"ಪ್ರವಾದಿಯಾದ ಎಲೀಷನು ಪ್ರವಾದಿ ಮಂಡಲಿಯವರಲ್ಲಿ ಒಬ್ಬನನ್ನು ಕರೆದು ಅವನಿಗೆ - ನಡುಕಟ್ಟಿ ಈ ಎಣ್ಣೆಯ ಕುಪ್ಪಿಯನ್ನು ತೆಗೆದುಕೊಂಡು ರಾಮೋತ್ ಗಿಲ್ಯಾದಿಗೆ ಹೋಗು. ಊರನ್ನು ಮುಟ್ಟಿದ ನಂತರ ನಿಂಷಿಯ ಮೊಮ್ಮಗನೂ ಯೆಹೋಷಾಫಾಟನ ಮಗನೂ ಆದ ಯೇಹುವು ಎಲ್ಲಿರುತ್ತಾನೆಂದು ವಿಚಾರಿಸಿ ಅವನು ಸಿಕ್ಕಿದಾಗ ಅವನನ್ನು ಅವನ ಜೊತೆಗಾರರ ಗುಂಪಿನಿಂದ ಒಳಗಿನ ಕೋಣೆಗೆ ಕರಕೊಂಡು ಹೋಗು. ತರುವಾಯ ಕುಪ್ಪಿಯಲ್ಲಿರುವ ಎಣ್ಣೆಯನ್ನು ಅವನ ತಲೆಯ ಮೇಲೆ ಹೊಯ್ದು - ನಾನು ನಿನ್ನನ್ನು ಇಸ್ರಾಯೇಲ್ಯರ ಅರಸನಾಗುವದಕ್ಕೆ ಅಭಿಷೇಕಿಸಿದ್ದೇನೆಂದು ಯೆಹೋವನು ಅನ್ನುತ್ತಾನೆ ಎಂಬದಾಗಿ ಹೇಳಿ...".(2 ಅರಸುಗಳು 9:1-3)
ಸತ್ಯವೇದದಲ್ಲಿ ಯೇಹುವಿನ ಪಾತ್ರ ಬಹಳ ಆಸಕ್ತಿಕರವಾದದ್ದು. ಬೇರೆಯವರು ಸೋತಂತ ಜಾಗದಲ್ಲಿ ಅವನು ಸಫಲವಾದನು. ಎಲಿಯನು ಬಹಳ ಬಲವುಳ್ಳ ದೇವರ ಮನುಷ್ಯನಾಗಿದ್ದನು. ಆದರೂ ಈಜೇಬಲಳಿಂದಾಗಿ ಎಲೀಯನಿಗೆ ಮಹಾ ಶೋಕ ಉಂಟಾಗಿತ್ತು. ಇದರಿಂದ ನೀವು ಆಕೆಯು ಎಂಥ ದುಷ್ಟ ರಾಣಿ ಆಗಿದ್ದಳು ಎಂಬುದನ್ನು ತಿಳಿದುಕೊಳ್ಳಬಹುದು. ಆದಾಗಿಯೂ ದೇವರು ಯೇಹು ವನ್ನು ಆ ದುಷ್ಟರಾಣಿ ಈಜೇಬೆಳಲ ನಾಶನಕ್ಕಾಗಿ ಉಪಯೋಗಿಸಿದನು. ಹಾಗಾಗಿ ಯೇಹು ಹೊಂದಿಕೊಂಡಿದ್ದ ಅಭಿಷೇಕ ಎಂತದ್ದು ಎಂಬುದನ್ನು ಸ್ವಲ್ಪ ಕಲ್ಪಿಸಿ ನೋಡಿರಿ.
ಈ ಒಂದು ಸಂದೇಶದಿಂದ ನಾನೀಗ ತಿಳಿಸುವ ಕೆಲವು ಸತ್ಯಗಳು ನಿಜಕ್ಕೂ ನಿಮಗೆ ದೇವರಲ್ಲಿ ನಡೆಯಲು ಸಹಕಾರಿಯಾಗುತ್ತದೆ.
