"ನಾನು ಯೆಹೋವನನ್ನು ಎಡೆಬಿಡದೆ ಕೊಂಡಾಡುವೆನು; ಆತನ ಸ್ತೋತ್ರವು ಯಾವಾಗಲೂ ನನ್ನ ಬಾಯಲ್ಲಿ ಇರುವದು." (ಕೀರ್ತನೆ 34:1)
ಆರಾಧನೆಯು ಅರಸನ ಪರಿಮಳದಿಂದ ನಮ್ಮನ್ನು ಆವರಿಸಿಕೊಳ್ಳುತ್ತದೆ! ವಾಸ್ತವವಾಗಿ, ಅಭಿಷೇಕದ ತೈಲದಲ್ಲಿ ತೊಯಿಸಲ್ಪಡುವ ನಿಜವಾದ ಉದ್ದೇಶವು ಶರೀರದ ಯಾವುದೇ ದುರ್ಗಂಧವನ್ನು ಮರೆಮಾಚುವುದಾಗಿದೆ. ಇದು ಅರಸನು ನಮ್ಮೊಂದಿಗೆ ಒಂದೇ ಕೋಣೆಯಲ್ಲಿ ನಿಲ್ಲಲು ಅನುವು ಮಾಡಿಕೊಡುತ್ತದೆ! ನಾನು ಇದನ್ನು ಏಕೆ ಹೇಳಲಿ? ಆತನ ಸನ್ನಿಧಿಯಲ್ಲಿ ಯಾರೂ ಸಹ ಹೊಗಳಿಕೊಳ್ಳಲು ಸಾಧ್ಯವಿಲ್ಲ (1 ಕೊರಿಂಥ 1:29).
ಆರಾಧನೆಯು ರಾಜನ ಉಪಸ್ಥಿತಿಗೆ ಪ್ರವೇಶಿಸಲು ಇರಬೇಕಾದ ಸಂಕೇತವಾಗಿದೆ. "ಸಮಸ್ತ ಭೂನಿವಾಸಿಗಳೇ, ಯೆಹೋವನಿಗೆ ಜಯಘೋಷ ಮಾಡಿರಿ. ಯೆಹೋವನನ್ನು ಸಂತೋಷದಿಂದ ಸೇವಿಸಿರಿ; ಉತ್ಸಾಹಧ್ವನಿಮಾಡುತ್ತಾ ಆತನ ಸನ್ನಿಧಿಗೆ ಬನ್ನಿರಿ. ಯೆಹೋವನೇ ದೇವರೆಂದು ತಿಳಿದುಕೊಳ್ಳಿರಿ. ನಮ್ಮನ್ನು ಉಂಟುಮಾಡಿದವನು ಆತನೇ; ನಾವು ಆತನವರು. ಆತನ ಪ್ರಜೆಯೂ ಆತನು ಪಾಲಿಸುವ ಹಿಂಡೂ ಆಗಿದ್ದೇವೆ. ಕೃತಜ್ಞತಾಸ್ತುತಿಯೊಡನೆ ಆತನ ಮಂದಿರದ್ವಾರಗಳಿಗೂ ಕೀರ್ತನೆಯೊಡನೆ ಆತನ ಅಂಗಳಗಳಿಗೂ ಬನ್ನಿರಿ; ಆತನ ಉಪಕಾರ ಸ್ಮರಿಸಿರಿ; ಆತನ ನಾಮವನ್ನು ಕೊಂಡಾಡಿರಿ." ಎಂದು ಕೀರ್ತನೆ 100:1-4 ರಲ್ಲಿ ಸತ್ಯವೇದ ಹೇಳುತ್ತದೆ,
ನೀವು ಇಲ್ಲಿರುವ ಸತ್ಯವನ್ನು ಕಂಡಿರಾ? ನೀವು ರಾಜನ ಸನ್ನಿಧಿಗೆ ಮುಖ ಗಂಟಿಕ್ಕಿಕೊಂಡು ಬರಬಾರದು ಅಥವಾ ನಿರುತ್ಸಾಹಗೊಂಡಂತೆ ಕಾಣಬಾರದು. ನೀವೂ ದೂರು ಹೇಳಲು ಬರಬಾರದು; ಆತನು ಯಾರಾಗಿದ್ದಾನೆ ಮತ್ತು ಆತನು ನಿಮಗಾಗಿ ಏನು ಮಾಡಿದನೆಂದು ಆರಾಧನೆಯಿಂದ ತುಂಬಿದ ಸಂತೋಷದ ಹೃದಯದಿಂದ ನೀವು ಬರಬೇಕು.
