english हिंदी मराठी తెలుగు മലയാളം தமிழ் Contact us ನಮ್ಮನ್ನು ಸಂಪರ್ಕಿಸಿ ಸ್ಪೋರ್ಟಿಫೈ ನ್ನು ಆಲಿಸಿರಿ ಸ್ಪೋರ್ಟಿಫೈ ನ್ನು ಆಲಿಸಿರಿ Download on the App StoreiOS ನಲ್ಲಿ ಆಪ್ ನ್ನು ಡೌನ್ಲೋಡ್ ಮಾಡಿ Get it on Google Play ಆಂಡ್ರಾಯ್ಡ್ ನಲ್ಲಿ ಆಪ್ ನ್ನು ಡೌನ್ಲೋಡ್ ಮಾಡಿ
 
ಲಾಗಿನ್
ಆನ್ಲೈನ್ ಮೂಲಕ ಕಾಣಿಕೆ ನೀಡಲು
ಲಾಗಿನ್
  • ಮೂಲತಾಣ
  • ಕಾರ್ಯಕ್ರಮಗಳು
  • ನೇರಪ್ರಸಾರ
  • ದೂರದರ್ಶನ
  • ನೋಹಾಟ್ಯೂಬ್
  • ಸ್ತೋತ್ರಗಳು
  • ಸುದ್ದಿಗಳು
  • ಮನ್ನಾ
  • ಪ್ರಾರ್ಥನೆಗಳು
  • ಅರಿಕೆಗಳು
  • ಕನಸುಗಳು
  • ವಿದ್ಯುನ್ಮಾನ -ಪುಸ್ತಕಗಳು
  • ವ್ಯಾಖ್ಯಾನ
  • ಶ್ರದ್ದಾಂಜಲಿ
  • ಓಯಸಿಸ್
  1. ಮೂಲತಾಣ
  2. ಅನುದಿನದ ಮನ್ನಾ
  3. ನಮ್ಮ ರಕ್ಷಕನ ಬೇಷರತ್ತಾದ ಪ್ರೀತಿ
ಅನುದಿನದ ಮನ್ನಾ

ನಮ್ಮ ರಕ್ಷಕನ ಬೇಷರತ್ತಾದ ಪ್ರೀತಿ

Friday, 28th of March 2025
3 1 145
Categories : ದೇವರ ಪ್ರೀತಿ (Love of God)
ನೀವು ನಿಜವಾಗಿಯೂ ಪ್ರಾಯೋಗಿಕವಾಗಿ, ನಿಮ್ಮ  ಅನುಭವದ ಮೂಲಕ ಜ್ಞಾನವನ್ನು ಮೀರಿಸುವಂತ ಅನುಭವವನ್ನು ವರ್ಣಿಸಲಾಸಾಧ್ಯವಾದ ಕ್ರಿಸ್ತನ ಪ್ರೀತಿಯನ್ನು ತಿಳಿದುಕೊಂಡು,  ನಿಮ್ಮ ಭೌತಿಕ- ಆತ್ಮೀಕ ಎಲ್ಲಾ ಆಯಾಮದಲ್ಲೂ ದೇವರ ಸಂಪೂರ್ಣತೆಯಿಂದ ಅತ್ಯಂತ ಐಶ್ವರ್ಯವಂತನಾದ ದೇವರ ದೈವೀಕ ಅಳತೆಯ ಮಟ್ಟಿಗೂ ಸರ್ವಾಂಗೀಣಾವಾಗಿ ಆತನ ಪ್ರಸನ್ನತೆಯಿಂದಲೂ -ಆತನು ತನ್ನ  ಸ್ವರೂಪದಿಂದಲೂ  ಸಂಪೂರ್ಣವಾಗಿ ನಿಮ್ಮನ್ನು ತುಂಬಿಸಬೇಕೆಂದು ಆತನನ್ನು ಬೇಡಿಕೊಳ್ಳುತ್ತೇನೆ. "(ಎಫೆಸ 3:19) 

