ಅನುದಿನದ ಮನ್ನಾ
ದಿನ 07 : 40 ದಿನಗಳ ಉಪವಾಸ ಮತ್ತು ಪ್ರಾರ್ಥನೆ
Thursday, 28th of November 2024
3
1
166
Categories :
ಉಪವಾಸ ಮತ್ತು ಪ್ರಾರ್ಥನೆ (Fasting and prayer)
ಹೊಸ ಹೊಸ ಕ್ಷೇತ್ರಗಳನ್ನು ವಶಕ್ಕೆ ತೆಗೆದುಕೊಳ್ಳುವುದು.
"ನಾನು ಮೋಶೆಗೆ ಹೇಳಿದಂತೆ ನೀವು ಕಾಲಿಡುವ ಸ್ಥಳವನ್ನೆಲ್ಲ ನಿಮಗೆ ಕೊಟ್ಟಿದ್ದೇನೆ " ( ಯಹೋಶುವ 1:3)
ವಿಶ್ವಾಸಿಗಳು ನಾನಾ ಕ್ಷೇತ್ರಗಳಲ್ಲಿ ನಾಯಕತ್ವದ ಸ್ಥಾನದಲ್ಲಿರಬಹುದು ಉದಾಹರಣೆಗೆ ಕ್ರೀಡೆ ,ರಾಜಕೀಯ ,ಕೃಷಿ ತಂತ್ರಜ್ಞಾನ ,ಶಿಕ್ಷಣ ,ಸೈನ್ಯ ಆರೋಗ್ಯ ಕ್ಷೇತ್ರ ಹಾಗೂ ಮಾಧ್ಯಮ. ಕರ್ತನ ರಾಜ್ಯವು ನಮ್ಮ ನಾಯಕತ್ವದ ಮೂಲಕ ಈ ಎಲ್ಲಾ ಸ್ಥಳಗಳಲ್ಲಿ ಬೆಳೆಯುತ್ತಾ ಹೋಗುತ್ತದೆ ಮತ್ತು ಹೀಗೆ ಕರ್ತನ ಮೌಲ್ಯಗಳು ಈ ಎಲ್ಲಾ ಸಂಸ್ಥೆಗಳು ಹಾಗೂ ವ್ಯವಸ್ಥೆಗಳಲ್ಲೂ ವ್ಯಾಪಿಸುತ್ತಾ ಹೋಗುತ್ತದೆ.
ದೇವರು ಆದಾಮನಿಗೆ ಫಲಪ್ರದವಾಗಿರಿ ಹೆಚ್ಚಿರಿ ಹಾಗೂ ಪ್ರಭುತ್ವ ಸಾಧಿಸಿರಿ (ಆದಿಕಾಂಡ 1:28) ಎಂದು ಆಜ್ಞಾಪಿಸಿದನು. ದೇವರ ಮಕ್ಕಳಾಗಿ ನಾವೂ ಸಹ ಹೊಸ ಪ್ರಾಂತ್ಯಗಳನ್ನು ವಶಪಡಿಸಿಕೊಂಡು ಪ್ರಭುತ್ವ ಸಾಧಿಸುವುದಕ್ಕಾಗಿ ರೂಪಿಸಲ್ಪಟ್ಟಿದ್ದೇವೆ.
ಆದರೆ ಹೊಸ ಪ್ರಾಂತ್ಯಗಳನ್ನು ವಶಪಡಿಸಿಕೊಳ್ಳುವುದಕ್ಕೆ ನಮಗೆ ಕತ್ತಿಯಾಗಲಿ ಅಥವಾ ಬಂದೂಕಾಗಲೀ ಅವಶ್ಯಕತೆ ಇಲ್ಲ ಏಕೆಂದರೆ ನಾವು ಜನಗಳ ಸಂಗಡ ಶಾರೀರಿಕವಾಗಿ ಹೊಡೆದಾಡುವುದಿಲ್ಲ. ಹೊಸ ಪ್ರಾಂತ್ಯಗಳನ್ನು ವಶಕ್ಕೆ ತೆಗೆದುಕೊಳ್ಳುವುದು ಎಂದರೆ 'ಪ್ರಭಾವ ' ಬೀರುವುದು ಎಂದರ್ಥ.ಯಾವುದೇ ಕ್ಷೇತ್ರದಲ್ಲಿಯಾದರೂ ನಾವು ಪ್ರಯತ್ನಿಸಿದರೆ ಅದು ನಮ್ಮ ಪ್ರಭಾವಕ್ಕೆ ಒಳಗಾಗುತ್ತದೆ. ನಾವು ನಮ್ಮ ಪ್ರಭಾವವನ್ನು ಬಳಸಿ ದೇವರ ತತ್ವಗಳನ್ನು ಮತ್ತು ಮೌಲ್ಯಗಳನ್ನು ಸಮಾಜದಲ್ಲಿ ಸ್ಥಾಪಿಸುವವರಾಗುತ್ತೇವೆ.
