"ಇಗೋ, ನೀವೆಲ್ಲರೂ ನಿಮ್ಮ ದುಷ್ಟಹೃದಯದ ಹಟದಂತೆ ನಡೆಯುತ್ತಾ ನನ್ನನ್ನು ಕೇಳದೆ ನಿಮ್ಮ ಪಿತೃಗಳಿಗಿಂತ ಹೆಚ್ಚು ಕೇಡನ್ನು ಮಾಡಿದ್ದರಿಂದಲೂ.... "(ಯೆರೆಮೀಯ 16:12 )
ಸಾಮಾಜಿಕ ಮಾಧ್ಯಮ, ಚಲನಚಿತ್ರಗಳು, ಹಾಡುಗಳು ಜನಪ್ರಿಯ ಪ್ರೇರಣಾ ಪುಸ್ತಕಗಳು ಮತ್ತು ವಿಡಿಯೋಗಳೆಲ್ಲವೂ ಇಂದು "ನಿಮ್ಮ ಹೃದಯವನ್ನು ಅನುಸರಿಸಿ" ಎಂಬ ಶ್ಲೋಕವನ್ನೇ ಪ್ರಚಾರ ಮಾಡುತ್ತಿದೆ.
ಇದರ ಹಿಂದಿರುವ ತತ್ವವೇನೆಂದರೆ ನಿಮ್ಮ ಹೃದಯವೇ ನಿಮ್ಮ ಸಮಾಧಾನಕ್ಕೂ ಸಂತೋಷಕ್ಕೂ ಇರುವ ನಿಜವಾದ ದಿಕ್ಸೂಚಿ ಎಂಬುದಾಗಿದ್ದು ನೀವು ನಿಮ್ಮ ಹೃದಯವನ್ನು ಅನುಸರಿಸಲು ಧೈರ್ಯದಿಂದ ಮುನ್ನುಗ್ಗ ಬೇಕಷ್ಟೇ ಎಂದು ಹೇಳುತ್ತವೆ. ಇದು ಕೇಳಲು ನಂಬಲು ಎಷ್ಟು ಹಿತಕರವಾಗಿಯೂ, ಸರಳವಾಗಿಯೂ,ಸುಲಭವಾಗಿಯೂ ಇದೆಯಲ್ಲವೇ. ಆದರೆ ದುರಾದೃಷ್ಟವಶಾತ್ ಅನೇಕರು ಇಂತಹ ವಂಚನೆಯ ತತ್ವಜ್ಞಾನಕ್ಕೆ ಚಂದಾದಾರರಾಗಿ ತಮ್ಮ ಕುಟುಂಬದಲ್ಲೂ ಜೀವನದಲ್ಲೂ ಹಡಗು ಒಡೆದ ಸ್ಥಿತಿಯಲ್ಲಿದ್ದಾರೆ.
ಆದರೆ ಸತ್ಯವೇದವು ನಮ್ಮ ಹೃದಯದ ನಿಜ ಪರಿಸ್ಥಿತಿಯನ್ನು ನಮಗೆ ಪ್ರಕಟಿಸುತ್ತದೆ. ಅದು "ಹೃದಯವು ಎಲ್ಲಕ್ಕಿಂತಲೂ ವಂಚಕ; ಗುಣವಾಗದ ರೋಗಕ್ಕೆ ಒಳಗಾಗಿದೆ; ಅದನ್ನು ಯಾರು ತಿಳಿದಾರು? "ಎನ್ನುತ್ತದೆ (ಯೆರೆಮೀಯ 17:9)
ಹೃದಯವು ಎಲ್ಲದಕ್ಕಿಂತ ವಂಚಕವಾಗಿದೆ ಎಂದು ದೇವರ ವಾಕ್ಯ ಹೇಳುತ್ತದೆ. ಅದರ ಅರ್ಥ ಬೇರೆ ಎಲ್ಲಾ ಸಂಗತಿಗಳಿಗಿಂತಲೂ ಮನುಷ್ಯನ ಹೃದಯವೇ ಅತ್ಯಂತ ಮೋಸ ಕರವಾದದ್ದು ಮತ್ತು ಮಾರ್ಗ ತಪ್ಪಿಸುವಂಥದ್ದೂ ಆಗಿದೆ. ಹೃದಯವು ಸ್ವತಃ ದುಷ್ಟತ್ವವಾಗಿದೆ ಎಂದು ದೇವರ ವಾಕ್ಯ ಹೇಳುತ್ತದೆ.
