ಹನ ಇಲ್ಲದೆ ಹೋದರೆ ಅದು ಬಡಕಲಾದದ್ದೇ.

ಪ್ರಾರ್ಥನೆ ಇಲ್ಲದ ಜೀವಿತವು ಪಾಪವಾಗಿದೆ. ಇದರ ಕುರಿತು ನಾವು ಪ್ರಾಮಾಣಿಕವಾಗಿರಬೇಕು. ಪ್ರವಾದಿಯಾದ ಸಮುವೇಲನು  ಇಸ್ರೇಲ್ ಜನರಿಗಾಗಿ ತಾನು ಪ್ರಾರ್ಥಿಸುವೆನೆಂದು ಭರವಸೆ ನೀಡಿದಾಗ ಇದನ್ನು ಸ್ಪಷ್ಟಪಡಿಸಿದನು :

"ನಾನಾದರೋ ನಿಮಗೋಸ್ಕರವಾಗಿ ಯೆಹೋವನನ್ನು ಪ್ರಾರ್ಥಿಸುತ್ತಾ ಆತನ ಉತ್ತಮ ನೀತಿಮಾರ್ಗವನ್ನು ನಿಮಗೆ ತೋರಿಸಿಕೊಡುವದನ್ನು ಬಿಡುವದೇ ಇಲ್ಲ; ಬಿಟ್ಟರೆ ಆತನ ದೃಷ್ಟಿಯಲ್ಲಿ ಪಾಪಿಯಾಗಿರುವೆನು."(‭1 ಸಮುವೇಲನು 12:23)

ದೇವಜನರಿಗಾಗಿ ಪ್ರಾರ್ಥನೆ ಮಾಡದೇ ಇರುವಂತದ್ದು ದೇವರ ವಿರೋಧವಾಗಿ ಮಾಡುವ ಪಾಪವಾಗಿದೆ ಎಂದು ಸಮುವೇಲನು ಕಂಡುಕೊಂಡಿದ್ದನು. ನೀವು ಒಬ್ಬ  ಪಾಸ್ಟರ್  ಆಗಿದ್ದರೆ ಅಥವಾ ಗುಂಪಿನ ಮೇಲ್ವಿಚಾರಕರಾಗಿದ್ದರೇ  ಅಥವಾ J -12 ಗುಂಪಿನ ನಾಯಕರಾಗಿದ್ದರೆ ನಾನು ನಿಮ್ಮ ಮುಂದೆ ನೇರವಾಗಿ ಹೇಳುವುದೇನೆಂದರೆ ದೇವರು ನಿಮಗಾಗಿ ಒಪ್ಪಿಸಿದ ಮಂದೇಗಾಗಿ ನೀವು ಪ್ರಾರ್ಥಿಸದೇ  ಹೋದರೆ ಅದು ಪಾಪವಾಗಿದ್ದು ನೀವು ಅದರಿಂದ ಈಗಲೇ ಹಿಂದಿರುಗಿಕೊಳ್ಳಬೇಕಾಗಿದೆ.

ನಾಯಕರು ದೇವ ಜನರಿಗಾಗಿ ಪ್ರಾರ್ಥಿಸದೆ ಹೋದರೆ ನಾವು ಆತ್ಮಿಕ ಆಯಾಮಕ್ಕೆ ನಾವು ನಡೆಸುತ್ತಿರುವ ಜನರ ಕುರಿತು ನಮಗೆ ನಿಜವಾದ ಕಾಳಜಿ ಇಲ್ಲಾ ಎಂಬ ಸಂಜ್ಞೆಯನ್ನು ಕಳಿಸುವವರಾಗಿರುತ್ತೇವೆ.ಕರ್ತನಾದ ಯೇಸು "ಕುರುಬನಿಲ್ಲದ ಕುರಿಗಳಾಗಿದ್ದಾರಲ್ಲ" ಎಂಬುದಾಗಿ ಅಂತಹ ಮಂದೆಯನ್ನು ನೋಡಿ ಹೇಳಿದನು. (ಮತ್ತಾಯ 9:36)
ದೇವ ಜನರನ್ನು ನಡೆಸಬೇಕಿದ್ದ ಫರಿಸಾಯರು ತಮ್ಮದೇ ಆದ ಕಾರ್ಯಗಳಲ್ಲಿ ಮುಳುಗಿ ಹೋಗಿದ್ದರೆ ವಿನಃ  ದೇವ ಜನರ ಖಯಾಲಿ ಅವರಿಗಿರಲಿಲ್ಲ.

