ಅನುದಿನದ ಮನ್ನಾ
5
1
121
ಅತ್ಯುತ್ತಮ ದೇವರು ನೀಡಿದ ಸಂಪನ್ಮೂಲ
Wednesday, 15th of January 2025
Categories :
ಗುಣ(character)
ಸಂಬಂಧಗಳು (Relationships)
"ಆದುದರಿಂದ ನಮ್ಮ ದೇವರೇ ನಾವು ನಿನಗೆ ಕೃತಜ್ಞತಾಸ್ತುತಿಮಾಡುತ್ತಾ, ನಿನ್ನ ಪ್ರಭಾವವುಳ್ಳ ನಾಮವನ್ನು ಕೀರ್ತಿಸುತ್ತೇವೆ. ನಾವು ಸ್ವ ಇಚ್ಛೆಯಿಂದ ನಿನಗೆ ಕಾಣಿಕೆಗಳನ್ನು ಸಮರ್ಪಿಸಲು ನಾನಾಗಲಿ, ನನ್ನ ಪ್ರಜೆಗಳಾಗಲಿ ಸಮರ್ಥರಲ್ಲ. ಸಮಸ್ತವೂ ನಿನ್ನಿಂದಲೇ ಸಾಧ್ಯವಾಯಿತು, ನೀನು ಕೊಟ್ಟದ್ದನ್ನೇ ನಿನಗೆ ಕೊಟ್ಟೆವು.(1 ಪೂರ್ವಕಾಲವೃತ್ತಾಂತ 29:13-14)
ದೇವರು ನಮಗೆ ನೀಡಿದ ಅತ್ಯುತ್ತಮ ಸಂಪನ್ಮೂಲವೆಂದರೆ ಜನರು. ಈ ಸೂಕ್ಷ್ಮ ಮತ್ತು ಅಮೂಲ್ಯ ಸಂಪನ್ಮೂಲವನ್ನು ನೀವು ಹೇಗೆ ನಿರ್ವಹಿಸುತ್ತೀರಿ ಎಂಬುದೇ ನಿಮ್ಮನ್ನು ಕುರಿತು ಅದು ಬಹಳಷ್ಟು ವಿವರಿಸುತ್ತದೆ. ಕರ್ತನಾದ ಯೇಸು ಜನರೊಂದಿಗಿನ ಸಂಬಂಧಗಳ ಕುರಿತು ಸಾಕಷ್ಟು ಮಾತನಾಡಿದ್ದಾನೆ.
ಒಂದು ಸಂದರ್ಭದಲ್ಲಿ,
"ಆತನು ತನ್ನನ್ನು ಊಟಕ್ಕೆ ಕರೆದವನಿಗೆ ಸಹ ಒಂದು ಮಾತು ಹೇಳಿದನು; ಅದೇನೆಂದರೆ, “ನೀನು ಮಧ್ಯಾಹ್ನದ ಊಟಕ್ಕೆ ಅಥವಾ ಸಾಯಂಕಾಲದ ಊಟಕ್ಕೆ ನಿನ್ನ ಸ್ನೇಹಿತರನ್ನಾಗಲಿ, ನಿನ್ನ ಅಣ್ಣತಮ್ಮಂದಿರನ್ನಾಗಲಿ, ನಿನ್ನ ಬಂಧುಬಾಂಧವರನ್ನಾಗಲಿ, ಐಶ್ವರ್ಯವಂತರಾದ ನೆರೆಯವರನ್ನಾಗಲಿ ಕರೆಯಬೇಡ. ಒಂದು ವೇಳೆ ಅವರು ಸಹ ಪ್ರತಿಯಾಗಿ ನಿನ್ನನ್ನು ಕರೆದಾರು, ಮತ್ತು ನಿನಗೆ ಮುಯ್ಯಿಗೆಮುಯ್ಯಾಗುವುದು. ಆದರೆ ನೀನು ಔತಣ ಮಾಡಿಸುವಾಗ ಬಡವರು, ಅಂಗಹೀನವಾದವರು, ಕುಂಟರು, ಕುರುಡರು ಇಂಥವರನ್ನು ಕರೆ, ಆಗ ನೀನು ಧನ್ಯನಾಗುವಿ. ಏಕೆಂದರೆ, ಅವರು ನಿನಗೆ ಪ್ರತಿಯಾಗಿ ಏನು ಮಾಡಲೂ ಇಲ್ಲದವರು. ನೀತಿವಂತರು ಪುನರುತ್ಥಾನ ಹೊಂದುವಾಗ ನಿನಗೆ ಪ್ರತಿಫಲ ದೊರಕುವುದು.” . (ಲೂಕ 14:12-14 )
ಶ್ರೀಮಂತರು ಮತ್ತು ಪ್ರಸಿದ್ಧರು ನಮ್ಮ ಸುತ್ತಲೂ ಇರುವಾಗ, ನಾವು ನಮ್ಮ ಉತ್ತಮ ನಡವಳಿಕೆಯನ್ನು ತೋರುತ್ತೇವೆ. ನೀವು ಜನರೊಂದಿಗೆ ಹೇಗೆ ವರ್ತಿಸುತ್ತೀರಿ ಎಂಬುದರಲ್ಲಿಯೇ ನಿಮ್ಮ ಚಾರಿತ್ರ್ಯವು ಕಂಡುಬರುತ್ತದೆ, ವಿಶೇಷವಾಗಿ ನಿಮಗಾಗಿ ಏನನ್ನೂ ಮಾಡಲು ಸಾಧ್ಯವಿಲ್ಲದ ಸಾಮಾನ್ಯ ಜನರನ್ನು ಬಡವರನ್ನು, ಅಸಹಾಯಕರನ್ನು ನೀವು ಹೇಗೆ ನಡೆಸಿಕೊಳ್ಳುತ್ತೀರಿ ಎಂಬುದರಲ್ಲಿಯೇ ನಿಮ್ಮ ನಿಜವಾದ ಚಾರಿತ್ರ್ಯ ಕಂಡುಬರುತ್ತದೆ.
