ಅನುದಿನದ ಮನ್ನಾ
2
1
131
ನಿಮ್ಮ ಮಾರ್ಗದರ್ಶಕರು ಯಾರು - |
Wednesday, 29th of January 2025
Categories :
ಮಾರ್ಗದರ್ಶಕ (Mentor)
ಅಪೊಸ್ತಲನಾದ ಪೌಲನು ಕೊರಿಂಥದವರಿಗೆ ಬರೆಯುತ್ತಾ, “ಕ್ರಿಸ್ತನಲ್ಲಿ ನಿಮಗೆ ಅಸಂಖ್ಯಾತ ಮಾರ್ಗದರ್ಶಕರು ಇದ್ದರೂ, ನಿಮಗೆ ಅನೇಕ ತಂದೆಗಳಿಲ್ಲ, ಏಕೆಂದರೆ ನಾನು ಸುವಾರ್ತೆಯ ಮೂಲಕ ಕ್ರಿಸ್ತ ಯೇಸುವಿನಲ್ಲಿ ನಿಮ್ಮ ತಂದೆಯಾದೆ. ಹಾಗಾದರೆ ನನ್ನನ್ನು ಅನುಕರಿಸುವವರಾಗಿರಿ ಎಂದು ನಾನು ನಿಮ್ಮನ್ನು ಒತ್ತಾಯಿಸುತ್ತೇನೆ. (1 ಕೊರಿಂಥ 4:15-16) ಎಂದು ಹೇಳುತ್ತಾನೆ.
ಸತ್ಯವೇದದಲ್ಲಿನ ಕೆಲವು ಮಹಾನ್ ನಂಬಿಕೆಯ ವೀರರ ಯಶಸ್ಸಿನ ರಹಸ್ಯಗಳಲ್ಲಿ ಒಂದು ಮಾರ್ಗದರ್ಶಕರನ್ನು ಹೊಂದಿರುವುದಾಗಿತ್ತು. ನೀವು ಅನುಕರಿಸಬಹುದಾದ ಮತ್ತು ಅವರಿಂದ ಕಲಿಯಬಹುದು ಎನ್ನುವಂತ ಮಾರ್ಗದರ್ಶಕರನ್ನು ನೀವು ಹೊಂದಿದ್ದೀರಾ? ಇಲ್ಲದಿದ್ದರೆ, ಕೊರಿಂಥದವರಿಗೆ ಪೌಲನು ಮಾಡಿದಂತೆಯೇ ನಿಮಗಾಗಿ ಈ ಪಾತ್ರವನ್ನು ತುಂಬಲು ಪ್ರಾರ್ಥನಾಪೂರ್ವಕವಾಗಿ ಒಬ್ಬ ವ್ಯಕ್ತಿಯನ್ನು ಹುಡುಕಿ.
ನೀವು ಆತ್ಮೀಕವಾಗಿ ಬೆಳೆಯಬೇಕಾದರೆ, ಇದು ನೀವು ನಿರ್ಲಕ್ಷಿಸಲು ಸಾಧ್ಯವಿಲ್ಲದ ಒಂದು ತತ್ವವಾಗಿದೆ. ಬೈಬಲ್ನಲ್ಲಿರುವ ಮಾರ್ಗದರ್ಶನ ನೀಡುವ ಕೆಲವು ಉದಾಹರಣೆಗಳನ್ನು ನಾವು ನೋಡೋಣ.
