ಅನುದಿನದ ಮನ್ನಾ
1
0
80
ಶುಭವಾರ್ತೆಯನ್ನು ಸಾರಿರಿ.
Sunday, 23rd of February 2025
Categories :
ಎಸ್ತರ್ ರಹಸ್ಯಗಳು: ಸರಣಿ (Secrets of Esther: Series)
"ಆದ್ದರಿಂದ ನೀವು ಹೊರಟುಹೋಗಿ ಎಲ್ಲಾ ದೇಶಗಳ ಜನರನ್ನು ಶಿಷ್ಯರನ್ನಾಗಿ ಮಾಡಿರಿ; ಅವರಿಗೆ ತಂದೆಯ, ಮಗನ, ಪವಿತ್ರಾತ್ಮನ ಹೆಸರಿನಲ್ಲಿ ದೀಕ್ಷಾಸ್ನಾನಮಾಡಿಸಿ. ನಾನು ನಿಮಗೆ ಆಜ್ಞಾಪಿಸಿದ್ದನ್ನೆಲ್ಲಾ ಕಾಪಾಡಿಕೊಳ್ಳುವದಕ್ಕೆ ಅವರಿಗೆ ಉಪದೇಶ ಮಾಡಿರಿ. ನೋಡಿರಿ, ನಾನು ಯುಗದ ಸಮಾಪ್ತಿಯವರೆಗೂ ಎಲ್ಲಾ ದಿವಸ ನಿಮ್ಮ ಸಂಗಡ ಇರುತ್ತೇನೆ ಎಂದು ಹೇಳಿದನು."ಆಮೆನ್. (ಮತ್ತಾಯ 28:19-20)
ಎಸ್ತೇರಳು 8:3-4 ಹೇಳುವುದೇನೆಂದರೆ "ಎಸ್ತೇರಳು ತಿರಿಗಿ ಅರಸನನ್ನು ಮಾತಾಡಿಸುವದಕ್ಕೆ ಹೋಗಿ ಅವನ ಪಾದಗಳಿಗೆ ಬಿದ್ದು ಅತ್ತು - ಅಗಾಗನ ವಂಶದವನಾದ ಹಾಮಾನನು ಯೆಹೂದ್ಯರ ಹಾನಿಗಾಗಿ ಕಲ್ಪಿಸಿದ ಅಪಾಯಗಳನ್ನು ನಿವಾರಿಸಬೇಕೆಂದು ವಿಜ್ಞಾಪಿಸಲು ಅರಸನು ಸುವರ್ಣರಾಜದಂಡವನ್ನು ಆಕೆಯ ಕಡೆಗೆ ಚಾಚಿದ್ದರಿಂದ ಆಕೆಯು ಎದ್ದು ಅರಸನ ಮುಂದೆ ನಿಂತಳು"
ಇಲ್ಲಿ ಹಾಮಾನನು ಸೋತುಹೋದರೂ, ರಾಜನ ಆಜ್ಞೆಯು ಯೆಹೂದ್ಯರ ವಿರುದ್ಧವಾಗಿ ಇನ್ನೂ ಹಾಗೆ ಇತ್ತು. ರಾಜನು ಶತ್ರುವನ್ನು ಕೊಂದನು, ಆದರೂ ಶತ್ರುವಿನ ಕಾರ್ಯಗಳು ಇನ್ನೂ ಚಾಲನೆಯಲ್ಲಿತ್ತು. ಜನರನ್ನು ನಾಶಮಾಡಲು ಗೊತ್ತುಪಡಿಸಿದ ಸಮಯವು ಇನ್ನೂ ಟಿಕ್ ಟಿಕ್ ಎನ್ನುತ್ತಿದೆ ಮತ್ತು "ಯಹೂದ್ಯರನ್ನೆಲ್ಲಾ ಕೊಲ್ಲಿ " ಎಂಬ ಕೊನೆಯ ಆದೇಶವು ಇನ್ನೂ ಜೀವಂತವಾಗಿದೆ.