ದೇವ ಜನರಿಗಾಗಿ ಪ್ರಾರ್ಥಿಸದೆ ಇರುವಂತದ್ದು ನಿಮ್ಮಲ್ಲಿ ದೇವರ ಕುರಿತು ಪ್ರೀತಿಯ ಕೊರತೆ ಇದೆ ಎಂಬುದನ್ನು ಎತ್ತಿ ತೋರಿಸುತ್ತದೆ. ಪ್ರಾರ್ಥನೆ ರಹಿತ ಜೀವಿತವು ನಿಮ್ಮಲ್ಲಿ ಅರಣ್ಯ ವಾಸ ಸ್ಥಿತಿಯನ್ನು ನಿಮಗೆ ಅರಿವಿಲ್ಲದೆ ನಿಮ್ಮೊಳಗೆ ನಿಧಾನವಾಗಿ ತರುತ್ತಿದೆ ಎಂಬುದನ್ನು ಸೂಚಿಸುವಂತಹದ್ದಾಗಿದೆ.

ಸಾಮಾನ್ಯವಾಗಿ ಸ್ವಸ್ಥತೆ ಬಿಡುಗಡೆ ಮತ್ತು ಪ್ರವಾದನೆ ಇರುವ ಸೇವಾಕೂಟದಲ್ಲಿ ನಾನು ಎಂದಿಗಿಂತಲೂ ಹೆಚ್ಚಾದ ಜನಸಂದಣಿಯನ್ನು ನೋಡುತ್ತೇನೆ. ಏಕೆಂದರೆ ಪ್ರತಿಯೊಬ್ಬರೂ ಸಹ ಬಿಡುಗಡೆ ಸ್ವಸ್ತತೆ ಮತ್ತು ಪ್ರವಾದನೆ ಇತ್ಯಾದಿಯನ್ನು ನಿರೀಕ್ಷಿಸುವಂತವರೇ ಆಗಿದ್ದಾರೆ. ( ಅದರಲ್ಲಿ ತಪ್ಪೇನಿಲ್ಲ).ಆದಾಗಿಯೂ ಮಧ್ಯಸ್ಥಿಕೆ ಪ್ರಾರ್ಥನಾ ಕೂಟಗಳಲ್ಲಿ ಭಾಗಿಯಾಗಲು ಕರೆದರೆ ಜನರು ಅದೇನೋ ಕಳಕೊಂಡಂತೆ ವರ್ತಿಸುತ್ತಾರೆ.

ನಾನೊಂದು ಸಂಗತಿಯನ್ನು ನಿಮಗೆ ಹೇಳಲೇ? ನಮ್ಮ ಜೀವನದಲ್ಲಿ ಪ್ರಾರ್ಥನಾ ಹೀನತೆಯು ಅಭ್ಯಾಸವಾದಾಗ ನಾವು ಒಬ್ಬರನ್ನೊಬ್ಬರು ಪ್ರೀತಿಸುವುದರಲ್ಲಿ ವಿಫಲರಾಗಿದ್ದೇವೆ ಎಂಬ ಅಪರಾಧಿಭಾವ ತರುತ್ತದೆ.ಇದು ಹೆಚ್ಚಾಗಿ ಮಧ್ಯಸ್ಥಿಕೆ ಪ್ರಾರ್ಥನೆಯ ಸಮಯದಲ್ಲಿ ಬಯಲಾಗುತ್ತದೆ.

