ಅನುದಿನದ ಮನ್ನಾ
ಆತನಿಗೆ ಯಾವುದೇ ಮಿತಿಯಿಲ್ಲ.
Monday, 6th of January 2025
3
0
81
Categories :
ಪವಿತ್ರ ಆತ್ಮ (Holy spirit)
"ಆಗ ಮರಿಯಳು ಆ ದೂತನಿಗೆ, “ಇದು ಹೇಗಾದೀತು? ನನಗೆ ಯಾವ ಪುರುಷನ ಸಂಸರ್ಗವೂ ಇಲ್ಲವಲ್ಲಾ” ಎಂದು ಕೇಳಿದಳು. ಅದಕ್ಕೆ ದೂತನು, “ಪವಿತ್ರಾತ್ಮನು ನಿನ್ನ ಮೇಲೆ ಬರುವನು; ಪರಾತ್ಪರನಾದ ದೇವರ ಶಕ್ತಿಯು ನಿನ್ನನ್ನು ಅವರಿಸುವುದು; ಆದುದರಿಂದ ನಿನಗೆ ಹುಟ್ಟುವ ಆ ಪವಿತ್ರ ಶಿಶು ದೇವರ ಮಗನೆನಿಸಿಕೊಳ್ಳುವನು.(ಲೂಕ 1:34-35)
ಈ ಮೇಲಿನ ವಾಕ್ಯಗಳು ಪವಿತ್ರಾತ್ಮನು ಮರಿಯಳ ಜೀವನವನ್ನು ಶಾಶ್ವತವಾಗಿ ಬದಲಾಯಿಸಿದ ಎರಡು ಮಾರ್ಗಗಳನ್ನು ವಿವರಿಸುತ್ತದೆ. ಇದು ನಿಮಗೂ ಅನ್ವಯ ಆಗುತ್ತದೆ. ಮರಿಯಾಳಂತೆ, ನೀವು ಸಹ "ಇದು ಹೇಗೆ ಸಾಧ್ಯ?" ಈ ಒಂದು ಪ್ರಶ್ನೆಯನ್ನು ಹೊಂದಿರಬಹುದು.
ಮೊದಲನೆಯದಾಗಿ, ದೇವದೂತನು ಮರಿಯಳಿಗೆ "ಪವಿತ್ರಾತ್ಮನು ಅವಳ ಮೇಲೆ ಬರುತ್ತಾನೆ" ಎಂದು ಹೇಳಿದನು. ದೇವರ ಪ್ರಸನ್ನತೆಯನ್ನು ಮರಿಯಳು ಅಷ್ಟು ವಾಸ್ತವವಾಗಿ ಅನುಭವಿಸಿದಳು. ಎರಡನೆಯದಾಗಿ, "ಪರಾತ್ಪರನ ಶಕ್ತಿಯು ಅವಳನ್ನು ಆವರಿಸುತ್ತದೆ." ಇಲ್ಲಿ ಗ್ರೀಕ್ ಪದದ ಅಕ್ಷರಶಃ ಅರ್ಥ ನೆರಳು ಆವರಿಸುವಂತದ್ದು ಎಂದು ಮತ್ತು ಮೋಡದಿಂದ ಆವೃತವಾಗುವುದು ಎಂಬ ಅರ್ಥ ಕೊಡುತ್ತದೆ.
ರೂಪಾಂತರದ ಬೆಟ್ಟದ ಪ್ರಾರ್ಥನೆ ಸಮಯದಲ್ಲಿ "ಅಲ್ಲಿ ಅವರ ಕಣ್ಣೆದುರಿಗೇ ಯೇಸುವು ರೂಪಾಂತರಗೊಂಡನು.... ಆತನ ವಸ್ತ್ರಗಳು ಅತ್ಯಂತ ಶುಭ್ರವಾಗಿ ಬೆಳ್ಳಗೆ ಹೊಳೆಯಿತು....ಅಷ್ಟರಲ್ಲಿ ಒಂದು ಮೋಡವು ಬಂದು ಅವರ ಮೇಲೆ ಕವಿಯಿತು.... " ಎಂಬೆಲ್ಲ ಶಿಷ್ಯರು ಅನುಭವಿಸಿದ ಅನುಭವವನ್ನು ವಿವರಿಸುವಾಗ ಲೂಕನು ಬಳಸಿದ ಅದೇ ಪದವಾಗಿದೆ . (ಮಾರ್ಕ 9:2-9 ಓದಿ) ಪವಿತ್ರಾತ್ಮನು ನಮ್ಮ ಜೀವನವನ್ನು ಆವರಿಸಿದಾಗ, ನಾವು ಅಸಾಧಾರಣವಾದ ವಿಷಯಗಳನ್ನು ಮಾಡಲು ಸಮರ್ಥರಾಗಿದ್ದೇವೆ ಎಂದು ಅರ್ಥೈಸಿಕೊಳ್ಳಲು ಈ ಉದಾಹರಣೆಗಳು ನಮಗೆ ಸಹಾಯ ಮಾಡುತ್ತವೆ.
