ಅನುದಿನದ ಮನ್ನಾ
ಚಾಡಿಮಾತು ಸಂಬಂಧಗಳನ್ನು ಹಾಳುಮಾಡುತ್ತದೆ
Wednesday, 25th of September 2024
3
1
188
Categories :
ಗಾಸಿಪ್ (Gossip)
ದೇವರೊಂದಿಗೆ ಆತ್ಮೀಯತೆ (Intimacy with God)
"ತುಂಟನು ಜಗಳ ಬಿತ್ತುತ್ತಾನೆ; ಚಾಡಿಕೋರನು ವಿುತ್ರರನ್ನು ಅಗಲಿಸುತ್ತಾನೆ."(ಜ್ಞಾನೋಕ್ತಿಗಳು 16:28)
ನಾವು ಹೊಸದಾಗಿ ಯಾರೊಟ್ಟಿಗಾದರೂ ಬಾಂಧವ್ಯವನ್ನು ಬೆಳೆಸಿಕೊಳ್ಳುವಾಗ ಚಾಡಿ ಮಾತುಗಳು ಎಂಬ ವಿಚಾರವನ್ನು ಗಮನದಲಿಟ್ಟುಕೊಂಡಿರಬೇಕು.
ಚಾಡಿಮಾತು ಬಾಂಧವ್ಯಗಳಿಗೆ ಏಕೆ ಹಾನಿಕಾರಕ?
ದೇವರ ವಾಕ್ಯವು ಹೇಳುವಂತೆ ಚಾಡಿ ಮಾತು ಉತ್ತಮ ಸ್ನೇಹಿತರನ್ನು ಬೇರ್ಪಡಿಸಬಹುದು ಚಾಡಿ ಮಾತು ಸಂಬಂಧಗಳನ್ನು ವಿಭಜಿಸುತ್ತದೆ. ಅವು ವ್ಯಕ್ತಿಗಳ ನಡುವಿನ ನಂಬಿಕೆಯನ್ನು ನಾಶಪಡಿಸುತ್ತದೆ ಮತ್ತು ಚಾಡಿ ಮಾತುಗಳು ಬಹುದಿನಗಳವರೆಗೂ ನೋವನ್ನು ಮನಸ್ಸಿನಲ್ಲಿ ಉಳಿಸಿಬಿಡುವಂತದ್ದಾಗಿದೆ.
ಒಂದು ವಿಷಯವನ್ನು ನೆನಪಿಡಿರಿ.ನಿಮ್ಮ ಬಳಿ ಬಂದು ಬೇರೆಯವರ ಕುರಿತು ಚಾಡಿ ಹೇಳುವವರು ನಿಮ್ಮ ಕುರಿತು ಖಂಡಿತವಾಗಿ ಇನ್ನೊಬ್ಬರ ಬಳಿ ಚಾಡಿ ಹೇಳೇ ಹೇಳುತ್ತಾರೆ. ಈ ಚಾಡಿ ಮಾತುಗಳು ಸ್ನೇಹಿತರನ್ನು ಅಗಲಿಸುತ್ತದೆ, (ಜ್ಞಾನೋಕ್ತಿ 16:28). ನಾವು ಸಂಬಂಧಗಳನ್ನು ಗೌರವಿಸುವವರಾಗೋಣವೇ ಹೊರತು ಎಂದಿಗೂ ಈ ಚಾಡಿಹೇಳುವ ಸಾಂಕ್ರಾಮಿಕ ಕಾಯಿಲೆ ಬಲೆಗೆ ಸಿಲುಕದೆ ಇರೋಣ
