ಅನುದಿನದ ಮನ್ನಾ
ದಿನ 09 : 40 ದಿನಗಳ ಉಪವಾಸ ಮತ್ತು ಪ್ರಾರ್ಥನೆ
Saturday, 30th of November 2024
3
0
77
Categories :
ಉಪವಾಸ ಮತ್ತು ಪ್ರಾರ್ಥನೆ (Fasting and prayer)
ದೇವರು ನಿಮ್ಮ ಸಹಾಯಕ್ಕಾಗಿ ನೇಮಿಸಿದವರೊಂದಿಗೆ ಸಂಪರ್ಕ ಹೊಂದುವುದು.
"ಭೂಮ್ಯಾಕಾಶಗಳನ್ನು ನಿರ್ಮಿಸಿದ ಯೆಹೋವನಿಂದಲೇ ನನ್ನ ಸಹಾಯವು ಬರುತ್ತದೆ."(ಕೀರ್ತನೆಗಳು121:1-2).
ನಿಮ್ಮ ಕರೆ ಎಂಬುದು ದೇವರು ನಿಮಗಾಗಿ ಉದ್ದೇಶಿಸಿರುವ ಸ್ಥಾನವನ್ನು ನೀವು ತಲುಪಬೇಕು ಮತ್ತು ನೀವು ಅದನ್ನು ಸಾಧಿಸಿಕೊಳ್ಳಬೇಕೆಂಬುದೇ.ಇದು ನಿಮ್ಮ ಅಸ್ತಿತ್ವಕ್ಕೆಇರುವ ದೇವರ ನೀಲನಕ್ಷೆಯಾಗಿದೆ.ಪ್ರತಿಯೊಬ್ಬ ಮನುಷ್ಯನು ಸಹಾಯ ಮಾಡಲು ಮತ್ತು ಸಹಾಯ ಹೊಂದಲೆಂದೇ ರೂಪಿಸಲ್ಪಟ್ಟಿದ್ದಾನೆ.ತಮ್ಮನ್ನು ತಾವು ಎಲ್ಲರಿಂದ ಪ್ರತ್ಯೇಕಿಸಿಕೊಂಡು ಯಾರೂ ಸಹ ತಮ್ಮ ಕರೆಯನ್ನು ಪೂರ್ಣಗೊಳಿಸಿಕೊಳ್ಳಲಾರರು.
ದೇವರು ನಮ್ಮನ್ನು ಆತನ ಮೇಲೆಯೇ ಆಧಾರಗೊಳ್ಳುವಂತೆ ಸೃಷ್ಟಿಸಿರುವುದರಿಂದ ಅನೇಕ ವಿಷಯಗಳನ್ನುನಾವು ನಮ್ಮ ಮನುಷ್ಯ ಬಲದಲ್ಲಿ ಆತನನ್ನು ಬಿಟ್ಟು ಮಾಡಲು ಸಾಧ್ಯವಿಲ್ಲ.ನಾವು ಬಲದಲ್ಲಿಯೂ, ಜ್ಞಾನದಲ್ಲಿಯೂ, ತಿಳುವಳಿಕೆಯಲ್ಲಿಯೂ ಮತ್ತು ಸಾಮರ್ಥ್ಯದಲ್ಲಿಯೂ ಮಿತಿಯುಳ್ಳವರಾಗಿದ್ದೇವೆ.ನಾವು ದೇವರ ಮೇಲೆ ಆಧಾರಗೊಂಡಿದ್ದರೆ ಪೌಲನ ಹಾಗೆ "ನನ್ನನ್ನು ಬಲಪಡಿಸುವ ಕ್ರಿಸ್ತನಲ್ಲಿದ್ದು ಕೊಂಡು ಎಲ್ಲಕ್ಕೂ ಶಕ್ತನಾಗಿದ್ದೇನೆ." (ಫಿಲಿಪ್ಪಿಯವರಿಗೆ 4:13). ಎಂದು ಧೈರ್ಯವಾಗಿ ಘೋಷಿಸಬಹುದು.ದೇವರು ನಮ್ಮ ಸಹಾಯದ ಮೂಲವಾಗಿದ್ದಾನೆ ಮತ್ತು ಅನೇಕ ಸಾಧನಗಳ ಮೂಲಕ ನಮಗೆ ಆತನ ಸಹಾಯವನ್ನು ಕಳುಹಿಸುತ್ತಾನೆ. ಉದಾಹರಣೆಗೆ ಮನುಷ್ಯರ ಮೂಲಕ, ದೇವದೂತರ ಮೂಲಕ, ಪ್ರಕೃತಿಯ ಮೂಲಕ ಇತ್ಯಾದಿ.