ನಾವು ಭೂಮಿಗೆ ಬೆಳಕಾಗಿದ್ದೇವೆ ಹಾಗೂ ಉಪ್ಪಾಗಿದ್ದೇವೆ. ವಿಮೋಚನೆಯಿಂದ ರೂಪಿಸಲ್ಪಟ್ಟವರಾದ ನಾವು ದೇವರಿಗೆ ಭೂಮಿಯನ್ನು ಅಧೀನ ಮಾಡಿಕೊಡುವವರಾಗಿದ್ದೇವೆ. ನಾವು ಎಲ್ಲಾ ವಲಯಗಳಲ್ಲಿ ವ್ಯಾಪಿಸಿರುವ ಭ್ರಷ್ಟಾಚಾರ ಹಾಗೂ ವಿದ್ವಂಸ ಕೃತ್ಯಗಳ ಮೇಲೆ ಪ್ರಭಾವ ಬೀರುವುದಕ್ಕಾಗಿ ಕರೆಯಲ್ಪಟ್ಟವರಾಗಿದ್ದೇವೆ ಹಾಗೂ ರಕ್ಷಿಸಲ್ಪಟ್ಟವರಾಗಿದ್ದೇವೆ. (ಮತ್ತಾಯ 5:16) ಕ್ರೈಸ್ತರಾಗಿ ನಾವು ಇತರರು ತಮ್ಮನ್ನು ಅನುಸರಿಸಲು ಯೋಗ್ಯವಾದ ಒಂದು ಮಾದರಿ ನಾಯಕತ್ವಕ್ಕೆ ನೀಲಿ ನಕ್ಷೆಯಾಗಿ ನೈತಿಕತೆ ಹಾಗೂ ಮಾನವೀಯತೆಗೆ ಒಂದು ಉದಾಹರಣೆಯಾಗಿ ಇಡಲು ರೂಪಿಸಲ್ಪಟ್ಟಿದ್ದೇವೆ. ನಮ್ಮನ್ನು ಈ ಜಗತ್ತು ಬದಲಾವಣೆಯನ್ನು ತರುವ ಒಬ್ಬ ಕಾರ್ಯಕರ್ತನಾಗಿ, ಸ್ಪೂರ್ತಿದಾಯಕರಾಗಿ, ಬೋಧಕನಾಗಿ ನೋಡಬೇಕು.
ಕ್ಷೇತ್ರಗಳನ್ನು ವಶಕ್ಕೆ ತೆಗೆದುಕೊಳ್ಳುವುದು ಎಂದರೆ ಏನು?
1. ಅದರ ಅರ್ಥ ಒಬ್ಬ ಬದಲಾವಣೆಯ ಪ್ರತಿನಿಧಿಯಾಗುವುದು ಎಂದು
2.ಅದರ ಅರ್ಥ ಎಲ್ಲೆಗಳನ್ನು ಮುರಿದು ಹಾಕುವುದು ಎಂದು.
3. ಅದರ ಅರ್ಥ ಮನುಷ್ಯರ ಹೃದಯಗಳಲ್ಲಿ ದೇವರ ರಾಜ್ಯವನ್ನು ಮುನ್ನಡೆಸುವುದು.
