ಅನುದಿನದ ಮನ್ನಾ
ನಮ್ಮ ಹಿಂದಿರುವ ಉರಿಯುವ ಸೇತುವೆಗಳು
Saturday, 5th of October 2024
2
1
151
Categories :
ಬಿಡುಗಡೆ (Deliverance)
ಶಿಷ್ಯತ್ವ (Discipleship)
"ದೇವರ ಚಿತ್ತದಿಂದ ಯೇಸು ಕ್ರಿಸ್ತನ ಅಪೊಸ್ತಲನಾಗುವದಕ್ಕೆ ಕರೆಯಲ್ಪಟ್ಟ ಪೌಲನೂ ಸಹೋದರನಾದ ಸೊಸ್ಥೆನನೂ ಕೊರಿಂಥದಲ್ಲಿನ ದೇವರ ಸಭೆಗೆ ಅಂದರೆ ಕ್ರಿಸ್ತೇಸುವಿನಲ್ಲಿ ಪ್ರತಿಷ್ಠಿತರೂ ದೇವಜನರಾಗುವದಕ್ಕೆ ಕರೆಯಲ್ಪಟ್ಟವರೂ ಆಗಿರುವವರಿಗೆ ಮತ್ತು ನಮಗೂ ಸಮಸ್ತ ದೇವಜನರಿಗೂ ಕರ್ತನಾಗಿರುವ ಯೇಸು ಕ್ರಿಸ್ತನ ನಾಮಸ್ಮರಣೆಯನ್ನು ಮಾಡುವವರು ಎಲ್ಲಿದ್ದರೂ..... "(1 ಕೊರಿಂಥದವರಿಗೆ 1:1-2)
ಗ್ರೀಕ್ ಪರಿಭಾಷೆಯಲ್ಲಿ ಸಭೆ ಎಂದರೆ " ಹೊರಗೆ ಕರೆಯಲ್ಪಟ್ಟ ಜನರು " ಎಂದರ್ಥ.. ಪ್ರತಿಯೊಂದು ಸಭೆಗೂ ಎರಡು ಅಂಚೆ ವಿಳಾಸಗಳಿರುತ್ತವೆ.
1. ಭೌಗೋಳಿಕ ವಿಳಾಸ ("ಕೊರಿಂಥ"ದಲ್ಲಿರುವ) ಮತ್ತು
2. ಆತ್ಮೀಕ ವಿಳಾಸ (ಕ್ರಿಸ್ತ ಯೇಸುವಿನಲ್ಲಿ )
ಸಭೆ ಎಂಬುದು ದೇವರಿಗಾಗಿ ಪ್ರತ್ಯೇಕಿಸಲ್ಪಟ್ಟ ಅಥವಾ ಪವಿತ್ರೀಕರಿಸಿದ ಜನರಾದ ಸಂತರಿಂದ ರೂಪಿಸಲ್ಪಟ್ಟತದ್ದಾಗಿದೆ. ಸಂತರೆಂದರೆ ಅವರ ಪರಿಶುದ್ಧ ಜೀವಿತಾಕ್ಕಾಗಿ ಮನುಷ್ಯರಿಂದ ಗೌರವಿಸಲ್ಪಟ್ಟ ಸತ್ತುಹೋದ ಜನರಲ್ಲ. ಇಲ್ಲಿ ಪೌಲನು ಕ್ರಿಸ್ತ ಯೇಸುವಿನ ನಂಬಿಕೆಯ ಮೂಲಕ ದೇವರ ವಿಶೇಷ ಕಾರ್ಯಕ್ಕಾಗಿ ಪ್ರತ್ಯೇಕಿಸಲ್ಪಟ್ಟ ಜೀವಿಸುವ ಸಂತರಿಗೆ ಬರೆಯುತ್ತಿದ್ದಾನೆ.