ಉದಾಹರಣೆ #1 ಯಹೋಶುವ
"ಮನುಷ್ಯರೊಳಗೆ ಒಬ್ಬನು ತನ್ನ ಸ್ನೇಹಿತನೊಡನೆ ಹೇಗೆ ಮಾತಾಡುವನೋ ಹಾಗೆಯೇ ಯೆಹೋವನು ಮೋಶೆಯ ಸಂಗಡ ಮುಖಾಮುಖಿಯಾಗಿ ಮಾತಾಡುತ್ತಿದ್ದನು; ತರುವಾಯ ಮೋಶೆ ಪಾಳೆಯಕ್ಕೆ ತಿರಿಗಿ ಬರುವನು. ಆದರೆ ನೂನನ ಮಗನಾದ ಯೆಹೋಶುವನೆಂಬ ಹೆಸರುಳ್ಳ ಯೌವನಸ್ಥನಾದ ಅವನ ಶಿಷ್ಯನು ಆ ಡೇರೆಯಲ್ಲೇ ಇದ್ದನು; ಅದರ ಬಳಿಯಿಂದ ಹೋಗಲೇ ಇಲ್ಲ.(ವಿಮೋಚನಕಾಂಡ 33:11)
ಈ ವಾಕ್ಯವು ಕರ್ತನು ಮೋಶೆಯೊಂದಿಗೆ ಮಾತನಾಡುವಾಗ ಯೆಹೋಶುವ ಸಹ ಅವನ ಹತ್ತಿರದಲ್ಲಿಯೇ ಇದ್ದನು ಎಂಬ ಅಂಶದ ಸಂಕ್ಷಿಪ್ತ ಮತ್ತು ಸೂಕ್ಷ್ಮವಾದ ಆದರೆ ಪ್ರಮುಖವಾದ ಉಲ್ಲೇಖವಾಗಿದೆ. ಆದರೆ ಅದಕ್ಕಿಂತ ಮುಖ್ಯವಾಗಿ, ಮೋಶೆಯು ಡೇರೆಯನ್ನು ಬಿಟ್ಟು ಹೋದಾಗಲೂ ಯೆಹೋಶುವನು ಆ ಡೇರೆಯಿಂದ ಹೊರಬರುವುದಿಲ್ಲ. ಅವನು ಮೋಶೆಯ ಪ್ರಾರ್ಥನಾ ಜೀವನದಿಂದ ದೇವರೊಂದಿಗೆ ಇರಬೇಕಾದ ಅನ್ಯೋನ್ಯತೆಯನ್ನು ಕಲಿತನು. ಮೋಶೆಯು ದೇವರನ್ನು ದರ್ಶಿಸಲು ಬೆಟ್ಟಕ್ಕೆ ಹೋದಾಗ, ಯೆಹೋಶುವನೂ ಸಹ ಅವನನ್ನು ಹಿಂಬಾಲಿಸಿದನು. (ವಿಮೋಚನಕಾಂಡ 24:13)
ಯೆಹೋಶುವ ಎನ್ನುವ ಈ ವ್ಯಕ್ತಿ ಪ್ರವಾದಿಯಾದ ಮೋಶೆಯ ಜೀವನ, ದೇವರೊಂದಿಗಿನ ಅವನ ಸಂಬಂಧ ಮತ್ತು ಅವನು ಜೀವಿಸಿದ ರೀತಿಯನ್ನು ಬಹಳ ಎಚ್ಚರಿಕೆಯಿಂದ ಅನುಸರಿಸಿದನು .ನಂತರ, ಒಂದು ದಿನ, ಈ ಮನುಷ್ಯನು ಇಸ್ರಾಯೇಲ್ಯರನ್ನು ವಾಗ್ದತ್ತ ಕಾನಾನ್ ದೇಶಕ್ಕೆ ಕರೆದೊಯ್ದನು.
ಉದಾಹರಣೆ #2 ಎಲಿಷಾ
ಎಲೀಷ ಒಬ್ಬ ರೈತ. ಎಲೀಯನು ಎಲೀಷನನ್ನು ಮೊದಲ ಬಾರಿಗೆ ಭೇಟಿಯಾದಾಗ, ಅವನು ಹನ್ನೆರಡು ಜೋಡಿ ಎತ್ತುಗಳನ್ನುಹೂಡಿದ ನೊಗದಿಂದ ಉಳುಮೆ ಮಾಡುತ್ತಿದ್ದನು. (1 ಅರಸುಗಳು 19:19)
ಅವನ ತಂದೆ ಒಬ್ಬ ಶ್ರೀಮಂತ ವ್ಯಕ್ತಿ. ಒಂದು ದಿನ ಎಲೀಯನು ಬಂದು ತನ್ನ ಕಂಬಳಿಯನ್ನು ಎಲೀಷನ ಮೇಲೆ ಹಾಕಿದನು ಮತ್ತು ಆ ದಿನದಿಂದ ಎಲೀಷನು ನಿಷ್ಠೆಯಿಂದ ಎಲೀಯನನ್ನು ಹಿಂಬಾಲಿಸಿದನು. ಆ ದಿನಗಳಲ್ಲಿ ಅನೇಕ ಪ್ರವಾದಿಗಳಿದ್ದರು, ಆದರೆ ಎಲಿಷಾ ಎಂಬ ಈ ವ್ಯಕ್ತಿ ಮಾತ್ರವೇ ತನ್ನ ಮಾರ್ಗದರ್ಶಕನನ್ನು ಸಂಪೂರ್ಣವಾಗಿ ಹಿಂಬಾಲಿಸಿದನು.