ಕೆಲವೊಮ್ಮೆ ಸರಿಯಾದ ಸಮಯಕ್ಕೆ ಸರಿಯಾದ ಕೆಲಸ ಮಾಡದಿದ್ದರೆ ಅದು ಎಷ್ಟು ಅಪಾಯಕಾರಿಯಾಗಿ ಬಿಡಬಹುದು ಎಂದು ನೀವು ಊಹಿಸಿ. ಹೇಗೂ, ಸತ್ಯವೇದವು ಎಸ್ತೇರಳು 8:10 ರಲ್ಲಿ ಹೀಗೆ ಹೇಳುತ್ತದೆ, "ಯೆಹೂದ್ಯರಿಗೆ ಬರೆದ ಪತ್ರಗಳು ಯೆಹೂದ್ಯ ಬರಹದಲ್ಲಿಯೂ ಭಾಷೆಯಲ್ಲಿಯೂ ಲಿಖಿತವಾದವು. ಮೊರ್ದೆಕೈಯು ಅರಸನ ಹೆಸರಿನಲ್ಲಿ ಬರೆಯಲ್ಪಟ್ಟ ಅವುಗಳಿಗೆ ರಾಜಮುದ್ರೆಯನ್ನು ಹಾಕಿ ಅರಮನೆಯ ಅಶ್ವಾಲಯಗಳಲ್ಲಿ ಹುಟ್ಟಿ ಬೆಳೆದ ಸವಾರಿಕುದುರೆಗಳನ್ನು ಹತ್ತಿಕೊಂಡಿದ್ದ ಅಂಚೆಯವರ ಮುಖಾಂತರ ಕಳುಹಿಸಿದನು."
ಆಗ ವೇಗವಾಗಿ ಓಡುವ ಕುದುರೆಗಳ ಮೇಲೆ ರಾಜನಿಂದ ಹೊಂದಿದ ಆದೇಶದ ಪ್ರತಿಗಳನ್ನ ಕಳುಹಿಸಬೇಕಾಗಿತ್ತು, ಇಲ್ಲದಿದ್ದರೆ ಕೆಲವು ಸ್ಥಳಗಳಲ್ಲಿ ಮರಣದಂಡನೆ ಆಜ್ಞೆ ನೆರವೇರಿ ಅವರು ಮಾಡಿದ ಉಪವಾಸ ಮತ್ತು ಪ್ರಾರ್ಥನೆಗಳೆಲ್ಲ ವ್ಯರ್ಥವಾಗುತ್ತಿದ್ದವು. ಆದ್ದರಿಂದ ಎಸ್ತೇರಳು ತನ್ನ ಜನರ ರಕ್ಷಣೆಗಾಗಿ ಮಧ್ಯಸ್ಥಿಕೆ ವಹಿಸಿದಳು.
ಇದೇ ರೀತಿ ಇಂದು ಆತ್ಮಗಳನ್ನು ರಕ್ಷಿಸಲು ಪ್ರತಿ ಚರ್ಚ್‌ನಲ್ಲಿಯೂ ಮಧ್ಯಸ್ಥಿಕೆಯು ಪ್ರಾರ್ಥನೆಗಾಗಿ ಸಮಯ ಮೀಸಲಿಡುವುದು ಅಗತ್ಯವಾಗಿದೆ. ದುರದೃಷ್ಟವಶಾತ್, ಇಂದಿನ ದಿನಗಳಲ್ಲಿ ಇದು ಅತ್ಯಂತ ನಿರ್ಲಕ್ಷಿಸಲ್ಪಟ್ಟ ಸೇವೆಗಳಲ್ಲಿ ಒಂದಾಗಿದೆ. ಕ್ರಿಸ್ತನು ಶಿಲುಬೆಯಲ್ಲಿ ನಮಗಾಗಿ ವಿಜಯವನ್ನು ಗೆದ್ದುಕೊಟ್ಟರೂ, ಆ ವಿಜಯವನ್ನು ಜಾರಿಗೊಳಿಸಲು ಮಧ್ಯಸ್ಥಿಕೆ ಪ್ರಾರ್ಥನೆಯ ಅಗತ್ಯವಿದೆ. ಹೇಗಾದರೂ, ಮಧ್ಯಸ್ಥಿಕೆ ಪ್ರಾರ್ಥನೆ ಮೂಲಕ ಹೊರಗೆ ಹೋಗಿ ಜನರಿಗೆ ಶುಭ ವಾರ್ತೆಯನ್ನು ತಿಳಿಸುವ ಅವಶ್ಯಕತೆಯಿದೆ. ಸುವಾರ್ತೆಯ ಉಪದೇಶವನ್ನು ಮಧ್ಯಸ್ಥಿಕೆ ಪ್ರಾರ್ಥನೆ ಮುಖೇನ ಅನುಸರಿಸಬೇಕು.