4. ನಿಮ್ಮ ಪರಿಸರದ ಮೇಲೆ ಕರ್ತನ ರಾಜ್ಯದ ಸಿದ್ಧಾಂತಗಳಿಂದ ಪ್ರಭಾವಬೀರುವುದು
5. ಅದರ ಅರ್ಥ ಧನಾತ್ಮಕ ಅಂಶಗಳನ್ನು ತೋರಿಸುವ ಬಿಂದುವಾಗಿ ಕಾರ್ಯ ಮಾಡುವುದು ಎಂದು.
ಯಾಕೆ ನಾವು ಕ್ಷೇತ್ರಗಳನ್ನು ವಶಪಡಿಸಿಕೊಳ್ಳಬೇಕು?
1. ಅಂಧಕಾರದ ಶಕ್ತಿಗಳ ಆ ಆಡಳಿತವನ್ನು ತೆಗೆದು ಹಾಕಲು.
ಈ ಪಿಶಾಚನ ಅಧಿಕಾರಿಗಳೇ ನಮ್ಮ ಸಮಾಜದಲ್ಲಿರುವ ಕಾಯಿಲೆ,ಬಡತನ, ಸಾವು-ನೋವು ಹಾಗೂ ಎಲ್ಲಾ ರೀತಿಯ ಕೆಡಕುಗಳಿಗೆ ಕಾರಣ. ಪಿಶಾಚನ ಆಡಳಿತವನ್ನು ತೆಗೆದು ಹಾಕುವವರೆಗೂ ಈ ಕಂಟಕಗಳಿಂದ ಸಮಾಜಕ್ಕೆ ಮುಕ್ತಿ ಇಲ್ಲ.
"ನಾವು ಹೋರಾಡುವುದು ಮನುಷ್ಯ ಮಾತ್ರದವರ ಸಂಗಡವಲ್ಲ ರಾಜ್ಯತ್ವಗಳ ಮೇಲೆಯೂ ಅಧಿಕಾರಗಳ ಮೇಲೆಯೂ ಈ ಅಂಧಕಾರ ಲೋಕದಿಪತಿಗಳ ಮೇಲೆಯೂ ಆಕಾಶ ಮಂಡಲದಲ್ಲಿರುವ ದುರಾತ್ಮಗಳ ಸೇನೆಯ ಮೇಲೆಯೂ ನಾವು ಹೋರಾಡುವವರಾಗಿದ್ದೇವೆ"
( ಎಫಸ್ಸೆ 6:12)
2. ನಿಮ್ಮ ಪ್ರಯಾಸಗಳಲ್ಲಿ ನೀವು ಯಶಸ್ವಿಯಾಗಲು.
ಪ್ರಾದೇಶಿಕವಾಗಿ ಹರಡಿಕೊಂಡಿರುವ ದುರಾತ್ಮಗಳು ಕ್ರೈಸ್ತರ ಪ್ರಯತ್ನಗಳನ್ನು ನಾಶಗೊಳಿಸುತ್ತಿದೆ ಹಾಗೂ ಅವರನ್ನು ಹತಾಶೆಗೊಳಿಸುತ್ತಿದೆ. ನೀವು ನಿಮ್ಮ ಕ್ಷೇತ್ರಗಳನ್ನು ಹಿಡಿತದಲ್ಲಿ ಇಟ್ಟುಕೊಂಡಿರುವ ದುರಾತ್ಮಗಳ ಅಧಿಕಾರವನ್ನು ಮುರಿಯದಿದ್ದರೆ ನೀವು ಆ ಒಂದು ಪ್ರದೇಶದ ವ್ಯಾಪ್ತಿಯಲ್ಲಿ ಯಶಸ್ಸು ಸಾಧಿಸುವುದು ನಿಮಗೆ ಕಠಿಣವಾಗುತ್ತದೆ.
