ಅನುದಿನದ ಮನ್ನಾ
2
0
70
ಇದು ನಿಮಗಾಗಿ ಬದಲಾಗುತ್ತಿದೆ
Thursday, 20th of February 2025
Categories :
ಎಸ್ತರ್ ರಹಸ್ಯಗಳು: ಸರಣಿ (Secrets of Esther: Series)
"ವೈರಿಗಳ ಮುಂದೆಯೇ ನೀನು ನನಗೋಸ್ಕರ ಔತಣವನ್ನು ಸಿದ್ಧಪಡಿಸುತ್ತೀ; ನನ್ನ ತಲೆಗೆ ತೈಲವನ್ನು ಹಚ್ಚಿಸುತ್ತೀ. ನನ್ನ ಪಾತ್ರೆಯು ತುಂಬಿ ಹೊರಸೂಸುತ್ತದೆ".(ಕೀರ್ತನೆ 23:5)
ನಿಮ್ಮ ಪರವಾಗಿ ಸಂಗತಿಗಳನ್ನು ಹೇಗೆ ಬದಲಾಯಿಸಬೇಕೆಂದು ದೇವರಿಗೆ ತಿಳಿದಿದೆ. ನಿಮ್ಮ ವಿರುದ್ಧವಾಗಿ ದುಷ್ಟರು ಮಾಡುವ ಯೋಜನೆಯನ್ನು ರದ್ದುಪಡಿಸುವ ಮತ್ತು ನಿಮ್ಮ ಪರವಾಗಿ ಕಾರ್ಯ ಮಾಡುವ ಹಸ್ತವನ್ನು ಆತನು ಹೊಂದಿದ್ದಾನೆ. ನೀವು ಗೆಲ್ಲುವವರೆಗೂ ಆತನು ತನ್ನ ಕೈಯನ್ನು ಹಿಂದೆಗೆಯುವುದಿಲ್ಲ. ಕೊನೆಯ ಕ್ಷಣದಲ್ಲಿ ವಿಜೇತರನ್ನು ನಿರ್ಧರಿಸಿದಂತ ಫುಟ್ಬಾಲ್ ಪಂದ್ಯಗಳನ್ನು ನಾನು ನೋಡಿದ್ದೇನೆ. ಅದೇ ಧಾಟಿಯಲ್ಲಿ, ನೀವು ಗೆಲ್ಲುವವರೆಗೂ ಇದೂ ಸಹ ಮುಗಿಯುವುದಿಲ್ಲ.
ಬಹುಶಃ ಈಗ ನಿಮ್ಮ ಜೀವನವು ಕಷ್ಟಕರವಾಗಿರಬಹುದು. ಸೈತಾನನು ನಿಮ್ಮನ್ನು ಗೋಡೆಯ ಅಂಚಿಗೆ ತಳ್ಳುತ್ತಿರಬಹುದು ಮತ್ತು ಇದುವೇ ನಿಮ್ಮ ಜೀವನದ ಅಂತ್ಯ ಎಂದು ನಿಮಗೆ ತೋರುತ್ತಿರಬಹುದು. ಬಹುಶಃ ನೀವು ಬಹಳ ಸಾಲದಲ್ಲಿದ್ದು ಅದರ ಭಾರವು ಅಗಾಧವಾಗಿ ತೋರುತ್ತಿರಬಹುದು. ಸಾಲ ತೀರಿಸಲು ದಾರಿ ಕಾಣದೆ ನದಿಗೆ ಹಾರಿ ಮುಳುಗಿದ ಒಬ್ಬ ವ್ಯಕ್ತಿಯ ಬಗ್ಗೆ ನಾನು ಕೇಳಿದ್ದೇನೆ. ಸಾಲದ ಸವಾಲುಗಳ ಕಾರಣದಿಂದಾಗಿ ಈಗ ನೀವೂ ಸಹ ಆತ್ಮಹತ್ಯೆಯ ಆಲೋಚನೆಗಳನ್ನು ಮಾಡುತ್ತಿದ್ದೀರಾ ? ಆದರೆ ನಿಮಗಾಗಿ ನನ್ನಲ್ಲಿ ಒಂದು ಒಳ್ಳೆಯ ಸುದ್ದಿ ಇದೆ. ಅದು ನೀವು ಬದುಕನ್ನು ಬದಲಾಯಿಸುವ ದೇವರನ್ನು ಸೇವಿಸುವವರಾಗಿದ್ದೀರಿ ಎಂಬುದೇ.
