ಅನುದಿನದ ಮನ್ನಾ
ನಿಮ್ಮ ಕೆಲಸದ ಕುರಿತ ಒಂದು ರಹಸ್ಯ
Thursday, 8th of August 2024
3
2
233
Categories :
ಕೆಲಸ (Job)
"ಎಲೀಯನು ಅಲ್ಲಿಂದ ಹೊರಟುಹೋಗಿ ಶಾಫಾಟನ ಮಗನಾದ ಎಲೀಷನನ್ನು ಕಂಡನು. ಅವನು ಹೊಲವನ್ನು ಉಳುವದಕ್ಕೆ ಹನ್ನೆರಡು ಜೋಡಿ ಎತ್ತುಗಳನ್ನು ತಂದು ಹನ್ನೆರಡನೆಯ ಜೋಡಿಯಿಂದ ತಾನಾಗಿ ಉಳುತ್ತಿದ್ದನು. ಎಲೀಯನು ಅಲ್ಲಿಂದ ಹಾದುಹೋಗುವಾಗ ತನ್ನ ಕಂಬಳಿಯನ್ನು ಅವನ ಮೇಲೆ ಹಾಕಿದನು."(1 ಅರಸುಗಳು 19:19)
ಎಲೀಷನ ಕುರಿತು ನಾವು ನೋಡುವ ಮೊದಲ ವಿಷಯವೆಂದರೆ ಅವನೊಬ್ಬ ಹೊಲ ಉಳುತಿದ್ದ ಮನುಷ್ಯನಾಗಿದ್ದನು. ಅವನೊಬ್ಬ ಶ್ರಮಜೀವಿಯಾಗಿದ್ದ. ನೀವು ಸತ್ಯವೇದ ಓದಿ ನೋಡುವುದಾದರೆ ಜನರೆಲ್ಲರೂ ಕಷ್ಟಪಟ್ಟು ಕೆಲಸ ಮಾಡುತ್ತಿರುವಾಗಲೇ ದೇವರು ಅವರನ್ನು ತನ್ನ ಸೇವೆಗೆ ಕರೆದಿದ್ದಾನೆ ಎಂಬುದನ್ನು ಕಾಣುತ್ತೀರಿ. ಉದಾಹರಣೆಗೆ ಪೇತ್ರ, ಯೋಹಾನ, ಯಾಕೋಬ ಮತ್ತು ಅಂದ್ರೆಯ ಇವರೆಲ್ಲರೂ ಮೀನುಗಾರರಾಗಿ ಕೆಲಸ ಮಾಡುತ್ತಿರುವಾಗಲೇ ಸೇವೆಗಾಗಿ ಕರೆಯಲ್ಪಟ್ಟರು.ದೇವರ ಮನುಷ್ಯನಾದ ಮೋಶೆಯೂ ಸಹ ತನ್ನ ಮಾವನಾದ ಇತ್ರೋನನ ಕುರಿಗಳನ್ನು ಮೇಯಿಸುವವಾಗಲೇ ಕರ್ತನಿಂದ ಕರೆಯಲ್ಪಟ್ಟನು. ಹಾಗೆಯೇ ಪ್ರವಾದಿಯಾದ ಎಲೀಷನು ಸಹ ತಾನು ಕೆಲಸ ಮಾಡುತ್ತಿರುವಾಗಲೇ ತನ್ನ ಸೇವೆಯ ಕರೆಯನ್ನು ಹೊಂದಿಕೊಂಡನು.
