ಅನುದಿನದ ಮನ್ನಾ
2
0
43
ನಿಮ್ಮ ಜೀವನವನ್ನು ಬದಲಾಯಿಸಬೇಕೆಂದರೆ ಯಜ್ಞವೇಧಿಗೆ ಆದ್ಯತೆ ನೀಡಿ
Sunday, 18th of May 2025
" ಆಗ ದೇವರ ಮನುಷ್ಯನಾದ ಮೋಶೆಯ ಧರ್ಮಶಾಸ್ತ್ರದಲ್ಲಿ ಬರೆದಿರುವ ಪ್ರಕಾರ ಸರ್ವಾಂಗಹೋಮಗಳನ್ನು ಸಮರ್ಪಿಸುವದಕ್ಕಾಗಿ ಯೋಚಾದಾಕನ ಮಗನಾದ ಯೇಷೂವನೂ ಯಾಜಕರಾದ ಅವನ ಬಂಧುಗಳೂ ಶೆಯಲ್ತೀಯೇಲನ ಮಗನಾದ ಜೆರುಬ್ಬಾಬೆಲನೂ ಅವನ ಬಂಧುಗಳೂ ಇಸ್ರಾಯೇಲ್‍ದೇವರ ಯಜ್ಞವೇದಿಯನ್ನು ತಿರಿಗಿ ಕಟ್ಟುವದಕ್ಕೆ ಪ್ರಾರಂಭಿಸಿದರು." (ಎಜ್ರಾ 3:2)
ಯಹೂದಿ ವ್ಯಕ್ತಿಯ ಇಡೀ ಜೀವನವು ದೇವರ ದೇವಾಲಯದ ಸುತ್ತ ಸುತ್ತುತ್ತಿರುತ್ತದೆ. ಈಗ ದೃಶ್ಯವೆಂದರೆ ಯೆರುಸಲೆಮ್ ದೇವಾಲಯವು ಆಕ್ರಮಣಕಾರಿ ಶತ್ರು ಸೈನ್ಯಗಳಿಂದ ಈಗಾಗಲೇ ನಾಶವಾಗಿತ್ತು. ಎಜ್ರಾ ದೈವಿಕವಾಗಿ ಪ್ರೇರಿತನಾಗಿ ಬಿದ್ದು ಹೋದ ದೇವರ ಆಲಯವನ್ನು ಪುನಃಸ್ಥಾಪಿಸಲು ನಿಯೋಜಿಸಲ್ಪಟ್ಟನು. ಕುತೂಹಲಕಾರಿಯಾಗಿ, ಅವರು ದೇವಾಲಯವನ್ನು ನಿರ್ಮಿಸುವಾಗ, ಮೊದಲು ಅವರು ದೇವರಿಗಾಗಿ ಯಜ್ಞವೇದಿಯನ್ನು ನಿರ್ಮಿಸಿದರು.
ಹೌದು ಅವರು ಯಜ್ಞವೇದಿಯನ್ನು ಕಟ್ಟುವ ಮೂಲಕ ನಿರ್ಮಾಣವನ್ನು ಪ್ರಾರಂಭಿಸಿದರು ಏಕೆಂದರೆ ಅದುವೇ ಆತ್ಮೀಕ ಆದ್ಯತೆಯಾಗಿತ್ತು.
"ನಿಮ್ಮಲ್ಲಿ ಯಜ್ಞವೇದಿಇರಬಹುದು ಮತ್ತು ದೇವಾಲಯವಿಲ್ಲದಿರಬಹುದು ಆದರೆ ಯಜ್ಞವೇದಿಯಿಲ್ಲದೆ ದೇವಾಲಯವಿರುವುದಿಲ್ಲ." ಕಾಣಿಕೆಯನ್ನು ಪವಿತ್ರಗೊಳಿಸುವಂತದ್ದು ದೇವಾಲಯವಲ್ಲ ಅದು ಯಜ್ಞವೇದಿ. . ಶಕ್ತಿಯು ದೇವಾಲಯದಿಂದ ಬರುವುದಿಲ್ಲ, ಬದಲಾಗಿ ಆ ಯಜ್ಞವೇಧಿಯಿಂದ ಬರುತ್ತದೆ. ದೇವಾಲಯದಲ್ಲಿ ನಡೆಯುವ ಎಲ್ಲವೂ ಯಜ್ಞವೇದಿಯಿಂದಲೇ ಹೊರಹೊಮ್ಮವಂತದ್ದಾಗಿದೆ.
