ಅನುದಿನದ ಮನ್ನಾ
ಉತ್ತಮ ಹಣ ನಿರ್ವಹಣೆ
Wednesday, 11th of September 2024
1
0
178
Categories :
ಹಣ ನಿರ್ವಹಣೆ ( Money Management)
ಸಮೃದ್ಧವಾದ ಜೀವನ ನಡೆಸಬೇಕೆಂದರೆ ಉತ್ತಮವಾದ ಹಣ ನಿರ್ವಹಣೆಯ ಜ್ಞಾನ ಅವಶ್ಯ. ಶತ್ರುವೂ ಈ ಸತ್ಯವನ್ನು ಚೆನ್ನಾಗಿ ತಿಳಿದಿದ್ದಾನೆ. ಆದ್ದರಿಂದಲೇ ಜನರು ತಮ್ಮ ಹಣವನ್ನು ಸಾಧ್ಯವಾದಷ್ಟು ತಪ್ಪಾಗಿ ನಿರ್ವಹಿಸುವಂತೆ ಮಾಡಿ ಜನರನ್ನು ಮೋಸಗೊಳಿಸಲು ಪ್ರಯತ್ನಿಸುತ್ತಾನೆ.
ದರ್ಶನ ಹಾಗೂ ಕನಸುಗಳ ಅರ್ಥ ಹೇಳುವ ಅದ್ಭುತವರ ಗಳನ್ನು ಹೊಂದಿದ ದೇವರ ಮನುಷ್ಯನಾದ ಯೋಸೇಫನನ್ನು ಆದಿಕಾಂಡ 41 ರಲ್ಲಿ ನಾವು ನೋಡುತ್ತೇವೆ. ಐಗುಪ್ತದ ಮಾಂತ್ರಿಕರಾದ ಯಾರಿಂದಲೂ ಸಹ ಅರ್ಥೈಸಲು ಸಾಧ್ಯವಾಗದ ಕನಸನ್ನು ಫರೋಹನ ಕಂಡಾಗ ಅದನ್ನು ಅರ್ಥೈಸಿ ಹೇಳುವಂತೆ ಯೋಸೇಫನನ್ನು ಕರೆಸಲಾರುತ್ತದೆ.
"ವರಗಳು ಅನುಕೂಲತೆಗೂ ಶ್ರೀಮಂತರ ಸಾನ್ನಿಧ್ಯಪ್ರವೇಶಕ್ಕೂ ಸಾಧನ. "(ಜ್ಞಾನೋಕ್ತಿಗಳು 18:16 )
ಇದುವೇ ಯೋಸೇಫನಲ್ಲಿ ಆದದ್ದು. ಒಂದೇ ದಿನದಲ್ಲಿ ಅವನು ಸೆರೆಮನೆಯಿಂದ ಅರಮನೆಗೆ ಕರೆದೋಯ್ಯಲ್ಪಟ್ಟು, ಐಗುಪ್ತದ ಪ್ರಧಾನಿಯಾಗಿ ನೇಮಕಗೊಂಡನು.
ಯೋಸೆಫನಲ್ಲಿ ಅದ್ಭುತವಾದ ಜ್ಞಾನದ ವರವಿತ್ತು. ಅವನಲ್ಲಿ ಸಂಪನ್ಮೂಲಗಳನ್ನು ವಿವೇಕಯುತವಾಗಿ ಬಳಸಿಕೊಳ್ಳುವ ಆಕರ್ಷಕ ಜ್ಞಾನವಿತ್ತು. ಅದು ಐಗುಪ್ತದಲ್ಲಿ ಬಂದ ಕಠಿಣವಾದ ಬರಗಾಲದ ಸಮಯವನ್ನು ನಿರ್ವಹಿಸಿದ ರೀತಿಯಿಂದ ಸಾಬೀತಾಯಿತು.
ಒಂದು ಆಸಕ್ತಿದಾಯಕ ಭಾಗವೆಂದರೆ ಐಗುಪ್ತ ಸೇರಿದಂತೆ ಎಲ್ಲಾ ದೇಶಗಳೂ ಏಳು ವರ್ಷಗಳ ಕಾಲ ಕಠಿಣವಾದ ಬರಗಾಲವನ್ನು ಅನುಭವಿಸಿದವು. ಆದರೆ ಐಗುಪ್ತ ಹಾಗು ಇತರ ದೇಶಗಳ ನಡುವೆ ಇದ್ದ ಒಂದೇ ಒಂದು ವ್ಯತ್ಯಾಸವಿದ್ದರೆ ಐಗುಪ್ತವು ನಿರ್ವಹಣಾ ತಂತ್ರವನ್ನು ಅಳವಡಿಸಿಕೊಂಡಿತು. ಆದರೆ ಇತರ ದೇಶಗಳು ಅದನ್ನು ಮಾಡಲಿಲ್ಲ. ಬರ ಬಂದಾಗ ಐಗುಪ್ತದ ಸುತ್ತಮುತ್ತಲಿನ ಎಲ್ಲಾ ದೇಶಗಳು ಐಗುಪ್ತದೇಶದ ಬಾಗಿಲಲ್ಲಿ ಸಾಲುಗಟ್ಟಿನಿಂದವು.
