ನೀವು ದೇವರುಗಳು, ಮತ್ತು ನೀವೆಲ್ಲರೂ ಸರ್ವಶಕ್ತನ ಮಕ್ಕಳು." (ಕೀರ್ತನೆ 82:6)
ಎರಡನೇ ಪ್ರಮುಖ ಅಡಚಣೆಯೆಂದರೆ ದೈತ್ಯರ ಜನಾಂಗ, ಎಂಟು ಅಡಿ ಎತ್ತರದಿಂದ ಹದಿಮೂರು ಅಡಿ ಎತ್ತರದವರೆಗೆ ಉದ್ದವಾಗಿರುವ ಉನ್ನತ ಪುರುಷರು (1 ಸಮುವೇಲ 17:4). ಈ ದೈತ್ಯರು ವಾಸ್ತವವಾಗಿ ಭಯಾನಕರಾಗಿದ್ದರು. ಯಹೂದಿ ಇತಿಹಾಸಕಾರ ಜೋಸೆಫಸ್ ಕೂಡ ಈ ದೈತ್ಯರ ಕುರಿತು ಬರೆದಿದ್ದಾರೆ.
ನೋಹನ ಕಾಲದ ಪ್ರವಾಹದ ಮೊದಲು ಮತ್ತು ನಂತರವೂ ಸಹ ಈ ದೈತ್ಯರು ಅಸ್ತಿತ್ವದಲ್ಲಿದ್ದರು. ನೋಹನ ಕಾಲದಲ್ಲಿ, ದೈತ್ಯರ ಜನಾಂಗವೇ ಮನುಷ್ಯರ ಕಲ್ಪನೆಯನ್ನು ನಿರಂತರವಾಗಿ ದುಷ್ಟತನದಲ್ಲಿರಿಸಲು ಕಾರಣವಾಯಿತು. (ಆದಿಕಾಂಡ 6:1–5 ನೋಡಿ.)
ಇಸ್ರಾಯೆಲ್ಯರ ವಾಗ್ದತ್ತ ಭೂಮಿಯಲ್ಲಿ ದೈತ್ಯರು ಭಯವನ್ನು ಸೃಷ್ಟಿಸಿದರು. ಅವರು ಇಸ್ರಾಯೆಲ್ಯಾರ ಕಲ್ಪನೆಯ ಮೇಲೆ ಪ್ರಭಾವ ಬೀರಿ, ಭಯವನ್ನು ಸೃಷ್ಟಿಸಿದರು. ಹನ್ನೆರಡು ಗೂಢಚಾರರು ಮೋಶೆಗೆ ವರದಿಯನ್ನು ತಂದಾಗ, ಇಬ್ಬರು ಆ ಭೂಮಿ ಆಶೀರ್ವದಿಸಲ್ಪಟ್ಟಿದೆ ಎಂದು ಒಪ್ಪಿಕೊಂಡರು, ಆದರೆ ಉಳಿದ ಹತ್ತು ಮಂದಿ ಅಲ್ಲಿನ ದೈತ್ಯರು ತುಂಬಾ ಉನ್ನತರಾಗಿದ್ದು , ಇಬ್ರಿಯರೆಲ್ಲಾ ಅವರ ಪಕ್ಕದಲ್ಲಿ ಮಿಡತೆಗಳಂತೆ ಕಾಣುತ್ತಾರೆ ಎಂದು ಹೇಳಿದರು.
"ಅಲ್ಲಿ ನೆಫೀಲಿಯರನ್ನು ಅಂದರೆ ನೆಫೀಲಿಯ ವಂಶದವರಾದ ಉನ್ನತಪುರುಷರನ್ನು ನೋಡಿದೆವು. ನಾವು ಅವರ ಮುಂದೆ ವಿುಡತೆಗಳಂತೆ ಇದ್ದೇವೆಂದು ತಿಳಿದುಕೊಂಡೆವು; ಅವರಿಗೂ ನಾವು ಹಾಗೆಯೇ ತೋರಿದೆವು ಅಂದರು."ಎಂದು ಅರಣ್ಯ ಕಾಂಡ 13:33 ಹೇಳುತ್ತದೆ.
