ಅನುದಿನದ ಮನ್ನಾ
2
1
58
ನೀವು ದೇವರ ಉದ್ದೇಶಕ್ಕಾಗಿ ನಿಯೋಜಿಸಲ್ಪಟ್ಟಿದ್ದೀರಿ
Monday, 17th of February 2025
Categories :
ಎಸ್ತರ್ ರಹಸ್ಯಗಳು: ಸರಣಿ (Secrets of Esther: Series)
"ಅದಕ್ಕೆ ಪಿಲಾತನು - ಹಾಗಾದರೆ ನೀನು ಅರಸನು ಹೌದಲ್ಲವೇ ಅಂದನು. ಯೇಸು ಅವನಿಗೆ - ನನ್ನನ್ನು ಅರಸನೆಂದು ನೀನೇ ಹೇಳಿದ್ದೀ. ನಾನು ಸತ್ಯದ ವಿಷಯದಲ್ಲಿ ಸಾಕ್ಷಿ ಹೇಳುವದಕ್ಕೋಸ್ಕರ ಹುಟ್ಟಿದವನು, ಅದಕ್ಕೋಸ್ಕರವೇ ಈ ಲೋಕಕ್ಕೆ ಬಂದಿದ್ದೇನೆ. ಸತ್ಯಪರರೆಲ್ಲರು ನನ್ನ ಮಾತಿಗೆ ಕಿವಿಕೊಡುತ್ತಾರೆ ಎಂದು ಉತ್ತರಕೊಟ್ಟನು." (ಯೋಹಾನ 18:37)
ಎಸ್ತೇರಳನ್ನು ಏಕೆ ರಾಣಿಯನ್ನಾಗಿ ಮಾಡಲಾಯಿತು?
ಅವಳನ್ನು ಸ್ಪರ್ಧೆಯಲ್ಲಿ ವಿಜೇತಳನ್ನಾಗಿ ಮಾಡಲು ದೇವರು ರಾಜಾಜ್ಞೆಗಳನ್ನು ಏಕೆ ಮುರಿದನು? ಇನ್ನೂ ಉತ್ತಮವಾದ ಆಯ್ಕೆಗಳಿರುವಾಗ ದೇವರು ಅನಾಥರಿಗೆ ಏಕೆ ಅಂತಹ ದೊಡ್ಡ ಕೃಪೆಯನ್ನು ಅನುಗ್ರಹಿಸಿದನು? ಅಂತಹ ವಿನಮ್ರ ಹಿನ್ನೆಲೆಯ ಸ್ತ್ರೀಯ ಮೇಲೆ ಪರಲೋಕದ ಮಹಿಮೆಯ ಬೆಳಕನ್ನು ಏಕೆ ಬೀರಲಾಯಿತು ? ವಿಶೇಷವಾಗಿ ದೇವರು ತನ್ನ ಒಳ್ಳೆಯತನದಿಂದ ನಮ್ಮನ್ನು ಬೆರಗುಗೊಳಿಸಿದಾಗ ಈ ಪ್ರಶ್ನೆಗಳನ್ನು ನಾವು ಎಷ್ಟು ಬಾರಿ ನಮ್ಮಲ್ಲಿ ಕೇಳಿಕೊಳ್ಳುತ್ತೇವೆ? ದೇವರು ನಮ್ಮನ್ನೇ ಏಕೆ ಆಶೀರ್ವದಿಸಬೇಕು? ನಮಗೇ ಏಕೆ ಅಂತಹ ಸಾಂತ್ವನವನ್ನು ನೀಡಬೇಕು ಎಂದು ನಾವು ಎಷ್ಟು ಬಾರಿ ನಮ್ಮಲ್ಲೇ ನಾವು ಕೇಳಿಕೊಳ್ಳುತ್ತೇವೆ? ನಮ್ಮಲ್ಲಿ ಹಲವರು, ಇದೊಂದು ಸಂಪೂರ್ಣವಾಗಿ ನಮ್ಮ ಅದೃಷ್ಟ ಎಂದು ಭಾವಿಸುತ್ತೇವೆ. ಇತರರು ಅದನ್ನು ಅವರ ಕಠಿಣ ಪರಿಶ್ರಮ ಅಥವಾ ಅವರ ಮಾನ್ಯತೆ ಮತ್ತು ಬುದ್ಧಿಶಕ್ತಿಯ ಪರಿಣಾಮವಾಗಿ ಇದು ದೊರಕಿದೆ ಎಂಬುದಾಗಿ ನೋಡುತ್ತಾರೆ. ಇನ್ನೂ ಕೆಲವರು ಜೀವನದಲ್ಲಿ ತಮ್ಮ ರೂಪಾಂತರವನ್ನು ಇತರರನ್ನು ಹತ್ತಿಕ್ಕುವ ಅಥವಾ ಸ್ವಾರ್ಥದಿಂದ ಬದುಕುವ ಸಮಯ ಎಂದು ಕಂಡುಕೊಳ್ಳುತ್ತಾರೆ. ಆದರೆ, ಎಸ್ತರಳ ಸಂಗತಿಯಲ್ಲಿ ಅದು ಹಾಗೆ ಇರಲಿಲ್ಲ.