" ನಾನು ಮೋಶೆಗೆ ಹೇಳಿದಂತೆ ನೀವು ಕಾಲಿಡುವ ಸ್ಥಳವನ್ನೆಲ್ಲ ನಿಮಗೆ ಕೊಟ್ಟಿದ್ದೇನೆ ."( ಯೆ ಹೋಶುವ 1:3)
ಬಹಳಷ್ಟು ಸಭೆಗಳಲ್ಲಿ ವಿಶ್ವಾಸಿಗಳ ಸಂಖ್ಯೆಯು ಬೆಳೆಯುವುದೇ ಇಲ್ಲ. ಇದಕ್ಕೆ ಕಾರಣ ಆ ಪ್ರದೇಶಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಸ್ಥಳೀಯ ದುರಾತ್ಮಗಳಾಗಿವೆ. ಕ್ಷೇತ್ರ ಪಾಲಕರಂತೆ ಕಾರ್ಯನಿರ್ವಹಿಸುತ್ತಿರುವ ದುರಾತ್ಮಗಳು ಅಲ್ಲಿನ ಸ್ಥಳಿಯರನ್ನು ಗುಲಾಮತ್ವದಲ್ಲಿ ಇಟ್ಟುಕೊಂಡಿರುತ್ತದೆ.
ಕರ್ತನಿಗಾಗಿ ನೀವು ಆ ಪ್ರದೇಶಗಳನ್ನು ಸ್ವಾಧೀನ ಮಾಡಿ ಕೊಡಲು ಅಗತ್ಯವಾಗಿ ಬೇಕಾಗಿರುವ ಐದು ಅಂಶಗಳು.
- ಉದ್ದೇಶ.
ನೀವು ಯಾವ ಉದ್ದೇಶಕ್ಕಾಗಿ ಆ ಕ್ಷೇತ್ರಗಳನ್ನು ಪಡೆಯಲು ಆಸೆಪಡುತ್ತಿದ್ದೀರಿ? ನಿಮ್ಮ ಸ್ವಾರ್ಥಕ್ಕಾಗಿಯೋ ಅಥವಾ ದೇವರಿಗಾಗಿಯೋ? ನಿಮ್ಮ ಉದ್ದೇಶ ಸರಿಯಾದದ್ದಾದರೆ ದೇವರು ನಿಮ್ಮ ಜೊತೆ ನಿಂತು ಬೆಂಬಲಿಸುತ್ತಾರೆ, ಆದರೆ ನಿಮ್ಮ ಉದ್ದೇಶ ಸ್ವಾರ್ಥಪೂರಿತವಾದದ್ದಾಗಿದ್ದರೆ ನಿಮ್ಮನ್ನು ನೀವೇ ಸೈತಾನನ ಆಕ್ರಮಣಕ್ಕೆ ಒಡ್ಡಿಕೊಳ್ಳುತ್ತೀರಿ.
- ಪ್ರಾರ್ಥನೆ.
ಯಾಬೇಚನು ತನ್ನ ಪ್ರಾಂತ್ಯಗಳನ್ನು ವಿಸ್ತರಿಸಿಕೊಡಲು ದೇವರಿಗೆ ಮೊರೆ ಇಟ್ಟನು. ಸೈತಾನನ ಎಲ್ಲಾ ತಡೆಗಳನ್ನು ಮುರಿದು ಹಾಕಲು ಪ್ರಾರ್ಥನೆಯು ಅತ್ಯಗತ್ಯವಾಗಿದೆ. "ಯಾಬೇಚನು ತನ್ನ ಅಣ್ಣ-ತಮ್ಮಂದಿರಲ್ಲಿ ಘನವಂತನಾಗಿದ್ದನು ಇವನನ್ನು ಬಹುವೇದನೆಯಿಂದ ಹೆತ್ತಳೆಂದು ಹೇಳಿ ಇವನ ತಾಯಿ ಇವನಿಗೆ ಯಾಬೇಚನೆಂದು ಹೆಸರಿಟ್ಟಳು ಯಾಬೇಚನು ಇಸ್ರಾಯೇಲಿನ ದೇವರಿಗೆ ನೀನು ನನ್ನನ್ನು ವಿಶೇಷವಾಗಿ ಆಶೀರ್ವದಿಸಿ ನನ್ನ ಪ್ರಾಂತವನ್ನು ವಿಸ್ತರಿಸಿ ನಿನ್ನ ಹಸ್ತದಿಂದ ನನ್ನನ್ನು ಹಿಡಿದು ಯಾವ ವೇದನೆಯೂ ಉಂಟಾಗದಂತೆ ನನ್ನನ್ನು ರಕ್ಷಿಸಬಾರದೆ ಎಂದು ಮೊರೆ ಇಡಲು ದೇವರು ಅವನ ಮೊರೆಯನ್ನು ಲಾಲಿಸಿದನು".( 1 ಪೂರ್ವ4:9,10). ನೀವು ಆತ್ಮಿಕ ಯುದ್ಧಕ್ಕೆ ಸಿದ್ದರಾಗಿರಬೇಕು. ಹೋರಾಟವಿಲ್ಲದೆ ನೀವು ನಿಮ್ಮ ಪ್ರಾಂತ್ಯಗಳನ್ನು ಪಡೆಯಲು ಸಾಧ್ಯವಿಲ್ಲ.