ಒಂದು ಸತ್ಯ ವಿಚಾರವೆಂದರೆ ಚಾಡಿ ಹೇಳುವವರು ಯಾವಾಗಲೂ ನಿಮಗೆ ಹತ್ತಿರವಾದವರ ತಪ್ಪುಗಳನ್ನು/ ಕೊರತೆಗಳನ್ನು ಕುರಿತು ನಿಮ್ಮ ಬಳಿ ಹೇಳುತ್ತಾ ನಿಮಗೆ ಹತ್ತಿರವಾಗಲು ಬಯಸುತ್ತಾರೆ. ಆದರೆ ನಿಮಗೆ ಹತ್ತಿರವಾದವರ ಕುರಿತು ತಪ್ಪಾಗಿ ಹೇಳುವಾಗ ನೀವು ಅದನ್ನು ಸಹಿಸಲಾರರಿರಿ ಎಂದು ಅವರಿಗೆ ಹೇಳುತ್ತಾ ಅಂತವರಿಗೆ ಒಂದು ಸೀಮಾ ರೇಖೆಯನ್ನು ಹಾಕಿರಿ. ಇತರ ಸಹೋದ್ಯೋಗಿಗಳು ಅಥವಾ ಇತರ ಸ್ನೇಹಿತರ ಕುರಿತು ಚಾಡಿ ಹೇಳುವುದರಿಂದಲೇ ಯಾರಿಗಾದರೂ ಯಾರೊಂದಿಗಾದರೂ ಸಂಪರ್ಕ ಸಾಧಿಸಲು ಸುಲಭವಾಗಿ ಎಂದು ಕಾಣುತ್ತದೆ. ಆದರೂ ಅದು ಭದ್ರವಾದ ವಿಶ್ವಾಸಾರ್ಹವಾದ ಸಂಬಂಧಗಳನ್ನು ನಿರ್ಮಿಸಿಕೊಳ್ಳಲು ಉತ್ತಮವಾದ ಮಾರ್ಗವಲ್ಲ. ವಾಸ್ತವವಾಗಿ ಯಾರಾದರೂ ರಸಭರಿತವಾದ ಚಾಡಿ ಮಾತುಗಳನ್ನು ಆಡುವವರೊಂದಿಗೆ ಇರಲು ಇಷ್ಟಪಡುತ್ತಾರೆ ಎಂದರೆ ಅಂತಹ ವ್ಯಕ್ತಿಗಳನ್ನು ನಂಬುವ ವಿಚಾರದಲ್ಲಿ ನೀವು ಜಾಗರೂಕರಾಗಿರ್ರಿ.
ನೀವು ಹೊಸಬರನ್ನು ಭೇಟಿಯಾದಾಗ ಯಾವುದಾದರೂ ಚಾಡಿ ವಿಷಯ ಬಂದರೆ ಆ ಸಂವಾದವನ್ನು ಬೇರೆ ವಿಷಯಕ್ಕೆ ತಿರುಗಿಸಲು ಪ್ರಯತ್ನಿಸಿ. ಅದು ಸಾಧ್ಯವಾಗದಿದ್ದರೆ ಅವರಿಗೆ ಪ್ರೀತಿಯಿಂದ ನೇರವಾಗಿ ಸ್ಪಷ್ಟವಾಗಿ ಈ ರೀತಿ ಮಾತನಾಡುವುದು ನಿಮಗೆ ಇಷ್ಟವಾಗುತ್ತಿಲ್ಲ ಎಂದು ಹೇಳಿ ಆ ಮಾತಿಗೊಂದು ಎಲ್ಲೆಯನ್ನು ಏರ್ಪಡಿಸಿರಿ. ಚಾಡಿ ಹೇಳುವಂತ ಗುಣವನ್ನು ದೇವರು ನಿಮಗಾಗಿ ರೂಪಿಸಲಿಲ್ಲ. ಪ್ರತಿಯೊಬ್ಬರ ಅಪರಿಪೂರ್ಣತೆಯನ್ನು ಬೆಟ್ಟು ಮಾಡಿ ಎಲ್ಲರಿಗೂ ತೋರಿಸಲೆಂದು, ಮತ್ತೊಬ್ಬರ ಕುರಿತು ತೀರ್ಪು ಮಾಡಲೆಂದು ನಮ್ಮನ್ನು ಆತನು ಉಂಟುಮಾಡಲಿಲ್ಲ. ಒಬ್ಬರನ್ನೊಬ್ಬರು ಪ್ರೀತಿಸಬೇಕೆಂದು ಮತ್ತೊಬ್ಬರನ್ನು ನಮ್ಮಂತೆಯೇ ಪ್ರೀತಿಸಬೇಕೆಂದು ಸತ್ಯವೇದವು ಪದೇ ಪದೇ ಹೇಳುತ್ತಲೇ ಇರುತ್ತದೆ. ವಾಕ್ ಸ್ವಾತಂತ್ರ್ಯ ಎಂದರೆ ಬಾಯಿಗೆ ಬಂದಂತೆ ಮಾತನಾಡಬಹುದು ಎಂಬ ಅರ್ಥವಲ್ಲ.