ಹಾಗಾದರೇನು? ಯಾವ ಮನುಷ್ಯನಾದರೂ ಒಬ್ಬ ವಂಚಕನಾದ ದುಷ್ಟನಾದ ನಾಯಕನನ್ನು ಹಿಂಬಾಲಿಸಲು ಆಸೆ ಪಡುವನೇ? ಖಂಡಿತ ಇಲ್ಲಾ!
ಮನುಷ್ಯನ ಹೃದಯವು ಹಿಂಬಾಲಿಸಲು ಅಯೋಗ್ಯವಾದ ಕೆಟ್ಟ ನಾಯಕನಂತಿದೆ. ಅಂತಹ ನಾಯಕರನ್ನು ಹಿಂಬಾಲಿಸುವಂಥದ್ದು ನಿಮ್ಮನ್ನು ಪುಂಡ- ಪೋಕರಿನ್ನಾಗಿ ಮಾಡುತ್ತದೆ. ಆಗ ನೀವು ಉದ್ದಾರ ಆಗುವುದೇ ಇಲ್ಲ.
ನೀವು ಎಂದಾದರೂ ತಲಾಂತುಗಳಿಂದಲೂ ಸಾಮರ್ಥ್ಯಗಳಿಂದಲೂ ಕೂಡಿದ, ನೋಡಲು ಆಕರ್ಷಕ ವ್ಯಕ್ತಿತ್ವ ಹೊಂದಿರುವ ಆದರೂ ಜೀವನದಲ್ಲಿ ಏನನ್ನೂ ಸಾಧಿಸದಂತಹ ಜನರನ್ನು ನೋಡಿದ್ದೀರಾ? ಇದಕ್ಕೆ ಕಾರಣವೇನಾಗಿರಬಹುದು? ಅದು "ನಿಮ್ಮ ಹೃದಯವನ್ನು ಅನುಸರಿಸಿ" ಎಂದು ಹೇಳುವ ಲೋಕದ ತತ್ವಜ್ಞಾನದ ಕೊಡುಗೆಯಾಗಿರಬಹುದು.
"ನನ್ನ ಹೃದಯದಲ್ಲಿ ಏನೂ ಇಲ್ಲ. ನನ್ನ ಹೃದಯವು ಸ್ವಚ್ಛಂದವಾಗಿದೆ" ಎಂದು ಆಗಾಗ್ಗೆ ಹೇಳುವಂಥ ಜನರಿದ್ದಾರೆ. ಆದರೆ ಸತ್ಯವೇನೆಂದರೆ ದೇವರನ್ನು ಬಿಟ್ಟರೆ ಬೇರೆ ಯಾರೂ ಸಹ ಅವರ ಹೃದಯದಲ್ಲಿ ಏನಿದೆ ಎಂದು ಅರಿಯರು.
ನಮ್ಮ ಘನ ವೈದ್ಯನಾದ ಕರ್ತನಾದ ಯೇಸುವು ಮನುಷ್ಯನ ಹೃದಯದಲ್ಲಿ ತೊಳಲಾಡುವಂತಹ ಎಲ್ಲಾ ಸಂಗತಿಗಳನ್ನು ಸಂಗ್ರಹಿಸಿಟ್ಟಿದ್ದಾನೆ.
"ಹೇಗಂದರೆ ಹೃದಯದೊಳಗಿಂದ ಕೆಟ್ಟ ಆಲೋಚನೆ ಕೊಲೆ ಹಾದರ ಸೂಳೆಗಾರಿಕೆ ಕಳ್ಳತನ ಸುಳ್ಳುಸಾಕ್ಷಿ ಬೈಗಳು ಹೊರಟು ಬರುತ್ತವೆ."(ಮತ್ತಾಯ 15:19)
ಆದುದರಿಂದ ನಿಮ್ಮ ಹೃದಯವನ್ನು ನಂಬಬೇಡಿರಿ. ದೇವರನ್ನು ನಂಬುವಂತೆ ನಿಮ್ಮ ಹೃದಯವನ್ನು ಮಾರ್ಗದರ್ಶಿಸಿ. ನಿಮ್ಮ ಹೃದಯವನ್ನು ಅನುಸರಿಸಬೇಡಿರಿ. ಕರ್ತನಾದ ಯೇಸುಕ್ರಿಸ್ತನನ್ನೂ ಆತನ ವಾಕ್ಯಗಳನ್ನೂ ಅನುಸರಿಸಿರಿ.
ನನ್ನೊಂದಿಗೆ ಈಗ ಯೋಹಾನ 14:1ನ್ನು ಓದಿರಿ
"ನಿಮ್ಮ ಹೃದಯವು ಕಳವಳಗೊಳ್ಳದೆ ಇರಲಿ; ದೇವರನ್ನು ನಂಬಿರಿ, ನನ್ನನ್ನೂ ನಂಬಿರಿ."
ಇಲ್ಲಿ ಗಮನಿಸಿ ನೋಡಿ ಕರ್ತನಾದ ಯೇಸು ತನ್ನ ಶಿಷ್ಯರಿಗೆ " ನಿಮ್ಮ ಹೃದಯವು ಕಳವಳಗೊಳ್ಳದಿರಲಿ. ನಿಮ್ಮ ಹೃದಯವನ್ನು ನಂಬಿರಿ" ಎಂದು ಹೇಳಲಿಲ್ಲ.
ಅದರ ಬದಲು ಆತನು "ದೇವರನ್ನು ನಂಬಿ. ನನ್ನನ್ನೂ ನಂಬಿರಿ" ನಿಮ್ಮ ಹೃದಯವನ್ನೆಲ್ಲ.ಎಂದು ಹೇಳಿದ್ದಾನೆ
ನಿಮ್ಮ ಹೃದಯ ನಿಮಗೇನು ಬೇಕೋ ಅದನ್ನೇ ಹೇಳುತ್ತದೆಯೇ ವಿನಃ ನೀವು ಎಲ್ಲಿಗೆ ಹೋಗಬೇಕಾಗಿದೆಯೋ ಅದನ್ನಲ್ಲ. ನೀವು ನಿಮ್ಮ ಆಸೆಗಳನ್ನೆಲ್ಲಾ ಬಯಕೆಗಳನ್ನೆಲ್ಲಾ ದೇವರ ಮುಂದೆ ಪ್ರಾರ್ಥನೆಯಲ್ಲಿ ತರುವಾಗ ಆದಷ್ಟು ಎಚ್ಚರವಾಗಿರುವುದು ಒಳ್ಳೆಯದು. ಅದರಿಂದಲೇ ಗೋಧಿ ಯಾವುದು ಹಣಜಿ ಯಾವುದು ಎಂಬುದರ ನಿಜವಾದ ಶೋಧನೆ ಆಗಬಹುದು.
ಇನ್ನು ಹೆಚ್ಚಿನ ಸತ್ಯವೇದ ಅಧ್ಯಯನಕ್ಕಾಗಿ ಪಾಸ್ಟರ್ ಮೈಕಲ್ ರವರ "ವೈ ವಿ ಮಸ್ಟ್ ಗಾರ್ಡ್ ಅವರ್ ಹಾರ್ಟ್" ಎನ್ನುವ ಯೂಟ್ಯೂಬ್ ವಿಡಿಯೋ ನೋಡಿರಿ.