ರಾಣಿ ವಿಕ್ಟೋರಿಯಾಳ ಮಗಳಾದ  ರಾಜಕುಮಾರಿ ಆಲಿಸಳು  ಸಕಲ ಸವಲತ್ತುಗಳಿಂದ ಕೂಡಿದ ಐಷಾರಾಮಿ ಜೀವನವನ್ನು ನಡೆಸುತ್ತಿದ್ದವಳಾಗಿದ್ದಳು. ಆದರೆ ಅವಳ ಮಗ ಗುಣಪಡಿಸಲಾಗದ ಕಾಯಿಲೆಯಾದ ಕಪ್ಪು ಡಿಫ್ತೀರಿಯಾಗೆ  ತುತ್ತಾದಾಗ, ಅವಳ ಪ್ರಪಂಚವೇ ಅವ್ಯವಸ್ಥೆಗೆ ಸಿಲುಕಿಬಿಟ್ಟಿತು. ಅತ್ಯಂತ ಕಠಿಣ ಸಾಂಕ್ರಾಮಿಕ ಕಾಯಿಲೆಯಿಂದ ಅವಳು ತನ್ನನ್ನು ರಕ್ಷಿಸಿಕೊಳ್ಳಬೇಕಾದರೆ ರಾಜಕುಮಾರಿಯಾದ  ಆಲಿಸಳು  ತನ್ನ ಮಗನಿಂದ ದೂರವಿರಬೇಕೆಂದು  ವೈದ್ಯರು ಎಚ್ಚರಿಸಿದರು. ಆದರೂ, ತನ್ನ ಮಗನ ಮೇಲಿನ ಪ್ರೀತಿಯು ಆ ರೋಗದ ಭಯಕ್ಕಿಂತಲೂ ಅವಳಲ್ಲಿ ಬಲವಾಗಿತ್ತು. 

ಒಂದು ದಿನ, ರಾಜಕುಮಾರಿ ಆಲಿಸ್ ತನ್ನ ಮಗನು   "ನನ್ನ ತಾಯಿ ನನ್ನನ್ನು ಏಕೆ ಚುಂಬಿಸುವುದಿಲ್ಲ?" ಎಂದು ಹಂಬಲ ಮತ್ತು ದುಃಖದಿಂದ ತುಂಬಿದ ಧ್ವನಿಯಿಂದ ತನ್ನ ನರ್ಸ್‌ಗೆ ಪಿಸುಗುಟ್ಟುವುದನ್ನು ಕೇಳಿದಳು, ?  ಆ ಧ್ವನಿಯು ಅವಳ ಹೃದಯವನ್ನು ಕರಗಿಸಿತು. ವೈದ್ಯರ ಎಚ್ಚರಿಕೆಗಳ ಹೊರತಾಗಿಯೂ, ರಾಜಕುಮಾರಿ ಆಲಿಸ್ ತನ್ನ ಮಗನ ಬಳಿಗೆ ಓಡಿಹೋಗಿ ಅವನನ್ನು ಚುಂಬಿಸಿದಳು, ಆ ಸಂಕಷ್ಟದ ಸಮಯದಲ್ಲಿ ಅವನಿಗೆ ಅಗತ್ಯವಿರುವ ಪ್ರೀತಿ ಮತ್ತು ವಾತ್ಸಲ್ಯವನ್ನು ತೋರಿಸಬೇಕೆಂದು ನಿರ್ಧರಿಸಿದಳು.

ದುರಂತವೆಂದರೆ, ರಾಜಕುಮಾರಿ ಆಲಿಸಳು ಕೆಲವೇ ದಿನಗಳಲ್ಲಿ  ಸತ್ತು ಹೋದಳು. ಅಪಾಯದ ನಡುವೆಯೂ ತನ್ನ ಮಗನ ಮೇಲಿನ ಅವಳ ನಿಸ್ವಾರ್ಥ ಪ್ರೀತಿಯ ಕ್ರಿಯೆಯು, ತಾಯಿಯು ತನ್ನ ಮಗುವಿನ ಮೇಲೆ ಹೊಂದಿರುವ ಆಳವಾದ ಮತ್ತು ಬೇಷರತ್ತಾದ ಪ್ರೀತಿಗೆ ಸಾಕ್ಷಿಯಾಗಿದೆ.

 ಶಿಲುಬೆಯ ಮೇಲೆ ಯೇಸುವಿನ ಮರಣವು ನಮಗಾಗಿ ಆತನು  ಮಾಡಿದ ನೋವಿನ ಮತ್ತು ಯಾತನಾಮಯ ತ್ಯಾಗವಾಗಿದ್ದು  ಈ ತ್ಯಾಗದ ಹಿಂದಿನ ಕಾರಣ ಆ ಪ್ರೀತಿಯಾಗಿತ್ತು . ಅಪೊಸ್ತಲನಾದ  ಪೌಲನು ಎಫೆಸದಲ್ಲಿರುವ ವಿಶ್ವಾಸಿಗಳಿಗೆ ಬರೆದು ಕ್ರಿಸ್ತನ ಪ್ರೀತಿಯ ಆಳ ಮತ್ತು ಪ್ರಮಾಣವನ್ನು ಒತ್ತಿಹೇಳುತ್ತಾ,  "ದೇವರ ಪರಿಶುದ್ಧರೆಲ್ಲರೊಂದಿಗೆ ದೇವರ  ಪ್ರೀತಿಯ ಅಗಲ, ಉದ್ದ, ಆಳ ಮತ್ತು ಎತ್ತರವನ್ನು ಪೂರ್ಣವಾಗಿ ಕ್ರಿಸ್ತನ ಪ್ರೀತಿಯನ್ನು ಅರಿಯುವುದಕ್ಕೆ ಶಕ್ತರಾಗಲಿ." (ಎಫೆಸ 3:18) ಎಂದು ಹೇಳಿದನು. 

