ಅನುದಿನದ ಮನ್ನಾ
ದಿನ 40:40 ದಿನಗಳ ಉಪವಾಸ ಮತ್ತು ಪ್ರಾರ್ಥನೆ.
Tuesday, 31st of December 2024
4
1
66
Categories :
ಉಪವಾಸ ಮತ್ತು ಪ್ರಾರ್ಥನೆ (Fasting and prayer)
ಅಸ್ಥಿವಾರಕ್ಕೆ ಸಂಬಂಧಿಸಿದ ಬಂಧನಗಳಿಂದ ಬಿಡುಗಡೆ.
"ಪಕ್ಷಿಗಳಂತೆ ನಿಮ್ಮ ಬೆಟ್ಟಗಳಿಗೆ ಓಡಿಹೋಗಿರಿ. ಅಸ್ಥಿವಾರಗಳೇ ಕೆಡವಲ್ಪಟ್ಟ ಮೇಲೆ ನೀತಿವಂತನ ಗತಿ ಏನಾದೀತು ಎಂದು ನನಗೆ ಹೇಳುವದೇಕೆ?"(ಕೀರ್ತನೆಗಳು 11:3).
ಅಸ್ತಿವಾರಗಳ ಮೂಲಕ ಕಾರ್ಯ ಮಾಡುವ ಕೆಲವು ಬಲಗಳಿವೆ. ಬಿಡುಗಡೆಗೆ ಸಂಬಂಧಿಸಿದ ಜ್ಞಾನವೇ ಇಲ್ಲದಂತ ಅನೇಕ ಜನರು ಈ ಸಂಗತಿಗಳನ್ನು ಗ್ರಹಿಸಿಕೊಳ್ಳಲಾರರು. ಆದರೆ ಈ ವಾಸ್ತವವಾದ ವಿಚಾರವನ್ನು ಅಲ್ಲಗಳೆಯಲು ಸಾಧ್ಯವಿಲ್ಲ. ಆದರೆ ವಿಶ್ವಾಸಿಗಳಾದ ನಾವು ಈ ಸಂಗತಿಗಳನ್ನು ವಿರೋಧಿಸಿ ಅವುಗಳ ಕಾರ್ಯಗಳನ್ನು ನಮ್ಮ ಜೀವಿತದಲ್ಲಿ ಪ್ರತಿರೋಧಿಸಿ ಅವುಗಳು ನಮ್ಮ ಜೀವಿತದಲ್ಲಿ ಕಾರ್ಯ ಮಾಡದಂತೆ ತಡೆಯಬೇಕು.ಈ ಅಸ್ತಿವಾರದ ಬಲಗಳು ಒಂದು ಕುಟುಂಬದಲ್ಲಿ ಮತ್ತೆ ಮತ್ತೆ ಮರುಕಳಿಸುವಂತಹ ಏಕರೂಪ ಮಾದರಿಯ ಸಮಸ್ಯೆಗಳಿಗೆ ಕಾರಣವಾಗಿರುತ್ತವೆ. ಆದುದರಿಂದಲೇ ಒಂದು ಕುಟುಂಬದಲ್ಲಿ ಒಡಹುಟ್ಟಿದವರ ಜೀವಿತದಲ್ಲಿ ಆಗುವ ಮದುವೆ ಸಮಸ್ಯೆಗಳು ಅಕಾಲಿಕ ಮರಣಗಳು ಅಥವಾ ಒಂದು ನಿರ್ದಿಷ್ಟ ವಯಸ್ಸಿನಲ್ಲಿ ಒಂದೇ ಮಾದರಿಯಲ್ಲಿ ಆರೋಗ್ಯ ತಪ್ಪುವಂತ ಸಮಸ್ಯೆಗಳು ಉಂಟಾಗುತ್ತಿರುವುದನ್ನು ನೀವು ಗಮನಿಸುತ್ತಿರುತ್ತೀರಿ.
