ಅನುದಿನದ ಮನ್ನಾ
ದಿನ 26:40ದಿನಗಳ ಉಪವಾಸ ಪ್ರಾರ್ಥನೆ
Tuesday, 17th of December 2024
3
0
103
Categories :
ಉಪವಾಸ ಮತ್ತು ಪ್ರಾರ್ಥನೆ (Fasting and prayer)
ನಾನು ಶುಭವಾರ್ತೆಯನ್ನು ಕೇಳಿಸಿಕೊಳ್ಳುವೆನು
"ಆ ದೂತನು ಅವರಿಗೆ - ಹೆದರಬೇಡಿರಿ, ಕೇಳಿರಿ; ಜನರಿಗೆಲ್ಲಾ ಮಹಾ ಸಂತೋಷವನ್ನುಂಟುಮಾಡುವ ಶುಭಸಮಾಚಾರವನ್ನು ನಿಮಗೆ ತಿಳಿಸುತ್ತೇನೆ."(ಲೂಕ 2:10).
ಯೇಸುವಿನ ಜನನವು ಮನುಕುಲಕ್ಕೆ ಶುಭವಾರ್ತೆಯಾಗಿದೆ. ಈ ಶುಭವಾರ್ತೆಯು ರಕ್ಷಣೆ, ದೇವರ ರಾಜ್ಯ, ದೇವರ ಮಹಿಮೆ ಮತ್ತು ದೇವರ ಆಶೀರ್ವಾದವು ನಮಗಾಗಿ ಪರಲೋಕದಿಂದ ಇಳಿದು ಬಂದಿದ್ದನ್ನು ಸೂಚಿಸುತ್ತದೆ.
ಪ್ರತಿಯೊಬ್ಬ ವಿಶ್ವಾಸಿಯು ಸುವಾರ್ತೆಯ ಸಂದೇಶದೊಂದಿಗೆ ದೇವರ ರಾಜ್ಯ ಹಾಗೂ ಕ್ರಿಸ್ತನ ಕುರಿತಾದ ಶುಭವಾರ್ತೆ ಇಂದಲೇ ನೇಮಿಸಲ್ಪಟ್ಟಿದ್ದಾನೆ. ಶುಭ ವಾರ್ತೆಯು ರಕ್ಷಣೆಯ ಭಾಗವಾಗಿಯೂ ಮತ್ತು ನಮಗೆ ಭಾದ್ಯತೆಯಾಗಿಯೂ ಕೊಡಲ್ಪಟ್ಟಿದೆ ಏಕೆಂದರೆ ರಕ್ಷಣೆ ಎಂಬುದೇ ಸ್ವತಃ ಶುಭವಾರ್ತೆಯಾಗಿದೆ.
ನಮ್ಮನ್ನು ನಡೆಸುವ ಸತ್ಯವೇದದಲ್ಲಿ ಲೂಕ ಪುಸ್ತಕದ ಎರಡನೇ ಅಧ್ಯಾಯದಲ್ಲಿ ದೇವದೂತನು ಕುರುಬರ ಬಳಿಗೆ ಶುಭವಾರ್ತೆ ತರುವುದನ್ನು ನಾವು ಕಾಣುತ್ತೇವೆ. ಹಾಗೆಯೇ ದೇವದೂತನು ಎಲಿಜಬೆತಳಿಗೂ ಸಹ ಶುಭವಾರ್ತೆಯನ್ನು ತಂದನು. (ಲೂಕ 1:26-47)ಶಾಸ್ತ್ರದಲ್ಲಿ ಎಲ್ಲಿ ನೋಡಿದರೂ ಅಲ್ಲೆಲ್ಲ ದೇವದೂತರು ಜನರಿಗಾಗಿ ಶುಭವಾರ್ತೆಯನ್ನು ತರುವಂತದ್ದನ್ನು ನಾವು ಕಾಣಬಹುದು. ಸಂಸೊನ ಜನನಕ್ಕೆ ಸಂಬಂಧಿಸಿದಂತೆ ಸಂಸೊನನ ತಾಯಿಗೆ ದೇವದೂತರು ಶುಭವಾರ್ತೆ ತಂದರು. (ನ್ಯಾಯಸ್ಥಾಪಕರು13:3)
