ಅನುದಿನದ ಮನ್ನಾ
ಈ ಹೊಸ ವರ್ಷದ ಪ್ರತಿ ದಿನದಲ್ಲೂ ಸಂತೋಷವನ್ನು ಅನುಭವಿಸುವುದು ಹೇಗೆ?
Wednesday, 1st of January 2025
3
0
54
Categories :
ಆನಂದ (Joy)
"ನನ್ನಲ್ಲಿರುವ ಆನಂದವು ನಿಮ್ಮಲ್ಲಿಯೂ ಇರಬೇಕೆಂದೂ, ಆ ನಿಮ್ಮ ಆನಂದವು ಪರಿಪೂರ್ಣವಾಗಬೇಕೆಂದೂ ನಾನು ಇವುಗಳನ್ನು ನಿಮಗೆ ಹೇಳಿದ್ದೇನೆ."(ಯೋಹಾನ 15:11)
ಈ ವರ್ಷದ ಪ್ರತಿಯೊಂದು ದಿನವನ್ನು ನಾವು ಆನಂದಿಸಬೇಕೆಂದು ನಾವು ನಮ್ಮ ಸಂತೋಷವನ್ನು ಸಂಪೂರ್ಣವಾಗಿ ಅನುಭವಿಸಬೇಕೆಂಬುದೇ ಕರ್ತನ ಬಯಕೆ ಮತ್ತು ಚಿತ್ತವಾಗಿದೆ.
ಇದಕ್ಕೆ ಕಾರಣ ಆತನು ಈಗಾಗಲೇ ಬೆಲೆಯನ್ನು ಅದಕ್ಕಾಗಿ ಪಾವತಿಸಿದ್ದಾನೆ. ಈಗ ಪ್ರಶ್ನೆ ಏನೆಂದರೆ, ನಾವು ಆ ಸಂತೋಷವನ್ನು ಹೇಗೆ ನಮ್ಮ ಜೀವನದ ದೈನಂದಿನ ಭಾಗವಾಗಿಸಬಹುದು ? ಎಂಬುದೇ
ಅದಕ್ಕಾಗಿ ಇಲ್ಲಿ ಎರಡು ನೇರವಾದ ವಿಧಾನಗಳಿವೆ:
#1: ಕರ್ತನೊಂದಿಗೆ ಸಮಯ ಕಳೆಯಿರಿ
ದೇವರು ಸಕಲ ಆನಂದದ ಚಿಲುಮೆಯಾಗಿದ್ದಾನೆ. ಎಲ್ಲ ಆನಂದವೂ ಆತನಿಂದಲೇ ಉಂಟಾಗುತ್ತದೆ. ಆದ್ದರಿಂದ, ನೀವು ಪ್ರತಿದಿನ ಸಂತೋಷವನ್ನು ಅನುಭವಿಸಲು ಬಯಸಿದರೆ, ನೀವು ಸಂತೋಷದ ಕಾರಂಜಿಯಾಗಿರುವ ದೇವರೊಂದಿಗೆ ನಿಯಮಿತವಾಗಿ ಸಮಯ ಕಳೆಯಬೇಕು, . ನೀವು ಕರ್ತನೊಂದಿಗೆ ಸಮಯ ಕಳೆಯದ ದಿನವು ಹತಾಶೆ ಮತ್ತು ದಬ್ಬಾಳಿಕೆಯಿಂದ ತುಂಬಿದ ದಿನ ಎಂದು ನಿಮ್ಮಲ್ಲಿ ಕೆಲವರು ಈಗಾಗಲೇ ಅನುಭವದಿಂದ ಕಲಿತಿದ್ದೀರಿ ಎಂದು ನನಗೆ ಗೊತ್ತದೆ.
ಕೀರ್ತನೆ 43:4 ರಲ್ಲಿ ದಾವೀದನು " ದೇವರೇ , ನನ್ನ ದೇವರೇ, ಆಗ ನಾನು ನಿನ್ನ ಯಜ್ಞವೇದಿಯ ಬಳಿಗೆ, ನನ್ನ ಆನಂದನಿಧಿಯಾಗಿರುವ ನಿನ್ನ ಹತ್ತಿರಕ್ಕೆ ಸೇರಿ, ಕಿನ್ನರಿಯನ್ನು ನುಡಿಸುತ್ತಾ ನಿನ್ನನ್ನು ಕೊಂಡಾಡುವೆನು." ಎಂದು ಹೇಳುತ್ತಾನೆ.
ನಾವೆಲ್ಲರೂ ದಾವೀದನ ಈ ಉದಾಹರಣೆಯನ್ನು ಅನುಸರಿಸಬೇಕು ಮತ್ತು ದೇವರ ವಾಕ್ಯಧ್ಯಾನ ಹಾಗೂ ಪ್ರಾರ್ಥನೆಗಳ ಮೂಲಕ ಆತನೊಂದಿಗೆ ಅನ್ಯೋನ್ಯತೆಯಿಂದ ಇರಬೇಕು. ಯಾವುದೇ ಆಸ್ತಿಯಾಗಲೀ ಅಥವಾ ಮೋಜಿನ ಕೂತವಾಗಲೀ ಅಥವಾ ಜನರಾಗಲೀ ನಮ್ಮ ಜೀವನದಲ್ಲಿ ಈ ರೀತಿಯ ಸಂತೋಷವನ್ನು ಸೃಷ್ಟಿಸಲು ಸಾಧ್ಯವಿಲ್ಲ.
