ಅನುದಿನದ ಮನ್ನಾ
1
0
130
ಪ್ರೀತಿ - ಗೆಲ್ಲುವ ತಂತ್ರ - 1
Saturday, 30th of August 2025
Categories :
ದೇವರೊಂದಿಗೆ ಆತ್ಮೀಯತೆ (Intimacy with God)
ಪ್ರೀತಿ (Love)
"ಪ್ರೀತಿ ಎಂದಿಗೂ ಬಿದ್ದುಹೋಗುವುದಿಲ್ಲ" (1 ಕೊರಿಂಥ 13:8)
ಎಂದು ಸತ್ಯವೇದ ಹೇಳುತ್ತದೆ. ಈ ವಚನದಲ್ಲಿ ಉಲ್ಲೇಖಿಸಲಾದ ಪ್ರೀತಿ, ದೈವಿಕ ಪ್ರೀತಿಯನ್ನು ಸೂಚಿಸುತ್ತದೆ; ಅದುವೇ ನಿಜವಾದ ಪ್ರೀತಿ.
ಅಪೊಸ್ತಲ ಪೌಲನು ಇಲ್ಲಿ ನಿಜವಾದ ಪ್ರೀತಿ, ದೇವರಿಂದ ಬರುವ ಪ್ರೀತಿ ಎಂದಿಗೂ ಬಿದ್ದುಹೋಗುವುದಿಲ್ಲ ಎಂದು ಹೇಳುತ್ತಿದ್ದಾನೆ. ಸ್ವಲ್ಪ ಯೋಚಿಸಿ, ಹಣವು ನಿಜವಾದ ಸಂತೋಷವನ್ನು ತರುವುದಿಲ್ಲ, ಖ್ಯಾತಿಯು ಸ್ವ-ಮೌಲ್ಯವನ್ನು ತರುವುದಿಲ್ಲ ಮತ್ತು ಸೇಡು ನಿಜವಾಗಿಯೂ ತೃಪ್ತಿಯನ್ನು ತರುವುದಿಲ್ಲ.
ಹಾಗಾದರೆ, ಗೆಲ್ಲುವ ತಂತ್ರವೇನು? ಮದರ್ ತೆರೇಸಾ ವಿಶ್ವಸಂಸ್ಥೆಯಲ್ಲಿ ವಿಶ್ವ ನಾಯಕರನ್ನು ಉದ್ದೇಶಿಸಿ ಮಾತನಾಡಿದರು. "ನಾವು ಹೇಗೆ ವಿಶ್ವ ಶಾಂತಿಯನ್ನು ಹೊಂದಬಹುದು?" ಎಂದುಅಲ್ಲಿ ಅವರನ್ನು ಕೇಳಲಾಯಿತು, ಅದಕ್ಕೆ ಅವರು ಉತ್ತರಿಸಿ, "ಮನೆಗೆ ಹೋಗಿ ನಿಮ್ಮ ಕುಟುಂಬವನ್ನು ಪ್ರೀತಿಸಿ"ಎಂದರು.
ಇದು ತುಂಬಾ ಸರಳವೆನಿಸುತ್ತದೆ. ಆದರೆ ಅದರ ಕುರಿತು ಯೋಚಿಸಿ ನೋಡಿ, ನಾವೆಲ್ಲರೂ ನಿಜವಾಗಿಯೂ ಹಾಗೆ ಮಾಡಿದರೆ, ಕಳೆದುಹೋದ ಸ್ವರ್ಗವನ್ನು ಅಲ್ಲಿ ಕಂಡುಕೊಳ್ಳಬಹುದಿತ್ತು.
ಇಂದಿನ ಕಾಲದಲ್ಲಿ ಅನೇಕ ಸಂಸ್ಥೆಗಳು ದ್ವೇಷ ಮತ್ತು ಸೇಡಿನ ಮೂಲಕ ಅಧಿಕಾರವನ್ನು ಪಡೆದುಕೊಳ್ಳುತ್ತವೆ. ಆದರೆ ಕರ್ತನಾದ ಯೇಸು ತನ್ನ ರಾಜ್ಯವನ್ನು ಪ್ರೀತಿಯ ತಳಹದಿಯ ಮೇಲೆ ಸ್ಥಾಪಿಸಿದನು. ಇಂದಿಗೂ, ಸಹ ಲಕ್ಷಾಂತರ ಜನರು ಆತನಿಗಾಗಿ ಸಾಯಲು ಸಿದ್ಧರಾಗಿದ್ದಾರೆ.
ದೇವರು ನಿಮ್ಮ ಜೀವನದಲ್ಲಿ ನಿಮಗೆ ಹತ್ತಿರವಾಗಿ ಇಟ್ಟಿರುವ ಜನರನ್ನು ಪ್ರೀತಿಸುವುದು ಸುಲಭದ ಕೆಲಸವಲ್ಲ. ನಾನು ಇದನ್ನು ಹೇಳಲು ಕಾರಣವೇನೆಂದರೆ, ಅವರನ್ನು ಪ್ರೀತಿಸಲು, ನೀವು ನಿಮ್ಮನ್ನು ದೀನರನ್ನಾಗಿ ಮಾಡಿಕೊಳ್ಳಬೇಕು.
