"ಉತ್ಸಾಹದಲ್ಲಿ ಆಲಸ್ಯರಾಗದೆ, ಆತ್ಮದಲ್ಲಿ ಬೆಂಕಿಯುಳ್ಳವರಾಗಿ ಕರ್ತನ ಸೇವೆಯನ್ನು ಮಾಡಿರಿ. " (ರೋಮ 12:11)
ಸೈತಾನನು ಮುಂದಿನ ಪೀಳಿಗೆಯನ್ನು ಸೋಲಿಸಲು ಸಾಮೂಹಿಕ ಬಂಧನ ಕಾರ್ಯಕ್ರಮವನ್ನು ನಡೆಸುತ್ತಿದ್ದಾನೆ ಏಕೆಂದರೆ ಮುಂದಿನ ವಿಮೋಚಕ - ಅಂದರೆ ಇಂದಿನ ತಲೆಮಾರನ್ನು ಉರಿಯುವಂತೆ ಮಾಡಬಲ್ಲ ಮುಂದಿನ ಮೋಶೆ, ಯೆಹೋಶುವ, ದಾನಿಯೇಲ , ಡೆಬೋರಾ, ರಾಹೇಳಲು , ರೆಬೆಕ್ಕಳು ಅಥವಾ ಈ ತಲೆಮಾರನ್ನು ಆತ್ಮೀಕ ಆಲಸ್ಯದಿಂದ ಹೊರತರುವ ಮುಂದಿನ ಮಹಾನ್ ನಾಯಕ ಯಾರೆಂದು ಅವನಿಗೆ ತಿಳಿದಿಲ್ಲ. ಸತ್ಯವೆಂದರೆ ಇಂದು ಹೋರಾಡುತ್ತಿರುವ ವಯಸ್ಕರು ನಿನ್ನೆಯ ಮಕ್ಕಳಾಗಿದ್ದರು. ವ್ಯಸನಗಳು ಮತ್ತು ಬಂಧನಗಳೊಂದಿಗೆ ಹೋರಾಡುವ ಅನೇಕರು ಮೊದಲು ಮಕ್ಕಳಾಗಿದ್ದಾಗ ಶತ್ರುಗಳ ಬಲೆಗಳನ್ನು ಎದುರಿಸಿದ್ದರೂ ಯಾವುದನ್ನೂ ಅವರು ಇನ್ನೂ ಸಾಧಿಸಿಲ್ಲ. ಸತ್ಯವೇದ ನಮಗೆ ಪ್ರಕಟನೆ 12:1-4 ರಲ್ಲಿ ಒಂದು ಪ್ರಬಲ ದೃಶ್ಯವನ್ನು ತೋರಿಸುತ್ತದೆ, ಅದೇನೆಂದರೆ "ಪರಲೋಕದಲ್ಲಿ ಒಂದು ಮಹಾ ಸೂಚನೆಯು ಕಾಣಿಸಿತು: ಒಬ್ಬ ಸ್ತ್ರೀಯು ಸೂರ್ಯನನ್ನು ಧರಿಸಿಕೊಂಡಿದ್ದಳು, ಆಕೆಯ ಪಾದಗಳ ಕೆಳಗೆ ಚಂದ್ರನಿದ್ದನು. ಆಕೆಯ ತಲೆಯ ಮೇಲೆ ಹನ್ನೆರಡು ನಕ್ಷತ್ರಗಳುಳ್ಳ ಒಂದು ಕಿರೀಟವಿತ್ತು. ಆಕೆಯು ಗರ್ಭಿಣಿಯಾಗಿದ್ದು, ಪ್ರಸವವೇದನೆಯಿಂದ ನರಳುತ್ತಾ ಕೂಗುತ್ತಿದ್ದಳು. ಪರಲೋಕದಲ್ಲಿ ಮತ್ತೊಂದು ಸೂಚನೆಯು ಕಾಣಿಸಿತು. ಕೆಂಪಾದ ಮಹಾ ಘಟಸರ್ಪವಿತ್ತು. ಅದಕ್ಕೆ ಏಳು ತಲೆಗಳೂ ಹತ್ತು ಕೊಂಬುಗಳೂ ಇದ್ದವು. ಅದರ ತಲೆಯ ಮೇಲೆ ಏಳು ಮುಕುಟಗಳಿದ್ದವು. ಅದು ತನ್ನ ಬಾಲದಿಂದ ಆಕಾಶದ ನಕ್ಷತ್ರಗಳಲ್ಲಿ ಮೂರರಲ್ಲೊಂದು ಭಾಗವನ್ನು ಎಳೆದು ಭೂಮಿಗೆ ಚೆಲ್ಲಿತು. ಹೆರುತ್ತಿದ್ದ ಆ ಸ್ತ್ರೀಯು ಹೆತ್ತ ಕೂಡಲೇ, ಆಕೆಯ ಮಗುವನ್ನು ನುಂಗಿಬಿಡಬೇಕೆಂದು ಆ ಘಟಸರ್ಪವು ಅವಳ ಮುಂದೆ ನಿಂತುಕೊಂಡಿತ್ತು."