ಮಿಡತೆಯ ಪ್ರತಿಮೆ ಅವರ ಕಲ್ಪನೆಯಲ್ಲಿತ್ತು - ಅವರು ತಮ್ಮನ್ನು ತಾವು ಚಿಕ್ಕವರು ಮತ್ತು ಅತ್ಯಲ್ಪರು ಎಂದು ಭಾವಿಸಿದ್ದರು. ಯೆಹೋಶುವ ಮತ್ತು ಕಾಲೇಬ ಎಂಬ ಇಬ್ಬರು ವ್ಯಕ್ತಿಗಳಿಗೆ ಮತ್ತೊಂದು ಆತ್ಮವಿತ್ತು (ಅರಣ್ಯಕಾಂಡ 14:24), ಅದಾದ ನಲವತ್ತು ವರ್ಷಗಳ ನಂತರ, ಎಂಬತ್ತೈದು ವರ್ಷ ವಯಸ್ಸಿನಲ್ಲಿ ಕಾಲೇಬನು ಹೆಬ್ರಾನ್‌ನಲ್ಲಿರುವ ಪರ್ವತದಿಂದ ಮೂರು ದೈತ್ಯರನ್ನು ಓಡಿಸಿದನು.
"ಯೆಹೋಶುವನು ಯೆಹೋವನ ಅಪ್ಪಣೆಯಂತೆ ಯೆಫುನ್ನೆಯ ಮಗನಾದ ಕಾಲೇಬನಿಗೆ ಯೆಹೂದ ಕುಲದವರ ಮಧ್ಯದಲ್ಲಿಯೇ ಅನಾಕನ ತಂದೆಯಾದ ಅರ್ಬನ ಪಟ್ಟಣವಾಗಿದ್ದ ಹೆಬ್ರೋನನ್ನು ಕೊಟ್ಟನು. ಕಾಲೇಬನು ಶೇಷೈ, ಅಹೀಮನ್, ತಲ್ಮೈ ಎಂಬ ಅನಾಕನ ಮೂರು ಮಂದಿ ಮಕ್ಕಳನ್ನು ಅಲ್ಲಿಂದ ಹೊರಡಿಸಿಬಿಟ್ಟನು."ಎಂದು ಸತ್ಯವೇದದ ಯಹೋಶುವ 15:13-14 ಹೇಳುತ್ತದೆ.
ನೀವು ಒಂದು ಹಾದಿಯಲ್ಲಿ ಮುನ್ನಡೆಯಲು ಸಾಧ್ಯವಿಲ್ಲ ಎಂದು ಭಾವಿಸುವಂತೆ ಮಾಡುವ ಯಾವ ಚಿತ್ರವನ್ನು ನಿಮ್ಮ ಮನಸ್ಸಿನಲ್ಲಿ ನೀವು ಇಂದು ರೂಪಿಸಿಕೊಂಡಿದ್ದೀರಿ? ಮುಂದೆ ಸಾಗಿದವರನ್ನು ನೀವು ಹಿಂಬಾಲಿಸುವಾಗ ನೀವು ಅಂತಹ ದಾಖಲೆಯನ್ನು ಮುರಿಯಲು ಸಾಧ್ಯವಿಲ್ಲ ಎಂದು ಭಾವಿಸುವಂತೆ ಮಾಡುವ ಯಾವ ದಾಖಲೆಯನ್ನು ನೀವು ಓದುತ್ತಿದ್ದೀರಿ? ಅಸಾಧ್ಯವೆಂದು ತೋರುವ ಯಾವ ಸಾಧನೆಯನ್ನು ನೀವು ಮಾಡಲು ಬಯಸಿದ್ದೀರಿ? ನಿಮಗಾಗಿ ನನ್ನಲ್ಲಿ ಒಂದು ಒಳ್ಳೆಯ ಸುದ್ದಿ ಇದೆ, ಅದು ನಿಮಗೆ ಸಾಧ್ಯ.!
ದೈತ್ಯರು ತಡೆಯದಿದ್ದರೆ , ನೀವು ಖಂಡಿತವಾಗಿಯೂ ವಿಜಯಶಾಲಿಯಾಗುತ್ತೀರಿ. ನನಗೆ ಇದು ಖಚಿತವಾಗಿ ತಿಳಿದಿದೆ ಏಕೆಂದರೆ ಶ್ರೇಷ್ಠನು ನಿಮ್ಮಲ್ಲಿ ವಾಸಿಸುತ್ತಾನೆ. ನೀವು ತ್ರಯೇಕ ದೇವರ ಸ್ವರೂಪದಲ್ಲಿದ್ದೀರಿ.