ಎಸ್ತೇರಳು 4: 13-14 (NASB) ರಲ್ಲಿ ಸತ್ಯವೇದ ಹೇಳುವುದೇನೆಂದರೆ "ಅವನು ತಿರಿಗಿ ಎಸ್ತೇರಳಿಗೆ - ಯೆಹೂದ್ಯರೆಲ್ಲಾ ನಾಶವಾದರೂ ನಾನೊಬ್ಬಳು ಅರಮನೆಯಲ್ಲಿರುವದರಿಂದ ಉಳಿಯುವೆನು ಎಂದು ಭಾವಿಸಿಕೊಳ್ಳಬೇಡ. ನೀನು ಈಗ ಸುಮ್ಮನಿದ್ದು ಬಿಟ್ಟರೆ ಬೇರೆ ಕಡೆಯಿಂದ ಯೆಹೂದ್ಯರಿಗೆ ಸಹಾಯವೂ ವಿಮೋಚನೆಯೂ ಉಂಟಾದಾವು; ನೀನಾದರೋ ನಿನ್ನ ತಂದೆಯ ಮನೆಯವರೊಡನೆ ನಾಶವಾಗುವಿ. ಇದಲ್ಲದೆ ನೀನು ಇಂಥ ಸಂದರ್ಭಕ್ಕಾಗಿಯೇ ಪಟ್ಟಕ್ಕೆ ಬಂದಿರಬಹುದು, ಯಾರು ಬಲ್ಲರು ಎಂದು ಹೇಳಿ ಕಳುಹಿಸಿದನು"
ಯಾಕೆಂದರೆ ಆಗ ಪರ್ಷಿಯಾದಲ್ಲಿ ಯಹೂದಿಗಳನ್ನು ಕೊಲ್ಲಲ್ಪಡಬೇಕೆಂಬ ಆದೇಶವನ್ನು ಹೊರಡಿಸಲಾಗಿತ್ತು. ಅವಳು ಪರ್ಷಿಯಾದ ರಾಣಿಯಾಗಿದ್ದರೂ, ಅವಳು ಈ ಆದೇಶವನ್ನು ವ್ಯತ್ಯಾಸವನ್ನು ಮಾಡಬಹುದಾದ ಅಧಿಕಾರ ತನಗಿದೆ ಎಂಬುದನ್ನು ಎಸ್ತರಳು ತಿಳಿದಿರಲಿಲ್ಲ. ಆದರೆ ಆಕೆಯ ಸೋದರಸಂಬಂಧಿ, ಮೊರ್ದೆಕೈ, ಎಸ್ತರಳು ಈ ಬಿಕ್ಕಟ್ಟಿಗಾಗಿಯೇ ದೇವರಿಂದ ಅನನ್ಯವಾಗಿ ಸಿದ್ಧಪಡಿಸಿದ್ದಾಳೆಂದು ಗುರುತಿಸಿದನು . ಅವಳಿಗೆ ಸಂದೇಹವಿದ್ದರೂ, ಮೊರ್ದಕೈ “ಇದಲ್ಲದೆ ನೀನು ಇಂಥ ಸಂದರ್ಭಕ್ಕಾಗಿಯೇ ಪಟ್ಟಕ್ಕೆ ಬಂದಿರಬಹುದು, ಯಾರು ಬಲ್ಲರು?” ಎಂದು ಹೇಳಿದನು. ಸ್ವಲ್ಪ ಸಮಯದ ಉಪವಾಸದ ನಂತರ, ಎಸ್ತರಳು ರಾಜನ ಬಳಿಗೆ ಹೋದಳು. ಅವಳ ಧೈರ್ಯದ ನಡೆಯು ಇತಿಹಾಸದ ಹಾದಿಯನ್ನೇ ಬದಲಾಯಿಸಿ ತನ್ನ ಜನರನ್ನು ವಿನಾಶದಿಂದ ರಕ್ಷಿಸುವಂತೆ ಮಾಡಿತು.
