ಅನುದಿನದ ಮನ್ನಾ
2
0
56
ಕ್ಷಮಿಸದಿರುವುದು
Wednesday, 2nd of April 2025
Categories :
ನಂಬಿಕೆಗಳನ್ನು(Beliefs)
ರೂಪಾಂತರ(transformation)
"ಮತ್ತೊಬ್ಬನ ಮೇಲೆ ತಪ್ಪುಹೊರಿಸುವದಕ್ಕೆ ಕಾರಣವಿದ್ದರೂ ತಪ್ಪುಹೊರಿಸದೆ ಒಬ್ಬರಿಗೊಬ್ಬರು ಸೈರಿಸಿಕೊಂಡು ಕ್ಷವಿುಸಿರಿ. ಕರ್ತನು ನಿಮ್ಮನ್ನು ಕ್ಷವಿುಸಿದಂತೆಯೇ ನೀವೂ ಕ್ಷವಿುಸಿರಿ. (ಕೊಲೊಸ್ಸೆಯವರಿಗೆ 3:13)
ಯಾರಾದರೂ ನಿಮ್ಮ ಮೇಲೆ ತಪ್ಪು ಹೊರಿಸಬೇಕೆಂದರೆ ನೀವು ಸಾಕಷ್ಟು ಕಾಲ ಬದುಕಿರಲೇಬೇಕು. ಹೌದು, ಜನರು ಯಾವಾಗಲೂ ನಿಮ್ಮ ಮೇಲೆ ಒತ್ತಡ ಹೇರುವವರಾಗಿರುತ್ತಾರೆ. ಜೀವನದಲ್ಲಿ ಸಾಕಷ್ಟು ಬಾರಿ ನಿಮಗೆ ನೀವೇ ತಪ್ಪು ಕೆಲಸಗಳನ್ನು ಮಾಡಿರುತ್ತೀರಿ ಎಂಬುದನ್ನು ನೀವು ಒಪ್ಪುತ್ತೀರಿ, ಆದರೂ ನೀವು ನಿಮ್ಮೊಂದಿಗೆ ಮಾತನಾಡುವುದನ್ನೋ ಅಥವಾ ನಿಮ್ಮನ್ನು ನೀವು ಪ್ರೀತಿಸುವುದನ್ನು ನಿಲ್ಲಿಸಿಲ್ಲ. ಕ್ಷಮೆಯ ವಿಷಯವು ಕ್ರೈಸ್ತ ನಂಬಿಕೆಯ ಮೂಲಭೂತ ಅಂಶವಾಗಿದೆ.ನಮ್ಮ ವಿಮೋಚನೆಯ ಸಮಯದಲ್ಲಿ ದೇವರು ನಮ್ಮನ್ನು ಕ್ಷಮಿಸಿದ್ದಾನಲ್ಲಾ.
ಹೌದು, ಜನರು ಕಿರಿಕಿರಿ ಉಂಟುಮಾಡಬಹುದು, ಮತ್ತು ಅವರು ಮಾಡುವ ನೋವು ಆಳವಾಗಿರಬಹುದು, ಆದರೆ ಸತ್ಯವೇದವು ನಾವು ಏನೇ ಆದರೂ ಅವರನ್ನು ಕ್ಷಮಿಸಬೇಕು ಎಂದು ಹೇಳುತ್ತದೆ. ಇದು ತುಂಬಾ ಸತ್ಯವಾದದ್ದು ಏಕೆಂದರೆ ನೀವು ಎಷ್ಟೇ ಅಪರಾಧಗಳನ್ನು ಮಾಡಿದ್ದರೂ, ದೇವರ ಮುಂದೆ ನಮ್ಮ ಅಪರಾಧಗಳನ್ನು ಒಪ್ಪಿಕೊಂಡಾಗ ಆತನು ನಮ್ಮನ್ನು ಕ್ರಿಸ್ತನಲ್ಲಿ ಕ್ಷಮಿಸಿದನು.