ನಿಮ್ಮ ವಿರುದ್ಧ ಉದ್ಭವಿಸುವ ಯಾವುದೇ ವಿರೋಧವನ್ನು ನಿಗ್ರಹಿಸಲು ನಿಮ್ಮೊಳಗೆ ಅಪರಿಮಿತವಾದ ಶಕ್ತಿ ಮತ್ತು ಸಾಮರ್ಥ್ಯವಿದೆ. ನಿಮ್ಮ ಹಾದಿಯಲ್ಲಿ ದೈತ್ಯರನ್ನು ಜಯಿಸಲು ಮತ್ತು ಅವರನ್ನು ಮೀರಿ ಮುಂದೆ ಹೋಗಲು ನಿಮಗೆ ಬೇಕಾದ ಆತ್ಮೀಕ ಸಹಿಷ್ಣುತೆ ಇದೆ. ಆದರೆ ಅದನ್ನು ನೀವೇ ಕಂಡು ಕೊಳ್ಳಬೇಕು.
"ಆಗ ಯೆಹೋವನು ಮೋಶೆಗೆ ಇಂತೆಂದನು - ನಿನ್ನನ್ನು ಫರೋಹನಿಗೆ ದೇವರ ಸ್ಥಾನದಲ್ಲಿ ನೇವಿುಸಿದ್ದೇನೆ, ನೋಡು."ಎಂದು ವಿಮೋಚನಕಾಂಡ 7:1 ಮೋಶೆಯ ಬಗ್ಗೆ ಸತ್ಯವೇದ ಹೇಳುತ್ತದೆ. ದೇವರು ಮೋಶೆಗೆ ತಾನು ಯಾವ ಸಂಗತಿಗಳಿಂದ ಮಾಡಲ್ಪಟ್ಟಿದ್ದಾನೆಂದು ತೋರಿಸುತ್ತಿದ್ದಾನೆ. ಮೋಶೆಯು ಬಹುಶಃ ತನ್ನನ್ನು ತಾನೊಬ್ಬ ದುರ್ಬಲ ಕುರುಬ, ಅಪರಾಧಿ ಮತ್ತು ದೇಶಭ್ರಷ್ಟನಾಗಿ ಓಡಿಬಂದವನು ಎಂದು ಭಾವಿಸಿರಬಹುದು. ,ವಿಶೇಷವಾಗಿ ಅವನನ್ನು "ಬೇಕಾಗಿದ್ದಾರೆಂದು" ಘೋಷಿಸಲಾದ ಅದೇ ರಾಷ್ಟ್ರದಲ್ಲಿ ಒಂದು ದೇಶದಿಂದ ಪರಾರಿಯಾಗುವ ವ್ಯಕ್ತಿಯು ಜೀವನದಲ್ಲಿ ಏನಾಗಬಹುದು? ಆದರೂ, ದೇವರು ಅವನಿಗೆ, "ನಾನು ನಿನ್ನನ್ನು ಫರೋಹನ ಮೇಲೆ ದೇವರನ್ನಾಗಿ ಮಾಡಿದ್ದೇನೆ" ಎಂದು ಹೇಳಿದನು.
ಫರೋಹ ಎಂಬ ಹೆಸರು ಮೋಶೆಯನ್ನು ಹೆದರಿಸುತ್ತಿತ್ತು. ಅವನ ತಲೆಯ ಮೇಲೆ ಮರಣದಂಡನೆಯ ತೀರ್ಪು ನೇತಾಡುತ್ತಿದ್ದ ಕಾರಣ ಆ ಹೆಸರಿನ ಉಲ್ಲೇಖವಾಗುತ್ತಲೇ ಅವನು ಓಡಿಹೋಗಿ ಅಡಗಿಕೊಳ್ಳುತ್ತಿದ್ದನು. ಫರೋಹನು ತನ್ನ ಕರೆಯ ವಾಸ್ತವದಲ್ಲಿ ಮೋಶೆ ಕಾರ್ಯನಿರ್ವಹಿಸಲು ಬಿಡದ ದೈತ್ಯನಂತೆ ಮೊಷೆಗೆ ಇದ್ದನು. ಆದರೆ ದೇವರು, "ನೀವು ಈ ಪರ್ವತವನ್ನು ದಾಟಬಹುದು " ಎಂದು ಹೇಳಿದನು. ನೀವು ದೈತ್ಯರೊಂದಿಗೆ ಓಡಿ ಜಯಿಸಲು ಸಮರ್ಥರಾಗಿದ್ದೀರಿ.