"ಶೋಧನೆಗೆ ಒಳಗಾಗದಂತೆ ಎಚ್ಚರವಾಗಿದ್ದು ಪ್ರಾರ್ಥಿಸಿರಿ; ಮನಸ್ಸು ಸಿದ್ಧವಾಗಿದೆ ಸರಿ, ಆದರೆ ದೇಹಕ್ಕೆ ಬಲ ಸಾಲದು..." ಎಂದು ಮತ್ತಾಯ 26:41ರಲ್ಲಿ ಕರ್ತನಾದ  ಯೇಸು ನಮ್ಮನ್ನು ಎಚ್ಚರಿಸುತ್ತಾನೆ. ಪ್ರಾರ್ಥನೆ ಹೀನತೆಯು ಶೋಧನೆಯ ಬಾಣವು ನಮ್ಮಲ್ಲಿ ಹೊಕ್ಕಲು ಅನುಮತಿಸಿ ನಮ್ಮನ್ನು ಪಾಪದ ಆಳತ್ವಕ್ಕೆ ತೆಗೆದುಕೊಂಡು ಹೋಗುತ್ತದೆ.
ಪ್ರಾರ್ಥನೆಗಳು
ತಂದೆಯೇ, ಪ್ರಾರ್ಥನೆ ಇಲ್ಲದೆ ಕಳೆದ ಎಲ್ಲಾ ಸಮಯಕ್ಕಾಗಿ ನನ್ನನ್ನು ಯೇಸು ನಾಮದಲ್ಲಿ ಕ್ಷಮಿಸು.
ತಂದೆಯೇ ನಾನು ಪ್ರಾರ್ಥಿಸದಂತೆ ಮಾಡುವ ಎಲ್ಲಾ ಅಡೆತಡೆಗಳನ್ನು ಯೇಸು ನಾಮದಲ್ಲಿ ನಿರ್ಮೂಲ ಮಾಡು.
ತಂದೆಯೇ, ನನ್ನಲ್ಲಿರುವ ಪ್ರಾರ್ಥನಾ ಹೀನತೆಯ ಆತ್ಮವು ಯೇಸು ನಾಮದಲ್ಲಿ ನಿನ್ನ ಪವಿತ್ರಾತ್ಮನ ಅಗ್ನಿಯ ಮೂಲಕ ಸುಟ್ಟು ಬೂದಿಯಾಗಲಿ.ತಂದೆಯೇ, ನಾನು ಪ್ರಾರ್ಥಿಸಲು ಅಡ್ಡಿ ಮಾಡುವ ನನ್ನ ಜೀವಿತದಲ್ಲಿರುವ ಎಲ್ಲ ದುರಾತ್ಮನ ದ್ವಾರಗಳನ್ನು ಯೇಸು ನಾಮದಲ್ಲಿ ಯೇಸುವಿನ ಪರಿಶುದ್ಧ ರಕ್ತದ ಮೂಲಕ ಮುಚ್ಚುತ್ತೇನೆ. ಆಮೇನ್.


Join our WhatsApp Channel


Most Read
● ಪ್ರಬುದ್ಧತೆಯು ಜವಾಬ್ದಾರಿಯಿಂದ ಆರಂಭವಾಗುತ್ತದೆ.
● ಆರಂಭಿಕ ಹಂತದಲ್ಲಿಯೇ ಕರ್ತನನ್ನು ಕೊಂಡಾಡಿರಿ
● ಇಂತಹ ಪರಿಶೋಧನೆಗಳು ಏಕೆ?
● ಕ್ರಿಸ್ತನಂತೆ ಆಗುವುದು
● ಅತ್ಯುನ್ನತವಾದ ರಹಸ್ಯ
● ಪುರುಷರು ಏಕೆ ಪತನಗೊಳ್ಳುವರು -3
● ನಡೆಯುವುದನ್ನು ಕಲಿಯುವುದು
ಅನಿಸಿಕೆಗಳು
ನಮ್ಮನ್ನು ಸಂಪರ್ಕಿಸಿ
Phone: +91 8356956746
+91 9137395828
WhatsApp: +91 8356956746
ಇಮೇಲ್ ವಿಳಾಸ: [email protected]
ವಿಳಾಸ :
10/15, First Floor, Behind St. Roque Grotto, Kolivery Village, Kalina, Santacruz East, Mumbai, Maharashtra, 400098
ಸ್ಪೋರ್ಟಿಫೈ ನ್ನು ಆಲಿಸಿರಿ
Download on the App Store
Get it on Google Play
JOIN MAILING LIST
EXPLORE
ಕಾರ್ಯಕ್ರಮಗಳು
ನೇರಪ್ರಸಾರ
ನೋಹಾಟ್ಯೂಬ್
ದೂರದರ್ಶನ
Donation
ಮನ್ನಾ
ಸ್ತೋತ್ರಗಳು
ಅರಿಕೆಗಳು
ಕನಸುಗಳು
ಸಂಪರ್ಕ
© 2025 Karuna Sadan, India.
➤
ಲಾಗಿನ್
ಈ ಜಾಲದಲ್ಲಿರುವ ವಿಷಯದ ಕುರಿತು ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಿಳಿಸಲು ಲೈಕ್ ಮಾಡಲು ದಯಮಾಡಿ ನಿಮ್ಮ ನೋಹ ಖಾತೆಗೆ ಲಾಗಿನ್ ಆಗಿರಿ
ಲಾಗಿನ್