ಅನುದಿನದ ಮನ್ನಾ
2
0
18
ನಿಮ್ಮ ನಂಬಿಕೆಯಲ್ಲಿ ರಾಜಿ ಮಾಡಿಕೊಳ್ಳಬೇಡಿ
Friday, 18th of April 2025
Categories :
ನಂಬಿಕೆ (Faith)
"ನಾನು ನಿನ್ನ ವಾಕ್ಯವನ್ನು ಇವರಿಗೆ ಕೊಟ್ಟಿದ್ದೇನೆ; ನಾನು ಲೋಕದವನಲ್ಲದೆ ಇರುವ ಪ್ರಕಾರ ಇವರೂ ಲೋಕದವರಲ್ಲ; ಆದಕಾರಣ ಲೋಕವು ಇವರ ಮೇಲೆ ದ್ವೇಷ ಮಾಡಿ ಅದೆ. ಇವರನ್ನು ಲೋಕದೊಳಗಿಂದ ತೆಗೆದುಕೊಂಡು ಹೋಗಬೇಕೆಂದು ನಾನು ಕೇಳಿಕೊಳ್ಳುವದಿಲ್ಲ; ಕೆಡುಕನಿಂದ ತಪ್ಪಿಸಿ ಕಾಪಾಡಬೇಕೆಂದು ಕೇಳಿಕೊಳ್ಳುತ್ತೇನೆ. ನಾನು ಲೋಕದವನಲ್ಲದೆ ಇರುವ ಪ್ರಕಾರ ಇವರು ಲೋಕದವರಲ್ಲ." (ಯೋಹಾನ 17:14-16)
ಕ್ರೈಸ್ತರಾದ ನಾವು ಈ ಲೋಕದಲ್ಲಿ ವಾಸಿಸಲು ಕರೆಯಲ್ಪಟ್ಟಿದ್ದೇವೆಯೇ ಹೊರತು ಈ ಲೋಕಕ್ಕೆ ಸಂಬಂಧಿಸಿದವರಲ್ಲ. (ಯೋಹಾನ 17) ನಮ್ಮ ನೆರೆಹೊರೆಯವರನ್ನು, ನಮ್ಮ ಶತ್ರುಗಳನ್ನು ಸಹ ಪ್ರೀತಿಸುವುದಕೋಸ್ಕರ ನಾವು ಕರೆಯಲ್ಪಟ್ಟಿದ್ದೇವೆ, ಆದರೆ ಇದರ ಅರ್ಥ ನಾವು ನಮ್ಮ ಮೌಲ್ಯಗಳು ಮತ್ತು ನಂಬಿಕೆಗಳನ್ನು ನಮ್ಮೊಡನೆ ಹಂಚಿಕೊಳ್ಳದವರೊಂದಿಗೆ ನಾವು ಇಜ್ಜೋಡಾಗಬೇಕು ಎಂದಲ್ಲ.
ಇಂದಿನ ಜಗತ್ತಿನಲ್ಲಿ, ಕ್ರೈಸ್ತರು ಧರ್ಮಶಾಸ್ತ್ರವನ್ನು ಗೌರವಿಸದ ವ್ಯಕ್ತಿಗಳೊಂದಿಗೆ ಕೆಲಸ ಮಾಡುವಂತದ್ದು ಅಥವಾ ಜೊತೆಗೆ ಇರುವಂತದ್ದು ಮತ್ತು ಅವರ ನಂಬಿಕೆಗಳಿಗಾಗಿ ಅವರಿಂದ ಹಿಂಸೆಗೊಳಗಾಗುವುದು ಸಾಮಾನ್ಯವಾಗಿಬಿಟ್ಟಿದೆ. ಇದು ಕ್ರೈಸ್ತರಿಗೆ ಸವಾಲಿನದ್ದಾಗಿರಬಹುದು, ಏಕೆಂದರೆ ಇದು ಅವರ ಆತ್ಮೀಕ ವಿವೇಚನೆ ಮತ್ತು ದೇವರೊಂದಿಗೆ ನಡೆಯುವ ಅವರ ಸಂಬಂಧದ ಮೇಲೆಯೂ ಪರಿಣಾಮ ಬೀರಬಹುದು. ಇದರ ಅರ್ಥ ನಾವು ಲೋಕದಿಂದ ನಮ್ಮನ್ನು ಪ್ರತ್ಯೇಕಿಸಿಕೊಳ್ಳಬೇಕು ಎಂದಲ್ಲ, ಬದಲಿಗೆ ನಾವು ಇಟ್ಟುಕೊಳ್ಳುವ ಸಹವಾಸದ ಕುರಿತು ನಾವು ಉದ್ದೇಶಪೂರ್ವಕವಾಗಿರಬೇಕು ಎಂದಾಗಿದೆ.