#1...... ಅವನನ್ನು ಅವನ ಜೊತೆಗಾರರ ಗುಂಪಿನಿಂದ ಎಬ್ಬಿಸಿ.....
ಪ್ರವಾದಿಯಾದ ಎಲಿಷನ್ನು ತನ್ನ ಶಿಷ್ಯರಲ್ಲೊಬ್ಬನಿಗೆ ಯೇಹುವನ್ನು ಕಂಡುಕೊಂಡು ಅವನನ್ನು ಅವನ ಜೊತೆಗಾರರಿಂದ ಎಬ್ಬಿಸಲು ಹೇಳುತ್ತಾನೆ.
ನಾವು ನಮ್ಮ ಕರೆಯಲ್ಲಿ ನಡೆಯಲು ಇಡಬೇಕಾದ ಮೊದಲ ಹೆಜ್ಜೆ ಎಂದರೆ ನಾವು ಒಗ್ಗಿಕೊಂಡಿರುವಂತಹ ಆರಾಮ ವಲಯದಿಂದ ಮೇಲೇಳುವುದಾಗಿದೆ.
ಇಂದಿನ ಪೀಳಿಗೆಗೆ ತನ್ನ ಮಹಿಮೆಯನ್ನು ತೋರ್ಪಡಿಸುವುದಕ್ಕಾಗಿ ದೇವರು ನಮ್ಮನ್ನು ಉಪಯೋಗಿಸಲು ಬಯಸುತ್ತಾನೆ. ಆದರೆ ಅದಕ್ಕೂ ಮೊದಲು ನಾವು ಹೀಗಿರುವಂತಹ ಮಟ್ಟದಿಂದ ಮೇಲೆರಬೇಕು. ಅದಕ್ಕಾಗಿ ನಮ್ಮ ಗಮನವನ್ನು ಬೇರೆಡೆಗೆ ಸೆಳೆಯುವ ಎಲ್ಲಾ ವಿಷಯಗಳಿಂದ ಸಂಪರ್ಕವನ್ನು ಕಡಿತಗೊಳಿಸಿಕೊಳ್ಳುವ ಅವಶ್ಯಕತೆ ಇದೆ. ಆ ಸನ್ನಿವೇಶದಲ್ಲಿ ಏನು ನಡೆಯುತ್ತಿದೆ ಎಂದು ಸಂಪೂರ್ಣವಾಗಿ ಯೇಹುವಿಗೆ ಅರ್ಥವಾಗದಿದ್ದರೂ ಸಹಾ ಎಲೀಷನ ಶಿಷ್ಯನು ಹೇಳಿದ ದೇವರ ಮಾತಿಗೆ ವಿಧೇಯನಾಗಿ ತನ್ನ ಸಂಗಡಿಗರಿಂದ ಎದ್ದು ಬಂದನು. ನಮ್ಮನ್ನು ಪ್ರತ್ಯೇಕ ಮಾಡುವುದು ನಮಗಿರುವ ಕರೆಯಲ್ಲ. ಆದರೆ ಆ ಕರೆಗೆ ನಾವು ತೋರಿಸುವ ಪ್ರತಿಕ್ರಿಯೆ ಅದಾಗಿದೆ ಎಂದು ನಾನು ನಂಬುತ್ತೇನೆ.
#2. "ಅವನನ್ನು ಒಳ ಕೋಣೆಗೆ ಕರೆದುಕೊಂಡು ಹೋಗು.....
ನಾವು ನಮಗೆ ಚಿರಪರಿಚಿತ ಹಾಗೂ ಬೆಚ್ಚಗೆನಿಸುವ ಸ್ಥಳದಿಂದ ಎದ್ದರೆ ದೇವರ ಒಳಕೋಣೆಗೆ ನಡೆಯಲು ಮುಕ್ತ ಆಹ್ವಾನ ಸಿಗುತ್ತದೆ. ಒಳಕೋಣೆ ಎನ್ನುವಂತದ್ದು ಪ್ರತಿಯೊಬ್ಬರಿಗೂ ಪ್ರವೇಶ ಸಿಗದಂತಹ ವಿಶೇಷವಾದವರಿಗೆ ಮಾತ್ರ ಪ್ರವೇಶ ದೊರಕುವಂತಹ ಸ್ಥಳವನ್ನು ಪ್ರತಿನಿಧಿಸುತ್ತದೆ.ಆ ಸ್ಥಳ ಖುದ್ದು ದೇವರ ಹೃದಯವೇ ಆಗಿದೆ
ಒಳಕೋಣೆ ಎಂಬುದು ಗೊಂದಲಗಳಿಂದ ಮುಕ್ತವಾದ ಪ್ರದೇಶವಾಗಿದೆ. "ಆದರೆ ನೀನು ಪ್ರಾರ್ಥನೆಮಾಡಬೇಕಾದರೆ ನಿನ್ನ ಏಕಾಂತವಾದ ಕೋಣೆಯೊಳಗೆ ಹೋಗಿ ಬಾಗಲನ್ನು ಮುಚ್ಚಿಕೊಂಡು ಅಂತರಂಗದಲ್ಲಿಯೂ ಇರುವ ನಿನ್ನ ತಂದೆಗೆ ಪ್ರಾರ್ಥನೆಮಾಡು; ಅಂತರಂಗದಲ್ಲಿ ನಡೆಯುವದನ್ನು ನೋಡುವ ನಿನ್ನ ತಂದೆಯು ನಿನಗೆ ಫಲಕೊಡುವನು." ಎಂದು ಕರ್ತನಾದ ಯೇಸು ಒಳ ಕೋಣೆಯ ಅನುಭವವನ್ನು ಕುರಿತು ಹೇಳುತ್ತಾನೆ (ಮತ್ತಾಯ 6:6)
ಹಳೆಯ ಒಡಂಬಡಿಕೆಯಲ್ಲಿ ದೇವರ ಸಾನಿಧ್ಯಕ್ಕೆ (ಒಳ ಕೋಣೆಗೆ) ಅಂದರೆ ಮಹಾ ಪರಿಶುದ್ಧ ಸ್ಥಳಕ್ಕೆ ಕೇವಲ ಮಹಾಯಾಜಕನು ಮಾತ್ರ ಹೋಗಬಹುದಾಗಿತ್ತು. "... ಅದು ವರ್ಷಕ್ಕೊಂದು ಸಾರಿ ಮಾತ್ರ.... ಅದೂ ಸಹ ರಕ್ತವಿಲ್ಲದೆ ಹೋಗುವಂತಿರಲಿಲ್ಲ..."(ಇಬ್ರಿಯರಿಗೆ 9:7)
ಆದರೆ ಹೊಸ ಒಡಂಬಡಿಕೆಯು ನಮಗೆ ಹೇಳುವುದೇನೆಂದರೆ, "ಈ ಆಧಾರಗಳನ್ನು ಕೊಟ್ಟದ್ದರಲ್ಲಿ ದೇವರು ಸುಳ್ಳಾಡಿರಲಾರನು. ಆ ನಿರೀಕ್ಷೆಯು ನಮ್ಮ ಪ್ರಾಣಕ್ಕೆ ಲಂಗರದ ಹಾಗಿದ್ದು ಭರವಸಕ್ಕೆ ಯೋಗ್ಯವಾದದ್ದೂ ಸ್ಥಿರವಾದದ್ದೂ ಆಗಿದೆ. ಅದು ತೆರೆಯೊಳಗಣ ದೇವಸಾನ್ನಿಧ್ಯವನ್ನು ಪ್ರವೇಶಿಸುವಂಥದು. ಯೇಸು ಸದಾಕಾಲವೂ ಮೆಲ್ಕಿಜೆದೇಕನ ತರಹದ ಮಹಾಯಾಜಕನಾಗಿದ್ದು ನಮಗೋಸ್ಕರ ಮುಂದಾಗಿ ಹೋಗಿ ಆ ಸಾನ್ನಿಧ್ಯವನ್ನು ಪ್ರವೇಶಿಸಿದ್ದಾನೆ."ಎಂದು ನಮಗೆ ಕ್ರಿಸ್ತನಲ್ಲಿರುವ ಒಂದು ಅಭೂತಪೂರ್ವ ಸವಲತ್ತು ಕುರಿತು ಹೇಳುತ್ತದೆ. (ಇಬ್ರಿಯರಿಗೆ 6:19-20). ಯೇಸುವನ್ನು ಪ್ರೀತಿಸುವವರೆಲ್ಲರಿಗೂ ಇಂದುಈ ಒಳಕೋಣೆಯ ಬಾಗಿಲು ತೆರೆಯಲ್ಪಟ್ಟಿದೆ!
