"ಯೆಹೋವನು ನೀತಿವಂತರ ಕೂಗನ್ನು ಕೇಳಿ ಎಲ್ಲಾ ಕಷ್ಟಗಳಿಂದ ಅವರನ್ನು ಬಿಡಿಸುತ್ತಾನೆ. ಮುರಿದ ಮನಸ್ಸುಳ್ಳವರಿಗೆ ಯೆಹೋವನು ನೆರವಾಗುತ್ತಾನೆ; ಕುಗ್ಗಿಹೋದವರನ್ನು ಉದ್ಧಾರಮಾಡುತ್ತಾನೆ. ನೀತಿವಂತನಿಗೆ ಸಂಭವಿಸುವ ಕಷ್ಟಗಳು ಅನೇಕವಿದ್ದರೂ ಯೆಹೋವನು ಅವೆಲ್ಲವುಗಳಿಂದ ಅವನನ್ನು ಬಿಡಿಸುತ್ತಾನೆ."(ಕೀರ್ತನೆಗಳು 34:17-19)
ಭೂಮಿಯ ಮೇಲೆ ಹುಟ್ಟಿದ ಪ್ರತಿಯೊಬ್ಬ ಮನುಷ್ಯನೂ ಸಹ ಒಂದಲ್ಲಾ ಒಂದು ಸಾರಿ ನೋವಿನ ಹಾದಿಯನ್ನು ದಾಟಿ ಹೋಗಲೇಬೇಕು. ಅದು ದೈಹಿಕವಾಗಿರಬಹುದು ಭಾವನಾತ್ಮಕವಾಗಿರಬಹುದು ಅಥವಾ ಮಾನಸಿಕವಾಗಿಯೇ ಇರಬಹುದು. "ಸ್ತ್ರೀಯಲ್ಲಿ ಹುಟ್ಟಿದ ಮನುಷ್ಯನು ಅಲ್ಪಾಯುಷ್ಯನಾಗಿಯೂ ಕಳವಳದಿಂದ ತುಂಬಿದವನಾಗಿಯೂ ಇರುವನು. "(ಯೋಬನು 14:1)
ಈ ನೋವುಗಳು ತಮ್ಮ ಪ್ರೀತಿಪಾತ್ರವನ್ನು ಕಳೆದುಕೊಂಡಿದ್ದರಿಂದ, ಮುರಿದ ಸಂಬಂಧಗಳಿಂದ, ಆಪ್ತಮಿತ್ರರಿಂದಾದ ದ್ರೋಹಗಳಿಂದ, ತಿರುಗಿ ಬೀಳುವ ಮಕ್ಕಳಿಂದಲೋ ಉಂಟಾಗಬಹುದು. ಈಗ ಅಂತಹ ಸಮಯದಲ್ಲಿ ನಾವು ಏನನ್ನು ಮಾಡಬೇಕು ಎಂಬ ನಿರ್ಧಾರ ನಮಗೆ ಬಿಟ್ಟದ್ದು. ಆ ನೋವಿನೊಂದಿಗೆ ವ್ಯವಹರಿಸಿ ಸರಿಯಾದ ಆಯ್ಕೆಗಳನ್ನು ಮಾಡುವಂತದ್ದು ಅತ್ಯುನ್ನತವಾದ ಮಹತ್ತರ ಕಾರ್ಯವಾಗಿದೆ. ಏಕೆಂದರೆ ನೋವು ಎಂಬುದು ಮನುಷ್ಯನನ್ನು ಕಟ್ಟಲೂ ಬಹುದು ಮುರಿಯಲೂಬಹುದು.
ಒಂದು ದುಃಖಕರ ವಿಷಯವೇನೆಂದರೆ ಜನರು ಸಾಮಾನ್ಯವಾಗಿ ನೋವುಗಳನ್ನು ಮರೆಸಲು ಆಹಾರ, ಸಾಧನೆಗಳು, ಮಾದಕ ದ್ರವ್ಯಗಳು, ಮಧ್ಯಪಾನ ಅಥವಾ ಅನೈತಿಕ ಸಂಬಂಧ ಮುಂತಾದ ವಿಧಾನಗಳನ್ನು ಅರಸಿಕೊಂಡು ಹೋಗುವುದನ್ನು ಆಯ್ಕೆ ಮಾಡಿಕೊಳ್ಳುತ್ತಾರೆ.