ರಾಜಿ ಮಾಡಿಕೊಳ್ಳುವುದು ಎಂದರೆ ನಿಮಗೆ ಸರಿ ಎಂದು ತಿಳಿದಿರುವುದಕ್ಕಿಂತಲೂ ಸ್ವಲ್ಪ ಕೆಳಗೆ ಹೋಗುವುದು. ಸತ್ಯವೇದವು "ಬಳ್ಳಿಯನ್ನು ಹಾಳುಮಾಡುವ ಪುಟ್ಟ ನರಿಗಳಂತಹ" ರಾಜಿಗಳನ್ನು ಉಲ್ಲೇಖಿಸುತ್ತದೆ. (ಸೊಲೊಮೋನನ ಪರಮ ಗೀತ 2:15) ಅದಕ್ಕಾಗಿಯೇ ನಮ್ಮ ನಿಷ್ಠೆಯನ್ನು ವಿಶೇಷವಾಗಿ ಸಣ್ಣ ಸಣ್ಣ ವಿಷಯಗಳಲ್ಲೂ ಕಾದುಕೊಳ್ಳುವುದು ತುಂಬಾ ಪ್ರಾಮುಖ್ಯವಾದದ್ದು.
"ಶಾಸನಕ್ಕೆ ರುಜುವಾದದ್ದು ದಾನಿಯೇಲನಿಗೆ ತಿಳಿದಾಗ ಅವನು ತನ್ನ ಮನೆಗೆ ಹೋಗಿ ಯೆರೂಸಲೇವಿುನ ಕಡೆಗೆ ಕದವಿಲ್ಲದ ಕಿಟಕಿಗಳುಳ್ಳ ತನ್ನ ಮಹಡಿಯ ಕೋಣೆಯಲ್ಲಿ ಯಥಾಪ್ರಕಾರ ದಿನಕ್ಕೆ ಮೂರಾವರ್ತಿ ಮೊಣಕಾಲೂರಿ ತನ್ನ ದೇವರಿಗೆ ಪ್ರಾರ್ಥನೆಮಾಡಿ ಸ್ತೋತ್ರಸಲ್ಲಿಸಿದನು". (ದಾನಿಯೇಲ 6:10)
ನಿಷ್ಠೆಯು ಬಡ್ತಿಗೆ ಹೇಗೆ ಕಾರಣವಾಗಬಹುದು ಎಂಬುದಕ್ಕೆ ದಾನಿಯೇಲನ ಕಥೆಯು ಒಂದು ಪ್ರಮುಖ ಉದಾಹರಣೆಯಾಗಿದೆ.ಮರಣ ದಂಡನೆಯ ಬೆದರಿಕೆಯನ್ನು ಎದುರಿಸುತ್ತಿದ್ದರೂ, ದಾನಿಯೇಲನು ತನ್ನ ನಂಬಿಕೆಗಳ ವಿಚಾರದಲ್ಲಿ ರಾಜಿ ಮಾಡಿಕೊಳ್ಳುವುದಕ್ಕೆ ನಿರಾಕರಿಸಿದನು. ಹಾಗೆ ಮಾಡುವ ಮೂಲಕ, ಅವನು ಪರ್ಷಿಯಾದಲ್ಲೇ ಅತ್ಯಂತ ಪ್ರಭಾವಶಾಲಿ ವ್ಯಕ್ತಿಗಳಲ್ಲಿ ಒಬ್ಬನಾಗಲು ತನ್ನ ಜೀವನದಲ್ಲಿ ಬಾಗಿಲು ತೆರೆದು ಕೊಟ್ಟನು.
ರಾಜಿ ಮಾಡಿಕೊಳ್ಳಲು ನಿರಾಕರಿಸುವ ವ್ಯಕ್ತಿಯು ತನ್ನ ಜೀವನದಲ್ಲಿ ದೊಡ್ಡ ದೊಡ್ಡ ಅವಕಾಶಗಳನ್ನು ಅನುಗ್ರಹಿಸಲು ದೇವರು ನಂಬಬಹುದಾದ ವ್ಯಕ್ತಿಯಾಗಿರುತ್ತಾನೆ. ಅಂತಹ ವ್ಯಕ್ತಿಗಳು ದೇವರೊಬ್ಬನೇ ಗಮನಿಸುವ ವ್ಯಕ್ತಿಯಾಗಿರದೇ ಅವರ ಜೊತೆಗಿರುವ ಅವರ ಉದ್ಯೋಗದಾತರು, ಸಹೋದ್ಯೋಗಿಗಳು ಅಥವಾ ಗೆಳೆಯರು ಹೀಗೆ ಇತರ ಮನುಷ್ಯರೂ ಕೂಡ ಗಮನಿಸುತ್ತಿರುವ ವ್ಯಕ್ತಿಯಾಗಿರುತ್ತಾರೆ ಎಂಬುದನ್ನು ಕೂಡ ಇಲ್ಲಿ ಗಮನಿಸುವುದು ಮುಖ್ಯ.
