ಅನುದಿನದ ಮನ್ನಾ
ಹಣಕಾಸಿನ ಅವ್ಯವಸ್ಥೆಯಿಂದ ಪಾರಾಗುವುದು ಹೇಗೆ?
Sunday, 25th of August 2024
1
0
154
Categories :
ಹಣ ನಿರ್ವಹಣೆ ( Money Management)
ನಾನೊಬ್ಬ ಫಾಸ್ಟರ್ ಆಗಿರುವುದರಿಂದ ಜನರು ಯಾವಾಗಲೂ ನನ್ನ ಬಳಿಗೆ ಬಂದು ಅವರ ಆರ್ಥಿಕ ಪ್ರಗತಿಗಾಗಿ ಪ್ರಾರ್ಥಿಸಬೇಕೆಂದು ಕೇಳಿಕೊಳ್ಳುತ್ತಾರೆ.ಆದರೆ ಒಂದು ಮಾತನ್ನು ನಾನು ಯಾವಾಗಲೂ ಕೇಳಿಸಿಕೊಳ್ಳುವುದೇನೆಂದರೆ, "ಪಾಸ್ಟರ್ ರವರೆ ನಾನು ದುಡಿದ ಹಣವೆಲ್ಲ ಎಲ್ಲೋಗುತ್ತಿದೆಯೋ ಗೊತ್ತೇ ಆಗುತ್ತಿಲ್ಲ" ಎಂಬುದೇ
ಆದಾಯ ಎಷ್ಟೇ ಇದ್ದರೂ "ನನಗೆ ಇನ್ನು ಸ್ವಲ್ಪ ಜಾಸ್ತಿ ಇದ್ದರೆ ನನ್ನ ಆರ್ಥಿಕ ಸ್ಥಿತಿಯಲ್ಲಿ ನಿಜವಾಗಿ ನಾನು ಸಂತೃಪ್ತಿ ಯಾಗಿರುತ್ತಿದ್ದೆ" ಎಂದು ಅನೇಕರು ಹೇಳುವುದನ್ನು ನಾನು ಕೇಳಿದ್ದೇನೆ. ಸತ್ಯವೇನೆಂದರೆ ನಾವು ಎಷ್ಟು ಸಂಪಾದಿಸುತ್ತೇವೆ ಎಂಬುದಕ್ಕೂ ಇದಕ್ಕೂ ಯಾವುದೇ ಸಂಬಂಧವಿಲ್ಲ. ಆದರೆ ನಾವು ನಮ್ಮಲ್ಲಿರುವುದನ್ನು ಹೇಗೆ ನಿರ್ವಹಿಸುತ್ತೇವೆ ಎಂಬುದಕ್ಕೂ ಇದಕ್ಕೂ ಬಹಳ ನಿಕಟ ಸಂಬಂಧವಿದೆ.
ಒಂದು ಒಳ್ಳೆಯ ಆರ್ಥಿಕ ಸ್ಥಿತಿಗತಿಯು ಬಹಳ ಮುಖ್ಯವಾದ ವಿಚಾರವಾಗಿದೆ. ಏಕೆಂದರೆ ಇದುವೇ ನಮ್ಮ ಮನೆಗಳಲ್ಲಿ ನಮ್ಮ ವೈವಾಹಿಕ ಜೀವನದಲ್ಲಿ ಹಾಗೂ ಇನ್ನೂ ಹೆಚ್ಚಾಗಿ ನಮ್ಮ ಆರ್ಥಿಕ ಜೀವಿತದ ಪರಿಸರದಲ್ಲಿ ಒಂದು ನಾಟಕೀಯ ಪ್ರಭಾವವನ್ನು ಬೀರುವಂತದ್ದಾಗಿದೆ.