ನೀವು ನಿಮ್ಮ ದೈನಂದಿನ ಜೀವಿತದಲ್ಲಿ ಜನರೊಂದಿಗೆ ಅಂದರೆ ನಿಮ್ಮ ಸಂಗಾತಿ, ನಿಮ್ಮ ಪೋಷಕರು ಇವರೊಟ್ಟಿಗೆ ಮಾತನಾಡುವ ರೀತಿಯಲ್ಲಿ ಮತ್ತೊಂದು ಪರೀಕ್ಷೆಯನ್ನು ನೀವು ಎದುರಿಸಬಹುದು. ನಮ್ಮಲ್ಲಿ ಅನೇಕರು ಅದನ್ನು ಒಪ್ಪಿಕೊಳ್ಳದಿರಬಹುದು, ಆದರೆ ನಾವು ಸಾಮಾನ್ಯ ಜನರೊಂದಿಗೆ ಇರುವಾಗ ವಿಶೇಷವಾಗಿ ನಮ್ಮ ಸಂಗಾತಿ, ಪೋಷಕರು ಇತ್ಯಾದಿ ಜನರೊಡನೆ ಇರುವಾಗ ನಮ್ಮ ನಡವಳಿಕೆ ಮತ್ತು ಮಾತಿನಲ್ಲಿ ನಾವು ತುಂಬಾ ಹಗುರವಾಗಿ ಇರುತ್ತೇವೆ. ಆದರೆ ಅವರು ಇಲ್ಲದಿರುವಾಗ ಅವರನ್ನು ಆಳವಾಗಿ ನೆನಪಿಸಿಕೊಳ್ಳಲಾರಾಂಭಿಸುತ್ತೇವೆ. ನಾವು ತಿಳಿಯದೆಯೇ ಅವರನ್ನು ಲಘುವಾಗಿ ತೆಗೆದುಕೊಳ್ಳುತ್ತಿದ್ದೇವೆಯೇ?
"ನನ್ನ ಸಹೋದರರೇ, ಮಹಿಮೆಯುಳ್ಳ ನಮ್ಮ ಕರ್ತನಾದ ಯೇಸು ಕ್ರಿಸ್ತನಲ್ಲಿ ನಂಬಿಕೆಯಿಟ್ಟವರಾದ ನೀವು ಪಕ್ಷಪಾತಿಗಳಾಗಿರಬಾರದು. ಹೇಗೆಂದರೆ ಒಬ್ಬ ಮನುಷ್ಯನು ಚಿನ್ನದ ಉಂಗುರಗಳನ್ನು ಮತ್ತು ಉತ್ತಮವಾದ ವಸ್ತ್ರಗಳನ್ನೂ ಹಾಕಿಕೊಂಡು ನಿಮ್ಮ ಸಭೆಯೊಳಗೆ ಬಂದಾಗ ಮತ್ತು ಒಬ್ಬ ಬಡ ಮನುಷ್ಯನು ಕೊಳಕು ಬಟ್ಟೆಗಳನ್ನು ಧರಿಸಿಕೊಂಡು ಬಂದಾಗ, ನೀವು ಉತ್ತಮವಾದ ವಸ್ತ್ರಗಳನ್ನು ಧರಿಸಿಕೊಂಡು ಬಂದಿರುವವನನ್ನು ಗೌರವದಿಂದ ನೋಡಿ ಅವನಿಗೆ “ನೀವು ಇಲ್ಲಿ ಈ ಗೌರವ ಆಸನದಲ್ಲಿ ಕುಳಿತುಕೊಳ್ಳಿರಿ” ಎಂತಲೂ, ಆ ಬಡ ಮನುಷ್ಯನಿಗೆ “ನೀನು ಅಲ್ಲಿ ನಿಂತುಕೋ” ಇಲ್ಲವೇ “ಇಲ್ಲಿ ನನ್ನ ಕಾಲ್ಮಣೆಯ ಬಳಿ ಕುಳಿತುಕೋ” ಎಂತಲೂ ಹೇಳಿದರೆ, ನೀವು ನಿಮ್ಮ ನಿಮ್ಮಲ್ಲಿ ಭೇದಭಾವ ಮಾಡುವವರಾಗಿದ್ದು, ತಾರತಮ್ಯ ಆಲೋಚನೆಗಳಂತೆ ನಡೆಯುವ ನಿರ್ಧಾರ ಮಾಡುವವರಾಗಿರುತ್ತೀರಿ ಅಲ್ಲವೇ?"(ಯಾಕೋಬ 2:1-4)