ಸೈತಾನನು ಎಷ್ಟು ಜಾಗರೂಕವಾಗಿದ್ದಾನೆ ಎಂದು ನೀವು ನೋಡಿದ್ದೀರಾ? ಸತ್ಯವೇದ ಹೇಳುತ್ತದೆ, ಸ್ತ್ರೀಯು ಮಗುವಿಗೆ ಜನ್ಮ ನೀಡುವವರೆಗೆ ಅವನು ಅವಳ ಸಂತಾನವನ್ನು ನುಂಗಬಹುದು ಎಂದು ತಾಳ್ಮೆಯಿಂದ ಕಾಯುತ್ತಿದ್ದನು ಎಂದು. ಸ್ತ್ರೀಯರು ಗರ್ಭಧರಿಸುವುದಕ್ಕೆ ಅವನು ಅಭ್ಯಂತರವೇನೂ ಮಾಡಲಿಲ್ಲ ಹಾಗಾಗಿ ಗರ್ಭದಲ್ಲಿರುವ ಮಗುವಿನ ಮೇಲೆಯೂ ಅವನು ಯಾವುದೇ ಕಾರ್ಯ ಮಾಡಲಿಲ್ಲ , ಆದರೆ ಆ ಸಂತಾನದ ಮೂಲಕ ಹುಟ್ಟಲಿರುವ ಅದ್ಭುತವಾದ ಉದ್ದೇಶವನ್ನು ನಾಶಮಾಡಲು ಸಿದ್ಧನಾಗಿ ಆ ಸಂತಾನವು ಜನಿಸುವವರೆಗೆ ಅವನು ಕಾಯುತ್ತಿದ್ದನು. ಇದು ಇಂದಿಗೂ ನರಕವು ಕಾರ್ಯನಿರ್ವಹಿಸುವ ಕಾರ್ಯವೈಖರಿಯಾಗಿದೆ.
ಶತ್ರುವು ತನಗೆ ಬೇಕಾದ ಬಲಿಪಶುಗಳನ್ನು ಅವರು ಮಕ್ಕಳಾಗಿದ್ದಾಗಲೇ ಆರಿಸಿಕೊಳ್ಳುತ್ತಾನೆ. ಶತ್ರುವಿಗೆ ಆರಂಭಿಕ ಬೋಧನೆಯ ಮಹತ್ವದ ಬಗ್ಗೆ ಸಂಪೂರ್ಣವಾಗಿ ತಿಳಿದಿದೆ. ಆದ್ದರಿಂದಲೇ ಅವನು ನಮ್ಮ ಸಂತಾನವು ಇನ್ನೂ ಚಿಕ್ಕ ಮಕ್ಕಳಾಗಿರುವಾಗಲೇ ಅವರ ವಿರುದ್ಧ ತಂತ್ರಗಳನ್ನು ಯೋಜಿಸುತ್ತಾನೆ. ಚಿಕ್ಕ ವಯಸ್ಸಿನಲ್ಲಿ, ಮಕ್ಕಳು ಭಾವನಾತ್ಮಕವಾಗಿ ಬಹಳ ಸೂಕ್ಷ್ಮವಾಗಿರುತ್ತಾರೆ ಮತ್ತು ಮಾನಸಿಕವಾಗಿ ಬಹುಬೇಗ ಪ್ರಭಾವಿತರಾಗುವವರಾಗಿರುತ್ತಾರೆ.