ನೆನಪಿಡಿ, ದೇವರು ನಿಮ್ಮನ್ನು ಯಾವುದೇ ಸ್ಥಳದಲ್ಲಿ, ಯಾವುದೇ ಸಮಯದಲ್ಲಿ ಕೂಡ ಬಳಸಬಹುದು. ಮರಿಯಳಿಗೆ ಸಂಭವಿಸಿದಂತೆ, ನಿಮ್ಮ ಪ್ರಾರ್ಥನೆಯ ಮೂಲಕ ಜನರು ಗುಣಮುಖರಾಗುವುದು ಮತ್ತು ವಿತರಿಸುವುದು ಇಂತಹ ಪ್ರವಾದನಾ ಕನಸುಗಳನ್ನು ಕಾಣುವುದು, ಸ್ಫಟಿಕದಷ್ಟು ಸ್ಪಷ್ಟ ದರ್ಶನಗಳನ್ನು ನೋಡುವುದು, ಇತ್ಯಾದಿ ಆಧ್ಯಾತ್ಮಿಕ ಅನುಭವಗಳನ್ನು ನೀವು ಹೊಂದಿಕೊಳ್ಳುವವರಾತ್ತೀರಿ. ನಮ್ಮ ಮನುಷ್ಯ ಸಹಜ ಮನಸ್ಸುಗಳು, ಕೆಲವೊಮ್ಮೆ, ಪವಿತ್ರಾತ್ಮನು ನಮ್ಮ ಮೂಲಕ ಮಾಡುವ ಸಾಮರ್ಥ್ಯವನ್ನು ಹೊಂದಿರುವ ಕಾರ್ಯಗಳನ್ನು ಗ್ರಹಿಸಲು ಕಷ್ಟವಾಗಬಹುದು ಎಂಬುದನ್ನು ನಾನು ಅರ್ಥಮಾಡಿಕೊಂಡಿದ್ದೇನೆ. ಅದಕ್ಕಾಗಿಯೇ ನೀವು ಆತ್ಮನ ಹೆಚ್ಚಿನ ಕಾರ್ಯಗಳನ್ನು ನೋಡಬೇಕಾದರೆ, ನೀವು ಪ್ರತಿದಿನ ದೇವರ ವಾಕ್ಯವನ್ನು ಓದುವ ಮೂಲಕ ನಿಮ್ಮ ಮನಸ್ಸನ್ನು ನವೀಕರಿಸಿಕೊಳ್ಳಬೇಕು.
" ಇಹಲೋಕದ ನಡವಳಿಕೆಯನ್ನು ಅನುಸರಿಸದೆ ನೂತನ ಮನಸ್ಸನ್ನು ಹೊಂದಿಕೊಂಡು ಪರಲೋಕಭಾವದವರಾಗಿರಿ. ಹೀಗಾದರೆ ದೇವರ ಚಿತ್ತವನ್ನು ತಿಳಿದವರಾಗಿ ಉತ್ತಮವಾದದ್ದೂ, ಮೆಚ್ಚಿಕೆಯಾದದ್ದೂ, ದೋಷವಿಲ್ಲದ್ದೂ ಯಾವ ಯಾವುದೆಂದು ವಿವೇಚಿಸುವಿರಿ." ರೋಮ 12:2 ಹೇಳುತ್ತದೆ. ಈ ರೀತಿಯ ರೂಪಾಂತರದ ಪರಿಣಾಮವಾಗಿ, ದೇವರ ಆತ್ಮನು ನಮ್ಮದೇ ಆದ ಅಂತರ್ದೃಷ್ಟಿಕೋನವನ್ನು ನಮಗೆ ಪರಿಚಯ ಮಾಡಿಸುತ್ತಾನೆ. ಆಗ ನಿಮ್ಮ ಸ್ವಂತ ಅಥವಾ ಇತರರ ಜೀವನದ ಬಗ್ಗೆ ನೀವು ಅಲೌಕಿಕವಾಗಿ ಪ್ರಕಟಪಡಿಸುವಿರಿ . ಆಗ ನೀವು ಯಾರಾಗಿದ್ದೀರಿ ಎಂಬುದನ್ನು ನೆನಪಿಸಿಕೊಳ್ಳಲು ಮರೆಯಬೇಡಿ.