ನಾವು ವ್ಯತ್ಯಾಸವನ್ನು ಉಂಟು ಮಾಡಲು ಅಸಮರ್ಪಕ, ಅನರ್ಹ ಅಥವಾ ಅಸಮರ್ಥರಾಗಲು ಹಲವು ಕಾರಣಗಳಿವೆ. ನಾವು ಬೇರೆಡೆ ಎಲ್ಲೋ ಇರಬಹುದು ಅಥವಾ ವಿಭಿನ್ನವಾದ ಕಾರ್ಯಗಳನ್ನು ಮಾಡುತ್ತಿರಬಹುದು. ಇಂದು, ದೇವರು ನಿಮ್ಮನ್ನು "ಇಂತಹ ಸಮಯಕ್ಕಾಗಿ" ಕರೆದಿದ್ದಾನೆ. ನೀವು ಎಲ್ಲಿದ್ದೀರೋ, ನೀವು ಏನು ಮಾಡುತ್ತಿದ್ದೀರೋ ಎಂಬುದು ಆಕಸ್ಮಿಕವಲ್ಲ. ಕರ್ತನು ತನ್ನ ರಾಜ್ಯಕ್ಕಾಗಿ ನಿರ್ದಿಷ್ಟ ಕಾರ್ಯಗಳನ್ನು ಗಮನಾರ್ಹ ರೀತಿಯಲ್ಲಿ ಸಾಧಿಸಲು ನಿಮ್ಮನ್ನು ಅನನ್ಯವಾಗಿ ಸಿದ್ಧಪಡಿಸಿದ್ದಾನೆ. ನಿಮ್ಮ ಜೀವನದಲ್ಲಿ ನಡೆಯುವ ಪ್ರತಿಯೊಂದು ಘಟನೆಗೂ ದೇವರು ನಿಗದಿತ ಸಮಯವನ್ನು ಹೊಂದಿದ್ದಾನೆ ಎಂಬುದನ್ನು ನೀವು ನೆನಪಿಟ್ಟುಕೊಳ್ಳಬೇಕು.
ನೀವು ಹಾದು ಹೋಗುತ್ತಿರುವ ಎಲ್ಲದಕ್ಕೂ ದೇವರಿಗೆ ಒಂದು ಉದ್ದೇಶವಿದೆ. ಆತನ ಯೋಜನೆಯು ಕೇವಲ ನಿಮ್ಮೊಬ್ಬರ ಯಶಸ್ಸಿನ ಮಟ್ಟದಲ್ಲಿಲ್ಲ. ದೇವರು ತನ್ನ ಕೃಪೆಯನ್ನು ಯಾರ ಮೇಲೂ ವ್ಯರ್ಥವಾಗಿ ಹೂಡುವುದಿಲ್ಲ. ದೇವರು ನಿಮ್ಮನ್ನು ಅಲ್ಲಿ ತನ್ನ ರಾಜ್ಯದ ಉದ್ದೇಶಕ್ಕಾಗಿ ಇರಿಸಿದ್ದಾನೆ. ನಿಮ್ಮ ಕೈಯಲ್ಲಿರುವ ಸಂಪನ್ಮೂಲಗಳು ದೇವರ ರಾಜ್ಯವನ್ನು ಮುನ್ನಡೆಸುವ ಮತ್ತು ವಿಸ್ತರಿಸುವಂತದ್ದಾಗಿದೆ. "ಮತ್ತೊಮ್ಮೆ ಹೀಗೆ ಸಾರು - ಸೇನಾಧೀಶ್ವರ ಯೆಹೋವನು ಇಂತೆನ್ನುತ್ತಾನೆ - ಇನ್ನು ನನ್ನ ಪಟ್ಟಣಗಳಲ್ಲಿ ಶುಭವು ತುಂಬಿ ತುಳುಕುವದು; ಯೆಹೋವನು ಇನ್ನು ಚೀಯೋನನ್ನು ಸಂತೈಸುವನು, ಯೆರೂಸಲೇಮನ್ನು ಮತ್ತೆ ತನಗಾಗಿ ಆರಿಸಿಕೊಳ್ಳುವನು." ಎಂದು ಜೆಕರ್ಯ 1:17 ರಲ್ಲಿ ಸತ್ಯವೇದ ಹೇಳುತ್ತದೆ.