ಕರ್ತನು ನೀವು ಆತನ ಹೃದಯವನ್ನು ಪ್ರವೇಶಿಸಬೇಕೆಂದು ಬಯಸುವವನಾಗಿದ್ದಾನೆ. ನೀವು ದೇವರ ಸಾನಿಧ್ಯದ (ಒಳಕೋಣೆಯ) ಪ್ರವೇಶವನ್ನು ಹೊಂದಿಕೊಂಡಾಗ ಆತನು ನಿಮ್ಮ ಮೇಲೆ ತನ್ನ ನೂತನ ಅಭಿಷೇಕವನ್ನು ಸುರಿಸುತ್ತಾನೆ. ನೂತನ ಹೆಸರಿನಿಂದ ನಿಮ್ಮನ್ನು ಕರೆಯುತ್ತಾನೆ. (ಪ್ರಕಟಣೆ 2:17,ಯೆಶಾಯ 62:2)
#3. "......ಆಮೇಲೆ ಎಣ್ಣೆಯ ಕುಪ್ಪೆಯನ್ನು ತೆಗೆದುಕೊಂಡು ಅವನ ತಲೆಯ ಮೇಲೆ ಸುರಿದು.... "ಇಸ್ರೇಲ್ಯರ ಅರಸನಾಗಿ ನಾನು ನಿನ್ನನ್ನು ಅಭಿಷೇಕಿಸಿದ್ದೇನೆ" ಎಂದು ಕರ್ತನು ಹೇಳುತ್ತಾನೆ ಎಂದು ಹೇಳಬೇಕು..
ಒಂದು ವಿಚಾರವನ್ನು ಇಲ್ಲಿ ಗಮನಿಸಿ. ಯೇಹುವಿನ ತಲೆಯನ್ನು ತೈಲದಿಂದ ಅಭಿಷೇಕಿಸಿದ್ದು ಅವನು ಎದ್ದು ಒಳಕೋಣೆಗೆ ಹೋದಾಗ. ಆ ಒಳಕೋಣೆಯಲ್ಲಿಯೇ ನಿಮಗೂ ಅಭಿಷೇಕ ದೊರಕುವಂಥದ್ದು. ನೀವಿಂದು ಆಂತರ್ಯದಲ್ಲಿ ಬರಡುತನವನ್ನು ಅನುಭವಿಸುತ್ತಿದ್ದಿರಾ? ಹಾಗಾದರೆ ಒಳಕೋಣೆಗೆ ಎದ್ದು ನಡೆಯಿರಿ. ನೂತನವಾದ ಅಭಿಷೇಕವು ನಿಮಗಾಗಿ ಕಾಯುತ್ತಿದೆ!