"ಕೂಡಲೆ ಅರಸನು ಹಾಮಾನನಿಗೆ - ನೀನು ಹೇಳಿದ ವಸ್ತ್ರಗಳನ್ನೂ ಕುದುರೆಯನ್ನೂ ಬೇಗನೆ ತೆಗೆದುಕೊಂಡು ಬಂದು ಅರಮನೆಯ ಬಾಗಲಿನಲ್ಲಿ ಕೂತಿರುವ ಮೊರ್ದೆಕೈ ಎಂಬ ಯೆಹೂದ್ಯನಿಗೆ ಹಾಗೆಯೇ ಮಾಡು; ನೀನು ಹೇಳಿದವುಗಳಲ್ಲಿ ಒಂದನ್ನೂ ನೆರವೇರಿಸದೆ ಬಿಡಬೇಡ ಎಂದು ಅಪ್ಪಣೆಮಾಡಿದನು. ಹಾಮಾನನು ಆ ವಸ್ತ್ರಗಳನ್ನೂ ಕುದುರೆಯನ್ನೂ ತೆಗೆದುಕೊಂಡು ಬಂದು ಮೊರ್ದೆಕೈಯನ್ನು ಭೂಷಿಸಿ ಪಟ್ಟಣದ ಮಧ್ಯದಲ್ಲಿ ಮೆರವಣಿಗೆಮಾಡಿಸಿ ಅವನ ಮುಂದೆ - ಅರಸನು ಸನ್ಮಾನಿಸಬೇಕೆಂದಿರುವವನನ್ನು ಗೌರವಿಸುವ ರೀತಿಯು ಇದೇ ಎಂದು ಪ್ರಕಟಣೆ ಮಾಡಿಸಿದನು. ಎಂದು ಎಸ್ತರ್ 6:10-11 ರಲ್ಲಿ ಸತ್ಯವೇದ ಹೇಳುತ್ತದೆ.
ಅದು ಮೊರ್ದೆಕೈನ ಸಮಯವಾಗಿತ್ತು. ಅವನಿಗೆ ಪ್ರತಿಫಲ ನೀಡಲು ಪರಲೋಕವು ಈಗ ಸಿದ್ದಗೊಂಡಿದ್ದು ಇದು ಅವನ ರೂಪಾಂತರದ ಸಮಯವಾಗಿದೆ. ಹಾಸ್ಯಮಯ ವಿಚಾರ ಎಂದರೆ, ದೇವರು ಮೊರ್ದಕೈನ ಅವನತಿಗೆ ಸಂಚು ರೂಪಿಸಿದ ಶತ್ರುವನ್ನೇ ಅವನಿಗೆ ಸನ್ಮಾನ ಮಾಡಲು ಬಳಸಿದನು. ಆತನು ಅವನನ್ನು ಬೇರೆ ರೀತಿಯಲ್ಲಿ ಸನ್ಮಾನಿಸಬಹುದಿತ್ತು , ಆದರೂ ಅವನ ಅವನತಿಗೆ ಸಂಚು ರೂಪಿಸಿದ ಅದೇ ಕೈ ಗಳೇ ಮೊರ್ದಕೈ ನ ಉನ್ನತಿಯನ್ನು ಸಂಘಟಿಸುವ ರೀತಿಯಲ್ಲಿ ದೇವರು ಅದನ್ನು ವ್ಯವಸ್ಥೆಗೊಳಿಸಿದನು. ಆ ದಿನ ಎಲ್ಲವೂ ಬದಲಾಗಿ ಹೋಯಿತು.
ದಾವೀದನು, "ದೇವರು ನನ್ನ ವೈರಿಗಳ ಮುಂದೆಯೇ ನನಗೆ ಔತಣದ ಮೇಜನ್ನು ಸಿದ್ಧಪಡಿಸುವನು " ಎಂದು ಹೇಳಿದನು. ಆದ್ದರಿಂದ ಶತ್ರುವಿಗೆ ಹೆದರಬೇಡಿರಿ; ನಿಮ್ಮ ಪಟ್ಟಾಭಿಷೇಕವನ್ನು ಯೋಜಿಸಲು ದೇವರು ಅವರನ್ನು ಸಮಿತಿಯ ಅಧ್ಯಕ್ಷರನ್ನಾಗಿ ಬಳಸುತ್ತಾನೆ. ಇಸ್ರಾಯೇಲ್ಯರು ನಾನೂರ ಮೂವತ್ತು ವರ್ಷಗಳ ಕಾಲ ಸೆರೆಯಲ್ಲಿದ್ದರು. ಗುಲಾಮಗಿರಿಯಲ್ಲಿ ಜನಿಸುವುದನ್ನು ಕಲ್ಪಿಸಿಕೊಳ್ಳಿ. ಬಂಧನವೇ ಅವರ ಗುರುತಾಗಿತ್ತು, ಆದರೆ ಒಂದು ದಿನ ಎಲ್ಲವೂ ಬದಲಾಗಿಹೋಯಿತು.