ಈ ರೀತಿಯ ಸಹಾಯ ಹಸ್ತದ ಸೇವೆಗಳನ್ನು ಸತ್ಯವೇದದಲ್ಲಿ ಅನೇಕ ಕಡೆ ನಾವು ನೋಡಬಹುದು. ಅದರಲ್ಲಿ ಕೆಲವನ್ನು ನಾವು ಈ ದಿನ ಅಧ್ಯಯನ ಮಾಡೋಣ.
ಕರೆಯನ್ನು ಪೂರ್ಣಗೊಳಿಸಲು ಕಳುಹಿಸಲ್ಪಟ್ಟ ಸತ್ಯವೇದ ಆಧಾರಿತ ಸಹಾಯಕರು.
1. ಆದಾಮ.
ಕರೆಯನ್ನು ಪೂರ್ಣಗೊಳಿಸಲು ಕಳುಹಿಸಲ್ಪಟ್ಟ ಸಹಾಯಕರ ಈ ವ್ಯವಸ್ಥೆಯನ್ನು ಪ್ರಪ್ರಥಮವಾಗಿ ಅನುಭವಿಸಿದವನು ಆದಾಮನು. ಹವ್ವಳು ಆದಾಮನ ಸಹಾಯಕ್ಕೆಂದೇ "ಅವನಿಗೆ ಸರಿ ಬೀಳುವ ಸಹಾಯಕಳಾಗಿ" ದೇವರಿಂದ ರೂಪಿಸಲ್ಪಟ್ಟಳು.(ಆದಿ2:18).
2.ಯೋಸೆಫ.
ಆದಿಕಾಂಡ 40:14ರಲ್ಲಿ ಯೋಸೆಫನು ಭಕ್ಷ್ಯಕಾರನಿಗೆ ಅವನ ಕನಸಿನ ಅರ್ಥವನ್ನು ತಿಳಿಸಿದ ನಂತರ ಆ ಭಕ್ಷ್ಯಕಾರನು ಸೆರೆಯಿಂದ ಬಿಡುಗಡೆ ಹೊಂದಿದ ಮೇಲೆ ತನ್ನ ವಿಷಯವಾಗಿ ಫರೋಹನಿಗೆ ತಿಳಿಸಿ ತನ್ನ ಬಿಡುಗಡೆಗೆ ಸಹಾಯ ಮಾಡಬೇಕೆಂದು ಯೋಸೆಫನು ಯಾಚಿಸಿದನು.ಆದರೆ ಆ ಭಕ್ಷ್ಯಕಾರನು ಎರಡು ವರ್ಷಗಳ ಕಾಲ ಅವನನ್ನು ಮರತೇ ಬಿಟ್ಟಿದ್ದನು.(ಆದಿಕಾಂಡ 40:22,41:1,9-14). ದೇವರು ನಿಮಗೆ ಸಹಾಯ ಮಾಡಿದರೆ ಮಾತ್ರ ಜನರು ನಿಮ್ಮನ್ನು ನೆನಪಿಸಿಕೊಳ್ಳಲು ಸಾಧ್ಯ.
3.ದಾವೀದನು.
ದಾವೀದನು ತನ್ನ ಜೀವಮಾನಕಾಲದಲ್ಲಿ ಅನೇಕ ಸಾರಿ ಈ ರೀತಿಯ ಸಹಾಯವನ್ನು ಅನುಭವಿಸಿದನು.ಅವನಿಗೆ ಈ ಸಹಾಯಹಸ್ತವನ್ನು ಅನುಭವಿಸುವುದರ ಮಹತ್ವ ತಿಳಿದಿತ್ತು ಅದರಿಂದಲೇ ಅವನು ತನ್ನ ಕೀರ್ತನೆಗಳಲ್ಲಿ ಅನೇಕ ಸಮಯದಲ್ಲಿ ಅವನಿಗೆ ಸಿಕ್ಕ ಅನೇಕ ಸಹಾಯದ ಕುರಿತು ಬರೆದಿದ್ದಾನೆ.
"ದಾವೀದನ ಸಹಾಯಕ್ಕೆ ಪ್ರತಿದಿನವೂ ಹೊಸ ಗುಂಪುಗಳು ಬರುತ್ತಿದ್ದವು; ಅವನ ಸೈನ್ಯವು ದೇವಸೈನ್ಯದಷ್ಟು ದೊಡ್ಡದಾಯಿತು."