"ಮೊರ್ದಕೈ ನಡೆದದ್ದನ್ನೆಲ್ಲಾ ಕೇಳಿದಾಗ ಬಟ್ಟೆಗಳನ್ನು ಹರಕೊಂಡು ಗೋಣಿತಟ್ಟನ್ನು ಕಟ್ಟಿಕೊಂಡು ಬೂದಿಯನ್ನು ಹಾಕಿಕೊಂಡು ಪಟ್ಟಣದ ಮಧ್ಯದಲ್ಲಿ ಹೋಗುತ್ತಾ ದುಃಖಾತಿಶಯದಿಂದ ಗೋಳಾಡಿ ಅರಮನೆಯ ಹೆಬ್ಬಾಗಲಿನ ಮುಂದೆ ಬಂದನು; ಗೋಣಿತಟ್ಟು ಕಟ್ಟಿಕೊಂಡವರು ಒಳಗೆ ಹೋಗಬಾರದೆಂದು ಅಪ್ಪಣೆಯಾಗಿತ್ತು."ಎಂದು ಎಸ್ತರ್ 4: 1-2 ರಲ್ಲಿ ಸತ್ಯವೇದ ಹೇಳುತ್ತದೆ, ಈ ವಾಕ್ಯವು ರಾಜನ ಮುಂದೆ ದುಃಖದಿಂದಲೂ ಮತ್ತು ವಿಕಾರತೆಯಿಂದಲೂ ಕಾಣಿಸಿಕೊಳ್ಳುವಂತದ್ದು ಅಪರಾಧ ಎಂದು ತೋರಿಸುತ್ತದೆ. ಆದುದರಿಂದ, ಮೊರ್ದೆಕೈ ಕೆಟ್ಟ ಸುದ್ದಿಯನ್ನು ಕೇಳಿದರೂ, ಅವನು ರಾಜನ ಸನ್ನಿಧಿಯಿಂದ ಅಂತರವನ್ನು ಕಾಯ್ದುಕೊಂಡನು.
ಅಲ್ಲದೆ, ನೆಹೆಮಿಯಾ 2: 1-2 ಪುಸ್ತಕದಲ್ಲಿ, ಸತ್ಯವೇದ ಹೇಳುವುದೇನೆಂದರೆ,"ನೆಹೆಮಿಯನಾದ ನಾನು ಅರಸನ ಪಾನಸೇವಕನಾಗಿದ್ದೆನು. ಅರಸನಾದ ಅರ್ತಷಸ್ತನ ಇಪ್ಪತ್ತನೆಯ ವರುಷದ ಚೈತ್ರಮಾಸದಲ್ಲಿ ಅರಸನು ದ್ರಾಕ್ಷಾರಸಪಾನಮಾಡುವ ಹೊತ್ತಿನಲ್ಲಿ ನಾನು ದ್ರಾಕ್ಷಾರಸವನ್ನು ತಂದು ಅವನಿಗೆ ಕೊಟ್ಟೆನು. ನಾನು ಅವನ ಸನ್ನಿಧಿಯಲ್ಲಿ ಹಿಂದೆ ಎಂದೂ ಖಿನ್ನನಾಗಿರಲಿಲ್ಲ. ಅರಸನು ನನಗೆ - ನೀನು ಕಳೆಗುಂದಿದವನಾಗಿ ಕಾಣುವದೇಕೆ? ನಿನಗೆ ದೇಹಾಲಸ್ಯವಿಲ್ಲವಲ್ಲಾ; ಇದಕ್ಕೆ ಮನೋವೇದನೆಯೇ ಹೊರತು ಬೇರೇನೂ ಕಾರಣವಲ್ಲ ಎಂದು ಹೇಳಲು ನನಗೆ ಮಹಾಭೀತಿಯುಂಟಾಯಿತು."
