ಅನುದಿನದ ಮನ್ನಾ
ದಿನ 37 :40ದಿನಗಳ ಉಪವಾಸ ಮತ್ತು ಪ್ರಾರ್ಥನೆ.
Saturday, 28th of December 2024
5
1
112
Categories :
ಉಪವಾಸ ಮತ್ತು ಪ್ರಾರ್ಥನೆ (Fasting and prayer)
ಬಂಜೆತನದ ಬಲವನ್ನು ಮುರಿಯುವುದು.
" ಸೌಲನ ಮಗಳಾದ ಮೀಕಲಳಿಗೆ ಜೀವದಿಂದಿರುವವರೆಗೂ ಮಕ್ಕಳೇ ಆಗಲಿಲ್ಲ."(2 ಸಮುವೇಲನು 6:23).
ಜನರು ಬಹುಕಾಲ ಮಕ್ಕಳಿಲ್ಲದೆ ಬದುಕಿ ಮಕ್ಕಳಿಲ್ಲದೆ ಸಾಯಬಹುದು ಎಂಬುದಕ್ಕೆ ಮೀಕಳು ಒಂದು ಉತ್ತಮ ಉದಾಹರಣೆ. ಈ ಲೋಕಕ್ಕೆ ಬಂದು, ಕಡೆಗೆ ಮಕ್ಕಳೇ ಇಲ್ಲದೇನೆ ಸಾಯುವಂತದ್ದು ನಿಜಕ್ಕೂ ಒಬ್ಬ ವ್ಯಕ್ತಿಯ ದುರಾದೃಷ್ಟವೇ ಸರಿ. ತನ್ನ ಮಕ್ಕಳು ಹೀಗಿರುವಂಥದ್ದು ದೇವರ ಚಿತ್ತವಲ್ಲ. ದೇವರು ಮನುಷ್ಯನನ್ನು ಉಂಟುಮಾಡಿದ ಮೇಲೆ ಆತನು ಮೊದಲು ನೀಡಿದ ಆಶೀರ್ವಾದವೇನೆಂದರೆ ಫಲಪ್ರದರಾಗಿ ಅಭಿವೃದ್ಧಿಯಾಗಿರಿ ಎಂಬುದೇ. "ನೀವು ಅಭಿವೃದ್ಧಿಯಾಗಿ ಹೆಚ್ಚಿರಿ" ಎಂದು ದೇವರು ಹೇಳಿದನು.ಆದುದರಿಂದ ನಾವು ಫಲಪ್ರದ ರಾಗಿರುವಂತದ್ದೇ ದೇವರಿಗೆ ಬಹು ಮುಖ್ಯವಾದ ವಿಷಯವಾಗಿದೆ ಎಂಬುದನ್ನು ನಾವಿಲ್ಲಿ ಕಾಣಬಹುದು. ದೇವರು ನಿಜವಾಗಿಯೂ ಕಾಳಜಿ ವಹಿಸುವಂಥದ್ದು ಈ ವಿಷಯಕ್ಕಾಗಿಯೇ ಮತ್ತು ಇದಕ್ಕಾಗಿಯೇ ಮನುಷ್ಯನಿಗೆ ನೀಡಿದ ಮೊದಲ ಆಶೀರ್ವಾದವು ಫಲಾಭಿವೃದ್ಧಿ ಕುರಿತದ್ದಾಗಿದೆ.