"ನಡೆಯಬೇಕಾದ ಮಾರ್ಗಕ್ಕೆ ತಕ್ಕಂತೆ ಮಕ್ಕಳಿಗೆ ಶಿಕ್ಷಣವನ್ನು ಕೊಡು; ಆಗ ಮುಪ್ಪಿನಲ್ಲಿಯೂ ಅವನು ಅದರಿಂದ ದೂರ ಹೋಗುವುದಿಲ್ಲ" ಎಂದು ಅದಕ್ಕಾಗಿಯೇ ಸತ್ಯವೇದದಲ್ಲಿ ನಮಗೆ ಸೂಚನೆ ನೀಡಲಾಗಿದೆ: (ಜ್ಞಾನೋಕ್ತಿ 22:6).
ಆದ್ದರಿಂದ, ನಾವು ನಮ್ಮ ಮಕ್ಕಳಲ್ಲಿ ದೇವರ ಮಾರ್ಗಗಳ ಕುರಿತು ಪ್ರೇರಣೆ ನೀಡಬೇಕಾಗಿದೆ. ಶಾಲೆಗೆ ಹೋದಾಗಲೋ ಅಥವಾ ಮಾಲ್‌ಗಳಿಗೆ ಹೋದಾಗಲೋ ಸೈತಾನನು ಅವರ ಮೇಲೆ ತನ್ನ ಪ್ರಭಾವ ಬೀರಲು ನಾವು ಅನುಮತಿಸಬಹುದೇನೋ ಎಂದು ಹೇಳಲು ಸಾಧ್ಯವಿಲ್ಲ; ನಾವು ಆದಷ್ಟು ಬೇಗನೆ ದೇವರ ಮಾರ್ಗಗಳ ಕುರಿತು ಬೋದಿಸಲು ಪ್ರಾರಂಭಿಸಬೇಕು. “ಲವೊದಿಕೀಯದಲ್ಲಿರುವ ಸಭೆಯ ಸಂದೇಶಕನಿಗೆ ಬರೆ: ಆಮೆನ್ ಎಂಬವರೂ ನಂಬಿಗಸ್ತರೂ ಸತ್ಯಸಾಕ್ಷಿಯೂ ದೇವರಿಂದಾದ ಸೃಷ್ಟಿಗೆ ಒಡೆಯರೂ ಆಗಿರುವವರು ಹೇಳುವುದೇನೆಂದರೆ: ನಾನು ನಿನ್ನ ಕ್ರಿಯೆಗಳನ್ನು ಬಲ್ಲೆನು. ನೀನು ತಣ್ಣಗೂ ಇಲ್ಲ, ಬಿಸಿಯೂ ಇಲ್ಲ, ನೀನು ತಣ್ಣಗಾಗಲಿ, ಬಿಸಿಯಾಗಲಿ ಇದ್ದಿದ್ದರೆ ಚೆನ್ನಾಗಿತ್ತು. ನೀನು ಬಿಸಿಯಾಗಲೀ, ತಣ್ಣಗಾಗಲೀ ಇಲ್ಲದೆ ಉಗುರುಬೆಚ್ಚಗಿರುವುದರಿಂದ ನಿನ್ನನ್ನು ನನ್ನ ಬಾಯೊಳಗಿಂದ ಕಾರಿ ಬಿಡುವೆನು. ಏಕೆಂದರೆ ನೀನು ನಿನ್ನ ವಿಷಯದಲ್ಲಿ, ‘ನಾನು ಐಶ್ವರ್ಯವಂತನು, ನಾನು ಸಂಪಾದಕನಾಗಿದ್ದೇನೆ ಮತ್ತು ಕೊರತೆ ನನಗಿಲ್ಲ,’ ಎಂದು ಹೇಳಿಕೊಳ್ಳುತ್ತಿ. ಆದರೆ ನೀನು ಕೇವಲ ದುರವಸ್ಥೆಯುಳ್ಳವನು, ದೌರ್ಭಾಗ್ಯನು, ದರಿದ್ರನು, ಕುರುಡನು, ಬೆತ್ತಲೆಯಾದವನು ಎಂಬುದನ್ನು ತಿಳಿಯದೆ ಇದ್ದೀ. " ಎಂದು ಸತ್ಯವೇದ ಪ್ರಕಟನೆ 3:14-17 ರಲ್ಲಿ ಹೇಳುತ್ತದೆ.