ಮತ್ತಾಯ 18:21-35 ರಲ್ಲಿ, ಕರ್ತನಾದ ಯೇಸು ಕ್ಷಮಿಸದೇ ಹೋಗುವವರು ಕೋಟೆಕೊತ್ತಲುಗಳುಳ್ಳ ಸೆರೆಮನೆಯಲ್ಲಿ ಸಿಕ್ಕಿಹಾಕಿಕೊಳ್ಳುವುದಕ್ಕೆ ಹೋಲಿಸಿದನು. ಕ್ಷಮಿಸದಿರುವುದು ನಮ್ಮ ಮನಸ್ಸಿನಲ್ಲಿ ನಾವೇ ನಿರ್ಮಿಸಿಕೊಂಡ ಕೋಟೆಗಳಂತೆ ಅಲ್ಲಿ ಒಂದೊಂದು ಇಟ್ಟಿಗೆಯೂ , ಪವಿತ್ರಾತ್ಮ ದೇವರ ಬಲವು ನಮ್ಮ ಆತ್ಮ ಮತ್ತು ದೇಹವನ್ನು ಶುದ್ಧೀಕರಿಸದಂತೆ ತಡೆಯುತ್ತದೆ.
ಯೇಸು ಮತ್ತಾಯ 6:14-15 ರಲ್ಲಿ
"ನೀವು ಜನರ ತಪ್ಪುಗಳನ್ನು ಕ್ಷವಿುಸಿದರೆ ಪರಲೋಕದಲ್ಲಿರುವ ನಿಮ್ಮ ತಂದೆಯು ನಿಮ್ಮ ತಪ್ಪುಗಳನ್ನೂ ಕ್ಷವಿುಸುವನು. ಆದರೆ ನೀವು ಜನರ ತಪ್ಪುಗಳನ್ನು ಕ್ಷವಿುಸದೆಹೋದರೆ ನಿಮ್ಮ ತಂದೆ ಸಹ ನಿಮ್ಮ ತಪ್ಪುಗಳನ್ನು ಕ್ಷವಿುಸುವದಿಲ್ಲ." ಎಂದು ಹೇಳಿದನು.
ನಾವು ಕ್ಷಮಿಸದಂತ ಜೀವಿತ ಜೀವಿಸುವಾಗ, ದೇವರ ಕ್ಷಮೆಯನ್ನು ನಮ್ಮ ಜೀವನದಲ್ಲಿ ತಡೆಹಿಡಿಯುತ್ತೇವೆ.
ವಿಪರ್ಯಾಸವೆಂದರೆ, ಕ್ಷಮಿಸಲು ನಿರಾಕರಿಸುವ ವ್ಯಕ್ತಿ ತಾನೇ ನಿರ್ಮಿಸಿದ ಗೋಡೆಗಳ ಮಧ್ಯೆ ಸಿಕ್ಕಿಹಾಕಿಕೊಳ್ಳುತ್ತಾನೆ. ಎಫೆಸ 4:32 ರಲ್ಲಿ, ಅಪೊಸ್ತಲ ಪೌಲನು ಕ್ರಿಸ್ತನು ನಮ್ಮನ್ನು ಕ್ಷಮಿಸಿದಂತೆ ನಾವೂ ಸಹ ಪರಸ್ಪರ ದಯೆ ಮತ್ತು ಸಹಾನುಭೂತಿಯಿಂದಿರಲು ಕಲಿಸಿದನು."ಎಫೆಸದವರಿಗೆ 4:32
"ಒಬ್ಬರಿಗೊಬ್ಬರು ಉಪಕಾರಿಗಳಾಗಿಯೂ ಕರುಣೆಯುಳ್ಳವರಾಗಿಯೂ ಕ್ಷವಿುಸುವವರಾಗಿಯೂ ಇರ್ರಿ."
ಈ ಕ್ಷಮಿಸದಂತ ಸೆರೆಮನೆಯಲ್ಲಿ ನಾಲ್ಕು ಅಡ್ಡ ಗೋಡೆಗಳಿವೆ.