ನಿಮಗೆ ಫಲಾಭಿವೃದ್ಧಿಗೆ ಸಂಬಂಧಿಸಿದ ಯಾವುದೇ ಸಮಸ್ಯೆಯಿದ್ದರೂ, ಅದು ಸೈತಾನನಿಂದ ಬಂದಿದ್ದು. ಅದಕ್ಕಾಗಿ ನೀವು ದೇವರ ಸಾನಿಧ್ಯದಲ್ಲಿ ಕುಳಿತು ಪ್ರಾರ್ಥನೆಯ ಮೂಲಕ ಅದನ್ನು ಬಗೆಹರಿಸಿಕೊಳ್ಳಬೇಕು
ಫಲಾಭಿವೃದ್ಧಿ ಎಂಬುವಂತದ್ದು ಕೇವಲ ಸಂತಾನಭಿವೃದ್ಧಿ ಅಥವಾ ಧನಾಭಿವೃದ್ಧಿ ಇವುಗಳಿಗೆ ಮಾತ್ರ ಸೀಮಿತವಾದುದಲ್ಲ. ಇದು ನಿಮ್ಮ ಜೀವಿತದ ಮೂಲೆ ಮೂಲೆಯಲ್ಲಿರುವ ಪ್ರತಿಯೊಂದು ಕ್ಷೇತ್ರಕ್ಕೂ ಅನ್ವಯಿಸುತ್ತದೆ. ಪಲಾಭಿವೃದ್ಧಿಯು ಉತ್ಪಾದಕತೆಗೆ ಸಂಬಂಧಿಸಿದೆ. ಹಾಗಾಗಿ ನಾವು ಬಂಜೆತನವನ್ನು ಕುರಿತು ಮಾತಾಡುತ್ತಿದ್ದರೆ, ಅದು ಮಕ್ಕಳಿಗೆ ಜನ್ಮ ನೀಡಲು ಅಸಮರ್ಥರಾಗಿರುವ ವಿಷಯಕ್ಕೆ ಮಾತ್ರ ಸಂಬಂಧಪಡದೇ ಬೇರೆ ಎಲ್ಲಾ ವಿಷಯಕ್ಕೂ ಅದು ಅನ್ವಯಿಸುತ್ತದೆ.ಬಂಜೆತನ ಎಂಬುದು ಉತ್ಪಾದಕತೆ ಇಲ್ಲದಂತದ್ದನ್ನು ಪ್ರತಿಫಲ ರಹಿತವಾದ ಕಾರ್ಯವನ್ನು ಅಥವಾ ವೈಫಲ್ಯತೆಗಳನ್ನು ಸಹ ಕುರಿತು ಹೇಳುವ ವಿಷಯವಾಗಿದೆ.
ಆದಿಕಾಂಡ 49 :22 ರಲ್ಲಿ ದೇವರ ವಾಕ್ಯವು ಹೀಗೆ ಹೇಳುತ್ತದೆ.
"ಯೋಸೇಫನು ಬಹುಫಲವನ್ನು ಬಿಡುವ ವೃಕ್ಷಕ್ಕೆ ಸಮಾನನಾಗಿದ್ದಾನೆ, ಒರತೆಯ ಬಳಿಯಲ್ಲಿ ಬೆಳೆದು ರೆಂಬೆಗಳನ್ನು ಗೋಡೆಯ ಆಚೆಗೆ ಚಾಚಿರುವ ಫಲವೃಕ್ಷದಂತಿದ್ದಾನೆ."