ನಾವು ಶುಭ ವಾರ್ತೆ ಕೇಳುತ್ತಿರಬೇಕೆಂಬುದೇ ದೇವರ ಚಿತ್ತವಾಗಿದೆ. ಯೆಶಾಯ 43:19ರಲ್ಲಿ ದೇವರು ಹೇಳುತ್ತಾನೆ... "ಇಗೋ, ಹೊಸಕಾರ್ಯಗಳನ್ನು ಮಾಡುವೆ" ಎಂದು ದೇವರು ಮಾಡುವ ಪ್ರತೀ ಕಾರ್ಯವು ಶುಭವಾರ್ತೆಯಾಗಿ ಬದಲಾಗುತ್ತದೆ. ಅವರು ಈ ವರ್ಷದಲ್ಲಿಯೇ ಈ ಕಾಲದಲ್ಲಿಯೇ ಹೊಸದಾದ ಕಾರ್ಯವನ್ನು ಮಾಡಲು ಬಯಸುತ್ತಾನೆ. ನೀವು ನಂಬಿಕೆ ಎಂಬ ಕೀಲಿ ಕೈ ಬಳಸಿ ದೇವರು ನಿಮಗಾಗಿ ಇಟ್ಟಿರುವ ಆಶೀರ್ವಾದಗಳನ್ನು ಹೊಂದಿಕೊಳ್ಳಬೇಕಷ್ಟೆ.
ಜ್ಞಾನೋಕ್ತಿ 15:30ಹೇಳುತ್ತದೆ "ಕಣ್ಣಿಗೆ ಬಿದ್ದ ಬೆಳಕು ಹೃದಯಕ್ಕೆ ಆನಂದ; ಕಿವಿಗೆ ಬಿದ್ದ ಒಳ್ಳೇ ಸುದ್ದಿ ಎಲುಬಿಗೆ ಪುಷ್ಟಿ." ಎಂದು.
ಶುಭವಾರ್ತೆಯು ಏನೆಲ್ಲ ಪರಿಣಾಮ ಬೀರುತ್ತದೆ?
1. ಅದು ನಿಮ್ಮ ನಂಬಿಕೆಯಲ್ಲಿ ಬೆಳವಣಿಗೆಯನ್ನು ಉಂಟುಮಾಡಬಲ್ಲದು.
ಶುಭವಾರ್ತೆಯು ನಿಮ್ಮ ನಂಬಿಕೆಯನ್ನು ಬೆಳೆಸುತ್ತದೆ ಯಾವಾಗ ನಾವು ಶುಭವಾರ್ತೆಯನ್ನು ಕೇಳುತ್ತೇವೋ ಆಗ ದೇವರು ನಮ್ಮ ನಂಬಿಕೆಯನ್ನು ಬಲಪಡಿಸುತ್ತಾನೆ. ಅದು ಬಲ ಹೊಂದುತ್ತದೆ ಅದು ಸಹ ದೇವರಿಗಾಗಿ ಅಗ್ನಿಯoತೆ ಉರಿಯುತ್ತದೆ ಹಾಗಾಗಿಯೇ ಸಭೆಗಳು ಸಾಕ್ಷಿಗಳನ್ನು ಹಂಚಿಕೊಳ್ಳಲು ಜನರಿಗೆ ಅವಕಾಶ ಮಾಡಿಕೊಡುವಂತದ್ದು. ಸಾಕ್ಷಿಗಳು ಇರುವುದೇ ನಿಮ್ಮ ನಂಬಿಕೆಯನ್ನು ಕಟ್ಟಲು.
2. ಅದು ಆನಂದವನ್ನು ಹರ್ಷೋದ್ಗಾರಗಳನ್ನು ತರುತ್ತದೆ.