ಅನೇಕ ಕುಟುಂಬಗಳು ಇಂದು ಹಣಕಾಸಿನ ಸಮಸ್ಯೆಗಳಿಂದಲೇ ಒಡೆದು ಹೋಗಿವೆ. ಅನೇಕರು ಇಂದು ತಮ್ಮ ಆರ್ಥಿಕ ಪರಿಸ್ಥಿತಿಯಿಂದಲೇ ತಮ್ಮ ಕರೆಗಳನ್ನು ಪೂರೈಸದೆ ಕೈ ಚೆಲ್ಲಿ ಬಿಟ್ಟಿದ್ದಾರೆ. ಆದರಿಂದ ನಮ್ಮ ವೈಯಕ್ತಿಕ, ತಾತ್ವಿಕ ಹಾಗೂ ಭಾವನಾತ್ಮಕ ಸಮಸ್ಯೆಗಳು ಮತ್ತು ಸಾಮರ್ಥ್ಯಗಳು ನಮ್ಮ ಹಣ ಬಳಕೆಯ ರೀತಿಯನ್ನು ಪ್ರತಿಬಿಂಬಿಸುವಂತವುಗಳಾಗಿವೆ.
ಒಬ್ಬರು ಒಮ್ಮೆ ಹೀಗೆ ಹೇಳಿದ್ದಾರೆ "ನೀವು ಒಬ್ಬ ಪುರುಷ ಅಥವಾ ಮಹಿಳೆಯ ಆರ್ಥಿಕ ಪರಿಪಕ್ವತೆಯನ್ನು ಅವರ ಚೆಕ್ ಪುಸ್ತಕ ಹಾಗೂ ಕ್ರೆಡಿಟ್ ಕಾರ್ಡ್ ಸ್ಟೇಟ್ಮೆಂಟ್ ನೋಡುವ ಮೂಲಕ ಹೇಳಬಹುದು " ಎಂದು. ಸರಿ ನಿಮ್ಮದು ಹೇಗೆ ಕಾಣುತ್ತಿದೆ ಅದು ನಿಮ್ಮ ವೈಯಕ್ತಿಕ ಪ್ರತಿಬಿಂಬಕ್ಕೆ ಪ್ರಶ್ನೆಯಾಗಿದೆ.
ಕರ್ತನಾದ ಯೇಸುವು ಬೇರೆ ಇನ್ನಿತರ ಯಾವುದೇ ವಿಚಾರಕ್ಕಿಂತಲೂ ಹೆಚ್ಚಾಗಿ ಹಣದ ಕುರಿತು ಮಾತನಾಡಿದ್ದಾನೆ ಎಂದು ನಿಮಗೆ ತಿಳಿದಿದೆಯೇ? ಕೆಲವು ಸತ್ಯವೇದ ಪಂಡಿತರು ಹೇಳುವುದೇನೆಂದರೆ "ಸತ್ಯ ವೇದದಲ್ಲಿ ದಾಖಲಾದ ಯೇಸುವಿನ ಮಾತುಗಳಲ್ಲಿ 15 ಪ್ರತಿಶತ ಹಣದ ಕುರಿತ ವಿಚಾರಗಳೇ ಇವೆ". ಇವು ಪರಲೋಕ ಮತ್ತು ನರಕದ ವಿಷಯದ ಕುರಿತಾದ ವಿಚಾರಗಳಿಗಿಂತಲೂ ಹೆಚ್ಚಿನವುಗಳಾಗಿವೆ" ಎಂಬುದೇ
ಯೇಸುವಿಗೆ ಹಣವು ಏಕೆ ಅಷ್ಟು ಮಹತ್ವವುಳ್ಳದಾಗಿತ್ತು?
ಅದಕ್ಕೆ ಉತ್ತರ ಸರಳ! ಹಣವು ಕೂಡ ಒಂದು ಆತ್ಮಿಕ ಸಂಗತಿಯಾಗಿದೆ.
