ಅನುದಿನದ ಮನ್ನಾ
4
1
106
ಹೊಟ್ಟೆಕಿಚ್ಚು ಎಂಬ ಪೀಡೆ.
Tuesday, 11th of March 2025
Categories :
ಎಸ್ತರ್ ರಹಸ್ಯಗಳು: ಸರಣಿ (Secrets of Esther: Series)
"ಆ ದಿನದಲ್ಲಿ ಹಾಮಾನನು ಹರ್ಷಭರಿತನಾಗಿ ಹೊರಟುಹೋದನು. ಆದರೆ ಅರಮನೆಯ ಹೆಬ್ಬಾಗಿಲಲ್ಲಿರುವ ಮೊರ್ದೆಕೈ ತನಗೆ ಭಯಪಡದೆ ಕುಳಿತುಕೊಂಡೇ ಇರುವುದನ್ನು ಹಾಮಾನನು ಕಂಡು ಮೊರ್ದೆಕೈಯ ಮೇಲೆ ಕೋಪಗೊಂಡನು."
(ಎಸ್ತೇರಳು 5:9)
ಹಾಮಾನನನ್ನು ಪರ್ಷಿಯಾದ ರಾಜ ಮತ್ತು ರಾಣಿ ಇಬ್ಬರೂ ಗೌರವಿಸುತ್ತಿದ್ದರು, ಆದರೆ ಒಬ್ಬ ಸಾಮಾನ್ಯ ವ್ಯಕ್ತಿಯ ಅಸಮ್ಮತಿಯು ಅವನನ್ನು ಅತ್ಯಲ್ಪನು ಎಂದು ಭಾವಿಸುವಂತೆ ಮಾಡಿತು. ಇದು ಲೌಕಿಕ ಪ್ರಶಂಸೆಗಳು ನೀಡುವ ಕ್ಷಣಿಕ ಆನಂದದ ಸ್ವರೂಪವನ್ನು ಎತ್ತಿ ತೋರಿಸಿ ಈ ಪ್ರಪಂಚದ ಪ್ರತಿಫಲಗಳು ಅಂತಿಮವಾಗಿ ಹೇಗೆ ಅತೃಪ್ತಿಕರವಾಗಬಹುದು ಎಂಬುದನ್ನು ಪ್ರಸ್ತುತ ಪಡಿಸುತ್ತದೆ.
ಹಾಮಾನನ ಹೃದಯವು ಒಂದು ಆಳವಾದ ಅಭದ್ರತೆಯಿಂದ ತುಂಬಿದ್ದು ಅವನು ಯಾವಾಗಲೂ ಎಲ್ಲರಿಂದಲೂ ಗೌರವಿಸಲ್ಪಡಬೇಕೆಂಬ ಮತ್ತು ಸನ್ಮಾನಿಸಲ್ಪಡಬೇಕೆಂಬ ತೀವ್ರ ಆಕಾಂಕ್ಷೆ ಹೊಂದಿದ್ದನು . ಸಾರ್ವತ್ರಿಕ ಅನುಮೋದನೆಗಾಗಿ ತೀವ್ರವಾಗಿ ಹಂಬಲಿಸುವ ಪ್ರವೃತ್ತಿಯಿಂದಾಗಿ ಅವನು ತನ್ನಲ್ಲಿ ಸಂತೋಷವನ್ನು ಕಂಡುಕೊಳ್ಳಲು ಸಾಧ್ಯವಾಗಲಿಲ್ಲ.
ನಾವು ಎಷ್ಟೇ ಒಳ್ಳೆಯ ಕೆಲಸ ಮಾಡಿದರೂ, ನಮ್ಮನ್ನು ಇಷ್ಟಪಡದ ಯಾರಾದರೂ ಯಾವಾಗಲೂ ಇರುತ್ತಾರೆ ಎಂಬುದನ್ನು ನಾವೆಲ್ಲರೂ ಯಾವಾಗಲೂ ನೆನಪಿನಲ್ಲಿಟ್ಟು ಕೊಳ್ಳಬೇಕು. ಎಲ್ಲಾ ಪುರುಷರು ಮತ್ತು ಮಹಿಳೆಯರ ಅನುಮೋದನೆಯನ್ನು ಪಡೆಯುವ ನಮ್ಮ ಪ್ರಯತ್ನದಲ್ಲಿ, ನಾವು 'ಜನರನ್ನು ಮೆಚ್ಚಿಸುವವ"ರಾಗಿಯೇ ನಮ್ಮ ಜೀವನವನ್ನು ಕೊನೆಗೊಳಿಸಿಕೊಳ್ಳಬಾರದು.