ನೀವು ಶುಭವಾರ್ತೆಯನ್ನು ಕೇಳಿದಾಗ ಅದು ನಿಮ್ಮಲ್ಲಿ ಆನಂದ ತರುತ್ತದೆ. ಕೆಟ್ಟ ಸುದ್ದಿಗಳು ದುಃಖ ಬೇನೆ ಗೋಳಾಟವನ್ನು ವಿಷಾದವನ್ನು ತರುತ್ತದೆ. ಆದರೆ ಶುಭ ಸುದ್ದಿಯು ನಿಮ್ಮಲ್ಲಿ ಆನಂದವನ್ನು ಸಂಭ್ರಮಾಚರಣೆಯನ್ನು ತರುತ್ತದೆ.
3. ಇದು ನಿಮ್ಮ ಆತ್ಮವನ್ನು ಉಜ್ಜೀವಿಸುತ್ತದೆ.
ಶುಭವಾರ್ತೆಯು ಆತ್ಮವನ್ನು ಉಜ್ಜಿವಿಸಲು ಇರುವ ಒಂದು ಮಾರ್ಗವಾಗಿದೆ. ಅದು ನಿಮ್ಮನ್ನು ಸಂತೋಷವಾಗಿ ಹಿಗ್ಗುವಂತೆ ಮಾಡುತ್ತದೆ ಶುಭ ಸುದ್ದಿಯನ್ನು ನೀವು ಕೇಳಿದಾಗ ನಿಮ್ಮಲ್ಲಿ ಜೀವಂತಿಗೆ ಬರುತ್ತದೆ. ಮುರಿದ ಆತ್ಮ ಎಂಬುದು ಕೆಟ್ಟ ಸುದ್ದಿಯ ಉತ್ಪಾದನೆಯಾಗಿದೆ. ಕೆಟ್ಟ ಸುದ್ದಿಗಳು ಆತ್ಮವನ್ನು ಕುಂದಿಸಿ ನಿರೀಕ್ಷೆಯನ್ನು ಹಾಳುಗೆಡುವುತ್ತದೆ ಆದರೆ ಶುಭ ಸುದ್ದಿಯು ನಿಮ್ಮ ನಂಬಿಕೆಯನ್ನು ಬಲಪಡಿಸಿ ದೇವರಲ್ಲಿನ ನಿಮ್ಮ ನಿರೀಕ್ಷೆಯನ್ನು ಉಜ್ಜೀವಿಸುವಂತೆ ಮಾಡುತ್ತದೆ.
4.ಇದು ನೀವು ದೇವರಲ್ಲಿ ಧೈರ್ಯದಿಂದಲೂ ಭರವಸೆಯಿಂದಲೂ ಇರುವಂತೆ ಮಾಡುತ್ತದೆ.
ನೀವು ಬಾರಿ ಬಾರಿ ಶುಭ ಸುದ್ದಿಯನ್ನು ಕೇಳುತ್ತಲೇ ಇದ್ದರೆ ನೀವು ಇನ್ನು ಹೆಚ್ಚಾದ ಧೈರ್ಯದಿಂದಲೂ ಭರವಸೆಯಿಂದಲೂ ಕೂಡಿದವರಾಗುತ್ತೀರಿ. ಹಾಗೆಯೇ ನೀವು ಕೆಟ್ಟ ಸುದ್ದಿಗಳನ್ನು ಪದೇ ಪದೇ ಕೇಳುತ್ತಿದ್ದರೆ ನಿಮಗೆ ಏನಾದರೂ ಒಳ್ಳೆಯದು ಸಂಭವಿಸುತ್ತದೆ ಎಂದು ಹೇಳಿದರು ದೇವರ ಬಲದ ಮೇಲೆ ನಿಮಗೆ ಅನುಮಾನ ಹುಟ್ಟುತ್ತದೆ. ಹಾಗಾಗಿ ನೀವು ಯಾವಾಗಲೂ ಭರವಸೆದಿಂದ ಇರಲು ನೀವು ಶುಭ ಸುದ್ದಿಗಳನ್ನೇ ಕೇಳುವ ಮನಸ್ಸು ಮಾಡಬೇಕು. ಯಾವ ಕೆಟ್ಟ ಸುದ್ದಿಗಳು ನಮ್ಮ ಜೀವಿತವನ್ನು ಬಾದಿಸಲು ನಾನು ಬಿಡುವುದಿಲ್ಲ ಎಂದು ಮನಸ್ಸು ಮಾಡಿಕೊಳ್ಳಿ. ಇದಕ್ಕಾಗಿ ಶುಭವಾರ್ತೆಯನ್ನೇ ಕೇಳುವುದು ಶುಭವಾರ್ತೆಯನ್ನೇ ನಿರೀಕ್ಷಿಸುವಂತಹ ಸ್ಥಿತಿಗೆ ನಮ್ಮನ್ನು ನಾವು ತರುವಂತ ಜವಾಬ್ದಾರಿ ನಮಗಿದೆ.