ಅಸ್ಥಿವಾರದ ಬಲಗಳು ರಕ್ತ ಸಂಬಂಧಿಗಳಲಿ ಉಂಟಾಗುವ ಏಕರೂಪ ಮಾದರಿಯ ಸಮಸ್ಯೆಗಳ ಮೇಲೆ ಪ್ರಭಾವ ಬೀರುವಂತವುಗಳಾಗಿವೆ. ಕೆಲವು ಪೋಷಕರು ತಮ್ಮ ಜೀವಿತದ ಅನುಭವಗಳೇ ತಮ್ಮ ಮಕ್ಕಳ ಜೀವಿತದಲ್ಲೂ ಅನುಭವಕ್ಕೆ ಬರುತ್ತಿದೆ ಎಂದು ಹೇಳುವ ಮೂಲಕ ಈ ವಿಚಾರವನ್ನು ಅವರು ಖಚಿತಪಡಿಸಿದ್ದಾರೆ.
ಕೀರ್ತನೆ 11:3 ಆತ್ಮಿಕ ಅಸ್ತಿವಾರವನ್ನು ಕುರಿತು ಹೇಳುತ್ತದೆಯೇ ಹೊರತು ಮನೆಯ ಭೌತಿಕ ಅಸ್ತಿವಾರದ ಕುರಿತಲ್ಲ.
'ಅಸ್ಥಿವಾರ' ಎಂಬ ಪದವು ಸತ್ಯವೇದದಲ್ಲಿ ಸುಮಾರು ಐವತ್ತಕ್ಕೂ ಹೆಚ್ಚು ಬಾರಿ ಬಳಸಲಾಗಿದೆ ಹಾಗಾಗಿ ಅಸ್ತಿವಾರವು ಮಹತ್ವವುಳ್ಳದ್ದೇ. ಒಬ್ಬ ವ್ಯಕ್ತಿಯ ಏಳಿಗೆ ಅಥವಾ ಅವನ ಅವನತಿಯನ್ನು ಅವನ ಅಸ್ತಿವಾರದಿಂದಲೇ ನಿರ್ಧರಿಸಲಾಗುತ್ತದೆ.
"ದೇವರ ಸ್ಥಿರವಾದ ಅಸ್ತಿವಾರವು ನಿಲ್ಲುತ್ತದೆ. ಅದರ ಮೇಲೆ - ತನ್ನವರು ಯಾರಾರೆಂಬದನ್ನು ಕರ್ತನು ತಿಳಿದಿದ್ದಾನೆಂತಲೂ ಕರ್ತನ ನಾಮವನ್ನು ಹೇಳಿಕೊಳ್ಳುವವರೆಲ್ಲರು ದುರ್ಮಾರ್ಗತನವನ್ನು ಬಿಟ್ಟುಬಿಡಬೇಕಂತಲೂ ಲಿಪಿಯುಂಟು." ಎಂದು 2 ತಿಮೊಥೆ 2:19 ಹೇಳುತ್ತದೆ. ಹಾಗಾಗಿ ದೇವರಿಗೆ ತನ್ನದೇ ಆದ ಅಸ್ತಿವಾರವಿದೆ. ದೇವರು ಯಾವ ವಂಶಾವಳಿಯಿಂದ ಯೇಸು ಬರಬೇಕೆಂಬುದರ ಬಗ್ಗೆ ಬಹಳ ಗಮನವನ್ನು ನೀಡಿದ್ದನು. ಏಕೆಂದರೆ ಆತನಿಗೆ ಅಸ್ಥಿವಾರದ ಮಹತ್ವವೇನೇಂಬುದು ತಿಳಿದಿತ್ತು.