ಇಂದು ಈ ರೀತಿ ಮಾಡುತ್ತಿರುವ ಕೆಲವೇ ಕೆಲವು ಜನರನ್ನು ನಾನು ನೋಡುತ್ತೇನೆ. ಇಂದು, ಅನೇಕರು ಇನ್ಸ್ಟಾಗ್ರಾಮ್ ನಲ್ಲಿ ಫೋಟೋವನ್ನು ಪೋಸ್ಟ್ ಮಾಡಲು ಮಾತ್ರ ದೇವ ಮನುಷ್ಯ ಅಥವಾ ದೇವ ಸೇವಕಿಯರಿಗೆ ಹತ್ತಿರವಾಗಲು ಬಯಸುತ್ತಾರೆ.ಆದರೆ ಅವರು ಆ ದೇವ ಮನುಷ್ಯರಿಂದ ಕಲಿಯಲು ಸಂಪೂರ್ಣವಾಗಿ ಆಸಕ್ತಿ ಹೊಂದಿರದವರಾಗಿರುತ್ತಾರೆ. ದೇವರ ಮನುಷ್ಯನು ಒಯ್ಯುವ ಅಭಿಷೇಕದ ಬಗ್ಗೆ ಅವರು ನಿಜವಾಗಿಯೂ ಕಾಳಜಿ ವಹಿಸುವುದಿಲ್ಲ. ಅವರು ತಮ್ಮ ಪ್ರಾರ್ಥನೆ ವಿನಂತಿಗಳಿಗೆ ಉತ್ತರವನ್ನು ಪಡೆಯಲು ಮಾತ್ರವೇ ಆ ಅಭಿಷೇಕವನ್ನು ಬಳಸಲು ಬಯಸುತ್ತಾರೆ.
"ಯೆಹೋವನು ಎಲೀಯನನ್ನು ಸುಳಿಗಾಳಿಯ ಮುಖಾಂತರವಾಗಿ ಪರಲೋಕಕ್ಕೆ ಸೇರಿಸುವ ಸಮಯ ಬಂದಾಗ ಎಲೀಯನು ಎಲೀಷನೊಡನೆ ಗಿಲ್ಗಾಲನ್ನು ಬಿಟ್ಟು ಹೊರಟನು. ಆಗ ಎಲೀಯನು ಎಲೀಷನಿಗೆ - ದಯವಿಟ್ಟು ನೀನು ಇಲ್ಲೇ ಇರು; ಯೆಹೋವನು ನನಗೆ ಬೇತೇಲಿಗೆ ಹೋಗಬೇಕೆಂದು ಆಜ್ಞಾಪಿಸಿದ್ದಾನೆ ಅನ್ನಲು ಎಲೀಷನು - ಯೆಹೋವನಾಣೆ, ನಿನ್ನ ಜೀವದಾಣೆ, ನಾನು ನಿನ್ನನ್ನು ಬಿಟ್ಟುಹೋಗುವದಿಲ್ಲ ಎಂದು ಉತ್ತರಕೊಟ್ಟನು. ತರುವಾಯ ಅವರಿಬ್ಬರೂ ಬೇತೇಲಿಗೆ ಹೋದರು. ಬೇತೇಲಿನ ಪ್ರವಾದಿಮಂಡಲಿಯವರು ಎಲೀಷನನ್ನು ಎದುರುಗೊಂಡು ಅವನನ್ನು - ಯೆಹೋವನು ಈಹೊತ್ತು ನಿನ್ನ ಯಜಮಾನನನ್ನು ನಿನ್ನ ಬಳಿಯಿಂದ ಮೇಲಕ್ಕೆ ತೆಗೆದುಕೊಳ್ಳುವನೆಂಬದು ನಿನಗೆ ಗೊತ್ತುಂಟೋ ಎಂದು ಕೇಳಿದರು. ಅದಕ್ಕೆ ಅವನು - ಗೊತ್ತುಂಟು, ಸುಮ್ಮನಿರ್ರಿ ಅಂದನು. ಎಲೀಯನು ಎಲೀಷನಿಗೆ - ದಯವಿಟ್ಟು ಇಲ್ಲೇ ಇರು; ಯೆಹೋವನು ನನಗೆ ಯೆರಿಕೋವಿಗೆ ಹೋಗಬೇಕೆಂದು ಆಜ್ಞಾಪಿಸಿದ್ದಾನೆ ಎಂದು ಹೇಳಿದನು. ಆದರೆ ಎಲೀಷನು - ಯೆಹೋವನಾಣೆ, ನಿನ್ನ ಜೀವದಾಣೆ, ನಾನು ನಿನ್ನನ್ನು ಬಿಟ್ಟುಹೋಗುವದಿಲ್ಲ ಎಂದು ಉತ್ತರಕೊಟ್ಟು ಅವನ ಜೊತೆಯಲ್ಲಿ ಯೆರಿಕೋವಿಗೆ ಹೋದನು. ಅಲ್ಲಿನ ಪ್ರವಾದಿಮಂಡಲಿಯವರು ಅವನನ್ನು ಎದುರುಗೊಂಡು - ಯೆಹೋವನು ಈಹೊತ್ತು ನಿನ್ನ ಯಜಮಾನನನ್ನು ನಿನ್ನ ಬಳಿಯಿಂದ ಮೇಲಕ್ಕೆ ಕರೆದುಕೊಳ್ಳುವನೆಂದು ನಿನಗೆ ಗೊತ್ತುಂಟೋ ಎಂದು ಕೇಳಿದರು. ಅದಕ್ಕೆ ಅವನು - ಗೊತ್ತುಂಟು, ಸುಮ್ಮನಿರ್ರಿ ಎಂದು ಉತ್ತರಕೊಟ್ಟನು. ಎಲೀಯನು ತಿರಿಗಿ ಅವನಿಗೆ - ದಯವಿಟ್ಟು ನೀನು ಇಲ್ಲೇ ಇರು; ಯೆಹೋವನು ನನಗೆ ಯೊರ್ದನಿಗೆ ಹೋಗಬೇಕೆಂದು ಆಜ್ಞಾಪಿಸಿದ್ದಾನೆ ಎಂದು ಹೇಳಿದನು. ಆಗ ಅವನು - ಯೆಹೋವನಾಣೆ, ನಿನ್ನ ಜೀವದಾಣೆ, ನಾನು ನಿನ್ನನ್ನು ಬಿಟ್ಟು ಹೋಗುವದಿಲ್ಲ ಎಂದು ಉತ್ತರಕೊಟ್ಟನು; ಆದದರಿಂದ ಇಬ್ಬರೂ ಹೊರಟು ಯೊರ್ದನ್ ಹೊಳೆಯ ದಡಕ್ಕೆ ಬಂದರು. (2 ರಾಜರು 2:2-6)
ಇಲ್ಲಿ ಉಲ್ಲೇಖಿಸಲಾದ ನಾಲ್ಕು ಸ್ಥಳಗಳಲ್ಲಿ ಪ್ರತಿಯೊಂದೂ (ಗಿಲ್ಗಲ್, ಬೆತೆಲ್, ಯೆರಿಕೋ ಮತ್ತು ಯೊರ್ದಾನ್ ) ಇಸ್ರೇಲ್ನ ಇತಿಹಾಸದಲ್ಲಿ ಹೆಚ್ಚು ಮಹತ್ವವುಳ್ಳ ಸ್ಥಳಗಳಾಗಿದ್ದು ಅವು ಕ್ರೈಸ್ತರ ಜೀವನ ಪ್ರಯಾಣದ ಹಂತಗಳಾಗಿ ಹೆಚ್ಚು ಸಾಂಕೇತಿಕವೆಂದು ನಾನು ನಂಬುತ್ತೇನೆ.
ಗಿಲ್ಗಾಲ್ ಶಾರೀರಿಕವಾಗಿ ವ್ಯವಹರಿಸುವ ಸ್ಥಳವಾಗಿದೆ.
(ಯೆಹೋಶುವ 4:19-24).
ದೇವರವಾಕ್ಯದಲ್ಲಿ ಐಗುಪ್ತ ಎನ್ನುವಂಥದ್ದು ಲೋಕವನ್ನು ಪ್ರತಿನಿಧಿಸುತ್ತದೆ
ಬೇತೆಲ್ ನಾವು ಲೋಕವನ್ನು ಜಯಿಸುವ ಬಗ್ಗೆ ಮಾತನಾಡುತ್ತದೆ.