- ವೈರಾಗ್ಯ
ದಾನಿಯೇಲ ತಾನು ರಾಜನ ಭೋಜನ ಪದಾರ್ಥಗಳನ್ನು ತಿಂದು ತನ್ನನ್ನು ತಾನೇ ಅಶುದ್ಧಿಗೊಳಿಸಿಕೊಳ್ಳಬಾರದೆಂದು ನಿರ್ಧರಿಸಿಕೊಂಡನು (ದಾನಿಯೇಲ 1:8). ನಿಮಗೆ ಉದ್ದೇಶವಿಲ್ಲದೆ ಇದ್ದರೆ ನೀವು ನಿರ್ಣಯವನ್ನು ತೆಗೆದುಕೊಳ್ಳಲಾರಿರಿ. ತನ್ನ ಜೀವಿತದಲ್ಲಿ ದೇವರ ಸಂಕಲ್ಪ ಏನಾಗಿದೆ ಎಂಬುದನ್ನು ದಾನಿಯೇಲನು ಅರ್ಥ ಮಾಡಿಕೊಳ್ಳದೆ ಹೋಗಿದ್ದರೆ,ಅವನು ಬ್ಯಾಬಿಲೋನ್ ವ್ಯವಸ್ಥೆಗಳಿಗೆ ತಲೆಬಾಗುತ್ತಿದ್ದನು.ದೇವರ ಮನುಷ್ಯನಾದ ಮೈಲ್ಸ್ ಮನ್ರೋ ಅವರು ಹೇಳುವ ಪ್ರಕಾರ "ಸಂಕಲ್ಪ /ಉದ್ದೇಶದ ಅರಿವು ಇಲ್ಲದಿದ್ದಾಗ ನಿಂಧನೆಗಳು ಅನಿವಾರ್ಯ"
- ಪರಿಶುದ್ಧತೆ
"ಇನ್ನು ನಿಮ್ಮ ಸಂಗಡ ಬಹಳ ಮಾತಾಗಳನ್ನುಡುವುದಿಲ್ಲ ಯಾಕೆಂದರೆ ಇಹಲೋಕಾಧಿಪತಿಯು ಬರುತ್ತಾನೆ ಆತನಿಗೆ ಸಂಬಂಧಪಟ್ಟಿದ್ದು ಯಾವೊಂದು ನನ್ನಲಿಲ್ಲ" ಇಹಲೋಕಾಧಿಪತಿಯು ಕ್ರಿಸ್ತನ ಜೀವಿತವನ್ನು ಶೋಧಿಸಲು ಬಂದಾಗ ಅಶುದ್ಧವಾದದ್ದು ಏನಾದರೂ ಆತನಲ್ಲಿ ಸಿಕ್ಕಿದ್ದರೆ ಕ್ರಿಸ್ತನು ಶತ್ರುವಿನ ಬಂದನಕ್ಕೆ ಒಳಪಡಬೇಕಾಗಿತ್ತು.