ನಾನು ಕರ್ತನೊಂದಿಗೆ ಸಮಯ ಕಳೆಯುವಾಗ, ನಾನು ಆಗಾಗ್ಗೆ ಕೆಲವು ಮೆಲುವಾದ , ಆತನ ಸಾನಿಧ್ಯದಲ್ಲಿ ತೋಯಿಸುವಂತ ಸಂಗೀತವನ್ನು ಕೇಳುತ್ತಿರುತ್ತೇನೆ . ನೀವೂ ಸಹ ಹಾಗೆ ಮಾಡಬಹುದು.
#2: ನಿಮ್ಮ ಚಿಂತಾಭಾರವನ್ನು ಆತನಿಗೆ ಒಪ್ಪಿಸಿರಿ.
ಆಗಾಗ್ಗೆ, ನಾವು ನಮ್ಮ ಚಿಂತೆಗಳನ್ನು ಜನರೊಂದಿಗೆ ಹಂಚಿಕೊಳ್ಳುತ್ತೇವೆ. ಆದರೆ ಕೆಲವೊಮ್ಮೆ, ಇದೇ ಜನರು ನಿಮ್ಮ ಚಿಂತೆಗಳನ್ನು ಕೆಲವು ಅಹಿತಕರ ಜನರೊಂದಿಗೆ ಜಾಹೀರಾತು ಮಾಡಬಹುದು ಮತ್ತು ನಂತರ ಈ ವಿಷಯವು ನಿಮಗೆ ಮತ್ತೊಂದು ಚಿಂತೆಯಾಗಿಬಿಡಬಹುದು . ಆದರೆ, ನಾವು ನಮ್ಮ ಚಿಂತಾಭಾರವನ್ನು ಕರ್ತನೊಂದಿಗೆ ಹಂಚಿಕೊಂಡು ಆತನ ಪಾದಗಳಲ್ಲಿ ಇಡುವಾಗ, ಆತನು ನಮ್ಮ ಪರವಾಗಿ ಅವುಗಳನ್ನು ಹೊತ್ತುಕೊಳ್ಳುತ್ತಾನೆ ಎಂಬುದನ್ನು ನಾನು ಅನುಭವದಿಂದ ಕಲಿತಿದ್ದೇನೆ. ಹೀಗೆ ಮಾಡಿದ ನಂತರ, ನಾನು ವಿವರಿಸಲು ಅಶಕ್ಯ ವಾದ ಅನನ್ಯ ಸಂತೋಷವನ್ನು ಅನುಭವಿಸಿದ್ದೇನೆ . ನಿಮ್ಮಲ್ಲಿಯೂ ಹಲವರು ಅದೇ ರೀತಿ ಅನುಭವಿಸಿದ್ದಾರೆ ಎಂಬುದು ನನಗೆ ಖಾತ್ರಿಯಿದೆ.
" ನಿಮ್ಮ ಚಿಂತಾಭಾರವನ್ನೆಲ್ಲಾ ಆತನ ಮೇಲೆ ಹಾಕಿರಿ ಆತನು ನಿಮಗೋಸ್ಕರ ಚಿಂತಿಸುತ್ತಾನೆ. (1 ಪೇತ್ರ 5:7)
Bible Reading : Genesis 1-3
ಪ್ರಾರ್ಥನೆಗಳು
ತಂದೆಯೇ, ನಾನು ಭರವಸೆಯಿಂದ ತುಂಬಿ ಹೊರಸೂಸುವಂತ ಸಂತೋಷ ಮತ್ತು ಶಾಂತಿಯಿಂದ ನನ್ನನ್ನು ಯೇಸುನಾಮದಲ್ಲಿ ತುಂಬಿಸಿ.
Join our WhatsApp Channel
Most Read
● ಉದ್ಯೋಗದ ಸ್ಥಳದಲ್ಲಿ ಮಿಂಚುವ ತಾರೆಯಾಗುವುದ -I● ನೀವು ಯುದ್ಧರಂಗದಲ್ಲಿರುವಾಗ: ಒಳನೋಟ
● ನಂಬಿಕೆಯ ಶಾಲೆ
● ದಿನ 06: 40 ದಿನಗಳ ಉಪವಾಸ ಮತ್ತು ಪ್ರಾರ್ಥನೆ
● ಬೆಟ್ಟಗಳ ಮತ್ತು ತಗ್ಗಿನ ದೇವರು.
● ಕೃತಜ್ಞತಾ ಸ್ತೋತ್ರ ಸಲ್ಲಿಸುವುದರಲ್ಲಿರುವ ಬಲ
● ಪ್ರಾರ್ಥನಾ ಹೀನತೆ ಎಂಬ ಪಾಪ
ಅನಿಸಿಕೆಗಳು