'ಸುವಾರ್ತೆಯ ಹರಡುವಿಕೆಗೆ ಭಾರೀ ಆರ್ಥಿಕ ಹರಿವಿನ ಅಗತ್ಯವಿದ್ದು ದೇವರು ಆತನ ಸಂಪತ್ತನ್ನು ನಂಬಿಗಸ್ತಾರಾಗಿ ನಿರ್ವಹಿಸಿಕೊಡುವವರನ್ನು ಹುಡುಕುತ್ತಿದ್ದಾನೆ.
ಅವರಿಗೆ ಅಗತ್ಯವಿಲ್ಲದ ಮನೆಗಳನ್ನು ನಿರ್ಮಿಸಲು ಅಥವಾ ಅವರು ಎಂದಿಗೂ ಸವಾರಿ ಮಾಡದ ಕಾರುಗಳನ್ನು ಖರೀದಿಸಲು ಅವರ ಸಂಪನ್ಮೂಲಗಳನ್ನು ವ್ಯಯ ಮಾಡುವ ಜನರಿದ್ದಾರೆ. ಬಹುಶಃ ನೀವು ಆತನ ಉದ್ದೇಶಕ್ಕಾಗಿ ಇಂತಹ ಸಮಯದಲ್ಲಿ ಆಶೀರ್ವದಿಸಲ್ಪಟ್ಟಿದ್ದೀರಿ. ಎಸ್ತರಳು ತನಗಾಗಿ ಮಾತ್ರ ರೂಪಾಂತರಗೊಳ್ಳದೆ ಅನೇಕರ ಭವಿಷ್ಯವನ್ನು ಭದ್ರಪಡಿಸಲು ರಾಣಿಯ ಸ್ಥಾನಕ್ಕೆ ಬಂದಿದ್ದಳು. ದೇವರು ಅವರ ಭವಿಷ್ಯದ ದಿನವನ್ನು ಆಗಲೇ ನೋಡಿದ್ದನು ಮುಂದೆ ಆತನ ಜನರು ತಮ್ಮ ಜೀವವನ್ನು ರಕ್ಷಿಸಿಕೊಳ್ಳಲು ಬೇಡಿಕೊಳ್ಳಬೇಕಾದ ಸಮಯ ಬರುತ್ತದೆ ಎಂಬುದನ್ನು ಆತನು ಆಗಲೇ ತಿಳಿದಿದ್ದನು , ಆದ್ದರಿಂದಲೇ , ಆತನು ಮುಂದೆ ತನ್ನ ಜೀವನಕ್ಕಾಗಿ ದೇವರ ಉದ್ದೇಶವನ್ನು ನೆನಪಿಸಿಕೊಳ್ಳುವ ಒಬ್ಬಳನ್ನು ರಕ್ಷಕಳಾಗಿ ಕಳುಹಿಸಿದನು.