ಅನೇಕರು ನಿಮ್ಮನ್ನು ದೀನರಾಗಿ ಇರುವುದನ್ನು ದೌರ್ಬಲ್ಯದ ಸಂಕೇತವೆಂದು ನೋಡುತ್ತಾರೆ. ನಿಮ್ಮ ದೀನತೆಯನ್ನು ನೋಡಿ, ಅನೇಕರು ನಿಮ್ಮನ್ನು ಹಗುರವಾಗಿ ಪರಿಗಣಿಸಬಹುದು. ಅದು ನಿಮ್ಮ ಸಂಗಾತಿಯಾಗಿರಲಿ, ನಿಮ್ಮ ಹೆತ್ತವರಾಗಿರಲಿ, ನಿಮ್ಮ ಮಕ್ಕಳಾಗಿರಲಿ ಅಥವಾ ನೀವು ಮುನ್ನಡೆಸುವ ಜನರಾಗಿರಲಿ, ನೀವು ಅವರಿಗೆ ನಿಮ್ಮನ್ನು ಸಮರ್ಪಿಸಿಕೊಳ್ಳಬೇಕು.
ಇದು ಅನೇಕರು ತೆಗೆದುಕೊಳ್ಳಲು ಇಷ್ಟಪಡದ ಅಪಾಯವಾಗಿದೆ, ಮತ್ತು ಅದಕ್ಕಾಗಿಯೇ ಜನರನ್ನು ಪ್ರೀತಿಸುವುದು ಸುಲಭವಲ್ಲ, ಮತ್ತು ಆದರೂ ಇದು ಯಾವಾಗಲೂ ಗೆಲ್ಲುವ ತಂತ್ರವಾಗಿದೆ - ಜೀವನದ ಪ್ರತಿಯೊಂದು ಸಮಯದಲ್ಲಿಯೂ ಕಾಲದ ಪರೀಕ್ಷೆಯಲ್ಲಿ ನಿಂತಿರುವ ತಂತ್ರ.
ನೀವು ಉತ್ತಮ ನೋಟವನ್ನು ಹೊಂದಿಲ್ಲದಿದ್ದರೂ ಪರವಾಗಿಲ್ಲ; ನೀವು ಪ್ರಪಂಚದ ಯಾವ ಭಾಗದಲ್ಲಿದ್ದರೂ ಪರವಾಗಿಲ್ಲ; ನಿಮ್ಮ ಸುತ್ತಲಿನ ಜನರನ್ನು ನೀವು ನಿಜವಾಗಿಯೂ ಪ್ರೀತಿಸಲು ಸಾಧ್ಯವಾದರೆ, ಅವರು ನಿಮ್ಮನ್ನು ಆಘಾತಗೊಳಿಸುವ ರೀತಿಯಲ್ಲಿ ನಿಮಗೆ ಪ್ರತಿಕ್ರಿಯಿಸುತ್ತಾರೆ. ಕ್ರೂರ ಪ್ರಾಣಿಗಳು ಸಹ ಪ್ರೀತಿಗೆ ಪ್ರತಿಕ್ರಿಯಿಸುತ್ತವೆ ಹಾಗೆಯೇ ಮನುಷ್ಯನು ಇದಕ್ಕೆ ಹೊರತಾಗಿಲ್ಲ. ಅದಕ್ಕಾಗಿಯೇ ಪ್ರೀತಿ ಗೆಲ್ಲುವ ತಂತ್ರವಾಗಿದೆ.
"ನಾನು ನಿಮ್ಮ ಮೇಲೆ ಹೊಂದಿರುವ ಅದೇ ಪ್ರೀತಿಯನ್ನು ನೀವು ಒಬ್ಬರನ್ನೊಬ್ಬರು ಪ್ರೀತಿಸುವ ಮೂಲಕ ಪ್ರದರ್ಶಿಸಿದಾಗ, ನೀವು ನನ್ನ ನಿಜವಾದ ಶಿಷ್ಯರು ಎಂದು ಎಲ್ಲರೂ ತಿಳಿದುಕೊಳ್ಳುತ್ತಾರೆ" ಎಂದು ಕರ್ತನಾದ ಯೇಸು ಹೇಳಿದನು. [ಯೋಹಾನ 13:35 TPT]
Bible Reading: Lamentations 2-4
ಪ್ರಾರ್ಥನೆಗಳು
ಕರ್ತನಾದ ಯೇಸು, ನೀನೇ ಪ್ರೀತಿಯನ್ನು ಹುಟ್ಟಿಸುವವನೂ ಮತ್ತು ಪೂರ್ಣಗೊಳಿಸುವವನೂ ಆಗಿದ್ದೀಯ. ನೀನೇ ಪ್ರೀತಿಯಾಗಿರುವುದರಿಂದ ನಮಗೆ ಪ್ರೀತಿ ತಿಳಿದಿದೆ, ಮತ್ತು ನೀನೇ ಮೊದಲು ನಮ್ಮನ್ನು ಪ್ರೀತಿಸಿದ್ದೀ. ನೀನು ನನ್ನನ್ನು ಪ್ರೀತಿಸಿದಂತೆ ನನ್ನ ಸುತ್ತಲಿನವರನ್ನು ಪ್ರೀತಿಸಲು ನನಗೆ ಕಲಿಸಿಕೊಡು ಆಮೆನ್.
Join our WhatsApp Channel

Most Read
● ಧಾರ್ಮಿಕತೆಯ ಆತ್ಮವನ್ನು ಗುರುತಿಸುವುದು● ಅಲೌಕಿಕತೆಯನ್ನು ಪ್ರವೇಶಿಸುವುದು
● ಕ್ರಿಸ್ತನ ಮೂಲಕ ಜಯಶಾಲಿಗಳು
● ಕರ್ತನಿಗೆ ಮೊರೆಯಿಡಿರಿ.
● ಪಾಪದ ಕುಷ್ಠರೋಗದೊಂದಿಗೆ ವ್ಯವಹರಿಸುವುದು.
● ಸ್ವಸ್ಥ ಚಿತ್ತತೆ ಎಂಬುದು ಒಂದು ವರ
● ದೇವರಿಗಾಗಿ ದಾಹದಿಂದಿರುವುದು
ಅನಿಸಿಕೆಗಳು