ನೆಹೆಮಿಯನು ಅರಸನಿಗೆ ಹತ್ತಿರವಾಗಿದ್ದನು ಏಕೆಂದರೆ ಅವನ ಕೆಲಸವು ಅರಸನಿಗೆ ದ್ರಾಕ್ಷ ರಸವನ್ನು ಹಸ್ತಾಂತರಿಸುವ ಮೊದಲು ರುಚಿ ನೋಡುವುದಾಗಿತ್ತು. ಆದರೆ ಈ ದಿನ, ಅವನು ದುಃಖಿತನಾಗಿದ್ದನು ಮತ್ತು ಅರಸನು ಆ ಕಳೆಗುಂದಿದ ಮುಖವನ್ನು ಕಡೆಗಣಿಸಲು ಹೋಗಲಿಲ್ಲ ಏಕೆಂದರೆ ಅದು ಅವನ ಉಪಸ್ಥಿತಿಯಲ್ಲಿ ರೂಢಿಯಾದ್ದಾದಾಗಿರಲಿಲ್ಲ. ಅರಸನು ಏನಾದರೂ ಕೆಟ್ಟ ಮನಸ್ಥಿತಿಯಲ್ಲಿದ್ದರೆ, ನೆಹೆಮಿಯನನ್ನು ಮರಣದಂಡನೆಗೆ ಗುರಿಮಾಡಬಹುದು ಎಂದು ನೆಹೆಮಿಯಾ ಹೆದರುತ್ತಿದ್ದನು ಎಂದು ಸತ್ಯವೇದ ಹೇಳುತ್ತದೆ.
ಆದ್ದರಿಂದ, ಎಸ್ತರಳು ಆರಾಧನೆಯ ಪರಿಮಳವನ್ನು ಧರಿಸಿದಂತೆ, ನಾವು ಕೂಡ ಧರಿಸಿಕೊಳ್ಳಬೇಕು. ನಮ್ಮ ಜೀವನವು ದೇವರಿಗೆ ನಿಜವಾದ ಆರಾಧನೆಯನ್ನು ತರುವಂತದ್ದಾಗಿರಬೇಕು. ಸತ್ಯವೇನೆಂದರೆ ಪರಿಶೋಧನೆಗಳು ಮತ್ತು ಪ್ರತಿಕೂಲತೆಯ ಸಮಯದಲ್ಲೂ ನಾವು ಮಾಡುವ ಆರಾಧನೆಯು ದೇವರಿಗೆ ತನ್ನ ಮಧುರವಾದ ಪರಿಮಳವನ್ನು ಬಿಡುಗಡೆ ಮಾಡುತ್ತದೆ.ವಿಶೇಷವಾಗಿ ಆಪತ್ತಿನ ಸಮಯದಲ್ಲಿ ಅರ್ಪಿಸುವ ಸ್ತುತಿಯಜ್ಞವು ರಾಜಾಧಿರಾಜನಿಗೆ ಮಧುರವೂ ಮತ್ತು ಆಹ್ಲಾದಕರವಾಗಿಯೂ ಇರುತ್ತದೆ. ಇದು ಅನುಮಾನ ಮತ್ತು ಸಂದೇಹದ ಬದಲಿಗೆ ಭರವಸೆ ಮತ್ತು ನಂಬಿಕೆಯ ರೂಪದ ಆರಾಧನೆಯಾಗಿರುತ್ತದೆ. ಯಜ್ಞವು ನಮಗೆ ವೆಚ್ಚವಾಗುವ ಸಂಗತಿಯಾಗಿದೆ. ಬೇರೆ ರೀತಿಯಲ್ಲಿ ಹೇಳುವುದಾದರೆ, ನಾವು ನಮ್ಮ ಆರಾಧನೆಯನ್ನು ಕೇವಲ ನಮಗೆಲ್ಲಾ ಸರಿಯಾಗಿದೆ ಎನ್ನುವಂತ ಸಮಯಗಳಿಗೆ ಮಾತ್ರ ಸೀಮಿತಗೊಳಿಸಬಾರದು ಆದರೆ ಸಂಗತಿಗಳು ನಮ್ಮ ಪರವಾಗಿ ಇಲ್ಲದಿದ್ದಾಗಲೂ ಸಹ ನಾವು ಆರಾಧನೆ ಮಾಡುವವರಾಗಿರಬೇಕು.