ಅಬ್ರಹಾಮನೊಂದಿಗೆ ದೇವರು ಮಾಡಿಕೊಂಡ ಒಡಂಬಡಿಕೆಯು ದಾವೀದನ ಕಾಲದವರೆಗೂ ಬಲಹೊಂದಿತ್ತು. ಅದಕ್ಕೆ ಅನುರೂಪವಾಗಿ ದಾವಿದನೊಡನೆ ಮಾಡಿಕೊಂಡ ಒಪ್ಪಂದವು ಯೇಸುವಿನ ಕಾಲದವರೆಗಿನ ತಲೆಮಾರುಗಳವರೆಗೂ ಬಲ ನೀಡುತ್ತಿತ್ತು. ಕರ್ತನಾದ ಯೇಸು ಬಂದ ಮೇಲೆ ಆತನು ನೂತನವಾದ ಒಂದು ಅಸ್ತಿವಾರವನ್ನು ಸ್ಥಾಪಿಸಿ ವಿಶ್ವಾಸಿಗಳೊಂದಿಗೆ ಹೊಸ ಒಡಂಬಡಿಕೆ ಒಂದನ್ನು ಮಾಡಿಕೊಂಡನು. ಯೇಸು ಕ್ರಿಸ್ತನ ಮೂಲಕ ಹಾಕಲ್ಪಡದ ಯಾವುದೇ ಅಸ್ತಿವಾರವಾಗಿರಲೀ ನಮ್ಮ ಜೀವತದಲ್ಲಿ ಅಸ್ತಿತ್ವದಲ್ಲಿ ಇರಬಾರದು.
ವಿವಿಧ ರೀತಿಯ ಕುಟುಂಬಗಳು ವಿವಿಧ ರೀತಿಯ ಬಲಗಳನ್ನು, ಒಡಂಬಡಿಕೆಗಳನ್ನು ಮತ್ತು ಆತ್ಮ ಪ್ರೇರಣೆಗಳನ್ನು ಹೊಂದಿರುತ್ತದೆ. ಈ ಎಲ್ಲಾ ಬಲಗಳು ಒಬ್ಬ ವ್ಯಕ್ತಿಯ ಅನುಭವಗಳನ್ನು ನಿರ್ಧರಿಸುತ್ತಿರುತ್ತದೆ ಈ ರೀತಿಯ ಅಸ್ತಿವಾರದ ಬಲಗಳನ್ನು ನಾಶಪಡಿಸಲು ಪ್ರಾರ್ಥನೆಯು ಬಹಳ ಮುಖ್ಯವಾಗಿದೆ.
ಈ ಅಸ್ಥಿವಾರದ ಬಲಗಳು ತಲತಲಾಂತರಗಳವರೆಗೂ ಹರಡುವಂತಹ ದುಷ್ಟ ಅಭ್ಯಾಸಗಳನ್ನು ತಂದೊಡ್ಡಬಹುದು.
ದಾಸತ್ವದ ನೊಗದಲ್ಲಿ ಸಿಕ್ಕಿಹಾಕಿಕೊಳ್ಳದೆ ಕ್ರಿಸ್ತನಿಂದ ದೊರಕಿದ ಸ್ವಾತಂತ್ರ್ಯದಲ್ಲಿ ವಿಶ್ವಾಸಿಗಳು ನೆಲೆ ನಿಲ್ಲಬೇಕು ಎಂದು ಗಲಾತ್ಯ5:1ರ ವಾಕ್ಯ ನಮ್ಮನ್ನು ಉತ್ತೇಜಿಸುತ್ತದೆ. ವಿಶ್ವಾಸಿಗಳು ಅಸ್ತಿವಾರ ಬಲಗಳ ಅಧಿಕಾರಕ್ಕೆ ಅಧೀನರಾಗಿಲ್ಲ. ಹಾಗಾಗಿ ಇಂತ ಯಾವುದೇ ಬಲಗಳನ್ನು ಪ್ರತಿರೋಧಿಸಲು ಮತ್ತು ತಮ್ಮ ಜೀವಿತದಲ್ಲಿ ಧನಾತ್ಮಕ ಮಾದರಿಗಳನ್ನು ರೂಪಿಸಿಕೊಳ್ಳಲು ವಿಶ್ವಾಸಿಗಳಿಗೆ ಪ್ರಾರ್ಥನೆ ಎಂಬ ಸಾಧನವಿದೆ