ನಾವು ಹಿಂದೆ ಹಾಗೂ ಇಂದು ಏನೆಲ್ಲಾ ಹೊಂದಿಕೊಂಡಿದ್ದೆವೋ, ಅವೆಲ್ಲವೂ ದೇವರಿಂದ ಬಂದದ್ದೇ ಆಗಿದೆ. ಅದು ಆತನದೇ ಆಗಿದ್ದೂ, ಆತನು ಆತನ ಉದ್ದೇಶಗಳಿಗಾಗಿ ನಾವು ಅದನ್ನು ಉಪಯೋಗಿಸುವಂತೆ ನಮ್ಮ ಮನೆವಾರ್ತೆಗಾಗಿ ಕೊಟ್ಟಿದ್ದಾನೆ.
ದಾವೀದನು ಈ ಒಂದು ರಹಸ್ಯವನ್ನು ಅರಿತುಕೊಂಡು ಹೀಗೆ ಪ್ರಾರ್ಥಿಸುತ್ತಾನೆ.
"ನಾವು ಈ ಪ್ರಕಾರ ಸ್ವೇಚ್ಫೆಯಿಂದ ಕಾಣಿಕೆಗಳನ್ನು ಸಮರ್ಪಿಸಲು ಶಕ್ತಿಹೊಂದಿದ್ದಕ್ಕೆ ನಾನಾಗಲಿ ನನ್ನ ಪ್ರಜೆಗಳಾಗಲಿ ಎಷ್ಟರವರು? ಸಮಸ್ತವು ನಿನ್ನಿಂದಲೇ; ನೀನು ಕೊಟ್ಟದ್ದನ್ನೇ ನಿನಗೆ ಕೊಟ್ಟೆವು."(1 ಪೂರ್ವಕಾಲವೃತ್ತಾಂತ 29:14)
ಈ ಸಂಗತಿಯನ್ನು ತಿಳಿದುಕೊಂಡು ಇದನ್ನು ನಂಬುವರಾಗುವಂತದ್ದೇ ಆರ್ಥಿಕ ಬಿಡುಗಡೆ ಕಡೆಗೆ ನಾವು ಇಡಬೇಕಾದ ಅತ್ಯಂತ ನಿರ್ಣಾಯಕ ಹೆಜ್ಜೆಯಾಗಿದೆ. (ಯೋಹಾನ 8:32). ಸರ್ವಕ್ಕೂ ಯಜಮಾನನು ದೇವರೇ ಆಗಿದ್ದಾನೆ ಮತ್ತು ಆತನ ಸ್ವಂತ ಸಮೃದ್ಧಿಯಿಂದಲೇ ಎಲ್ಲವನ್ನು ನಮಗೆ ಅನುಗ್ರಹಿಸುವವನಾಗಿದ್ದಾನೆ.
ಈಗಾಗಲೇ ಆಶೀರ್ವದಿಸಲ್ಪಟ್ಟವರಾದ ಹಾಗೂ ಆಶೀರ್ವಾದಗಳನ್ನು ಹೊಂದಿಕೊಳ್ಳುತ್ತಿರುವಂತಹ ನಾವು ನಮಗಿರುವ ಎಲ್ಲಾ ಸಂಪನ್ಮೂಲಗಳು ನಿಜವಾಗಿ ಎಲ್ಲಿಂದ ಬಂದಿವೆ ಎಂಬುದನ್ನು ತಿಳಿದವರಾಗಿ ಯಾವಾಗಲೂ ಆತನು ಅನುಗ್ರಹಿಸಿದ ಹಣದಿಂದ ಆತನನ್ನು ಸನ್ಮಾನಿಸುವ ಮಾರ್ಗಗಳನ್ನು ಹುಡುಕುವವರಾಗಬೇಕು. ಇದು ಸಮೃದ್ಧಿಯ ಒಳಹರಿವುಗಳನ್ನು ಇನ್ನು ಹೆಚ್ಚಾಗುವಂತೆ ಮಾಡುತ್ತದೆ.