ಡಿ.ಎ. ಕಾರ್ಸನ್ ರವರು ಒಮ್ಮೆ ಹೀಗೆ ಹೇಳಿದ್ದಾರೆ "ಆರಾಧನೆಯು ತಮ್ಮ ಸೃಷ್ಟಿಕರ್ತ-ದೇವರಿಗೆ ಆತನೇ ಎಲ್ಲಾ ಗೌರವ ಮತ್ತು ಮಹಿಮೆಗೆ ಪಾತ್ರನಾಗಿದ್ದೀಯ ಎಂದು ನಿಖರವಾಗಿ ಸಂತೋಷಕರವಾಗಿ ಹೇಳುವ ಸಕಲ ನೈತಿಕತೆ, ಸಂವೇದನ ಶೀಲತೆ ಹೊಂದಿರುವ ಜೀವಿಗಳ ಪ್ರತಿಕ್ರಿಯೆಯಾಗಿದೆ, ಏಕೆಂದರೆ ಆತನೇ ಅದಕ್ಕೆ ಯೋಗ್ಯನಾಗಿರುತ್ತಾನೆ, .
ಅರಸನಾದ ದಾವೀದನು ಈಗಾಗಲೇ ಅರಸನಾಗಿ ಅಭಿಷೇಕಿಸಲ್ಪಟ್ಟಿದ್ದನು ಆದರೂ ಅವನ ಜೀವಿತದಲ್ಲಿ ಯಾವ ಸಂಗತಿಗಳು ಸರಿಯಾಗಿರಲಿಲ್ಲ. ಜೀವನದಲ್ಲಿ ಎಲ್ಲಾ ಸಂಗತಿಗಳು ಅವನಿಗೆ ವಿರುದ್ಧವಾಗಿ ನಡೆಯುತ್ತಿತ್ತು, ಆದರೂ ಅಂತಹ ಸಮಯದಲ್ಲಿಯೂ ಅವನು , "ನನ್ನ ಮನಸ್ಸು ಯೆಹೋವನಲ್ಲಿ ಹಿಗ್ಗುತ್ತಿರುವದು; ಇದನ್ನು ದೀನರು ಕೇಳಿ ಸಂತೋಷಿಸುವರು. ನನ್ನೊಡನೆ ಯೆಹೋವನನ್ನು ಕೊಂಡಾಡಿರಿ; ನಾವು ಒಟ್ಟಾಗಿ ಆತನ ಹೆಸರನ್ನು ಘನಪಡಿಸೋಣ." (ಕೀರ್ತನೆ 34:2-3) ಎಂದು ಹಾಡಿದನು.