ಬಾಹ್ಯ ದೃಢೀಕರಣ ಮತ್ತು ಮನ್ನಣೆ ಎಂದಿಗೂ ನಮ್ಮ ಜೀವನಕ್ಕೆ ನಿಜವಾದ ಸಂಪೂರ್ಣತೆ ತಂದುಕೊಡಲು ಸಾಧ್ಯವಿಲ್ಲ. ನಮ್ಮ ನಿಜವಾದ ಸಂತೋಷ ಮತ್ತು ಸಮಾಧಾನವನ್ನು ಯೇಸುವಿನಲ್ಲಿ ಮಾತ್ರ ನಾವು ಕಾಣಬಹುದು ಎಂಬುದನ್ನು ಇದು ನೆನಪಿಸುತ್ತದೆ.
ಮೊರ್ದೆಕೈ ಹಾಮಾನನ್ನು ಗೌರವಿಸದ ಕಾರಣ, ಹಾಮಾನನು ಅವನ ಬಗ್ಗೆ ಕಹಿತನವನ್ನು ಬೆಳೆಸಿಕೊಂಡನು. ನಿಮ್ಮ ಹೃದಯದಲ್ಲಿನ ವಿಷವು ನಿಮ್ಮ ಆಶೀರ್ವಾದವನ್ನು ಎಂದಿಗೂ ನೀವು ಆನಂದಿಸದಂತೆ ಮಾಡುತ್ತದೆ .
ಅರಸನಾದ ಸೌಲನ ಚರಿತ್ರೆಯು ಹೊಟ್ಟಿಕಿಚ್ಚು , ಅಸೂಯೆ, ಕೋಪ ಮತ್ತು ಭಯದಂತಹ ನಕಾರಾತ್ಮಕ ಭಾವನೆಗಳನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳದೇ ಹೋದಲ್ಲಿ ಅವು ನಮ್ಮ ಜೀವಿತದಲ್ಲಿ ಅನುಮತಿಸಬಹುದಾದ ಅಪಾಯಗಳ ಬಗ್ಗೆ ಒಂದು ಎಚ್ಚರಿಕೆಯ ಕಥೆಯಾಗಿ ಕಾರ್ಯನಿರ್ವಹಿಸುತ್ತದೆ.
ದೇವರ ಅಭಿಷೇಕದ ದೈವಿಕ ಆಶೀರ್ವಾದ, ಪ್ರವಾದಿಯಾದ ಸಮುವೇಲನ ಜ್ಞಾನಯುತ ಸಲಹೆಗಳು ಮತ್ತು ಜನರ ಬೆಂಬಲದೊಂದಿಗೆ ಸೌಲನು ತನ್ನ ಆಳ್ವಿಕೆಯನ್ನು ಉನ್ನತ ಮಟ್ಟದಲ್ಲಿ ಪ್ರಾರಂಭಿಸಿದ್ದನು.