ಮನುಕುಲದ ಮೇಲಿನ ಯೇಸುವಿನ ಪ್ರೀತಿಯ ಸರ್ವ ಶ್ರೇಷ್ಠವಾದ ಪ್ರದರ್ಶನವೆಂದರೆ ಶಿಲುಬೆಯ ಮೇಲೆ ಆತನು ಮಾಡಿದ ತ್ಯಾಗ. ಈ ನಿಸ್ವಾರ್ಥ ಪ್ರೀತಿಯ ಕ್ರಿಯೆ ಅಳೆಯಲು ತುಂಬಾ ಅದ್ಭುತವಾಗಿದ್ದು  ನಮ್ಮಲ್ಲಿ ಪ್ರತಿಯೊಬ್ಬರ ಮೇಲೂ ಯೇಸು ಹೊಂದಿರುವ ಪ್ರೀತಿಗೆ ಇದು ಸಾಕ್ಷಿಯಾಗಿದೆ.

 ನಿಮ್ಮನ್ನು ಪ್ರೀತಿಸಬೇಕಾದ ಜನರು ನಿಮ್ಮನ್ನು ಪ್ರೀತಿಸದ ಕಾರಣ, ಮತ್ತು ನಿಮಗೆ ಪ್ರೀತಿಯನ್ನು ತೋರಿಸಬಹುದಾದ ಇತರರು ನಿಮ್ಮನ್ನು ಅರ್ಥಮಾಡಿಕೊಳ್ಳದ ಕಾರಣ ನೀವು ಒಂಟಿತನದ ಮತ್ತು ಪರಿತ್ಯಕ್ತ ಭಾವನೆಗಳನ್ನು ಹೊಂದುವ ಸಾಧ್ಯತೆಯಿದೆ. ನೀವು ನಿಮ್ಮ  ಪ್ರೀತಿಪಾತ್ರರಿಂದ ತಿರಸ್ಕರಿಸಲ್ಪಟ್ಟಿರಬಹುದು, ಆಸ್ಪತ್ರೆಯಲ್ಲಿ ಒಂಟಿಯಾಗಿ ಬಿಡಲ್ಪಟ್ಟಿರಬಹುದು  ಅಥವಾ ನಿಮ್ಮ ಮದುವೆಯ ದಿನದಂದೇ ನಿಮ್ಮನ್ನು ಅವರು ತೊರೆದು ಹೋಗಿರಬಹುದು, ಇದರ ಪರಿಣಾಮವಾಗಿ ನಿಮ್ಮಲ್ಲಿ ನೋವು ಮತ್ತು ಶೂನ್ಯತೆಯುಂಟಾಗಿರಬಹುದು. ಈ ಅನುಭವವು ನಿಮ್ಮನ್ನು ಇಂದು  "ನನ್ನನ್ನು ಪ್ರೀತಿಸುವವರು ಯಾರಿದ್ದಾರೆ  ?" ಎಂದು ಯೋಚಿಸುವಂತೆ ಮಾಡಿರಬಹುದು.

