ಅನುದಿನದ ಮನ್ನಾ
ಇಸ್ಕಾರಿಯೋತಾ ಯೂದನ ಜೀವನದಿಂದ ಕಲಿಯಬೇಕಾದ ಪಾಠಗಳು - 1
Wednesday, 23rd of October 2024
4
1
144
Categories :
ಪ್ರವಾದನ ವಾಕ್ಯ (Prophetic word)
ಶಿಷ್ಯತ್ವ (Discipleship)
ಸೂಚನೆಯನ್ನು ಸ್ವೀಕರಿಸಲು ಹಲವು ಮಾರ್ಗಗಳಿವೆ. ಸೂಚನೆಗಳನ್ನು ಪಡೆಯುವ ವಿಧಾನಗಳಲ್ಲಿ ಒಂದು ಎಂದರೆ ಇತರರ ಜೀವನವನ್ನು ನೋಡಿ ಕಲಿಯುವುದಾಗಿದೆ. ಇಂದು, ಯಾವುದೇ ಪೋಷಕರು ತಮ್ಮ ಮಗನಿಗೆ "ಯೂದ" ಎಂದು ಹೆಸರಿಡಲು ಬಯಸುವುದಿಲ್ಲ.(ಯೂದ, ಹೌದು, ಆದರೆ ಯೂದಾಸ್ಅಲ್ಲ), ಅದಕ್ಕೆ ಒಂದು ಕಾರಣವಿದೆ.
ಇಸ್ಕಾರಿಯೋತಾ ಯೂದನು ಕ್ರಿಸ್ತನ ನಂಬಿಗಸ್ತ ಅಪೋಸ್ತಲರಲ್ಲಿ ಒಬ್ಬನಾಗಿದ್ದನು, ಆದರೆ ಅವನು ಕರ್ತನಿಗೇ ದ್ರೋಹ ಬಗೆದನು ಮತ್ತು ನಂಬಿಕೆಯನ್ನು ಬಿಟ್ಟು ಬಿಟ್ಟನು. ಅವನ ಜೀವನದ ಚರಿತ್ರೆಯು ನಮ್ಮ ಹೃದಯದೊಳಗೆ ಒಂದು ಮೆಲುವಾದ ಎಚ್ಚರಿಕೆ ಗಂಟೆಯನ್ನು ಬಾರಿಸಿ ನಮ್ಮನ್ನು ನಾವು ಪರಿಶೋಧಿಸಿಕೊಳ್ಳಲು ಅನುವು ಮಾಡಿ ಕೊಡುತ್ತದೆ.
1. ಯೂದನು ತನ್ನನ್ನು ಮಾರ್ಪಡಿಸಿಕೊಳ್ಳುವುದನ್ನು ನಿರಾಕರಿಸಿದನು.
ಯೂದನನ್ನು ಕರ್ತನು ವೈಯಕ್ತಿಕವಾಗಿ ಕರೆದಿದ್ದನು; ಅವನು ಮೂರು ವರ್ಷಗಳ ಕಾಲ ಕರ್ತನನ್ನು ಹಿಂಬಾಲಿಸಿದ್ದನು. ಕರ್ತನು ಬೋಧಿಸುವುದನ್ನೆಲ್ಲಾ ಕೇಳಿ, ಅಷ್ಟು ವರ್ಷಗಳಲ್ಲಿ ಲಕ್ಷಾಂತರ ಜನರ ಮೇಲೆ ಅದು ಹೇಗೆ ಪ್ರಭಾವ ಬೀರಿತ್ತು ಎಂಬುದನ್ನು ತಿಳಿದವನಾಗಿದ್ದನು. ಯೇಸು ನೀರಿನ ಮೇಲೆ ನಡೆಯುವುದನ್ನು ಅವನು ವೈಯಕ್ತಿಕವಾಗಿ ನೋಡಿದ್ದನು; ಇನ್ನೂ, ಬಿರುಗಾಳಿ ಸಮುದ್ರಗಳು ಆತನ ಮಾತಿಗೆ ವಿಧೇಯವಾಗಿದ್ದನ್ನೂ , ಐದು ರೊಟ್ಟಿ ಮತ್ತು ಎರಡು ಮೀನುಗಳನ್ನು ಸಾವಿರಾರು ಜನರಿಗೆ ಊಟಕ್ಕೆ ನೀಡಿದ್ದನ್ನೂ, ಸತ್ತವರೊಳಗಿಂದ ಜನರನ್ನು ಎಬ್ಬಿಸಿದ್ದನ್ನೂ ಕಂಡಿದ್ದನು. ಅಷ್ಟುಮಾತ್ರವಲ್ಲದೆ, ಅವನೂ ಸಹ ರೋಗಿಗಳನ್ನು ಗುಣಪಡಿಸಲು ಮತ್ತು ದೆವ್ವಗಳನ್ನು ಬಿಡಿಸಲು ಕರ್ತನಿಂದ ಅಧಿಕಾರವನ್ನು ಹೊಂದಿದ್ದನು . (ಮತ್ತಾಯ 10:1) ಸೇವೆಯ ಹಣಕಾಸಿನ ಎಲ್ಲಾ ನಿರ್ವಹಣೆಯನ್ನು ಕರ್ತನು ಅವನಿಗೇ ವಹಿಸಿದ್ದನು.