ಆದ್ದರಿಂದ, ಅವಮಾನವನ್ನು ತಳ್ಳಿಹಾಕಿ ನಿಮ್ಮ ಹೃದಯವನ್ನು ಆರಾಧನೆಯಿಂದ ತುಂಬಿಸಿಕೊಳ್ಳಿ. ಆ ಸವಾಲುಗಳ ಮಧ್ಯೆಯಲ್ಲೂ ನಿಮ್ಮನ್ನು ರಕ್ಷಿಸುವಂತೆ ನೀವು ದೇವರನ್ನೇ ನಂಬುತ್ತೀರಿ ಎಂಬುದಕ್ಕೆ ನಿಮ್ಮ ಸ್ತುತಿ - ಕೊಂಡಾಟವೇ ಪುರಾವೆಯಾಗಿದೆ. ನೀನು ಈಗಾಗಲೇ ಸಾಕಷ್ಟು ಅತ್ತಿದೀಯ.ಸಾಕಿನ್ನು ಇದು ಆರಾಧನೆ ಮಾಡುವ ಸಮಯ.
Bible Reading: Leviticus 18-20
ಪ್ರಾರ್ಥನೆಗಳು
ತಂದೆಯೇ, ನಿಮ್ಮ ಒಳ್ಳೆಯತನಕ್ಕಾಗಿ ಯೇಸುನಾಮದಲ್ಲಿ , ನಾನು ನಿಮಗೆ ಸ್ತೋತ್ರ ಹೇಳುತ್ತೇನೆ.ನಿನ್ನ ನಂಬಿಗಸ್ಥಿಕೆಗಾಗಿ ಯಾವಾಗಲೂ ನಿನ್ನನ್ನೇ ಆರಾಧಿಸುತ್ತೇನೆ. ನೀನು ನನಗೆ ಒಳ್ಳೆಯವನಾಗಿರುವುದರಿಂದ ನಿನ್ನ ಪವಿತ್ರ ನಾಮವನ್ನು ಸ್ತುತಿಸುತ್ತೇನೆ. ನನ್ನ ಆರಾಧನೆಯಲ್ಲಿ ಸ್ಥಿರತೆಯನ್ನು ಕಾಪಾಡಿಕೊಳ್ಳಲು ನೀನು ನನಗೆ ಸಹಾಯ ಮಾಡಬೇಕೆಂದು ಯೇಸುನಾಮದಲ್ಲಿ ಪ್ರಾರ್ಥಿಸುತ್ತೇನೆ. ನನ್ನ ಜೀವನವು ಯಾವಾಗಲೂ ಆರಾಧನೆಯ ಪರಿಮಳವನ್ನು ಹೊರಸೂಸಲಿ ಎಂದು ನಾನು ಪ್ರಾರ್ಥಿಸುತ್ತೇನೆ. ಆದುದರಿಂದ ಇಂದಿನಿಂದ ಶೋಕಾಚರಣೆಯ ಬಟ್ಟೆಯನ್ನು ಬದಿಗಿಟ್ಟು ಸ್ತೋತ್ರದ ವಸ್ತ್ರವನ್ನು ಯೇಸುನಾಮದಲ್ಲಿ ಧರಿಸಿಕೊಳ್ಳುತ್ತೇನೆ ಆಮೆನ್.
Join our WhatsApp Channel

Most Read
● ದಿನ 11:40 ದಿನಗಳ ಉಪವಾಸ ಪ್ರಾರ್ಥನೆ.● ಮೂರು ಆಯಾಮಗಳು
● ದಿನ 13:40 ದಿನಗಳ ಉಪವಾಸ ಮತ್ತು ಪ್ರಾರ್ಥನೆ.
● ದಿನ 08:40 ದಿನಗಳ ಉಪವಾಸ ಮತ್ತು ಪ್ರಾರ್ಥನೆ
● ಸರಿಪಡಿಸಿಕೊಳ್ಳಿರಿ
● ಒಂದು ಹೊಸ ಪ್ರಭೇದ
● ಬೀಜದಲ್ಲಿರುವ ಶಕ್ತಿ -2
ಅನಿಸಿಕೆಗಳು