ನನ್ನ ಜೀವನದ ಒಂದು ನಿರ್ದಿಷ್ಟ ಹಂತದಲ್ಲಿಯೂ, ಎಲ್ಲರೂ ನನ್ನನ್ನು ತಿರಸ್ಕರಿಸಿದಾಗ ನಾನು ಸಂಪೂರ್ಣವಾಗಿ ಏಕಾಂಗಿ ಎಂದು ನನಗೆ ಅನಿಸಿತ್ತು . ಆದರೆ ಆಗ ಕರ್ತನು ನನ್ನ ಜೀವನದಲ್ಲಿ ತನ್ನ ಪ್ರಸನ್ನತೆಯನ್ನು ಪ್ರಕಟ ಪಡಿಸಿದನು. ಪವಿತ್ರನಾದ  ಮತ್ತು ನೀತಿವಂತನಾದ ದೇವರು ನನ್ನಂತಹ ವ್ಯಕ್ತಿಯನ್ನು ನನ್ನಲ್ಲಿ ಅನೇಕ  ಅಪೂರ್ಣತೆಗಳು ಮತ್ತು ನ್ಯೂನತೆಗಳಿರುವಾಗ  ಹೇಗೆ ತಾನೇ  ಪ್ರೀತಿಸಲು ಸಾಧ್ಯ? ಎಂಬುದನ್ನು ಅರ್ಥಮಾಡಿಕೊಳ್ಳಲು ನಾನು ಹೆಣಗಾಡಿದೆ. ಆದರೂ, ಆತನ ಪ್ರೀತಿ ನನ್ನನ್ನು ರಕ್ಷಿಸಿತು ಮತ್ತು ನನ್ನನ್ನು ಪರಿವರ್ತಿಸಿತು. ಆತನ ಪ್ರೀತಿಗೆ ಶರಣಾಗುವಂತೆ ಮತ್ತು ಅದು ನಿಮ್ಮ ಜೀವನವನ್ನು ಸಂಪೂರ್ಣವಾಗಿ ಪರಿವರ್ತಿಸುವಂತೆ ನೀವು ಅನುಮತಿಸಬೇಕೆಂದು ನಾನು ನಿಮ್ಮನ್ನು ಪ್ರೋತ್ಸಾಹಿಸುತ್ತೇನೆ. 

Bible Reading: Judges 16-18
ಪ್ರಾರ್ಥನೆಗಳು
ಪರಲೋಕದ ತಂದೆಯೇ, ನಿನ್ನ ಅಪಾರವಾದ  ಪ್ರೀತಿಗೆ ನಾನು ನಿನಗೆ  ಅಭಾರಿಯಾಗಿದ್ದೇನೆ . ಓ ಪವಿತ್ರಾತ್ಮನೇ, ನಿನ್ನ ಪ್ರೀತಿಯ ಪ್ರಸನ್ನತೆಯಿಂದ ನನ್ನ ಹೃದಯವನ್ನು ತುಂಬು. ಯೇಸುನಾಮದಲ್ಲಿ  ನನ್ನ ಹೃದಯದ ಗಾಯಗಳನ್ನು ನೀನು ಗುಣಪಡಿಸಬೇಕೆಂದು ನಾನು ಬೇಡುತ್ತೇನೆ . ಆಮೆನ್.


Join our WhatsApp Channel


Most Read
● ದಿನ 09 : 40 ದಿನಗಳ ಉಪವಾಸ ಮತ್ತು ಪ್ರಾರ್ಥನೆ
● ಸರಿಯಾದ ಜನರೊಂದಿಗೆ ಸಹವಾಸ
● ಪರಿಶೋಧನೆಯ ಸಮಯದಲ್ಲಿ ನಂಬಿಕೆ
● ಯಾರೂ ವಿನಾಯಿತಿ ಹೊಂದಿದವರಿಲ್ಲ.
● ಒಂದು ಗಂಟೆ ಹಾಗೂ ಒಂದು ದಾಳಿಂಬ ಹಣ್ಣು
● ನೀವಿನ್ನೂ ತಡಮಾಡುತ್ತಿರುವುದೇಕೆ?
● ಕೊರತೆಯಿಲ್ಲ
ಅನಿಸಿಕೆಗಳು
ನಮ್ಮನ್ನು ಸಂಪರ್ಕಿಸಿ
Phone: +91 8356956746
+91 9137395828
WhatsApp: +91 8356956746
ಇಮೇಲ್ ವಿಳಾಸ: [email protected]
ವಿಳಾಸ :
10/15, First Floor, Behind St. Roque Grotto, Kolivery Village, Kalina, Santacruz East, Mumbai, Maharashtra, 400098
ಸ್ಪೋರ್ಟಿಫೈ ನ್ನು ಆಲಿಸಿರಿ
Download on the App Store
Get it on Google Play
JOIN MAILING LIST
EXPLORE
ಕಾರ್ಯಕ್ರಮಗಳು
ನೇರಪ್ರಸಾರ
ನೋಹಾಟ್ಯೂಬ್
ದೂರದರ್ಶನ
Donation
ಮನ್ನಾ
ಸ್ತೋತ್ರಗಳು
ಅರಿಕೆಗಳು
ಕನಸುಗಳು
ಸಂಪರ್ಕ
© 2025 Karuna Sadan, India.
➤
ಲಾಗಿನ್
ಈ ಜಾಲದಲ್ಲಿರುವ ವಿಷಯದ ಕುರಿತು ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಿಳಿಸಲು ಲೈಕ್ ಮಾಡಲು ದಯಮಾಡಿ ನಿಮ್ಮ ನೋಹ ಖಾತೆಗೆ ಲಾಗಿನ್ ಆಗಿರಿ
ಲಾಗಿನ್