ಹಾಗಾದರೆ ಈ ತತ್ವವನ್ನು ಮನಸ್ಸಿನಲ್ಲಿಟ್ಟುಕೊಂಡು;
ನೀವು ಒಂದು ದೊಡ್ಡ ಸೇವೆಯನ್ನು ನಿರ್ಮಿಸುವ ಮೊದಲು, ಮೊದಲು ನಿಮ್ಮ ಪ್ರಾರ್ಥನಾ ಯಜ್ಞವೇದಿಯನ್ನು ನಿರ್ಮಿಸಿ.
ನೀವು ಮನೆಯನ್ನು ನಿರ್ಮಿಸುವ ಮೊದಲು, ಮೊದಲು ಒಂದು ಯಜ್ಞವೇದಿಯನ್ನು ನಿರ್ಮಿಸಿ.
ನೀವು ವೈವಾಹಿಕ ಜೀವಿತ ನಿರ್ಮಿಸುವ ಮೊದಲು ಒಂದು ಯಜ್ಞವೇದಿಯನ್ನು ನಿರ್ಮಿಸಿ.
ನೀವು ಒಂದು ವ್ಯವಹಾರವನ್ನು ನಿರ್ಮಿಸುವ ಮೊದಲು ಒಂದು ಯಜ್ಞವೇದಿಯನ್ನು ನಿರ್ಮಿಸಿ.
ನೀವು ಈ ಆದ್ಯತೆಯನ್ನು ನೋಡಿಕೊಂಡರೆ ಇತರ ಎಲ್ಲಾ ವಿಷಯಗಳು ಸರಿಯಾಗಿ ಅದರ ಜಾಗಕ್ಕೆ ಬಂದು ನಿಲ್ಲುತ್ತವೆ. ಕರ್ತನಾದ ಯೇಸು ಸ್ವತಃ ಯಜ್ಞವೇದಿಯ ಆದ್ಯತೆಯ ಕುರಿತು ಮಾತನಾಡಿದನು.
"ಹೀಗಿರುವದರಿಂದ, ನೀವು ಮೊದಲು ದೇವರ ರಾಜ್ಯಕ್ಕಾಗಿಯೂ ನೀತಿಗಾಗಿಯೂ ತವಕಪಡಿರಿ. ಇವುಗಳ ಕೂಡ ಅವೆಲ್ಲವೂ ನಿಮಗೆ ದೊರಕುವವು. (ಮತ್ತಾಯ 6:33)
ಮೂಲಭೂತವಾಗಿ, ಕರ್ತನಾದ ಯೇಸು ಹೇಳುತ್ತಿರುವುದೇನೆಂದರೆ , ನೀವು ಎಲ್ಲಕ್ಕಿಂತ ಹೆಚ್ಚಾಗಿ ಯಜ್ಞವೇದಿ ನಿರ್ಮಿಸುವುದಕ್ಕೆ ಆದ್ಯತೆ ನೀಡಿದರೆ ಇತರ ಎಲ್ಲಾ ವಿಷಯಗಳು ಸರಿಯಾಗಿ ಅದರ ಜಾಗಕ್ಕೆ ಬರುತ್ತವೆ ಎಂದು. ಇದು ನೀವು ಮತ್ತು ನಾನು ನಿರ್ಲಕ್ಷಿಸಬಾರದ ಒಂದು ಪ್ರಬಲ ತತ್ವವಾಗಿದೆ.
ಯಜ್ಞವೇದಿ ಎಂದರೇನು?