1. ಸೇಡಿನ ಅಡ್ಡ ಗೋಡೆ
ನಮಗೆ ತಪ್ಪು ಮಾಡಿದವರ ವಿರುದ್ಧ ಸೇಡು ತೀರಿಸಿಕೊಳ್ಳುವ ನಮ್ಮ ಬಯಕೆಯನ್ನು ನಾವು ಹಿಡಿದಿಟ್ಟುಕೊಳ್ಳುವುದು ಇಲ್ಲಿಯೇ. ಇದು ಮೂರು ವಿಭಿನ್ನ ರೀತಿಯಲ್ಲಿ ಪ್ರಕಟವಾಗಬಹುದು: ನಾವು ಅದಕ್ಕೆ ಸಮಾನ ಬಲದಿಂದ, ಹೆಚ್ಚಿನ ಬಲದಿಂದ ಅಥವಾ ಕಡಿಮೆ ಮಟ್ಟದ ಪ್ರತೀಕಾರದಿಂದ ಪ್ರತಿಕ್ರಿಯಿಸಲು ಬಯಸಬಹುದು. ಏನೇ ಇರಲಿ, ಈ ಮೂರೂ ಸಹ ಪ್ರತೀಕಾರದ ರೂಪಗಳಾಗಿವೆ. ಕೆಲವು ಜನರು ಸೇಡು ತೀರಿಸಿಕೊಳ್ಳಲು ವರ್ಷಗಟ್ಟಲೆ ಯೋಜಿಸುತ್ತಾರೆ ಮತ್ತು ಆ ಸೇಡು ತೀರಿಸಿಕೊಳ್ಳುವವರೆಗೆ ಅವರು ಯಾವುದರಲ್ಲೂ ತೃಪ್ತಿಯನ್ನು ಕಂಡುಕೊಳ್ಳುವುದಿಲ್ಲ.
ತನ್ನ ಸಹೋದರಿಯನ್ನು ಮಾನಭಂಗ ಮಾಡಿದ ಅಮ್ನೋನನನ್ನು ಕ್ಷಮಿಸದ ಅಬ್ಷಾಲೋಮನ ಬಗ್ಗೆ ಸತ್ಯವೇದ ಮಾತನಾಡುತ್ತದೆ. ಎರಡು ವರ್ಷಗಳ ನಂತರ ಸೇಡು ತೀರಿಸಿಕೊಳ್ಳಲು ಅವನಿಗೆ ಅಂತಿಮವಾಗಿ ಅವಕಾಶ ಸಿಕ್ಕಿತು. ಸೇಡು ತೀರಿಸಿಕೊಳ್ಳಲು ಯೋಜಿಸುವಾಗ ಒಬ್ಬ ಮನುಷ್ಯ ಎಷ್ಟು ಸಂಪರ್ಕಗಳಿಂದ ಕಡಿತಗೊಂಡಿರಬಹುದು ಎಂಬುದನ್ನು ನೀವು ಊಹಿಸಬಹುದು.
2. ಅಸಮಾಧಾನದ ಅಡ್ಡ ಗೋಡೆ
ಇಲ್ಲಿ ನಾವು ನಮ್ಮ ಹೃದಯದಲ್ಲಿ ಕಹಿಯನ್ನು ಹಿಡಿದಿಟ್ಟುಕೊಂಡು ಆ ಬೇಸರದಿಂದಾದ ನೋವನ್ನು ಮತ್ತೆ ಮತ್ತೆ ಅನುಭವಿಸುತ್ತೇವೆ. ನಿಮ್ಮನ್ನು ನೋಯಿಸಿದ ಯಾರನ್ನಾದರೂ ನೀವು ನೋಡಿದಾಗ ನಿಮಗೆ ಹೇಗೆ ಅನಿಸುತ್ತದೆ? ನೀವು ಅವರಿಗೆ ಒಳ್ಳೆಯದನ್ನು ಬಯಸುತ್ತೀರಾ ಅಥವಾ ನೀವು ಕೋಪಗೊಳ್ಳುತ್ತೀರಾ? ಆ ಶುದ್ಧ ಕಿರಿಕಿರಿಯ ಭಾವನೆ ನಿಮಗೆ ತಿಳಿದಿದೆ ಮತ್ತು ಮತ್ತೆ ಆ ಗಾಯವನ್ನು ಕೆರೆದುಕೊಂಡು ಹೊಸದಾಗಿ ತೆರೆದುಕೊಳ್ಳುತ್ತವೆ . ಅಸಮಾಧಾನ ಎಂಬುದು ನಮ್ಮ ಹೃದಯಗಳು ಸಂತೋಷದ ಪರಿಪೂರ್ಣತೆಯನ್ನು ಅನುಭವಿಸುವುದಂತೆ ತಡೆಯುತ್ತದೆ.