(1 ಪೂರ್ವಕಾಲವೃತ್ತಾಂತ 12:22 )
"ಒಂದು ಕಾಲದಲ್ಲಿ ಫಿಲಿಷ್ಟಿಯರಿಗೂ ಇಸ್ರಾಯೇಲ್ಯರಿಗೂ ತಿರಿಗಿ ಯುದ್ಧವಾಯಿತು. ದಾವೀದನು ತನ್ನ ಸೈನಿಕರನ್ನು ಕರಕೊಂಡು ಫಿಲಿಷ್ಟಿಯರಿಗೆ ವಿರೋಧವಾಗಿ ಯುದ್ಧಕ್ಕೆ ಹೋದಾಗ ಬಹಳವಾಗಿ ದಣಿದಂಥ ಅವನನ್ನು [16] ರೆಫಾಯರಲ್ಲೊಬ್ಬನಾದ ಇಷ್ಬೀಬೆನೋಬ್ ಎಂಬವನು ಕೊಲ್ಲುವದಕ್ಕಿದ್ದನು. ಅವನ ಬರ್ಜಿಯ ತಾಮ್ರವು ಮುನ್ನೂರು ರೂಪಾಯಿ ತೂಕದ್ದು; ಅವನು ಸೊಂಟಕ್ಕೆ ಹೊಸ [ಕತ್ತಿಯನ್ನು] ಕಟ್ಟಿಕೊಂಡಿದ್ದನು. [17] ಚೆರೂಯಳ ಮಗನಾದ ಅಬೀಷೈಯು ದಾವೀದನ ಸಹಾಯಕ್ಕೆ ಬಂದು ಫಿಲಿಷ್ಟಿಯನನ್ನು ಕೊಂದುಹಾಕಿದನು. ಆಗ ಜನರು ದಾವೀದನಿಗೆ - ಇಸ್ರಾಯೇಲ್ಯರ ದೀಪವು ಆರಿಹೋಗದಂತೆ ನೀನು ಇನ್ನು ಮುಂದೆ ನಮ್ಮ ಜೊತೆಯಲ್ಲಿ ಯುದ್ಧಕ್ಕೆ ಬರಬಾರದು ಎಂದು ಖಂಡಿತವಾಗಿ ಹೇಳಿದರು." (2 ಸಮುವೇಲನು 21:15-17)
ನಿಮ್ಮ ಕರೆಯನ್ನು ಸಂಪೂರ್ಣಗೊಳಿಸಲು, ನೀವು ಸಹಾಯಕರನ್ನು ಆಯ್ಕೆ ಮಾಡುವುದಲ್ಲ ನಿಮಗಾಗಿ ಸಹಾಯರನ್ನು ಸಿದ್ದಮಾಡುವ ಕರ್ತನೇ ನಿಮ್ಮ ಸಂಪರ್ಕಕ್ಕೆ ಅವರನ್ನು ಬರಮಾಡುವನು.
ಈ ದಿನದ ಪ್ರಾರ್ಥನೆಯ ನಂತರ ನೀವು ಅಪೂರ್ವವಾದ ದೇವರ ಸಹಾಯಹಸ್ತವನ್ನು ಅನುಭವಿಸೇ ತೀರುತ್ತೀರಿ ಎಂದು ನಾನು ಬಲವಾಗಿ ನಂಬುತ್ತೇನೆ. ಮುಚ್ಚಿರುವ ಬಾಗಿಲುಗಳು ಮತ್ತೊಮ್ಮೆ ತೆರೆಯಲ್ಪಡುತ್ತವೆ ಮತ್ತು ಮತ್ತೊಮ್ಮೆ ನಿಮಗೆ ಒಳಿತನ್ನು ಮಾಡಲು ಜನರು ಯೇಸುನಾಮದಲ್ಲಿ ನಿಮ್ಮ ಬಳಿಗೆ ಬರುತ್ತಾರೆ.
ಸಹಾಯಹಸ್ತದ ವಿಧಗಳು.
1. ದೇವರ ಸಹಾಯ ಹಸ್ತ.