ನೀನು ಜನರು ನಿನ್ನನ್ನು ನೋಡುವಾಗ ಪರಿಶುದ್ಧನಂತೆ ನಟಿಸುತ್ತಿದ್ದೀಯೊ ಅಥವಾ ಅಂತರಂಗದಲ್ಲಿಯೂ ನೀನು ಪರಿಶುದ್ಧನಾಗಿದ್ದೀಯ? ಸೈತಾನನು ಇದೆಲ್ಲವನ್ನು ತಿಳಿದವನಾಗಿದ್ದಾನೆ.ನೀವು ಜನರ ಮುಂದೆ ನಟಿಸುತ್ತಿದ್ದೀರೋ ಅಥವಾ ಧರ್ಮದ ನಾಟಕ ಮಾಡುತ್ತಿದ್ದೀರಾ?ನೀನು ನಿನ್ನ ಸಭೆಯಲ್ಲಿ ಹಾಗೂ ನಿನ್ನ ಕೆಲಸ ಮಾಡುವ ಸ್ಥಳಗಳಲ್ಲಿ ಬೇರೆಯದೆ ಆದ ವ್ಯಕ್ತಿಯಾಗಿದ್ದೀಯಾ? ಅಧಿಕಾರಕ್ಕೆ ಮೊದಲು ಪರಿಶುದ್ಧತೆ ಬರುತ್ತದೆ ನೀನು ದೇವರ ಮುಂದೆ ತಪ್ಪಿತಸ್ಥನಾಗಿ ಕಂಡು ಬಂದರೆ ನೀನು ಪ್ರಾಂತ್ಯಗಳನ್ನು ಸ್ವಾಧೀನ ಪಡಿಸಿಕೊಳ್ಳಲು ಸಾಧ್ಯವಿಲ್ಲ.
- ಅಧಿಕಾರ
ಇದಲ್ಲದೆ ಒಬ್ಬನು ಮೊದಲು ಬಲಿಷ್ಠನನ್ನು ಕಟ್ಟಿ ಹಾಕದೆ ಆ ಬಲಿಷ್ಠನ ಮನೆಯನ್ನು ಹೊಕ್ಕು ಅವನ ಮನೆಯನ್ನು ಸುಲುಕೊಳ್ಳುವುದು ಹೇಗೆ? (ಮತ್ತಾಯ12:29).ಪಿಶಾಚನು ಬಲಿಷ್ಟನಾದ ಕಾರಣ ಪ್ರಾಂತ್ಯಗಳನ್ನು ಬಿಡಿಸಿಕೊಳ್ಳುವ ಮೊದಲು ಪಿಶಾಚನನ್ನು ಕಟ್ಟಿ ಹಾಕಬೇಕು ನಮಗೆ ಈ ಭೂಮಿಯ ಮೇಲೆ ಎಲ್ಲವನ್ನೂ ಕಟ್ಟಿ ಹಾಕಲು ಅಧಿಕಾರ ಕೊಡಲ್ಪಟ್ಟಿದೆ ನಾವು ಕಟ್ಟಿಹಾಕಲು ವಿಫಲವಾದರೆ ಬೇರೆ ಯಾವುದರಿಂದಲೂ ಕಟ್ಟಿಹಾಕಲು ಸಾಧ್ಯವಿಲ್ಲ. ನೀವು ಯಾವ ಕ್ಷೇತ್ರದ ಮೇಲೆ ಪ್ರಭಾವ ಬೀರಲು ಪ್ರಯತ್ನಿಸುತ್ತಿದ್ದೀರೋ ಮೊದಲು ಆ ಕ್ಷೇತ್ರದ ಬಲಿಷ್ಠನನ್ನು ಕಟ್ಟಿ ಹಾಕಬೇಕು ಉದಾಹರಣೆಗೆ ವ್ಯಾಪಾರ ಹಾಗೂ ಅಧಿಕೃತ ಭೂಪ್ರದೇಶ ,ತಂತ್ರಜ್ಞಾನ, ಆರೋಗ್ಯ ಕ್ಷೇತ್ರ ಇನ್ನಿತರ ಕ್ಷೇತ್ರಗಳಲ್ಲಿ ಮೊದಲು ಅಲ್ಲಿರುವ ಬಲಿಷ್ಠನನ್ನು ಕಟ್ಟಿ ಹಾಕಬೇಕು.ಜೀವನದ ಪ್ರತಿ ಮಜಲಿಗೂ ನಿರ್ದಿಷ್ಟ ದೊರೆತನಗಳಿರುತ್ತವೆ.