ಈಗ ಈ ಶುಭಸುದ್ದಿಯು ಮರಣದಂಡನೆಯ ಕೆಟ್ಟ ಸುದ್ದಿಗಿಂತ ವೇಗವಾಗಿ ಪ್ರಯಾಣಿಸಬೇಕಿತ್ತು; ಆದ್ದರಿಂದ ಅದಕ್ಕಾಗಿ ರಾಜಮನೆತನದ ಕುದುರೆಗಳನ್ನು ಬಳಸಿದರು - ಯಾಕೆಂದರೆ ಅವು ಸಾಮಾನ್ಯ ಕುದುರೆಗಳಿಗಿಂತ ವೇಗವಾಗಿರುತ್ತವೆ. ಸಮಯವು ಬಹಳ ಕಡಿಮೆ ಇರುವುದರಿಂದ ತುರ್ತು ಪರಿಸ್ಥಿತಿ ಇತ್ತು. ಜನರು ಇಲ್ಲಿಯವರೆಗೆ ಮರಣ ಎನ್ನುವ ಕೆಟ್ಟ ಸುದ್ದಿಗೇ ಒಗ್ಗಿಕೊಂಡಿದ್ದಾರೆ. ಆದರೆ ಇದು ಶುಭವಾರ್ತೆಯನ್ನು ಬೋಧಿಸುವ ಸಮಯವಾಗಿದೆ.
ಯೇಸುವಿನ ಕೊನೆಯ ಮಾತುಗಳು ನಾವು ಈಗ ಏನು ಮಾಡಬೇಕೆಂದು ಹೇಳುವ ಮಹಾ ಆಜ್ಞೆಯ ಹೇಳಿಕೆಯಾಗಿದೆ. ಆತನು ಸೈತಾನನ ಮೇಲೆ ಅಧಿಕಾರವನ್ನು ಹೊಂದಿದ್ದಾನೆ, ಸೈತಾನನನ್ನು ಸೋಲಿಸಿದ ನಂತರ, ಯೇಸುವು ಜೀವ ಮತ್ತು ಮರಣದ ಕೀಲಿಕೈಯನ್ನು ಸಹ ಹೊಂದಿದ್ದಾನೆ. ಬದುಕಿನ ಬವಣೆಗಳಲ್ಲಿ ಸೋತುಹೋಗಿರುವ ಜನರಿಗೆ ನಾವು ಈ ಶುಭವಾರ್ತೆಯನ್ನು ಹೇಳಬೇಕಾಗಿದೆ. ಅವರ ಬಿಡುಗಡೆಗೆ ಅವಕಾಶವಿರುವುದರಿಂದ ಅವರು ಈಗ ಪಾಪದಲ್ಲಿಯೇ ಮುಳುಗಿ ಸಾಯುವ ಅಗತ್ಯವಿಲ್ಲ ಎಂದು ನಾವು ಅವರಿಗೆ ಹೇಳಬೇಕಾಗಿದೆ. "ಆದುದರಿಂದ ಮಗನು ನಿಮ್ಮನ್ನು ಬಿಡುಗಡೆಗೊಳಿಸಿದರೆ, ನೀವು ನಿಜವಾಗಿಯೂ ಬಿಡುಗಡೆಯಾಗುತ್ತೀರಿ." ಎಂದು ಯೋಹಾನ 8:36 ಹೇಳುತ್ತದೆ.