ರಾಜಿ ಮಾಡಿಕೊಳ್ಳುವಂತದ್ದು ಕಳೆದುಹೋಗಿರುವ ಮತ್ತು ನಶಿಸುತ್ತಿರುವ ಜಗತ್ತಿನಲ್ಲಿ ನಿಮ್ಮ ಸಾಕ್ಷಿಯನ್ನು ಹಾಳುಮಾಡಬಹುದು, : "ಲೋಕದ ಸ್ನೇಹಿತನಾಗಲು ಬಯಸುವವನು ತನ್ನನ್ನು ದೇವರ ಶತ್ರುವನ್ನಾಗಿ ಮಾಡಿಕೊಳ್ಳುತ್ತಾನೆ." ಎಂದು ಯಾಕೋಬ 4:4 ಎಚ್ಚರಿಸಿದಂತೆ ಕ್ರೈಸ್ತರಾದ ನಮಗೆ ನಮ್ಮ ರಕ್ಷಣೆ , ಸತ್ಯದ ಜ್ಞಾನ ಮತ್ತು ಸರ್ವಶಕ್ತನ ಮಕ್ಕಳಾಗಿ ಆಶೀರ್ವಾದ ಪಡೆದ ಸ್ಥಾನದೊಂದಿಗೆ ಬರುವ ದೊಡ್ಡ ಜವಾಬ್ದಾರಿ ಕೂಡ ಇದೆ. ನಮ್ಮ ಸುತ್ತಲಿನ ಜನರನ್ನು ನಾವು ಖಂಡಿತವಾಗಿಯೂ ಗೌರವಿಸಬೇಕು, ಆದರೆ ನಮ್ಮ ಸತ್ಯವೇದ ಮೌಲ್ಯಗಳು ಮತ್ತು ನಂಬಿಕೆಗಳಲ್ಲಿ ನಾವು ರಾಜಿ ಮಾಡಿಕೊಳ್ಳಬಾರದು.
Bible Reading: 2 Samuel 16-18
ಪ್ರಾರ್ಥನೆಗಳು
ಪ್ರೀತಿಯ ತಂದೆಯೇ, ನಿಮ್ಮ ವಾಕ್ಯವು ಕಷ್ಟಕರ ಅಥವಾ ಜನಪ್ರಿಯವಲ್ಲದಂತೆ ತೋರಿದಾಗಲೂ ರಾಜಿ ಮಾಡಿಕೊಳ್ಳುವ ಉದ್ದೇಶವನ್ನು ನಿರಾಕರಿಸುವಂತ ಕೃಪೆಯನ್ನು ಯೇಸುನಾಮದಲ್ಲಿ ಅನುಗ್ರಹಿಸು. ನಾನು ನಿನ್ನ ದೃಷ್ಟಿಯಲ್ಲಿ ವಿಶ್ವಾಸಾರ್ಹನಾಗಿರಲು ಬಯಸುತ್ತೇನೆ. ನನ್ನ ಜೀವನವನ್ನು ಈ ಅಂಧಕಾರದ ಜಗತ್ತಿನಲ್ಲಿ ಪ್ರಕಾಶಮಾನವಾಗಿ ಹೊಳೆಯುವಂತೆ ನಿನ್ನ ಪ್ರೀತಿ ಮತ್ತು ಸತ್ಯದ ಪ್ರತಿರೂಪವಾಗಿ ಯೇಸುನಾಮದಲ್ಲಿ ನನ್ನನ್ನು ಮಾರ್ಪಡಿಸು. ಆಮೆನ್.
Join our WhatsApp Channel

Most Read
● ನಿಮ್ಮ ರಕ್ಷಣೆಯ ದಿನವನ್ನು ಸಂಭ್ರಮಿಸಿ.● ಹೋಲಿಕೆಯ ಬಲೆ
● ನಂಬಿಕೆಯಿಂದ ಹೊಂದಿಕೊಳ್ಳುವುದು
● ಅದ್ಭುತಗಳಲ್ಲಿ ಕಾರ್ಯ ಮಾಡುವುದು - ಕೀಲಿಕೈ #1
● ದಿನ 16:40 ದಿನಗಳ ಉಪವಾಸ ಮತ್ತು ಪ್ರಾರ್ಥನೆ.
● ಅಪರಾಧಗಳಿಗಿರುವ ಪರಿಪೂರ್ಣ ಪರಿಹಾರ.
● ಚಿಂತೆಯಿಂದ ಹೊರಬರಲು ಈ ಸಂಗತಿಗಳ ಕುರಿತು ಯೋಚಿಸಿ
ಅನಿಸಿಕೆಗಳು