ಹೆಚ್ಚಿನ ಅಧ್ಯಯನಕ್ಕೆ: ಆದಿಕಾಂಡ13:15 ಕೀರ್ತನೆ 28
ಪ್ರಾರ್ಥನೆಗಳು
1.ಎಲ್ಲಾ ದೊರೆತನಗಳು ಅಧಿಕಾರಗಳು ಪ್ರಭುತ್ವಗಳು ಆಡಳಿತಗಳಿಗಿಂತ ಎಷ್ಟೋ ಮೇಲೆ ಇರುವ ಪರಲೋಕದಲ್ಲಿ ನಮ್ಮನ್ನು ಕೂರಿಸುವುದಕ್ಕಾಗಿ ತಂದೆಯಾದ ದೇವರೇ ನಿಮಗೆ ಯೇಸು ಕ್ರಿಸ್ತನ ನಾಮದಲ್ಲಿ ನಿಮಗೆ ಸ್ತೋತ್ರ.( ಎಫೆಸ್ಸ 2:6)
2.ನಾನು ಕಾಲಿಡುವ ಸ್ಥಳವನ್ನೆಲ್ಲ ನಾನು ಯೇಸುಕ್ರಿಸ್ತನ ಹೆಸರಿನಲ್ಲಿ ನನಗೆ ಸ್ವಂತ ಮಾಡಿಕೊಂಡಿದ್ದೇನೆ.(ಯೋಹಾನ1:3)
3.ನನ್ನ ಪ್ರಗತಿಗೆ ತಡೆ ತರುತ್ತಿರುವ ಪ್ರಾದೇಶಿಕ ದುರಾತ್ಮವನ್ನು ನಾನು ಯೇಸು ನಾಮದಲ್ಲಿ ತುಳಿದು ಹಾಕುತ್ತಿದ್ದೇನೆ. (ಲೂಕ10:4).
4.ನನ್ನ ಯಶಸ್ಸಿಗೆ ತಡೆಯಾಗಿರುವ ಯಾವುದೇ ಸೈತಾನನ ಹಿಡಿತವನ್ನು ಯೇಸುನಾಮದಲ್ಲಿ ನಿಷ್ಕ್ರಿಯಗೊಳಿಸುತ್ತೇನೆ.(2ಕೊರಿ 10:4)
5.ನನ್ನ ದೈವಿಕ ಕರೆಗಳಿಗೂ ಹಾಗೂ ನನ್ನ ಜೀವಿತಕ್ಕೂ ಸವಾಲೊಡ್ಡುತ್ತಿರುವ ದುರಾತ್ಮಗಳ ವಿರುದ್ಧ ಹೋರಾಡುವುದಕ್ಕೆ ನನ್ನನ್ನು ಕಾಯಲು ಇಡಲ್ಪಟ್ಟಿರುವ ದೂತರಿಗೆ ಯೇಸು ನಾಮದಲ್ಲಿ ಅಪ್ಪಣೆ ಕೊಡುತ್ತಿದ್ದೇನೆ (ಕೀರ್ತನೆ 91 :4)
6.ಓ ಕರ್ತನೆ ನನ್ನ ಪ್ರಾಂತ್ಯವನ್ನು ವಿಸ್ತರಿಸು ಹಾಗೂ ನನ್ನ ಘನತೆಯನ್ನು ಯೇಸು ನಾಮದಲ್ಲಿ ಹೆಚ್ಚಿಸು ಈ ಉಪವಾಸ ಪ್ರಾರ್ಥನೆಯಲ್ಲಿ ಪಾಲ್ಗೊಳ್ಳುತ್ತಿರುವ ಪ್ರತಿಯೊಬ್ಬರನ್ನು ಹೀಗೆಯೇ ಆಶೀರ್ವದಿಸಿರಿ. (1ಪೂರ್ವ ಕಾಲ ವೃತ್ತಾಂತ 4:10)
7.ನನ್ನ ಬೆಳವಣಿಗೆ ಹಾಗೂ ಕೀರ್ತಿಗೆ ಮೇರೆಯನ್ನು ಹಾಕಿರುವ ಸಂಸ್ಕೃತಿ ಸಂಪ್ರದಾಯ ಹಾಗೂ ನನ್ನ ವಿರುದ್ಧ ಹೋರಾಡುತ್ತಿರುವ ಪ್ರಾದೇಶಿಕ ದುರಾತ್ಮಗಳನ್ನು ಯೇಸುನಾಮದಲ್ಲಿ ಮುರಿದುಹಾಕುತ್ತೇನೆ. (ಗಲಾತ್ಯ3:8).