ಆದರೂ, ಸಮಯ ಕಳೆದಂತೆ, ಸೌಲನು ತನ್ನ ಭಾವನೆಗಳಿಗೆ ತನ್ನ ತೀರ್ಪನ್ನು ಮರೆಮಾಚಲು ಅವಕಾಶ ಮಾಡಿಕೊಟ್ಟು ತನ್ನನ್ನು ತಾನೇ ವಿನಾಶದ ಹಾದಿಗೆ ಕೊಂಡೊಯ್ದನು.ತತ್ಪರಿಣಾಮವಾಗಿ, ಅವನು ತನ್ನ ಆಳ್ವಿಕೆಯ ಆರಂಭದಲ್ಲಿ ಅವನಿಗೆ ಅನುಗ್ರಹಿಸಲ್ಪಟ್ಟಿದ್ದ ಎಲ್ಲಾ ಅನುಕೂಲತೆಗಳ ಹೊರತಾಗಿಯೂ, ಅಂತಿಮವಾಗಿ ಕಹಿತನದಿಂದ ಕೂಡಿ ಅತೃಪ್ತ ವ್ಯಕ್ತಿಯಾಗಿ ಸತ್ತನು. ನಾವು ಯಾವುದೇ ಕಷ್ಟಕರ ಸಂದರ್ಭಗಳನ್ನು ಎದುರಿಸುವಾಗಲೂ, ನಮ್ಮ ಭಾವನೆಗಳ ಮೇಲೆ ನಾವು ನಿಯಂತ್ರಣವನ್ನು ಕಾಯ್ದುಕೊಳ್ಳಬೇಕಾದ ಅಗತ್ಯತೆ ಮತ್ತು ಅದರಿಂದಾಗಿ ಹೊಟ್ಟೆಕಿಚ್ಚಿನಿಂದಾಗುವ ಅಪಾಯಗಳನ್ನು ತಪ್ಪಿಸುವ ಪ್ರಾಮುಖ್ಯತೆಯನ್ನು ಅವನ ಚರಿತ್ರೆಯು ನಮಗೆ ನೆನಪಿಸುತ್ತದೆ.
ನಿಮ್ಮ ಜೀವನದ ಘಟನೆಗಳು ಸೌಲ ಮತ್ತು ಹಾಮಾನರಿಗಿಂತ ಭಿನ್ನವಾಗಿದ್ದರೂ, ಕಹಿತನ ಮತ್ತು ಅದರ ವಿನಾಶದ ಹಂತಗಳು ಒಂದೇ ಆಗಿರುತ್ತವೆ. ಹಾಗಾಗಿ ಪರಿಹರಿಸಲಾಗದ ಕೋಪವು ನಿಮ್ಮಲ್ಲಿ ಹುದುಗಲು ಸ್ಥಳಕೊಡಬೇಡಿ. ಇವುಗಳಲ್ಲಿ ಯಾವುದಾದರೂ ನಿಮಗೆ ಅನ್ವಯಿಸುತ್ತಿದ್ದರೆ, ಅವುಗಳನ್ನು ತಕ್ಷಣವೇ ದೇವರಿಗೆ ಒಪ್ಪಿಸಿ ಕೊಡಿ.
Bible Reading: Deuteronomy 29-30
ಪ್ರಾರ್ಥನೆಗಳು
ತಂದೆಯೇ, ನನ್ನ ಹೃದಯದಲ್ಲಿ ಕಹಿತನದ ಯಾವುದೇ ಬೇರಿದ್ದರೂ ಅದನ್ನು ಯೇಸುನಾಮದಲ್ಲಿ ಕಿತ್ತುಹಾಕಿ ಶುದ್ಧೀಕರಿಸಿ. ಆಮೆನ್.
Join our WhatsApp Channel

Most Read
● ದಿನ 14:40 ದಿನಗಳ ಉಪವಾಸ ಮತ್ತು ಪ್ರಾರ್ಥನೆ.● ಲಂಬಕೋನ ಹಾಗೂ ಸಮತಲದ ಕ್ಷಮಾಪಣೆ.
● ಓಟವನ್ನು ಗೆಲ್ಲಲು ಇರುವ ದೀರ್ಘ ತಾಳ್ಮೆ ಮತ್ತು ದೀರ್ಘ ಪ್ರಯತ್ನ ಎಂಬ ಎರಡು ಪದಗಳು.
● ದೇವರ ಕೃಪೆಯನ್ನು ಸೇದುವುದು
● ಕೆಟ್ಟ ಆಲೋಚನೆಗಳ ಹೋರಾಟವನ್ನು ಗೆಲ್ಲುವುದು
● ಕೊರತೆಯಿಲ್ಲ
● ದೇವರು ನನಗಿಂದು ಒದಗಿಸುತ್ತಾನೋ?
ಅನಿಸಿಕೆಗಳು