"ಪ್ರತಿವರುಷವೂ ಆ ಎರಡು ದಿವಸಗಳನ್ನು ಅವುಗಳ ವಿಷಯವಾದ ಶಾಸನದ ಪ್ರಕಾರ ನೇವಿುತವಾದ ಕಾಲದಲ್ಲಿ ಆಚರಿಸುವದು ತಮ್ಮಲ್ಲಿಯೂ ತಮ್ಮ ಸಂತಾನದವರಲ್ಲಿಯೂ ತಮ್ಮೊಂದಿಗೆ ಕೂಡಿಕೊಳ್ಳುವವರಲ್ಲಿಯೂ ಮೀರಕೂಡದ ಪದ್ಧತಿನಿಯಮಗಳಾಗಬೇಕೆಂದೂ.." (ಎಸ್ತರಳು 9:27)
ಕರ್ತನು ನಮ್ಮ ಜೀವನದಲ್ಲಿ ಪ್ರವೇಶಿಸಿದಾಗ ದೇವರ ಆತ್ಮನು ನಮ್ಮನ್ನು ಹೊಸ ವ್ಯಕ್ತಿಗಳನ್ನಾಗಿ ಪರಿವರ್ತಿಸುತ್ತಾನೆ . ಈ ಹೊಸ ಅಸ್ತಿತ್ವವು ಯೇಸುವಿನ ಮರಣ ಮತ್ತು ಪುನರುತ್ಥಾನದ ಮೂಲಕ ಸಾಧ್ಯವಾಗಿದೆ. ಈ ಹೊಸ ಜೀವನದಲ್ಲಿ ದೇವರ ನಿಯಮವು ನಮ್ಮ ಸ್ವಭಾವದ ಭಾಗವಾಗುತ್ತದೆ. ದೇವರ ನಿಯಮಗಳಿಗೆ ಬದ್ಧವಾಗಿರುವಂತದ್ದು ಆತನು ನಮಗೆ ಅನುಗ್ರಹಿಸಿದ ರಕ್ಷಣೆಗಾಗಿ ನಮ್ಮ ಕೃತಜ್ಞತೆಯನ್ನು ಪ್ರದರ್ಶಿಸುತ್ತದೆ.
ಎಸ್ತೆರಳು ಪುಸ್ತಕದಲ್ಲಿ, ರಾಣಿಯಾದ ಎಸ್ತೆರಳು ಮತ್ತು ಅವಳ ಸೋದರಸಂಬಂಧಿ ಮೊರ್ದೆಕೈಯ ಶೌರ್ಯದ ಮುಖೇನ ದೇವರು ಯಹೂದಿ ಜನರನ್ನು ಹೇಗೆ ರಕ್ಷಿಸಿದನು ಎಂಬುದನ್ನು ನಾವು ನೋಡುತ್ತೇವೆ. ಅಂತಹ ವಿಮೋಚನೆಯನ್ನು ಆಚರಿಸಬೇಕೆಂದು ಯಹೂದಿಗಳು ನಿರ್ಧರಿಸಿದರು. ಮೆಸ್ಸೀಯನು ಹುಟ್ಟಲು ಸಾಧ್ಯವಾಗುವಂತೆ ಅವರು ತಮ್ಮ ಜನಾಂಗದ ದೇವರು ಅನುಗ್ರಹಿಸಿದ ಸಂರಕ್ಷಣೆಯನ್ನು ಸ್ಮರಿಸಲು ವಾರ್ಷಿಕ ಉತ್ಸವವನ್ನು ಆರಂಭಿಸಿದರು. ದೇವರು ತನ್ನ ರಕ್ಷಣೆಯ ಕಾರ್ಯದ ಮೂಲಕ ನಮ್ಮ ಜೀವನವನ್ನು ಮರುಕ್ರಮಗೊಳಿಸಿರುವುದರಿಂದ, ಸೈತಾನನ ದೊರೆತನದಿಂದ ನಮ್ಮನ್ನು ಬಿಡಿಸಿ ಆತನ ನಿಯಮವನ್ನು ನಮ್ಮ ಹೃದಯದಲ್ಲಿ ಕೆತ್ತಿರುವುದರಿಂದ, ನಾವೂ ಸಹ ನಮ್ಮ ರಕ್ಷಣಾ ದಿನವನ್ನು ಆಚರಿಸಬೇಕು.ನಿಮ್ಮ ರಕ್ಷಣೆಯನ್ನು ನೀವೂ
ಆಚರಿಸಬಾರದೇಕೆ ?
ಕೆಲವೊಮ್ಮೆ ಚರ್ಚ್‌ನಲ್ಲಿಯೇ ಜನಿಸಿದ ಕ್ರೈಸ್ತರು ಸಹ ತಮ್ಮ ರಕ್ಷಣೆಯ ದಿನವನ್ನು ಸಂಭ್ರಮಿಸಿ ಹರ್ಷಿಸಿ ಉಲ್ಲಾಸಿಸುವ ಬದಲು ಯಾವುದೇ ವೈವಿಧ್ಯತೆ ಇಲ್ಲದೆ ಸಾಧಾರಣವಾಗಿ ಇರುತ್ತಾರೆ. ಈ ರೀತಿ ಶೋಕ ಜೀವಿತ ಬಿಟ್ಟು, ಯೇಸುವಿನಲ್ಲಿ ಸಂತೋಷದಿಂದ ಜೀವಿಸಿ! ನಮ್ಮ ರಕ್ಷಣೆಯನ್ನು ಸಂಭ್ರಮಿಸುವಂತದ್ದು ಅನೇಕರನ್ನು ಕರ್ತನ ಕಡೆಗೆ ಸೆಳೆಯುತ್ತದೆ ಎಂದು ನಾನು ನಂಬುತ್ತೇನೆ.