ಒಳಕೋಣೆಯು ನೀವು ದೇವರ ಸ್ವರವನ್ನು ಸ್ಪಷ್ಟವಾಗಿ ಕೇಳಬಲ್ಲಂತಹ ಸ್ಥಳವಾಗಿದೆ. ಅದು ಪ್ರವಾದನೆಗಳು ಹುಟ್ಟುವಂತಹ ಸ್ಥಳವಾಗಿದೆ. ಯೇಹೂವಿಗೆ ಪ್ರವಾದನೆ ದೊರೆತದ್ದೂ ಆ ಒಳಕೋಣೆಯಲ್ಲಿಯೇ. ಯೇಹುವಿನ ಕರೆಯೂ ಸಹ ಒಳಕೋಣೆಯಲ್ಲಿಯೇ ದೃಢವಾಯಿತು. ತಾನು ಇಸ್ರಾಯೇಲಿನ ಅರಸನಾಗಲಿದ್ದೇನೆ ಎಂಬ ಪ್ರಕಟಣೆಯೂ ಯೇಹೂವಿಗೆ ಅಲ್ಲಿಯೇ ದೊರೆತದ್ದು.
ಪ್ರಾಯಶಃ ನೀವು ಖಿನ್ನತೆಯಿಂದಲೂ ಮತ್ತು ತಿರಸ್ಕಾರದಲ್ಲಿಯೂ ಹೋರಾಡುತ್ತಿರಬಹುದು. ಪ್ರಾಯಶಃ ನೀವು ನಿಮ್ಮ ಕುರಿತು ಕೀಳರಿಮೆಯ ಭಾವದಲ್ಲಿ ಇರಬಹುದು. ನೀವೀಗ ಎದ್ದು ಒಳಕೋಣೆಗೆ ಹೋಗಬೇಕು. ಆಗ ನಿಮ್ಮ ಕರೆ ಏನೆಂಬುದು ನಿಮಗೆ ದೃಢೀಕರಿಸಲ್ಪಡುತ್ತದೆ. ಆಗ ನೀವು ಹದ್ದಿನಂತೆ ರೆಕ್ಕೆಗಳನ್ನು ಚಾಚಿ ಹಾರಾಡುತ್ತಾ ಮೇಲೇರುವವರಾಗುತ್ತೀರಿ.
ಪ್ರಾರ್ಥನೆಗಳು
1. Father, in the name of Jesus, forgive me for not making Your presence my goal and destination.
2. Father, in the name of Jesus, sanctify me and cleanse me by the precious Blood of Jesus so that I would have unhindered access into Your Presence daily. Amen
2. Father, in the name of Jesus, sanctify me and cleanse me by the precious Blood of Jesus so that I would have unhindered access into Your Presence daily. Amen
Join our WhatsApp Channel
Most Read
● ನೀವೊಂದು ಉದ್ದೇಶಕ್ಕಾಗಿ ಹುಟ್ಟಿದ್ದೀರಿ.● ದಿನ 28:40 ದಿನಗಳ ಉಪವಾಸ ಮತ್ತು ಪ್ರಾರ್ಥನೆ
● ನಾವು ಸಭೆಯಾಗಿ ನೇರವಾಗಿ ಕೂಡಿಕೊಳ್ಳದೆ ಮನೆಯಲ್ಲಿಯೇ ಕುಳಿತು ಆನ್ಲೈನ್ ನಲ್ಲಿ ಸಭೆಯ ಆರಾಧನೆಯಲ್ಲಿ ಭಾಗವಹಿಸಬಹುದೇ?
● ಪುರುಷರು ಏಕೆ ಪತನಗೊಳ್ಳುವರು -4
● ದಿನ 21:40 ದಿನಗಳ ಉಪವಾಸ ಮತ್ತು ಪ್ರಾರ್ಥನೆ.
● ಯುದ್ಧಕ್ಕಾಗಿ ತರಬೇತಿ.
● ನೀವು ಎಷ್ಟು ವಿಶ್ವಾಸಾರ್ಹರು?
ಅನಿಸಿಕೆಗಳು