ಈ ವಾಕ್ಯದಲ್ಲಿ ಯೋಸೇಫನನ್ನು ಫಲಭರಿತವಾದ ವೃಕ್ಷಕ್ಕೆ ಹೋಲಿಸಲಾಗಿದೆ. ಅದರ ಅರ್ಥ ಕೆಲವು ಜನರು ಆಶೀರ್ವಾದ ನಿಧಿಯಾಗಿಯೂ ಫಲಪ್ರದರಾಗಿಯು ಇರುತ್ತಾರೆ. ಯೋಸೇಫನ ಚಿತ್ರಣ ಬರುವಾಗಲೆಲ್ಲಾ ಅವನು ಯಶಸ್ವಿಯಾದ ಉತ್ಪಾದಕತೆಯಿಂದ ಕೂಡಿದ ವ್ಯಕ್ತಿಯಾಗಿ ಕಾಣಿಸಿಕೊಳ್ಳುತ್ತಾನೆ. ಏಕೆಂದರೆ ಆತ್ಮಿಕ ಆಯಾಮದಲ್ಲಿ ನೋಡುವುದಾದರೆ ಇವನು ಫಲ ಭರಿತ ವೃಕ್ಷದಂತೆ ಇದ್ದಾನೆ
ಮತ್ತೆ ಕೆಲವು ಜನರಿರುತ್ತಾರೆ, ಅವರು ಯಾವುದಕ್ಕೆ ಕೈ ಹಾಕಿದರೂ ಅದೆಲ್ಲವೂ ಬರಡಾಗಿಬಿಡುತ್ತದೆ.ಅವರು ಹೊಸ ವ್ಯವಹಾರ ಆರಂಭಿಸಲು ಹೋಗುತ್ತಾರೆ, ಅದು ವಿಫಲವಾಗುತ್ತದೆ. ಆದರೆ ಅವರು ವೈಫಲ್ಯ ಹೊಂದಬೇಕೆಂಬುದು ದೇವರ ಚಿತ್ತವಲ್ಲ. ಆದ್ದರಿಂದ ಅವರು ತಮ್ಮ ಜೀವಿತದಲ್ಲಿ ಕಾರ್ಯ ಮಾಡುತ್ತಿರುವ, ಅವರನ್ನು ವೈಫಲ್ಯಕ್ಕೆ ತಳ್ಳುತ್ತಿರುವ ಬಂಜೆತನದ ಪ್ರಭಾವವನ್ನು ತಡೆದು ನಿಲ್ಲಿಸಬೇಕು.
ಹೀಗಿರುವುದರಿಂದ ನಾವು ಇಂದು ಈ ಶಾಪವನ್ನು ತಡೆಯಲು ಪ್ರಾರ್ಥಿಸಲು ಹೋಗಲಿದ್ದೇವೆ.
"ನಾನೇ ನಿಜವಾದ ದ್ರಾಕ್ಷೇಬಳ್ಳಿ. ನನ್ನ ತಂದೆ ತೋಟಗಾರನು. 2ನನ್ನಲ್ಲಿದ್ದು ಫಲಕೊಡದಿರುವ ಪ್ರತಿಯೊಂದು ಕೊಂಬೆಯನ್ನು ಆತನು ತೆಗೆದುಹಾಕುತ್ತಾನೆ; ಫಲಕೊಡುವ ಪ್ರತಿಯೊಂದು ಕೊಂಬೆಯು ಹೆಚ್ಚು ಫಲಕೊಡುವ ಹಾಗೆ ಅದನ್ನು ಶುದ್ಧಿಮಾಡುತ್ತಾನೆ."(ಯೋಹಾನ 15:1-2)
ನಾವು ಬಹುಫಲ ಕೊಡುವಂತವರಾಗಿರಬೇಕು ಎಂದು ದೇವರು ಬಯಸುತ್ತಾನೆ. ನಾವು ವೃಕ್ಷಗಳ ಹಾಗೆ ಇದ್ದು ನಮ್ಮ ಜೀವಿತದ ಪ್ರತಿಯೊಂದು ಕ್ಷೇತ್ರದಲ್ಲೂ ನಾವು ಬಹು ಫಲ ಕೊಡುವವರಾಗಿರಬೇಕು ಎಂದು ದೇವರು ಬಯಸುತ್ತಾನೆ ಯೇಸುಕ್ರಿಸ್ತನು 'ಫಲ' 'ಕೊಂಬೆಗಳು' ಮತ್ತು 'ದ್ರಾಕ್ಷಿ ಬಳ್ಳಿ' ಎಂಬೆಲ್ಲಾ ಪದಗಳನ್ನು ಉಪಯೋಗಿಸಿರುವದೇ, ನಾವು ಫಲಾಭಿವೃದ್ಧಿ ಎಂಬ ಪದದ ಅರ್ಥವನ್ನು ಚೆನ್ನಾಗಿ ಗ್ರಹಿಸಿಕೊಳ್ಳಬೇಕೆಂದು. ಆದ್ದರಿಂದ ಫಲಪ್ರದ ಎಂಬುದು ಕೇವಲ ಮಕ್ಕಳನ್ನು ಹೇರುವಂತದ್ದಕ್ಕೆ ಮಾತ್ರ ಸೀಮಿತವಾಗಿಲ್ಲ.