“ಹನ್ನೆರಡು ಮಂದಿಯಾದ ನಿಮ್ಮನ್ನು ನಾನು ಆರಿಸಿ ತೆಗೆದುಕೊಂಡೆನಲ್ಲವೇ? ಆದರೂ ನಿಮ್ಮಲ್ಲಿಯೂ ಒಬ್ಬನು ಸೈತಾನನಿದ್ದಾನೆ” ಎಂದನು. ಈ ಮಾತು, ಆತನು ಸೀಮೋನ್ ಇಸ್ಕರಿಯೋತನ ಮಗನಾದ ಯೂದನ ವಿಷಯವಾಗಿ ಹೇಳಿದನು, ಏಕೆಂದರೆ, ಅವನು ಹನ್ನೆರಡು ಮಂದಿಯಲ್ಲಿ ಒಬ್ಬನಾಗಿದ್ದು, ಅವನೇ ಆತನನ್ನು ಹಿಡಿದು ಕೊಡುವುದಕ್ಕಿದ್ದನು."(ಯೋಹಾ 6:70-71) ಎಂದು ಯೇಸು ಹೇಳುವ ಮಾತಿನ ಮೂಲಕ ದೇವರವಾಕ್ಯವು ಆಗಲೇ ಯೂದನ ಕುರಿತು ಒಂದು ಕುರುಹನ್ನು ಕೊಟ್ಟಿತ್ತು.
ದುಃಖಕರ ವಿಷಯವೆಂದರೆ ಯೂದನು ತನ್ನ ಸೇವೆಯನ್ನು ದುಷ್ಟತನವಾಗಿ ಪ್ರಾರಂಭಿಸಿ ದುರಂತವಾಗಿ ಕೊನೆಗೊಳಿಸಿಕೊಂಡನು. ಇಂದು ಒಳ್ಳೆಯ ಸುದ್ದಿ ಎಂದರೆ ನಾವು ಕೆಟ್ಟ ಆರಂಭವನ್ನು ಹೊಂದಿರಬಹುದು, ಆದರೆ ನಾವು ಭವ್ಯವಾದ ಭವಿಷ್ಯವನ್ನು ಇಂದು ಹೊಂದಬಹುದಾಗಿದೆ.
ದುಃಖಕರವೆಂದರೆ, ಯೂದನು ಕೇಳಿದ ಮತ್ತು ನೋಡಿದ ವಿಷಯವು ಅವನನ್ನು ಬದಲಾಯಿಸಲಿಲ್ಲ. ಇವತ್ತಿಗೂ ಇಂತಹ ಅನೇಕ ಜನರಿದ್ದಾರೆ. ಅವರು ಸೇವೆಗಳಿಗೆ ಹಾಜರಾಗುತ್ತಾರೆ, ಅನೇಕ ಸಂಗತಿಗಳು ನಡೆಯುವುದನ್ನು ನೋಡುವವರಾಗಿರುತ್ತಾರೆ. ಅವರು ತಮ್ಮ ಮುಂದೆ ಪವಿತ್ರಾತ್ಮನ ಒರತೆಯು ಉಕ್ಕುವುದನ್ನೂ ನೋಡುತ್ತಾರೆ, ಆದರೆ ಅವರು ಅದರೊಳಗೆ ಧುಮುಕುವುದಿಲ್ಲ. ಇದು ಕೇವಲ ಯೇಸು ವನ್ನು ತಿಳಿದುಕೊಂಡರೆ ಮಾತ್ರ ಸಾಕಾಗುವುದಿಲ್ಲ, ಯೇಸುವನ್ನು ಹಿಂಬಾಲಿಸಿವುದಷ್ಟೇ ಸಾಕಾಗುವುದಿಲ್ಲ. ಕೇವಲ ಯೇಸುವಿನ ಮಾತುಗಳನ್ನು ಕೇಳಿದರೆ ಅಷ್ಟೇ ಸಾಲದು ಎಂದು ನನಗೆ ಹೇಳುತ್ತಿದೆ.