ಅನೇಕ ಮಂದಿ ನನಗೆ ಪತ್ರ ಬರೆಯುತ್ತಾ "ಪಾಸ್ಟರ್ ರವರೇ, ನನಗೆ ಸಿಕ್ಕಿರುವ ಕೆಲಸವು ಬಹಳ ಚಿಕ್ಕ ಕೆಲಸವಾಗಿದೆ" ಎಂದು ಹೇಳುತ್ತಾರೆ. ಯಾವುದೇ ಕೆಲಸವು ಚಿಕ್ಕದಲ್ಲ ಅಥವಾ ದೊಡ್ಡದಲ್ಲ. ಅದೆಲ್ಲಾ ನೀವು ಚಿಂತಿಸುವ ರೀತಿಯಷ್ಟೇ. ದೇವರ ಆರ್ಥಿಕ ವ್ಯವಸ್ಥೆಯಲ್ಲಿ ಯಾವುದೂ ಕೂಡ ಚಿಕ್ಕ ಕೆಲಸವಲ್ಲ. "ನಿನ್ನ ಕೈಗೆ ಸಿಕ್ಕಿದ ಕೆಲಸವನ್ನೆಲ್ಲಾ ನಿನ್ನ ಪೂರ್ಣ ಶಕ್ತಿಯಿಂದ ಮಾಡು" ಎಂದು ಸತ್ಯವೇದ ನಮಗೆ ಹೇಳುತ್ತದೆ. (ಪ್ರಸಂಗಿ 9:10).
ಜನರು ನಿಮ್ಮ ಕೆಲಸದ ಕುರಿತು ಏನು ಮಾತಾಡುತ್ತಾರೆ ಎಂಬುದು ವಿಷಯವಲ್ಲ. ನೀವು ಯಾವುದೇ ಕೆಲಸ ಮಾಡಿದರೂ ಕ್ರಿಸ್ತನ ಮನಸ್ಸಿನಿಂದ ಆತನ ಮಹಿಮೆಗಾಗಿ ಆತನ ನಾಮದ ಮಹತ್ವಕ್ಕಾಗಿ ಆ ಕೆಲಸಗಳನ್ನು ಮಾಡುತ್ತಾ ಕರ್ತನಲ್ಲಿ ನೀವು ಪಡುತ್ತಿರುವ ಪ್ರಯಾಸ ಎಂದಿಗೂ ವ್ಯರ್ಥವಾಗುವುದಿಲ್ಲ ಎಂದು ತಿಳಿದವರಾಗಿರ್ರಿ. (1ಕೊರಿಯಂತೆ 15:58). ನೀವು ಹೀಗೆ ಮಾಡುವಾಗ ಅದು ನಿಮ್ಮಲ್ಲಿ ಕೃತಜ್ಞತಾ ಭಾವವನ್ನು ನಂಬಿಗಸ್ತಿಕೆಯನ್ನು ಹುಟ್ಟಿಸುತ್ತದೆ.
ನಾನಿದನ್ನು ಏಕೆ ಹೇಳುತ್ತಿದ್ದೇನೆ ಎಂದರೆ, ನಿಮ್ಮ ಜೀವನಕ್ಕೆ ಆಧಾರ ನಿಮ್ಮ ಕೆಲಸವಲ್ಲ. ನಿಮ್ಮ ಕೆಲಸವೇ ನಿಮಗೆ ಭದ್ರತೆ ಕೊಡುವುದಿಲ್ಲ. ನಮ್ಮ ದೇವರು ಕ್ರಿಸ್ತ ಯೇಸುವಿನ ಮೂಲಕ ತನ್ನ ಪ್ರಭಾವದ ಐಶ್ವರ್ಯಕ್ಕೆ ತಕ್ಕ ಹಾಗೆ ನಿಮ್ಮ ಪ್ರತಿಯೊಂದು ಕೊರತೆಯನ್ನು ನೀಗಿಸುವವನ್ನಾಗಿದ್ದಾನೆ.(ಫಿಲಿಪ್ಪಿಯವರಿಗೆ 4:19). ನಿಮ್ಮ ಕೆಲಸವು ಕೇವಲ ಒಂದು ನಾಲೆಯಷ್ಟೇ. ಆದರೆ ದೇವರೇ ನಿಮಗೆ ಬೇಕಾದ ಎಲ್ಲವನ್ನೂ ಒದಗಿಸಿಕೊಡುವುದರ ಮೂಲವಾಗಿದ್ದಾನೆ.