ಯಜ್ಞವೇದಿಯು ಒಂದು ವಿನಿಮಯದ ಸ್ಥಳವಾಗಿದೆ. ಇದು ಆತ್ಮೀಕ ಮತ್ತು ನೈಸರ್ಗಿಕ ನಡುವಿನ ಭೇಟಿಯ ಸ್ಥಳವಾಗಿದೆ; ದೈವತ್ವ ಮತ್ತು ಮಾನವೀಯತೆಯ ನಡುವಿನ ಭೇಟಿಯ ಸ್ಥಳವಾಗಿದೆ. ಯಜ್ಞವೇದಿಯು ದೇವರು ಮನುಷ್ಯನನ್ನು( ಆತೀಕ ಮನುಷ್ಯನನ್ನು) ಭೇಟಿಯಾಗುವ ಸ್ಥಳವಾಗಿದೆ. ಯಜ್ಞವೇದಿಯು ಒಬ್ಬ ವ್ಯಕ್ತಿಯ ಗತಿಯನ್ನೇ ಬದಲಾಯಿಸುವ ಸ್ಥಳವಾಗಿದೆ.
ಹಳೆಯ ಒಡಂಬಡಿಕೆಯಲ್ಲಿ, ಯಜ್ಞವೇದಿ ಎಂಬುದು ಒಂದು ಭೌತಿಕ ಸ್ವರೂಪದಲ್ಲಿದ್ದ ಸ್ಥಳವಾಗಿತ್ತು. ನೀವು ದೇವರನ್ನು ಭೇಟಿಯಾಗಬೇಕಾದರೆನಿಮಗೆ ಬೇಕಾದ ಕಡೆ ಅದನ್ನು ಕಟ್ಟದೆ , ನೀವು ಈ ಯಜ್ಞವೇದಿ ಬಳಿಗೆ ಹೋಗಬೇಕಾಗಿತ್ತು. ನೀವು ಯಜ್ಞ ಮಾಡಬೇಕಾದರೆ, ನೀವು ಬಲಿ ನೀಡಲು ಈ ಸ್ಥಳಕ್ಕೆ ಹೋಗಬೇಕಾಗಿತ್ತು.
ಆದಾಗ್ಯೂ, ಹೊಸ ಒಡಂಬಡಿಕೆಯಲ್ಲಿ, ಯಜ್ಞವೇಧಿ ಎಂಬುದು ಒಂದು ಆತ್ಮೀಕ ಸ್ಥಳವಾಗಿದೆ. ಅಲ್ಲಿ ಮಾನವನ ಆತ್ಮವು ದೇವರ ಆತ್ಮವನ್ನು ಭೇಟಿ ಮಾಡುತ್ತದೆ.
ಸತ್ಯವೇದದ ದಿನಗಳಲ್ಲಿ, ಯೆಹೂದ್ಯರು ಯೆರುಸಲೆಮ್‌ನಲ್ಲಿ ತಮ್ಮ ಯಜ್ಞವೇಧಿಯನ್ನು ಹೊಂದಿದ್ದರು ಮತ್ತು ಸಮಾರ್ಯದವರು ಸಮಾರ್ಯದಲ್ಲಿ ತಮ್ಮ ಯಜ್ಞವೇಧಿಯನ್ನು ಹೊಂದಿದ್ದರು. ಇಬ್ಬರೂ ತಮ್ಮ ಯಜ್ಞವೇಧಿಯ ಸ್ಥಳವೇ ಸರಿಯಾದ ಸ್ಥಳ ಎಂದು ವಾದಿಸುತ್ತಿದ್ದರು. ಇದು ಯಹೂದಿಗಳು ಮತ್ತು ಸಮಾರ್ಯರ ನಡುವೆ ದೊಡ್ಡ ದ್ವೇಷಕ್ಕೆ ಕಾರಣವಾಯಿತು. ಈ ಕಾರಣದಿಂದಾಗಿ ಅವರು ಪರಸ್ಪರ ಮಾತನಾಡುತ್ತಿರಲಿಲ್ಲ. ಕರ್ತನಾದ ಯೇಸು ಯಾಕೋಬನ ಬಾವಿಯ ಬಳಿ ಸಮಾರ್ಯದ ಸ್ತ್ರೀಯನ್ನು ಭೇಟಿಯಾದಾಗ, ಆತನು ಅದರ ದಾಖಲೆಯನ್ನು ಸರಿಪಡಿಸಿದನು.