"ಯಾವನಾದರೂ ವಾಕ್ಯವನ್ನು ಕೇಳುವವನಾಗಿದ್ದು ಅದರ ಪ್ರಕಾರ ನಡೆಯದಿದ್ದರೆ ಅವನು ಕನ್ನಡಿಯಲ್ಲಿ ತನ್ನ ಸಹಜ ಮುಖವನ್ನು ನೋಡಿದ ಮನುಷ್ಯನಂತಿರುವನು. ಏಕೆಂದರೆ ಇವನು ತನ್ನನ್ನು ತಾನೇ ನೋಡಿ ನಂತರ ತಾನು ಹೀಗಿದ್ದೇನೆಂಬುದನ್ನು ಆ ಕ್ಷಣವೇ ಮರೆತುಬಿಡುವನು. ಆದರೆ ಬಿಡುಗಡೆಯನ್ನು ಉಂಟುಮಾಡುವ ಪರಿಪೂರ್ಣವಾದ ಧರ್ಮಶಾಸ್ತ್ರವನ್ನು ಲಕ್ಷ್ಯಕೊಟ್ಟು ಓದಿ, ಮನನ ಮಾಡಿ ಅದನ್ನು ಅನುಸರಿಸುವವನು ವಾಕ್ಯವನ್ನು ಕೇಳಿ ಮರೆತು ಹೋಗದೆ ಅದರ ಪ್ರಕಾರ ನಡೆಯುತ್ತಾ ತನ್ನ ನಡತೆಯಿಂದ, ಕ್ರಿಯೆಗಳಿಂದ ಧನ್ಯನಾಗುವನು." ಎಂದು ಸತ್ಯವೇದವು ನಮಗೆ ಆಜ್ಞಾಪಿಸುತ್ತದೆ. (ಯಾಕೋ 1:23-25)
ನೀವು ಸಭೆಯ ಸೇವೆಯಲ್ಲಿ ಪಾಲ್ಗೊಳ್ಳುವಾಗಲೆಲ್ಲಾ, ನಿಮ್ಮಬಳಿ ಸತ್ಯವೇದದ ಪ್ರತಿಯನ್ನು ಹೊಂದಿರುವಿರಾ ಎಂದು ಖಚಿತಪಡಿಸಿಕೊಳ್ಳಿ (ಡಿಜಿಟಲ್ ಅಥವಾ ಪುಸ್ತಕ ಆವೃತ್ತಿ ಆಗಿರಬಹುದು. ಅದನ್ನು ಬಳಸುವವರೆಗೆ ಮತ್ತು ಅನುಸರಿಸುವವರೆಗೆ ಯಾವುದಾದರೂ ಕೆಲಸ ಮಾಡುತ್ತದೆ). ಟಿಪ್ಪಣಿಗಳನ್ನು ಮಾಡಿ ಮತ್ತು ವಾರವಿಡೀ ಅವುಗಳನ್ನು ಪರಿಶೀಲಿಸಿ. ನಿಮ್ಮ ಜೀವನಶೈಲಿಯಲ್ಲಿ ಸಂದೇಶವನ್ನು ಹಂತಹಂತವಾಗಿ ಅಳವಡಿಸಿಕೊಳ್ಳಲು ಅಭ್ಯಾಸ ಮಾಡಿ. ನೀವು ಇದನ್ನು ಮಾಡುವಾಗ, ನಿಮ್ಮ ಜೀವನದಲ್ಲಿ ನಿಶ್ಚಲತೆ ಮತ್ತು ಬಡತನ ನಿಮ್ಮನ್ನು ಬಿಟ್ಟು ಓಡಿ ಹೋಗುವುದನ್ನು ನೀವು ನೋಡುತ್ತೀರಿ.