ನಮ್ಮ ನೋವನ್ನು ನಿಶ್ಚೇತನ ಗೊಳಿಸಿಕೊಳ್ಳುವಂಥದ್ದು ನಮಗೆ ನೋವಿನಿಂದ ಶಾಶ್ವತ ಪರಿಹಾರ ನೀಡುವುದಿಲ್ಲ. ಅದು ಕೇವಲ ನಮ್ಮ ಹತಾಶೆ ಕಿರುಚಾಟ ಅರಚಾಟಗಳನ್ನು ಮಾತ್ರ ನಿಶಬ್ದಗೊಳಿಸುತ್ತದೆ. ನೋವನ್ನು ನಿಶ್ಚೇತನಗೊಳಿಸುವ ಈ ವಿಧಾನಗಳೆಲ್ಲಾ ವ್ಯಕ್ತಿಯನ್ನು ಬಂಧನದಲ್ಲಿ ಇಡುತ್ತದೆ.
ಅದು ನಮ್ಮಲ್ಲಿ ಒಂದು ನಿರ್ವಾತವನ್ನು ನಿರ್ಮಿಸುತ್ತದೆ. ಇದು ನಿಧಾನವಾಗಿ ನಾವು ಮತ್ತೊಬ್ಬರನ್ನು ಪ್ರೀತಿಸಲು - ನಂಬಲು ಇರುವ ನಮ್ಮ ಸಾಮರ್ಥ್ಯವನ್ನು ಕೊಲ್ಲುತ್ತದೆ. ಇದು ಮತ್ತೊಬ್ಬರೊಡನೆ ಅನಾಯಾಸವಾಗಿ ಬೆರೆಯುವಂತಹ ನಮ್ಮ ಸಾಮರ್ಥ್ಯವನ್ನು ಕೊಲ್ಲುತ್ತದೆ. ಏಕೆಂದರೆ ನಾವು ಭವಿಷ್ಯದಲ್ಲಿ ಅದೇ ರೀತಿ ನೋವಿಗೆ ಒಳಗಾಗಬಾರದೆಂದು ನಮ್ಮನ್ನು ನಾವು ರಕ್ಷಿಸಿಕೊಳ್ಳಲು ನಮ್ಮ ಸುತ್ತಲೂ ಒಂದು ರಕ್ಷಣಾ ಗೋಡೆಯನ್ನು ನಿರ್ಮಿಸಿಕೊಳ್ಳುವ ಕಾರ್ಯವಿಧಾನವನ್ನು ನಿರ್ಮಿಸಿಕೊಳ್ಳಲಾರಾಂಭಿಸುತ್ತೇವೆ.
ಈ ನೋವನ್ನು ನಿಶ್ಚೇತನ ಗೊಳಿಸುವ ಕಾರ್ಯವಿಧಾನದ ಅತ್ಯಂತ ಕೆಟ್ಟದಾದ ಒಂದು ಅಂಶವೆಂದರೆ ಅದು ದೇವರೊಂದಿಗೆ ಇರುವ ನಮ್ಮ ಸಂಬಂಧಗಳನ್ನೂ ಕೂಡ ನಾಶಪಡಿಸುತ್ತದೆ. ನಾವು ಬರ ಬರುತ್ತಾ ದೇವರ ಹಾಗೂ ಆತನ ಪ್ರಸನ್ನತೆ ಕಡೆಗೆ ಕಠಿಣ ಹೃದಯಿಗಳಾಗಿಬಿಡುತ್ತೇವೆ. ಆ ನೋವೆಂಬುದು ಒಬ್ಬನ ಅಥವಾ ಒಬ್ಬಳ ಜೀವಿತದಲ್ಲಿ ಎಂದಿಗೂ ದಾಟ ಕೂಡದೆಂಬ ಒಂದು ಗಡಿರೇಖೆಯನ್ನು ನಿರ್ಮಿಸಿಕೊಳ್ಳುವಂತೆ ಮಾಡಿಬಿಡುತ್ತದೆ.