"ನನಗೆ ಸದುತ್ತರವನ್ನು ದಯಪಾಲಿಸಿ ರಕ್ಷಿಸಿದಾತನೇ, ನಿನ್ನನ್ನು ಕೊಂಡಾಡುತ್ತೇನೆ." ಎಂದು ಕೀರ್ತನೆಗಳು 118:21 ಹೇಳುತ್ತದೆ.
ಶತಮಾನಗಳು ಕಳೆದಿವೆ. ಆದರೂ ಯಹೂದಿ ಜನರು ಪುರಿಮ್ ಪವಿತ್ರ ದಿನವನ್ನು ಆಚರಿಸುತ್ತಿದ್ದಾರೆ. ಬಹುಶಃ ನಾವು ಕ್ರಿಸ್ತನಲ್ಲಿ ಮತ್ತೆ ಜನಿಸಿದ ದಿನವನ್ನು ಸ್ಮರಿಸಲು ವಾರ್ಷಿಕ ಸಂಪ್ರದಾಯವನ್ನು ಮಾಡಿದರೆ ನಾವೆಲ್ಲರೂ ವಿನೋದದಿಂದಿರಬಹುದು. ನಾವು ದೀಕ್ಷಾಸ್ನಾನ ಪಡೆದ ದಿನ ಅಥವಾ ಯೇಸುವಿನಲ್ಲಿ ನಮ್ಮ ನಂಬಿಕೆಯನ್ನು ಸಾರ್ವಜನಿಕವಾಗಿ ಒಪ್ಪಿಕೊಂಡ ದಿನವನ್ನು ಆಚರಿಸಲು ನಾವು ಒಂದು ಮೋಜಿನ ಕೂಟ ಮಾಡಬಹುದು. ನಿಮ್ಮ ಜೀವನದಲ್ಲಿ ಯಾವ ಕ್ರೈಸ್ತ ಮೈಲಿಗಲ್ಲನ್ನು ನೀವು ಆಚರಿಸಬಹುದು?ಎಂಬುದರ ಕುರಿತು ಸ್ವಲ್ಪ ಯೋಚಿಸಿ. ದೇವರಿಗೆ ಕೃತಜ್ಞತೆ ಸಲ್ಲಿಸುವ ಇಂತಹ ಹೊಸ ಪದ್ಧತಿಯನ್ನು ಪ್ರಾರಂಭಿಸಲು ಈಗ ಉತ್ತಮ ಸಮಯ.
Bible Reading: Numbers 33-35
ಪ್ರಾರ್ಥನೆಗಳು
ಪರಲೋಕದ ತಂದೆಯೇ, ಮಾನವಕುಲಕ್ಕೆ ರಕ್ಷಣೆಯನ್ನು ಅನುಗ್ರಹಿಸಲು ಕರ್ತನಾದ ಯೇಸು ಕ್ರಿಸ್ತನನ್ನು ಕಳುಹಿಸಿದ್ದಕ್ಕಾಗಿ ನಿನಗೆ ಸ್ತೋತ್ರ . ಕ್ರಿಸ್ತ ಯೇಸುವಿನಲ್ಲಿ ನಾನು ಪಡೆದ ನಿತ್ಯಜೀವಕ್ಕಾಗಿ ನಿಜವಾಗಿಯೂ ಯೇಸುನಾಮದಲ್ಲಿ ನಾನು ಕೃತಜ್ಞನಾಗಿದ್ದೇನೆ. ಆಮೆನ್!
Join our WhatsApp Channel

Most Read
● ಸ್ತುತಿಯು ಸಮೃದ್ಧಿಯನ್ನುಂಟುಮಾಡುತ್ತದೆ● ನಂಬುವವರಾಗಿ ನಡೆಯುವುದು
● ಬೀಜದಲ್ಲಿರುವ ಶಕ್ತಿ -3
● ನಿರ್ಣಯಾಕ ಅಂಶವಾಗಿರುವ ವಾತಾವರಣದ ಒಳನೋಟ -2
● ಮತ್ತೊಬ್ಬ ಯೇಸು, ಬೇರೊಂದು ಆತ್ಮ, ಮತ್ತು ಬೇರೊಂದು ಸುವಾರ್ತೆ-II
● ಸರಿಯಾದವುಗಳನ್ನು ಶೋಧಿಸಿ ಅವುಗಳನ್ನೇ ಹಿಬಾಲಿಸುವುದು.
● ಪರಿಶೋಧನೆಯ ಸಮಯದಲ್ಲಿ ನಂಬಿಕೆ
ಅನಿಸಿಕೆಗಳು