ಅವರು ಆತ್ಮದಲ್ಲಿ ಬೆಂಕಿಯಾಗಿಯೂ ಉತ್ಸಾಹಭರಿತರಾಗಿಯೂ ಯಾಗಿರಬೇಕು ಎಂದು ದೇವರು ಹೇಳುತ್ತಿದ್ದಾನೆ. ಆಗ ಅವರು ಅವರ ವಿರುದ್ಧ ಬರುವ ಯಾವುದೇ ವಿರೋಧವನ್ನು ತಡೆದುಕೊಳ್ಳಬಹುದು. ಸಮಯ, ಸಂದರ್ಭಗಳು ಮತ್ತು ಲೋಕದ ಒತ್ತಡಗಳು ಅವರ ಹೃದಯದಲ್ಲಿ ಒಂದು ಕಗ್ಗಂಟಾಗಿ ರೂಪುಗೊಳ್ಳುವ ಮೊದಲೇ ಮಕ್ಕಳ ಕೋಮಲ ಹೃದಯದ ಮಣ್ಣಿನಲ್ಲಿ ಸುವಾರ್ತೆಯ ಬೀಜಗಳನ್ನು ಬಿತ್ತಬೇಕು.
ದಾನಿಯೇಲ 1:8 ರಲ್ಲಿ "ದಾನಿಯೇಲನು ಅರಸನ ಭೋಜನದ ಪಾಲಿನಿಂದಲಾದರೂ, ಅವನು ಕುಡಿಯುವ ದ್ರಾಕ್ಷಾರಸದಿಂದಾದರೂ ತನ್ನನ್ನು ಅಶುದ್ಧಪಡಿಸಿಕೊಳ್ಳುವುದಿಲ್ಲವೆಂದು ತನ್ನ ಹೃದಯದಲ್ಲಿ ನಿಶ್ಚಯಿಸಿಕೊಂಡನು. ಆದ್ದರಿಂದ ತಾನು ಅಶುದ್ಧನಾಗದ ಹಾಗೆ ಕಂಚುಕಿಯರ ಯಜಮಾನನನ್ನು ಬೇಡಿಕೊಂಡನು ." ಎನ್ನುವ ದಾನಿಯೇಲ ಎಂಬ ಯುವಕನ ಬಗ್ಗೆ ಸತ್ಯವೇದ ಹೇಳುತ್ತದೆ, ಅವನು ಸೆರೆವೊಯ್ಯಲ್ಪಟ್ಟವನಾಗಿದ್ದನು , ಅಲ್ಲಿ ಅವನ ದೇವರ ಹೆಸರು ನಿಷಿದ್ಧವಾಗಿತ್ತು. ಈ ಯುವಕನು ಸಂಪೂರ್ಣವಾಗಿ ವಿಗ್ರಹಾರಾಧಕ ರಾಷ್ಟ್ರದಲ್ಲಿ ಇರಬೇಕಾದ ಸ್ಥಿತಿಯಿತ್ತು. ಸುಳ್ಳು ಹೇಳುವುದು, ಕಳ್ಳತನ ಮಾಡುವುದು, ಭ್ರಷ್ಟಾಚಾರ ಮತ್ತು ಮದ್ಯಪಾನವು ಸಾಮಾನ್ಯವಾಗಿರುವ ವ್ಯವಸ್ಥೆಯಲ್ಲಿ ನಿಮ್ಮ ಮಗು ತನ್ನ ಅಸ್ತಿತ್ವವನ್ನು ಕಂಡು ಕೊಳ್ಳುವುದನ್ನು ಸ್ವಲ್ಪ ಕಲ್ಪಿಸಿಕೊಳ್ಳಿ. ದಾನಿಯೇಲನು ತನ್ನ ಅಸ್ತಿತ್ವವನ್ನು ಕಂಡುಕೊಂಡ ವ್ಯವಸ್ಥೆಯೂ ಅದೇ ರೀತಿಯದಾಗಿತ್ತು, ಆದರೆ ಅವನು ಈಗಾಗಲೇ ಆತ್ಮದಲ್ಲಿ ಉರಿಯುತ್ತಿರುವ ಮನೋಭಾವ ಹೊಂದಿದವಾನ್ನಾಗಿದ್ದನು. ಅವನು ಈಗಾಗಲೇ ಕರ್ತನಿಗಾಗಿ ಉರಿಯುತ್ತಿದ್ದನು. ಆದ್ದರಿಂದಲೇ ಪ್ರಲೋಭನೆಯನ್ನು ವಿರೋಧಿಸುವುದು ಅವನಿಗೆ ಸುಲಭವಾಗಿ ಕಂಡುಬಂದಿದ್ದರಲ್ಲಿ ಆಶ್ಚರ್ಯವಿಲ್ಲ. ದಾನಿಯೇಲನಂತೆ , ಇಂದಿನ ಯುವಕರನ್ನು ದೇವರ ವಾಕ್ಯ ಮತ್ತು ಪ್ರಾರ್ಥನೆಗಳಿಂದ ತುಂಬಿಸುವ ಸಮಯ ಬಂದಿದೆ, ಇದರಿಂದ ಅವರು ದೇವರೊಂದಿಗೆ ನಿಕಟವಾಗಿ ಉಳಿಯಬಹುದು.
Bible Reading: Joshua 3-5
ಪ್ರಾರ್ಥನೆಗಳು
ತಂದೆಯೇ, ನನ್ನ ಮಕ್ಕಳನ್ನು ಇಲ್ಲಿಯವರೆಗೆ ಕಾದು ಕಾಪಾಡುತ್ತಿರುವ ನಿಮ್ಮ ಕೃಪೆಗಾಗಿ ನಾನು ನಿಮಗೆ ಯೇಸುವಿನ ಹೆಸರಿನಲ್ಲಿ ಸ್ತೋತ್ರ ಸಲ್ಲಿಸುತ್ತೇನೆ .ಅವನನ್ನು/ಅವಳನ್ನು/ಅವರನ್ನು ಕರ್ತನ ಮಾರ್ಗಗಳಲ್ಲಿ ಬೆಳೆಸುವ ಕೃಪೆಗಾಗಿ ನಾನು ಪ್ರಾರ್ಥಿಸುತ್ತೇನೆ. ಅವರಲ್ಲಿರುವ ನಿನ್ನ ಬೆಂಕಿಯು ಎಂದಿಗೂ ಆರಬಾರದು ಎಂದು ಯೇಸುನಾಮದಲ್ಲಿ ಪ್ರಾರ್ಥಿಸುತ್ತೇನೆ. ಆಮೆನ್.
Join our WhatsApp Channel

Most Read
● ನಿಮ್ಮ ಮನೆಯ ವಾತಾವರಣವನ್ನು ಬದಲಾಯಿಸುವುದು -3● ಯುದ್ಧಕ್ಕಾಗಿ ತರಬೇತಿ.
● ದಿನ 34:40 ದಿನಗಳ ಉಪವಾಸ ಮತ್ತು ಪ್ರಾರ್ಥನೆ.
● ದೇವರು ಹೇಗೆ ಒದಗಿಸುತ್ತಾನೆ #1
● ತುರ್ತು ಪ್ರಾರ್ಥನೆ.
● ಕ್ಷಮಿಸಲು ಇರುವ ಪ್ರಾಯೋಗಿಕ ಹಂತಗಳು.
● ಒಂದು ಜನಾಂಗವನ್ನು ಉಳಿಸಿದ ಕಾಯುವಿಕೆ
ಅನಿಸಿಕೆಗಳು