ದೇವರೇ ನಮಗೆ ಸಹಾಯದ ಬಹುದೊಡ್ಡ ಮೂಲವಾಗಿದ್ದಾನೆ. ದೇವರು ನಿಮಗೆ ಸಹಾಯ ಮಾಡಿದರೆ ಮನುಷ್ಯರೂ ಸಹ ನಿಮಗೆ ಸಹಾಯ ಮಾಡುವರು. ಅವರಿವರ ಬಳಿಯಲ್ಲಿ ಸಹಾಯಕ್ಕಾಗಿ ಭಿಕ್ಷೆ ಬೇಡುತ್ತಾ ತಿರುಗುವ ಬದಲು ದೇವರ ಸಾನಿಧ್ಯದಲ್ಲಿ ದೇವರ ಸಹಾಯಹಸ್ತವನ್ನು ಬೇಡುತ್ತಾ ಕುಳಿತುಕೊಳ್ಳಿ. ದೇವರು ಯಾರ ಮನಸ್ಸನಲ್ಲಿಯಾದರೂ ನಿಮ್ಮ ಕುರಿತು ಮಾತಾಡಿ ನಿಮಗೆ ಸಹಾಯ ದೊರಕುವಂತೆ ಮಾಡಲು ಶಕ್ತನಾಗಿದ್ದಾನೆ.
"ನಾನೇ ನಿನ್ನೊಂದಿಗಿದ್ದೇನೆ; ದಿಗ್ಭ್ರಮೆಗೊಳ್ಳದಿರು, ನಾನೇ ನಿನ್ನ ದೇವರು; ನಾನು ನಿನ್ನನ್ನು ಬಲಪಡಿಸುತ್ತೇನೆ; ಹೌದು, ನಿನಗೆ ಸಹಾಯಕೊಡುತ್ತೇನೆ; ನನ್ನ ಧರ್ಮದ ಬಲಗೈಯನ್ನು ನಿನಗೆ ಆಧಾರಮಾಡುತ್ತೇನೆ."ಎಂದು ದೇವರು ಹೇಳುತ್ತಾನೆ (ಯೆಶಾಯ 41:10)
"ಯೆಹೋವನು ಒಬ್ಬನ ನಡತೆಗೆ ಮೆಚ್ಚಿದರೆ ಅವನ ಶತ್ರುಗಳನ್ನೂ ವಿುತ್ರರನ್ನಾಗಿ ಮಾಡುವನು." ಎಂದು ಜ್ಞಾನೋಕ್ತಿಗಳು 16:7 ಹೇಳುತ್ತದೆ.
2. ಮನುಷ್ಯರ ಸಹಾಯ ಹಸ್ತ.
ದೇವರು ಎಲೀಯನಿಗೆ ನಾನು ನಿನ್ನ ಪೋಷಣೆಗಾಗಿ ಚಾರೆಪ್ತದ ವಿಧವೆಯನ್ನು ಸಿದ್ದಮಾಡಿದ್ದೇನೆ ನೀನು ಅಲ್ಲಿಗೆ ಹೋಗು ಎಂದು ಹೇಳುತ್ತಾನೆ. ಪ್ರತಿಯೊಬ್ಬರಿಗೂ ಸಹ ಸಹಾಯಹಸ್ತದ ಅವಶ್ಯಕತೆ ಇದ್ದೇ ಇದೆ. ಹಾಗಾಗಿ ನೀವು ಯಾವಾಗ ದೇವರ ಮೇಲೆ ಅದಕ್ಕಾಗಿ ಆಧಾರಗೊಳ್ಳುವಿರೋ ಆತನು ನಿಮ್ಮ ಸಹಾಯಕ್ಕಾಗಿ ಸಿದ್ದಮಾಡಿರುವ ಸರಿಯಾದ ವ್ಯಕ್ತಿಯನ್ನು ನಿಮ್ಮ ಬಳಿಗೆ ಕಳುಹಿಸುತ್ತಾನೆ. (1ಅರಸು17:8-9).