3. ವಿಷಾದದ ಅಡ್ಡ ಗೋಡೆ
ಆಗಲೇ ನಾವು ಹಿಂದಿನದನ್ನು ಬದಲಾಯಿಸಬಹುದಿತ್ತು ಮತ್ತು ಈ ಪ್ರಮಾದ ಸಂಭವಿಸುವುದನ್ನು ತಡೆಯಬಹುದಿತ್ತು ಎಂದು ನಾವು ನಂಬುತ್ತೇವೆ. "ನಾನು ಹೀಗೆ ಮಾಡಬಹುದಿತ್ತು, ಹಾಗೆ ಮಾಡಬೇಕಿತ್ತು ಅಥವಾ ಹೀಗೆ ಮಾಡುತ್ತಿದ್ದೆ" ಎಂದು ನಾವು ಭಾವಿಸಬಹುದು.
4. ಪ್ರತಿರೋಧದ ಅಡ್ಡಗೋಡೆ
ನಾಲ್ಕನೇ ಗೋಡೆಯು ಆಶೀರ್ವಾದವನ್ನು ವಿರೋಧಿಸುತ್ತದೆ. ನೀವು ನಿಮ್ಮ ಆಶೀರ್ವಾದಕ್ಕಾಗಿ ಪ್ರಾರ್ಥಿಸುವಾಗ ನಿಮ್ಮ ನೆರೆಯವರಿಗೆ ಆ ಆಶೀರ್ವಾದ ದೊರಕಿದರೆ ಹೇಗಿರುತ್ತದೆ ಸ್ವಲ್ಪ ಊಹಿಸಿಕೊಳ್ಳಿ ಅದರಲ್ಲೂ ನಿಮಗೆ ತಪ್ಪು ಮಾಡಿದವರನ್ನು ದೇವರು ಆಶೀರ್ವಧಿಸಿದಾಗ ಅವರನ್ನ ಶುಭ ಹಾರೈಸಲು ನೀವು ನಿರಾಕರಿಸುವುದು ಇಲ್ಲಿಯೇ. ಕ್ಷಮಿಸದಿರುವಿಕೆಯ ಪರಿಣಾಮದ ಉತ್ತುಂಗ ಇದು.
ನಿಮ್ಮ ಜೀವನದಲ್ಲಿ ನೀವು ದೇವರ ಆಶೀರ್ವಾದವನ್ನು ಬಯಸುತ್ತೀರಾ? ಹಾಗಿದ್ದಲ್ಲಿ ದೇವರ ಆಶೀರ್ವಾದವು ನಿಮ್ಮ ಜೀವನದಲ್ಲಿ ಮುಕ್ತವಾಗಿ ಹರಿಯುವಂತೆ ನಿಮ್ಮ ಹೃದಯವನ್ನು ಪ್ರತಿಯೊಂದು ಅಕ್ಷಮ್ಯತೆಯಿಂದ ಮುಕ್ತಗೊಳಿಸಿ. ಆ ವ್ಯಕ್ತಿಯ ಬಳಿಗೆ ಹೋಗಿ ನೀವು ಅವರನ್ನು ಕ್ಷಮಿಸಿದ್ದೀರಿ ಎಂದು ಹೇಳಿ. ನಿಮ್ಮನ್ನು ನೋಯಿಸುವವರೊಂದಿಗೆ ಸಮಾಧಾನ ಮಾಡಿಕೊಳ್ಳಿ; ಆಗ ನಿಮ್ಮ ಜೀವನವು ದೇವರ ಅಲೌಕಿಕ ಉಲ್ಲಾಸವನ್ನು ಆನಂದಿಸುತ್ತದೆ.