ನಿಮ್ಮ ಹಣಕಾಸನ್ನು ನೀವು ಚೆನ್ನಾಗಿ ನಿರ್ವಹಿಸಬಹುದಾದರೇ, ನೀವು ನಿಮ್ಮ ಜೀವಿತದಲ್ಲಿ ದೇವರ ಉದ್ದೇಶ ಹಾಗೂ ಯೋಜನೆಯನ್ನು ನೀವು ಪೂರೈಸಿ ಬಿಡುವಿರಿ ಎಂಬುದು ಶತ್ರುವಿಗೆ ತಿಳಿದಿದೆ. ಆದ್ದರಿಂದ ಅವನು ಈ ವಿಷಯದಲ್ಲಿ ನಿಮ್ಮನ್ನು ಆಶಾಭಂಗ ಪಡಿಸಲು ತನ್ನ ಪುಸ್ತಕದ ಪ್ರತಿಯೊಂದು ತಂತ್ರವನ್ನು ಪ್ರಯತ್ನಿಸಿ ಬಳಸುತ್ತಾನೆ.
ಉದಾಹರಣೆಗೆ ನಿಮ್ಮ ಸಂಬಳ ತಿಂಗಳಿಗೆ 30000/- ಎಂದಿಟ್ಟುಕೊಳ್ಳೋಣ ತುಂಬಾ ತಿಂಗಳ ಖರ್ಚು 27000/- ಆಗಿ 3000/- ನಿಮಗೆ ಉಳಿತಾಯವಾಗುತ್ತದೆ ಎಂದು ಇಟ್ಟುಕೊಳ್ಳಿ. ಈಗ ಮಾಲ್ ಬಳಿಯಿಂದ ನೀವು ಹಾದು ಹೋಗುತ್ತಾ ಇರುವಾಗ ಇತ್ತೀಚಿಗಷ್ಟೇ ಬಂದ ಸ್ಮಾರ್ಟ್ ಫೋನನ್ನು ನೋಡುತ್ತೀರಿ. (ನಿಮ್ಮಲ್ಲಿ ಯೋಗ್ಯವಾದ ಸ್ಮಾರ್ಟ್ ಫೋನ್ ಇದೆ ಎಂಬುದು ನೀನು ಗಮನಿಸಬೇಡ) ಇತ್ತೀಚಿನ ಸ್ಮಾರ್ಟ್ ಫೋನ್ ನಿನ್ನ ಬಳಿ ಇಲ್ಲ ಎಂದು ಸೈತಾನನು ನಿಮಗೆ ಮನವರಿಕೆ ಮಾಡಲು ಪ್ರಾರಂಭಿಸುತ್ತಾನೆ. ನಿಮ್ಮ ಕೆಲಸದ ಸ್ಥಳದಲ್ಲಿಯೂ ನಿಮ್ಮ ಬಳಿ ಮಾತ್ರ ಇತ್ತೀಚಿನ ಸ್ಮಾರ್ಟ್ ಫೋನ್ ಇಲ್ಲ ಎನ್ನುವ ಅಂಶವನ್ನು ಎತ್ತಿ ತೋರಿಸುತ್ತಿರುತ್ತಾನೆ.
ಅತಿ ಶೀಘ್ರದಲ್ಲೇ ಕ್ರೆಡಿಟ್ ಕಾರ್ಡನ್ನು ಸ್ವೈಪ್ ಮಾಡುವ ಮೂಲಕ ಅವನ ಬಲೆಗೆ ನೀವು ಬೀಳುತ್ತೀರಿ. ಕೆಲವು ದಿನಗಳಾದ ಮೇಲೆ ನಿಮ್ಮ ವಾಸ್ತವ ಸ್ಥಿತಿ ನಿಮ್ಮ ಕಣ್ಣ ಮುಂದೆ ಬಂದು ನಿಲ್ಲುತ್ತದೆ. ನೀವು ಎಂತಹ ಪ್ರಮಾದವನ್ನು ಮಾಡಿ ಬಿಟ್ಟಿರಿ ಎಂದು ನಿಮಗೆ ಅರಿವಾವಾಗುತ್ತದೆ. ಇದರಿಂದ ನಿಮ್ಮ ಶಾಂತಿ ನೆಮ್ಮದಿ ಹಾಳಾಗಲಾರಂಭಿಸುತ್ತದೆ. ನೀವು ಸಾಲದ ಕೂಪಕ್ಕೆ ಬಿದ್ದಿರುತ್ತೀರಿ. ಈಗ ಈ ಸಾಲವನ್ನು ತೀರಿಸಲು ಮತ್ತೊಂದು ಸಾಲ ಅದಕ್ಕಾಗಿ ಮತ್ತೊಂದು ಸುಳ್ಳು ಅದಕ್ಕಾಗಿ ಮತ್ತೊಂದು ಕುಟೀಲತೆ ಎಲ್ಲವೂ ಆರಂಭವಾಗುತ್ತದೆ.