1ಸಹೋದರರೇ, ಮಕೆದೋನ್ಯದ ಸಭೆಗಳಲ್ಲಿ ದೇವರ ಕೃಪೆಯು ತೋರಿದ ಬಗೆಯನ್ನು ನಿಮಗೆ ತಿಳಿಸುತ್ತೇವೆ. 2ಆ ಸಭೆಗಳವರು ಬಹಳ ಹಿಂಸೆ ತಾಳುವವರಾದರೂ ಮತ್ತು ವಿಪರೀತವಾದ ಬಡತನದಲ್ಲಿದ್ದರೂ ಬಹು ಆನಂದದಿಂದ ತುಂಬಿದವರಾಗಿ ಅತ್ಯಂತ ಔದಾರ್ಯವುಳ್ಳವರಾದರು.3ಅವರು ಶಕ್ತ್ಯನುಸಾರವಾಗಿ ಮಾತ್ರ ಕೊಡದೆ ಶಕ್ತಿಯನ್ನು ಮೀರಿ ತಮ್ಮಷ್ಟಕ್ಕೆ ತಾವೇ ಕೊಟ್ಟರು; ಇದಕ್ಕೆ ನಾನು ಸಾಕ್ಷಿ.4ದೇವಜನರಿಗೆ ಸಹಾಯಮಾಡುವ ಕೆಲಸದಲ್ಲಿ ತಾವು ಪಾಲುಗಾರರಾಗುವಂತೆ ಅಪ್ಪಣೆಯಾಗಬೇಕೆಂದು ನಮ್ಮನ್ನು ಬಹಳವಾಗಿ ಬೇಡಿಕೊಂಡರು.5ನಾವು ನೆನಸಿದ್ದ ಪ್ರಕಾರವಾಗಿ ಅವರು ಕೊಡದೆ ಮೊದಲು ತಮ್ಮನ್ನೇ ಕರ್ತನಿಗೆ ಒಪ್ಪಿಸಿಕೊಟ್ಟರು; ಅನಂತರ ದೇವರ ಚಿತ್ತಾನುಸಾರವಾಗಿ ನಮಗೂ ತಮ್ಮನ್ನು ಒಪ್ಪಿಸಿದರು." ಎಂದು ಪೌಲನು 2 ಕೊರಿಂಥದವರಿಗೆ 8:1-5ರಲ್ಲಿ ಹೇಳುತ್ತಾನೆ.
3. ದೇವದೂತರ ಸಹಾಯಹಸ್ತ.
ಯಹೋಶುವ ಮತ್ತು ಇಸ್ರಾಯೇಲ್ಯರು ಯೆರಿಕೋ ಕೋಟೆಯನ್ನು ಕೆಡುವವಲ್ಲಿ ದೇವದೂತರ ಸಹಾಯ ಹಸ್ತವನ್ನು ಅನುಭವಿಸಿದರು.
"ಯೆಹೋಶುವನು ಯೆರಿಕೋವಿನ ಹತ್ತಿರದಲ್ಲಿದ್ದಾಗ ಒಂದಾನೊಂದು ದಿನ ಕಣ್ಣೆತ್ತಿ ನೋಡಲು ಒಬ್ಬ ಮನುಷ್ಯನು ಹಿರಿದ ಕತ್ತಿಯನ್ನು ಕೈಯಲ್ಲಿ ಹಿಡಿದು ತನ್ನೆದುರಿನಲ್ಲಿ ನಿಂತಿರುವದನ್ನು ಕಂಡನು. ಅವನು ಅವನ ಬಳಿಗೆ ಹೋಗಿ - ನೀನು ನಮ್ಮವನೋ ಅಥವಾ ಶತ್ರುಪಕ್ಷದವನೋ ಎಂದು ಕೇಳಲು [14] ಆ ಮನುಷ್ಯನು - ನಾನು ಅಂಥವನಲ್ಲ; ಯೆಹೋವನ ಸೇನಾಪತಿಯು; ಈಗಲೇ ಬಂದಿದ್ದೇನೆ ಎಂದನು. ಆಗ ಯೆಹೋಶುವನು ಅವನಿಗೆ ಸಾಷ್ಟಾಂಗನಮಸ್ಕಾರ ಮಾಡಿ - ಸ್ವಾವಿುಯವರು ತಮ್ಮ ಸೇವಕನಿಗೆ ಏನು ಆಜ್ಞಾಪಿಸಬೇಕೆಂದಿದ್ದೀರಿ ಅನ್ನಲು [15] ಯೆಹೋವನ ಸೇನಾಪತಿಯು - ನಿನ್ನ ಕಾಲಿನಿಂದ ಕೆರಗಳನ್ನು ತೆಗೆದುಹಾಕು; ನೀನು ನಿಂತಿರುವ ಸ್ಥಳವು ಪರಿಶುದ್ಧವಾದದ್ದು ಎಂದು ಯೆಹೋಶುವನಿಗೆ ಹೇಳಿದನು. ಅವನು ಹಾಗೆಯೇ ಮಾಡಿದನು."(ಯೆಹೋಶುವ 5:13-15)
ಇಂದು ನೀವು ಕರ್ತನನ್ನು ಪ್ರಾರ್ಥಿಸುತ್ತೀರಾದರೆ,ಕರ್ತನು ನಿಮಗೆ ದೇವದೂತರ ಸಹಾಯವನ್ನು ಕಳುಹಿಸಿ ಕೊಡುತ್ತಾನೆಂದು ಯೇಸುನಾಮದಲ್ಲಿ ನಿಮಗೆ ಪ್ರವಾದನೆ ಹೇಳುತ್ತೇನೆ. ಇದುವರೆಗೂ ನೀವು ಕಂಡರಿಯದಂತ,ಅಸಾಧ್ಯವೆನಿಸುವ ಸಂಗತಿಗಳು ಯೇಸುನಾಮದಲ್ಲಿ ನಿಮ್ಮ ಜೀವಿತದಲ್ಲಿ ಜರುಗಲಿದೆ.