ಇಂದು ಬೆಳಗ್ಗೆ ನನಗೊಂದು ವಾಟ್ಸಾಪ್ ಸಂದೇಶ ಬಂದಿತ್ತು. ಅದರಲ್ಲಿ" ಪ್ರೀತಿಯ ಪಾಸ್ಟರ್ ರವರೇ ನಾನು ನನ್ನ ಹಳೆಯ ಜೀವಿತಕ್ಕೆ ಹಿಂದಿರಿಗಬೇಕೆಂದಿದ್ದೇನೆ. ಏಕೆಂದರೆ ಯಾವ ಸಂಗತಿಗಳೂ ನಾನು ನೆನೆಸಿದಂತೆ ನಡೆಯುತ್ತಿಲ್ಲ. ದಯಮಾಡಿ ನನಗೆ ಸಲಹೆ ನೀಡಿರಿ" ಎಂದು ಬರೆದಿತ್ತು
ಹಿಂದಿನ ಕಾಲದಲ್ಲಿ (ಅವರು ಹೇಳುತ್ತಿರುವ ಹಾಗೆ) ಮತ್ತು ಸತ್ಯವೇದದ ಪ್ರಕಾರ ಒಬ್ಬ ಪುರುಷ ಮತ್ತು ಸ್ತ್ರೀ ಪರಸ್ಪರ ಪ್ರೀತಿಸುತ್ತಿದ್ದೇವೆ ಎಂದು ಒಪ್ಪಂದಕ್ಕೆ ಬಂದಾಗ ಅವರು ಪರಸ್ಪರ ಒಂದಾಗಿ ಬಾಳಲು ಬೇರೆ ಎಲ್ಲರಿಂದ ಪ್ರತ್ಯೇಕಿಸಿಕೊಳ್ಳುತ್ತಿದ್ದರು.ಅವರಲ್ಲಿ ಯಾರೊಬ್ಬರಾದರೂ ಮತ್ತೊಬ್ಬರ ಜೊತೆ ಸಂಬಂಧವಿಟ್ಟುಕೊಂಡರೆ(ಇಂದಿಗೂ ಕೂಡ) ಅದು ಅನೈತಿಕ ಎಂದು ಪರಿಗಣಿಸಲಾಗುತ್ತಿತ್ತು.
ಇದೇ ರೀತಿ ಕ್ರೈಸ್ತರು ಸಹ ಸಂಪೂರ್ಣವಾಗಿ ಯೇಸು ಕ್ರಿಸ್ತನಿಗೆ ಸೇರಿದವರಾಗಿದ್ದಾರೆ. ಕ್ರೈಸ್ತರು ಆತನಿಗಾಗಿ ಮತ್ತು ಆತನಿಗಾಗಿ ಮಾತ್ರವೇ ಪ್ರತ್ಯೇಕಸಲ್ಪಟ್ಟವರಾಗಿದ್ದಾರೆ. ಆದ್ದರಿಂದ ಹಿಂದೆ ತಿರುಗುವ ಮಾತೇ ಇಲ್ಲ.
ತನ್ನ ದೊಡ್ಡ ಹಾಗೂ ಬಲವಾದ ಶತೃವನ್ನು ಎದುರಿಸಲು ಹೊರಟ ಸೇನಾ ಜನರಲ್ ಒಬ್ಬರ ಕಥೆ ಇದೆ. ಆ ಜನರಲ್ ತನ್ನ ಇಡೀ ಸಂಘಕ್ಕಿಂತ ಬಲವಾದವನು. ಅವನು ತನ್ನ ಸೈನ್ಯದವರೆಲ್ಲರನ್ನು ದೋಣಿಯಲ್ಲಿ ತುಂಬಿಸಿಕೊಂಡು ಶತ್ರುವಿನ ಅಡ್ಡಕ್ಕೆ ಹೊರಟನು. ಅಲ್ಲಿ ತನ್ನ ಸೈನ್ಯದವರನ್ನೆಲ್ಲಾ ಇಳಿಸಿ ಮತ್ತು ಯುದ್ಧ ಸಾಮಗ್ರಿಗಳನ್ನು ಇಳಿಸಿ ತಾವು ಬಂದ ದೋಣಿಯನ್ನು ನಾಶಪಡಿಸಲು ಅವರಿಗೆ ಆಜ್ಞೆ ನೀಡಿದನು
ತನ್ನ ಮೊದಲ ಯುದ್ಧವನ್ನು ಆರಂಭಿಸುವ ಮೊದಲು ತನ್ನ ಜನರಿಗೆ "ನೋಡಿರಿ, ನಮ್ಮ ದೋಣಿ ಹೇಗೆ ಸುಟ್ಟು ಉರಿಯುತ್ತಿದೆ ಎಂದು. ಅದರ ಅರ್ಥ ನಾವು ಈ ಯುದ್ಧವನ್ನು ಗೆಲ್ಲದಿದ್ದರೆ ಇಲ್ಲಿಂದ ಹೇಗೂ ಕೂಡ ತಪ್ಪಿಸಿಕೊಳ್ಳಲಾರವು. ಆದ್ದರಿಂದ ನಾವು ಗೆಲ್ಲಬೇಕು ಇಲ್ಲವಾದರೆ ನಾಶವಾಗಬೇಕಾಗುತ್ತದೆ "ಎಂದನು.
ಕ್ರಿಸ್ತನಲ್ಲಿ ಒಂದು ಶುಭ ಸಂದೇಶ ವೆಂದರೆ ನಾವು ಈಗಾಗಲೇ ಜಯಶಾಲಿಗಳು , ಆದರೆ ನಾವು ಅದರಲ್ಲಿ ನಿಲ್ಲಬೇಕಷ್ಟೇ.
ಕಳೆದ ವಾರದಲ್ಲಿ ನಾನೊಂದು ಸಾಕ್ಷಿಯನ್ನು ಸ್ವೀಕರಿಸಿದೆ. ಅದರಲ್ಲಿ "ನಮಸ್ತೆ ಪಾಸ್ಟರ್ ರವರೇ ನಾನು ಸಂದೀಪ (ಹೆಸರು ಬದಲಿಸಲಾಗಿದೆ) ನೀವು ಬೋದಿಸಲು ಆರಂಭಿಸಿದಾಗ ನಾನು ಧೂಮಪಾನ ಮಾಡುತ್ತಾ ನನ್ನ ದೇಹವನ್ನು ಸರಿಯಾಗಿ ಕಾಳಜಿ ವಹಿಸುತ್ತಿಲ್ಲ ಎಂಬ ಪಾಪದ ಅರಿವನ್ನು ಕರ್ತನು ನನ್ನಲ್ಲಿ ಹುಟ್ಟಿಸಿದನು. (1ಕೊರಿಂತ 11 :16-17) ಆದರೂ ನನಗೆ ಈ ಚಟ ಬಿಡಲು ತುಂಬಾ ಕಷ್ಟಕರವೆನೆಸಿತ್ತು.
ಆದರೆ ಮತ್ತೆ ದೇವರು ನನ್ನೊಂದಿಗೆ ಪ್ರಕಟಣೆ 12:11 ಮೂಲಕ ಮಾತನಾಡಿ ಸಾಕ್ಷಿಯನ್ನು ಹಂಚಿಕೊಳ್ಳುವ ಹಾಗೂ ಶತ್ರುವನ್ನು ಜಯಸುವುದರ ಪ್ರಾಮುಖ್ಯತೆಯನ್ನು ವಿವರಿಸಿದನು. ನಾನು ಧೂಮಪಾನ ಮಾಡುವುದನ್ನು ಬಿಟ್ಟು ಬಿಟ್ಟಿದ್ದೇನೆ ಎಂದು ನನ್ನ ಸ್ನೇಹಿತರೊಂದಿಗೆ ಸಾಕ್ಷಿ ಹೇಳಿ ಬಿಟ್ಟರೆ ಮತ್ತೆ ನಾನು ಆ ಚಟವನ್ನು ಮುಂದುವರೆಸಿದರೆ ನನಗೆ ಮುಜುಗರವಾಗುತ್ತದೆ ಎಂಬುದನ್ನು ನಾನಾಗ ಅರ್ಥ ಮಾಡಿಕೊಂಡೆ. ಅದುವೇ ಒಂದು ಕೇಂದ್ರ ಬಿಂದುವಾಗಿತ್ತು (ಹಿಂದೆ ಉರಿಯುವ ಸೇತುವೆಯಂತೆ). ಹಾಗಾಗಿ ನಾನು ಸಾಕ್ಷಿ ಹೇಳಿದೆ.ಅದುವೇ ನನಗೆ ಸಹಾಯ ಮಾಡಿತು.