ಇನ್ನೊಂದೆಡೆ ನೋವು ಎಂಬುದು ಒಂದು ದೊಡ್ಡ ಬದಲಾವಣೆಯನ್ನು ಉಂಟು ಮಾಡುವ ಒಂದು ಸಾಧನವಾಗಬಹುದು. ಆ ನೋವೆಂಬುದು ನಮ್ಮನ್ನು ಕರ್ತನ ಬಳಿ ಕರೆದೋಯ್ಯಬಲ್ಲ ಸಾಧನವಾಗಬಹುದು. ನಾವು ನಮ್ಮ ನೋವುಗಳನ್ನೆಲ್ಲಾ ಕರ್ತನ ಬಳಿಗೆ ತೆಗೆದುಕೊಂಡು ಹೋಗಿ ಆ ನೋವನ್ನು ನಿವಾರಿಸುವಂತೆ ಬೇಡಿಕೊಳ್ಳುವಾಗ ಅದು ಸಾಧನವಾಗುತ್ತದೆ. ಯಾಕೋಬ 4:8 ನಾವು ದೇವರ ಸಮೀಪಕ್ಕೆ ಬರುವುದಾದರೆ ಆತನೂ ನಮ್ಮ ಸಮೀಪಕ್ಕೆ ಬರುವನು ಎಂದು ನೆನಪಿಸುತ್ತದೆ . ನಾವು ಆತನನ್ನು ನಮ್ಮ ಸಮೀಪಕ್ಕೆ ಬರುವಂತೆ ಆಹ್ವಾನಿಸಿದಾಗ ಆತನು ಯಾವಾಗಲೂ ನಮ್ಮ ಆಹ್ವಾನವನ್ನು ಅಂಗೀಕರಿಸಿಕೊಳ್ಳುವವನೇ ಆಗಿರುತ್ತಾನೆ. ನನ್ನ ದುಃಖದ ಹಾಗೂ ನಿರಾಶೆಯ ಸಮಯವೇ ನನ್ನನ್ನು ಕರ್ತನ ಬಳಿ ಕರೆ ತಂದಿತು. ನಾನು ಇನ್ನೇನು ಆತ್ಮಹತ್ಯೆ ಮಾಡಿಕೊಳ್ಳುವ ಸಮಯದಲ್ಲಿದ್ದಾಗ ಕರ್ತನು ಕೃಪಾ ಪೂರ್ಣನಾಗಿ ನನ್ನ ದುಃಖದಲ್ಲಿ ನನಗೆ ಆದರಣೆ ನೀಡಿದನು.
"ಯೆಹೋವನು ಯೆರೂಸಲೇಮನ್ನು ಕಟ್ಟಿಸುತ್ತಿದ್ದಾನೆ; ಚದರಿಹೋಗಿದ್ದ ಇಸ್ರಾಯೇಲ್ಯರನ್ನು ಕೂಡಿಸುತ್ತಿದ್ದಾನೆ. ಮುರಿದ ಮನಸ್ಸುಳ್ಳವರನ್ನು ವಾಸಿಮಾಡುತ್ತಾನೆ; ಅವರ ಗಾಯಗಳನ್ನು ಕಟ್ಟುತ್ತಾನೆ."(ಕೀರ್ತನೆಗಳು 147:2-3)
ನೋವು ಎನ್ನುವಂಥದ್ದು ನಾವು ಎಷ್ಟು ಅಸಹಾಯಕರು ಮತ್ತು ಬಲಹೀನರು ಆಗಿದ್ದೇವೆ ಎಂಬುದನ್ನು ಅನಾವರಣಗೊಳಿಸಿ ನಾವೇ ಸ್ವತಃ ನಮ್ಮ ನೋವುಗಳನ್ನು ಉಪಶಮನಗೊಳಿಸಿಕೊಳ್ಳಲಾರೆವು ಎಂಬುದನ್ನು ಪ್ರಕಟಿಸುವಂತದ್ದಾಗಿದೆ. ಆದರೂ ನಾವು ಆ ನೋವುಗಳನ್ನು ಬಿಟ್ಟು ಮುಂದೆ ಸಾಗಿ ಆ ದುಃಖವನ್ನೆಲ್ಲ ಕರ್ತನ ಮುಂದೆ ಹೊಯ್ದು ಬಿಡುವರಾದರೆ ನಮಗೆ ಸಾಕಾಗುವಂತ ಆತನ ಕೃಪೆಯನ್ನೂ ಮತ್ತು ನಮ್ಮ ಬಲಹೀನತೆಯಲ್ಲಿ ಸಾಧಕಗೊಳಿಸುವಂತಹ ಆತನ ಬಲವನ್ನೂ ಕಂಡುಕೊಳ್ಳುವವರಾಗುತ್ತೇವೆ. (2 ಕೊರಿಂತ 12:9)