4. ಭೂಮಿಯಿಂದ ದೊರಕುವ ಸಹಾಯಹಸ್ತ.
ಪ್ರಕೃತಿಯು ದೇವರ ಧ್ವನಿಗೆ ಸ್ಪಂದಿಸಿ
ಅವಶ್ಯಕತೆಗೆ ತಕ್ಕಂತೆ ದೇವಜನರ ಸಹಾಯಕ್ಕೆ ಕಾರ್ಯ ಮಾಡುತ್ತದೆ. ಸತ್ಯವೇದ ಹೇಳುತ್ತದೆ ತನ್ನನ್ನು ಪ್ರೀತಿಸುವವರ ಹಿತಕ್ಕಾಗಿ ಎಲ್ಲವು ಕಾರ್ಯ ಮಾಡುತ್ತದೆ ಎಂದು ಎಲ್ಲವೂ ಎನ್ನುವಲ್ಲಿ ಪ್ರಕೃತಿಯೂ ಸಹ ಅದರಲ್ಲಿ ಸೇರ್ಪಡೆಯಾಗಿದೆ. ಸತ್ಯವೇದದಲ್ಲಿ ಹೇಳಿರುವ ವಾಕ್ಯವನ್ನು ನಾವು ಸಂಪೂರ್ಣವಾಗಿ ನಂಬಿ ಆ ಆಶೀರ್ವಾದಗಳನ್ನು ಹೊಂದಿ ಕೊಳ್ಳುವುದಷ್ಟೇ ನಾವು ಮಾಡಬೇಕಾದಾದದ್ದು.
"ಆದರೆ ಭೂವಿುಯು ಆ ಸ್ತ್ರೀಯ ಸಹಾಯಕ್ಕೆ ಬಂದು ಬಾಯಿ ತೆರೆದು ಘಟಸರ್ಪನು ತನ್ನ ಬಾಯೊಳಗಿಂದ ಬಿಟ್ಟ ನದಿಯನ್ನು ಕುಡಿದುಬಿಟ್ಟಿತು."
(ಪ್ರಕಟನೆ 12:16).
"ಯೆಹೋವನು ಅಮೋರಿಯರನ್ನು ಇಸ್ರಾಯೇಲ್ಯರಿಗೆ ಒಪ್ಪಿಸಿದ ದಿನದಲ್ಲಿ ಯೆಹೋಶುವನು ಯೆಹೋವನಿಗೆ ಒಂದು ವಿಜ್ಞಾಪನೆ ಮಾಡಿದನು. ಸೂರ್ಯನೇ, ನೀನು ಗಿಬ್ಯೋನಿನಲ್ಲಿಯೂ ಚಂದ್ರನೇ, ನೀನು ಅಯ್ಯಾಲೋನ್ ತಗ್ಗಿನಲ್ಲಿಯೂ ನಿಲ್ಲಿರಿ! ಎಂದು ಇಸ್ರಾಯೇಲ್ಯರ ಸಮಕ್ಷದಲ್ಲಿ ಆಜ್ಞಾಪಿಸಲು [13] ಇಸ್ರಾಯೇಲ್ಯರು ತಮ್ಮ ಶತ್ರುಗಳಿಗೆ ಮುಯ್ಯಿತೀರಿಸುವವರೆಗೆ ಸೂರ್ಯಚಂದ್ರರು ಹಾಗೆಯೇ ನಿಂತರು. ಈ ಮಾತು ಯಾಷಾರ್‍ಗ್ರಂಥದಲ್ಲಿ ಬರೆದದೆಯಲ್ಲಾ! ಹೀಗೆ ಸೂರ್ಯನು ಮುಣುಗಲಿಕ್ಕೆ ಆತುರಪಡದೆ ಹೆಚ್ಚುಕಡಿಮೆ ಒಂದು ದಿವಸ ಪೂರ್ತಿ ಆಕಾಶ ಮಧ್ಯದಲ್ಲಿಯೇ ನಿಂತನು. [14] ಯೆಹೋವನು ಈ ಪ್ರಕಾರ ಒಬ್ಬ ಮನುಷ್ಯನ ಮಾತಿಗೆ ಕಿವಿಗೊಟ್ಟ ದಿವಸವು ಅದಕ್ಕಿಂತ ಹಿಂದೆಯೂ ಮುಂದೆಯೂ ಇಲ್ಲವೇ ಇಲ್ಲ. ಯೆಹೋವನು ತಾನೇ ಇಸ್ರಾಯೇಲ್ಯರಿಗೋಸ್ಕರ ಯುದ್ಧಮಾಡುತ್ತಾ ಇದ್ದನು."(ಯೆಹೋಶುವ 10:12-14).