ಅಂತಹ ಸಮಯದಲ್ಲಿ, ನಿಮ್ಮ ಸುತ್ತಮುತ್ತಲಿನ ಜನರು ನಿಮ್ಮನ್ನು ವಿಶೇಷ ವ್ಯಕ್ತಿಯಾಗಿ ನೋಡಬಹುದು, ಆದರೆ ನೀವು ಮತ್ತು ನಾನು ಕೇವಲ ಮಣ್ಣಿನ ಪಾತ್ರೆಗಳು ಎಂಬುದೇ ಸತ್ಯ ಮತ್ತು ಅದು ಯಾವಾಗಲೂ ಉಳಿಯುವಂತದ್ದು.
"ಮಣ್ಣಿನ ಮಡಿಕೆಯಂತಿರುವ ನಮ್ಮಲ್ಲಿ ಈ ನಿಕ್ಷೇಪವನ್ನು ಇಡಲ್ಪಟ್ಟಿರುವುದರಿಂದ ಇಂತಹ ಮಹಾಶಕ್ತಿಯು ದೇವರದೇ ಹೊರತು ನಮ್ಮೊಳಗಿಂದ ಬಂದದ್ದಲ್ಲವೆಂಬುದು ಸ್ಪಷ್ಟವಾಗಿದೆ.
ಎಂದು 2 ಕೊರಿಂಥ 4:7 ಹೇಳುತ್ತದೆ,
ನೀವು ಯೌವ್ವನಸ್ತರಾಗಿರಬಹುದು ಅಥವಾ ವೃದ್ಧರಾಗಿರಬಹುದು, ವಿದ್ಯಾವಂತರಾಗಿರಬಹುದು ಅಥವಾ ಇಲ್ಲದಿರಬಹುದು; ಆತನಿಗೆ ಯಾವುದೂ ಅಸಾಧ್ಯವಿಲ್ಲ. ಆತನಿಗೆ ಯಾವುದೇ ಮಿತಿಯಿಲ್ಲ ಎಂಬುದನ್ನು ಮಾತ್ರ ನೆನಪಿಡಿರಿ.
Bible Reading : Genesis 19 - 21
ಪ್ರಾರ್ಥನೆಗಳು
ತಂದೆಯೇ, ನನ್ನ ಜೀವನದಲ್ಲಿ ನಿಮ್ಮ ಕಾರ್ಯಗಳನ್ನು ಅನುಮಾನಿಸಿದ್ದಕ್ಕಾಗಿ ನನ್ನನ್ನು ಕ್ಷಮಿಸಿ. ನೀವು ಪ್ರಾರಂಭಿಸಿದ್ದನ್ನು ಪೂರ್ಣಗೊಳಿಸಲು ನೀವು ನಂಬಿಗಸ್ತರಾಗಿದ್ದೀರಿ. ನನ್ನ ಬಗ್ಗೆ ನಾನೇ ನಕಾರಾತ್ಮಕ ಮಾತುಗಳನ್ನಾಡಿದ್ದಕ್ಕೆ ನನ್ನನ್ನು ಕ್ಷಮಿಸಿ.ನಿನ್ನ ಪ್ರಸನ್ನತೆಯಿಂದ ನನ್ನನ್ನು ಯೇಸುನಾಮದಲ್ಲಿ ನೂತನವಾಗಿ ಅಭಿಷೇಕಿಸಿ. ಆಮೆನ್.
Join our WhatsApp Channel
Most Read
● ದಿನ 21:40 ದಿನಗಳ ಉಪವಾಸ ಮತ್ತು ಪ್ರಾರ್ಥನೆ.● ಸಮಯದ ಸೂಚನೆಗಳ ವಿವೇಚನೆ.
● ನೀವೇ ಮಾದರಿಯಾಗಿರ್ರಿ
● ದೇವರವಾಕ್ಯವನ್ನು ನಿಮ್ಮ ಹೃದಯದಾಳದಲ್ಲಿ ಬಿತ್ತಿರಿ.
● ನಾವು ದೇವದೂತರಿಗೆ ಪ್ರಾರ್ಥನೆ ಮಾಡಬಹುದೇ
● ಈ ಹೊಸ ವರ್ಷದ ಪ್ರತಿ ದಿನದಲ್ಲೂ ಸಂತೋಷವನ್ನು ಅನುಭವಿಸುವುದು ಹೇಗೆ?
● ಇತರರಿಗಾಗಿ ಪ್ರಾರ್ಥಿಸುವುದು
ಅನಿಸಿಕೆಗಳು