ದಾವೀದನು ಗೋಲಿಯಾತನ ಮುಂದೆ ನಿಂತನು, ಗೊಲ್ಯಾತನು ಸಹ ಒಬ್ಬ ದೈತ್ಯ ವ್ಯಕ್ತಿಯಾಗಿದ್ದನು ಮತ್ತು ಯೌವನದಿಂದಲೂ ಯೋಧನಾಗಿದ್ದನು. ಆದರೂ, ದಾವೀದನು ಅವನನ್ನು ಕಂಡು ಭಯಭೀತನಾಗಲಿಲ್ಲ; ಬದಲಾಗಿ, ಅವನು ದೇವರ ವಾಕ್ಯವನ್ನು ಹೇಳಿ ಅಂತಿಮವಾಗಿ ಆ ದೈತ್ಯನನ್ನು ಕೊಂದನು.
ಸ್ನೇಹಿತನೇ, ನಿನ್ನ ಹಾದಿಯಲ್ಲಿರುವ ದೈತ್ಯರನ್ನು ಲೆಕ್ಕಿಸಬೇಡ; ದೇವರು ನಿನ್ನೊಂದಿಗಿದ್ದಾನೆ; ಮುಂದುವರೆ . ಕಾಲೇಬನು ದೈತ್ಯರನ್ನು ಜಯಿಸಲು ಮತ್ತು ಅವರ ಭೂಮಿಯಿಂದ ಅವರನ್ನು ಹೊರಹಾಕಲು ಸಹಾಯ ಮಾಡಿದ ಅದೇ ದೇವರು, ಅವರನ್ನು ಸ್ವಾಧೀನಪಡಿಸಿಕೊಳ್ಳಲು ನಿನಗೆ ಅಧಿಕಾರ ನೀಡುತ್ತಾನೆ.
Bible Reading: 1 Samuel 10-13
ಪ್ರಾರ್ಥನೆಗಳು
ತಂದೆಯೇ, ಇಂದು ನೀನು ಕೊಟ್ಟ ವಾಕ್ಯ ವಿವರಣೆಗಾಗಿ ನಿನಗೆ ಯೇಸುನಾಮದಲ್ಲಿ ಸ್ತೋತ್ರ . ನನ್ನ ಮನಸ್ಸಿನಲ್ಲಿ ಸರಿಯಾದ ಚಿತ್ರಣವನ್ನು ಹೊಂದಲು ನೀನು ನನ್ನನ್ನು ಬಲಪಡಿಸಬೇಕೆಂದು ನಾನು ಯೇಸುನಾಮದಲ್ಲಿ ಪ್ರಾರ್ಥಿಸುತ್ತೇನೆ. ಇನ್ನು ಮುಂದೆ ಜೀವನದ ಓಟದಲ್ಲಿ ನಾನು ಬಲಿಪಶುವಾಗುವುದಿಲ್ಲ ಎಂದು ಯೇಸುನಾಮದಲ್ಲಿ ಘೋಷಿಸುತ್ತೇನೆ ಆಮೆನ್.
Join our WhatsApp Channel

Most Read
● ಆತ್ಮಕ್ಕೆ ದೇವರ ಔಷಧಿ● ಶುದ್ಧೀಕರಣದ ತೈಲ
● ಮನುಷ್ಯನ ಹೃದಯ
● ಯಾಬೇಚನ ಪ್ರಾರ್ಥನೆ
● ಇಸ್ಕಾರಿಯೋತ ಯೂದನ ಜೀವನದಿಂದ ಕಲಿಯಬೇಕಾದ ಪಾಠಗಳು- 3
● ಕರ್ತನೇ, ನನ್ನ ಚಿತ್ತ- ಚಂಚಲಗೊಳಿಸುವ ಸಂಗತಿಗಳಿಂದ ನನ್ನನ್ನು ಬಿಡಿಸು.
● ಆತ್ಮದಲ್ಲಿ ಉರಿಯುತ್ತಿರ್ರಿ.
ಅನಿಸಿಕೆಗಳು