ಹೆಚ್ಚಿನ ಅಧ್ಯಯನಕ್ಕಾಗಿ :ಕೀರ್ತನೆ 121:1-8,ಕೀರ್ತನೆ 20:1-9, ಪ್ರಸಂಗಿ 4:10, ಯೇಶಾಯ 41:13 ಓದಿರಿ.
Bible Reading Plan: Luke 1- 4
ಪ್ರಾರ್ಥನೆಗಳು
1. ತಂದೆಯೇ, ನಿನ್ನ ಪರಿಶುದ್ಧ ನಿವಾಸದಿಂದ ನನಗೆ ಯೇಸುನಾಮದಲ್ಲಿ ನಿನ್ನ ಸಹಾಯವು ದೊರಕಲಿ. (ಕೀರ್ತನೆ 20:2)
2. ನನ್ನ ಜೀವನದ ಸುತ್ತಲೂ ನನ್ನ ಕರೆಯನ್ನು ಸಂಪೂರ್ಣ ಗೊಳಿಸಲು ವಿರೋಧವಾಗಿ ಕಾರ್ಯ ಮಾಡುತ್ತಿರುವ ಎಲ್ಲಾ ವಿದ್ವಂಸಕರು ಯೇಸುನಾಮದಲ್ಲಿ ನಿಷ್ಕ್ರಿಯೆಗೊಳ್ಳಲಿ (ಯೋಹಾನ 10:10).
3. ನನ್ನ ಹಾಗೂ ನನ್ನ ಕರೆಗಾಗಿ ಯೋಜಿಸಲ್ಪಟ್ಟ ಸಹಾಯಕರನ್ನು ಮುಸುಕುವ, ತಡೆಯುವ ಯಾವುದೇ ಆಗಲಿ ಅವೆಲ್ಲವೂ ಯೇಸುನಾಮದಲ್ಲಿ ಪವಿತ್ರಾತ್ಮನ ಅಗ್ನಿಯಿಂದ ಸುಟ್ಟು ಬೂದಿಯಾಗಲಿ. (ಯೆಶಾಯ 54:17)
4. ನನ್ನ ಸಹಾಯಕ್ಕಾಗಿ ನಿಯೋಜಿಸಲ್ಪಟ್ಟಿರುವ ಮನುಷ್ಯರ ಮುಂದೆ ನನ್ನ ವಿರುದ್ಧವಾಗಿ ದೂರು ಹೇಳುವ ಎಲ್ಲಾ ದುಷ್ಟ ಧ್ವನಿಗಳ ಬಾಯಿಗಳು ಯೇಸುನಾಮದಲ್ಲಿ ಮುಚ್ಚಿಹೋಗಲಿ (ಪ್ರಕಟಣೆ 12:10).
5.ಓ ಕರ್ತನೇ, ನಾನು ನನ್ನ ಜೀವಿತದಲ್ಲಿ ಮುಂದಿನ ಹಂತಕ್ಕೆ ಸಾಗಲು ನೀನು ನನಗಾಗಿ ಇಟ್ಟಿರುವ ಸಹಾಯಕರನ್ನು ಸಂಪರ್ಕಿಸಲು ನಿನ್ನ ದಯೆ ಯೇಸುನಾಮದಲ್ಲಿ ನನಗೆ ದೊರಕಲಿ. (ವಿಮೋಚನಾ ಕಾಂಡ 3:21).
6. ನನ್ನ ಜೀವಿತದ ಕುರಿತು ನಿರ್ಣಯ ಕೈಗೊಳ್ಳುವ ಪ್ರತೀ ಕ್ಷೇತ್ರದಲ್ಲೂ ಕರ್ತನೇ ನಿನ್ನ ಧ್ವನಿಯು ನನ್ನ ಪರವಾಗಿ ಯೇಸುನಾಮದಲ್ಲಿ ಎತ್ತಲ್ಪಡಲಿ. (ಜ್ಞಾನೋಕ್ತಿ 18:16)
7. ದೇವರು ನನಗಾಗಿ ನಿಯೋಜಸಿರುವ ನನ್ನ ಸಹಾಯಕರನ್ನು ನನ್ನ ವಿರುದ್ಧವಾಗಿ ಮರುಳುಗೊಳಿಸುವ ಯಾವುದೇ ಶಕ್ತಿಯಾಗಲಿ ಯೇಸುನಾಮದಲ್ಲಿ ಅದರ ಪ್ರಭಾವವು ನಾಶವಾಗಿ ಹೋಗಲಿ.(ಎಫಸ್ಸೆ 6:12).