5. ಇದು ನಿಮ್ಮ ಹೃದಯಕ್ಕೆ ಆಶೀರ್ವಾದ ಕರವಾಗಿದೆ.
ನೀವು ಕೆಟ್ಟ ಸುದ್ದಿ ಕೇಳಿದಾಗ ನಿಮ್ಮ ಹೃದಯ ಬಲಹೀನಗೊಂಡು ಭಾರವಾಗುತ್ತದೆ ಆದರೆ ನೀವು ಶುಭ ಸುದ್ದಿ ಕೇಳಿದಾಗ ಅದು ನಿಮ್ಮನ್ನು, ನಿಮ್ಮ ಹೃದಯವನ್ನು ಆಶೀರ್ವದಿಸುತ್ತದೆ.
6. ಶುಭವಾರ್ತೆಯು ಆಶೀರ್ವಾದ ಹಾಗೂ ಪ್ರಯೋಜನಗಳೊಂದಿಗೆ ಆಗಮಿಸುತ್ತದೆ.
ನೀವೀಗ ಕಚೇರಿಯಲ್ಲಿ ಇದ್ದೀರಿ ನೀವು ಒಂದು ಬಡ್ತಿಯನ್ನು ಪಡೆಯಲಿದ್ದೀರಿ ಎಂಬ ಶುಭ ಸುದ್ದಿಯನ್ನು ನೀವು ಕೇಳಿದ್ದೀರಿ ಎಂದುಕೊಳ್ಳಿ. ಆ ಬಡ್ತಿಯು ನಿಮಗೆ ಅನೇಕ ಸೌಲಭ್ಯಗಳೊಡನೆ ಬರುತ್ತದೆ ಏಕೆಂದರೆ ನೀವು ಮೊದಲಿದ್ದ ಆ ಸ್ಥಿತಿಯಲ್ಲಿ ಅದುವರೆಗೂ ಹೊಂದದೆ ಇದ್ದಂತಹ ಅನೇಕ ಸೌಲಭ್ಯಗಳನ್ನು ಅನುಭವಿಸುವಂತೆ ಅದು ಈಗ ನಿಮಗೆ ಅನುಮತಿಸುತ್ತದೆ.
ಆದ್ದರಿಂದ ಶುಭವಾರ್ತೆಯು ನಮ್ಮನ್ನು ಆಶೀರ್ವದಿಸುತ್ತದೆ ಶುಭವಾರ್ತೆಯನ್ನು ಕೇಳುವಂತದ್ದು ನಮಗೆ ಆಶೀರ್ವಾದಕಾರವಾಗಿದೆ ನೀವು "ನಾನು ಶುಭವಾರ್ತೆಯನ್ನು ಕೇಳಿಸಿಕೊಳ್ಳುವೆನು" ಎಂದು ಪ್ರಾರ್ಥಿಸುವಾಗ ಪ್ರತ್ಯಕ್ಷವಾಗಿಯೋ ಪರೋಕ್ಷವಾಗಿಯೋ ನಿಮ್ಮ ಜೀವನದಲ್ಲಿರುವ ಆಶೀರ್ವಾದಗಳು ಅನಾವರಣಗೊಳ್ಳುತ್ತವೆ.