ಯೇಸು ಈಗಾಗಲೇ ಅವರನ್ನು ಬಿಡುಗಡೆಗೊಳಿಸಿದ್ದಾನೆ; ಅವರು ಈ ಸುದ್ದಿಯನ್ನು ಒಪ್ಪಿಕೊಳ್ಳಬೇಕು. ಅವರ ಖಾಯಿಲೆಗಳು ಮತ್ತು ರೋಗಗಳಿಗೆ ಈಗಾಗಲೇ ಆತನು ಬೆಲೆ ತೆತ್ತಿದ್ದಾನೆ. ಆತನು ಅವುಗಳನ್ನು ಈಗಾಗಲೇ ಅವರಿಂದ ತೆಗೆದುಕೊಂಡು ಅದನ್ನು ತನ್ನ ಶಿಲುಬೆಯಲ್ಲಿ ಜಡಿದಿದ್ದಾನೆ. ಆತನು ಅವುಗಳಿಗಾಗಿ ಸಂಪೂರ್ಣವಾಗಿ ವಿಮೋಚನಾ ಕ್ರಯವನ್ನು ತೆತ್ತಿ ಬಿಟ್ಟಿದ್ದಾನೆ, ಆದ್ದರಿಂದ ಆತನನ್ನು ನಂಬುವವರು ಇನ್ನು ಮುಂದೆ ಅನಾರೋಗ್ಯದಿಂದ ಸಾಯುವ ಅಗತ್ಯವಿಲ್ಲ.ನಂಬುವ ಎಲ್ಲರೂ ಉತ್ತಮ ಆರೋಗ್ಯದಿಂದ ಜೀವಿಸಲು ಆತನೇ ಕ್ರಯವನ್ನು ಕಟ್ಟಿ ಮುಗಿಸಿದ್ದಾನೆ. ಆತನು ನಮಗೆ ಜೀವನದ ಸಂಕಟಗಳಲ್ಲಿ ಆತನ ಶಾಂತಿಯನ್ನು ನೀಡಲು ಬಂದಿದ್ದಾನೆ. ನಾವು ಸಾಧ್ಯವಾದಷ್ಟು ಬೇಗ ಎಲ್ಲರಿಗೂ ಹರಡಬೇಕಾದ ಶುಭವಾರ್ತೆಯು ಇದೇಆಗಿದೆ.
ಅತ್ಯಂತ ವೇಗದ ಕುದುರೆಗಳಾಗಿ ನಾವೇ ಈ ಶುಭ ಸುದ್ದಿಯನ್ನು ಹರಡಬೇಕಾಗಿದೆ. ಶತ್ರುವಾದ ಸೈತಾನನು ಜನರನ್ನು ಕೊಂದು ಮೋಸ ಮಾಡುತ್ತಿದ್ದಾನೆ, ಆದ್ದರಿಂದ ನಾವು ರಕ್ಷಣಾ ಪ್ರತಿನಿಧಿಗಳಾಗಿ ನಿಲ್ಲಬೇಕಾಗಿದೆ. ಪಾಪ ಮತ್ತು ಮರಣದ ಹಿಡಿತದಿಂದ ಅವರನ್ನು ಬಿಡುಗಡೆಗೊಳಿಸಲು ನಾವು ಮಧ್ಯಸ್ಥಿಕೆವಹಿಸಲು ನಾವು ಅವರನ್ನು ತಲುಪಬೇಕಾದ ಅವಶ್ಯಕತೆ ಇದೆ. ಸೈತಾನನು ಸೋಲಿಸಲ್ಪಟ್ಟಿದ್ದಾನೆ ಹಾಗಾಗಿ ನಾವು ಸ್ವತಂತ್ರರಾಗಿದ್ದೇವೆ. ಸಾಧ್ಯವಿರುವ ಎಲ್ಲ ಮಾಧ್ಯಮಗಳನ್ನು ಬಳಸಿಕೊಂಡು ಈ ಶುಭವಾರ್ತೆಯನ್ನು ಪ್ರಸಾರ ಮಾಡೋಣ.