ಪ್ರಾರ್ಥನೆಗಳು
1. ತಂದೆಯೇ, ನಿಮ್ಮ ಸಮೃದ್ಧಿಯಲ್ಲಿ ಉತ್ಸಾಹದಿಂದ ನಡೆಯಲು ನನಗೆ ಯೇಸುನಾಮದಲ್ಲಿ ಸಹಾಯ ಮಾಡಿ ಆಗ ನಾನು ಯೇಸುಕ್ರಿಸ್ತನು ನನ್ನನ್ನು ಕರೆದ ಉದ್ದೇಶವನ್ನು ಪೂರೈಸಲು ಸಾಧ್ಯವಾಗುತ್ತದೆ.
2. ತಂದೆಯೇ, ಯಾರು ನನ್ನ ಗಮನಿಸದಿದ್ದರೂ ಸರಿಯಾದ ಕೆಲಸವನ್ನೇ ಮಾಡುವ ಕ್ರಿಸ್ತನ ಸ್ವಭಾವದಿಂದ ನನ್ನನ್ನು ತುಂಬಿಸಿ.
3. ತಂದೆಯೇ ಯೇಸುನಾಮದಲ್ಲಿ ಎಲ್ಲಾ ಭಕ್ತಿಹೀನ ಸಂಗತಿಗಳಿಂದ ನನ್ನನ್ನು ಪ್ರತ್ಯೇಕಿಸಿ.
2. ತಂದೆಯೇ, ಯಾರು ನನ್ನ ಗಮನಿಸದಿದ್ದರೂ ಸರಿಯಾದ ಕೆಲಸವನ್ನೇ ಮಾಡುವ ಕ್ರಿಸ್ತನ ಸ್ವಭಾವದಿಂದ ನನ್ನನ್ನು ತುಂಬಿಸಿ.
3. ತಂದೆಯೇ ಯೇಸುನಾಮದಲ್ಲಿ ಎಲ್ಲಾ ಭಕ್ತಿಹೀನ ಸಂಗತಿಗಳಿಂದ ನನ್ನನ್ನು ಪ್ರತ್ಯೇಕಿಸಿ.
Join our WhatsApp Channel
Most Read
● ಸರಿಪಡಿಸಿಕೊಳ್ಳಿರಿ● ಕೊರತೆಯಿಲ್ಲ
● ದಿನ 05: 40 ದಿನಗಳ ಉಪವಾಸ ಮತ್ತು ಪ್ರಾರ್ಥನೆ
● ಕಳೆದು ಹೋದ ರಹಸ್ಯ
● ನಿಮ್ಮ ಸಮಸ್ಯೆಗಳು ಮತ್ತು ನಿಮ್ಮ ನಡವಳಿಕೆಗಳು
● ಲಂಬಕೋನ ಹಾಗೂ ಸಮತಲದ ಕ್ಷಮಾಪಣೆ.
● ಸಿಟ್ಟಿನ ಬಲೆಯಿಂದ ದೂರ ಉಳಿಯುವುದು
ಅನಿಸಿಕೆಗಳು