ಪ್ರಿಯರೇ ಪವಿತ್ರಾತ್ಮನು ನಾವು ಸ್ವಾತಂತ್ರ್ಯದಲ್ಲಿ ಜೀವಿಸಬೇಕೆಂದು ಕರೆದಿದ್ದಾನೆ. ಆದರೆ ಆ ಅದ್ಭುತ ಸ್ವಾತಂತ್ರ್ಯವನ್ನು ಯಾರನ್ನೋ ಕೆಳಗೆ ನೂಕಲು ಅವಕಾಶವನ್ನಾಗಿ ಬಳಸಿಕೊಳ್ಳಬೇಡಿರಿ.ಸ್ವಾತಂತ್ರ್ಯವೆಂದರೆ ನಮ್ಮ ಸ್ವಾರ್ಥದಿಂದ ಮುಕ್ತರಾಗಿ ಪ್ರೀತಿಯಿಂದ ಪರಸ್ಪರ ಸೇವೆ ಮಾಡುವಂಥದ್ದು ಆಗಿದೆ. ನಾವು ಮಾಡುವ ಎಲ್ಲಾ ಕಾರ್ಯದಲ್ಲೂ ನಾವು ಪ್ರೀತಿಯನ್ನು ವ್ಯಕ್ತಪಡಿಸಬೇಕು (ಗಲಾತ್ಯ 5:13)
ಪ್ರಾರ್ಥನೆಗಳು
ಕರ್ತನೇ, ನನ್ನ ಬಾಯಿಗೆ ಕಾವಲಿರಿಸು. ನನ್ನ ತುಟಿಗಳೆಂಬ ಕದಗಳನ್ನು ಕಾಪಾಡು.
ತಂದೆಯೇ ಯೇಸು ನಾಮದಲ್ಲಿ ಚಾಡಿ ಮಾತುಗಳಿಂದ ನನ್ನನ್ನು ಬಿಡಿಸು. ಆಮೆನ್.
ತಂದೆಯೇ ಯೇಸು ನಾಮದಲ್ಲಿ ಚಾಡಿ ಮಾತುಗಳಿಂದ ನನ್ನನ್ನು ಬಿಡಿಸು. ಆಮೆನ್.
Join our WhatsApp Channel
Most Read
● ಹೆಚ್ಚಿನ ಹೊರೆ ಬೇಡ● ಯೇಸು ನಿಜವಾಗಿ ಖಡ್ಗ ಹಾಕಲೆಂದು ಬಂದನೇ?
● ಸಾಲದಿಂದ ಹೊರಬನ್ನಿ : ಕೀಲಿಕೈ # 1
● ದಿನ 36:40 ದಿನಗಳ ಉಪವಾಸ ಮತ್ತು ಪ್ರಾರ್ಥನೆ.
● ನಿಮ್ಮನ್ನು ಅಡ್ಡಿಪಡಿಸುವ ನಂಬಿಕೆಗಳನ್ನು ಸೀಮಿತಗೊಳಿಸುವುದು
● ಮೊಗ್ಗು ಬಿಟ್ಟಂತಹ ಕೋಲು
● ಶ್ರೇಷ್ಠತೆಯ ಬೆನ್ನಟ್ಟುವಿಕೆ.
ಅನಿಸಿಕೆಗಳು