ಬಹುಶಃ ನೀವು ಒಂದು ವ್ಯವಹಾರದಲ್ಲಿರಬಹುದು, ಅಥವಾ ಕಂಪನಿಯ ಕಾರ್ಯನಿರ್ವಾಹಕರೊ ಅಥವಾ ಚರ್ಚ್ ನಾಯಕರೋ ಆಗಿರಬಹುದು. ನೀವು ಯಾರೇ ಆಗಿರಲಿ, ಜನರೊಂದಿಗೆ ಉತ್ತಮವಾಗಿ ವರ್ತಿಸುವುದನ್ನು ರೂಢಿಸಿಕೊಳ್ಳಿ. ಅವರು ನಿಮ್ಮ ಒಳ್ಳೆಯತನಕ್ಕೆ ಪ್ರತಿಕ್ರಿಯಿಸಬಹುದು ಅಥವಾ ಪ್ರತಿಕ್ರಿಯಿಸದಿರಬಹುದು; ಅದು ಪರವಾಗಿಲ್ಲ. ನೀವು ಬದಲಾಗುತ್ತಿದ್ದೀರಿ ಅದುವೇ ಮುಖ್ಯವಾದದ್ದು.
ಪ್ರಾರ್ಥನೆಗಳು
ತಂದೆಯಾದ ದೇವರೇ, ನನ್ನನ್ನು ಇತರರಿಗೆ ಪ್ರೀತಿ, ನಿರೀಕ್ಷೆ ಮತ್ತು ಸಮಗ್ರತೆಯ ಉದಾಹರಣೆಯಾಗಿ ಇರುವಂತೆ ಮಾಡಿರಿ. ನಿನ್ನ ಮಾರ್ಗಗಳನ್ನು ನನಗೆ ಕಲಿಸು. ಇತರರಿಗೆ ದಯೆ, ನಮ್ರತೆ ಮತ್ತು ಗೌರವಾನ್ವಿತರಾಗಿರಲು ನಿಮ್ಮ ಆತ್ಮದಿಂದ ನನಗೆ ಬಲ ನೀಡಿ. ಸರಿಯಾದ ಜನರೊಂದಿಗೆ ನನ್ನನ್ನು ಯೇಸುನಾಮದಲ್ಲಿ ಒಗ್ಗೂಡಿಸಿ. ಆಮೆನ್.
Join our WhatsApp Channel

Most Read
● ದಿನ 20:40 ದಿನಗಳ ಉಪವಾಸ ಮತ್ತು ಪ್ರಾರ್ಥನೆ.● ಮಾತಿನಲ್ಲಿರುವ ಶಕ್ತಿ
● ಕರ್ತನೇ, ನಾನು ಏನು ಮಾಡಬೇಕೆಂದು ನೀನು ಬಯಸುತ್ತೀ?
● ನಿಮ್ಮ ಜೀವದದಲ್ಲಿ ಎಂದೂ ಅಳಿಯದಂತ ಬದಲಾವಣೆಯನ್ನು ತರುವುದು ಹೇಗೆ?-1
● ಇಸ್ಕಾರಿಯೋತ ಯೂದನ ಜೀವನದಿಂದ ಕಲಿಯಬೇಕಾದ ಪಾಠಗಳು -2
● ಕ್ರಿಸ್ತನೊಂದಿಗೆ ಸಿಂಹಾಸನದಲ್ಲಿ ಕೂತುಕೊಳ್ಳುವುದು
● ದಿನ 29:40 ದಿನಗಳ ಉಪವಾಸ ಮತ್ತು ಪ್ರಾರ್ಥನೆ
ಅನಿಸಿಕೆಗಳು