"ಸ್ತ್ರೀಯೇ , ನೀವು ತಂದೆಯನ್ನು ಬೆಟ್ಟದ ಮೇಲೆಯೂ ಅಲ್ಲ (ಸಮಾರಿಯಾದಲ್ಲಿ) ಅಥವಾ ಜಯೆರುಸಲೆಮ್‌ನಲ್ಲಿಯೂ ಅಲ್ಲ, ಆದರೆ ನಿಮ್ಮ ಹೃದಯದಲ್ಲಿ (ಆತ್ಮದಲ್ಲಿ ) ಆರಾಧಿಸುವ ಸಮಯ ಬಂದಿದೆ - ಎಂದು ಆತನು ಹೇಳಿದನು.ಯೋಹಾನ 4:21 ನಾವು ಇನ್ನು ಮುಂದೆ ಭೌತಿಕ ಯಜ್ಞವೇಧಿಗಳನ್ನು ನಿರ್ಮಿಸುವುದಿಲ್ಲ ಏಕೆಂದರೆ ನಾವೇ ಪವಿತ್ರಾತ್ಮನಿಗೆ ಗರ್ಭಗುಡಿಯಾಗಿದ್ದೇವೆ .
ಪ್ರಾರ್ಥನೆ, ಆರಾಧನೆ ಮತ್ತು ದೇವರ ವಾಕ್ಯದಲ್ಲಿ ಪ್ರತಿದಿನ ಕರ್ತನನ್ನು ಹುಡುಕುವುದನ್ನು ನಿಮ್ಮ ಆದ್ಯತೆಯನ್ನಾಗಿ ಮಾಡಿಕೊಳ್ಳಿ. ನಿಮ್ಮ ಯಜ್ಞವೇಧಿಯು ನಿಮ್ಮ ಜೀವನವನ್ನೇ ಬದಲಾಯಿಸುವ ಶಕ್ತಿಯನ್ನು ಹೊಂದಿದೆ.
Bible Reading: 1 Chronicles 12-15
ಪ್ರಾರ್ಥನೆಗಳು
ಪ್ರತಿಯೊಂದು ಪ್ರಾರ್ಥನಾ ವಿಷಯವನ್ನು ಕನಿಷ್ಠ 2 ನಿಮಿಷಗಳು ಅಥವಾ ಅದಕ್ಕಿಂತ ಹೆಚ್ಚು ಕಾಲ ಪ್ರಾರ್ಥಿಸಬೇಕು.
ವೈಯಕ್ತಿಕ ಆತ್ಮೀಕ ಬೆಳವಣಿಗೆಗಾಗಿ
ನನ್ನ ದೇವರೇ ಮತ್ತು ನನ್ನ ಕರ್ತನೇ, ನನ್ನ ಜೀವನದಲ್ಲಿ ಯಾವಾಗಲೂ ನಿನ್ನನ್ನೇ ಮೊದಲ ಸ್ಥಾನದಲ್ಲಿಡಲು ನನಗೆ ಕೃಪೆಯನ್ನು ಅನುಗ್ರಹಿಸು . ಪರಮೋನ್ನತ ಪವಿತ್ರಾತ್ಮನೇ, ಯೇಸುವಿನ ಹೆಸರಿನಲ್ಲಿ ನಿನ್ನ ಪವಿತ್ರ ಬೆಂಕಿಯಿಂದ ನನ್ನ ಆತ್ಮೀಕ ಮನುಷ್ಯನನ್ನು ಬೆಳಗಿಸಿ.
ಕುಟುಂಬ ರಕ್ಷಣೆ.
ಯೇಸುವಿನ ಹೆಸರಿನಲ್ಲಿ ಪವಿತ್ರಾತ್ಮನ ಬೆಂಕಿ ನನ್ನ ಮೇಲೆ ಮತ್ತು ನನ್ನ ಕುಟುಂಬ ಸದಸ್ಯರ ಮೇಲೆ ಹೊಸದಾಗಿ ಬೀಳಲಿ. ಓ ಕರ್ತನೇ, ನಿನ್ನ ಬೆಂಕಿಯು ನನ್ನ ಕುಟುಂಬದಲ್ಲಿಯೂ ನನ್ನ ಜೀವನದಲ್ಲಿಯೂ ಇರುವ ಪವಿತ್ರವಲ್ಲದ ಎಲ್ಲವನ್ನೂ, ಯೇಸುವಿನ ಹೆಸರಿನಲ್ಲಿ ಸುಟ್ಟುಬೂದಿಮಾಡಲಿ.