7.ಇದು ಲೋಕದ ಮೇಲೆ ನಿಮ್ಮ ವಿಜಯವನ್ನು ಪ್ರಕಟಿಸುತ್ತದೆ.
ಹೀಗಿರುವುದರಿಂದ ಈ ವರ್ಷದಲ್ಲಿ ದೇವರು ನಿಮಗಾಗಿ ಶುಭವಾರ್ತೆಯನ್ನು ಅನುಗ್ರಹಿಸಲಿ. ನೀವು ತಿರುಗುವ ಕಡೆಯಲ್ಲಾ ನೀವು ಶುಭವಾರ್ತೆಗಳನ್ನೇ ಕೇಳುವಂತಾಗಲಿ.
ನೀವು ಹೊರಗೆ ಹೋದಾಗ ಶುಭವಾರ್ತೆಯನ್ನು ಕೇಳುವಿರಿ.
ಒಳಗೆ ಬರುವಾಗಲೂ ನೀವು ಶುಭವಾರ್ತೆಯನ್ನು ಕೇಳುವಿರಿ ಯೇಸುವಿನ ಹೆಸರಲ್ಲಿ ನೀವು ತಿರುಗಿ ನೋಡುವ ಕಡೆಯಲ್ಲ ಶುಭವಾರ್ತೆಯನ್ನೇ ಕೇಳುವಿರಿ
ಜ್ಞಾನೋಕ್ತಿ 25:25 ಹೇಳುತ್ತದೆ
"ಬಳಲಿ ಬಾಯಾರಿದವನಿಗೆ ತಣ್ಣೀರು ಹೇಗೋ ದೇಶಾಂತರದಿಂದ ಬಂದ ಒಳ್ಳೆಯ ಸಮಾಚಾರವು ಹಾಗೆಯೇ." ಎಂದು. ಹಾಗೆ ಶುಭವಾರ್ತೆಯು ನಿಮ್ಮ ಜೀವನವನ್ನು ಚೈತನ್ಯಗೊಳಿಸುತ್ತದೆ ನಿಮ್ಮ ಪ್ರಾಣವನ್ನು ಉಜೀವಿಸುತ್ತದೆ. ನೀವು ಸಂತೋಷವಾಗಿರಲು ಶಕ್ತಿಯುತವಾಗಿರಲು ಮತ್ತು ಫಲ ಭರಿತವಾಗಿರಲು ಈಗ ನಿಮಗೆ ಇದು ಅಗತ್ಯವಾಗಿ ಬೇಕಾಗಿದೆ.
Bible Reading Plan : 1 Corinthians 2-9
ಪ್ರಾರ್ಥನೆಗಳು
ಈ ಪ್ರಾರ್ಥನಾ ಕ್ಷಿಪಣಿಗಳು ನಿಮ್ಮ ಹೃದಯದ ಆಳದಿಂದ ಬರುವವರೆಗೂ ಪುನರಾವರ್ತನೆ ಮಾಡಿರಿ. ಆನಂತರವೇ ಮುಂದಿನ ಪ್ರಾರ್ಥನಾ ಅಂಶಕ್ಕೆ ಹೋಗಿರಿ. ಒಂದೊಂದು ಪ್ರಾರ್ಥನಾ ಅಂಶಗಳನ್ನು ವ್ಯಕ್ತಿಗತ ಮಾಡಿಕೊಂಡು ಪ್ರತಿಯೊಂದಕ್ಕೂ ಕನಿಷ್ಠ ಪಕ್ಷ ಒಂದೊಂದು ನಿಮಿಷವಾದರೂ ಮುಡಿಪಾಗಿಡಿ. ಮುಂದಿನ ಪ್ರಾರ್ಥನಾ ಅಂಶಕ್ಕೆ ಹೋಗುವ ಮೊದಲು ನಿಜವಾಗಿಯೂ ಹೃತ್ಪೂರ್ವಕವಾಗಿ ಪ್ರಾರ್ಥಿಸಿದ್ದೀರಿ ಎಂದು ಖಚಿತ ಪಡಿಸಿಕೊಳ್ಳಿ.