ವಿಮೋಚನಕಾಂಡ 14:13 ರಲ್ಲಿ ಸತ್ಯವೇದವು ಹೀಗೆ ಹೇಳುತ್ತದೆ, " ಆದರೆ ಮೋಶೆ ಆ ಜನರಿಗೆ - ನೀವು ಅಂಜಬೇಡಿರಿ; ಸುಮ್ಮನೆ ನಿಂತುಕೊಂಡಿದ್ದು ಯೆಹೋವನು ಈ ಹೊತ್ತು ನಿಮ್ಮನ್ನು ರಕ್ಷಿಸುವ ರೀತಿಯನ್ನು ನೋಡಿರಿ. ನೀವು ಈ ಹೊತ್ತು ನೋಡುವ ಐಗುಪ್ತ್ಯರನ್ನು ಇನ್ನು ಮುಂದೆ ಎಂದಿಗೂ ನೋಡುವದಿಲ್ಲ."
ಈ ಐಗುಪ್ತರನ್ನು ಮತ್ತೆ ಎಂದಿಗೂ ನೋಡುವುದಿಲ್ಲ ಎಂದು ಮೋಶೆ ಹೇಳುವ ಕೊನೆಯ ಭಾಗವನ್ನು ನಾನು ಪ್ರೀತಿಸುತ್ತೇನೆ. ಇದು ಅವರಿಗಾದ ಸಂಪೂರ್ಣ ತಿರುವು. ಐಗುಪ್ತರು ಅವರಿಗೆ ತಮ್ಮ ಆಭರಣಗಳನ್ನು ಮತ್ತು ಅವರ ಪ್ರಯಾಣಕ್ಕೆ ಬೇಕಾದ ಎಲ್ಲಾ ವಸ್ತುಗಳನ್ನು ನೀಡಿ ಕಳುಹಿಸಿದ್ದರು.
"ನಿಮ್ಮ ಶತ್ರುಗಳೇ ನಿಮ್ಮನ್ನು ಸನ್ಮಾನಿಸುವಂತೆ ಒತ್ತಾಯಿಸಲ್ಪಡುತ್ತಾರೆ, ನಿಮ್ಮ ಪ್ರತಿಕೂಲತೆಯೇ ನಿಮ್ಮನ್ನು ಪ್ರಖ್ಯಾತಿ ಮಾಡುತ್ತದೆ ಮತ್ತು ನಿಮಗೆ ಕಿರುಕುಳ ನೀಡುವವರೇ ನಿಮ್ಮನ್ನು ಉತ್ತೇಜಿಸುವವರಾಗುತ್ತಾರೆ" ಎಂದು ನಾನು ನಿಮ್ಮ ಜೀವನದ ಮೇಲೆ ಪ್ರವಾದನೆಯ ವಾಕ್ಯವನ್ನು ಯೇಸುವಿನ ಹೆಸರಿನಲ್ಲಿ ಘೋಷಿಸುತ್ತೇನೆ . ನಿಮ್ಮ ಸ್ಥಿತಿಯು ಯಾವಾಗಲೂ ಈ ರೀತಿಯೇ ಇರುವುದಿಲ್ಲ. ನೀವು ಯಾವಾಗಲೂ ದಬ್ಬಾಳಿಕೆಗೆ ಒಳಪಡುವುದಿಲ್ಲ. ನಿಮ್ಮಲ್ಲಿ ಬದಲಾವಣೆ ಬರುತ್ತಿದೆ. ಆದ್ದರಿಂದ, ದೇವರನ್ನು ಮೆಚ್ಚಿಸುವ ಕಾರ್ಯದಲ್ಲಿ ಮಗ್ನರಾಗಿರ್ರಿ. ಸತ್ಯವೇದ ಹೇಳುತ್ತದೆ, "ಕರ್ತನು ಒಬ್ಬನ ನಡತೆಯನ್ನು ಮೆಚ್ಚಿದರೆ ಅವನ ಶತ್ರುಗಳನ್ನೇ ಮಿತ್ರರಾನ್ನಾಗಿ ಮಾಡುತ್ತಾನೆ "ಎಂದು . (ಜ್ಞಾನೋಕ್ತಿ 16: 7)ಪರಿ ಶುದ್ಧತೆ ಮತ್ತು ನೀತಿಯ ಮಾರ್ಗದಲ್ಲಿ ನಡೆಯುವುದನ್ನು ಮುಂದುವರಿಸಿ, ಜನರಿಗೆ ಮುಯ್ಯಿ ತೀರಿಸುವಂತ ಪಿತೂರಿ ಮಾಡಬೇಡಿ ಅಥವಾ ನಿಮಗೆ ಅಧೀನರಾಗಿರುವವರ ಮೇಲೆ ದಬ್ಬಾಳಿಕೆ ಮಾಡಬೇಡಿ, ಯಥಾರ್ಥವಾದ ಪ್ರೀತಿಯ ಜೀವಿತ ಜೀವಿಸಿ. ಆಗ ದೇವರು ನಿಮ್ಮ ಶತ್ರುಗಳನ್ನು ನಿಮಗೆ ಅಧೀನಮಾಡುವುದನ್ನು ನೀವು ನೋಡುತ್ತೀರಿ.
Bible Reading: Numbers 16-17
ಪ್ರಾರ್ಥನೆಗಳು
ತಂದೆಯೇ, ಸತ್ಯದ ಹಾದಿಯಲ್ಲಿ ನಡೆಯಲು ನೀವು ನನಗೆ ಸಹಾಯ ಮಾಡಬೇಕೆಂದು ಯೇಸುವಿನ ಹೆಸರಿನಲ್ಲಿ ಪ್ರಾರ್ಥಿಸುತ್ತೇನೆ. ನನ್ನ ಜೀವನವು ಯಾವಾಗಲೂ ನಿನ್ನನ್ನು ಮೆಚ್ಚಿಸಲಿ ಎಂದು ನಾನು ಪ್ರಾರ್ಥಿಸುತ್ತೇನೆ. ನನ್ನ ಜೀವನದ ಪ್ರತಿಯೊಂದು ಸವಾಲುಗಳನ್ನು ನನ್ನ ಮೇಲಿಗಾಗಿ ಬದಲಾಯಿಸಬೇಕೆಂದು ಪ್ರಾರ್ಥಿಸುತ್ತೇನೆ. ನನ್ನ ಪ್ರಗತಿಯ ವಿರುದ್ಧ ಹವಣಿಸುವ ಪ್ರತಿ ಶತ್ರುವೂ ನನ್ನ ಪದೋನ್ನತಿಗಾಗಿ ಯೇಸುನಾಮದಲ್ಲಿ ಕಾರ್ಯಮಾಡುವಂತಾಗಲಿ . ಆಮೆನ್.
Join our WhatsApp Channel

Most Read
● ಈ ದಿನಮಾನಗಳಲ್ಲಿ ಕಾಣುವ ಅಪರೂಪದ ಸಂಗತಿ● ನೀವು ದೇವರ ಉದ್ದೇಶಕ್ಕಾಗಿ ನಿಯೋಜಿಸಲ್ಪಟ್ಟಿದ್ದೀರಿ
● ದೇವರು ದರ್ಶನಕೊಡುವ ಸಮಯವನ್ನು ಗುರುತಿಸಿಕೊಳ್ಳುವುದು
● ದಿನ 07 : 40 ದಿನಗಳ ಉಪವಾಸ ಮತ್ತು ಪ್ರಾರ್ಥನೆ
● ನೀವು ಪ್ರಾರ್ಥಿಸುವಿರಿ ಆತನು ನಿಮಗೆ ಕಿವಿಗೊಡುವನು
● ಯೇಸುವನ್ನು ನೋಡುವ ಬಯಕೆ
● ದಿನ 19:40 ದಿನಗಳ ಉಪವಾಸ ಮತ್ತು ಪ್ರಾರ್ಥನೆ.
ಅನಿಸಿಕೆಗಳು