ಫಲದಾಯಕತೆ ಎಂಬುವಂತದ್ದು ನಾವು ಮಾಡಿದ ಕಾರ್ಯಗಳಿಗೆ ಸಿಕ್ಕ ಪ್ರತಿಫಲದ ಮೂಲಕವೂ, ಉತ್ಪಾದಕತೆಯ ಮೂಲಕವೂ ಅಥವಾ ಸಾಧನೆಯ ಮೂಲಕವೂ ಹೊರಹೊಮ್ಮಿ ಕಾಣುವಂತಿರಬೇಕು.
ಆದುದರಿಂದ ದೇವರು ನೀವು ಯಶಸ್ವಿಯಾಗಬೇಕೆಂದು ಬಯಸುತ್ತಾನೆ ಹಾಗೆಯೇ ಆತನಲ್ಲಿ ಇದ್ದುಕೊಂಡು ಫಲ ಕೊಡದ ಪ್ರತಿಯೊಂದು ಕೊಂಬೆಗಳನ್ನು ಕಡಿದು ಬಿಸಾಡಲಾಗುತ್ತದೆ ಎಂದು ಹೇಳುತ್ತಾನೆ
ಯಾವ ಯಾವ ಕ್ಷೇತ್ರಗಳಲ್ಲಿ ನೀವು ಫಲಾಭಿವೃದ್ಧಿ ಆಗಬೇಕು?.
1.ನಿಮ್ಮ ವೈವಾಹಿಕ ಹಾಗೂ ಕೌಟುಂಬಿಕ ಜೀವಿತದಲ್ಲಿ ನೀವು ಫಲಪ್ರದರಾಗಬೇಕು.
2. ನೀವು ಹೋಗುವ ಸಭೆಯಲ್ಲಿ ನೀವು ಫಲಪ್ರದರಾಗಿರಬೇಕು ನಿಮ್ಮ ಉಪಸ್ಥಿತಿಯಿಂದ ಸಭೆಗೆ ಪ್ರಯೋಜನವೇನು? ನೀವು ಆತ್ಮಗಳನ್ನು ಆದಾಯ ಮಾಡುತ್ತಿದ್ದೀರಾ? ಸುವಾರ್ತೆಯನ್ನು ಸಾರುವವರಾಗಿದ್ದೀರಾ? ನೀವು ದೇವರ ರಾಜ್ಯವನ್ನು ಭೂಮಿಯ ಮೇಲೆ ವಿಸ್ತರಿಸುವವರಾಗಿದ್ದೀರಾ ಅಥವಾ ಅದರ ಗೊಡವೆ ನಮಗೇಕೆ ಎಂದು ಜಡವಾಗಿ ಕೂತಿದ್ದೀರಾ?
3.ನೀವು ನಿಮ್ಮ ಕೆಲಸದ ಸ್ಥಳದಲ್ಲಿ ನಿಮ್ಮ ವ್ಯವಹಾರದಲ್ಲಿ ಫಲಪ್ರದರಾಗಿರಬೇಕು. ನೀವು ನಿಮ್ಮ ವ್ಯವಹಾರಗಳನ್ನು ಕೇವಲ ಹೊಟ್ಟೆಪಾಡಿಗಾಗಿ ಮಾತ್ರ ಮಾಡಬಾರದು. ನೀವು ನಿಮ್ಮ ವ್ಯವಹಾರಗಳನ್ನು ನಡೆಸುವ ಉದ್ದೇಶವು ಸಮಾಜದಲ್ಲಿರುವ ಸಮಸ್ಯೆಗಳನ್ನು ಪರಿಹಾರ ಮಾಡುವುದಕ್ಕಾಗಿ ಇರಬೇಕು.