1. ನಾನು ಹೊರಗೆ ಹೋಗುವಾಗ ಒಳಗೆ ಬರುವಾಗ ಯೇಸು ನಾಮದಲ್ಲಿ ಶುಭವಾರ್ತೆಯನ್ನು ಕೇಳುವೆನು. ಯೇಸು ನಾಮದಲ್ಲಿ ನಾನು ತಿರುಗುವ ಕಡೆಯಲ್ಲ ಶುಭವಾರ್ತೆಯನ್ನು ಕೇಳುವೆನು.
2.ದೇವದೂತರುಗಳಿರಾ, ನನಗಾಗಿ ಶುಭವಾರ್ತೆಯನ್ನು ಹೊತ್ತು ತನ್ನಿ. ಯೇಸು ನಾಮದಲ್ಲಿ ಹೋಗಿ ಸಾಕ್ಷಿಗಳನ್ನು ಉತ್ತೇಜಿಸಿ.
3. ನನ್ನ ವಿರೋಧವಾಗಿ ಸಿದ್ಧಪಡಿಸಿದ ಯಾವುದೇ ಕೆಟ್ಟ ಸುದ್ದಿ ಆಗಲಿ ಯೇಸು ನಾಮದಲ್ಲಿ ಅದನ್ನು ರದ್ದುಗೊಳಿಸುತ್ತೇನೆ. ನನ್ನ ಆನಂದವನ್ನು ಬಾದಿಸಿ ನಾನು ಗೋಳಾಡುವಂತೆ ಮಾಡಲು ಬಯಸುವ ಯಾವುದೇ ಅಂಧಕಾರ ರಾಜ್ಯದ ಪ್ರತಿನಿಧಿಯಾಗಲಿ ಯೇಸು ನಾಮದಲ್ಲಿ ನಿನ್ನ ಯೋಜನೆಯನ್ನು ನಿಷ್ಪಲಪಡಿಸಿ ನೀನು ಹತಾಶಗೊಳ್ಳುವಂತೆ ಮಾಡುವೆ.
4. ಈ ತಿಂಗಳಲ್ಲಿಯೇ ಯೇಸು ನಾಮದಲ್ಲಿ ನಾನು ಬಡ್ತಿಯ ಶುಭವಾರ್ತೆಯನ್ನು ಕೇಳುವೆನು. ನಾನು ಆಶೀರ್ವಾದಗಳ ಸಾಕ್ಷಿಗಳ ಶುಭವಾರ್ತೆಯನ್ನು ಕೇಳುವೆನು.
5. ಭೂಮಿಯ ಚತುರ್ ದಿಕ್ಕುಗಳಿಗೂ ಅಲ್ಲಿ ಬೀಸುವ ಗಾಳಿಗೂ ಯೇಸು ನಾಮದಲ್ಲಿ ನನಗಾಗಿ ಶುಭವಾರ್ತೆಯನ್ನು ಹೊತ್ತು ತನ್ನಿ ಎಂದು ಆಜ್ಞಾಪಿಸುತ್ತೇನೆ.
6. ಓ ಕರ್ತನೆ ನಿನ್ನ ಪರಿಶುದ್ಧ ನಿವಾಸದಿಂದ ನನಗೆ ಸಹಾಯ ಒದಗಿ ಬರಲಿ ನನ್ನಲ್ಲಿ ಸತ್ತು ಹೋಗಿರುವ ನಿರೀಕ್ಷೆ ಅಭಿಲಾಷೆಗಳೆಲ್ಲ ಈ ವರ್ಷದಲ್ಲಿ ಮತ್ತೆ ಜೀವ ಹೊಂದಿಕೊಳ್ಳಲಿ.