ನೀವೀಗ ಸಾಲದ ವಿಷ ವರ್ತಲದಲ್ಲಿ ಸಿಕ್ಕಿಹಾಕಿಕೊಂಡು ದೇವರಿಗೆ ಕೊಡಲು ನಿಮ್ಮಲ್ಲಿ ಏನೂ ಇಲ್ಲದ ಸ್ಥಿತಿಗೆ ಬಂದು ಬಿಡುತ್ತೀರಿ.
ನಾವಿಲ್ಲಿ ಅನುಸರಿಸಬೇಕಾದ ಒಂದು ಸಿದ್ಧಾಂತವಿದೆ.
"ಜ್ಞಾನಿಯ ನಿವಾಸದಲ್ಲಿ ಎಣ್ಣೆಯೂ ಶ್ರೇಷ್ಠ ಸಂಪತ್ತೂ ಇರುವವು, ಜ್ಞಾನಹೀನನು ಇದ್ದದ್ದನ್ನೆಲ್ಲಾ ನುಂಗಿಬಿಡುವನು."(ಜ್ಞಾನೋಕ್ತಿಗಳು 21:20)
ಸರಳವಾಗಿ ಹೇಳಬೇಕೆಂದರೆ "ಬುದ್ದಿವಂತ ಜನರು ತಾವು ದುಡಿಯುವ ಎಲ್ಲವನ್ನು ಖರ್ಚು ಮಾಡದ ಕಾರಣ ಅವರ ಬಳಿ ಸಾಕಷ್ಟು ಉಳಿದಿರುತ್ತದೆ. ಮತ್ತೊಂದೆಡೆ ಅನೇಕರು ಅವರು ದುಡಿಯುವ ಎಲ್ಲವನ್ನು ಪ್ರಾಯಶಃ ಅದಕ್ಕಿಂತಲೂ ಹೆಚ್ಚಾಗಿ ಖರ್ಚು ಮಾಡುತ್ತಾರೆ.
ಸರಳವಾದ ಒಂದು ತತ್ವವೆಂದರೆ ಆರ್ಥಿಕ ಪ್ರಗತಿಯನ್ನು ಸಾಧಿಸಬೇಕೆಂದರೆ ಒಬ್ಬರು ತಮ್ಮ ಆದಾಯಕ್ಕಿಂತಲೂ ಕಡಿಮೆಯಾಗಿ ಖರ್ಚು ಮಾಡಬೇಕು. ಕೆಲವರು ಎಷ್ಟೇ ಹಣ ಬಂದರೂ ಯಾವಾಗಲೂ ಸಾಲದಲ್ಲಿ ಇರುತ್ತಾರೆ. ಏಕೆಂದರೆ ಅವರು ತಮ್ಮ ಆದಾಯಕ್ಕಿಂತಲೂ ಕಡಿಮೆ ಖರ್ಚು ಮಾಡಬೇಕೆಂಬ ತತ್ವವನ್ನು ಉಲ್ಲಂಘಿಸುತ್ತಿದ್ದಾರೆ. ಆದ್ದರಿಂದ ಜಾಣರಾಗಿರ್ರಿ ಮತ್ತು ದೇವರ ವಾಕ್ಯದ ಆಲೋಚನೆಯನ್ನು ಅನುಸರಿಸಿರಿ.
ಪ್ರಾರ್ಥನೆಗಳು
ತಂದೆಯೇ ಸಂಪನ್ಮೂಲಗಳನ್ನು ನಿರ್ವಹಿಸುವ ಜ್ಞಾನ ತಿಳುವಳಿಕೆಯನ್ನು ಯೇಸು ನಾಮದಲ್ಲಿ ನನಗೆ ಅನುಗ್ರಹಿಸಬೇಕೆಂದು ಬೇಡುತ್ತೇನೆ. ಆಮೇನ್.
Join our WhatsApp Channel
Most Read
● ದುರಾತ್ಮಗಳ ಪ್ರವೇಶವನ್ನು ತಡೆಯುವ ಅಂಶಗಳು - II● ನೀವು ಎಷ್ಟು ವಿಶ್ವಾಸಾರ್ಹರು?
● ಇಸ್ಕಾರಿಯೋತಾ ಯೂದನ ಜೀವನದಿಂದ ಕಲಿಯಬೇಕಾದ ಪಾಠಗಳು - 1
● ಸರಿಯಾದ ಸಂಬಂಧಗಳನ್ನು ಬೆಳೆಸಿಕೊಳ್ಳುವುದು ಹೇಗೆ
● ಐಕ್ಯತೆ ಮತ್ತು ವಿಧೇಯತೆಯ ಒಂದು ದರ್ಶನ
● ನೀವು ದೇವರನ್ನು ಎದುರಿಸುತ್ತಿದ್ದೀರಾ?
● ಸಾಲದಿಂದ ಹೊರಬನ್ನಿ : ಕೀಲಿಕೈ # 1
ಅನಿಸಿಕೆಗಳು