ಈ ಮೂರು ಮುಖ್ಯವಾದ ರೀತಿಯಲ್ಲಿ ನೀವು ಫಲಪ್ರದರಾಗಿ ರಬೇಕೆಂದು ದೇವರು ನಿಮ್ಮಿಂದ ಬಯಸುತ್ತಾನೆ
ಒಬ್ಬ ವ್ಯಕ್ತಿಯು ಬಂಜೆತನವನ್ನು ಅನುಭವಿಸುತ್ತಿದ್ದರೆ ಆ ವ್ಯಕ್ತಿಯ ಉಪಸ್ಥಿತಿಯು ಯಾವುದೇ ಪರಿಣಾಮವನ್ನು ಬೀರುವಂತೆ ಇರುವುದಿಲ್ಲ. ಆ ವ್ಯಕ್ತಿ ಹೋದರೂ ಸರಿ ಯಾರಿಗೂ ಸಹ ಅದು ಗಮನಕ್ಕೆ ಬರುವುದಿಲ್ಲ. ಆ ವ್ಯಕ್ತಿಯ ಉಪಸ್ಥಿತಿಯು ಯಾವುದೇ ಪರಿಣಾಮ ಬೀರುವುದಿಲ್ಲ ಹಾಗೆ ಯಾರು ಸಹ ಆ ವ್ಯಕ್ತಿಯನ್ನು ನೆನಪಿಸಿಕೊಳ್ಳಲಾರರು. ಆ ವ್ಯಕ್ತಿಯ ಬಗ್ಗೆ ಯಾರಿಗೂ ಏನೂ ತಿಳಿದಿರುವುದಿಲ್ಲ ಹಾಗೆಯೇ ಯಾರ ಜೀವಿತದಲ್ಲೂ ಆ ವ್ಯಕ್ತಿಯ ಅನುಪಸ್ಥಿತಿಯಿಂದ ಯಾವುದೇ ಪರಿಣಾಮವೂ ಇರುವುದಿಲ್ಲ.
ಬಂಜೆತನವು ನಮ್ಮ ಕರೆಯುವಿಕೆಯ ಗುರಿಯನ್ನು ತಲುಪಲು ಬಿಡದೆ ನಮ್ಮ ಜೀವಿತವನ್ನು ನಿಂತ ನೀರಂತೆ ಮಾಡುತ್ತದೆ. ಕೆಲಸದ ಸ್ಥಳಗಳಲ್ಲಿ ಈ ಬಂಜೆತನದ ಪ್ರಭಾವದಿಂದ ಯಾವುದೇ ಉತ್ಪಾದಕತೆಯು ಆಗದೆ ನಿಶ್ಚಲವಾಗಿ ನಿಂತುಬಿಡುವಂತೆ ಮಾಡುತ್ತದೆ. ಬಂಜೆತನವು ಅವಮಾನಕ್ಕೆ ಗುರಿ ಮಾಡುತ್ತದೆ.ನೀವು ಯಾವುದಾದರೂ ವ್ಯಕ್ತಿಯು ಉದ್ಧಾರವಾಗದೆ, ಇದ್ದ ಹಾಗೆ ಇರುವುದನ್ನು ನೋಡಿದರೆ ಆ ವ್ಯಕ್ತಿಯು ನಾಚಿಕೆಗೀಡಾಗಿರುವುದನ್ನು ನೀವು ನೋಡಬಹುದು ಆ ವ್ಯಕ್ತಿಯು ತಲೆತಗ್ಗಿಸಿಕೊಂಡಿರುತ್ತಾನೆ. ಆ ವ್ಯಕ್ತಿಗೆ ತನ್ನ ಬಗ್ಗೆ ಕೀಳರಿಮೆ ಇರುತ್ತದೆ. ಏಕೆಂದರೆ ನಾವು ಸೃಷ್ಟಿಸಲ್ಪಟ್ಟಾಗ ದೇವರು ನಮ್ಮನ್ನು ಫಲಭರಿತರಾಗಿ ಇರಬೇಕೆಂದು ಉಂಟುಮಾಡಿದ್ದನು
ಹೀಗಿರುವುದರಿಂದ ಯಾರಾದರೂ ಮುಂದುವರಿಯದೆ ನಿಂತ ಜಾಗದಲ್ಲೇ ನಿಂತಿದ್ದರೆ ಆ ವ್ಯಕ್ತಿ ಹಿಂದುಳಿದವನಾಗಿರುತ್ತಾನೆ. ಏಕೆಂದರೆ ಬಂಜೆತನದ ದುರಾತ್ಮವು ಆ ವ್ಯಕ್ತಿಯನ್ನು ಮುಂದೆ ಹೋಗಲು ಬಿಡದೆ ತಡೆದು ನಿಲ್ಲಿಸಿರುತ್ತದೆ. ಜೀವನವೇ ಜಡತ್ವವನ್ನು ತೊರೆದುಬಿಟ್ಟಿದೆ.