7..ನಾನು ಎಲ್ಲೆಲ್ಲಾ ನಿರಾಕರಿಸಲ್ಪಟ್ಟಿದ್ದೇನೋ ಅಲ್ಲೆಲ್ಲ ನಾನು ಸೇರುವಂತೆಯೂ ಅಂಗೀಕರಿಸಲ್ಪಡುವಂತೆಯೂ ಯೇಸು ನಾಮದಲ್ಲಿ ಆಗಲಿ.ನನ್ನ ಜೀವಿತದಲ್ಲಿರುವ, ಪ್ರತೀ ತ್ಯಜಿಸಲ್ಪಟ್ಟ ಮನದ ದುರಾತ್ಮದ ದುರಾದೃಷ್ಟದ ದುರಾತ್ಮದ ಬಂಧನಗಳನ್ನು ಯೇಸು ನಾಮದಲ್ಲಿ ಮುರಿದು ಹಾಕುತ್ತೇನೆ.
8.ತಂದೆಯೇ ನನ್ನ ಜೀವನದಲ್ಲಿ ಎಲ್ಲಾ ಸಂಗತಿಗಳು ನನ್ನ ಹಿತಕ್ಕಾಗಿ ಕಾರ್ಯಮಾಡಲಿ. ಹವಾಮಾನವಾಗಲಿ ಕಾಲಗಳಾಗಲಿ ಜನರಾಗಲಿ ಭೂಮಿಯಲ್ಲಿರುವ ಪ್ರತಿಯೊಂದು ವಸ್ತು ಸಹ ನನ್ನ ಹಿತಕ್ಕಾಗಿ ಕಾರ್ಯ ಮಾಡಲು ಯೇಸುನಾಮದಲ್ಲಿ ಆರಂಭಿಸಲಿ.
9.ತಂದೆಯೇ ನನಗಾಗಿ ನಿನ್ನ ಧ್ವನಿ ಎತ್ತು, ನಿರ್ಧಾರದ ಧ್ವನಿ, ಶಿಫಾರಸಿನ ಧ್ವನಿ,ಸಹಕಾರದ ಧ್ವನಿ ಹೊರಡುವ ಸ್ಥಳಗಳೆಲೆಲ್ಲಾ ನಿನ್ನ ಸಹಾಯದ ಧ್ವನಿಯು ನನ್ನನ್ನು ಸಂಪತ್ ಭರಿತ ಮಾಡುವಂತೆ ಯೇಸು ನಾಮದಲ್ಲಿ ನನಗಾಗಿ ಹೊರಡಿಸು.
10. ಈ ವರ್ಷದಲ್ಲಿ ನನ್ನ ಜೀವಿತವನ್ನು ಬಾಧಿಸುವ ಎಲ್ಲಾ ದುರಾದೃಷ್ಟವನ್ನು ನಿರಾಕರಣೆಯನ್ನು ವಿಳಂಬವನ್ನು ಆಶಾ ಭಂಗವನ್ನು ಸಂಕಟಗಳನ್ನು ತೊಂದರೆಗಳನ್ನು ನಾನು ಯೇಸುನಾಮದಲ್ಲಿ ನಿರಾಕರಿಸುತ್ತೇನೆ.ಆಮೆನ್
Join our WhatsApp Channel
Most Read
● ನಿಮ್ಮ ಸಂಪರ್ಕವನ್ನು ಕಳೆದುಕೊಳ್ಳಬೇಡಿರಿ● ಜೀವಿಸುವವರಿಗಾಗಿ ಸತ್ತವನ ಪ್ರಾರ್ಥನೆ
● ದುರಾತ್ಮಗಳ ಪ್ರವೇಶವನ್ನು ತಡೆಯುವ ಅಂಶಗಳು - II
● ಕೆಂಪು ದೀಪದ ಎಚ್ಚರಿಕೆ ಗಂಟೆ
● ಜನರು ನೆಪಗಳನ್ನು ಹೇಳಲು ಇರುವ ಕಾರಣಗಳು : ಭಾಗ 2
● ನೀವು ಪ್ರಾರ್ಥಿಸುವಿರಿ ಆತನು ನಿಮಗೆ ಕಿವಿಗೊಡುವನು
● ಕರ್ತನೇ ನನ್ನ ದೀಪವನ್ನು ಬೆಳಗಿಸು.
ಅನಿಸಿಕೆಗಳು