"ಬೇಸರಗೊಳ್ಳದೆ ಯಾವಾಗಲೂ ಪ್ರಾರ್ಥನೆ ಮಾಡುತ್ತಿರಬೇಕೆಂಬದಕ್ಕೆ ಆತನು ಅವರಿಗೆ ಒಂದು ಸಾಮ್ಯವನ್ನು ಹೇಳಿದನು. " (ಲೂಕ 18:1)
ಎಸ್ತರಳ ಸಿದ್ಧತೆಯ ಮೊದಲ ಆರು ತಿಂಗಳುಗಳು ಸಕಲ ರೀತಿಯ ಆಂತರಿಕವಾಗಿ ಬಾಹ್ಯವಾಗಿ ಕಲ್ಮಶವನ್ನು ತೆಗೆದುಹಾಕುವಂಥ ಶುದ್ಧೀಕರಣ, ಪವಿತ್ರೀಕರಣ ಕುರಿತು ಮಾತನಾಡುತ್ತದೆ. ನಿರಂತರವಾಗಿ ರಕ್ತಬೋಳತೈಲವನ್ನು ಹಚ್ಚಿ ಸ್ನಾನ ಮಾಡುವ ಮೂಲಕ ಚರ್ಮವು ಶುದ್ಧೀಕರಿಸಲ್ಪಟ್ಟು, ಸುಗಂಧದ್ರವ್ಯಗಳ ಪರಿಮಳವು ಆಳವಾಗಿ ಚರ್ಮದೊಳಗೆ ಹುದುಗಿಸಲ್ಪಟ್ಟು ಚರ್ಮವನ್ನು ಮೃದುಗೊಳಿಸಲಾಗುತ್ತದೆ. ಇನ್ನೊಂದು ರೀತಿಯಲ್ಲಿ ಹೇಳುವುದಾದರೆ, ಈಗ ಎಸ್ತರಳು ಅಕ್ಷರಶಃ ಸುಗಂಧವನ್ನು ಪಸರಿಸುವವಳಾಗುತ್ತಾಳೆ . ಎಸ್ತರಳು ಒಂದು ಸ್ಥಳವನ್ನು ಪ್ರವೇಶಿಸುವ ಮೊದಲೇ , ಅವಳು ಸೂಸುತ್ತಿದ್ದ ಸುಗಂಧವು ಅವಳ ಆಗಮನವನ್ನು ಘೋಷಿಸಿತ್ತಿರುತ್ತದೆ ಹಾಗೆ ಅವಳು ಭೌತಿಕವಾಗಿ ಒಂದು ಸ್ಥಳವನ್ನು ತೊರೆದ ಮೇಲೂ, ಅವಳ ಸುಗಂಧವು ಆ ಸ್ಥಳದಲ್ಲಿ ಹಾಗೆ ಉಳಿಯುತಿತ್ತು ಎಂದು ನಾನು ನಂಬುತ್ತೇನೆ.
ಇದು ಹಳೆಯ ಮನುಷ್ಯನನ್ನು ಕೊಲ್ಲುವ, ಕಳಂಕಗಳನ್ನು ತೆಗೆದು ಹಾಕುವ, ಆಂತರಿಕವಾಗಿ ಶುದ್ಧೀಕರಿಸಲ್ಪಡುವುದನ್ನೂ ಮತ್ತು ಹಳೆಯ ಅಭ್ಯಾಸಗಳು, ಚಟಗಳು , ಮನಸ್ಥಿತಿಗಳು ಮತ್ತು ಮಿತಿಗಳಿಂದ ದೂರವಿರುವುದನ್ನು ಸ್ಪಷ್ಟವಾಗಿ ಚಿತ್ರಿಸುತ್ತಿದೆ ಎಂದು ನಾನು ನಂಬುತ್ತೇನೆ. ಇದು ರಾಜಾಧೀರಾಜನ ಮುಂದೆ ಕಾಣಿಸಿಕೊಳ್ಳುವ ಸಿದ್ಧತೆ ಒಳಗೊಂಡಿರುವ ಮಾರ್ಪಾಟು , ಶುದ್ಧೀಕರಣ ಮತ್ತು ಪವಿತ್ರೀಕರಣದ ಕುರಿತು ಹೇಳುತ್ತದೆ. ನಾವು ದೇವರ ಉಪಸ್ಥಿತಿಯಲ್ಲಿಯೇ ಉಳಿದುಕೊಳ್ಳಲು ಬಯಸಿದರೆ, ನಾವು ನಿರಂತರವಾಗಿ ಪ್ರಾರ್ಥನಾ ಮನೋಭಾವದಲ್ಲಿ ಇರುವುದನ್ನು ಕಲಿಯಬೇಕು.