"ಕರ್ತನು ನಿಮ್ಮನ್ನು ಅಧಿಕ ಅಧಿಕವಾಗಿ ಹೆಚ್ಚಿಸುವೆನು ಎಂದು ಹೇಳಿದ್ದಾನೆ" ಎಂದು ದೇವರ ವಾಕ್ಯವು ಹೇಳುತ್ತದೆ (ಕೀರ್ತನೆ 115:14) ಆದುದರಿಂದ ನೀವು ಹೆಚ್ಚುತ್ತಾ ಹೋಗಬೇಕು. ಬಂಜೆತನವು ಒಂದು ಶಾಪವಾಗಿದ್ದು ಅದು ದೇವರ ಮಕ್ಕಳಿಗಾಗಿ ಇರುವಂತದ್ದಲ್ಲ. ಆದರೆ ದೇವರ ಮಕ್ಕಳಾದವರು ಎದ್ದು ಈ ಬಂಜೆತನದ ಬಲವನ್ನು ಮುರಿಯದಿದ್ದರೆ, ಆ ಅಜಾಗರೂಕತೆಯು ಅವರ ಜೀವಿತದಲ್ಲಿ ಬಂಜೆತನವು ಕಾರ್ಯ ಮಾಡುವಂತೆ ಅನುಮತಿಯನ್ನು ನೀಡುತ್ತದೆ
ಇಂದು ಯೇಸುಕ್ರಿಸ್ತನ ನಾಮದಲ್ಲಿ ನಿಮ್ಮ ಜೀವಿತದ ಮೇಲಿರುವ ಎಲ್ಲಾ ಬಂಜೆತನದ ಶಾಪದ ಬಲಗಳು ಮುರಿಯಲ್ಪಡಲಿ ಎಂದು ಯೇಸು ನಾಮದಲ್ಲಿ ನಾನು ಅಜ್ಞಾಪಿಸುತ್ತೇನೆ.
Bible Reading Plan: 1 John 2 - Jude
ಪ್ರಾರ್ಥನೆಗಳು
ಈ ಪ್ರಾರ್ಥನಾ ಕ್ಷಿಪಣಿಗಳು ನಿಮ್ಮ ಹೃದಯದ ಆಳದಿಂದ ಬರುವವರೆಗೂ ಪುನರಾವರ್ತನೆ ಮಾಡಿರಿ. ಆನಂತರವೇ ಮುಂದಿನ ಪ್ರಾರ್ಥನಾ ಅಂಶಕ್ಕೆ ಹೋಗಿರಿ. ಒಂದೊಂದು ಪ್ರಾರ್ಥನಾ ಅಂಶಗಳನ್ನು ವ್ಯಕ್ತಿಗತ ಮಾಡಿಕೊಂಡು ಪ್ರತಿಯೊಂದಕ್ಕೂ ಕನಿಷ್ಠ ಪಕ್ಷ ಒಂದೊಂದು ನಿಮಿಷವಾದರೂ ಮುಡಿಪಾಗಿಡಿ. ಮುಂದಿನ ಪ್ರಾರ್ಥನಾ ಅಂಶಕ್ಕೆ ಹೋಗುವ ಮೊದಲು ನಿಜವಾಗಿಯೂ ಹೃತ್ಪೂರ್ವಕವಾಗಿ ಪ್ರಾರ್ಥಿಸಿದ್ದೀರಿ ಎಂದು ಖಚಿತ ಪಡಿಸಿಕೊಳ್ಳಿ.