ಆರ್ಥಿಕತೆಯು ಮೇಲೆರಬಹುದು ಅಥವಾ ಕೆಳಗಿಳಿಯಬಹುದು. ಷೇರು ಮಾರುಕಟ್ಟೆಯು ಮೇಲೆರಬಹುದು ಅಥವಾ ಕೆಳಗಿಳಿಯಬಹುದು. ಆದರೆ ದೇವರೇ ನಿಮ್ಮ ಒದಗಿಸುವಿಕೆಯ ಮೂಲವೆಂದು, ಮೊದಲು ತಿಳಿದವರಾಗಿರ್ರಿ. ಇಂದು ನಿಮಗಿರುವ ಅಥವಾ ಸಿಗಲಿರುವ ಕೆಲಸ ಯಾವುದೇ ಆಗಿರಲಿ, ನಿಮ್ಮ ಪೂರ್ಣ ಶಕ್ತಿಯಿಂದ ಅದನ್ನು ಮಾಡಿರಿ. ದೇವರು ಕೇವಲ ನಿಮ್ಮ ಅಗತ್ಯಗಳನ್ನು ಅಷ್ಟೇ ಅಲ್ಲದೆ ನಿಮ್ಮ ಆಸೆಗಳನ್ನು ಸಹ ಪೂರೈಸುತ್ತಾನೆ ಎಂದು ನಿಮಗೆ ಪ್ರವಾದನೆ ಹೇಳುತ್ತೇನೆ. ದೇವರು ಮುಖದಾಕ್ಷಿಣ್ಯ ಮಾಡುವವನಲ್ಲ. ಆತನು ಪಕ್ಷಪಾತಿಯಾದ ದೇವರಲ್ಲ. (ಅ. ಕೃ. 10:34) ಎಲೀಷನಿಗೆ ಆದಂತೆಯೇ ನಿಮಗೂ ಸಹ ಆಗಲಿದೆ. ಆತನ ಪ್ರೀತಿಯ ಮತ್ತು ಕೃಪೆಯ ಮೇಲೊದಿಕೆಯು ನಿಮ್ಮ ಮೇಲೆ ಬೀಳಲಿದೆ.
ಪ್ರಾರ್ಥನೆಗಳು
ತಂದೆಯೇ, ನನ್ನ ಎಲ್ಲಾ ಆಶೀರ್ವಾದಗಳಿಗೂ ನೀನೆ ಮೂಲನಾಗಿರುವುದಕ್ಕಾಗಿ ನಿನಗೆ ಸ್ತೋತ್ರ. ನನ್ನ ಪ್ರಯಾಸವೆಲ್ಲವೂ ನನ್ನ ಜೀವನದಲ್ಲಿ ಶಿಸ್ತನ್ನು ಹುಟ್ಟಿಸುವಂತೆ ಅದನ್ನು ಉಪಯೋಗಿಸು. ನನ್ನ ಪ್ರಯಾಸವೆಲ್ಲವೂ ನನ್ನ ಸುತ್ತ ಇರುವವರೆಲ್ಲರಿಗೂ ಆಶೀರ್ವಾದಕರವಾಗಿರುವಂತೆ ಯೇಸು ನಾಮದಲ್ಲಿ ಮಾಡು. ಆಮೆನ್.
Join our WhatsApp Channel
Most Read
● ದೇವರಿಗಾಗಿ ದಾಹದಿಂದಿರುವುದು● ಹಣಕಾಸಿನ ಅವ್ಯವಸ್ಥೆಯಿಂದ ಪಾರಾಗುವುದು ಹೇಗೆ?
● ಬೀಜದಲ್ಲಿರುವ ಶಕ್ತಿ -3
● ಸ್ವಸ್ಥ ಚಿತ್ತತೆ ಎಂಬುದು ಒಂದು ವರ
● ಬದಲಾಗಲು ಇರುವ ತೊಡಕುಗಳು.
● ನಿಮ್ಮ ಗತಿಯನ್ನು ಹಾಳು ಮಾಡಿಕೊಳ್ಳಬೇಡಿರಿ!
● ನಿರುತ್ಸಾಹ ಪಡಿಸುವ ಬಾಣಗಳನ್ನು ಜಯಿಸುವುದು-1
ಅನಿಸಿಕೆಗಳು