ಪ್ರಾರ್ಥನೆಗಳು
1. ಕರ್ತನೇ, ನಾನು ನನ್ನ ಆಲೋಚನೆಗಳನ್ನೆಲ್ಲಾ ನಿನಗೆ ಒಪ್ಪಿಸುತ್ತೇನೆ, ಓ ಭೂಮ್ಯಕಾಶಗಳ ಒಡೆಯನೇ. ದೇವರಾತ್ಮನೇ ನಿನ್ನ ಹೃದಯದಲ್ಲಿರುವುದನ್ನೇ ನನ್ನಲ್ಲಿಯೂ ಪ್ರೇರೇಪಿಸು.
2. ತಂದೆಯೇ, ಎಲ್ಲಾ ರೀತಿಯ ಹೆಮ್ಮೆಯನ್ನು ನನ್ನೊಳಗಿಂದ ಯೇಸುನಾಮದಲ್ಲಿ ತೆಗೆದುಹಾಕು. ನಾನು ಹೋಗಬೇಕಾದ ಮಾರ್ಗವನ್ನು ನನಗೆ ಯೇಸುನಾಮದಲ್ಲಿ ಬೋದಿಸು. ನನ್ನ ಕಣ್ಣುಗಳನ್ನು ನಿನ್ನ ಜ್ಞಾನವನ್ನು ನೋಡುವುದಕ್ಕೂ ಮತ್ತು ನನ್ನ ಕಿವಿಗಳನ್ನು ನಿನ್ನ ಉಚಿತಾಲೋಚನೆಗಳನ್ನು ಗ್ರಹಿಸುವಂತೆಯೂ ಯೇಸುನಾಮದಲ್ಲಿ ತೆರೆಮಾಡು.
2. ತಂದೆಯೇ, ಎಲ್ಲಾ ರೀತಿಯ ಹೆಮ್ಮೆಯನ್ನು ನನ್ನೊಳಗಿಂದ ಯೇಸುನಾಮದಲ್ಲಿ ತೆಗೆದುಹಾಕು. ನಾನು ಹೋಗಬೇಕಾದ ಮಾರ್ಗವನ್ನು ನನಗೆ ಯೇಸುನಾಮದಲ್ಲಿ ಬೋದಿಸು. ನನ್ನ ಕಣ್ಣುಗಳನ್ನು ನಿನ್ನ ಜ್ಞಾನವನ್ನು ನೋಡುವುದಕ್ಕೂ ಮತ್ತು ನನ್ನ ಕಿವಿಗಳನ್ನು ನಿನ್ನ ಉಚಿತಾಲೋಚನೆಗಳನ್ನು ಗ್ರಹಿಸುವಂತೆಯೂ ಯೇಸುನಾಮದಲ್ಲಿ ತೆರೆಮಾಡು.
Join our WhatsApp Channel
Most Read
● ದಿನ 23:40 ದಿನಗಳ ಉಪವಾಸ ಮತ್ತು ಪ್ರಾರ್ಥನೆ.● ಯೇಸು ಮಾಡುವ ಕಾರ್ಯಗಳಿಗಿಂತ ದೊಡ್ಡ ಕಾರ್ಯಗಳನ್ನು ಮಾಡುವುದರ ಅರ್ಥವೇನು?
● ದಿನ 35:40 ದಿನಗಳ ಉಪವಾಸ ಮತ್ತು ಪ್ರಾರ್ಥನೆ.
● ಹೋಲಿಕೆಯ ಬಲೆ
● ನಿಮ್ಮ ಆತ್ಮಿಕ ಶಕ್ತಿಯನ್ನು ನವೀಕರಿಸಿಕೊಳ್ಳುವುದು ಹೇಗೆ -3
● ನಿಮ್ಮ ಗತಿಯನ್ನು ಹಾಳು ಮಾಡಿಕೊಳ್ಳಬೇಡಿರಿ!
● ಕರ್ತನ ಆನಂದ
ಅನಿಸಿಕೆಗಳು