ಪ್ರಾರ್ಥನೆಗಳು
ಪ್ರೀತಿಸ್ವರೂಪನಾದ ದೇವರೇ, ನನ್ನನ್ನು ಕರುಣಿಸು; ಕರುಣಾನಿಧಿಯೇ, ನನ್ನ ದ್ರೋಹವನ್ನೆಲ್ಲಾ ಅಳಿಸಿಬಿಡು. ನನ್ನ ಪಾಪವನ್ನು ಸಂಪೂರ್ಣವಾಗಿ ತೊಳೆದುಬಿಡು; ನನ್ನ ದೋಷವನ್ನು ಪರಿಹರಿಸಿ ನನ್ನನ್ನು ಶುದ್ಧಗೊಳಿಸು.
ದೇವರೇ, ನನ್ನಲ್ಲಿ ಶುದ್ಧಹೃದಯವನ್ನು ನಿರ್ಮಿಸು; ನನಗೆ ಸ್ಥಿರಚಿತ್ತವನ್ನು ಅನುಗ್ರಹಿಸಿ ನನ್ನನ್ನು ನೂತನ ಪಡಿಸು. ನಿನ್ನ ರಕ್ಷಣಾನಂದವನ್ನು ನಾನು ತಿರಿಗಿ ಅನುಭವಿಸುವಂತೆ ಮಾಡು; ನನ್ನಲ್ಲಿ ಸಿದ್ಧಮನಸ್ಸನ್ನು ಹುಟ್ಟಿಸಿ ನನಗೆ ಆಧಾರನಾಗು.
ದೇವರೇ, ನನ್ನಲ್ಲಿ ಶುದ್ಧಹೃದಯವನ್ನು ನಿರ್ಮಿಸು; ನನಗೆ ಸ್ಥಿರಚಿತ್ತವನ್ನು ಅನುಗ್ರಹಿಸಿ ನನ್ನನ್ನು ನೂತನ ಪಡಿಸು. ನಿನ್ನ ರಕ್ಷಣಾನಂದವನ್ನು ನಾನು ತಿರಿಗಿ ಅನುಭವಿಸುವಂತೆ ಮಾಡು; ನನ್ನಲ್ಲಿ ಸಿದ್ಧಮನಸ್ಸನ್ನು ಹುಟ್ಟಿಸಿ ನನಗೆ ಆಧಾರನಾಗು.
Join our WhatsApp Channel
Most Read
● ನಿಮ್ಮ ಆಶೀರ್ವಾದಗಳನ್ನು ಹೆಚ್ಚಿಸಿಕೊಳ್ಳುವ ಖಚಿತವಾದ ಮಾರ್ಗ● ಆರಾಧನೆ : ಸಮಾಧಾನಕ್ಕಿರುವ ಕೀಲಿ ಕೈ
● ಜೀವಬಾದ್ಯರ ಪುಸ್ತಕ
● ನಿಮ್ಮ ಆತ್ಮಿಕ ಶಕ್ತಿಯನ್ನು ನವೀಕರಿಸಿಕೊಳ್ಳುವುದು ಹೇಗೆ -3
● ಇಸ್ಕಾರಿಯೋತಾ ಯೂದನ ಜೀವನದಿಂದ ಕಲಿಯಬೇಕಾದ ಪಾಠಗಳು - 1
● ದಿನ 14:40 ದಿನಗಳ ಉಪವಾಸ ಮತ್ತು ಪ್ರಾರ್ಥನೆ.
● ಓಟವನ್ನು ಗೆಲ್ಲಲು ಇರುವ ದೀರ್ಘ ತಾಳ್ಮೆ ಮತ್ತು ದೀರ್ಘ ಪ್ರಯತ್ನ ಎಂಬ ಎರಡು ಪದಗಳು.
ಅನಿಸಿಕೆಗಳು