ನೋವು ಎಂಬುದು ನಮ್ಮ ನಿಜವಾದ ಶತ್ರುವಲ್ಲ. ಸತ್ಯವೇನೆಂದರೆ ಅದು ಯಾವುದೋ ಮುರಿದು ಹೋಗಿದೆ ಅಥವಾ ಏನೋ ಸರಿ ಇಲ್ಲ ಎಂಬುದನ್ನು ಸೂಚಿಸುವ ಸೂಚಕ ಫಲಕವಾಗಿದೆ. ನಮ್ಮ ಜೀವನದಲ್ಲಿ ಉಂಟಾಗುವ ಎಲ್ಲಾ ನೋವಿಗೂ ಒಂದು ಉದ್ದೇಶವಿರುತ್ತದೆ. ನಿಮಗೆ ಉಂಟಾಗಿರುವ ನೋವುಗಳು ನೀವು ಎಲ್ಲಾ ಗಡಿಗಳನ್ನು ಪ್ರತಿಯೊಂದು ಮಿತಿಗಳನ್ನು ಮುರಿದು ಹಾಕಿ ಹಿಂದೆಂದೂ ಮಾಡದ ಕಾರ್ಯಗಳನ್ನು ನೀವು ಮಾಡುವಂತೆ ಮಾಡಲಿ ಎಂಬುದೇ ನನ್ನ ಪ್ರಾರ್ಥನೆ.

ಪ್ರಾರ್ಥನೆಗಳು
ತಂದೆಯೇ, ಮುರಿದ ಹೃದಯ ಉಳ್ಳವರ ಜೊತೆಯಾಗಿ ಇರುವೆನು ಎಂದು ನೀನು ಭರವಸೆ ನೀಡಿದ್ದೀಯೇ. ತಂದೆಯೇ ನಿನ್ನ ಪ್ರೀತಿಯಿಂದ ನನ್ನನ್ನು ಆವರಿಸಿಕೊಳ್ಳಿ. ನಾನು ನಿನ್ನನ್ನೇ ನಂಬುತ್ತೇನೆ ಕರ್ತನೇ.ನನ್ನೆಲ್ಲಾ ದುಃಖವನ್ನು ನಿನಗೇ ಒಪ್ಪಿಸಿಕೊಡುತ್ತೇನೆ ನನ್ನೆಲ್ಲ ನೋವುಗಳನ್ನು ಪರಿಹರಿಸು.
ತಂದೆಯೇ , ನಿನ್ನ ಕೃಪೆಯೇ ನನಗೆ ಸಾಕು, ನನ್ನ ಬಲಹೀನತೆಯಲ್ಲಿಯೇ ನಿನ್ನ ಬಲವು ಸಂಪೂರ್ಣಗೊಳ್ಳುತ್ತದೆ ಯಾಕೆಂದರೆ ನಾನು ಬಲಹೀನನಾಗಿರುವಾಗಲೇ ಯೇಸು ನಾಮದಲ್ಲಿ ಬಲಶಾಲಿಯಾಗಿದ್ದೇನೆ. ಆಮೇನ್.

Join our WhatsApp Channel
Most Read
● ದೇವರಿಗಾಗಿ ದಾಹದಿಂದಿರುವುದು● ಕೃಪೆಯಿಂದಲೇ ರಕ್ಷಣೆ
● ನೂತನ ಆತ್ಮೀಕ ವಸ್ತ್ರಗಳನ್ನು ಧರಿಸಿಕೊಳ್ಳಿ
● ನಿರ್ಣಾಯಕ ಅಂಶವಾಗಿರುವ ವಾತಾವರಣದ ಒಳನೋಟಗಳು-1
● ದೂರದಿಂದ ಹಿಂಬಾಲಿಸುವುದು
● ಸರ್ವಶಕ್ತನಾದ ದೇವರ ಅದ್ಬುತ ಸಮಾಗಮ.
● ದಿನ 20:40 ದಿನಗಳ ಉಪವಾಸ ಮತ್ತು ಪ್ರಾರ್ಥನೆ
ಅನಿಸಿಕೆಗಳು