Bible Reading: Numbers 23-25
ಪ್ರಾರ್ಥನೆಗಳು
ತಂದೆಯೇ, ಶಿಲುಬೆಯ ಮೇಲೆ ನೀನು ನಮಗಾಗಿ ಮಾಡಿದ ಯಜ್ಞಬಲಿಗಾಗಿ ನಿನಗೇ ಸ್ತೋತ್ರ ಸಲ್ಲಿಸುತ್ತೇನೆ. ಅನಾರೋಗ್ಯದ ಹಿಡಿತದಿಂದ ನನ್ನನ್ನು ಮುಕ್ತಗೊಳಿಸಿದ ನಿನ್ನ ಪೂರ್ಣಗೊಂಡ ಕಾರ್ಯಕ್ಕಾಗಿ ನಾನು ನಿನಗೇ ಸ್ತೋತ್ರ ಸಲ್ಲಿಸುತ್ತೇನೆ . ನಾನು ಹೋಗುವ ಕಡೆಯೆಲ್ಲಾ ಈ ನಿನ್ನ ಶುಭವಾರ್ತೆಯನ್ನು ಹರಡಲು ನಿನ್ನ ಆತ್ಮದಿಂದ ನನಗೆ ಬಲ ನೀಡಬೇಕೆಂದು ನಾನು ಪ್ರಾರ್ಥಿಸುತ್ತೇನೆ. ನಿನ್ನ ಶುಭಕಾರಿಯಾದ ಹಸ್ತವು ನನ್ನ ಮೇಲೆ ಸದಾ ಇದ್ದು ನನ್ನನ್ನು ನಿಜವಾಗಿಯೂ ಬದುಕು ಬದಲಾಯಿಸುವ ಪ್ರತಿನಿಧಿಯಾನ್ನಾಗಿ ಮಾಡೆಂದು ಪ್ರಾರ್ಥಿಸುತ್ತೇನೆ.ನಿನ್ನ ಶುಭವಾರ್ತೆಯನ್ನು ಹರಡುವುದಕ್ಕೆ ಯಾವುದೂ ಸಹ ನನಗೆ ಅಡ್ಡಿಮಾಡುವುದಿಲ್ಲ. ಈ ಮಹಾ ಆಜ್ಞೆಯನ್ನು ಪಾಲಿಸಲು ಯೇಸು ನಾಮದಲ್ಲಿ ನಿನ್ನ ಕೃಪೆಯನ್ನು ಹೊಂದಿದ್ದೇನೆ. ಆಮೆನ್.
Join our WhatsApp Channel

Most Read
● ಕುಟುಂಬಕ್ಕಾಗಿ ಇರುವ ಗುಣಮಟ್ಟದ ಸಮಯ● ದೇವರನ್ನು ಸ್ತುತಿಸಲು ಇರುವ ಸತ್ಯವೇದಕ್ಕನುಸಾರವಾದ ಕಾರಣಗಳು
● ಕೃಪೆಯನ್ನು ತೋರಿಸುವ ಪ್ರಾಯೋಗಿಕ ವಿಧಾನ.
● ನೂತನ ಆತ್ಮೀಕ ವಸ್ತ್ರಗಳನ್ನು ಧರಿಸಿಕೊಳ್ಳಿ
● ದಿನ 02 : 40 ದಿನಗಳ ಉಪವಾಸ ಮತ್ತು ಪ್ರಾರ್ಥನೆ
● ಯೇಸುವಿನ ಕರ್ತತ್ವವನ್ನು ಅರಿಕೆ ಮಾಡುವುದು
● ದಿನ 15:40 ದಿನಗಳ ಉಪವಾಸ ಮತ್ತು ಪಾರ್ಥನೆ.
ಅನಿಸಿಕೆಗಳು