Bible Reading Plan: Revelation 16 - 22
ಪ್ರಾರ್ಥನೆಗಳು
ಈ ಪ್ರಾರ್ಥನಾ ಕ್ಷಿಪಣಿಗಳು ನಿಮ್ಮ ಹೃದಯದ ಆಳದಿಂದ ಬರುವವರೆಗೂ ಪುನರಾವರ್ತನೆ ಮಾಡಿರಿ. ಆನಂತರವೇ ಮುಂದಿನ ಪ್ರಾರ್ಥನಾ ಅಂಶಕ್ಕೆ ಹೋಗಿರಿ. ಒಂದೊಂದು ಪ್ರಾರ್ಥನಾ ಅಂಶಗಳನ್ನು ವ್ಯಕ್ತಿಗತ ಮಾಡಿಕೊಂಡು ಪ್ರತಿಯೊಂದಕ್ಕೂ ಕನಿಷ್ಠ ಪಕ್ಷ ಒಂದೊಂದು ನಿಮಿಷವಾದರೂ ಮುಡಿಪಾಗಿಡಿ. ಮುಂದಿನ ಪ್ರಾರ್ಥನಾ ಅಂಶಕ್ಕೆ ಹೋಗುವ ಮೊದಲು ನಿಜವಾಗಿಯೂ ಹೃತ್ಪೂರ್ವಕವಾಗಿ ಪ್ರಾರ್ಥಿಸಿದ್ದೆರೋ ಎಂದು ಖಚಿತ ಪಡಿಸಿಕೊಳ್ಳಿ.
1. ನನ್ನ ಜೀವನಕ್ಕೆ ವಿರೋಧವಾಗಿ ಕಾರ್ಯ ಮಾಡುತ್ತಿರುವ ಎಲ್ಲಾ ಅಸ್ತಿವಾರದ ಕಾರ್ಯಾಚರಣೆಗಳನ್ನು ಯೇಸುನಾಮದಲ್ಲಿ ಯೇಸುವಿನ ಪರಿಶುದ್ಧ ರಕ್ತದ ಮೂಲಕ ರದ್ದು ಗೊಳಿಸುತ್ತೇನೆ. (ಪ್ರಕಟಣೆ 12:11).
2. ನನ್ನ ಜೀವಿತಕ್ಕೆ ವಿರೋಧವಾಗಿರುವ ಯಾವುದೇ ಒಪ್ಪಂದಗಳಿಂದಾಗಲಿ ಮತ್ತು ಸೈತಾನನ ಒಡಂಬಡಿಕೆಗಳಿಂದಾಗಲೀ ಉಂಟಾದ ಪ್ರತಿಯೊಂದು ಅಸ್ಥಿವಾರ ಬಲಗಳನ್ನು ಯೇಸುನಾಮದಲ್ಲಿ ಮುರಿದು ನಾಶ ಮಾಡುತ್ತೇನೆ. (ಗಲಾತ್ಯ 3:13).
3.ನಾನು ಕರ್ತನಾದ ಯೇಸುವಿನ ನಾಮದ ಮೂಲಕ ವಿಮೋಚಿಸಲ್ಪಟ್ಟಿರುವುದರಿಂದ ತಲತಲಾಂತರಗಳಿಂದ ಬಂದಂತಹ ಎಲ್ಲಾ ಋಣಾತ್ಮಕ ಪರಿಣಾಮಗಳಿಂದ ಯೇಸು ನಾಮದಲ್ಲಿ ಬಿಡುಗಡೆ ಹೊಂದಿದ್ದೇನೆ.(ಕೀರ್ತನೆ 107:2)
4. ನನ್ನ ಅನುವಂಶಿಕ ಧಾತುಗಳಲ್ಲಿ ನಾಟಲ್ಪಟ್ಟಿರುವ ಯಾವುದೇ ಕೆಡಕಿನ ಯೋಜನೆಗಳಾಗಲಿ, ಯೇಸುವಿನ ರಕ್ತದ ಮೂಲಕ ಯೇಸು ನಾಮದಲ್ಲಿ ಹೊರದೂಡಲ್ಪಡಲಿ. (1ಯೋಹಾನ 1:7)