ಯೆರಿಕೊ ಆತ್ಮೀಕ ಯುದ್ಧದ ಸ್ಥಳವಾಗಿದೆ. ಅನೇಕ ಕ್ರೈಸ್ತರು ಆತ್ಮೀಕ ಯುದ್ಧವನ್ನು ಇಷ್ಟಪಡುವುದಿಲ್ಲ ಏಕೆಂದರೆ ಅದು ಕೆಲವೊಂದು ಆರಾಮವಲಯದ ಬೇಡಿಕೆಯನ್ನಿಡುತ್ತದೆ. ಆದ್ದರಿಂದ ಜನರು ತಮಗಾಗಿ ಪ್ರಾರ್ಥಿಸಲು ದೇವರ ಮನುಷ್ಯನನ್ನು ಕೇಳುವಂತ ಸುಲಭ ಮಾರ್ಗವನ್ನು ತೆಗೆದುಕೊಳ್ಳುತ್ತಾರೆ. ಎಲಿಯನ ಜೊತೆಗೆ ವಾಸಿಸುವಂತದ್ದು ಅಷ್ಟೊಂದು ಸುಲಭವಾಗಿರಲಿಲ್ಲ. ಆದರೂ, ಎಲಿಷನು ಎಲೀಯನಿಗೆ ಸೇವೆ ಸಲ್ಲಿಸಿದನು. ಎಲಿಷಾ ಎಲೀಯಾನಿಗೆ ತುಂಬಾ ಹತ್ತಿರವಾಗಿದ್ದರೂ, ಪದವಿಯನ್ನು ಹುಡುಕಲಿಲ್ಲ ಆದರೆ ಒಬ್ಬ ಸೇವಕನ ಪಾತ್ರವನ್ನು ವಹಿಸಿಕೊಂಡು ಎಲೀಯನ ಕೈಗಳಿಗೆ ನೀರು ಕೊಡುವ ವ್ಯಕ್ತಿ ಎಂದು ಕರೆಯಲ್ಪಟ್ಟನು. (2 ಅರಸುಗಳು 3:11)
ನೀವು ಸತ್ಯವಾಗಿ ಉತ್ತರಿಸಬೇಕಾದ ಕೆಲವು ಪ್ರಶ್ನೆಗಳಿವೆ:
1. ನೀವು ಯಾರಿಂದ ಕಲಿಯುತ್ತಿದ್ದೀರಿ?
2. ನೀವು ಯಾರನ್ನು ಅನುಕರಿಸುತ್ತಿದ್ದೀರಿ?
3. ನಿಮ್ಮ ಮಾರ್ಗದರ್ಶಕರು ಯಾರು?
Bible Reading: Exodus 30-32
ಪ್ರಾರ್ಥನೆಗಳು
ತಂದೆಯೇ, ನನ್ನ ಜೀವನದಲ್ಲಿ ಗುರುವಿನ ಪ್ರಾಮುಖ್ಯತೆಯನ್ನು ನೋಡುವಂತೆ ನನ್ನ ಆತ್ಮೀಕ ಕಣ್ಣುಗಳನ್ನು ಯೇಸುನಾಮದಲ್ಲಿ ತೆರೆಯಿರಿ. ಆಮೆನ್.
Join our WhatsApp Channel

Most Read
● ಹೋಲಿಕೆಯ ಬಲೆ● ದಿನ 17:40 ದಿನಗಳ ಉಪವಾಸ ಪ್ರಾರ್ಥನೆ.
● ಜನರು ನೆಪಗಳನ್ನು ಹೇಳಲು ಇರುವ ಕಾರಣಗಳು : ಭಾಗ 2
● ನಿಮ್ಮ ಆತ್ಮಿಕ ಶಕ್ತಿಯನ್ನು ನವೀಕರಿಸಿಕೊಳ್ಳುವುದು ಹೇಗೆ -3
● ಹಣಕಾಸಿನ ಅವ್ಯವಸ್ಥೆಯಿಂದ ಪಾರಾಗುವುದು ಹೇಗೆ?
● ಇನ್ನೂ ಯಾವುದಕ್ಕಾಗಿ ಕಾಯುತ್ತಿದ್ದೀರಿ?
● ಅಪ್ಪನ ಮಗಳು - ಅಕ್ಷಾ
ಅನಿಸಿಕೆಗಳು