ನನ್ನ ಸ್ನೇಹಿತನೇ, ಸಂದೇಹ ಪಡಬೇಡ ಅಥವಾ ನಿರುತ್ಸಾಹಗೊಳ್ಳಬೇಡ ಅಥವಾ ಭಯಪಡಲೂ ಬೇಡ. ದೇವರನ್ನು ನಂಬು ಮತ್ತು ನಿನ್ನ ಜೀವನಕ್ಕಾಗಿ ಇರುವ ಆತನ ಕರೆಯ ಕಡೆಗೆ ಗಮನ ಕೊಡು. ಆತನು ನಿಮ್ಮನ್ನು ತನ್ನ ಉದ್ದೇಶಕಾಗಿಯೇ, ಈ ದಿನಾಂಕಕ್ಕಾಗಿಯೇ,ಅಂತಹ ಸಂದರ್ಭಕ್ಕಾಗಿಯೇ ಕರೆದಿದ್ದಾನೆ. .ನೀವು ಪೂರೈಸಲು ಒಂದು ನಿಯೋಜನೆಯನ್ನು ಹೊಂದಿರುವಿರಿ. ಇದು ನಿಮಗೆ ತುಂಬಾ ದೊಡ್ಡದಾಗಿ ಕಾಣಿಸಬಹುದು ಆದರೆ ದೇವರು ನಾನು ನಿಮಗೆ ಸಹಾಯ ಮಾಡುತ್ತೇನೆ ಎಂದು ಭರವಸೆ ನೀಡುತ್ತಾನೆ.
Bible Reading: Numbers 8-10
ಪ್ರಾರ್ಥನೆಗಳು
ತಂದೆಯೇ , ನಾನು ಆಕಸ್ಮಿಕವಾಗಿ ಇಲ್ಲಿಲ್ಲದ ಕಾರಣ ಯೇಸುನಾಮದಲ್ಲಿ ನಿನಗೆ ಸ್ತೋತ್ರ ಸಲ್ಲಿಸುತ್ತೇನೆ. ನನ್ನ ಜೀವನದ ಉದ್ದೇಶವನ್ನು ನಾನು ಅರಿತುಕೊಳ್ಳುವಂತೆ ನೀನು ನನ್ನ ಮನೋನೇತ್ರಗಳನ್ನು ತೆರೆಯಬೇಕೆಂದು ನಾನು ಯೇಸುನಾಮದಲ್ಲಿ ಪ್ರಾರ್ಥಿಸುತ್ತೇನೆ. ಈ ಸಂಪನ್ಮೂಲಗಳು, ಪ್ರಭಾವದ ಸ್ಥಾನ ಮತ್ತು ಪ್ರತಿಭೆಗಳಿಂದ ನೀವು ನನ್ನನ್ನು ಏಕೆ ಆಶೀರ್ವದಿಸಿದ್ದೀರಿ ಎಂದು ಅರಿತುಕೊಳ್ಳಲು ನನಗೆ ಸಹಾಯ ಮಾಡು . ನನ್ನಲ್ಲಿರುವ ಎಲ್ಲವನ್ನೂ ನಿಮ್ಮ ಘನಕ್ಕಾಗಿಯೇ ಬಳಸುವ ದೀನ ಹೃದಯವನ್ನು ಯೇಸುವಿನ ಹೆಸರಿನಲ್ಲಿ ಅನುಗ್ರಹಿಸಬೇಕೆಂದು ಪ್ರಾರ್ಥಿಸುತ್ತೇನೆ. ಆಮೆನ್.
Join our WhatsApp Channel

Most Read
● ಇತರರೊಂದಿಗೆ ಸಮಾಧಾನದಿಂದ ಜೀವಿಸಿರಿ● ನಂಬಿಕೆಯಲ್ಲಿರುವ ಬಲ
● ಬದಲಾಗಲು ಇರುವ ತೊಡಕುಗಳು.
● ಆರಾಧನೆಗೆ ಬೇಕಾದ ಇಂಧನ
● ದಿನ 17:40 ದಿನಗಳ ಉಪವಾಸ ಪ್ರಾರ್ಥನೆ.
● ಕನಸು ಕಾಣುವ ಧೈರ್ಯ
● ಭಯದ ಆತ್ಮ
ಅನಿಸಿಕೆಗಳು