ಸತ್ಯವೇದವು 1 ಥೆಸಲೊನೀಕ 5:16-18 ರಲ್ಲಿ ಹೇಳುವುದೇನೆಂದರೆ" ಯಾವಾಗಲೂ ಸಂತೋಷಿಸಿರಿ; ಎಡೆಬಿಡದೆ ಪ್ರಾರ್ಥನೆಮಾಡಿರಿ; ಎಲ್ಲಾದರಲ್ಲಿಯೂ ಕೃತಜ್ಞತಾಸ್ತುತಿಮಾಡಿರಿ; ಇದೇ ನಿಮ್ಮ ವಿಷಯವಾಗಿ ಕ್ರಿಸ್ತ ಯೇಸುವಿನಲ್ಲಿ ತೋರಿ ಬಂದ ದೇವರ ಚಿತ್ತ." ಎಂಬುದೇ.
ಸಂವಹನವೇ ಯಾವುದೇ ಸಂಬಂಧವನ್ನು ಕೂಡಿಸುವುದಕ್ಕೂ ಸಂಬಂಧವನ್ನು ಮುರಿಯುವುದಕ್ಕೆ ಪುರಾವೆಯಾಗಿದೆ. ಅದಕ್ಕಾಗಿಯೇ ಯೇಸು ಯಾವಾಗಲೂ ಪ್ರಾರ್ಥಿಸುವಂತೆ ನಮಗೆ ಸಲಹೆ ನೀಡಿದ್ದಾನೆ.
ಪ್ರಾರ್ಥನೆಯು ನಮಗೆ ಉಸಿರಾಟದಂತಿರಬೇಕು. ದೇವರೊಂದಿಗೆ ಸಂವಹನ ನಡೆಸದೆ ನೀವು ಗಂಟೆಗಳು, ದಿನಗಳು ಅಥವಾ ವಾರಗಳವರೆಗೆ ಇರಲೇ ಬಾರದು.ಎಲ್ಲೇ ಇದ್ದರೂ ಸರಿಯೇ ಯಾವುದೇ ಸಮಯವಾದರೂ ಸರಿಯೇ ಪ್ರಾರ್ಥನೆಯ ಮೂಲಕ ನಾವು ಆತನ ಪ್ರಸನ್ನತೆಯನ್ನು ನೀವುಹತ್ತಿರಕ್ಕೆ ಸೆಳೆಯುವವರಾಗಬೇಕು.
ಎಸ್ತರಳ ಕುರಿತು ನಮಗೆ ಹೆಚ್ಚು ಮಾಹಿತಿಇಲ್ಲ , ಆದರೆ ಅವಳು ಪ್ರಾರ್ಥನೆಗೆ ಒತ್ತು ನೀಡಿದ್ದ ಸ್ತ್ರೀ ಎಂಬುದಾಗಿ ನಾವು ಹೇಳಬಹುದು. "ಮೊದಲನೆಯ ತಿಂಗಳಿನ ಹದಿಮೂರನೆಯ ದಿನದಲ್ಲಿ ರಾಜಲೇಖಕರು ಕೂಡಿ ಬರಬೇಕು ಎಂದು ಅಪ್ಪಣೆಯಾಯಿತು. ಅವರು ಹಾಮಾನನ ಆಜ್ಞಾನುಸಾರ ಉಪರಾಜರಿಗೂ ಆಯಾ ಸಂಸ್ಥಾನಗಳ ಅಧಿಕಾರಿಗಳಿಗೂ ಆಯಾ ಜನಾಂಗಗಳ ಅಧಿಪತಿಗಳಿಗೂ ಪತ್ರಗಳನ್ನು ಬರೆದರು. ಆಯಾ ಸಂಸ್ಥಾನಗಳ ಬರಹದಲ್ಲಿಯೂ ಆಯಾ ಜನಾಂಗಗಳ ಭಾಷೆಯಲ್ಲಿಯೂ ಇದ್ದ ಆ ಪತ್ರಗಳು ಅರಸನಾದ ಅಹಷ್ವೇರೋಷನ ಹೆಸರಿನಲ್ಲೇ ಲಿಖಿತವಾಗಿದ್ದವು; ಅವುಗಳಿಗೆ ರಾಜಮುದ್ರೆಯೂ ಇತ್ತು. ಪತ್ರಗಳು ಅಂಚೆಯವರ ಮುಖಾಂತರ ಎಲ್ಲಾ ರಾಜಸಂಸ್ಥಾನಗಳಿಗೆ ಕಳುಹಿಸಲ್ಪಟ್ಟವು. ಅವುಗಳಲ್ಲಿ - ಒಂದೇ ದಿನದಲ್ಲಿ ಅಂದರೆ ಹನ್ನೆರಡನೆಯ ತಿಂಗಳಾದ ಫಾಲ್ಗುನ ಮಾಸದ ಹದಿಮೂರನೆಯ ದಿನದಲ್ಲಿ ಹುಡುಗರು, ಮುದುಕರು, ಹೆಂಗಸರು, ಮಕ್ಕಳು ಎಂದು ನೋಡದೆ ಎಲ್ಲಾ ಯೆಹೂದ್ಯರನ್ನು ಕೊಲ್ಲಿರಿ, ಸಂಹರಿಸಿರಿ, ನಿರ್ನಾಮಗೊಳಿಸಿರಿ, ಅವರ ಸೊತ್ತನ್ನು ಸೂರೆಮಾಡಿರಿ ಎಂದೂ". ಬರೆಯಲಾಗಿತ್ತು ಎಂದು ಸತ್ಯವೇದವು ಎಸ್ತರಳು 3: 12-13 ರಲ್ಲಿ ಹೇಳುತ್ತದೆ
ಈ ವಾಕ್ಯಗಳಲ್ಲಿ, ಎಸ್ತೇರಳ ಜನಾಂಗದವರ ವಿರುದ್ಧ ಒಂದು ಆಜ್ಞೆಯನ್ನು ಮಾಡಲಾಗಿ ರಾಜನು ಅವರ ನಾಶನವನ್ನು ಅನುಮೋದಿಸಿದ್ದನು ಎಂಬುದನ್ನು ನಾವು ನೋಡುತ್ತೇವೆ. ಇದರ ಪ್ರಕಾರ ಒಂದು ಇಡೀ ಜನಾಂಗವು ಅಂತ್ಯವಾಗಬೇಕಿತ್ತು, ಆದರೆ ಈ ದುರದೃಷ್ಟಕರವಾದ ವಿಪತ್ತಿಗೆ ಇನ್ನೂ ಬಾಕಿ ಉಳಿದಿರುವ ಸಮಯದಲ್ಲಿ ಎಸ್ತರ್‌ಳ ಪ್ರತಿಕ್ರಿಯೆ ಏನಾಗಿತ್ತು ?