ಪ್ರಾರ್ಥನೆಗಳು
ತಂದೆಯಾದ ದೇವರೇ, ಇಂದು ನನ್ನ ತಲೆಯನ್ನು ಸಮೃದ್ಧಿಯ ತೈಲದಿಂದ ಅಭಿಷೇಕಿಸಿ ನನ್ನ ಪ್ರತಿಯೊಂದು ಹಣಕಾಸಿನ ಪಾತ್ರೆಯು ನಿಮ್ಮ ಸಮೃದ್ಧಿಯಿಂದ ಯೇಸು ನಾಮದಲ್ಲಿ ಉಕ್ಕಿ ಹರಿಯುವಂತೆ ಮಾಡು.ತಂದೆಯಾದ ದೇವರೇ, ನನ್ನ ಕರೆಯನ್ನು ಪೂರೈಸಲು ಕಾರಣವಾಗುವಂತಹ ಸರಿಯಾದ ಜನರೊಂದಿಗೆ ಯೇಸು ನಾಮದಲ್ಲಿ ನಾನು ಸಂಪರ್ಕ ಹೊಂದುವಂತೆ ಮಾಡು.
ದೇವರು ಅನುಗ್ರಹಿಸಿರುವ ನನ್ನ ಎಲ್ಲಾ ಗುರಿಗಳನ್ನು ಮತ್ತು ದರ್ಶನಗಳನ್ನು ಯೇಸು ನಾಮದಲ್ಲಿ ಸಾಧಿಸುತ್ತೇನೆ ಎಂದು ನಾನೆಂದು ಘೋಷಿಸುತ್ತೇನೆ. ನನ್ನ ಜೀವನದಲ್ಲಿರುವ ಪ್ರತಿಯೊಂದು ದಾರಿದ್ರದ ಮೂಲವು ದೇವರ ಬೆಂಕಿಯಿಂದ ಸುಟ್ಟು ಬೂದಿಯಾಗಲಿ ಎಂದು ಯೇಸು ನಾಮದಲ್ಲಿ ಅಜ್ಞಾಪಿಸುತ್ತೇನೆ.
ದೇವರು ಅನುಗ್ರಹಿಸಿರುವ ನನ್ನ ಎಲ್ಲಾ ಗುರಿಗಳನ್ನು ಮತ್ತು ದರ್ಶನಗಳನ್ನು ಯೇಸು ನಾಮದಲ್ಲಿ ಸಾಧಿಸುತ್ತೇನೆ ಎಂದು ನಾನೆಂದು ಘೋಷಿಸುತ್ತೇನೆ. ನನ್ನ ಜೀವನದಲ್ಲಿರುವ ಪ್ರತಿಯೊಂದು ದಾರಿದ್ರದ ಮೂಲವು ದೇವರ ಬೆಂಕಿಯಿಂದ ಸುಟ್ಟು ಬೂದಿಯಾಗಲಿ ಎಂದು ಯೇಸು ನಾಮದಲ್ಲಿ ಅಜ್ಞಾಪಿಸುತ್ತೇನೆ.
Join our WhatsApp Channel
Most Read
● ದಿನ 16:40 ದಿನಗಳ ಉಪವಾಸ ಮತ್ತು ಪ್ರಾರ್ಥನೆ.● ಅಂತ್ಯಕಾಲದ ಸಮಯದ 7 ಪ್ರಮುಖವಾದ ಪ್ರವಾದನಾ ಸೂಚನೆಗಳು: #2
● ಬೆಟ್ಟಗಳ ಮತ್ತು ತಗ್ಗಿನ ದೇವರು.
● ಮನುಷ್ಯನ ಹೃದಯ
● ಮನುಷ್ಯರಿಂದ ಬರುವ ಹೊಗಳಿಕೆಗಿಂತಲೂ ದೇವರು ಕೊಡುವ ಪ್ರತಿಫಲವನ್ನು ಎದುರು ನೋಡುವುದು.
● ಅಂತ್ಯಕಾಲದ 7 ಪ್ರಮುಖವಾದ ಪ್ರವಾದನಾ ಸೂಚನೆಗಳು : #1
● ಸಹವಾಸದಲ್ಲಿರುವ ಅಭಿಷೇಕ
ಅನಿಸಿಕೆಗಳು