8. ನನ್ನ ಕರೆಗಾಗಿ ನಿಯೋಜಿಸಲ್ಪಟ್ಟ ಸಹಾಯಕರು ಯೇಸುನಾಮದಲ್ಲಿ ಕೊಲ್ಲಲ್ಪಡದಿರಲಿ ಯಾವ ಕೇಡು ಅವರಿಗೆ ಸಂಭವಿಸದಿರಲಿ. (ಕೀರ್ತನೆ 91:10-11).
9. ನನ್ನ ಜೀವಿತಕ್ಕೆ ವಿರುದ್ಧವಾಗಿ ಕಾರ್ಯ ಮಾಡುವ ಯಾವುದೇ ವೈಫಲ್ಯತೆಯ ದುರಾತ್ಮವಾಗಲೀ ಒಡಂಬಡುವ ದುರಾತ್ಮವಾಗಲೀ ಯೇಸುನಾಮದಲ್ಲಿ ಅವುಗಳನ್ನು ನನ್ನ ಜೀವನದಿಂದ ಬಹಿಷ್ಕರಿಸುತ್ತೇನೆ. (2ಕೊರಿಯಂತೆ 1:20).
10.ತಂದೆಯೇ, ನನಗೆ ಸಹಾಯ ಮಾಡಬೇಕಾದ ಮನುಷ್ಯರನ್ನು ಓಲೈಸುವಂತೆ ಅವರ ಮೇಲೆ ಪ್ರಭಾವ ಬೀರಲು ನಿನ್ನ ಪರಿಶುದ್ಧ ದೇವದೂತರನ್ನು ನನ್ನ ಸಹಾಯಕ್ಕೆ ಯೇಸುನಾಮದಲ್ಲಿ ಕಳುಹಿಸು. (ಇಬ್ರಿಯ 1:14).
11. ಕರುಣಾ ಸಾಧನ್ ಸಭೆಯ ಕರೆಯ ಪೂರೈಸುವುದಕ್ಕಾಗಿ ನಿಯೋಜಿಸಲ್ಪಟ್ಟಿರುವ ಸಹಾಯಕರನ್ನು ಮುಂದೆ ಬರುವಂತೆ ಯೇಸುನಾಮದಲ್ಲಿ ಕಳುಹಿಸು (1ಕೊರಿಯಂತೆ 12:28).
12. ಈ 21 ದಿನಗಳ ಉಪವಾಸ ಪ್ರಾರ್ಥನೆಯಲ್ಲಿ ನಿರತರಾಗಿರುವ ಪ್ರತಿಯೊಬ್ಬ ಸದಸ್ಯರು ಮತ್ತು ಅವರ ಕುಟುಂಬದವರ ಮೇಲೆ ಯೇಸುವಿನ ಪರಿಶುದ್ಧ ರಕ್ತವನ್ನು ಹಚ್ಚುತ್ತೇನೆ. (ವಿಮೋಚನಾಕಾಂಡ 12:13)
Join our WhatsApp Channel
Most Read
● ಭಾವನಾತ್ಮಕ ರೋಲರ್ ಕೋಸ್ಟರ್ ಗೆ ಬಲಿಪಶು.● ಇನ್ನು ಸಾವಕಾಶವಿಲ್ಲ.
● ಇಸ್ಕಾರಿಯೋತಾ ಯೂದನ ಜೀವನದಿಂದ ಕಲಿಯಬೇಕಾದ ಪಾಠಗಳು - 1
● ನಂಬಿಕೆ- ನಿರೀಕ್ಷೆ -ಪ್ರೀತಿ
● ನಿಮ್ಮ ಜೀವದದಲ್ಲಿ ಎಂದೂ ಅಳಿಯದಂತ ಬದಲಾವಣೆಯನ್ನು ತರುವುದು ಹೇಗೆ?- 2
● ನರಕ ಎನ್ನುವುದು ನಿಜವಾಗಿ ಇರುವಂಥ ಸ್ಥಳ
● ಪುರಾತನ ಮಾರ್ಗಗಳನ್ನು ವಿಚಾರಿಸಿ
ಅನಿಸಿಕೆಗಳು