" ಆಗ ಎಸ್ತೇರಳು - ನೀನು ಹೋಗಿ ಶೂಷನಿನಲ್ಲಿ ಸಿಕ್ಕುವ ಎಲ್ಲಾ ಯೆಹೂದ್ಯರನ್ನು ಕೂಡಿಸು; ನೀವೆಲ್ಲರೂ ಮೂರು ದಿನ ಹಗಲಿರುಳು ಅನ್ನಪಾನಗಳನ್ನು ಬಿಟ್ಟು ನನಗೋಸ್ಕರ ಉಪವಾಸ ಮಾಡಿರಿ; ಅದರಂತೆ ನಾನೂ ನನ್ನ ಸೇವಕಿಯರೊಡನೆ ಉಪವಾಸದಿಂದಿರುವೆನು. ಅನಂತರ ನಾನು ವಿಧಿ ಮೀರಿ ಅರಸನ ಬಳಿಗೆ ಹೋಗುವೆನು, ಸತ್ತರೆ ಸಾಯುತ್ತೇನೆ ಎಂದು ಮೊರ್ದೆಕೈಗೆ ಮರಳಿ ಹೇಳಿಸಿದಳು. ಮೊರ್ದೆಕೈಯು ಹಿಂದಿರುಗಿ ಹೋಗಿ ಎಸ್ತೇರಳು ಹೇಳಿದಂತೆಯೇ ಮಾಡಿದನು." ಎಂದು ಎಸ್ತರ್ 4:16-17 ರಲ್ಲಿ ಸತ್ಯವೇದ ಹೇಳುತ್ತದೆ
ಎಸ್ತೇರಳು ಈ ಆಜ್ಞೆಯ ವಿಚಾರ ತಿಳಿದಾಗ ವಿಚಲಿತಳಾಗಲಿಲ್ಲ; ಬದಲಾಗಿ , ಅವಳು ಪ್ರಾರ್ಥನೆಯಲ್ಲಿ ದೇವರ ಪ್ರಸನ್ನತೆಯ ಕಡೆಗೆ ತಿರುಗಿದಳು. ರಾಜನು ಮಾತ್ರವೇ ತೀರ್ಪನ್ನು ಬದಲಾಯಿಸಬಹುದು ಎಂದು ಅವಳು ತಿಳಿದಿದ್ದಳು, ಆದರೆ ರಾಜನಿಗೆ ಮನವಿ ಸಲ್ಲಿಸುವ ಮೊದಲು, ಅವಳು ಮೊದಲು ರಾಜಾಧಿರಾಜನ ಮುಂದೆ ಕಾಣಿಸಿಕೊಂಡಳು. ಪ್ರಾರ್ಥನೆ ಮತ್ತು ಉಪವಾಸದ ನಂತರ, ಪರ್ಷಿಯಾದ ರಾಜನು ವಿರೋಧಿಸಲು ಸಾಧ್ಯವಾಗದ ಪ್ರಾರ್ಥನೆಯ ಸುಗಂಧದಲ್ಲಿ ಅವಳು ಮಿಂದಳು ಹಾಗಾಗಿ ತೀರ್ಪು ತಿರುಗಿಸಲ್ಪಟ್ಟಿತು.
ಆರಂಭದಿಂದಲೂ ಪ್ರಾರ್ಥನೆಯ ಕುರಿತು ಅವಳಿಗೆ ಈ ಮನಸ್ಥಿತಿ ಇತ್ತು ಎಂದು ನಾನು ನಂಬುತ್ತೇನೆ. ದೈಹಿಕ ಸುಗಂಧವು ಅದರ ಮಿತಿಯನ್ನು ಹೊಂದಿದೆ ಎಂದು ಅವಳು ತಿಳಿದಿದ್ದರಿಂದಲೇ ಅವಳು ಸ್ವಲ್ಪ ಗುಣಮಟ್ಟದ ಸಮಯವನ್ನು ಪ್ರಾರ್ಥನೆಯಲ್ಲಿ ಕಳೆಯಬೇಕು ಆ ಪ್ರಾರ್ಥನೆಯ ಪರಿಮಳವೇ ಸಂಗತಿಗಳನ್ನು ಬದಲಾಯಿಸುತ್ತದೆ ಎಂಬುದನ್ನು ಅವಳು ಅರಿತವಳಾಗಿದ್ದಳು.