5. ತಂದೆಯೇ, ನಿನ್ನ ಪರಿಪೂರ್ಣ ಚಿತ್ತಕ್ಕನುಸಾರ ನನ್ನ ಜೀವಿತವನ್ನು ಸಾಗಿಸುವಂತೆ ಯೇಸು ನಾಮದಲ್ಲಿ ನನಗೆ ಬಲವನ್ನು ಅನುಗ್ರಹಿಸು. (ಯೆರೆಮಿಯಾ 29:11)
6. ನನ್ನ ಜೀವಿತದಿಂದ ಯಾವುದೇ ಒಳ್ಳೆ ಸಂಗತಿಗಳನ್ನು ನನ್ನಿಂದ ದೂರ ಮಾಡುವ ಎಲ್ಲಾ ಪ್ರಭುತ್ವಗಳನ್ನು ಯೇಸು ನಾಮದಲ್ಲಿ ಬಂಧಿಸುತ್ತೇನೆ. (ಎಫಸ್ಸ 6:12)
7. ನನ್ನ ಕುಟುಂಬದ ಅಸ್ತಿವಾರದಿಂದ ಕೆಡುಕನ್ನು ಮಾತಾಡುವ ಅಪರಿಚಿತ ಧ್ವನಿಗಳ ಮೇಲೆ ಯೇಸುರಕ್ತವನ್ನು ಪ್ರೊಕ್ಷಿಸುತ್ತೇನೆ ಮತ್ತು ಯೇಸುನಾಮದಲ್ಲಿ ಅವು ನಿಶಬ್ದವಾಗಿ ಹೋಗಲಿ. (ಯೆಶಾಯ 54:17)
8.ನನ್ನ ಕುಟುಂಬದಲ್ಲಿರುವ ಯಾವುದೇ ಕೆಡಕಿನ ಮಾದರಿಗಳಾಗಲಿ ಅಭ್ಯಾಸಗಳಾಗಲಿ ದೋಷಗಳಾಗಲಿ ಯೇಸು ನಾಮದಲ್ಲಿ ಅವುಗಳನ್ನು ಮುರಿದು ಹಾಕಿ ನಾಶಗೊಳಿಸುತ್ತೇನೆ. (2 ಕೊರಿಯಂತೆ 5: 17)
9.ನಮ್ಮ ತಂದೆ ತಾಯಿಗಳು ಮಾಡಿದ ತಪ್ಪುಗಳನ್ನು ಯೇಸು ನಾಮದಲ್ಲಿ ನಾನು ಮಾಡುವುದಿಲ್ಲ. (ಯೆಹೆಜ್ಕೇಲ18:20)
10. ನನ್ನ ಅಸ್ಥಿವಾರದಲ್ಲಿ ನನ್ನನ್ನು ಮಿತಿಗೊಳಿಸುವ ಎಲ್ಲಾ ಅಧಿಕಾರಕ್ಕಿಂತಲೂ ಯೇಸು ನಾಮದಲ್ಲಿ ನಾನು ಮುಂದವರೆಯುವೆನು. (ಫಿಲಿಪ್ಪಿ 4:13)
Join our WhatsApp Channel
Most Read
● ನಿಮ್ಮ ಸಮಸ್ಯೆಗಳು ಮತ್ತು ನಿಮ್ಮ ನಡವಳಿಕೆಗಳು● ಸತ್ತವರೊಳಗಿಂದ ಮೊದಲು ಎದ್ದು ಬಂದವನು.
● ದಿನ 06:40 ದಿನಗಳ ಉಪವಾಸ ಮತ್ತು ಪ್ರಾರ್ಥನೆ.
● ಐಕ್ಯತೆ ಮತ್ತು ವಿಧೇಯತೆಯ ಒಂದು ದರ್ಶನ
● ದಿನ 19:40 ದಿನಗಳ ಉಪವಾಸ ಮತ್ತು ಪ್ರಾರ್ಥನೆ
● ಒತ್ತಡವನ್ನು ಓಡಿಸಲು ಇರುವ ಮೂರು ಶಕ್ತಿಯುತ ಮಾರ್ಗಗಳು
● ಸ್ತ್ರೀ ಪುರುಷರು ಏಕೆ ಪತನಗೊಳ್ಳುವರು- 5
ಅನಿಸಿಕೆಗಳು