ಆರ್ಥಿಕ ಪ್ರಗತಿ
ಸಹಾಯಕ್ಕಾಗಿ ನನ್ನನ್ನು ಎದುರು ನೋಡುವ ಯಾರೂ ಸಹ ನಿರಾಶೆಗೊಳ್ಳುವುದಿಲ್ಲ. ನನ್ನ ಅಗತ್ಯಗಳನ್ನು ಪೂರೈಸಲು ನನಗೆ ಸಾಕಷ್ಟು ಹೆಚ್ಚು ಇರುತ್ತದೆ ಮತ್ತು ಅಗತ್ಯವಿರುವ ಇತರರಿಗೆ ನೀಡಲು ಸಹ ನನ್ನ ಬಳಿ ಸಾಕಷ್ಟು ಇರುತ್ತದೆ. ಯೇಸುನಾಮದಲ್ಲಿ ನಾನು ಸಾಲ ಕೊಡುತ್ತೇನೆಯೇ ಹೊರತು ಎಂದಿಗೂ ಸಾಲತೆಗೆದುಕೊಳ್ಳುವುದಿಲ್ಲ.
KSM ಚರ್ಚ್
ತಂದೆಯೇ, ಪಾಸ್ಟರ್ ಮೈಕಲ್ , ಅವರ ಕುಟುಂಬ ಸದಸ್ಯರು, ಸಿಬ್ಬಂದಿ ಮತ್ತು ಅವರ ತಂಡದ ಸದಸ್ಯರು ಎಲ್ಲರಿಗೂ ಅಲೌಕಿಕವಾದ ಜ್ಞಾನ - ವಿವೇಕ , ಸಲಹೆ ಶಕ್ತಿ, ತಿಳುವಳಿಕೆಯನ್ನು ಕೊಟ್ಟು ಕರ್ತನ ಭಯದಲ್ಲಿ ನಡೆಸಬೇಕೆಂದು ಯೇಸುನಾಮದಲ್ಲಿ ಪ್ರಾರ್ಥಿಸುತ್ತೇನೆ (ಯೆಶಾಯ 11:2-3)
ದೇಶ
ತಂದೆಯೇ, ನಿನ್ನ ನೀತಿಯು ನಮ್ಮ ರಾಷ್ಟ್ರವನ್ನು ತುಂಬಲಿ. ನಮ್ಮ ರಾಷ್ಟ್ರದ ವಿರುದ್ಧ ಕಾರ್ಯಮಾಡುವ ಎಲ್ಲಾ ಅಂಧಕಾರದ ಮತ್ತು ವಿನಾಶದ ಶಕ್ತಿಗಳು ಯೇಸುನಾಮದಲ್ಲಿ ನಾಶವಾಗಲಿ. ನಮ್ಮ ರಾಷ್ಟ್ರದ ಪ್ರತಿಯೊಂದು ನಗರ ಮತ್ತು ರಾಜ್ಯದಲ್ಲಿಯೂ ಯೇಸುನಾಮದಲ್ಲಿ ಶಾಂತಿ ಮತ್ತು ಸಮೃದ್ಧಿ ಇರಲಿ.
Join our WhatsApp Channel

Most Read
● ಭೂರಾಜರುಗಳ ಒಡೆಯನು● ಆತ್ಮವಂಚನೆ ಎಂದರೇನು? - II
● ಸ್ತುತಿಯು ಸಮೃದ್ಧಿಯನ್ನುಂಟುಮಾಡುತ್ತದೆ
● ನಿಮ್ಮ ಗತಿಯನ್ನು ಹಾಳು ಮಾಡಿಕೊಳ್ಳಬೇಡಿರಿ!
● ನೀವು ಯಾರೊಂದಿಗೆ ನಡೆಯುತ್ತಿದ್ದೀರಿ?
● ನಿರ್ಣಾಯಕ ಅಂಶವಾಗಿರುವ ವಾತಾವರಣದ ಒಳನೋಟಗಳು -4
● ದೈವೀಕ ಅನುಕ್ರಮ -2
ಅನಿಸಿಕೆಗಳು