Bible Reading: 1 Samuel 4-7
ಪ್ರಾರ್ಥನೆಗಳು
ತಂದೆಯೇ, ನಿನ್ನ ವಾಕ್ಯದ ಸತ್ಯಕ್ಕಾಗಿ ಯೇಸುನಾಮದಲ್ಲಿ ನಿನಗೆ ಸ್ತೋತ್ರ ಸಲ್ಲಿಸುತ್ತೇನೆ. ಕ್ಷಮ ಗುಣದಲ್ಲಿ ನಡೆಯಲು ನೀವು ನನಗೆ ಸಹಾಯ ಮಾಡುವಂತೆ ಯೇಸುನಾಮದಲ್ಲಿ ಪ್ರಾರ್ಥಿಸುತ್ತೇನೆ. ಜನರನ್ನು ಮತ್ತು ಅವರ ದೃಷ್ಟಿಕೋನಗಳನ್ನು ಯಥಾರ್ಥವಾಗಿ ಸ್ವೀಕರಿಸುವ ಮೃದುವಾದ ಹೃದಯವನ್ನು ನನಗೆ ಅನುಗ್ರಹಿಸಬೇಕೆಂದು ಯೇಸುನಾಮದಲ್ಲಿ ಪ್ರಾರ್ಥಿಸುತ್ತೇನೆ. ನಿಮ್ಮ ಕ್ಷಮೆಯನ್ನು ನಾನು ಹೊಂದಿಕೊಳ್ಳುವಂತೆ ನನಗೆ ತಪ್ಪು ಮಾಡಿದವರಿಂದಾದ ಎಲ್ಲಾ ನೋವನ್ನು ಮರೆತುಬಿಡಲು ನಿನ್ನ ಕೃಪೆಗಾಗಿ ಯೇಸುನಾಮದಲ್ಲಿ ಪ್ರಾರ್ಥಿಸುತ್ತೇನೆ. ಇಂದಿನಿಂದ ನನ್ನ ಜೀವನವು ಸಂತೋಷದಿಂದ ತುಂಬಿರಬೇಕೆಂದು ಯೇಸುನಾಮದಲ್ಲಿ ಆದೇಶಿಸುತ್ತೇನೆ. ಆಮೆನ್.
Join our WhatsApp Channel

Most Read
● ನಿಮ್ಮ ಮಾರ್ಗದರ್ಶಕರು ಯಾರು - II● ಅಪ್ಪನ ಮಗಳು - ಅಕ್ಷಾ
● ನಾವು ಸಭೆಯಾಗಿ ನೇರವಾಗಿ ಕೂಡಿಕೊಳ್ಳದೆ ಮನೆಯಲ್ಲಿಯೇ ಕುಳಿತು ಆನ್ಲೈನ್ ನಲ್ಲಿ ಸಭೆಯ ಆರಾಧನೆಯಲ್ಲಿ ಭಾಗವಹಿಸಬಹುದೇ?
● ಇದರ ವ್ಯತ್ಯಾಸವು ಸ್ಪಷ್ಟವಾಗಿದೆ
● ನೀವು ಯುದ್ಧರಂಗದಲ್ಲಿರುವಾಗ: ಒಳನೋಟ
● ಕೃಪೆಯ ಮೇಲೆ ಕೃಪೆ
● ಸರಿಯಾದ ಸಂಬಂಧಗಳನ್ನು ಬೆಳೆಸಿಕೊಳ್ಳುವುದು ಹೇಗೆ
ಅನಿಸಿಕೆಗಳು