8.ಓ ಭೂಮಿಯೆ ಕರ್ತನ ವಾಕ್ಯವನ್ನು ಆಲಿಸು ನನ್ನ ಪರವಾಗಿ ಕಾರ್ಯ ಮಾಡು ಎಂದು ಯೇಸು ನಾಮದಲ್ಲಿ ಆಜ್ಞಾಪಿಸುತ್ತೇನೆ (ಯೇಶಾಯ 55:11).
9. ನನ್ನ ಕರೆಯ ಮೇಲೆ ಹೇರಲ್ಪಟ್ಟಿರುವ ದುರಾತ್ಮನ ಮಿತಿಯನ್ನು ಯೇಸು ನಾಮದಲ್ಲಿ ತೆಗೆದು ಹಾಕುತ್ತಿದ್ದೇನೆ ಹಾಗೂ ನಾಶ ಮಾಡುತ್ತಿದ್ದೇನೆ (ಯೆರೆಮಿಯ 29:11)
10.ಯೇಸು ನಾಮದಲ್ಲಿ ನಾನು ಈ ಕ್ಷೇತ್ರವನ್ನು ವಶಪಡಿಸಿಕೊಳ್ಳುತ್ತಿದ್ದೇನೆ (ನೀವು ಯಾವ ಕ್ಷೇತ್ರದಲ್ಲಿ ಯಶಸ್ಸು ಸಾಧಿಸಬೇಕೆನ್ನುತ್ತಿದ್ದೀರೋ ಆ ಕ್ಷೇತ್ರವನ್ನು ಸೂಚಿಸಿ).
11.ಆಶೀರ್ವಾದಗಳನ್ನು,ಮಹಿಮೆಯನ್ನು ಸದ್ಗುಣಗಳನ್ನು ಬಂಧಿಸಿರುವ ಎಲ್ಲಾ ಸೈತಾನನ ಸರಪಳಿಗಳನ್ನು ಯೇಸು ನಾಮದಲ್ಲಿ ಮುರಿದು ನಾನು ಪುನಃ ಅವುಗಳನ್ನು ಹಿಂಪಡೆದುಕೊಳ್ಳುತ್ತೇನೆ ಹಾಗೂ ಸ್ವಾಧೀನದಲ್ಲಿಟ್ಟುಕೊಳ್ಳುತ್ತೇನೆ (ಯೋವೆಲ2:25).
12.ದಯಮಾಡಿ ಕರುಣಾಸಾಧನ ಮಿನಿಸ್ಟ್ರಿ ಸಭೆಯು ಮತ್ತಷ್ಟು ಬೆಳೆದು ತನ್ನ ಸೇವೆಯನ್ನು ವಿಸ್ತರಿಸಿಕೊಳ್ಳುವುದಕ್ಕಾಗಿ ಪ್ರಾರ್ಥಿಸಿ (ಯೆಶಾಯ 54:2-3)
Join our WhatsApp Channel
Most Read
● ಕೊಡುವ ಕೃಪೆ -3● ವಾಕ್ಯದಿಂದ ಬೆಳಕು ಬರುತ್ತದೆ
● ದಿನ 10:40 ದಿನಗಳ ಉಪವಾಸ ಪ್ರಾರ್ಥನೆ.
● ಅನ್ಯ ಭಾಷೆಯಲ್ಲಿ ಪ್ರಾರ್ಥಿಸಿ ಮತ್ತು ಆತ್ಮಿಕವಾದ ನವಚೇತನವನ್ನು ಹೊಂದಿಕೊಳ್ಳಿರಿ
● ದೇವರ ಆಲಯದಲ್ಲಿರುವ ಸ್ತಂಭಗಳು
● ಸರ್ವಶಕ್ತನಾದ ದೇವರ ಅದ್ಬುತ ಸಮಾಗಮ.
● ಪವಿತ್ರಾತ್ಮನಿಗಿರುವ ಹೆಸರುಗಳು ಮತ್ತು ಬಿರುದುಗಳು
ಅನಿಸಿಕೆಗಳು