1.ನನ್ನ ಜೀವಿತದಲ್ಲಿ ನನಗೆ ವಿರೋಧವಾಗಿ ಕಾರ್ಯ ಮಾಡುತ್ತಿರುವ ಪ್ರತಿಯೊಂದು ಬಂಜೆತನದ ಶಾಪದ ನೊಗವನ್ನು ಯೇಸುಕ್ರಿಸ್ತನ ನಾಮದಲ್ಲಿ ಮುರಿಯುತ್ತೇನೆ. (ಗಲಾತ್ಯ 3 :13)
2.ನನ್ನ ಜೀವನದಲ್ಲಿ ನಾನು ಉದ್ಧಾರವಾಗದಂತೆ ನನ್ನನ್ನು ತಡೆದು ನಿಲ್ಲಿಸುತ್ತಿರುವ ಎಲ್ಲಾ ಶಕ್ತಿಗಳನ್ನು ಯೇಸು ನಾಮದಲ್ಲಿ ನಿಷ್ಕ್ರಿಯಗೊಳಿಸಿ ನಾಶ ಮಾಡುತ್ತೇನೆ. (ಯೆಶಾಯ 54 :17)
3.ನನ್ನ ಅಭಿವೃದ್ಧಿಗೆ, ಬೆಳವಣಿಗೆಗೆ ಮತ್ತು ನನ್ನ ಅದ್ಭುತವಾದ ಬಿಡುಗಡೆಗೆ ವಿರುದ್ಧವಾಗಿ ಹೊರಡಿಸಲ್ಪಟ್ಟಿರುವ ಸೈತಾನನ ಯಾವುದೇ ಆಜ್ಞೆಗಳಾದರೂ ಅವುಗಳೆಲ್ಲವನ್ನು ಯೇಸುವಿನ ಪರಿಶುದ್ಧವಾದ ರಕ್ತದ ಮೂಲಕ ಯೇಸು ನಾಮದಲ್ಲಿ ರದ್ದುಗೊಳಿಸುತ್ತೇನೆ. (2 ಕೊರಿಯಂತೆ 10:4).
4.ಯೇಸುವಿನ ರಕ್ತದ ಮೂಲಕ, ದೇವರ ಕೃಪೆಯ ಆತ್ಮದಿಂದ ಯೇಸು ನಾಮದಲ್ಲಿ ನಾನಿರುವ ಈ ಸ್ಥಿತಿ ಗತಿಯಿಂದ ಉನ್ನತ ಮಟ್ಟಕ್ಕೆ ಏರುವೆನು. (ಇಬ್ರಿಯ 4:16)
5.ಓ ಕರ್ತನೆ, ಯೇಸುಕ್ರಿಸ್ತನ ನಾಮದಲ್ಲಿ ನಾನು ಜೀವನದಲ್ಲಿ ಉದ್ದಾರವಾಗವಂತೆ ನನ್ನನ್ನು ಬಲಗೊಳಿಸು.(ವಿಮೋಚನ ಕಾಂಡ 14:15).