ಹಾಗಾಗಿ, ನಾವು ನಮ್ಮ ಆಂತರಿಕ ಮನುಷ್ಯನ ಮೇಲೆ ಪರಿಣಾಮ ಬೀರುವವರೆಗೂ ನಾವು ಪ್ರಾರ್ಥನೆಯನ್ನು ಉಚ್ವಾಸವಾಗಿಯೂ ನಿಶ್ವಾಸವಾಗಿಯೂ ಮಾಡಬೇಕು. ಕ್ರಮೇಣ ಈ ಪ್ರಕ್ರಿಯೆಯು ಕಲ್ಮಶಗಳನ್ನು ತೆಗೆದುಹಾಕಲು ಮತ್ತು ನಮ್ಮ ಕಠಿಣವಾದ ವರ್ತನೆಗಳನ್ನು ಮೃದುಗೊಳಿಸಲು ಪ್ರಾರಂಭಿಸುತ್ತದೆ. ಬೇರೆ ರೀತಿಯಲ್ಲಿ ಹೇಳುವುದಾದರೆ, ಪ್ರಾರ್ಥನೆಗಳು ಕೇವಲ ಸಂಗತಿಗಳನ್ನಷ್ಟೇ ಮಾರ್ಪಡಿಸುವುದಿಲ್ಲ; ಅವು ನಮ್ಮನ್ನು ಒಳಗಿನಿಂದ ಮಾರ್ಪಡಿಸಿ , ರಾಜಾಧಿರಾಜನ ಮುಂದೆ ನಿಲ್ಲಲು ಯೋಗ್ಯರನ್ನಾಗಿ ಮಾಡುತ್ತದೆ. ಆದ್ದರಿಂದ, ಈ ವರ್ಷ, ಪ್ರತಿದಿನ,ಪ್ರಾರ್ಥನೆಗಾಗಿ ನಿರ್ದಿಷ್ಟ ಸಮಯವನ್ನು ಏರ್ಪಡಿಸಿ. ಪ್ರಾರ್ಥನೆಯನ್ನು ನಿಮ್ಮ ಜೀವನಶೈಲಿಯನ್ನಾಗಿ ಮಾಡಿಕೊಳ್ಳಿ ಮತ್ತು ದೇವರೊಂದಿಗೆ ನಿರಂತರವಾಗಿ ಸಂವಹನದಲ್ಲಿರಿ.
Bible Reading: Leviticus 16-17
ಪ್ರಾರ್ಥನೆಗಳು
ತಂದೆಯೇ, ನೀವು ನನ್ನನ್ನು ವಿಜ್ಞಾಪನೆ ಮತ್ತು ಪ್ರಾರ್ಥನೆಯ ಆತ್ಮದಿಂದ ತುಂಬಿಸಬೇಕೆಂದು ಯೇಸುನಾಮದಲ್ಲಿ ನಾನು ಪ್ರಾರ್ಥಿಸುತ್ತೇನೆ. ಪ್ರಾರ್ಥನೆ ಮಾಡದಂತೆ ನನ್ನನ್ನು ತಡೆಯುವ ನನ್ನಲ್ಲಿರುವ ಪ್ರತಿಯೊಂದು ದೌರ್ಬಲ್ಯವನ್ನು ತೆಗೆದುಹಾಕಿ ನನ್ನ ಪ್ರಾರ್ಥನಾ ಜೀವಿತವನ್ನು ಹೆಚ್ಚಿಸಿ. ಇಂದಿನಿಂದ ನನ್ನ ಜೀವನವು ಪ್ರಾರ್ಥನೆಯ ಸುಗಂಧದಿಂದ ತೋಯಿಸಲ್ಪಟ್ಟು ನನ್ನನ್ನು ಆಂತರ್ಯದಿಂದ ಮಾರ್ಪಡಿಸುತ್ತದೆ ಎಂದು ಯೇಸುನಾಮದಲ್ಲಿ ನಾನು ಘೋಷಿಸುತ್ತೇನೆ . ಆಮೆನ್
Join our WhatsApp Channel

Most Read
● ನಡೆಯುವುದನ್ನು ಕಲಿಯುವುದು● ನರಕ ಎನ್ನುವುದು ನಿಜವಾಗಿ ಇರುವಂಥ ಸ್ಥಳ
● ಕೃಪೆಯ ವಾಹಕರಾಗಿ ಮಾರ್ಪಡುವುದು.
● ದಿನ 01 : 40 ದಿನಗಳ ಉಪವಾಸ ಮತ್ತು ಪ್ರಾರ್ಥನೆ
● ಕರ್ತನು ಹೃದಯವನ್ನೇ ಶೋಧಿಸುವವನಾಗಿದ್ದಾನೆ.
● ನೀವು ಯಾರೊಂದಿಗೆ ನಡೆಯುತ್ತಿದ್ದೀರಿ?
● ದಿನ 25:40 ದಿನಗಳ ಉಪವಾಸ ಮತ್ತು ಪ್ರಾರ್ಥನೆ
ಅನಿಸಿಕೆಗಳು