6.ತಂದೆಯೇ, ನಾನು ಸಿಲುಕಿಕೊಂಡಿರುವ ಎಲ್ಲಾ ಗುಂಡಿಗಳಿಂದಲೂ ಎಲ್ಲಾ ಸ್ಥಳಗಳಿಂದಲೂ ಯೇಸು ನಾಮದಲ್ಲಿ ನನ್ನನ್ನು ಬಿಡಿಸು ಮತ್ತು ನನ್ನನ್ನು ಸಮೃದ್ಧಿಯಾದ ಸ್ಥಳಕ್ಕೆ ಯೇಸು ನಾಮದಲ್ಲಿ ಸೇರಿಸು. (ಕೀರ್ತನೆ 40:2)
7.ತಂದೆಯೇ ನಾನು ಉನ್ನತ ಸ್ಥಿತಿಗೆ ಏರುವಂತೆ ನನಗೆ ನಿನ್ನ ಸಹಾಯವನ್ನು ಯೇಸು ನಾಮದಲ್ಲಿ ಅನುಗ್ರಹಿಸು. ನಿನ್ನ ಸಹಾಯಕರನ್ನು ಯೇಸು ನಾಮದಲ್ಲಿ ನನಗಾಗಿ ಕಳುಹಿಸಿಕೊಡು. (ಕೀರ್ತನೆ 121:1-2)
8.ಓ ಕರ್ತನೆ,ನನ್ನ ಜೀವಿತದಲ್ಲಿ ನೂತನ ಅವಕಾಶಗಳು ಒದಗಿ ಬರಲಿ ಎಂದು ಪ್ರಾರ್ಥಿಸುತ್ತೇನೆ. ಕರ್ತನೇ ನಿನ್ನ ಪರಲೋಕದ ದ್ವಾರಗಳನ್ನು ತೆರೆದು ನನ್ನ ಮೇಲೆ ಆಶೀರ್ವಾದಗಳನ್ನು ನೀನು ವರ್ಷಿಸಬೇಕೆಂದು ಯೇಸು ನಾಮದಲ್ಲಿ ಪ್ರಾರ್ಥಿಸುತ್ತೇನೆ. (ಮಲಾಕಿ 3:10)
9.ಎಲ್ಲಾ ನಿಶ್ಚಲತೆಯ ಮತ್ತು ಸೀಮಿತಗೊಳಿಸುವ ದುರಾತ್ಮಗಳನ್ನು ಯೇಸು ನಾಮದಲ್ಲಿ ನಾಶಪಡಿಸುತ್ತೇನೆ (ಫಿಲಿಪ್ಪಿ 4:13)
10.ನನ್ನ ಕೈ ಕೆಲಸಗಳ ಮೇಲೆ ದಾಳಿ ಮಾಡುವ, ನಾಶ ಮಾಡುವ ಎಲ್ಲ ಶಕ್ತಿಗಳ ಕಾರ್ಯಗಳು ಯೇಸು ನಾಮದಲ್ಲಿ ಇಂದೇ ಅಂತ್ಯಗೊಳ್ಳಲಿ ನಾಶವಾಗಿ ಹೋಗಲಿ. ಆಮೇನ್. (ಧರ್ಮೋಪದೇಶಕಾಂತ 28.12)
Join our WhatsApp Channel
Most Read
● ಸಾಧನೆಯ ಪರೀಕ್ಷೆ.● ನಿಮ್ಮ ಸಂಪರ್ಕವನ್ನು ಕಳೆದುಕೊಳ್ಳಬೇಡಿರಿ
● ದಿನ 33:40 ದಿನಗಳ ಉಪವಾಸ ಮತ್ತು ಪ್ರಾರ್ಥನೆ.
● ದಿನ 09 : 40 ದಿನಗಳ ಉಪವಾಸ ಮತ್ತು ಪ್ರಾರ್ಥನೆ
● ಕೆಟ್ಟ ಆಲೋಚನೆಗಳ ಹೋರಾಟವನ್ನು ಗೆಲ್ಲುವುದು
● ಅಲೌಖಿಕತೆಯನ್ನು ಬೆಳೆಸಿಕೊಳ್ಳುವುದು
● ಪರಿಶೋಧನೆಯ ಸಮಯದಲ್ಲಿ ನಂಬಿಕೆ
ಅನಿಸಿಕೆಗಳು